• Follow NativePlanet
Share
» »ಗೋವಾದ ಈ ಪ್ರೇತಭಾದಿತ ಸ್ಥಳಗಳ ಬಗ್ಗೆ ನಿಮಗೆ ಗೊತ್ತಾ?

ಗೋವಾದ ಈ ಪ್ರೇತಭಾದಿತ ಸ್ಥಳಗಳ ಬಗ್ಗೆ ನಿಮಗೆ ಗೊತ್ತಾ?

Written By:

ಗೋವಾ ಅಂದ್ರೆ ಬರೀ ಬೀಚ್, ಪಾರ್ಟಿ, ರೊಮ್ಯಾಂಟಿಕ್ ವಾತಾವರಣ ಅನ್ನೋದಷ್ಟೇ ನಮಗೆಲ್ಲಾ ತಿಳಿದಿರೋದು. ಗೋವಾದಲ್ಲಿ ಈ ಪಾರ್ಟಿ, ಬೀಚ್‌ಗಳನ್ನು ಬಿಟ್ಟು ಇನ್ನೂ ಕೆಲವು ಇಂಟ್ರಸ್ಟಿಂಗ್ ಸ್ಥಳಗಳಿವೆ. ಅವುಗಳೇನೆಂದರೆ ಪ್ರೇತಭಾದಿತ ಸ್ಥಳಗಳು. ಇಲ್ಲಿನ ಪ್ರತಿಯೊಂದು ಪ್ರೇತಭಾದಿತ ಸ್ಥಳಗಳಿಗೂ ಒಂದೊಂದು ಕಥೆ ಇದೆ.

ಇಲ್ಲಿ ಪಿಂಡದಾನ ಮಾಡಿದ್ರೆ ಮೋಕ್ಷ ಪ್ರಾಪ್ತಿಯಾಗುತ್ತಂತೆ!

ತ್ರಿ ಕಿಂಗ್ ಚರ್ಚ್

ತ್ರಿ ಕಿಂಗ್ ಚರ್ಚ್

ಗೋವಾದ ಕ್ಯಾಜುವಲಿಂಮ್ ಪ್ರದೇಶದಲ್ಲಿರುವ ತ್ರಿ ಕಿಂಗ್ ಚರ್ಚ್ ನಗರದ ಪ್ರೇತಬಾಧಿತ ಸ್ಥಳಗಳಲ್ಲಿ ಒಂದಾಗಿದೆ. ಈ ಚರ್ಚ್‌ನ ಹೆಸರನ್ನು ಮೂವರು ವಿದ್ವಾನಿ ರಾಜರುಗಳ ಹೆಸರಿನಲ್ಲಿ ಇಡಲಾಗಿದೆ. ಒಂದಾನೊಂದು ಕಾಲದಲ್ಲಿ ಈ ಸ್ಥಳದಲ್ಲಿ ಮೂವರು ರಾಜರು ನೆಲೆಸುತ್ತಿದ್ದರು. ಅಧಿಕಾರದ ಆಸೆಗಾಗಿ ಓರ್ವ ರಾಜ ಇನ್ನಿಬ್ಬರು ರಾಜರನ್ನು ವಿಷ ನೀಡಿ ಕೊಂದನು. ನಂತರ ತನ್ನ ಪಾಪದ ಕೊಡ ತುಂಬಿ ಆತ ಕೂಡಾ ಆತ್ಮಹತ್ಯೆ ಮಾಡಿಕೊಂಡನು. ಈ ಚರ್ಚ್‌ನ ಕೆಳಗೆ ಅವರ ಸಮಾಧಿ ಇದೆ ಎನ್ನಲಾಗುತ್ತದೆ. ಇಂದಿಗೂ ಈ ರಾಜರು ಮುಕ್ತಿಗಾಗಿ ಇಲ್ಲಿ ಅಲೆಯುತ್ತಿದ್ದಾರೆ ಎನ್ನಲಾಗುತ್ತದೆ.

ಇಗೋರಿಕಮ್ ಬಂದ್

ಇಗೋರಿಕಮ್ ಬಂದ್

ಗೋವಾದಲ್ಲಿ ಇಗೋರಿಕಮ್ ಬಂದ್ ಎನ್ನುವ ಸ್ಥಳವಿದೆ. ಇಗೋರಿಕಮ್ ಬಂದ್ ಎರಡು ಬದಿಯಲ್ಲೂ ಮರಗಳಿಂದ ಕೂಡಿದ್ದು ನಡುವಿನಲ್ಲಿ ಒಂದು ರಸ್ತೆ ಇದೆ. ಈ ರಸ್ತೆ ಪ್ರೇತಾಭಾದಿತವಾಗಿದೆ ಎನ್ನಲಾಗುತ್ತದೆ. ಇಲ್ಲಿ ರಾತ್ರಿ ಹೊತ್ತು ಚಿತ್ರವಿಚಿತ್ರ ಘಟನೆಗಳು ಆಗಲು ಪ್ರಾರಂಭವಾಗುತ್ತದೆ. ಮಧ್ಯಾಹ್ನ ಎರಡರಿಂದ ಮೂರು ಗಂಟೆಹೊತ್ತಿಗೆ ಯಾರಾದರೂ ಆ ರಸ್ತೆಯಲ್ಲಿ ಹೋದರೆ ಅವರು ಅದೃಶ್ಯ ಶಕ್ತಿಯನ್ನು ಭೇಟಿ ಮಾಡುತ್ತಾರೆ ಎನ್ನಲಾಗುತ್ತದೆ.

ಭೂತದ ಹೋಟೆಲ್

ಭೂತದ ಹೋಟೆಲ್

ಗೋವಾದಲ್ಲೊಂದು ಭೂತದ ಹೊಟೇಲ್ ಇದೆ. ಇದನ್ನು ರೂಸಿಯರು ನಿರ್ಮಾಣ ಮಾಡಿದ್ದರು. ಕಾನೂನು ಸಮಸ್ಯೆಯಿಂದಾಗಿ ಹೊಟೇಲ್‌ನ ಕಾರ್ಯ ಪೂರ್ಣವಾಗಿಲ್ಲ. ಇಂದಿಗೂ ಆ ಹೊಟೇಲ್ ಕಾಡಿನ ಮಧ್ಯೆ ಭಯಾನಕ ಸ್ಥಿತಿಯಲ್ಲಿದೆ. ಇಲ್ಲಿ ಮನುಷ್ಯರಂತೂ ಹೋಗಿ ಇರಲು ಸಾಧ್ಯವಾಗಿಲ್ಲ. ಹಾಗಾಗಿ ಆತ್ಮಗಳು ನೆಲೆಯೂರಿವೆ. ಇದರ ಹತ್ತಿರದಿಂದ ತಿರುಗುವವರಿಗೆ ಒಂದು ವಿಚಿತ್ರ ಅನುಭವವಾಗುತ್ತದೆ. ಯಾರೋ ಕೂಗಿದಂತೆ ಕೇಳಿಸುತ್ತದೆ ಎನ್ನುತ್ತಾರೆ ಸುತ್ತಮುತ್ತಲಿನ ಜನರು.

ಎನ್‌ಹೆಚ್‌ 17 ಮುಂಬೈ-ಗೋವಾ

ಎನ್‌ಹೆಚ್‌ 17 ಮುಂಬೈ-ಗೋವಾ

ಮುಂಬೈಯನ್ನು ಗೋವಾಗೆ ಕನೆಕ್ಟ್ ಮಾಡುವ ರಾಷ್ಟ್ರೀಯ ಹೆದ್ದಾರಿ ಎನ್‌ಹೆಚ್‌ ೧೭ ಕೂಡಾ ಗೋವಾದ ಭಯಾನಕ ಸ್ಥಳಗಳಲ್ಲೊಂದು. ಈ ರಸ್ತೆಯಲ್ಲಿ ಪ್ರೇತಾತ್ಮಗಳ ವಾಸವಿದೆ. ಅವು ಈ ರಸ್ತೆಯಲ್ಲಿ ಸಾಗುವ ಜನರಿಗೆ ತೊಂದರೆನೀಡುತ್ತಾ ಇರುತ್ತದೆ. ಇವೆಲ್ಲವೂ ರಾತ್ರಿಯ ನಂತರವೇ ನಡೆಯುತ್ತದೆ.

 ಸಲಿಗಾವೋ

ಸಲಿಗಾವೋ

ಗೋವಾದಲ್ಲಿ ಸಲಿಗಾಬೋ ಹೆಸರಿನ ಒಂದು ಹಳ್ಳಿ ಇದೆ. ಈ ಹಳ್ಳಿ ಕೂಡಾ ಚಿತ್ರವಿಚಿತ್ರ ಘಟನೆಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿನ ಮರವೊಂದರಲ್ಲಿ ಯಾವುದೋ ಒಂದು ಮಹಿಳೆಯ ಆತ್ಮ ವಾಸವಾಗಿದೆ ಎನ್ನಲಾಗುತ್ತದೆ.

Read more about: india goa haunted beach

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ