Search
  • Follow NativePlanet
Share
» »ದ್ರೌಪದಿಯ ಮೇಲೆ ಕಣ್ಣಿಟ್ಟ ಕೀಚಕನನ್ನು ಭೀಮ ಸಂಹರಿಸಿದ್ದು ಇಲ್ಲೇ

ದ್ರೌಪದಿಯ ಮೇಲೆ ಕಣ್ಣಿಟ್ಟ ಕೀಚಕನನ್ನು ಭೀಮ ಸಂಹರಿಸಿದ್ದು ಇಲ್ಲೇ

ಮಹಾಭಾರತದ ಕಥೆಯನ್ನು ಕೇಳಿದ್ದರೆ ನಿಮಗೆ ಕೀಚಕ ಹಾಗೂ ಭೀಮನ ಕಥೆ ಗೊತ್ತೇ ಇರಬಹುದು. ಕೀಚಕ ಯಾವ ರೀತಿ ಭೀಮನ ಕೈಯಿಂದ ಸಂಹರಿಸಲ್ಪಟ್ಟ ಎನ್ನುವ ಕಥೆ ಗೊತ್ತಿರಬಹುದು. ಆದರೆ ಆ ಸ್ಥಳ ಯಾವುದು ಎನ್ನುವುದು ಗೊತ್ತಿರಲಿಕ್ಕಿಲ್ಲ. ನಿಮಗೆ ಗೊತ್ತಿಲ್ಲ ಎಂದರೆ ಇಲ್ಲಿದೆ ನೋಡಿ ಭೀಮ ಕೀಚಕನನ್ನು ಹೇಗೆ ಸಂಹರಿಸಿದ, ಯಾಕಾಗಿ ಸಂಹರಿಸಿದ ಹಾಗೂ ಎಲ್ಲಿ ಸಂಹರಿಸಿದ ಎನ್ನುವುದು ಇಲ್ಲಿದೆ.

ನೀವು ನೋಡಲೇ ಬೇಕಾಗಿರುವ ದೇಶದ ಅದ್ಭುತ ಬ್ರಿಡ್ಜ್‌ಗಳಿವುನೀವು ನೋಡಲೇ ಬೇಕಾಗಿರುವ ದೇಶದ ಅದ್ಭುತ ಬ್ರಿಡ್ಜ್‌ಗಳಿವು

ವಿರಾಟನ ರಾಜ್ಯ

ವಿರಾಟನ ರಾಜ್ಯ

PC: wikipedia

ವಿರಾಟನ ಸೇನಾಧಿಪತಿಯಾಗಿದ್ದ ಕೀಚಕನನ್ನು ಕಂಡು ಹೆದರಿದಕೌರವರು ವಿರಾಟನ ರಾಜ್ಯದಕಡೆಗೆತಲೆ ಮಾಡಿ ಮಲಗುವುದಿಲ್ಲವೆಂಬಅಂಶವನ್ನು ತಿಳಿದಪಾಂಡವರು ವಿರಾಟ ರಾಜಧಾನಿಯಲ್ಲಿ ತಮ್ಮ ಅಜ್ಞಾತವಾಸದ ಅವಧಿಯನ್ನು ಕಳೆಯಲು ನಿರ್ಧರಿಸಿದರು.

ರಾಣಿಸುದೇಷ್ಣೆಯ ಬಳಿ ಸೇವಕಿಯಾದ ದ್ರೌಪದಿ

ರಾಣಿಸುದೇಷ್ಣೆಯ ಬಳಿ ಸೇವಕಿಯಾದ ದ್ರೌಪದಿ

PC: Dhanu , a mughal artist

ದ್ರೌಪದಿ ಸೈರಂಧ್ರಿಯಾಗಿ ಮಾಲಿನಿ ಎಂಬ ಹೆಸರಿನಲ್ಲಿ ರಾಣಿಸುದೇಷ್ಣೆಯ ಬಳಿ ಸೇವಕಿಯಾದಳು. ದ್ರೌಪದಿ ಮರೆವೇಷದಲ್ಲಿದ್ದರೂ ತನ್ನ ಸೌಂದರ್ಯವನ್ನು ಮುಚ್ಚಿಟ್ಟುಕೊಳ್ಳಲು ಅಸಮರ್ಥಳಾಗಿದ್ದಳು. ಅಕ್ಕನ ಅಂತಃಪುರದಲ್ಲಿ ಓಡಾಡುತ್ತಿದ್ದ ಇವಳನ್ನು ಕೀಚಕಕಂಡು ಅವಳ ಪ್ರೇಮವನ್ನು ಯಾಚಿಸುತ್ತಾನೆ.

ದ್ರೌಪದಿಯಿಂದತಿರಸ್ಕೃತನಾದಕೀಚಕ

ದ್ರೌಪದಿಯಿಂದತಿರಸ್ಕೃತನಾದಕೀಚಕ

PC: Raja Ravi Varma

ದ್ರೌಪದಿಯಿಂದತಿರಸ್ಕೃತನಾದಕೀಚಕತನ್ನ ಅಕ್ಕನ ನೆರವನ್ನು ಬೇಡುತ್ತಾನೆ. ಮಾಲಿನಿಯನ್ನು ತರುವಂತೆ ಒತ್ತಾಯ ಮಾಡಿ ಸುದೇಷ್ಣೆ ಮಾಲಿನಿಯನ್ನು ಕೀಚಕನ ಅರಮನೆಗೆ ಕಳುಹಿಸುತ್ತಾಳೆ. ಅವಳನ್ನು ಕಂಡಕೀಚಕಕಾಮೋದ್ರೇಕದಿಂದ ಮುಂದುವರಿಯುತ್ತಾನೆ. ದ್ರೌಪದಿ ಅವನಿಂದತಪ್ಪಿಸಿಕೊಂಡು ಬಂದು ರಾಜಸಭೆಯನ್ನು ಪ್ರವೇಶಿಸುತ್ತಾಳೆ. ಕೀಚಕ ಬೆನ್ನಟ್ಟಿ ಬಂದು ತುಂಬಿದ ಸಭೆಯಲ್ಲಿ ಅವಳ ಜುಟ್ಟು ಹಿಡಿದು ವಿರಾಟರಾಜ, ವೇಷಾಂತರದಲ್ಲಿದ್ದ ಧರ್ಮರಾಯ ಮತ್ತು ಭೀಮಾದಿಗಳೆದುರಿಗೆ ಒದ್ದು ಕೆಡವುತ್ತಾನೆ.

ಮಲ್ಲಯುದ್ಧದಲ್ಲಿ ಕೀಚಕನ ವಧಿಸಿದ ಭೀಮ

ಮಲ್ಲಯುದ್ಧದಲ್ಲಿ ಕೀಚಕನ ವಧಿಸಿದ ಭೀಮ

ಅಪಮಾನ ಜರ್ಝರಿತಳಾದದ್ರೌಪದಿ ಭೀಮನ ನೆರವನ್ನು ಬೇಡುತ್ತಾಳೆ. ಭೀಮ ಭರವಸೆ ಕೊಟ್ಟಮೇಲೆ ದ್ರೌಪದಿ ಕೀಚಕನನ್ನು ರಾತ್ರಿನಾಟ್ಯಶಾಲೆಗೆ ಏಕಾಂಗಿಯಾಗಿ ಬರಲು ಆಹ್ವಾನ ಕೊಡುತ್ತಾಳೆ. ಇಚ್ಛಾಪೂರ್ಣತೆಯ ಭರವಸೆಯಿಂದ ಹಿಗ್ಗಿಕೀಚಕರಾತ್ರಿನಾಟ್ಯಶಾಲೆಗೆ ಗೋಪ್ಯವಾಗಿ ಬರುತ್ತಾನೆ. ಮಾರೆವೇಷದಲ್ಲಿದ್ದ ಭೀಮನಿಗೂ ಕೀಚಕನಿಗೂ ನೆಲ್ಲಕೊಂಡಪಲ್ಲಿಯಲ್ಲಿ ಮಲ್ಲಯುದ್ಧ ನಡೆದು ಕೀಚಕಸಾಯುತ್ತಾನೆ.

ಎಲ್ಲಿದೆ ಈ ನೆಲ್ಲಕೊಂಡಪಲ್ಲಿ?

ಎಲ್ಲಿದೆ ಈ ನೆಲ್ಲಕೊಂಡಪಲ್ಲಿ?

PC: Moinuddin10888

ಭೀಮ ಕೀಚಕನನ್ನು ವಧೆ ಮಾಡಿದ್ದು ತೆಲಂಗಾಣದ ಕಮ್ಮಮ್ ಜಿಲ್ಲೆಯ ನೆಲ್ಲಕೊಂಡಪಲ್ಲಿ ಎಂಬಲ್ಲಿ ಎನ್ನಲಾಗುತ್ತದೆ. ಇಟ್ಟಿಗೆಗಳಿಂದ ನಿರ್ಮಿಸಿದ ವಿಹಾರಗಳು, ಬಾವಿಗಳು, ಗೋಡೆಗಳು, ಒಂದು ಮಹತ್ಸುಪ, ಟೆರಾಕೋಟಾ ಪ್ರತಿಮೆಗಳು, ಬುದ್ಧನ ಕಂಚಿನ ವಿಗ್ರಹ, ಸುಣ್ಣದ ಕಲ್ಲಿನ ಕೆತ್ತನೆಯ ಸ್ತೂಪ ಹಾಗೂ ಇನ್ನಿತರ ೩ ಹಾಗೂ ೪ನೇ ಶತಮಾನದಲ್ಲಿ ಸಂಬಂಧಿಸಿದ ವಸ್ತುಗಳು ಇಲ್ಲಿದೊರೆತಿದೆ.

ಕೀಚಕ ಗುಂಡಮ್

ಕೀಚಕ ಗುಂಡಮ್

ಸ್ಥಳೀಯ ಹಿಂದೂ ಜಾನಪದ ಸಂಪ್ರದಾಯದ ಪ್ರಕಾರ, ಹಿಂದು ಮಹಾಕಾವ್ಯ ಮಹಾಭಾರತದಲ್ಲಿ ವಿವರಿಸಲಾದ ಕೆಲವು ಘಟನೆಗಳಿಂದಾಗಿ ಈ ಸ್ಥಳವನ್ನು ವಿರಾಟರಾಜು ಡಿಬ್ಬಾ ಅಥವಾ ಕೀಚಕ ಗುಂಡಮ್ ಎಂದು ಕರೆಯಲ್ಪಡುತ್ತದೆ.

Read more about: india history travel
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X