Search
  • Follow NativePlanet
Share
» »ಬೇಸಿಗೆಯ ಬಿಸಿಗೆ ತಂಪೆರೆಯುವ ನೆಲ್ಲಿಯಂಪತಿ

ಬೇಸಿಗೆಯ ಬಿಸಿಗೆ ತಂಪೆರೆಯುವ ನೆಲ್ಲಿಯಂಪತಿ

By Divya

ಬೇಸಿಗೆಯ ಬಿಸಿಗೆ ಸ್ವಲ್ಪ ತಂಪಾದ ಅನುಭವ ನೀಡುವ ತಾಣವೆಂದರೆ ನೆಲ್ಲಿಯಂಪತಿ. ದಟ್ಟ ಅರಣ್ಯದ ಗಿರಿ-ಶಿಖರಗಳನ್ನು ಒಳಗೊಂಡಿರುವ ಈ ತಾಣ ಸದಾಕಾಲ ಮಂಜಿನ ಹೊಗೆಯಿಂದ ಕೂಡಿರುತ್ತದೆ. ಇದು ಕೇರಳದ ಪಾಲಕ್ಕಾಡ್‍ನಿಂದ 52 ಕಿ.ಮೀ. ದೂರದಲ್ಲಿದೆ. ಹಚ್ಚ ಹಸಿರಿನಿಂದ ಕಂಗೊಳಿಸುವ ಈ ಬೆಟ್ಟಗಳ ಸಾಲು ಕಿತ್ತಳೆ, ಕಾಫಿ, ಚಹಾ ಹಾಗೂ ಏಲಕ್ಕಿಯ ತೋಟಗಳಿಂದ ಆವೃತ್ತಗೊಂಡಿವೆ. ಅದ್ಭುತ ನೈಸರ್ಗಿಕ ಸಿರಿಯನ್ನು ಒಳಗೊಂಡಿರುವ ಈ ತಾಣಕ್ಕೆ ಬಡವರ ಊಟಿ ಎಂದು ಕರೆಯುತ್ತಾರೆ.

ಬೆಂಗಳೂರಿನಿಂದ 465.1 ಕಿ.ಮೀ. ದೂರದಲ್ಲಿರುವ ಈ ಊರಿಗೆ 8 ತಾಸುಗಳ ಪ್ರಯಾಣ ಮಾಡಬೇಕು. ಅಮೋಘವಾದ ಐತಿಹಾಸಿಕ, ನೈಸರ್ಗಿಕ ಹಾಗೂ ಪವಿತ್ರ ಕ್ಷೇತ್ರಗಳನ್ನು ಒಳಗೊಂಡಿರುವ ಈ ತಾಣಕ್ಕೆ ಒಮ್ಮೆ ಭೇಟಿ ನೀಡಲೇ ಬೇಕು. ಈ ಸುಂದರ ಪ್ರದೇಶಕ್ಕೆ ಬಂದರೆ ಮರೆಯದೆ ನೋಡಬೇಕಾದ ತಾಣಗಳ ಪರಿಚಯ ಇಲ್ಲಿದೆ.

ಪರಾಂಬಿಕುಲಂ

ಪರಾಂಬಿಕುಲಂ

ಸದಾ ಹಸಿರಾಗಿರುವ, ದಟ್ಟ ಅರಣ್ಯ ಪ್ರದೇಶವಾದ ಈ ತಾಣದಲ್ಲಿ ವನ್ಯಜೀವಿಧಾಮವಿದೆ. ಇದನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣ ಎಂದು ಪರಿಗಣಿಸಲಾಗಿದೆ. 272 ಕಿ.ಮೀ. ವ್ಯಾಪ್ತಿಯಲ್ಲಿ ಹರಡಿರುವ ಈ ವನ್ಯಧಾಮದ ಸುತ್ತಲೂ ನೀರಿನ ಹರಿವಿದೆ. ಅಪರೂಪದ ಪ್ರಾಣಿ ಸಂಕುಲಗಳನ್ನು ಇಲ್ಲಿ ಕಾಣಬಹುದು. ಸಾಗವಾನಿ ಮರಗಳಿಂದ ಕೂಡಿರುವ ಈ ಊರಿನಲ್ಲಿ ಟ್ರೀ ಹೌಸ್‍ಗಳಿವೆ. ಇವು ಮರೆಯಲಾಗದ ಸುಂದರ ಅನುಭವ ನೀಡುವವು. ಇದರೊಟ್ಟಿಗೆ ನೀರಿನ ಹರಿವಲ್ಲಿ ತೆಪ್ಪದ ಪ್ರಯಾಣವನ್ನೂ ಮಾಡಬಹುದು.

PC: flickr.com

ಮಯಿಲಾದಂಪುರ

ಮಯಿಲಾದಂಪುರ

ಪಾಲಕ್ಕಾಡ್‍ನಿಂದ 30 ಕಿ.ಮೀ. ದೂರದಲ್ಲಿರುವ ಈ ತಾಣದಲ್ಲಿ ನವಿಲು ಅಭಯಾರಣ್ಯವಿದೆ. ವಿವಿಧ ಜಾತಿಯ ನವಿಲುಗಳನ್ನು ಇಲ್ಲಿ ಕಣ್ತುಂಬಿಕೊಳ್ಳಬಹುದು. ಮುಂಜಾನೆಯ ಸಮಯದಲ್ಲಿ ಇಲ್ಲಿಗೆ ಬಂದರೆ ಸುಂದರವಾದ ನವಿಲು ನಾಟ್ಯಗಳನ್ನು ಸೆರೆ ಹಿಡಿಯಬಹುದು. ಮಕ್ಕಳಿಗೆ ಇದೊಂದು ಅಚ್ಚು ಮೆಚ್ಚಿನ ತಾಣವಾಗುವುದು.

PC: flickr.com

ಪೋತೊಂಡಿ ಅಣೆಕಟ್ಟು

ಪೋತೊಂಡಿ ಅಣೆಕಟ್ಟು

ಕುಡಿಯುವ ನೀರು ಹಾಗೂ ನೀರಾವರಿ ಉದ್ದೇಶಕ್ಕಾಗಿ ನಿರ್ಮಿಸಲಾದ ಈ ಅಣೆಕಟ್ಟು ಪೋತೊಂಡಿ ಗ್ರಾಮದಲ್ಲಿದೆ. ಎರಡು ನದಿಗಳಿಗೆ ತ್ವರಿತವಾಗಿ ನಿರ್ಮಿಸಲಾದ ಈ ಅಣೆಕಟ್ಟು 19ನೇ ಶತಮಾನದ ಇತಿಹಾಸವನ್ನು ಹೊಂದಿದೆ. ಬೆಲ್ಲ ಹಾಗೂ ತ್ವರಿತ ಸುಣ್ಣದ ಮಿಶ್ರಣದಿಂದ ನಿರ್ಮಿಸಲಾಗಿದೆ. ಭಾರತದ ಅತ್ಯಂತ ಪುರಾತನದ ಅಣೆಕಟ್ಟು ಎನ್ನುವ ಹಿರಿಮೆಯನ್ನು ಹೊಂದಿದೆ. ಸಿಮೆಂಟ್ ಬಳಕೆ ಮಾಡದೆ ನಿರ್ಮಾಗೊಂಡ ಏಷ್ಯಾದ 2ನೇ ಅಣೆಕಟ್ಟು ಇದು. ಇದರ ಒಂದು ಭಾಗದಲ್ಲಿ ಸುಂದರವಾದ ವ್ಯವಸಾಯ ಭೂಮಿಯಿದ್ದರೆ ಇನ್ನೊಂದು ಭಾಗದಲ್ಲಿ ವಿನೂತನ ಉದ್ಯಾನವನಗಳನ್ನು ಒಳಗೊಂಡಿದೆ.

PC: flickr.com

ಸೀತಾಕುಂಡ

ಸೀತಾಕುಂಡ

ನೆಲ್ಲಿಯಂಪತಿಯಿಂದ 8 ಕಿ.ಮೀ. ದೂರದಲ್ಲಿರುವ ಸೀತಾಕುಂಡ ವೀಕ್ಷಣಾ ತಾಣ ಎಂದು ಗುರುತಿಸಲಾಗಿದೆ. ಚಾರಣದ ಮೂಲಕ ಈ ಬೆಟ್ಟದ ತುದಿಗೆ ಬಂದರೆ ಅದ್ಭುತ ಪ್ರಕೃತಿ ದೃಶ್ಯವನ್ನು ಸೆರೆಹಿಡಿಯಬಹುದು. ರಾಮಾಯಣದ ಕಾಲದಲ್ಲಿ ರಾಮ, ಲಕ್ಷ್ಮಣ ಹಾಗೂ ಸೀತೆ ಇಲ್ಲಿಯೇ ಒಮ್ಮೆ ತಂಗಿದ್ದರು. ಹಾಗಾಗಿಯೇ ಇದಕ್ಕೆ ಸೀತಾಕುಂಡ ಎನ್ನುತ್ತಾರೆ ಎನ್ನುವ ನಂಬಿಕೆಯಿದೆ.

PC: flickr.com

ಸೈಲೆಂಟ್ ವ್ಯಾಲಿ

ಸೈಲೆಂಟ್ ವ್ಯಾಲಿ

ಕುಂತಿ ನದಿ ನೀರಿನ ಹರಿವನ್ನು ಒಳಗೊಂಡಿರುವ ಈ ತಾಣದ ಒಳಭಾಗದಲ್ಲೊಂದು ರಾಷ್ಟ್ರೀಯ ಉದ್ಯಾನವನವಿದೆ. 236.74 ಸ್ಕ್ವೇರ್ ಕಿ.ಮೀ. ವಿಸ್ತೀರ್ಣ ಇರುವ ಈ ಉದ್ಯಾನ ಕೇರಳದ ಎರಡನೇ ಅತಿದೊಡ್ಡ ಉದ್ಯಾನ ಎಂದು ಗುರುತಿಸಲಾಗಿದೆ. ಈ ಕಣಿವೆಯ ಸುತ್ತಲ ಪರಿಸರ ಮನೋಹರ ಅನುಭವ ನೀಡುವುದು.

PC: flickr.com

ಮೀನವಲ್ಲಂ ಜಲಪಾತ

ಮೀನವಲ್ಲಂ ಜಲಪಾತ

ಪಾಲಕ್ಕಾಡ್ ಜಿಲ್ಲೆಯ ಸುಂದರ ಜಲಪಾತಗಳಲ್ಲಿ ಇದು ಒಂದು. 45 ಅಡಿ ಎತ್ತರದಿಂದ ಧುಮುಕುವ ಈ ಜಲಧಾರೆಯ ಹತ್ತಿರವೇ ಹೋಗಿ ಜಲಕ್ರೀಡೆ ಆಡಬಹುದು. ಬಂಡೆಗಳ ಮಧ್ಯೆ ರಮಣೀಯವಾಗಿ ಹರಿದು ಬರುವ ಸೊಬಗು ಯಾತ್ರಿಕನ ಮನಗೆಲ್ಲುವುದು. ದಟ್ಟ ಅರಣ್ಯದ ನಡುವೆ ಈ ಜಲಧಾರೆಯನ್ನು ವೀಕ್ಷಿಸುವುದೇ ಒಂದು ಸುಂದರ ಅನುಭವ.

PC: flickr.com

ಮಲಂಪುಳ ಉದ್ಯಾನ

ಮಲಂಪುಳ ಉದ್ಯಾನ

ಪಾಲಕ್ಕಾಡ್ ನಗರ ಪ್ರದೇಶದಿಂದ 8 ಕಿ.ಮೀ. ದೂರದಲ್ಲಿರುವ ಈ ಉದ್ಯಾನ ಐಷಾರಾಮೀ ಹುಲ್ಲಿನ ತೋಟಗಳನ್ನು ಒಳಗೊಂಡಿದೆ. ಇದರಲ್ಲಿ ಮಕ್ಕಳ ಉದ್ಯಾನ, ಕಾರಂಜಿ, ಅದ್ಭುತ ಕೆರೆ ಹಾಗೂ ಎರಡು ತೂಗು ಸೇತುವೆಗಳಿವೆ. ಇದು ಪ್ರತಿದಿನ ಬೆಳಗ್ಗೆ 10 ರಿಂದ 6 ಗಂಟೆಯವರೆಗೆ ತೆರೆದಿರುತ್ತದೆ.

PC: flickr.com

Read more about: ಕೇರಳ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more