Search
  • Follow NativePlanet
Share
» »ಇಲ್ಲಿದೆ ಕಲ್ಲಾಗಿ ಬದಲಾದ 2 ಕೋಟಿ ವರ್ಷದ ಮರಗಳು

ಇಲ್ಲಿದೆ ಕಲ್ಲಾಗಿ ಬದಲಾದ 2 ಕೋಟಿ ವರ್ಷದ ಮರಗಳು

ನೀವು ಬಹಳ ಹಳೆಯ ಮರಗಳನ್ನು ನೋಡಿರುವಿರಿ, ಸಾವಿರಾರು ವರ್ಷ ಹಳೆಯ ಮರಗಳು ನಮ್ಮ ಸುತ್ತಮುತ್ತಲು ಕಾಣಸಿಗುತ್ತವೆ. ಆದರೆ 2 ಕೋಟಿ ವರ್ಷ ಹಳೆಯ ಮರಗಳನ್ನು ಎಲ್ಲಾದರೂ ನೋಡಿದ್ದೀರಾ? ನೋಡಿದ್ರೂ ಅದು ಮರವೋ ಅಥವಾ ಕಲ್ಲೋ ಎನ್ನುವ ಕನ್‌ಫ್ಯೂಷನ್ ನಿಮ್ಮನ್ನು ಕಾಡಲೇ ಇರಲಾರದು. ಅಂತಹದ್ದೊಂದು ಕಲ್ಲುಮರಗಳ ತಾಣ ತಮಿಳುನಾಡಿನಲ್ಲಿದೆ.

ಎಲ್ಲಿದೆ?

ಎಲ್ಲಿದೆ?

PC:Prabhupuducherry

ರಾಷ್ಟ್ರೀಯ ಪಳೆಯುಳಿಕೆ ವುಡ್ ಪಾರ್ಕ್ ವಿಳುಪುರಂ ಜಿಲ್ಲೆಯ ತಿರುವಕ್ಕರೈನಲ್ಲಿದೆ. ಇಲ್ಲಿನ ಉದ್ಯಾನವನವೊಂದರಲ್ಲಿ ಕಲ್ಲು ಮರಗಳನ್ನು ಕಾಣಬಹುದು. ಭಾರತೀಯ ಭೂವೈಜ್ಞಾನಿಕ ಸಮೀಕ್ಷಾ ಕೇಂದ್ರಕ್ಕೆ ಇಲ್ಲಿ ದೊರೆತ ಕಲ್ಲು ಮರಗಳನ್ನು ಶೇಖರಿಸಿ ಒಂದು ಪಾರ್ಕ್‌ ಮಾಡಲಾಗಿದೆ.

ತಲುಪುವುದು ಹೇಗೆ ?

ತಲುಪುವುದು ಹೇಗೆ ?

ಈ ಕಲ್ಲು ಮರಗಳ ಉದ್ಯಾನವನಕ್ಕೆ ತಲುಪಲು ಮೂರು ಮಾರ್ಗಗಳಿವೆ. ವಿಳಪುರಂನಿಂದ -ತಿರುವಕ್ಕರೈಗೆ ಪಣಯಪುರಂ, ತಿರುಕನೂರು, ಕೊಡಕೂರ್ ಮಾರ್ಗವಾಗಿ 45 ನಿಮಿಷಗಳಲ್ಲಿಪ್ರಯಾಣ. ಇನ್ನೊಂದು ಮಾರ್ಗವೆಂದರೆ, ತಿಂಡಿವಣಂ -ಕುತ್ತೇರಿಪಟ್ಟು- ತಿರುವಕ್ಕರೈ 45 ನಿಮಿಷಗಳ ಪ್ರಯಾಣ. ಪಾಂಡಿಚೆರಿ - ವಳುದಾವೂರ್-ಕೊಡತೂರ್ 45 ನಿಮಿಷಗಳ ಪ್ರಯಾಣ.

ಮರಗಳ ವಯಸ್ಸು

ಮರಗಳ ವಯಸ್ಸು

PC: Ranjith Kumar Inbasekaran

ಇಲ್ಲಿರುವ ಈ ಕಲ್ಲಾಗಿ ಪರಿವರ್ತಿತವಾಗಿರುವ ಮರಗಳು, ಶಿಲಾರೂಪದ ಮರದ ಪಳೆಯುಳಿಕೆಗಳು, ಸುಮಾರು ೨ ಕೋಟಿ ವರ್ಷಗಳಷ್ಟು ಹಳೆಯವುಗಳು. ಈ ಉದ್ಯಾನದಲ್ಲಿ ಸುಮಾರು 200 ಪಳೆಯುಳಿಕೆ ಮರಗಳು ಇದೆ. ಅವುಗಳು ಗಾತ್ರದಿಂದ 3 ರಿಂದ 15 ಮೀಟರ್ ಮೀಟರ್ ಉದ್ದವಿರುತ್ತವೆ, ಅವುಗಳಲ್ಲಿ ಕೆಲವು ಅಗಲದಲ್ಲಿ 5 ಮೀಟರ್ ವರೆಗೆ ಇರುತ್ತವೆ. ಅವುಗಳನ್ನು ಪಾರ್ಕಿನ ಮೈದಾನದಲ್ಲಿ ಭಾಗಶಃ ಸಮಾಧಿ ಮಾಡಲಾಗಿದೆ.

ಯಾರು ಕಂಡುಹಿಡಿದಿದ್ದು?

ಯಾರು ಕಂಡುಹಿಡಿದಿದ್ದು?

PC:Ranjith Kumar Inbasekaran

ತಮಿಳುನಾಡಿನ ವಿಳುಪುರಂ ಜಿಲ್ಲೆಯಲ್ಲಿ ಕಾಣಸಿಕ್ಕಿರುವ ಈ ಕಲ್ಲು ಮರವನ್ನು ಕಂಡು ಹಿಡಿದದ್ದು ಯಾವುದೇ ತಮಿಳಿಗನೂ ಅಲ್ಲ ಭಾರತೀಯನೂ ಅಲ್ಲ, ಬದಲಿಗೆ ಯುರೋಪ್‌ನ ಸೋನೇಡ್‌ರೆಡ್ ಎನ್ನುವ ವ್ಯಕ್ತಿ . ಈತ ಓರ್ವ ಪುರಾತತ್ವ ಸಂಶೋಧಕ. 1781 ರಲ್ಲಿ ಈ ಕಲ್ಲು ಮರಗಳನ್ನು ಕಂಡು ಹಿಡಿದನು.

ಎಷ್ಟು ಮರಗಳಿವೆ

ಎಷ್ಟು ಮರಗಳಿವೆ

PC:Ranjith Kumar Inbasekaran

247 ಎಕರೆಯಲ್ಲಿ ವಿಸ್ತರಿಸಿರುವ ಈ ಉದ್ಯಾನವನದದಲ್ಲಿ ಸುಮಾರು ೨೦೦ರಷ್ಟು ಮರಗಳಿವೆ. ಒಂದೊಂದು ಮರಗಳು ಒಂದೊಂದು ಕಲ್ಲಿನ ಆಕಾರದಲ್ಲಿ ಬದಲಾಗಿವೆ. ಉದ್ಯಾನವನವು ಒಂಬತ್ತು ಪರಾವೃತ ಪ್ರದೇಶಗಳನ್ನು ಒಳಗೊಂಡಿದೆ, ಆದರೆ 247 ಎಕರೆಗಳಷ್ಟು ಒಂದು ಸಣ್ಣ ಭಾಗವು ಸಾರ್ವಜನಿಕರಿಗೆ ತೆರೆದಿರುತ್ತದೆ. ಬಹಳಷ್ಟು ಪ್ರವಾಸಿಗರು ವಿಕೇಂಡ್ ಕಳೆಯಲು ಇಲ್ಲಿಗೆ ಬರುತ್ತಾರೆ. ಸಂಜೆಯ ಹೊತ್ತಿನಲ್ಲಿ ಕಾಲಕಳೆಯದು ಇದೊಂದು ಸುಂದರ ಉದ್ಯಾನವನವಾಗಿದೆ.

ಜ್ವಾಲಾಮುಖಿ

ಜ್ವಾಲಾಮುಖಿ

PC: Ranjith Kumar Inbasekaran

ಹಿಂದಿನ ಕಾಲದಲ್ಲಿ ಅಂದರೆ ಮನುಷ್ಯರು ಹುಟ್ಟುವುದಕ್ಕೂ ಮೊದಲು ಇಡೀ ಪ್ರಪಂಚದಲಿ ಬರೀ ಕಾಡುಗಳು ತುಂಬಿದ್ದವು. ಪ್ರಾಣಿಗಳು ಮಾತ್ರ ಇದ್ದವು, ಲಕ್ಷಗಟ್ಟಲೆ ವರ್ಷಗಳ ಹಿಂದೆ ಸಂಭವಿಸಿದ ಬೃಹತ್ ಪ್ರವಾಹದ ಸಂದರ್ಭದಲ್ಲಿ ಪಳೆಯುಳಿಕೆಗಳು ರೂಪುಗೊಂಡಿವೆ ಎಂದು ಜಿಎಸ್ಐ ಅಧಿಕಾರಿಗಳು ನಂಬಿದ್ದಾರೆ. ಮರಗಳೆಲ್ಲಾ ನೆಲಕ್ಕುರುಳಿದ್ದವು, ಜ್ವಾಲಾಮುಖಿಯಿಂದ ಉಂಟಾದ ಜ್ವಾಲೆಯು ಆ ಮರಗಳಿಗೆ ತಗುಲಿ ಅವುಗಳು ನೆಲದೊಳಕ್ಕೆ ಮುಚ್ಚಿಹೋದವು.

ಕಲ್ಲಾಗಿ ಪರಿವರ್ತಿತವಾದ ಮರ

ಕಲ್ಲಾಗಿ ಪರಿವರ್ತಿತವಾದ ಮರ

PC:Prabhupuducherry

ಜ್ವಾಲಾಮುಖಿ ಕಾಣಿಸಿಕೊಂಡು ಈ ಮರದ ಮೇಲೆ ಬಿದ್ದು ಆ ಮರಗಳೆಲ್ಲಾ ಮಣ್ಣಿನೊಳಗೆ ಸೇರಿಕೊಂಡಿದ್ದವು. ಅಂದು ಮಣ್ಣಿನೊಳಕ್ಕೆ ಹೂತು ಹೋಗಿದ್ದ ಆ ಮರಗಳು ಇಂದು ಕಲ್ಲುಗಳಾಗಿ ಮಾರ್ಪಾಟಾಗಿ ಪುರಾತತ್ವ ಸಂಶೋಧಕರ ಕಣ್ಣಿಗೆ ಬಿದ್ದಿದೆ. ಈ ಮರಗಳನ್ನು ನೋಡಲು ಸಾಕಷ್ಟು ಜನರು ಇಲ್ಲಿಗೆ ಆಗಮಿಸುತ್ತಾರೆ. ಅದನ್ನು ನೋಡಿದರೆ ಅದು ಮರವೆಂದು ನಂಬಲೂ ಸಾಧ್ಯವಿಲ್ಲ, ಸಂಪೂರ್ಣವಾಗಿ ಕಲ್ಲಾಗಿ ಪರಿವರ್ತಿತವಾಗಿವೆ.

 ಕಲ್ಲಾಗಿ ಬದಲಾದ ಮರ

ಕಲ್ಲಾಗಿ ಬದಲಾದ ಮರ

Ranjith Kumar Inbasekaran

ಉದ್ಯಾನವನದಲ್ಲಿರುವ ಕಲ್ಲಾಗಿ ಬದಲಾದ ಮರಗಳು

ಕಲ್ಲಾಗಿ ಬದಲಾದ ಮರ

ಕಲ್ಲಾಗಿ ಬದಲಾದ ಮರ

Ranjith Kumar Inbasekaran

ಉದ್ಯಾನವನದಲ್ಲಿರುವ ಕಲ್ಲಾಗಿ ಬದಲಾದ ಮರಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X