Search
  • Follow NativePlanet
Share
» »ಮಣಿಕ ಪ್ರಭುಗಳ ಸಂಜೀವಿನಿ ಸಮಾಧಿ ಸ್ಥಳ!

ಮಣಿಕ ಪ್ರಭುಗಳ ಸಂಜೀವಿನಿ ಸಮಾಧಿ ಸ್ಥಳ!

ಮಣಿಕ ನಗರ ಕರ್ನಾಟಕದ ಬೀದರ್ ಜಿಲ್ಲೆಯ ಹುಮನಾಬಾದ್ ತಾಲೂಕಿನಿಂದ ಒಂದು ಕಿ.ಮೀ ದೂರದಲ್ಲಿರುವ ಹಳ್ಳಿಯಾಗಿದ್ದು ಮಣಿಕ ಪ್ರಭುಗಳ ಸಮಾಧಿ ಹಾಗೂ ದತ್ತಪೀಠವಾಗಿ ಹೆಸರುವಾಸಿಯಾಗಿದೆ

By Vijay

ಹತ್ತೊಂಬತ್ತನೇಯ ಶತಾಮನದ ಪ್ರಾರಂಭದಲ್ಲಿ ಆಗಿ ಹೋದ ಒಬ್ಬ ಜನಪ್ರೀಯ ಹಿಂದು ಸಂತರುಗಳಲ್ಲಿ ಮಣಿಕ ಪ್ರಭುಗಳು ಒಬ್ಬರು. ಇವರು ಅನುಸರಿಸುತ್ತಿದ್ದ ಸಕಲಮತ ಸಿದ್ಧಾಂತವು ಆದಿ ಶಂಕರರು ಪ್ರತಿಪಾದಿಸಿದ ಅದ್ವೈತ ಸಿದ್ಧಾಂತದಿಂದ ಸಾಕಷ್ಟು ಪ್ರೇರಣೆ ಪಡೆದಿತ್ತು. ಇವರ ಅನುಯಾಯಿಗಳು ಇವರನ್ನು ದತ್ತಾತ್ರೇಯನ ಮರು ಅವತಾರವೆಂದೆ ನಂಬುತ್ತಾರೆ.

ಮನೋಹರ ನಾಯಕ್ ಹಾಗೂ ಬಾಯಾ ದೇವಿ ಎಂಬ ದಂಪತಿಗಳಿಗೆ ದತ್ತ ಜಯಂತಿಯಂದು (22 ಡಿಸೆಂಬರ್, 1817 ರಂದು) ಜನಿಸಿದ ಪುತ್ರರತ್ನನೆ ಮಣಿ ಪ್ರಭುಗಳು. ಇವರು ಬಾಲ್ಯದಲ್ಲಿಯೆ ತಮ್ಮ ತಂದೆಯನ್ನು ಕಳೆದುಕೊಂಡರು. ತದನಂತರ ಇವರು ತಮ್ಮ ಸೋದರ ಮಾವನ ಮನೆಯಲ್ಲಿ ಬೆಳೆಯತೊಡಗಿದರು.

ಮಣಿಕ ಪ್ರಭುಗಳ ಸಂಜೀವಿನಿ ಸಮಾಧಿ ಸ್ಥಳ!

ಚಿತ್ರಕೃಪೆ: Ladansha

ಇವರ ಸೋದರ ಮಾವನು ಅಂದಿನ ಬಸವಕಲ್ಯಾಣದ ನವಾಬನ ಅಸ್ಥಾನದಲ್ಲಿ ಕೆಲಸದಲ್ಲಿದ್ದರು. ಮಣಿಕ ಪ್ರಭುವಿಗೆ ಒಳ್ಳೆಯ ವಿದ್ಯೆ ಕೊಡಿಸಿ ಮುಂದೆ ತಮ್ಮ ಕುಟುಂಬದ ಜವಾಬ್ದಾರಿಯನ್ನು ಹೊರಬೇಕೆಂದು ಬಯಸಿದ್ದರು. ಆದರೆ ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಮಣಿಕ ಪ್ರಭುಳಿಗೆ ಯಾವುದರಲ್ಲಿಯೂ ಆಸಕ್ತಿ ಇರಲಿಲ್ಲ. ಸದಾ ತಮ್ಮದೆ ಧ್ಯಾನದಲ್ಲಿ ಮುಳುಗಿರುತ್ತಿದ್ದರು.

ಇದರಿಂದ ಬೇಸತ್ತ ಸೋದರ ಮಾವ ಒಂದು ದಿನ ಮಣಿಕನಿಗೆ ಅತ್ಯಂತ ಕೋಪದಿಂದ ನಿಷ್ಠುರವಾಗಿ ಬೈಯ್ದುಬಿಟ್ಟರು. ಇದರಿಂದ ಲೌಕಿಕ ಚಟುವಟಿಕೆಗಳಲ್ಲಿ ಸಂಪೂರ್ಣ ಆಸಕ್ತಿ ಕಳೆದುಕೊಂಡ ಮಣಿಕ ಪ್ರಭುಗಳು ಮರು ಮಾತನಾಡದೆ ಆ ಮನೆಯನ್ನು ಬಿಟ್ಟು ದೇಶಾಂತರ ಹೊರಟರು.

ಮಣಿಕ ಪ್ರಭುಗಳ ಸಂಜೀವಿನಿ ಸಮಾಧಿ ಸ್ಥಳ!

ಮಣಿಕ ಪ್ರಭುಅಗಳ ಮಹಾ ಸಮಾಧಿ, ಚಿತ್ರಕೃಪೆ: Manikprabhusamsthan

ತದನಂತರ ಅವರು ಅಲ್ಲಿ ಇಲ್ಲಿ ಅಲೆಮಾರಿಯಾಗಿ, ಧಾರ್ಮಿಕತೆಯಲ್ಲಿ ಆಸಕ್ತಿಯನ್ನು ಬೆಳೆಸಿಕೊಳ್ಳುತ್ತ ಸನ್ಯಾಸಿ ಜೀವನ ನಡೆಸುತ್ತ, ಕಾಶಿ, ಹರಿದ್ವಾರ, ಬದರಿ, ಪುರಿ, ದ್ವಾರಕಾಗಳಂತಹ ತೀರ್ಥ ಕ್ಷೇತ್ರಗಳಿಗೆಲ್ಲ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಅವರು ಹಲವಾರು ಭಜನೆಗಳನ್ನು ಕನ್ನಡ, ಮರಾಠಿ, ಹಿಂದಿ ಹಾಗೂ ಸಂಸ್ಕೃತದಲ್ಲಿ ಬರೆದು ಸಂಯೋಜಿಸಿದರು. ಇಂದಿಗೂ ಪದ್ಯಮಾಲಾದಲ್ಲಿ ಅವರ ಭಜನೆಗಳನ್ನು ಓದಬಹುದಾಗಿದೆ.

ಹೀಗೆ ಎಲ್ಲೆಡೆ ಧಾರ್ಮಿಕ ತಾಣಗಳಿಗೆ ಭೇಟಿ ನೀಡಿದ ಪ್ರಭುಗಳು ತಮ್ಮದೆ ಆದ ವಿಶಿಷ್ಟ ಪ್ರಭಾವವನ್ನು ಹೊಂದಿದರು. ಕೊನೆಗೆ ತಾವು ಇನ್ನೂ ನೆಲೆಸಬೇಕೆಂದು ಒಂದು ಸ್ಥಳಕ್ಕೆ ಬಂದು ಅಲ್ಲಿ ನೆಲೆಸಿಯೆ ಬಿಟ್ಟರು. ಆ ಸ್ಥಳವು ಎರಡು ನದಿಗಳಾದ ವಿರಾಜ ಹಾಗೂ ಗುರುಗಂಗಾ ಸಂಗಮ ಹೊಂದುವಲ್ಲಿದೆ.

ಮಣಿಕ ಪ್ರಭುಗಳ ಸಂಜೀವಿನಿ ಸಮಾಧಿ ಸ್ಥಳ!

ಚಿತ್ರಕೃಪೆ: Manikprabhusamsthan

ಆ ಪುಟ್ಟ ಪ್ರದೇಶವೆ ಇಂದು ಮಣಿಕ ನಗರವಾಗಿದೆ. ಮಣಿಕ ನಗರ ಒಂದು ಗ್ರಾಮವಾಗಿದ್ದು ಬಲು ಮುಖ್ಯವಾಗಿ ಮಣಿಕ ಪ್ರಭುಗಳ ಸಮಾಧಿ ಸ್ಮಾರಕದಿಂದಾಗಿ ಹೆಸರುವಾಸಿಯಾಗಿದೆ. ಮಣಿಕ ನಗರವು ಕರ್ನಾಟಕದ ಬೀದರ್ ಜಿಲ್ಲೆಯ ಹುಮನಾಬಾದ್ ಪಟ್ಟಣದ ಬಳಿಯಿದೆ. ಹುಮನಾಬಾದ್ ತಾಲೂಕು ಕೇಂದ್ರದಿಂದ ಕೇವಲ ಒಂದುವರೆ ಕಿ.ಮೀ ಗಳಷ್ಟು ದೂರದಲ್ಲಿ ಮಣಿಕ ನಗರವಿದೆ.

ದತ್ತಾತ್ರೇಯ ನೆಲೆಸಿರುವ ಶ್ರೀಕ್ಷೇತ್ರ ಗಾಣಗಾಪುರ

ದತ್ತ ಸಂಪ್ರದಾಯಕ್ಕೆ ಹೆಸರುವಾಸಿಯಾದ ಈ ಕ್ಷೇತ್ರವು ಸಾವಿರಾರು ಸಂಖ್ಯೆಯಲ್ಲಿ ದತ್ತಾತ್ರೇಯ ಭಕ್ತರಿಂದ ಭೇಟಿ ನೀಡಲ್ಪಡುತ್ತದೆ. ದತ್ತ ಸಂಪ್ರದಾಯದಲ್ಲಿ ಮಣಿಕ ಪ್ರಭುಗಳೊಬ್ಬರೆ ದತ್ತ ಜಯಂತಿಯಂದು ಜನ್ಮ ತಳೆದ ಗುರುಗಳಾಗಿದ್ದಾರೆ. ಈ ದತ್ತ ಪೀಠದಲ್ಲಿ ಇಂದಿಗೂ ಗುರು ಪರಂಪರೆಯು ಪ್ರಚಲಿತದಲ್ಲಿರುವುದನ್ನು ಕಾಣಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X