Search
  • Follow NativePlanet
Share
» »ಗೋವಾದಲ್ಲಿನ ಪ್ರಮುಖ ಹಿಂದು ದೇವಾಲಯಗಳಿವು

ಗೋವಾದಲ್ಲಿನ ಪ್ರಮುಖ ಹಿಂದು ದೇವಾಲಯಗಳಿವು

By Manjula Balaraj Tantry

ಗೋವಾದಲ್ಲಿ ಬೀಚ್‌ಗಳು, ಸಮುದ್ರ ಕಿನಾರೆಯನ್ನು ಹೊರತುಪಡಿಸಿ ಇನ್ನೂ ಬೇಕಾದಷ್ಟು ಸ್ಥಳಗಳಿವೆ. ಅವುಗಳಲ್ಲಿ ಹಿಂದೂ ದೇವಾಲಯಗಳೂ ಇವೆ. ಪಾಶ್ಚಿಮಾತ್ಯರ ಸಂಸ್ಕೃತಿಯನ್ನು ಬೆಳೆಸಿಕೊಂಡಡಿರುವ ಗೋವಾದಲ್ಲೂ ಹಿಂದೂ ಸಂಸ್ಕೃತಿಯ ದೇವಾಲಯಗಳಿವೆ ಅಂದರೆ ಆಶ್ವರ್ಯವಾಗೋದು ಸಹಜ ತಾನೇ. ಗೋವಾದಲ್ಲಿ ಕೆಲವು ಹಿಂದೂ ದೇವಾಲಯಗಳಲ್ಲಿ ಭಗವತಿ ದೇವಿ ದೇವಾಲಯ, ಮಡ್ಕೈ ನ ಶ್ರೀ ನವದುರ್ಗಾ ದೇವಾಲಯ, ದಾಮೋದರ ದೇವಾಲಯ, ಮಂಡೋದರಿ ದೇವಾಲಯ, ರಾಮನಾಥ ದೇವಾಲಯ, ರುದ್ರೇಶ್ವರ್ ದೇವಾಲಯ, ಕಾಮಾಕ್ಷಿ ದೇವಾಲಯ ಮತ್ತು ಲಕ್ಷ್ಮೀ ನರಸಿಂಹ ದೇವಾಲಯಗಳಿವೆ.

ಶಾಂತ ದುರ್ಗ ದೇವಾಲಯ

ಶಾಂತ ದುರ್ಗ ದೇವಾಲಯ

Nkodikal -

ಶಾಂತ ದುರ್ಗಾ ದೇವಾಲಯವು ಪೋಂಡಾ ತಾಲೂಕಿನ ಕಾವಲಂ ಹಳ್ಳಿಯ ತಪ್ಪಲಿನಲ್ಲಿದೆ. ಇದು ಗೋವಾದಲ್ಲಿನ ಜನಪ್ರೀಯ ಹಿಂದೂ ದೇವಾಲಯವಾಗಿದೆ. ಈ ದೇವಾಲಯವು ಶಾಂತ ದುರ್ಗಾ ದೇವಿಗೆ ಅರ್ಪಿತವಾಗಿದೆ ಮತ್ತು ದೇವಾಲಯದ ಸಂಕೀರ್ಣದಲ್ಲಿ ದೊಡ್ಡದಾದ ದೀಪಸ್ತಂಭವಿದೆ.

ಮಂಗೇಶೀ ದೇವಾಲಯ

ಮಂಗೇಶೀ ದೇವಾಲಯ

Mangesh Nadkarni

ಮಂಗ್ವೇಶಿ ದೇವಾಲಯವು ಪೊಂಡಾ ಜಿಲ್ಲೆಯಲ್ಲಿದು ಗೊವಾದಲ್ಲಿ ಹೆಚ್ಚಾಗಿ ಭೇಟಿ ಕೊಡಲ್ಪಡುವ ದೇವಾಲಯವಾಗಿದೆ. ಇದು ಮಂಗೇಶ ಭಗವಂತನಿಗೆ ಅರ್ಪಿತವಾದ ದೇವಾಲಯವಾಗಿದೆ. ಮಂಗೇಶ ಲಿಂಗ ದೇವಾಲಯದಲ್ಲಿ ಪಾರ್ವತಿ ದೇವಿ ಮತ್ತು ಗಣೇಶ ದೇವರನ್ನೂ ಕೂಡಾ ಪೂಜಿಸಲಾಗುತ್ತದೆ.

ಮಹಾದೇವ್ ದೇವಾಲಯ

ಮಹಾದೇವ್ ದೇವಾಲಯ

AshLin

ಮಹಾದೇವ್ ದೇವಾಲಯವು ಗೋವಾದಲ್ಲಿನ ಅತ್ಯಂತ ಪ್ರಾಚೀನ ದೇವಾಲಯವಾಗಿದ್ದು ಇದು ಶಿವ ದೇವರಿಗೆ ಅರ್ಪಿತವಾದುದಾಗಿದೆ. ಈ ದೇವಾಲಯವು ತಂಬದಿ ಸುರ್ಲಾ ಎಂಬ ಹಳ್ಳಿಯ ಬಳಿ ಇದ್ದು ಇದು ಭಗವಾನ್ ಮಹಾವೀರ್ ಅಭಯಾರಣ್ಯ ಮತ್ತು ಮೊಲ್ಲೆಮ್ ರಾಷ್ಟ್ರೀಯ ಉದ್ಯಾನವನ ಹಾಗೂ ಪಣಜಿಯಿಂದ ಸುಮಾರು 65 ಕಿ.ಮೀ ದೂರದಲ್ಲಿದೆ.

ಮಾರುತಿ ದೇವಾಲಯ

ಮಾರುತಿ ದೇವಾಲಯ

ಗೋವಾದಲ್ಲಿನ ಪಣಜಿಯಲ್ಲಿನ ಮಾರುತಿ ದೇವಾಲಯವು ಅಲ್ಟಿನ್ಹೋ ಬೆಟ್ಟದ ಮೇಲಿರುವ ಇದು ಮಾರುತಿ ಅಥವಾ ಹನುಮಾನನ್ ದೇವರಿಗೆ ಅರ್ಪಿತವಾಗಿದೆ. ಮಾರುತಿಗೆ ಅರ್ಪಿತವಾದ ಈ ದೊಡ್ಡ ಕಿತ್ತಳೆ ದೇವಾಲಯವು ಗೋವಾದ ಅತ್ಯಂತ ಸುಂದರವಾದ ದೇವಾಲಯವಾಗಿದೆ.

ನಾಗೇಶಿ ದೇವಾಲಯ

ನಾಗೇಶಿ ದೇವಾಲಯ

Mahabalaindia

ನಾಗೇಶಿ ದೇವಾಲಯವು ಶೀವ ದೇವರಿಗೆ ಅರ್ಪಿತವಾದುದಾಗಿದೆ ಮತು ಇದರ ಲಿಂಗವನ್ನು ಸ್ವಯಂಭು ಎಂದು ಪರಿಗಣಿಸಲಾಗುತ್ತದೆ.ನಾಗೇಶೀ ಶಿವನನ್ನು ಗೋವಾದ ಪೋಂಡಾ ಜಿಲ್ಲೆಯ ಹಿಂದು ಧರ್ಮದವರು ಪೂಜಿಸುತ್ತಾರೆ.

ಮಹಾಲಕ್ಷ್ಮಿ ದೇವಾಲಯ

ಮಹಾಲಕ್ಷ್ಮಿ ದೇವಾಲಯ

ಮಹಾಲಕ್ಷ್ಮೀ ದೇವಾಲಯವು ಗೋವಾದ ಬಂಡೋರಾದಲ್ಲಿದೆ ಮತ್ತು ಇದು ಗೋವಾದಲ್ಲಿನ ಒಂದು ಪ್ರಾಚೀನವಾದ ದೇವಾಲಯವಾಗಿದೆ. ಮತ್ತು ಇದು ನಗರದ ಭೇಟಿ ಕೊಡಲೇ ಬೇಕಾದ ದೇವಾಲಯವಾಗಿದ್ದು ಇದನ್ನು ಜಿಎಸ್ ಬಿ (ಗೌಡ ಸಾರಸ್ವತ ಬ್ರಾಹ್ಮಣ)ಸಮುದಾಯದವರಿಂದ ನಿರ್ವಹಿಸಲ್ಪಡುತ್ತದೆ.

ಸಪ್ತಕೋಟೇಶ್ವರ್ ದೇವಾಲಯ

ಸಪ್ತಕೋಟೇಶ್ವರ್ ದೇವಾಲಯ

Deoboo

ಗೋವಾದ ಸಪ್ತಕೋಟೇಶ್ವರ ದೇವಾಲಯವು ಕೊಂಕಣ ಪ್ರಾಂತ್ಯದಲ್ಲಿಯ ಆರನೇ ಅತಿ ದೊಡ್ಡ ಶಿವದೇವರ ದೇವಾಲಯಗಳಲ್ಲೊಂದಾಗಿದೆ. ಡಿವಾರ್ ದ್ವೀಪದಿಂದ ಮೂಲಕ ಈ ಸ್ಥಳವನ್ನು ತಲುಪಬಹುದು.

ಬ್ರಹ್ಮ ದೇವಾಲಯ

ಬ್ರಹ್ಮ ದೇವಾಲಯ

ಗೋವಾದ ಬ್ರಹ್ಮ ದೇವಾಲಯವು ಮತ್ತೊಂದು ಭಾರತದ ಕಡಿಮೆ ಪ್ರಚಲಿತದಲ್ಲಿರುವ ದೇವಾಲಯಗಳಲ್ಲೊಂದಾಗಿದ್ದು ಇದು ಬ್ರಹ್ಮ ದೇವರಿಗೆ ಅರ್ಪಿತವಾದುದಾಗಿದೆ. ಬ್ರಹ್ಮ ಕರಾಂಬೊಲಿಮ್ ಗ್ರಾಮದ ವಾಲ್ಪೋಯಿಂದ 7 ಕಿ.ಮೀ ದೂರದಲ್ಲಿದೆ.

ಮಹಾಲಸ ನಾರಾಯಣಿ ದೇವಾಲಯ

ಮಹಾಲಸ ನಾರಾಯಣಿ ದೇವಾಲಯ

ಮರ್ಡೊಲ್ ನ ಮಹಾಲಸ ನಾರಯಣಿ ದೇವಾಲಯವು ಭಾರತದ ಒಂದು ಅಪರೂಪದ ದೇವಾಲಯಗಳಲ್ಲೊಂದಾಗಿದೆ. ದೇವಸ್ಥಾನವನ್ನು ಮಹಾಲಸ ರೂಪದಲ್ಲಿದ್ದು ಇಲ್ಲಿ ವಿಷ್ಣು ದೇವರ ಹೆಣ್ಣು ರೂಪವಾದ ( ಮೊಹಿನಿ) ಮತ್ತು ಪುರುಷ ರೂಪವಾದ ( ವಿಷ್ಣು ) ಎರಡರ ಜೊತೆಗೆ ಇರುವ ಅವತಾರವನ್ನು ಇಲ್ಲಿ ಪೂಜಿಸಲಾಗುತ್ತದೆ.

ರಾಮ್ ನಾಥ ದೇವಾಲಯ

ರಾಮ್ ನಾಥ ದೇವಾಲಯ

ರಾಮ್ ನಾಥ ದೇವಾಲಯವು ಪಣಜಿಯ ಬಳಿ ಇರುವ ಬಂಡೋರಾ ಎನ್ನುವ ಸಣ್ಣ ಹಳ್ಳಿಯಲ್ಲಿದ್ದು ಇದು ರಾಮ್ ನಾಥ್ ದೇವರಿಗೆ ಅರ್ಪಿತವಾದುದಾಗಿದೆ.

ಭಗವತಿ ದೇವಿ ದೇವಾಲಯ

ಭಗವತಿ ದೇವಿ ದೇವಾಲಯ

ಭಗವತಿ ದೇವಿ ದೇವಾಲಯವು ಪಣಜಿಯಿಂದ 28 ಕಿ.ಮೀ ದೂರದಲ್ಲಿರುವ ಪರ್ಣೇಮ್ ನಲ್ಲಿದ್ದು ಇದು ಗೋವಾದ ಅತ್ಯಂತ ಹಳೆಯ ದೇವಾಲಯಗಳಲ್ಲೊಂದಾಗಿದೆ.

ರುದ್ರೇಶ್ವರ ದೇವಾಲಯ

ರುದ್ರೇಶ್ವರ ದೇವಾಲಯ

ರುದ್ರೇಶ್ವರ ದೇವಾಲಯವು ಶಿವ ದೇವರಿಗೆ ಅರ್ಪಿತವಾದುದಾಗಿದ್ದು ಇದು ಮಾರ್ವೆಲಮ್ ನಲ್ಲಿದೆ ಇದು ಅರ್ವೇಲಮ್ ಗುಹೆ ಮತ್ತು ಹಾರ್ವೇಲಮ್ ಜಲಪಾತದ ಬಳಿ ಇದೆ.

ನವದುರ್ಗಾ ದೇವಾಲಯ

ನವದುರ್ಗಾ ದೇವಾಲಯ

ಇದು ಪಣಜಿಯಿಂದ 28 ಕಿ.ಮೀ ಅಂತರದಲ್ಲಿ ಮಡ್ಕೈ ನಲ್ಲಿರುವ ಶ್ರೀ ನವದುರ್ಗಾ ದೇವಾಲಯವು ದೇವಿ ನವದುರ್ಗೆಗೆ ಅರ್ಪಿತವಾದುದಾಗಿದೆ. ಮತ್ತು ಇದು ಗೋವಾದ ಅತ್ಯಂತ ಹಳೆಯದಾದ ದೇವಾಲಯವಾಗಿದೆ.

ಕಾಮಾಕ್ಷಿ ದೇವಾಲಯ

ಕಾಮಾಕ್ಷಿ ದೇವಾಲಯ

ಗೋವಾದಲ್ಲಿನ ಶಿರೋಡಾದ ಕಾಮಾಕ್ಷಿ ದೇವಾಲಯವು ತ್ರಿಪುರಾ ಸುಂದರಿಯ ಒಂದು ರೂಪಕ್ಕೆ ಸಮರ್ಪಿತವಾಗಿದೆ, ಕಾಮಾಕ್ಷಿನಲ್ಲಿರುವ ಇತರ ಪ್ರಸಿದ್ಧ ದೇವಾಲಯಗಳೆಂದರೆ ಕಾಂಚೀಪುರಂನಲ್ಲಿರುವ ಕಾಮಾಕ್ಷಿ ಅಮ್ಮನ್ ದೇವಾಲಯ, ಜೊನ್ನಾವಾಡಾದಲ್ಲಿನ ಕಾಮಾಕ್ಷಿ ದೇವಸ್ಥಾನ ಮತ್ತು ಅಗರ್ತಲಾದ ತ್ರಿಪುರ ಸುಂದರಿ ದೇವಸ್ಥಾನ.

ಲಕ್ಷ್ಮೀ ನರಸಿಂಹ ದೇವಾಲಯ

ಲಕ್ಷ್ಮೀ ನರಸಿಂಹ ದೇವಾಲಯ

ಲಕ್ಷ್ಮೀ ನರಸಿಂಹ ದೇವಾಲಯವು ಅನಂತ ನರಸಿಂಹ ದೇವಾಲಯವೆಂದೂ ಕರೆಯಲ್ಪಡುತ್ತದೆ. ಇದು ವಿಷ್ಣುದೇವರು ಮತ್ತು ಲಕ್ಷ್ಮೀ ದೇವಿಗೆ ಸಮರ್ಪಿತವಾದುದಾಗಿದೆ. ಇದು ಪೊಂಡಾ ತಾಲೂಕಿನ ವೆಲಿಂಗ ಹಳ್ಳಿಯಲ್ಲಿದೆ.

Read more about: india temple travel goa
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more