Search
  • Follow NativePlanet
Share
» »6 ತಿಂಗಳು ಭಕ್ತರಿಗೆ ಉಳಿದ 6 ತಿಂಗಳು ದೇವರಿಗೆ ಮತ್ತು ಋಷಿಗಳಿಗೆ ಮಾತ್ರ ಪ್ರವೇಶ.......

6 ತಿಂಗಳು ಭಕ್ತರಿಗೆ ಉಳಿದ 6 ತಿಂಗಳು ದೇವರಿಗೆ ಮತ್ತು ಋಷಿಗಳಿಗೆ ಮಾತ್ರ ಪ್ರವೇಶ.......

ನೆಲ್ಲಿ ತೀರ್ಥ ಸೋಮೇಶ್ವರ ಗುಹಾ ದೇವಾಲಯವು ನಮ್ಮ ಕರ್ನಾಟಕದ ಪ್ರಸಿದ್ಧವಾದ ದೇವಾಲಯಗಳಲ್ಲಿ ಒಂದಾಗಿದೆ. ಇದೊಂದು ಗುಹಾ ದೇವಾಲಯವಾಗಿದ್ದು ಮಹಾ ಶಿವನು ಲಿಂಗ ಸ್ವರೂಪಿಯಾಗಿ ಇಲ್ಲಿ ನೆಲೆಸಿದ್ದಾನೆ. ಈ ದೇವಾಲಯವು ಅತ್ಯಂತ ಪ್ರಾಚೀನವಾದುದು ಅಂದರೆ ಸುಮ

ನೆಲ್ಲಿ ತೀರ್ಥ ಸೋಮೇಶ್ವರ ಗುಹಾ ದೇವಾಲಯವು ನಮ್ಮ ಕರ್ನಾಟಕದ ಪ್ರಸಿದ್ಧವಾದ ದೇವಾಲಯಗಳಲ್ಲಿ ಒಂದಾಗಿದೆ. ಇದೊಂದು ಗುಹಾ ದೇವಾಲಯವಾಗಿದ್ದು ಮಹಾ ಶಿವನು ಲಿಂಗ ಸ್ವರೂಪಿಯಾಗಿ ಇಲ್ಲಿ ನೆಲೆಸಿದ್ದಾನೆ. ಈ ದೇವಾಲಯವು ಅತ್ಯಂತ ಪ್ರಾಚೀನವಾದುದು ಅಂದರೆ ಸುಮಾರು 1487 ಕ್ಕಿಂತ ಹಿಂದೆಯಿಂದಲೂ ಇರುವ ಪವಿತ್ರವಾದ ದೇವಾಲಯವಾಗಿದೆ.

ಈ ಮಾಹಿಮಾನ್ವಿತ ದೇವಾಲಯಕ್ಕೆ ಒಂದು ಸ್ಥಳ ಪುರಾಣವು ಕೂಡ ಇದೆ. ದೇವಾಲಯದ ಬಲಕ್ಕೆ ನೈಸರ್ಗಿಕವಾದ ಗುಹೆಯಿದೆ. ಇದು ಸುಮಾರು 200 ಮೀಟರ್ (660 ಅಡಿ) ಉದ್ದವಿದೆ. ಈ ಗುಹಾ ದೇವಾಲಯದಲ್ಲಿ ಪವಿತ್ರವಾದ ಸರೋವರ ಹಾಗು ಶಿವಲಿಂಗವಿದೆ. ಈ ಪವಿತ್ರವಾದ ದೇವಾಲಯವಿರುವುದು ಕರ್ನಾಟಕದ ಮಂಗಳೂರಿನಲ್ಲಿ.

ಈ ಗುಹಾ ದೇವಾಲಯದ ಸ್ಥಳ ಪುರಾಣ ಅತ್ಯಂತ ಪವಿತ್ರವಾದುದು ಹಾಗಾಗಿ ಈ ಲೇಖನದ ಮೂಲಕ ನೆಲ್ಲಿ ತೀರ್ಥದ ಬಗ್ಗೆ ತಿಳಿಯೋಣ.

ನೆಲ್ಲಿ ತೀರ್ಥ

ನೆಲ್ಲಿ ತೀರ್ಥ

ದೇವಾಲಯದ ಇತಿಹಾಸ 1487 ಕ್ಕಿಂತ ಹಿಂದಿನದು. ಈ ಗುಹಾ ದೇವಾಲಯಕ್ಕೆ ನೆಲ್ಲಿ ತೀರ್ಥ ಎಂದು ಹೆಸರು ಬರಲು ಕಾರಣವೇನು ಎಂದರೆ ಗುಹೆಯ ಒಳಭಾಗದಲ್ಲಿ ನೀರಿನ ಹನಿಗಳ ಸರೋವರವನ್ನು ರೂಪಿಸಲು ಆಮ್ಲದ ಆಕಾರದಲ್ಲಿ ನೀರು ಚಿಮ್ಮತ್ತಿರುತ್ತದೆ. ಹಾಗಾಗಿಯೇ ನೆಲ್ಲಿ ತೀರ್ಥ ಎಂದು ಈ ಗುಹಾ ದೇವಾಲಯಕ್ಕೆ ಹೆಸರು ಬಂದಿತು.

ಅರುಣಾಸುರ, ಅಸುರ

ಅರುಣಾಸುರ, ಅಸುರ

ಈ ದೇವಾಲಯದ ಸ್ಥಳ ಪುರಾಣವೆಂದರೆ ಅದು ಅರುಣಾಸುರ ಎಂಬ ಅಸುರನು ಜಬಾಲಿ ಎಂಬ ಋಷಿ ಮುನಿಯಿಂದ ಪವಿತ್ರವಾದ ಗಾಯತ್ರಿ ಮಂತ್ರವನ್ನು ಪಡೆಯುತ್ತಾನೆ. ಆ ಶಕ್ತಿಯನ್ನು ಪಡೆದ ಅರುಣಾಸುರನು ಗಾಯತ್ರಿ ಮಂತ್ರವನ್ನು ದುರುಪಯೋಗ ಮಾಡಿಕೊಳ್ಳುತ್ತಿರುತ್ತಾನೆ.

ಕಿರುಕುಳ

ಕಿರುಕುಳ

ಗಾಯತ್ರಿ ಮಂತ್ರವನ್ನು ದುರುಪಯೋಗ ಮಾಡಿಕೊಂಡ ಅರುಣಾಸುರನು ಇಡೀ ಪ್ರಪಂಚಕ್ಕೆ ಕಿರುಕುಳ ನೀಡಲು ಪ್ರಾರಂಭಿಸುತ್ತಾನೆ. ಹೀಗೆ ಅರುಣಾಸುರನು ಗಾಯತ್ರಿ ಮಂತ್ರವನ್ನು ದುರುಪಯೋಗ ಮಾಡಿಕೊಳ್ಳುತ್ತಿರುವುದು ತಪ್ಪಸ್ಸಿನಲ್ಲಿ ಲೀನವಾಗಿರುತ್ತಿದ್ದ ಜಬಾಲಿ ಋಷಿಗೆ ತಿಳಿದಿರಲಿಲ್ಲ.

ನಾರದ ಮಹರ್ಷಿ

ನಾರದ ಮಹರ್ಷಿ

ಅರುಣಾಸುರ ಮಾಡುತ್ತಿರುವ ಎಲ್ಲಾ ದೌರ್ಜನ್ಯಗಳನ್ನು ನಾರದ ಮಹರ್ಷಿಯು ಋಷಿ ಜಬಾಲಿಗೆ ತಿಳಿಸಿದರು. ವಿಷಯವನ್ನು ತಿಳಿದ ಋಷಿ ತಕ್ಷಣವೇ ಅರುಣಾಸುರನ ಕೌರ್ಯಕ್ಕೆ ಅಂತ್ಯ ಮಾಡಬೇಕು ಎಂದು ನಿರ್ಧರಿಸಿದನು.

ದುರ್ಗ ಪರಮೇಶ್ವರಿ

ದುರ್ಗ ಪರಮೇಶ್ವರಿ

ಈ ಕುರಿತು ಋಷಿ ಮುನಿಯು ದುರ್ಗ ಪರಮೇಶ್ವರಿ ಮಾತೆಯನ್ನು ನೆನೆದು ತಪಸ್ಸು ಮಾಡಲು ಮುಂದಾದನು. ತನ್ನ ತಪ್ಪಸ್ಸಿಗೆ ಮೆಚ್ಚಿದ ದುರ್ಗಾ ಪರಮೇಶ್ವರಿಯು ಜಬಾಲಿ ಋಷಿಯ ಮುಂದೆ ಪ್ರತ್ಯಕ್ಷಳಾದಳು. ನಂತರ ಆ ಅರುಣಾಸುರನಿಗೆ ಕೊಲ್ಲುವುದಾಗಿ ಭರವಸೆಯನ್ನು ನೀಡಿದಳು. ಈ ಸ್ಥಳವೇ ನೆಲ್ಲಿ ತೀರ್ಥ ಗುಹೆಯಾಯಿತು.

ಸಂಹಾರ

ಸಂಹಾರ

ಪವಿತ್ರವಾದ ಗಾಯತ್ರಿ ಮಂತ್ರವನ್ನು ದುರುಪಯೋಗ ಮಾಡುತ್ತಿದ್ದ ಅರುಣಾಸುರನನ್ನು ದುರ್ಗಾ ಪರಮೇಶ್ವರಿಯು ನಂದಿನಿ ಎಂಬ ನದಿ ತೀರದಲ್ಲಿ ಕಣಜದ ಆಕಾರದಲ್ಲಿ ಅರುಣಾಸುರನನ್ನು ಸಂಹಾರ ಮಾಡಿದಳು.

ದುರ್ಗಾ ಪರಮೇಶ್ವರಿ ದೇವಾಲಯ

ದುರ್ಗಾ ಪರಮೇಶ್ವರಿ ದೇವಾಲಯ

ಹಾಗಾಗಿಯೇ ಈ ಸ್ಥಳದಲ್ಲಿಯೇ ಸಾಕ್ಷಾತ್ ದುರ್ಗಾ ಪರಮೇಶ್ವರಿ ತಾಯಿಯ ದೇವಾಲಯವನ್ನು ಇಲ್ಲಿ ಕಾಣಬಹುದಾಗಿದೆ. ಈ ದೇವಾಲಯವನ್ನು ಕಟೀಲ್ ಎಂದೂ ಸಹ ಕರೆಯುತ್ತಾರೆ. ಈ ದೇವಾಲಯವು ಮಂಗಳೂರಿನಲ್ಲಿ ಅತ್ಯಂತ ಪ್ರಸಿದ್ಧವಾದ ದೇವಾಲಯವೆಂದೇ ಖ್ಯಾತಿ ಪಡೆದಿದೆ.

ದೇವಾಲಯಗಳು

ದೇವಾಲಯಗಳು

ಇಲ್ಲಿ ಶಿವ, ವಿಷ್ಣು ಮತ್ತು ದುರ್ಗಾ ದೇವಾಲಯಗಳನ್ನು ಕಾಣಬಹುದಾಗಿದೆ. ಕೊಂಪಾದವು ಎಂಬ ಸ್ಥಳದಲ್ಲಿ ನೆಲ್ಲಿ ತೀರ್ಥದ ಬಳಿ ವಿಷ್ಣು ದೇವಾಲಯವನ್ನು ಕೂಡ ಇದೆ. ಮುಚ್ಚೂರ್ ಎಂಬ ಸ್ಥಳದಲ್ಲಿ ಕೂಡ ದುರ್ಗಾ ದೇವಿಯನ್ನು ಆರಾಧನೆ ಮಾಡಲಾಗುತ್ತದೆ.

ಗುಹಾ ದೇವಾಲಯ

ಗುಹಾ ದೇವಾಲಯ

ಈ ನೆಲ್ಲಿ ತೀರ್ಥ ಗುಹಾ ದೇವಾಲಯದಲ್ಲಿ ಶಿವನು ಸೋಮೇಶ್ವರನಾಗಿ ನೆಲಸಿದ್ದಾನೆ. ಇಲ್ಲಿ ಮಹಾಗಣಪತಿ ಮತ್ತು ಜಬಲಿ ಮಹರ್ಷಿ ದೇವತೆಗಳನ್ನು ಕೂಡ ಕಾಣಬಹುದಾಗಿದೆ.

ಸಾಲಿಗ್ರಾಮ

ಸಾಲಿಗ್ರಾಮ

ಸೋಮನಾಥೇಶ್ವರನ ಲಿಂಗವು ಶುದ್ಧವಾದ ಸಾಲಿಗ್ರಾಮದಿಂದ ಮಾಡಲ್ಪಟ್ಟಿದೆ. ಇದನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಇಲ್ಲಿನ ಲಿಂಗವನ್ನು ಅರ್ಧನಾರೀಶ್ವರ ಎಂದು ಪೂಜಿಸಲಾಗುತ್ತದೆ. ದೇವಾಲಯದ ಅತ್ಯಂತ ಸುಂದರವಾದ ಅಂಶವೆಂದರೆ ಗುಹೆ.

ನಾಗಪ್ಪ ಕೊಳ

ನಾಗಪ್ಪ ಕೊಳ

ನಾಗಪ್ಪ ಕೊಳ ಎಂಬುದು ದೇವಾಲಯದ ಉತ್ತರ ಭಾಗದಲ್ಲಿರುವ ಸಣ್ಣದಾದ ಕೊಳವಾಗಿದೆ. ಈ ನೈಸರ್ಗಿಕವಾದ ಕೊಳ ಅತ್ಯಂತ ಪವಿತ್ರವಾದುದಾಗಿದೆ. ಗುಹೆಗೆ ಪ್ರವೇಶಿಸುವ ಮುಂಚೆ ಎಲ್ಲಾ ಭಕ್ತರು ಈ ನಾಗಪ್ಪ ಕೊಳದಲ್ಲಿ ಸ್ನಾನ ಮಾಡಲೇಬೇಕು.

ಅರಸೂಲೆ ಮಂಚ

ಅರಸೂಲೆ ಮಂಚ

ಅರಸೂಲೆ ಮಂಚ ಎಂಬ ರಾಜನು ದೇವಾಲಯದ ಮುಖ್ಯ ಪ್ರವೇಶ ದ್ವಾರದ ಉತ್ತರಕ್ಕೆ ಈ ದೇವಾಲಯಕ್ಕೆ ಭೇಟಿ ನೀಡಿದಾಗಲೆಲ್ಲಾ ಕುಳಿತುಕೊಳ್ಳುತ್ತಿದ್ದನಂತೆ ಎಂದು ಐತಿಹಾಸಿಕ ಪುರಾವೆಗಳು ಸೂಚಿಸುತ್ತವೆ. ಆದರೆ......

ಅತ್ಮ

ಅತ್ಮ

ಆದರೆ ರಾತ್ರಿಯ ಸಮಯದಲ್ಲಿ ಯಾರು ಕೂಡ ಈ ಸ್ಥಳಕ್ಕೆ ಭೇಟಿ ನೀಡುವುದಿಲ್ಲವಂತೆ. ಏಕೆಂದರೆ ಆ ಅರಸೂಲೆ ಮಂಚನ ಆತ್ಮ ಆ ಸ್ಥಳದಲ್ಲಿ ಸಂಚಾರವಿರುತ್ತದೆ ಎಂದು ಮುಸ್ಸಂಜೆಯ ಸಮಯದ ನಂತರ ಆ ಸ್ಥಳದಲ್ಲಿ ಕುಳಿತುಕೊಳ್ಳಲು ನಿಷೇಧಿಸಲಾಗಿದೆ ಎಂದು ನಂಬಲಾಗಿದೆ.

ಜಾತ್ಯತೀತತೆ

ಜಾತ್ಯತೀತತೆ

ವಿಶೇಷವೆನೆಂದರೆ ಈ ನೆಲ್ಲಿ ತೀರ್ಥ ಸೋಮಾನಾಥೇಶ್ವರ ಗುಹಾ ದೇವಾಲಯದಲ್ಲಿ ಯಾವುದೇ ಜಾತಿಯವರಿಗೂ ಪ್ರವೇಶವನ್ನು ನೀಡುವುದು. ಈ ದೇವಾಲಯದ ಮತ್ತೊಂದು ವಿಷೇಶವೆನೆಂದರೆ ವರ್ಷದ ಆರು ತಿಂಗಳು ಮಾತ್ರ ಈ ಗುಹಾ ದೇವಾಲಯವು ತೆರದಿರುತ್ತದೆ.

6 ತಿಂಗಳು ಮಾತ್ರ

6 ತಿಂಗಳು ಮಾತ್ರ

ಈ ಪವಿತ್ರವಾದ ಗುಹಾ ದೇವಾಲಯವು ಕೇವಲ ಅಕ್ಟೋಬರ್ ತಿಂಗಳಿನಿಂದ ಏಪ್ರಿಲ್ ತಿಂಗಳ ನಡುವೆ ಮಾತ್ರ ಅಂದರೆ 6 ತಿಂಗಳು ಮಾತ್ರ ತೆರದಿರುತ್ತದೆ. ಏಕೆಂದರೆ ಉಳಿದ ಇನ್ನೂ 6 ತಿಂಗಳು ಕಾಲ ದೇವರಿಗೆ ಹಾಗು ಋಷಿ ಮುನಿಗಳಿಗೆ ಮಾತ್ರ ಅನ್ವಯಿಸುತ್ತದೆ.

ಪ್ರಾಣಿಗಳು

ಪ್ರಾಣಿಗಳು

ಅಶ್ಚರ್ಯ ಏನಪ್ಪ ಎಂದರೆ ಈ ಗುಹಾ ದೇವಾಲಯದಲ್ಲಿ ಸಾಕಷ್ಟು ಪ್ರಾಣಿಗಳನ್ನು ಕಾಣಬಹುದಾಗಿದೆ. ಅವುಗಳು ಯಾವುವು ಎಂದರೆ ಚೇಳುಗಳು, ಮುಳ್ಳು ಹಂದಿಗಳು, ದೊಡ್ಡ ಸಂಖ್ಯೆಯ ಬಾವಲಿಗಳು, ಹಾವುಗಳನ್ನು ಇಲ್ಲಿ ಕಾಣಬಹುದಾಗಿದೆ. ಗುಹೆಯಲ್ಲಿ ಪ್ರಾಣಿಗಳಿಗೆ ತೊಂದರೆ ನೀಡುವುದು ಅಥವಾ ನೋಯಿಸುವುದನ್ನು ನಿಷೇಧಿಸಲಾಗಿದೆ.

ಗುಹೆ

ಗುಹೆ

ದೇವಾಲಯ ಮುಖ್ಯ ಆಕರ್ಷಣೆ ಎಂದರೆ ಅದು ಗುಹೆಯಾಗಿದೆ. ಗುಹೆಯ ಎಡಭಾಗದಲ್ಲಿ ದೇವಾಲಯದ ಪ್ರವೇಶ ದ್ವಾರವಿದೆ. ಈ ದೊಡ್ಡದಾದ ಗುಹೆಯು ಪ್ರಕೃತಿಯ ಅದ್ಭುತಗಳಲ್ಲಿ ಒಂದಾಗಿದೆ. ಗುಹೆಯ ಒಳಭಾಗದಲ್ಲಿ ಭಕ್ತರು ಪವಿತ್ರ ಮತ್ತು ಆಧ್ಯಾತ್ಮಿಕವಾದ ಅನುಭವವನ್ನು ಪಡೆಯುತ್ತಾರೆ.

ಹೇಗೆ ತಲುಪಬೇಕು?

ಹೇಗೆ ತಲುಪಬೇಕು?

ಮಂಗಳೂರಿನಿಂದ ಮೂಡಾಬಿದ್ರಿಯ ಕಡೆಯಿಂದ ಸಾಗಲು ಮೊದಲು ಗುರುಪುರ, ಕೈಕಂಬ ಆಚೆಗೆ ಪ್ರಯಾಣಿಸಿ ಯದಪದವುಗೆ ತಲುಪಿ. ಅಲ್ಲಿಂದ ಕೇವಲ 8 ಕಿ.ಮೀ ದೂರದಲ್ಲಿ ನೆಲ್ಲಿ ತೀರ್ಥಕ್ಕೆ ತಲುಪಿ.

ಮಂಗಳುರಿನಿಂದ ಕಟೀಲುಗೆ ತಲುಪಿ. ನಂತರ ಕಟೀಲುವಿನಿಂದ ಸುಮಾರು 5 ಕಿ.ಮೀ ದೂರದಲ್ಲಿ ನೆಲ್ಲಿತೀರ್ಥವಿದೆ.

ಬೆಂಗಳೂರಿನಿಂದ ತೆರಳುವವರಿಗೆ ಮೊದಲು ಬಿ.ಸಿ ರೋಡ್ ನ ಮೂಲಕ ಪ್ರವಾಸ ಕೈಗೊಂಡು ಪೊಲಾಲಿ ಮತ್ತು ಕೈಕಂಬದ ಮೂಲಕ ನೆಲ್ಲಿತೀರ್ಥಕ್ಕೆ ತಲುಪಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X