Search
  • Follow NativePlanet
Share
» »ವಿವಾಹವಾಗಬೇಕಾದರೆ ಯಾವ ದೇವಾಲಯಕ್ಕೆ ತೆರಳಬೇಕು?

ವಿವಾಹವಾಗಬೇಕಾದರೆ ಯಾವ ದೇವಾಲಯಕ್ಕೆ ತೆರಳಬೇಕು?

ನಮ್ಮ ದೇಶದಲ್ಲಿ ಹಲವಾರು ವಿಶೇಷತೆಗಳನ್ನು ಹೊಂದಿರುವ ದೇವಾಲಯಗಳು ಇವೆ. ಕೆಲವು ದೇವಾಲಯಗಳಿಗೆ ಹೋದರೆ ಕೆಲವು ಕೋರಿಕೆಗಳು ನೆರವೇರುತ್ತದೆ ಎಂಬ ವಿಶ್ವಾಸ ಭಕ್ತರದ್ದು. ಕೆಲವು ದೇವಾಲಯದ ಸ್ಥಳ ಪುರಾಣ ಒಂದು ಕಡೆಯಾದರೆ, ಎಷ್ಟು ಕೋರಿಕೆಗಳನ್ನು ನೆರವೇರಿಸಿದ್ದಾನೆ ಎಂಬುದನ್ನು ಲೆಕ್ಕಚಾರ ಹಾಕಿ ಆತನಿಗೆ ಹೊಸ ಹೆಸರುಗಳನ್ನು ಇಟ್ಟಿರುವ ಕ್ಷೇತ್ರಗಳು ಕೂಡ ಇವೆ. ಆ ಕ್ಷೇತ್ರಗಳ ಬಗ್ಗೆ ತಿಳಿಯೋಣ.

350 ವರ್ಷಗಳ ಹಿಂದಿನ ಅದ್ಭುತವಾದ ಶಿವಾಲಯ

ಆಂಧ್ರ ಪ್ರದೇಶದ ಪೂರ್ವಗೋದಾವರಿ ಜಿಲ್ಲೆಯಲ್ಲಿನ ಮುರಮಳ್ಳ ಶ್ರೀ ವೀರೇಶ್ವರ ಸ್ವಾಮಿಯವರ ದೇವಾಲಯಕ್ಕೆ ಸ್ವಾಮಿಯ ಕಲ್ಯಾಣವನ್ನು ಮಾಡಿಸಿದವರಿಗೆ ಶೀಘ್ರವಾಗಿ ವಿವಾಹವಾಗುತ್ತದೆ ಎಂತೆ, ಹಾಗೆಯೇ ವಿವಾಹಕ್ಕೆ ಯಾವುದೇ ವಿಘ್ನ ಬಂದರೂ ಕೂಡ ನಾಶವಾಗಿ ಸುಗಮವಾಗಿ ಮಂಗಳ ಕಾರ್ಯವಾಗುತ್ತದೆ ಎಂಬುದು ಭಕ್ತರ ನಂಬಿಕೆಯಾಗಿದೆ.

ಮುಖ್ಯವಾಗಿ ಈ ಕ್ಷೇತ್ರದ ಸ್ಥಳ ಪುರಾಣವೆನೆಂದರೆ ವೀರಭದ್ರ ಹಾಗು ಭದ್ರಕಾಳಿಗೆ ವಿವಾಹವಾದ ಸ್ಥಳ ಇದಾಗಿದೆ ಎಂದು ಹೇಳಲಾಗಿದೆ. ಇಲ್ಲಿ ಕಲ್ಯಾಣ ಮಾಡಿಸಬೇಕು ಎಂದು ಅಂದುಕೊಂಡಿರುವವರು ಮೊದಲೇ ಈ ದೇವಾಲಯಕ್ಕೆ ಫೋನ್ ಮೂಖಾಂತರ ನಿಮ್ಮ ಹೆಸರು, ಹುಟ್ಟಿದ ದಿನಾಂಕ, ವಿವರಗಳನ್ನು ತಿಳಿಸಬೇಕು. ತದನಂತರ ಅವರು ಕಲ್ಯಾಣ ಮಾಡುವ ದಿನವನ್ನು ನಿಗದಿ ಪಡಿಸಿ ಹೇಳುತ್ತಾರೆ. ಆ ದಿನ ಭೇಟಿ ನೀಡಬೇಕಾಗುತ್ತದೆ. ದೂರದಿಂದ ಭೇಟಿ ನೀಡುವ ಭಕ್ತರಿಗೆ ವಸತಿ ಸೌಕರ್ಯವನ್ನು ಕೂಡ ದೇವಾಲಯದ ಸಮೀಪದಲ್ಲಿರುತ್ತದೆ.

ಮುರುಮಳ್ಳ ಶ್ರೀ ವೀರೇಶ್ವರಸ್ವಾಮಿ

ಮುರುಮಳ್ಳ ಶ್ರೀ ವೀರೇಶ್ವರಸ್ವಾಮಿ

ಈ ದೇವಾಲಯವು ಗೋದಾವರಿ ದಡದ ಮೇಲೆ ಈ ಪುಣ್ಯ ಕ್ಷೇತ್ರವಾದ ಮುರುಮಳ್ಳ ಶ್ರೀ ವೀರೇಶ್ವರಸ್ವಾಮಿ ನೆಲೆಸಿದ್ದಾನೆ. ಇಲ್ಲಿನ ಸ್ವಾಮಿಯು ತನ್ನ ಪತ್ನಿಯಾದ ಭದ್ರಕಾಳಿಯೊಂದಿಗೆ ನೆಲೆಸಿದ್ದಾನೆ. ಮುರುಮಳ್ಳ ಎಂದರೆ ತೆಲುಗು ಭಾಷೆಯಲ್ಲಿ ಮೂರು ಗಂಟು ಎಂಬುದೇ ಆಗಿದೆ.

ಮುರುಮಳ್ಳ ಶ್ರೀ ವೀರೇಶ್ವರಸ್ವಾಮಿ

ಮುರುಮಳ್ಳ ಶ್ರೀ ವೀರೇಶ್ವರಸ್ವಾಮಿ

ಪುರಾಣ ಕಥೆಗಳ ಪ್ರಕಾರ ದಕ್ಷನು ಯಜ್ಞ ಮಾಡುವುದು, ಯಜ್ಞಕ್ಕೆ ಪರಮಶಿವನನ್ನು ಆಹ್ವಾನೆ ಮಾಡದೇ ಇರುವುದು, ಸತಿದೇವಿ ಯಜ್ಞಕ್ಕೆ ಹೋಗುವುದು. ಅಲ್ಲಿ ಶಿವನಿಗೆ ಆಗುವ ಅವಮಾನವನ್ನು ಸಹಿಸದೇ ಪಾರ್ವತಿ ಅಗ್ನಿಗೆ ಭಸ್ಮವಾಗುವುದು ಇವೆಲ್ಲಾ ಎಲ್ಲರಿಗೂ ತಿಳಿದಿರುವುದೇ.

ಮುರುಮಳ್ಳ ಶ್ರೀ ವೀರೇಶ್ವರಸ್ವಾಮಿ

ಮುರುಮಳ್ಳ ಶ್ರೀ ವೀರೇಶ್ವರಸ್ವಾಮಿ

ಸತಿದೇವಿಯಾದ ಪಾರ್ವತಿದ ಅಗ್ನಿಯ ದಹನದ ವಿಚಾರ ತಿಳಿದ ಪರಮಶಿವನು ಅತ್ಯಂತ ಕ್ರೋಧದಿಂದ ಆ ಯಜ್ಷವನ್ನು ನಾಶಪಡಿಸಲು ವೀರಭದ್ರನನ್ನು ಸೃಷ್ಟಿ ಮಾಡುವುದು. (ಈ ವೀರಭದ್ರನನ್ನೇ ಈ ದೇವಾಲಯದಲ್ಲಿ ಶ್ರೀ ವೀರೇಶ್ವರಸ್ವಾಮಿ ಎಂದು ಕರೆಯುತ್ತಾರೆ). ಆತನು ಅತ್ಯಂತ ಭಯಂಕರವಾದ ರೂಪವನ್ನು ಹೊಂದಿ ದಕ್ಷ ರಾಜನ ಯಜ್ಞವನ್ನು ನಾಶ ಮಾಡುತ್ತಾನೆ.

ಮುರುಮಳ್ಳ ಶ್ರೀ ವೀರೇಶ್ವರಸ್ವಾಮಿ

ಮುರುಮಳ್ಳ ಶ್ರೀ ವೀರೇಶ್ವರಸ್ವಾಮಿ

ಯಜ್ಞವನ್ನು ನಾಶ ಮಾಡಿದ ವೀರಭದ್ರನಿಗೆ ಸತಿ ದೇವಿ ದಹನದಿಂದಾಗಿ ಎಳ್ಳಷ್ಟು ಶಾಂತಿಗೊಳ್ಳುವುದಿಲ್ಲ. ಆ ಭಯಂಕರವಾದ ರೂಪವನ್ನು ಕಂಡು ಭಯಭೀತರಾದ ಮಾನವರು, ದೇವತೆಗಳು ವಿಷ್ಣುವಿನ ಬಳಿ ಹೋಗಿ ವೀರಭದ್ರನನ್ನು ಶಾಂತಿ ಮಾಡುವಂತೆ ಬೇಡಿಕೊಳ್ಳುತ್ತಾರೆ.

ಮುರುಮಳ್ಳ ಶ್ರೀ ವೀರೇಶ್ವರಸ್ವಾಮಿ

ಮುರುಮಳ್ಳ ಶ್ರೀ ವೀರೇಶ್ವರಸ್ವಾಮಿ

ಆಗ ವಿಷ್ಣು ಮೂರ್ತಿಯು ನರಸಿಂಹ ಅವತಾರದಲ್ಲಿ ಶ್ರೀ ವೀರೇಶ್ವರಸ್ವಾಮಿಯನ್ನು ಶಾಂತಿ ಮಾಡುತ್ತಾನೆ. ಆದರೂ ವೀರೇಶ್ವರಸ್ವಾಮಿ ಶಾಂತಿಗೊಳ್ಳುವುದಿಲ್ಲ. ಹೀಗಿರುವಾಗ ಬ್ರಹ್ಮಲೋಕಕ್ಕೆ ತೆರಳಿ ಎಲ್ಲಾ ದೇವತೆಗಳು ಸೇರಿ ಆದಿ ಪರಾಶಕ್ತಿಯನ್ನು ಪ್ರಾರ್ಥಿಸುತ್ತಾರೆ.

ಮುರುಮಳ್ಳ ಶ್ರೀ ವೀರೇಶ್ವರಸ್ವಾಮಿ

ಮುರುಮಳ್ಳ ಶ್ರೀ ವೀರೇಶ್ವರಸ್ವಾಮಿ

ಆಕೆ ಪ್ರತ್ಯಕ್ಷಳಾಗಿ ವೀರಭದ್ರನ ವಿಷಯವನ್ನು ತಿಳಿದುಕೊಂಡು. ತನ್ನ ಷೋಡಶ ಕಳೆಯಲ್ಲಿನ ಒಂದು ಕಳೆಯನ್ನು ಭದ್ರಕಾಳಿಯಾಗಿ ಸೃಷ್ಟಿ ಮಾಡಿ ವೀರಭದ್ರನಿಗೆ ಶಾಂತಿ ಮಾಡಲು ಭೂಮಿಗೆ ಕಳುಹಿಸಿದಳು. ಭದ್ರಕಾಳಿ ಎಷ್ಟೇ ಪ್ರಯತ್ನ ಮಾಡಿದರು ಕೂಡ ವೀರಭದ್ರ ಮಾತ್ರ ಶಾಂತಿಗೊಳ್ಳಲಿಲ್ಲ. ಭದ್ರಕಾಳಿಯು ಕನ್ಯಾ ರೂಪ ಧರಿಸಿ ವೀರಭದ್ರನಿಗೆ ನೋಡಿದಳು.

ಮುರುಮಳ್ಳ ಶ್ರೀ ವೀರೇಶ್ವರಸ್ವಾಮಿ

ಮುರುಮಳ್ಳ ಶ್ರೀ ವೀರೇಶ್ವರಸ್ವಾಮಿ

ಕನ್ಯರೂಪದಲ್ಲಿದ್ದ ಭದ್ರಕಾಳಿಯನ್ನು ಕಂಡು ಶ್ರೀ ವೀರೇಶ್ವರಸ್ವಾಮಿಯು ಶಾಂತಿಸುತ್ತಾನೆ. ಇವೆಲ್ಲಾ ನಡೆದಿದ್ದು ಮಹಾಮುನಿಗಳೆಲ್ಲಾ ಗೌತಮಿ ತಟದ ಆಶ್ರಮದಲ್ಲಿ ನಿವಾಸಿಸಿದ್ದ ಪ್ರದೇಶದಲ್ಲಿ.

ಮುರುಮಳ್ಳ ಶ್ರೀ ವೀರೇಶ್ವರಸ್ವಾಮಿ

ಮುರುಮಳ್ಳ ಶ್ರೀ ವೀರೇಶ್ವರಸ್ವಾಮಿ

ಅದನ್ನು ಪೂರ್ವದಲ್ಲಿ ಮುನಿಮಂಡಲಿ ಎಂದು ಕರೆಯುತ್ತಿದ್ದರು. ಮುನಿಗಳೆಲ್ಲಾರು ಆ ಶ್ರೀ ವೀರೇಶ್ವರಸ್ವಾಮಿ ಮತ್ತು ಭದ್ರಕಾಳಿಯ ಗಾಂಧರ್ವ ವಿವಾಹ ಮಾಡಿ ಸ್ವಾಮಿಯನ್ನು ಶಾಂತಿಸುತ್ತಿದ್ದರು.

ಮುರುಮಳ್ಳ ಶ್ರೀ ವೀರೇಶ್ವರಸ್ವಾಮಿ

ಮುರುಮಳ್ಳ ಶ್ರೀ ವೀರೇಶ್ವರಸ್ವಾಮಿ

ಅಂದಿನಿಂದ ಈ ಕ್ಷೇತ್ರದಲ್ಲಿ ಸ್ವಾಮಿಗೆ ನಿತ್ಯವೂ ಗಾಂಧರ್ವ ಪದ್ಧತಿಯಲ್ಲಿ ಕಲ್ಯಾಣ ಮಾಡುತ್ತಿದ್ದಾರೆ. ಈ ಮುನಿ ಮಂಡಲಿಯೇ ಕಾಲಕ್ರಮೇಣ ಮುರುಮುಳ್ಳ ಎಂದು ನಾಮಾಂತರವಾಯಿತು.

ಮುರುಮಳ್ಳ ಶ್ರೀ ವೀರೇಶ್ವರಸ್ವಾಮಿ

ಮುರುಮಳ್ಳ ಶ್ರೀ ವೀರೇಶ್ವರಸ್ವಾಮಿ

ಇಲ್ಲಿನ ಸ್ವಾಮಿಗೆ ಇನ್ನು ಹಲವಾರು ಬಗೆಯ ವಿಶೇಷಗಳನ್ನು ಈ ದೇವಾಲಯಲ್ಲಿ ಕಣ್ಣುತುಂಬಿಕೊಳ್ಳಬಹುದಾಗಿದೆ. ತಮ್ಮ ಮಕ್ಕಳಿಗೆ ವಿವಾಹ ತಡವಾಗುತ್ತಿದ್ದರೆ ಇಲ್ಲಿನ ಸ್ವಾಮಿಗೆ ಕಲ್ಯಾಣ ಮಾಡಿಸಿದರೆ ಶೀಘ್ರವಾಗಿ ವಿವಾಹವಾಗುತ್ತದೆ ಎಂದು ಭಕ್ತರ ನಂಬಿಕೆಯಾಗಿದೆ.

ಮುರುಮಳ್ಳ ಶ್ರೀ ವೀರೇಶ್ವರಸ್ವಾಮಿ

ಮುರುಮಳ್ಳ ಶ್ರೀ ವೀರೇಶ್ವರಸ್ವಾಮಿ

ಹಾಗಾಗಿಯೇ ಈ ದೇವಾಲಯದಲ್ಲಿ ನಿತ್ಯ ಕಲ್ಯಾಣ ಸಮಾರಂಭಗಳು ನಡೆಯುತ್ತಿರುತ್ತದೆ. ಅಷ್ಟೇ ಅಲ್ಲ, ಇಲ್ಲಿನ ನಿತ್ಯ ಕಲ್ಯಾಣಕ್ಕೆ ಭಕ್ತರೇ ಅಲ್ಲದೇ ಮಹ ಮುನಿಗಳಾದ ಅಗಸ್ತ್ಯ, ಶುಕು, ವಿಶ್ವಾಮಿತ್ರ, ವಶಿಷ್ಟ, ಗೌತಮ, ವ್ಯಾಸ ಮುನಿಗಳು ಕೂಡ ಕಲ್ಯಾಣದ ಸಂದರ್ಭದಲ್ಲಿ ನೆಲೆಸುತ್ತಾರೆ ಎಂಬುದು ಒಂದು ಪುರಾಣದ ಕಥೆಯಾಗಿದೆ.

ಮುರುಮಳ್ಳ ಶ್ರೀ ವೀರೇಶ್ವರಸ್ವಾಮಿ

ಮುರುಮಳ್ಳ ಶ್ರೀ ವೀರೇಶ್ವರಸ್ವಾಮಿ

ಶ್ರೀ ಭದ್ರಕಾಳಿ ಸಮೇತವಾಗಿ ಶ್ರೀ ವೀರೇಶ್ವರಸ್ವಾಮಿಯ ಕ್ಷೇತ್ರವಾಗಿರುವ ಈ ಸ್ಥಳಕ್ಕೆ ಒಮ್ಮೆ ಭೇಟಿ ನೀಡಿ ದರ್ಶನ ಭಾಗ್ಯ ಪಡೆಯಿರಿ.

ಮುರುಮಳ್ಳ ಶ್ರೀ ವೀರೇಶ್ವರಸ್ವಾಮಿ

ಮುರುಮಳ್ಳ ಶ್ರೀ ವೀರೇಶ್ವರಸ್ವಾಮಿ

ಕಲ್ಯಾಣ ವೆಂಕಟೇಶ್ವರ ಸ್ವಾಮಿ ದೇವಾಲಯವು ತಿರುಪತಿಯ ತಿಮ್ಮಪ್ಪನಿಗೆ ತೆರಳುವ ದಾರಿಯಲ್ಲಿಯೇ ಇದೆ. ಇದು ತಿರುಪತಿ ರೈಲ್ವೆ ನಿಲ್ದಾಣದಿಂದ ನೇರವಾಗಿ ಬಸ್ಸುಗಳ ಸಂಚಾರವಿದೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more