• Follow NativePlanet
Share
» »ಕೇರಳದ ಈ ದೇವಾಲಯದಲ್ಲಿ ನಾಯಿಗಳ ಪ್ರವೇಶಕ್ಕೆ ಅವಕಾಶವಿದೆಯಂತೆ...

ಕೇರಳದ ಈ ದೇವಾಲಯದಲ್ಲಿ ನಾಯಿಗಳ ಪ್ರವೇಶಕ್ಕೆ ಅವಕಾಶವಿದೆಯಂತೆ...

Written By:

ನಮ್ಮ ಭಾರತ ದೇಶದಲ್ಲಿನ ದೇವಾಲಯಗಳು ತಮ್ಮದೇ ಆದ ಪ್ರಾಮುಖ್ಯತೆಗಳನ್ನು ಮತ್ತು ಮಹತ್ವಗಳನ್ನು ಪಡೆದಿದೆ. ಯಾವುದೇ ಒಂದು ದೇವಾಲಯವು ತನ್ನ ವಿಶಿಷ್ಟತೆಗಳಿಂದಲೇ ಪ್ರಸಿದ್ಧಿ ಪಡೆದಿದೆ. ಕೇರಳದಲ್ಲಿ ಒಂದು ವಿಭಿನ್ನವಾದ ದೇವಾಲಯವಿದೆ. ಅಲ್ಲಿ ದೇವರಿಗೆ ಮದ್ಯವನ್ನು, ಮೀನು, ಮಾಂಸಗಳನ್ನು ನೈವೇಧ್ಯವಾಗಿ ಬಳಸುತ್ತಾರೆ. ಇನ್ನೊಂದು ವಿಭಿನ್ನತೆ ಏನೆಂದರೆ ಇಲ್ಲಿ ಯಾವುದೇ ಜಾತಿ, ಧರ್ಮದವರೂ ಕೂಡ ಪ್ರವೇಶ ಮಾಡಬಹುದಾಗಿದೆ. ಅದರಲ್ಲೂ ನಾಯಿಗಳಿಗೂ ಪ್ರವೇಶ ನೀಡುತ್ತಾರೆ ಎಂದರೆ ನಂಬುತ್ತೀರಾ?

ಹೌದು ಈ ದೇವಾಲಯದಲ್ಲಿ ನಾಯಿಗಳಿಗೂ ಪ್ರವೇಶವಿದೆ. ಆಶ್ಚರ್ಯ ಏನಪ್ಪ ಎಂದರೆ ಈ ದೇವಾಲಯಕ್ಕೂ ನಾಯಿಗಳಿಗೂ ಒಂದು ಸಂಬಂಧವಿದೆ. ಈ ವಿಭಿನ್ನವಾದ ದೇವಾಲಯವಿರುವುದು ಕೇರಳ ರಾಜ್ಯದ ವಲಪಟ್ಟನಮಂ ನದಿ ದಡದಲ್ಲಿದೆ.

ಪ್ರಸ್ತುತ ಲೇಖನದ ಮೂಲಕ ಈ ವಿಭಿನ್ನ ದೇವಾಲಯದ ರೋಚಕ ಸ್ಥಳ ಪುರಾಣವನ್ನು ತಿಳಿಯೋಣ ಬನ್ನಿ.

ಎಲ್ಲಿದೆ?

ಎಲ್ಲಿದೆ?

ಈ ದೇವಾಲಯದ ಹೆಸರು ಮುತ್ತಪ್ಪನ್ ದೇವಾಲಯ. ಇದೊಂದು ಹಿಂದೂ ದೇವಾಲಯವಾಗಿದ್ದು ಕೇರಳ ರಾಜ್ಯದಲ್ಲಿನ ಕಣ್ಣೂರು ಜಿಲ್ಲೆಯ ತಾಲಿಪರಂಬ ಎಂಬ ಪ್ರದೇಶದಿಂದ ಸುಮಾರು 10 ಕಿ.ಮೀ ದೂರದಲ್ಲಿರುವ ವಲಪಟ್ಟಣಮಂ ಎಂಬ ನದಿ ದಡದ ಮೇಲೆ ಇದೆ.

PC: Sreelalpp

ಪರಸ್ಸಿ ನಿಕಡವು ಮುತ್ತಪ್ಪನ್

ಪರಸ್ಸಿ ನಿಕಡವು ಮುತ್ತಪ್ಪನ್

ಈ ಮುತ್ತಪ್ಪನ್ ದೇವಾಲಯವನ್ನು "ಪರಸ್ಸಿ ನಿಕಡವು ಮುತ್ತಪ್ಪನ್ ದೇವಾಲಯ" ಎಂದೂ ಸಹ ಕರೆಯುತ್ತಾರೆ. ದೇವಾಲಯದ ಪ್ರಧಾನ ಅದಿದೇವತೆ ಶ್ರೀ ಮುತ್ತಪ್ಪನ್. ಸ್ಥಳೀಯ ಸಂಪ್ರದಾಯದ ಪ್ರಕಾರ ಇದು ಜಾನಪದ ದೇವತೆಯಾಗಿದ್ದು, ವೈದಿಕ ದೇವತೆಗೆ ಸಂಬಂಧಿಸಿಲ್ಲ. ಆದರೆ ಇತ್ತೀಚಿಗೆ ಮಾತ್ರ ವಿಷ್ಣು ಅಥವಾ ಮಹಾಶಿವನನ್ನು ಸಂಯೋಜಿಸುವ ಪ್ರಯತ್ನ ನಡೆಯುತ್ತಿದ್ದೆ.


PC:Dexsolutions

ಮಾಂಸ, ಮದ್ಯ

ಮಾಂಸ, ಮದ್ಯ

ಈ ದೇವಾಲಯದಲ್ಲಿ ಬ್ರಾಹ್ಮಣ ವಿಧಿ ವಿಧಾನವನ್ನು ಅನುಸರಿಸುವುದಿಲ್ಲ. ಬದಲಾಗಿ ಇಲ್ಲಿ ಮಾಂಸ, ಮೀನು ಹಾಗು ಮದ್ಯವನ್ನು ನೈವೇದ್ಯವಾಗಿ ಸ್ವಾಮಿಗೆ ನೀಡಿ ಪೂಜಿಸುತ್ತಾರೆ. ಮುತ್ತಪ್ಪನ್ ತಿರುವಪ್ಪನ್ ಮಹೋತ್ಸವ ಇಲ್ಲಿನ ಪ್ರಮುಖ ಹಬ್ಬವಾಗಿದೆ. ಈ ಉತ್ಸವವನ್ನು 3 ದಿನಗಳ ಕಾಲ ಆಚರಿಸಲಾಗುತ್ತದೆ.

PC:Sajith7775

ಮುತ್ತಪ್ಪನ ದಂತ ಕಥೆ

ಮುತ್ತಪ್ಪನ ದಂತ ಕಥೆ

ಮುತ್ತಪ್ಪನ ದಂತ ಕಥೆ ರೋಚಕವಾಗಿದೆ. ಎಲ್ಲಾ ದೇವ ಮಾನವನಿಗಿಂತ ಸ್ವಲ್ಪ ವಿಭಿನ್ನವಾಗಿದೆ. ಅದೇನೆಂದರೆ ಪಯ್ಯವೂರು ಎಂಬ ಹಳ್ಳಿಯಲ್ಲಿ ಬ್ರಾಹ್ಮಣ ದಂಪತಿಗಳಾದ ನಡುವಜಿ ಮತ್ತು ಆಕೆಯ ಪತ್ನಿ ಪಡಿಕುಟ್ಟಿ ಅಂತರ್ಜನಂ ಅವರಿಗೆ ಮಕ್ಕಳು ಇರುವುದಿಲ್ಲ.

PC: Rajesh Kakkanatt

ಪಡಿಕುಟ್ಟಿ

ಪಡಿಕುಟ್ಟಿ

ಪಡಿಕುಟ್ಟಿಯು ಪರಮ ಶಿವಭಕ್ತೆಯಾಗಿರುತ್ತಾಳೆ. ಒಂದು ದಿನ ನದಿಯಲ್ಲಿ ಸ್ನಾನ ಮಾಡುವಾಗ ಹೂ ತುಂಬಿದ ಬುಟ್ಟಿಯೊಂದರಲ್ಲಿ ಮಗುವೊಂದು ತೇಲಿಬರುತ್ತಿರುವುದನ್ನು ಕಂಡು ಶಿವನ ಆರ್ಶೀವಾದ ಎಂದೇ ತೆಗೆದುಕೊಳ್ಳುತ್ತಾಳೆ.

PC:Omnipotent

ನಂಬಿಕೆ

ನಂಬಿಕೆ

ಪಡಿಕುಟ್ಟಿಯ ಪತಿಯಾದ ನಡುವಜಿ ಕೂಡ ಶಿವನ ಆರ್ಶೀವಾದ ಎಂದೇ ನಂಬಿಕೆಯಿಂದಲೇ ಮಗುವನ್ನು ಸ್ವೀಕಾರ ಮಾಡುತ್ತಾನೆ. ಹೀಗೆ ಬೆಳೆಯುತ್ತಾ ಹೋದ ಮಗು ತನ್ನ ಬಾಲ್ಯದಿಂದಲೂ ದೀನರ ಹಾಗು ದಲಿತರ ಪ್ರಯೋಜನಕ್ಕಾಗಿ ದುಡಿಯುತ್ತಿರುತ್ತದೆ.

PC: Mithu

ಬ್ರಾಹ್ಮಣ

ಬ್ರಾಹ್ಮಣ

ಮಗು ದೊಡ್ಡದಾಗುತ್ತಾ ಹೊಂದಂತೆ ಬ್ರಾಹ್ಮಣರ ಮನೆಯಲ್ಲಿನ ಆಚಾರ, ವಿಚಾರಗಳನ್ನು ಆಚರಿಸುವುದಿಲ್ಲ. ಅಂದರೆ ಬೇಟೆಯಾಡುವುದು ಮತ್ತು ಮಾಂಸವನ್ನು ಸೇವನೆ ಮಾಡುವುದು. ಈ ಅಭ್ಯಾಸಗಳೆಲ್ಲವೂ ಬ್ರಾಹ್ಮಣ ದಂಪತಿಗಳಿಗೆ ಪ್ರಾಣ ಸಂಕಟವಾಗಿ ಪರಿಣಮಿಸುತ್ತದೆ.


PC:Rameshng

ಮನೆ ತೊರೆಯುವಿಕೆ

ಮನೆ ತೊರೆಯುವಿಕೆ

ಬ್ರಾಹ್ಮಣರ ಮನೆಯಲ್ಲಿ ಇಂಥಹ ಆಹಾರಗಳನ್ನು ಸೇವನೆ ಮಾಡಬಾರದು ಎಂದು ದಂಪತಿಗಳು ವಿರೋಧ ವ್ಯಕ್ತಪಡಿಸಿದಾಗ ಮನೆಯನ್ನು ತೊರೆದು ಹೋಗಲು ನಿರ್ಧರಿಸುತ್ತಾನೆ. ತಾಯಿಯು ಮಗನನ್ನು ಮನೆ ಬಿಟ್ಟು ಹೋಗಬೇಡ ಎಂದು ವಿನಂತಿಸಲು ಅವನ ಹಿಂದೆ ತೆರಳುತ್ತಾಳೆ.

PC:Rameshng

ಕೋಪ

ಕೋಪ

ಆ ಸಮಯದಲ್ಲಿ ಕೋಪದಿಂದ ಆತನ ತಾಯಿಯನ್ನು ನೋಡುತ್ತಾನೆ. ತದನಂತರ ದಂಪತಿಗಳಿಗೆ ತನ್ನ ನಿಜವಾದ ಸ್ವರೂಪದಲ್ಲಿ ಕಾಣಿಸಿಕೊಳ್ಳುತ್ತಾನೆ. ತದನಂತರ ಆಕೆ ತನ್ನ ಮಗನ ಮುಂದೆ ತಲೆಬಾಗುತ್ತಾಳೆ.

PC:Rameshng

ಗುರಾಣಿ

ಗುರಾಣಿ

ಆಗ ಮಗನ ಬಳಿ ಪೋಯಿಕಣ್ಣು ಎಂಬ ಒಂದು ವಿಧದ ಗುರಾಣಿ ಇರುತ್ತದೆ. ಆ ಗುರಾಣಿಯಿಂದ ಕಣ್ಣನ್ನು ಮುಚ್ಚಿಕೋ ಎಂದು ಮಗನಿಗೆ ವಿನಂತಿಸಿಕೊಳ್ಳುತ್ತಾಳೆ. ತಾಯಿ ಹೇಳಿದಂತೆ ಕಣ್ಣನ್ನು ಗುರಾಣಿಯಿಂದ ಮುಚ್ಚಿ ಮನೆ ತೊರೆದು ಹೊರಟು ಹೋಗುತ್ತಾನೆ.

PC:Reju

ದಂತ ಕಥೆಯ ಪ್ರಕಾರ

ದಂತ ಕಥೆಯ ಪ್ರಕಾರ

ಒಂದು ದಂತ ಕಥೆಯ ಪ್ರಕಾರ ಮುತ್ತಪ್ಪನನ್ನು ತನ್ನ ಪ್ರಯಾಣದುದ್ದಕ್ಕೂ ಸದಾ ಒಂದು ನಾಯಿಯು ಹಿಂಬಾಲಿಸುತ್ತಿರುತ್ತದೆ. ಅದ್ದರಿಂದಲೇ ಮುತ್ತಪ್ಪನ್ ದೇವಾಲಯದಲ್ಲಿ ನಾಯಿಯನ್ನು ದೈವ ಸಮಾನವೆಂದೂ ಪರಿಗಣಿಸಲಾಗುತ್ತದೆ.


PC:Vinayaraj

ಆಶ್ಚರ್ಯ

ಆಶ್ಚರ್ಯ

ಆಶ್ಚರ್ಯ ಏನಪ್ಪ ಎಂದರೆ ಈ ಮುತ್ತಪ್ಪನ್ ದೇವಾಲಯದ 2 ಬದಿಯಲ್ಲಿ ನಾಯಿಗಳ ಮೂರ್ತಿಗಳು ಇವೆ. ಸಾಮಾನ್ಯವಾಗಿ ಎಲ್ಲಾ ದೇವಾಲಯಗಳಲ್ಲಿಯೂ ಆನೆ ಅಥವಾ ಸಿಂಹದ ಮೂರ್ತಿಗಳನ್ನು ಕಾಣುತ್ತೇವೆ. ಆದರೆ ಈ ದೇವಾಲಯದಲ್ಲಿ ಮಾತ್ರ ನಾಯಿಗಳ ಮೂರ್ತಿಗಳನ್ನು ಕಾಣಬಹುದಾಗಿದೆ.

PC:Bijesh

ಮುತ್ತಪ್ಪನ್ ದೇವಾಲಯಗಳು

ಮುತ್ತಪ್ಪನ್ ದೇವಾಲಯಗಳು

ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಆನೇಕ ಮುತ್ತಪ್ಪ ದೇವಾಲಯಗಳನ್ನು ಕಾಣಬಹುದಾಗಿದೆ. ಈ ದೇವತೆಗೆ ಸಂಬಂಧಿಸಿದಂತೆ ನಮ್ಮ ಕರ್ನಾಟಕದಲ್ಲಿಯ ಕೂರ್ಗ್ ಜಿಲ್ಲೆಯಲ್ಲಿಯೂ ಕೂಡ ದೇವಾಲಯವಿರುವುದನ್ನು ಕಾಣಬಹುದಾಗಿದೆ.


PC: Sreelalpp

ದೇವಾಲಯದ ನಿರ್ಮಾಣದ ಹಿಂದೆ ಒಂದು ಕಥೆ

ದೇವಾಲಯದ ನಿರ್ಮಾಣದ ಹಿಂದೆ ಒಂದು ಕಥೆ

ಈ ದೇವಾಲಯದ ನಿರ್ಮಾಣಕ್ಕೆ ಮೊದಲು ಕೊರೊತ್ ಕುಟುಂಬದ ಹಿರಿಯ ಸದಸ್ಯ ಮುತ್ತಪ್ಪನ್ ದೇವಾಲಯವೆಂದೂ ನಾಮಕರಣಗೊಂಡಿರುವ ಸ್ಥಳಕ್ಕೆ ಆಗಾಗ ಭೇಟಿ ನೀಡುತ್ತಿದ್ದ. ಆತ ಮದ್ಯವನ್ನು ಹೆಚ್ಚಾಗಿ ಕುಡಿಯುತ್ತಿದ್ದನು.

PC:Dexsolutions

ಹಲಸಿನ ಮರ

ಹಲಸಿನ ಮರ

ಆತ ತನ್ನ ಭಕ್ತಿಯಂತೆ ಕುಡಿಯಲು ಸಮೀಪದ ಒಂದು ಹಲಸಿನ ಮರಕ್ಕೆ ಮೊದಲು ಕೆಲವೊಂದು ಹನಿಗಳನ್ನು ಅರ್ಪಿಸಿ ತದನಂತರ ಕುಡಿಯುತ್ತಿದ್ದ. ಆತನ ಸಾವಿನ ನಂತರ ಗ್ರಾಮಕ್ಕೆ ಹಲವಾರು ಸಮಸ್ಯೆಗಳು ಎದುರಾದವು.


PC:Sajith7775

ದೇವಾಲಯದ ನಿರ್ಮಾಣ

ದೇವಾಲಯದ ನಿರ್ಮಾಣ

ಮುತ್ತಪ್ಪನಿಗೆ ಮದ್ಯ ದೊರೆಯುತ್ತಿಲ್ಲ ಎಂದು ಗ್ರಾಮದಲ್ಲಿನ ಎಲ್ಲಾ ಪ್ರಜೆಗಳಿಗೂ ಕೇಡು ಮಾಡುತ್ತಿದ್ದಾನೆ ಎಂದು ಭಾವಿಸಿ ಮುತ್ತಪ್ಪನಿಗೆ ದೇವಾಲಯವನ್ನು ನಿರ್ಮಾಣ ಮಾಡಿದರಂತೆ.

PC: Rajesh Kakkanatt

ಹೇಗೆ ತಲುಪಬೇಕು?

ಹೇಗೆ ತಲುಪಬೇಕು?

ಕೇರಳದಲ್ಲಿರುವ ಈ ದೇವಾಲಯವು ಪರಸ್ಸಿಕಡವು ಕಣ್ಣೂರಿನಿಂದ 22 ಕಿ.ಮೀ ದೂರದಲ್ಲಿದೆ. ಕಣ್ಣೂರು ಪುರಸಭೆಯ ಬಸ್ ನಿಲ್ದಾಣ ದೇವಾಲಯಕ್ಕೆ ಹತ್ತಿರವಿರುವ ಬಸ್ ನಿಲ್ದಾಣವಾಗಿದೆ.

ಸಮೀಪದ ರೈಲ್ವೆ ನಿಲ್ದಾಣ

ಸಮೀಪದ ರೈಲ್ವೆ ನಿಲ್ದಾಣ

ಸಮೀಪದ ರೈಲ್ವೆ ನಿಲ್ದಾಣವೆಂದರೆ ಅದು ಕಣ್ಣೂರಿನಿಂದ ಸುಮಾರು 16 ಕಿ.ಮೀ ದೂರದಲ್ಲಿದೆ.

ಸಮೀಪದ ವಿಮಾನ ನಿಲ್ದಾಣ

ಸಮೀಪದ ವಿಮಾನ ನಿಲ್ದಾಣ

ಸಮೀಪದ ವಿಮಾನ ನಿಲ್ದಾಣವೆಂದರೆ ಅದು ಕಣ್ಣೂರಿನಿಂದ ಸುಮಾರು 110 ಕಿ.ಮೀ ದೂರದಲ್ಲಿ ಕರಿಪುರ್ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣವೆದೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more