Search
  • Follow NativePlanet
Share
» »ಮನೋಹರ್ ಪರಿಕ್ಕರ್ ಜನ್ಮಸ್ಥಳ ಗೋವಾದ ಮಾಪುಸಾದ ಬಗ್ಗೆ ತಿಳಿಯಿರಿ

ಮನೋಹರ್ ಪರಿಕ್ಕರ್ ಜನ್ಮಸ್ಥಳ ಗೋವಾದ ಮಾಪುಸಾದ ಬಗ್ಗೆ ತಿಳಿಯಿರಿ

ಗೋವಾ ಸುತ್ತಾಡಿರುವವರು ಬರೀ ಬೀಚ್‌, ಪಬ್‌, ಗೋವಾ ಕೋಟೆ ಅಷ್ಟೇ ನೋಡಿರುವಿರಿ. ಆದರೆ ಗೋವಾದಲ್ಲಿನ ಮಾಪುಸಾಕ್ಕೆ ಹೋಗಿದ್ದೀರಾ? ಮಾಪುಸಾವು ಗೋವಾದ ಒಂದು ಪುಟ್ಟ ನಗರವಾಗಿದ್ದು, ಗೋವಾದ ಮುಖ್ಯಮಂತ್ರಿಯಾಗಿದ್ದ ದಿ.ಮನೋಹರ್ ಪರಿಕ್ಕರ್ ಅವರ ಜನ್ಮಸ್ಥಳವಾಗಿದೆ. ಇಂದು ನಾವು ಮಾಪುಸಾದಲ್ಲಿನ ಆಕರ್ಷಣೀಯ ತಾಣಗಳ ಬಗ್ಗೆ ತಿಳಿಸಿಕೊಡಲಿದ್ದೇವೆ.

ಮಾಪುಸಾ ಮಾರುಕಟ್ಟೆ

ಮಾಪುಸಾ ಮಾರುಕಟ್ಟೆ

PC:Aaron C

ಪ್ರತೀ ಶುಕ್ರವಾರ ಮಾಪುಸಾಕ್ಕೆ ಸಾಂಪ್ರದಾಯಿಕ ಮಾರುಕಟ್ಟೆ ದಿನವಾಗಿದೆ. ಆದ್ದರಿಂದ ಇದನ್ನು ಮಾಪುಸಾ ಶುಕ್ರವಾರ ಮಾರುಕಟ್ಟೆ ಎಂದೂ ಕರೆಯಲಾಗುತ್ತದೆ. ಸುತ್ತಮುತ್ತಲಿನ ಗ್ರಾಮಗಳು ಮತ್ತು ಪಟ್ಟಣಗಳ ಜನರು ಮಾಪುಸಾಕ್ಕೆ ತಮ್ಮ ಸರಕನ್ನು ಕೃಷಿ ಉತ್ಪನ್ನಗಳು, ತರಕಾರಿಗಳು, ಸ್ಥಳೀಯವಾಗಿ ಬೆಳೆದ ಹಣ್ಣುಗಳು, ಮಸಾಲೆಗಳು, ಬಟ್ಟೆ ಬರೆಗಳನ್ನು ಮಾರಾಟ ಮಾಡಲು ಬರುತ್ತಾರೆ.

ಮಾರುತಿ ದೇವಸ್ಥಾನ

ಮಾರುತಿ ದೇವಸ್ಥಾನ

PC:Ssr

ನಗರದ ಮಧ್ಯಭಾಗದಲ್ಲಿರುವ ಮಾರುತಿ ದೇವಸ್ಥಾನವು ತಿಳಿ ಗುಲಾಬಿ ಬಣ್ಣದ್ದಾಗಿದ್ದು, ಈ ಮಾರುತಿ ದೇವಸ್ಥಾನವನ್ನು 1840 ರ ದಶಕದಲ್ಲಿ ಪೋರ್ಚುಗೀಸರ ಆಡಳಿತದ ದಬ್ಬಾಳಿಕೆಯ ಅವಧಿಯಲ್ಲಿ ಹನುಮಾನ್ ಅನ್ನು ರಹಸ್ಯವಾಗಿ ಪೂಜಿಸಿದ ಸ್ಥಳದಲ್ಲಿ ನಿರ್ಮಿಸಲಾಯಿತು. ಪೋರ್ಚುಗೀಸರು ದೇವಸ್ಥಾನಗಳನ್ನು ನಾಶಗೊಳಿಸಿದ ನಂತರ, ಭಕ್ತರು ಹನುಮಾನ್ ಚಿತ್ರವನ್ನು ಅಲ್ಲೇ ಇದ್ದ ಪಟಾಕಿ ಅಂಗಡಿಯಲ್ಲಿ ಇರಿಸಿದರು ಮತ್ತು ಗೌಪ್ಯವಾಗಿ ಪೂಜೆಗಳನ್ನು ಮಾಡಲು ಆರಂಭಿಸಿದರು. ಏಪ್ರಿಲ್ 1843 ರಲ್ಲಿ ಚಿತ್ರವನ್ನು ಬೆಳ್ಳಿಯ ವಿಗ್ರಹದಿಂದ ಬದಲಾಯಿಸಲಾಯಿತು. ನಂತರ ಹೆಚ್ಚಿನ ಸಂಖ್ಯೆಯ ಆರಾಧಕರು ಈ ದೇವಸ್ಥಾನಕ್ಕೆ ಬರಲು ಪ್ರಾರಂಭಿಸಿದರು.

ಚರ್ಚ್ ಆಫ್ ಅವರ್ ಲೇಡಿ ಆಫ್ ಮಿರಾಕಲ್

ಚರ್ಚ್ ಆಫ್ ಅವರ್ ಲೇಡಿ ಆಫ್ ಮಿರಾಕಲ್

PC: Shanky

ಚರ್ಚ್ ಆಫ್ ಅವರ್ ಲೇಡಿ ಆಫ್ ಮಿರಾಕಲ್ 1594 ರಲ್ಲಿ ಸ್ಥಾಪನೆಯಾದವು ಮತ್ತು ಹಲವಾರು ಬಾರಿ ಪುನರ್ನಿರ್ಮಾಣಗೊಂಡವು, ಮುನ್ಸಿಪಲ್ ಗಾರ್ಡನ್‌ನ 600 ಮೀಟರ್ ಪೂರ್ವಕ್ಕೆ ಇರುವ ಈ ಚರ್ಚ್ ಅನ್ನು ಸೇಂಟ್ ಜೆರೋಮ್ಸ್ ಎಂದೂ ಕರೆಯಲ್ಪಡುತ್ತದೆ. ಹಳೆಯ ಹಿಂದೂ ದೇವಸ್ಥಾನದ ಮೇಲೆ ಪೋರ್ಚುಗೀಸರು ಇದನ್ನು ನಿರ್ಮಿಸಿದರು. ಮತ್ತು ಹೀಗಾಗಿ ಹಿಂದೂ ಸಮುದಾಯವು ಈ ಸ್ಥಳವನ್ನು ಇನ್ನೂ ಪವಿತ್ರವೆಂದು ನಂಬಿದೆ. ಈಸ್ಟರ್ ನಂತರ ಹದಿನಾರನೆಯ ದಿನ, ಚರ್ಚ್ ನ ವಾರ್ಷಿಕ ಹಬ್ಬವನ್ನು ಇಲ್ಲಿ ಹಿಂದೂಗಳು ಮತ್ತು ಕ್ರಿಶ್ಚಿಯನ್ನರಿಂದ ಆಚರಿಸಲಾಗುತ್ತದೆ. ಹಿಂದೂ ಧರ್ಮ ಮತ್ತು ಕ್ರಿಶ್ಚಿಯನ್ ಧರ್ಮಗಳು ಸಾಮಾನ್ಯವಾಗಿ ಗೋವಾದಲ್ಲಿ ಮನಃಪೂರ್ವಕವಾಗಿ ಜೊತೆಯಲ್ಲಿರುವ ಅತ್ಯುತ್ತಮ ಉದಾಹರಣೆಗಳಲ್ಲಿ ಒಂದಾಗಿದೆ.

ಶ್ರೀ ದೇವ್ ಬೋಡ್ಗೇಶ್ವರ್

ಶ್ರೀ ದೇವ್ ಬೋಡ್ಗೇಶ್ವರ್

PC: Shanky

ಬಡ್ಗೇಶ್ವರ ದೇವರಿಗೆ ಸಮರ್ಪಿತವಾದ ಶ್ರೀ ದೇವ್ ಬೋಡ್ಗೇಶ್ವರ್ ದೇವಸ್ಥಾನವು ನಗರದ ಹೊರವಲಯದಲ್ಲಿ ಭತ್ತದ ಗದ್ದೆಯ ಮಧ್ಯದಲ್ಲಿ ನೆಲೆಗೊಂಡಿದೆ. ಇದು ರಾತ್ರಿಯಲ್ಲಿ ಸುಂದರವಾದ ಬೆಳಕಿನಿಂದ ಕೂಡಿರುತ್ತದೆ. ವಾರ್ಷಿಕ ಜಾತ್ರೆಯ ಸಂದರ್ಭದಲ್ಲಿ ಸಾವಿರಾರು ಭಕ್ತರನ್ನು ಈ ದೇವಸ್ಥಾನವು ಸೆಳೆಯುತ್ತದೆ.

ಯಾವಾಗ ಭೇಟಿ ನೀಡುವುದು ಸೂಕ್ತ

ಯಾವಾಗ ಭೇಟಿ ನೀಡುವುದು ಸೂಕ್ತ

PC:Sankalpkanyalkar

ಗೋವಾ ಪ್ರವಾಸೋದ್ಯಮದ ಪ್ರಮುಖ ಕೇಂದ್ರಗಳಲ್ಲಿ ಮಾಪುಸಾ ಕೂಡಾ ಒಂದಾಗಿದೆ. ಉತ್ತರ ಗೋವಾದ ಅನೇಕ ಕಡಲತೀರಗಳಿಗೆ ಮಾಪುಸಾವು ಹತ್ತಿರವಾಗಿದ್ದು, ಪ್ರವಾಸಿ ಋತುವಿನಲ್ಲಿ ಅಂದರೆ ನವೆಂಬರ್ ನಿಂದ ಏಪ್ರಿಲ್ ತಿಂಗಳು ಸೂಕ್ತವಾದ ಸಮಯವಾಗಿದೆ. ಇದು ಮುಖ್ಯವಾಗಿ ವಾಣಿಜ್ಯ ಪಟ್ಟಣವಾಗಿದ್ದು ಹೆಚ್ಚು ಜನಸಂಖ್ಯೆ ಹೊಂದಿದ್ದು, ಮಾಪುಸಾದಲ್ಲಿ ಸೀಮಿತ ಸಂಖ್ಯೆಯ ಹೋಟೆಲ್‌ಗಳು ಮತ್ತು ಸೌಕರ್ಯಗಳನ್ನು ಹೊಂದಿದೆ.

ತಲುಪುವುದು ಹೇಗೆ?

ತಲುಪುವುದು ಹೇಗೆ?

PC:Shanky

ಗೋವಾ ಮತ್ತು ಮಹಾರಾಷ್ಟ್ರ ನಡುವಿನ ಅಂತರರಾಜ್ಯ ಬಸ್ ಸೇವೆಗಳು ಮಾಪುಸಾ ಪಟ್ಟಣದ ಮೂಲಕ ಹಾದು ಹೋಗುತ್ತವೆ. ಕದಾಂಬು, ಅಂಜುನಾ, ವ್ಯಾಗಟರ್, ಮತ್ತು ಅರಾಂಬೋಲ್‌ಗಳಂತಹ ಹತ್ತಿರದ ಕಡಲ ತೀರಗಳಿಗೆ ಕದಂಬಾ ಬಸ್ ಟರ್ಮಿನಲ್ ದೂರದ ರಾಜ್ಯ ಬಸ್ಸುಗಳು ಮತ್ತು ಸ್ಥಳೀಯ ಸೇವೆಗಳಿಗೆ ಮುಖ್ಯ ಕೇಂದ್ರವಾಗಿದೆ. ಪಟ್ಟಣದ ನೈರುತ್ಯ ತುದಿಯಲ್ಲಿರುವ ಬಸ್ ನಿಲ್ದಾಣವು ಮುಖ್ಯ ರಸ್ತೆಯ ಐದು ನಿಮಿಷಗಳ ನಡಿಗೆಯಾಗಿದೆ.

ಮಾಪುಸಾದಿಂದ 12 ಕಿ.ಮೀ ದೂರದಲ್ಲಿ ತಿವಿಮ್ ರೈಲು ನಿಲ್ದಾಣವಿದೆ. ಹತ್ತಿರದ ಬೀಚ್ ಅಥವಾ ರೆಸಾರ್ಟ್‌ಗೆ ಪ್ರಯಾಣಿಸಲು ರೈಲು ನಿಲ್ದಾಣದಿಂದ ನೀವು ರಿಕ್ಷಾಗಳನ್ನು ಅಥವಾ ಪ್ರವಾಸಿ ಟ್ಯಾಕ್ಸಿಗಳನ್ನು ಬಾಡಿಗೆಗೆ ಪಡೆದುಕೊಳ್ಳಬಹುದು. ಮಾಪುಸಾದಿಂದ ಡಬಾಲಿಮ್ ವಿಮಾನ ನಿಲ್ದಾಣವು ಹತ್ತಿರದ ವಿಮಾನ ನಿಲ್ದಾಣವಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more