• Follow NativePlanet
Share
» »ಶಿವನು ತನ್ನ ಮೂರನೇ ಕಣ್ಣು ತೆರೆದ ಪ್ರದೇಶ!

ಶಿವನು ತನ್ನ ಮೂರನೇ ಕಣ್ಣು ತೆರೆದ ಪ್ರದೇಶ!

Posted By:

ಮೈಲಾಡುತುರೈ ನಗರದಲ್ಲಿರುವ ಮಯೂರನಾಥ ಸ್ವಾಮಿ ದೇವಾಲಯ ಹೆಸರಿನ ಮೇಲೆ ಹಾಗು ಸ್ಥಳೀಯ ಕಥೆಯ ಮೂಲಕ ಶಿವನ ಬಗ್ಗೆ ತಿಳಿಸುತ್ತದೆ. ಇಲ್ಲಿ ಪ್ರಧಾನವಾದ ದೇವನು ಶಿವನೇ (ಮಯೂರನಾಥರ್). ಪಾರ್ವತಿ ದೇವಿ "ಮಯೂರ" ರೂಪದಲ್ಲಿ ಶಿವನಿಗೆ ಇಲ್ಲಿ ಪೂಜಿಸದಳಂತೆ. ಕಾವೇರಿ ನದಿಯ ತೀರದಲ್ಲಿರುವ ಈ ಪಟ್ಟಣದಲ್ಲಿ, ಈ ಪ್ರದೇಶವನ್ನು ಒಂದು ತೀರ್ಥಯಾತ್ರೆ ಸ್ಥಳವಾಗಿ ಮಾರ್ಪಾಟು ಮಾಡಿದ ಆನೇಕ ದೇವಾಲಯಗಳು ಇವೆ. ಅವುಗಳಲ್ಲಿ ಮಯೂರನಾಥರ್ ದೇವಾಲಯವು ಪ್ರಧಾನವಾದುದು.

ಇಲ್ಲಿನ ಮತ್ತಷ್ಟು ದೇವಾಲಯಗಳು, ಯತ್ರಾಸ್ಥಳಗಳು ಒಮ್ಮೆ ದರ್ಶನ ಮಾಡಿದರೆ ಜನ್ಮ ಪಾವನ ಎಂದು ನಂಬಲಾಗಿದೆ. ಈ ವಿಶೇಷವಾದ ದೇವಾಲಯವು ತಮಿಳುನಾಡು ರಾಜ್ಯದಲ್ಲಿನ ನಾಗಪಟ್ಟಣ ಎಂಬ ಜಿಲ್ಲೆಯಲ್ಲಿದೆ. ಮೈಲಾಡುತುರೈ ಎಂದರೆ "ನವಿಲಿನ ಪಟ್ಟಣ" ಎಂಬುದೇ ಆಗಿದೆ. ಈ ಪ್ರದೇಶವು ಮುಖ್ಯವಾಗಿ ಚಿದಂಬರಂ, ಕುಂಭಕೋಣಂಗೆ ಸಮೀಪದಲ್ಲಿದೆ.

1.ಸೂರ್ಯನಾರ್ ಕೋವಿಲ್ (ದೇವಾಲಯ)

1.ಸೂರ್ಯನಾರ್ ಕೋವಿಲ್ (ದೇವಾಲಯ)

ಸೂರ್ಯನಾರ್ ದೇವಾಲಯವು, ಮೈಲಾಡುತುರೈನ ಪಶ್ಚಿಮಕ್ಕೆ ಸುಮಾರು 20 ಕಿ.ಮೀ ದೂರದಲ್ಲಿದೆ. ಇಲ್ಲಿ ಸೂರ್ಯ ಭಗವಾನನ್ನು ಪ್ರಧಾನವಾದ ದೈವವಾಗಿ ಆರಾಧಿಸುತ್ತಾರೆ. ಇಲ್ಲಿ ಆತನ ಪತ್ನಿಯರಾದ ಛಾಯ ಮತ್ತು ಸಂಧ್ಯಾರ ಪ್ರತಿಮೆಗಳನ್ನು ಕಾಣಬಹುದು. ಈ ದೇವಾಲಯದ ಸುತ್ತ ಇನ್ನು ಹಲವಾರು ದೇವಾಲಯಗಳನ್ನು ಕೂಡ ಕಾಣಬಹುದಾಗಿದೆ.

2.ತಿಂಗಲೂರ್

2.ತಿಂಗಲೂರ್

PC: Rsmn

ತಿಂಗಲೂರ್, ಮೈಲಾಡುತುರೈಗೆ ಸುಮಾರು 40 ಕಿ.ಮೀ ದೂರದಲ್ಲಿದೆ. ಇಲ್ಲಿ ಪ್ರಧಾನವಾದ ದೈವವಾಗಿ ಚಂದ್ರನನ್ನು ಭಕ್ತಿಯಿಂದ ಆರಾಧಿಸುತ್ತಾರೆ. ಆತನು ಇಲ್ಲಿಗೆ ಬರುವ ಭಕ್ತರ ಮಾನಸಿಕ ಭಾದೆಗಳನ್ನು ಹಾಗು ವ್ಯಾಧಿಗಳನ್ನು ನಯ ಮಾಡುತ್ತಾನೆ ಎಂದು ನಂಬುತ್ತಾರೆ. ತಿಂಗಲೂರ್‍ನ್ನು ಚಂದ್ರನೇ ಕಾಪಾಡಿಕೊಂಡು ಬರುತ್ತಿದ್ದಾನೆ.

3.ವೈದೀಶ್ವರನ್ ದೇವಾಲಯ

3.ವೈದೀಶ್ವರನ್ ದೇವಾಲಯ

PC: Ssriram mt

ಮೈಲಾಡುತುರೈಗೆ ಸುಮಾರು 12 ಕಿ.ಮೀ ದೂರದಲ್ಲಿರುವ ವೈದೀಶ್ವರನ್ ದೇವಾಲಯವು, ರಾವಣನ ಕೈಯಲ್ಲಿ ಮರಣಹೊಂದಿದ ಜಟಾಯುವು ಮೋಕ್ಷವನ್ನು ಪಡೆದುಕೊಂಡ ಪವಿತ್ರವಾದ ಸ್ಥಳ ಎಂದು ಹೇಳಲಾಗುತ್ತದೆ. ಜಟಾಯುವನ್ನು ದಹನ ಸಂಸ್ಕಾರವನ್ನು ಮಾಡಿದ ಪ್ರದೇಶವನ್ನು ಪ್ರಸ್ತುತ "ಜಟಾಯುಕುಂಡ" ಎಂದು ಕರೆಯುತ್ತಾರೆ. ಈ ದೇವಾಲಯದ ಮತ್ತೊಂದು ವಿಶೇಷವೆನೆಂದರೆ ಕೇವಲ ನಾಡಿಯನ್ನು ಹಿಡಿದುಕೊಂಡು ಜಾತಕವನ್ನು ಹೇಳುತ್ತಾರೆ.

4.ತಿರುವೆಂಕಾಡು

4.ತಿರುವೆಂಕಾಡು

PC: Rsmn

ತಿರುವೆಂಕಾಡು, ಮೈಲಾಡುತುರೈಗೆ ಪಟ್ಟಣಕ್ಕೆ ಸುಮಾರು 24 ಕಿ.ಮೀ ದೂರದಲ್ಲಿದೆ. ಇಲ್ಲಿ ಶಿವಭಗವಾನನ ದೇವಾಲಯವಿದೆ. ಕಾಶಿಯಂತೆಯೇ ಇಲ್ಲಿಯೂ ಕೂಡ ಆನೇಕ ಪವಿತ್ರವಾದ ಸ್ಥಳಗಳಿವೆ. ವಿದ್ಯಾರ್ಥಿಗಳು ಉತ್ತಮವಾದ ಫಲಿತಾಂಶವನ್ನು ಪಡೆಯಬೇಕು ಎಂದು, ಜೀವನದಲ್ಲಿ ಉನ್ನತವಾದ ಶಿಖರಕ್ಕೆ ತಲುಪಬೇಕು ಎಂದು ಈ ದೇವಾಲಯಕ್ಕೆ ಹೆಚ್ಚಾಗಿ ಬರುತ್ತಿರುತ್ತಾರೆ.

5.ಅಲಂಗುಡಿ

5.ಅಲಂಗುಡಿ

PC: Rasnaboy

ಮೈಲಾಡುತುರೈಗೆ ಸುಮಾರು 40 ಕಿ.ಮೀ ದೂರದಲ್ಲಿ ಗುರುಗ್ರಹಕ್ಕೆ ಅಂಕಿತವಾದ "ಅಲಂಗುಡಿ" ಕ್ಷೇತ್ರವಿದೆ. ಇಲ್ಲಿ ಎಲ್ಲಾ ದೇವಾಲಯಗಳಲ್ಲಿ ಇರುವ ಹಾಗೆ ವಿಗ್ರಹವಿಲ್ಲದೇ, ಕೇವಲ ದೇವರ ಬೊಂಬೆಯನ್ನು ಗೋಡೆಯ ಮೇಲೆ ಕೆತ್ತನೆ ಮಾಡಿದ್ದಾರೆ. ಅಲಂಗುಡಿ-ಗುರುಗ್ರಹಕ್ಕೆ ಅಂಕಿತವಾದ ಮತ್ತೊಂದು ಗ್ರಾಮವಾಗಿದೆ.

6.ಸುರಿಯನಾರ್ ದೇವಾಲಯ

6.ಸುರಿಯನಾರ್ ದೇವಾಲಯ

PC: Ssriram mt

ಮೈಲಾಡುತುರೈಗೆ ಸುಮಾರು 20 ಕಿ.ಮೀ ದೂರದಲ್ಲಿ ಕುಂಜನೂರಿನ ಸಮೀಪದಲ್ಲಿ ಸುರಿಯಾನಾರ್ ಕೋಯಲ್ (ದೇವಾಲಯ)ವಿದೆ. ಇದು ಶುಕ್ರಗ್ರಹಕ್ಕೆ ಸಂಬಂಧಿಸಿದ ದೇವಾಲಯವಾಗಿದೆ. ಶುಕ್ರನನ್ನು ಪೂಜಿಸಿದರೆ ಸಿರಿಸಂಪತ್ತುಗಳನ್ನು ನೀಡುತ್ತಾನೆ ಎಂಬುದು ಭಕ್ತರ ನಂಬಿಕೆಯಾಗಿದೆ.

7.ತಿರುನಲ್ಲಾರ್

7.ತಿರುನಲ್ಲಾರ್

PC: VasuVR

ಮೈಲಾಡುತುರೈಗೆ ಸುಮಾರು 40 ಕಿ.ಮೀ ದೂರದಲ್ಲಿ ತಿರುನಲ್ಲಾರ್ ಇದೆ. ಇದು ಶನಿಗ್ರಹಕ್ಕೆ ಸಂಬಂಧಿಸಿದ ಗ್ರಾಮವಾಗಿದೆ. ಇಲ್ಲಿನ ಪವಿತ್ರವಾದ ತೀರ್ಥವಾದ ನಳ ತೀರ್ಥದಲ್ಲಿ ಸ್ನಾನವನ್ನು ಮಾಡಿದರೆ ಸಕಲ ಪಾಪಗಳಿಂದ ವಿಮುಕ್ತಿ ಹೊಂದುತ್ತಾರಂತೆ. ಇಷ್ಟೇ ಅಲ್ಲದೇ ಶನಿ ಪ್ರಭಾವದಿಂದ ಆಗುವ ಕಷ್ಟಗಳು ದೂರವಾಗುತ್ತದೆ ಎಂದು ಭಕ್ತರು ನಂಬುತ್ತಾರೆ.

8.ತಿರುನಾಗೇಶ್ವರ ದೇವಾಲಯ

8.ತಿರುನಾಗೇಶ್ವರ ದೇವಾಲಯ

PC: Rsmn

ಮೈಲಾಡುತುರೈಗೆ ಸುಮಾರು 30 ಕಿ.ಮೀ ದೂರದಲ್ಲಿ ತಿರುನಾಗೇಶ್ವರ (ಕುಂಭಕೋಣ ಸಮೀಪದಲ್ಲಿ)ದೆ. ಇಲ್ಲಿ ಶಿವನಿಗೆ ಸಂಬಂಧಿಸಿದ ಒಂದು ದೇವಾಲಯವಿದೆ. ಅಲ್ಲಿ ಪ್ರತಿದಿನ ರಾಹುಕಾಲದ ಸಮಯದಲ್ಲಿ ರಾಹುದೇವನಿಗೆ ನಡೆಯುವ ಕ್ಷೀರಾಭಿಷೇಕವನ್ನು ನೋಡಿದರೆ ಅತ್ಯಂತ ಪೂಣ್ಯ ಲಭಿಸುತ್ತದೆ ಎಂದು ನಂಬಲಾಗಿದೆ. ರಾಹುವು ತನ್ನ ಪತ್ನಿಯ ಜೊತೆ ಕಾಣಿಸುವ ದೇವಾಲಯಗಳಲ್ಲಿ ಇದು ಕೂಡ ಒಂದು.

9.ಕಿಳ್ ಪೆರುಮ್ಪಳ್ಳಂ

9.ಕಿಳ್ ಪೆರುಮ್ಪಳ್ಳಂ

PC: Prasannavathani.D

ಇದು ತಿರುವೆಂಕಾಡಿಗೆ ಸಮೀಪದಲ್ಲಿದೆ. ಇಲ್ಲಿ ಕೇತುದೇವನ ದೇವಾಲಯವಿದೆ. ವನಗಿರಿ ಎಂದೂ ಕೂಡ ಕರೆಯುವ ಈ ದೇವಾಲಯದಲ್ಲಿ ಕೇತುವು ತನ್ನ ಪಾಪಕ್ಕೆ ಪ್ರಾಯಶ್ಚಿತ್ತವಾಗಿ ಶಿವನಿಗೆ ಪೂಜೆ ಮಾಡಿದ ಸ್ಥಳ ಎಂದು ಭಕ್ತರ ನಂಬಿಕೆಯಾಗಿದೆ.

10.ಗಂಗೈಕೊಂಡ ಚೋಳಪುರಂ

10.ಗಂಗೈಕೊಂಡ ಚೋಳಪುರಂ

PC: KARTY JazZ

ಮೈಲಾಡುತುರೈನಲ್ಲಿ ಇವೆ ಅಲ್ಲದೇ ಇನ್ನು ಹಲವಾರು ದೇವಾಲಯಗಳು ಕೂಡ ಇವೆ. ಅವುಗಳಲ್ಲಿ ಗಂಗೈಕೊಂಡ ಚೋಳಪುರಂ. ಇದು ಮೈಲಾಡುತುರೈ ನಗರದಿಂದ ಸುಮಾರು 40 ಕಿ.ಮೀ ದೂರದಲ್ಲಿದೆ. ಇದು 250 ವರ್ಷಗಳ ಕಾಲ ಚೋಳರ ಪ್ರಮುಖ ರಾಜಧಾನಿಯಾಗಿತ್ತು. ರಾಜೇಂದ್ರಚೋಳನು ನಿರ್ಮಾಣ ಮಾಡಿದ ಅತ್ಯದ್ಭುತವಾದ ಶಿವಾಲಯವೆಂದರೆ ಅದು ಅಜರಾಮರಂ. ಗಂಗೈಕೊಂಡ ಚೋಳಪುರಂನ ಮತ್ತಷ್ಟು ವಿಶೇಷಗಳು....

11.ಮಯೂರನಾಥರ್ ಸ್ವಾಮಿ ದೇವಾಲಯ

11.ಮಯೂರನಾಥರ್ ಸ್ವಾಮಿ ದೇವಾಲಯ

PC: Ssriram mt

ಈ ದೇವಾಲಯವು ಮೈಲಾಡುತುರೈನಲ್ಲಿ ಪ್ರಧಾನವಾದುದು. ಶಾಪದ ಕಾರಣವಾಗಿ ಹೆಣ್ಣು ನವಿಲು ಅವತಾರವನ್ನು ಎತ್ತಿದ ಪಾರ್ವತಿ ದೇವಿ, ನಿತ್ಯವು ಈ ಪ್ರಾಂಗಣದಲ್ಲಿ ಶಿವನಿಗೆ ಪೂಜೆಯನ್ನು ಮಾಡುತ್ತಿದ್ದಳು ಎಂದು ಪುರಾಣಕಥೆ ಇದೆ. ಚೋಳರ ಕಾಲದಲ್ಲಿ ನಿರ್ಮಾಣ ಮಾಡಿದ ಈ ದೇವಾಲಯದಲ್ಲಿ ಪ್ರತಿ ವರ್ಷ ಮಯೂರ ನೃತ್ಯವನ್ನು ಏರ್ಪಾಟು ಮಾಡುತ್ತಾರೆ.

12.ದಕ್ಷಿಣಮೂರ್ತಿ ದೇವಾಲಯ

12.ದಕ್ಷಿಣಮೂರ್ತಿ ದೇವಾಲಯ

PC: Ravichandar84

ಈ ದೇವಾಲಯದಲ್ಲಿ ಪ್ರಧಾನವಾದ ದೈವ ಶಿವ. ಪ್ರತಿ ದಕ್ಷಿಣಮೂರ್ತಿ ದೇವಾಲಯದಲ್ಲಿ ಸಾಧಾರಣವಾಗಿ ಶಿವನ ವಿಗ್ರಹವು ಪೂರ್ವ ದಿಕ್ಕಿಗೆ ಮುಖ ಮಾಡಿರುತ್ತದೆ. ಆದರೆ ಇಲ್ಲಿ ಶಿವನ ವಿಗ್ರಹ ಮಾತ್ರ ದಕ್ಷಿಣ ದಿಕ್ಕಿಗೆ ಮುಖ ಮಾಡಿದೆ. ಈ ದೇವಾಲಯವು ದಕ್ಷಿಣ ಭಾರತ ದೇಶದಲ್ಲಿಯೇ ಪ್ರಸಿದ್ಧಿ ಹೊಂದಿದೆ.

13.ಪುನುಗಿಶ್ವರಾರ್ ದೇವಾಲಯ

13.ಪುನುಗಿಶ್ವರಾರ್ ದೇವಾಲಯ

PC: Ssriram mt

ಮೈಲಾಡುತುರೈಗೆ ಅತ್ಯಂತ ಸಮೀಪದಲ್ಲಿರುವ ಕೂರೈನಾಡಿನಲ್ಲಿ ಪುನುಗೀಶ್ವರಾರ್ ದೇವಾಲಯವಿದೆ. ಇದರಲ್ಲಿ ಶಿವ, ಆತನ ಪತ್ನಿ ಶಾಂತ ನಾಯಕಿಯರು ಇದ್ದಾರೆ. ಇಲ್ಲಿ ಮೋಕ್ಷವನ್ನು ಗಳಿಸಿದ ಹಲವಾರು ಯೋಗಿಗಳಿಗೆ, ಸಿದ್ಧರಿಗೆ ಹೆಸರುವಾಸಿಯಾಗಿದೆ ಈ ದೇವಾಲಯ. ಕಾಂಚಿಪುರಕ್ಕೆ ಈ ದೇವಾಲಯವು ಸಮೀಪದಲ್ಲಿದೆ.

14.ಶ್ರೀ ಅಯ್ಯರಪ್ಪಾನ್ ದೇವಾಲಯ

14.ಶ್ರೀ ಅಯ್ಯರಪ್ಪಾನ್ ದೇವಾಲಯ

PC: Ssriram mt

ಗಂಗೈಕೊಂಡನಂತಯೇ ಇದು ಕೂಡ ಪುರಾವಸ್ತು ಪ್ರಾಧಾನ್ಯತೆಯನ್ನು ಪಡೆದುಕೊಂಡಿದೆ. ದೇವಾಲಯದಲ್ಲಿ ಪ್ರಧಾನವಾದ ದೈವವಾದ ಧರ್ಮ ಸಮವರ್ತಿ. ಧರ್ಮವನ್ನು ರಕ್ಷಿಸುವದು ಎಂಬ ಅರ್ಥ. ಈ ದೇವಾಲಯದಲ್ಲಿ ಕುಲೋತ್ತಂಗ ಚೋಳ ರಾಜನ ಶಿಲಾಶಾಸನಗಳು, ಚಿತ್ರಗಳನ್ನು ಕಾಣಬಹುದು.

15.ಕುರುಕೈಶಿವನ್

15.ಕುರುಕೈಶಿವನ್

PC: Amol.Gaitonde

ಮೈಲಾಡುತುರೈನಲ್ಲಿ ಮತ್ತೊಂದು ದೇವಾಲಯವೆಂದರೆ ಅದು ಕುರುಕೈ ಶಿವನ್. ಇಲ್ಲಿ ಶಿವನು ತನ್ನ ಮೂರನೇ ಕಣ್ಣನ್ನು ತೆರೆದ ಭಂಗಿಯಲ್ಲಿ ದರ್ಶನವನ್ನು ನೀಡುತ್ತಾನೆ. ಮನ್ಮಥನನ್ನು ಶಿವನು ತನ್ನ ಮೂರನೇ ಕಣ್ಣು ತೆರೆದು ಭಸ್ಮ ಮಾಡಿದ ಸನ್ನಿವೇಶ ಇಲ್ಲಿಯೇ ನಡೆಯಿತು ಎಂದು ಭಕ್ತರು ಧೃಡವಾಗಿ ನಂಬುತ್ತಾರೆ.

16.ಶ್ರೀ ಪರಿಮಳ ರಂಗನಾಥಸ್ವಾಮಿ ದೇವಾಲಯ

16.ಶ್ರೀ ಪರಿಮಳ ರಂಗನಾಥಸ್ವಾಮಿ ದೇವಾಲಯ

PC: Krishna Kumar Subramanian

ಈ ದೇವಾಲಯವು ಕಾವೇರಿ ನದಿ ತೀರದಲ್ಲಿದೆ. ಈ ಕ್ಷೇತ್ರವನ್ನು ಅಳ್ವಾರ್ ಅಥವಾ ವಿಷ್ಣು ಭಕ್ತ ದರ್ಶನವನ್ನು ನೀಡುತ್ತಾರೆ. ದೇವಾಲಯದಲ್ಲಿ 12 ಅಡಿ ಎತ್ತರದ ವಿಷ್ಣು ವಿಗ್ರಹ ಮತ್ತು ದೇವಿಯ ವಿಗ್ರಹ (ಪರಿಮಳ ರಂಗನಾಯಕಿ) ಪ್ರತಿಷ್ಟಾಪಿಸಿದ್ದಾರೆ.

17ಹೇಗೆ ತಲುಪಬೇಕು?

17ಹೇಗೆ ತಲುಪಬೇಕು?

PC: Arian Zwegers

ವಿಮಾನ ಮಾರ್ಗದ ಮೂಲಕ: 271 ಕಿ.ಮೀ ದೂರದಲ್ಲಿರುವ ಚೆನ್ನೈ ಸಮೀಪದ ವಿಮಾನ ನಿಲ್ದಾಣ. ಇಲ್ಲಿಂದ ಕ್ಯಾಬ್ ಅಥವಾ ಟ್ಯಾಕ್ಸಿಯ ಮೂಲಕ ಮೈಲಾದುತ್ತುರೈ ತಲುಪಬಹುದು.

ರೈಲು ಮಾರ್ಗದ ಮೂಲಕ: ಮೈಲಾದುತ್ತುರೈಗೆ ನೇರವಾದ ರೈಲ್ವೆ ನಿಲ್ದಾಣವಿದೆ. ಇಲ್ಲಿಗೆ ಭುವನೇಶ್ವರ, ಮೈಸೂರು, ತಿರುಪತಿ, ಚೆನ್ನೈ, ತಿರುವನಂತಪುರ ಇನ್ನು ಹಲವಾರು ಪ್ರದೇಶಗಳಿಂದ ರೈಲುಗಳು ಸಂಪರ್ಕವನ್ನು ಸಾಧಿಸುತ್ತದೆ.

ರಸ್ತೆ ಮಾರ್ಗದ ಮೂಲಕ: ಚೆನ್ನೈ, ಚಿದಂಬರಂ, ತಂಜಾವೂರು, ಕುಂಭಕೋಣಂ, ತಿರುಚುನಾಪಲ್ಲಿಯಿಂದ ಪ್ರತಿದಿನ ಬೆಂಗಳೂರು, ತಿರುವನಂತಪುರ, ಮೈಸೂರಿನಿಂದ ಕೂಡ ಹಲವಾರು ಖಾಸಗಿ ಹಾಗು ಸರ್ಕಾರಿ ಬಸ್ಸುಗಳ ಸಾರಿಗೆ ವ್ಯವಸ್ಥೆ ಇದೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ