Search
  • Follow NativePlanet
Share
» »ಮೊತಿಹಾರಿಯಲ್ಲಿರುವ ಈ ಸ್ಥಳ ನಿಜಕ್ಕೂ ಸುಂದರ

ಮೊತಿಹಾರಿಯಲ್ಲಿರುವ ಈ ಸ್ಥಳ ನಿಜಕ್ಕೂ ಸುಂದರ

ಮೊತಿಹಾರಿಯು ಬಿಹಾರ ರಾಜ್ಯದಲ್ಲಿದೆ. ಇದು ಯಾತ್ರಾರ್ಥಿಗಳು ಮತ್ತು ಪ್ರವಾಸ ಪ್ರಿಯರ ನೆಚ್ಚಿನ ತಾಣವಾಗಿದೆ. ಮೊತಿಹಾರಿಯು ಪಟ್ನಾದಿಂದ 120 ಕಿಮೀ ದೂರದಲ್ಲಿದೆ. ಮೊತಿಹಾರಿ ಪ್ರವಾಸೋದ್ಯಮವು ತನ್ನಲ್ಲಿನ ಐತಿಹಾಸಿಕ ಮಹತ್ವದ ಸ್ಥಳಗಳಿಗಾಗಿ ಹೆಸರುವಾಸಿಯಾಗಿದೆ.

ಗಾಂಧೀಜಿ ಸತ್ಯಾಗ್ರಹ ಆರಂಭಿಸಿದ್ದು ಇಲ್ಲಿಯೇ

ಗಾಂಧೀಜಿ ಸತ್ಯಾಗ್ರಹ ಆರಂಭಿಸಿದ್ದು ಇಲ್ಲಿಯೇ

PC: Jayesh Naithani

ಮೊತಿಹಾರಿ ಜಿಲ್ಲೆಯಲ್ಲಿಯೇ ಮಹಾತ್ಮ ಗಾಂಧಿಯವರು ಮೊದಲ ಬಾರಿಗೆ ಬ್ರಿಟೀಷರ ಆಳ್ವಿಕೆಯ ವಿರುದ್ಧ ಸತ್ಯಾಗ್ರಹವನ್ನು ಆರಂಭಿಸಿದರು. ಈ ಪ್ರದೇಶದ ಐತಿಹಾಸಿಕ ಮಹತ್ವದ ಕಾರಣದಿಂದಾಗಿಯೇ ಇದು ಸಂದರ್ಶಿಸಲೇಬೇಕಾದ ಪ್ರವಾಸಿ ತಾಣವಾಗಿ ಉಳಿದಿದೆ. ಮೊತಿಹಾರಿಯಲ್ಲಿ ಶಾಲೆಯನ್ನು ತೆರೆಯಲು ಸ್ಥಳೀಯರಿಗೆ ನೆರವು ನೀಡುವುದರೊಂದಿಗೆ ಮಹಾತ್ಮ ಗಾಂಧಿಯವರು ಇಲ್ಲಿ ಶಿಕ್ಷಣದ ಬೀಜಗಳನ್ನು ಬಿತ್ತಲು ಕಾರಣರಾದರು.

ಬುದ್ಧ ಸ್ತೂಪ

ಬುದ್ಧ ಸ್ತೂಪ

PC: official website

ಇಲ್ಲಿ ಬುದ್ಧ ಸ್ತೂಪವೊಂದಿದೆ. ಹಾಗಾಗಿ ಇಲ್ಲಿಗೆ ಬುದ್ಧ ಪ್ರವಾಸಿಗರು ವರ್ಷ ಪೂರ್ತಿ ಭೇಟಿ ನೀಡುತ್ತಾರೆ. ಇದು 104 ಅಡಿ ಎತ್ತರದ ಸ್ತೂಪ. ಇದನ್ನು ಮೊತಿಹಾರಿ ಸ್ತೂಪ ಎಂದು ಕರೆಯುತ್ತಾರೆ. ಹಲವರ ನಂಬಿಕೆಯ ಪ್ರಕಾರ ಈಗಿರುವ ಸ್ತೂಪವು ಹಿಂದೆ ಇದ್ದ ಇನ್ನೂ ಎತ್ತರದ ಸ್ತೂಪದ ಪಳೆಯುಳಿಕೆಯಾಗಿದೆ.

ಮಹಾತ್ಮ ಗಾಂಧಿ ಸಂಗ್ರಹಾಲಯ

ಮಹಾತ್ಮ ಗಾಂಧಿ ಸಂಗ್ರಹಾಲಯ

PC: official website

ಪ್ರಸಿದ್ಧ ಲೇಖಕ ಜಾರ್ಜ್ ಆರ್ವೆಲ್ ಹುಟ್ಟಿದ್ದು ಮೋತಿಹಾರಿಯಲ್ಲಿಯೇ. ಇಲ್ಲಿಗೆ ಬಂದವರು ಜಾರ್ಜ್ ಆರ್ವೆಲ್ಲನ ಸ್ಮಾರಕಕ್ಕೆ ಭೇಟಿ ನಿಡಲೇಬೇಕು. ಮಹಾತ್ಮ ಗಾಂಧಿ ಸಂಗ್ರಹಾಲಯ ಮತ್ತು ಕಲ್ಲಿನ ಸ್ತಂಭ ಇಲ್ಲಿನ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ. ಮೊತಿಹಾರಿಯಲ್ಲಿ ಹಲವು ಸಣ್ಣಕೈಗಾರಿಕೆಗಳಿವೆ. ಕಾಗದ, ಸಕ್ಕರೆ ಮುಂತಾದ ಕಾರ್ಖಾನೆಗಳನ್ನು ಇಲ್ಲಿ ಕಾಣಬಹುದಾಗಿದೆ. ಮೊತಿಹಾರಿಯಲ್ಲಿ ಬಿಹಾರದಲ್ಲೇ ದೊಡ್ಡದಾದ ಸಕ್ಕರೆ ಕಾರ್ಖಾನೆಯಿದೆ.

ಪ್ರಮುಖ ಪ್ರವಾಸಿ ತಾಣಗಳು

ಪ್ರಮುಖ ಪ್ರವಾಸಿ ತಾಣಗಳು

PC: official website

ಇಲ್ಲಿ ಶಿಕ್ಷಣ ಸಂಸ್ಥೆಗಳಿವೆ, ಕೈಗಾರಿಕೆಗಳಿವೆ, ಐತಿಹಾಸಿಕ ಸ್ಥಳಗಳಿವೆ. ಗಾಂಧಿ ಸಂಗ್ರಹಾಲಯ, ಜೀಲ್, ಗಾಂಧಿ ಮೈದಾನ ಇವು ಮತ್ತು ಸುಂದರ ಭೂಪ್ರದೇಶ ಮತ್ತು ಹಿಮಾಲಯದ ತಪ್ಪಲು ಮೋತಿಹಾರಿಯನ್ನು ಪ್ರಮುಖ ಪ್ರವಾಸಿ ತಾಣವಾಗಿಸಿದೆ. ಮೊತಿಹಾರಿಯು ಲಿಚಿ ಮತ್ತು ಸಿಹಿ ಆಲೂಗಡ್ಡೆಗಳಿಗಾಗಿ ಪ್ರಸಿದ್ಧವಾದುದು. ಮೊತಿಹಾರಿಯಲ್ಲಿ ಬೇಸಿಗೆಯಲ್ಲಿ ಉಷ್ಣತೆ ಹೆಚ್ಚಿರುತ್ತದೆ ಮತ್ತು ಚಳಿಗಾಲದಲ್ಲಿ ತೀವ್ರ ಚಳಿಯಿರುತ್ತದೆ. ಮಳೆಗಾಲಕ್ಕೂ ಮುನ್ನ ಮೊತಿಹಾರಿಗೆ ಭೇಟಿ ನೀಡುವುದು ಉತ್ತಮ.

ಯಾವಾಗ ಭೇಟಿ ನೀಡುವುದು ಸೂಕ್ತ

ಯಾವಾಗ ಭೇಟಿ ನೀಡುವುದು ಸೂಕ್ತ

PC: wikicommons

ಮೊತಿಹಾರಿಯಲ್ಲಿ ಬೇಸಿಗೆಯಲ್ಲಿ ಹೆಚ್ಚಿನ ಧಗೆಯಿರುತ್ತದೆ ಮತ್ತು ಚಳಿಗಾಲದಲ್ಲಿ ಹೆಚ್ಚಿನ ಚಳಿಯಿರುತ್ತದೆ. ಮೊತಿಹಾರಿಗೆ ಹೋಗಲಿಚ್ಚಿಸುವವರು ಮಳೆಗಾಲದ ನಂತರ ಹೋಗುವುದು ಉತ್ತಮ. ಮಳೆಗಾಲದ ನಂತರ ಮೊತಿಹಾರಿಗೆ ಭೇಟಿ ನೀಡುವುದು ಸೂಕ್ತ. ಈ ಸಮಯದಲ್ಲಿ ಪ್ರಯಾಣ ಮತ್ತು ಸುತ್ತಾಟಕ್ಕೆ ವಾತಾವರಣವು ಅನುಕೂಲಕರವಾಗಿರುತ್ತದೆ. ಮಳೆಗಾಲದ ನಂತರ ಸುತ್ತಲ ಪ್ರಕೃತಿ ಇನ್ನಷ್ಟು ಸೌಂದರ್ಯದಿಂದ ನಳನಳಿಸುತ್ತಿರುತ್ತದೆ.

ತಲುಪುವುದು ಹೇಗೆ?

ತಲುಪುವುದು ಹೇಗೆ?

PC: shrda gupta

ಮೋತಿಹಾರಿಯ ಪಟ್ಟಣವು ತನ್ನದೇ ಆದ ರೈಲು ನಿಲ್ದಾಣವನ್ನು ಹೊಂದಿದೆ. ಇದನ್ನು ಬಪುಧಂ ಮೋತಿಹಾರಿ ಎಂದು ಕರೆಯಲಾಗುತ್ತದೆ, ಎಲ್ಲಾ ಪ್ರಮುಖ ಸ್ಥಳಗಳಿಗೆ ನಿರಂತರ ರೈಲುಗಳು ಇವೆ. ರೈಲು ದರಗಳು ಬಸ್ ದರಕ್ಕಿಂತ ಅಗ್ಗವಾಗಿದೆ, ಆದರೆ ರೈಲುಗಳ ಮೂಲಕ ಪ್ರಯಾಣಿಸುವ ಸಲುವಾಗಿ ಟಿಕೆಟ್ ಮುಂಚಿತವಾಗಿಯೇ ಬುಕ್ ಮಾಡಬೇಕಾಗಿದೆ. ಮೋತಿಹಾರಿಯ ರೈಲ್ವೆ ನಿಲ್ದಾಣವು ಹೊಸ ದೆಹಲಿ, ಆನಂದ್ ವಿಹಾರ್, ಹೌರಾ ಮತ್ತು ರಾಕ್ಸುವಲ್ ನಗರಗಳಿಗೆ ಸಾಮಾನ್ಯ ರೈಲುಗಳನ್ನು ಹೊಂದಿರುತ್ತದೆ.

ಮೋತಿಹಾರಿಯ ಪಟ್ಟಣಕ್ಕೆ ಬಸ್ ನಿಯಮಿತವಾಗಿ ಪಾಟ್ನಾದಿಂದ ದೊರೆಯುತ್ತದೆ. ಮೋತಿಹಾರಿಯಿಂದ ಸುಮಾರು 160 ಕಿ.ಮೀ ದೂರದಲ್ಲಿ ಪಾಟ್ನಾ ನಗರವಿದೆ ಮತ್ತು ಬಸ್‌ಗಳು ಪ್ರತಿ ವ್ಯಕ್ತಿಗೆ 210 ರಿಂದ 250 ರ ದರವನ್ನು ವಿಧಿಸುತ್ತವೆ. ಬಸ್ಸುಗಳು ಹೆಚ್ಚಾಗಿ ರಾಜ್ಯ ಸರ್ಕಾರ / ಖಾಸಗಿ ಬಸ್‌ಗಳಿವೆ.

ಮೋತಿಹಾರಿಯ ಹತ್ತಿರದ ವಿಮಾನ ನಿಲ್ದಾಣವೆಂದರೆ ಪಾಟ್ನಾ ವಿಮಾನ ನಿಲ್ದಾಣ. ಪಾಟ್ನಾ ವಿಮಾನ ನಿಲ್ದಾಣವು ಮೋತಿಹಾರಿಯಿಂದ 160 KM ಗಳಷ್ಟು ದೂರದಲ್ಲಿದೆ ಮತ್ತು ಬಸ್ / ಟ್ಯಾಕ್ಸಿ ಸೇವೆಯು ಲಭ್ಯವಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X