Search
  • Follow NativePlanet
Share
» »ಮಂಗಳಗಿರಿ ಪಾನಕಾಲಸ್ವಾಮಿ ಅಗ್ನಿ ಪರ್ವತದ ರಹಸ್ಯ!

ಮಂಗಳಗಿರಿ ಪಾನಕಾಲಸ್ವಾಮಿ ಅಗ್ನಿ ಪರ್ವತದ ರಹಸ್ಯ!

ಮಂಗಳಗಿರಿ ಲಕ್ಷ್ಮೀನರಸಿಂಹ ಸ್ವಾಮಿ ಎಂದರೆ ನಮ್ಮೆಲ್ಲರಿಗೂ ಎಲ್ಲಿಲ್ಲದ ಭಕ್ತಿ. ಕೋರಿಕೆಗಳನ್ನು ಶೀಘ್ರವಾಗಿ ತೀರಿಸುವ ಈ ಪಾನಕಾಲಸ್ವಾಮಿಯ ಬಗ್ಗೆ ಒಂದು ಮಹಾ ಚರಿತ್ರೆ ಕೂಡ ಇದೆ. ಆತನನ್ನು ಒಮ್ಮೆ ದರ್ಶನ ಮಾಡಿ ಪಾನಕವನ್ನು ಸರ್ಮಿಪಿಸಿದರೆ ಸಾಕು ಪಾಪಗಳೆಲ್ಲವೂ ತೊಲಗಿ ಪುಣ್ಯ ಲಭಿಸುತ್ತದೆ ಎಂದು ಭಕ್ತರ ನಂಬಿಕೆಯಾಗಿದೆ. ಭಕ್ತರ ಕೋರಿಕೆಗಳನ್ನು ಸ್ವಾಮಿಯು ತೀರಿಸುತ್ತಾನೆ ಎಂದು ಪ್ರಸಿದ್ಧಿಯಾಗಿದ್ದಾನೆ. ಆದರೆ ಈ ಮಂಗಳಗಿರಿ ಪಾನಕಾಲಸ್ವಾಮಿಗೆ ಮತ್ತೊಂದು ವಿಶೇಷತೆ ಕೂಡ ಇದೆ, ಅದೆನೆಂದರೆ ಎಷ್ಟೊ ಪಾನಕವನ್ನು ಸುರಿದರು ಅದರಲ್ಲಿ ಅರ್ಧ ತೆಗೆದುಕೊಂಡು ಉಳಿದ ಅರ್ಧವು ಭಕ್ತರಿಗೆ ನೀಡುತ್ತಾರೆ.

ಹಾಗೆ ನೀಡಿದ ಸ್ವಾಮಿಯ ಪ್ರಸಾದವನ್ನು ಸಾಕ್ಷಾತ್ ಆ ಸ್ವಾಮಿಯೇ ನೀಡಿರುವ ಮಹಾ ಪ್ರಸಾದವೆಂದು ತೆಗೆದುಕೊಳ್ಳುತ್ತಾರೆ. ಇನ್ನು ಸ್ವಾಮಿಯ ಪ್ರಸಾದವನ್ನು ತೆಗೆದುಕೊಂಡ ನಂತರ ಭಕ್ತಾಧಿಗಳೆಲ್ಲಾರು ಕುಡಿಯುತ್ತಾರೆ. ಭಕ್ತರು ನೀಡಿದ ಪಾನಕವನ್ನು ಸ್ವಾಮಿಗೆ ನೀಡುತ್ತಾರೆ. ಆದರೆ ಆ ಪಾನಕವು ಎಲ್ಲಿ ಹೋಗುತ್ತದೆ? ಆ ಪಾನಕವು ಸ್ವಾಮಿಯವರು ಕುಡಿಯುತ್ತಿದ್ದಾರೆ ಸರಿ, ಆದರೆ ಆ ಪಾನಕವೆಲ್ಲಾ ಎಲ್ಲಿ ಹೋಗುತ್ತಿದೆ ಎಂಬುದು ಇಂದಿಗೂ ರಹಸ್ಯವಾಗಿಯೇ ಉಳಿದಿದೆ. ಇದೆಲ್ಲಾ ಸ್ವಾಮಿಯ ಮಹಿಮೆ ಎಂಬುದು ಎಲ್ಲರ ನಂಬಿಕೆಯಾಗಿದೆ.

ಮಂಗಳಗಿರಿ ಪಾನಕಾಲಸ್ವಾಮಿ ಅಗ್ನಿ ಪರ್ವತದ ರಹಸ್ಯ!

ಮಂಗಳಗಿರಿ ಪಾನಕಾಲಸ್ವಾಮಿ ಅಗ್ನಿ ಪರ್ವತದ ರಹಸ್ಯ!

ಈ ಮಹಿಮಾನ್ವಿತವಾದ ದೇವಾಲಯವು ಆಂಧ್ರ ಪ್ರದೇಶದಲ್ಲಿರುವ ಗುಂಟೂರು ಜಿಲ್ಲೆಯ ಮಂಗಳಗಿರಿ ಎಂಬ ಒಂದು ಚಿಕ್ಕ ಗ್ರಾಮದಲ್ಲದೆ. ಈ ಗ್ರಾಮವು ಗುಂಟೂರು ನಗರದಿಂದ ಸುಮಾರು 21 ಕಿ.ಮೀ ದೂರದಲ್ಲಿದೆ. ಈ ಪ್ರದೇಶವು ಗುಂಟೂರು ಹಾಗೆಯೇ ವಿಜಯವಾಡ ಪ್ರದೇಶಗಳಿಗೆ ಒಂದು ಪ್ರಧಾನವಾದ ಪ್ರವಾಸಿ ತಾಣ ಮಜಿಲಿ. "ಮಂಗಳ ಗಿರಿ" ಎಂದರೆ ಪವಿತ್ರವಾದ ಒಂದು ಬೆಟ್ಟ. ಇಲ್ಲಿ ಅನೇಕ ಪ್ರಸಿದ್ಧವಾದ ದೇವಾಲಯಗಳಿವೆ.

ಮಂಗಳಗಿರಿ ಪಾನಕಾಲಸ್ವಾಮಿ ಅಗ್ನಿ ಪರ್ವತದ ರಹಸ್ಯ!

ಮಂಗಳಗಿರಿ ಪಾನಕಾಲಸ್ವಾಮಿ ಅಗ್ನಿ ಪರ್ವತದ ರಹಸ್ಯ!

ಪ್ರಖ್ಯಾತವಾದ ಲಕ್ಷ್ಮೀ ನಾರಾಯಣ ಸ್ವಾಮಿ ದೇವಾಲಯವು ಈ ಗ್ರಾಮದಲ್ಲಿಯೇ ನೆಲೆಸಿದ್ದಾನೆ. ಎಷ್ಟೋ ಮಂದಿ ಭಕ್ತರು ಸ್ವಾಮಿಯನ್ನು ದರ್ಶನ ಮಾಡಿಕೊಳ್ಳಲು ಈ ದೇವಾಲಯಕ್ಕೆ ಭೇಟಿ ನೀಡುತ್ತಿರುತ್ತಾರೆ. ಒಂದು ಬೆಟ್ಟದ ಮೇಲೆ ಈ ದೇವಾಲಯವನ್ನು ನಿರ್ಮಾಣ ಮಾಡಿದ್ದಾರೆ. ಕೆಲವು ವರ್ಷಗಳ ಹಿಂದೆ ಈ ಬೆಟ್ಟ ಒಂದು ಅಗ್ನಿ ಪರ್ವತವಾಗಿತ್ತು. ಈ ಮಹಿಮಾನ್ವಿತವಾದ ದೇವಾಲಯವು ಸಮುದ್ರ ಮಟ್ಟದಿಂದ ಸುಮಾರು 30 ಅಡಿ ಎತ್ತರದಲ್ಲಿದೆ, ಸ್ವಾಮಿಗೆ ಪಾನಕವನ್ನು ನೈವೇದ್ಯವಾಗಿ ಸರ್ಮಪಿಸುತ್ತಾರೆ.

ಮಂಗಳಗಿರಿ ಪಾನಕಾಲಸ್ವಾಮಿ ಅಗ್ನಿ ಪರ್ವತದ ರಹಸ್ಯ!

ಮಂಗಳಗಿರಿ ಪಾನಕಾಲಸ್ವಾಮಿ ಅಗ್ನಿ ಪರ್ವತದ ರಹಸ್ಯ!

ಆದರೆ ನೂರಾರೂ ವರ್ಷಗಳಿಂದ ಸ್ವಾಮಿಯು ಇಲ್ಲಿ ನೆಲೆಸಿದ್ದಾರೆ. ಇಷ್ಟು ವರ್ಷಗಳಿಂದ ಸುರಿದ ಪಾನಕವು ಎಲ್ಲಿ ಹೋಗುತ್ತಿದೆ ಎಂಬುದೇ ಒಂದು ಆಶ್ಚರ್ಯಕರವಾದ ವಿಷಯವಾಗಿದೆ. ಇದರಲ್ಲಿ ಸ್ವಾಮಿಯನ್ನೇ ಆಗಲಿ, ಆತನ ಮಹಿಮೆಯನ್ನೇ ಆಗಲಿ ಅನುಮಾನ ಯಾರೂ ಪಡುತ್ತಿಲ್ಲ. ಆದರೆ ಸುರಿದ ಪಾನಕ ಮಾತ್ರ ಎಲ್ಲಿ ಹೋಗುತ್ತದೆ ಎಂಬುದು ಇಂದಿಗೂ ಬಗೆಹರಿಸಲಾಗದ ರಹಸ್ಯವಾಗಿಯೇ ಉಳಿದಿದೆ. ಆತನು ನಮ್ಮೆಲ್ಲರ ಕಷ್ಟಗಳನ್ನು ತೀರಿಸುವ ಶಕ್ತಿವಂತ ದೇವರು.

ಮಂಗಳಗಿರಿ ಪಾನಕಾಲಸ್ವಾಮಿ ಅಗ್ನಿ ಪರ್ವತದ ರಹಸ್ಯ!

ಮಂಗಳಗಿರಿ ಪಾನಕಾಲಸ್ವಾಮಿ ಅಗ್ನಿ ಪರ್ವತದ ರಹಸ್ಯ!

ಆದರೆ ವಿಜ್ಞಾನಿಗಳ ಮುಖಾಂತರ ಯಾವುದಾದರೂ ವಿಶೇಷತೆಗಳು ಇವೆಯೇ ಎಂದು ಕೆಲವು ಮಂದಿ ಪ್ರಶ್ನೆಗಳು ಹಾಕುತ್ತಿದ್ದಾರೆ. ಇನ್ನು ಈ ದೇವಾಲಯದ ಚರಿತ್ರೆಯ ಬಗ್ಗೆ ಎಂದರೆ ಕೆಲವು ಸಾವಿರ ವರ್ಷಗಳ ಹಿಂದೆಯೇ ಪರಿಯಾತ್ರರಾಜನ ಮಗ ಹ್ರಾಸ್ವಶೃಂಗನಿಗೆ ಶರೀರದ ಅಂಗವಿಕಲತೆ ಇರುತ್ತದೆ. ಇದರಿಂದ ಆತನು ತನ್ನ ಮನೋವೇದನೆಯನ್ನು ಹೇಳಿಕೊಳ್ಳಲಾಗದೇ ಹೋಗುತ್ತಾನೆ.

ಮಂಗಳಗಿರಿ ಪಾನಕಾಲಸ್ವಾಮಿ ಅಗ್ನಿ ಪರ್ವತದ ರಹಸ್ಯ!

ಮಂಗಳಗಿರಿ ಪಾನಕಾಲಸ್ವಾಮಿ ಅಗ್ನಿ ಪರ್ವತದ ರಹಸ್ಯ!

ಒಂದು ದಿನ ದೇವರನ್ನು ಪ್ರಾರ್ಥಿಸಿದರೆ ತನ್ನ ಅಂಗವೈಕಲ್ಯ ಮಾಯವಾಗುತ್ತದೆ ಎಂದು ವಿಷ್ಣುಮೂರ್ತಿಗಾಗಿ ಘೋರವಾದ ತಪಸ್ಸು ಮಾಡುತ್ತಾನೆ. ಹಾಗೆ ಕೆಲವು ವರ್ಷ ತಪಸ್ಸು ಮಾಡುತ್ತಾ, ತನ್ನ ವೈಕಲ್ಯದ ಕಾರಣವಾಗಿ ಆನೆಯ ಆಕಾರದಲ್ಲಿ ವಿಷ್ಣುವಿನ ನಾಮಸ್ಮರಣೆ ಮಾಡುತ್ತಾ ತಪ್ಪಸ್ಸು ಮಾಡುತ್ತಾನೆ. ಹಾಗೆ ಮಾಡುತ್ತಾ ಪರ್ವತವಾಗಿ ಮಾರ್ಪಾಟಾಗುತ್ತಾನೆ. ಪರ್ವತವಾಗಿ ಮಾರ್ಪಾಟಾದ ರಾಜನ ಮೇಲೆ ಆ ನರಸಿಂಹಸ್ವಾಮಿಯು ನೆಲೆಸಿದನು ಎಂದು ಪ್ರತೀತಿ ಇದೆ.

ಮಂಗಳಗಿರಿ ಪಾನಕಾಲಸ್ವಾಮಿ ಅಗ್ನಿ ಪರ್ವತದ ರಹಸ್ಯ!

ಮಂಗಳಗಿರಿ ಪಾನಕಾಲಸ್ವಾಮಿ ಅಗ್ನಿ ಪರ್ವತದ ರಹಸ್ಯ!

ಆದರೆ ಆ ಶ್ರೀ ಮಹಾ ವಿಷ್ಣು ಭೇಟಿ ಮಾಡುವ ಸಲುವಾಗಿ ಮಂಗಳಗಿರಿ ಗುಹೆಗೆ ಬಂದು ನೆಲೆಸಿದರು ಎಂಬುದು ಮತ್ತೊಂದು ಕಥನವಾಗಿದೆ. ಕೃತಯುಗದಲ್ಲಿ ನಡೆದ ಕಥೆಯ ಪ್ರಕಾರ ನಮೂಚಿ ಎಂಬ ರಾಕ್ಷಸನು ದೇವದೆವತೆಗಳನ್ನು ಹಿಂಸಿಸುತ್ತಿದ್ದನು. ಆದರೆ ಆ ದೇವರು ಮಹಾ ವಿಷ್ಣುವನ್ನು ಕೋರಿದ ಕಾರಣ ಕೋಪದಿಂದ ತನ್ನ ಸುದರ್ಶನ ಚಕ್ರವನ್ನು ಪ್ರಯೋಗಿಸಿ ಸಂಹಾರ ಮಾಡಲು ಮುಂದಾದನು. ಅಲ್ಲಿಂದ ತಪ್ಪಿಸಿಕೊಂಡ ಆ ರಾಕ್ಷಸನು ಮಂಗಳಗಿರಿ ಪರ್ವತದಲ್ಲಿ ಅಡಗಿಕೊಂಡನು.

ಮಂಗಳಗಿರಿ ಪಾನಕಾಲಸ್ವಾಮಿ ಅಗ್ನಿ ಪರ್ವತದ ರಹಸ್ಯ!

ಮಂಗಳಗಿರಿ ಪಾನಕಾಲಸ್ವಾಮಿ ಅಗ್ನಿ ಪರ್ವತದ ರಹಸ್ಯ!

ಆತನನ್ನು ಕಂಡ ದೇವತೆಗಳು ಕೂಡ ಭಯಗೊಳ್ಳುತ್ತಾರೆ. ಅದರಿಂದ ಆತನನ್ನು ಶಾಂತಗೊಳಿಸಬೇಕು ಎಂದು ಪಾನಕವನ್ನು ನೀಡಿ ಶಾಂತಗೊಳಿಸಲು ಪ್ರಯತ್ನ ಮಾಡಿದರು. ಆದರೆ ಸ್ವಾಮಿಯು ಸ್ವಲ್ಪ ಮಾತ್ರವೇ ತೆಗೆದುಕೊಂಡು ಇನ್ನು ಉಳಿದ ಪಾನಕವನ್ನು ದೇವರುಗಳು ಪ್ರಸಾದವಾಗಿ ತೆಗೆದುಕೊಂಡರಂತೆ. ಇನ್ನು ಅಲ್ಲಿಂದ ಸಾಕ್ಷ್ಯಾತ್ ಆ ಶ್ರೀ ಮಹಾ ವಿಷ್ಣುವೇ ನರಸಿಂಹಸ್ವಾಮಿಯ ರೂಪದಲ್ಲಿ ನೆಲೆಸಿದ್ದಾನೆ. ಪಾನಕ ಪ್ರೇಮಿಯಾಗಿ ಭಕ್ತರಿಗೆ ದರ್ಶನವನ್ನು ನೀಡುತ್ತಿದ್ದಾನೆ.

ಮಂಗಳಗಿರಿ ಪಾನಕಾಲಸ್ವಾಮಿ ಅಗ್ನಿ ಪರ್ವತದ ರಹಸ್ಯ!

ಮಂಗಳಗಿರಿ ಪಾನಕಾಲಸ್ವಾಮಿ ಅಗ್ನಿ ಪರ್ವತದ ರಹಸ್ಯ!

ಇಲ್ಲಿ ನಮೂಚಿಯನ್ನು ಸಂಹಾರ ಮಾಡಿದ ತಕ್ಷಣ ರಕ್ತ ಮಾಯವಾಯಿತಂತೆ. ಅದೇ ಇಂದು ನದಿಯಾಗಿ ಮಾರ್ಪಾಟಾಗಿ ಕೆಂಪು ಬಣ್ಣದಲ್ಲಿ ಇದೆ ಎಂದು ಹೇಳಲಾಗುತ್ತದೆ. ಇನ್ನು ಸ್ವಾಮಿಯನ್ನು ಇಂದಿಗೂ ದರ್ಶಿಸುವ ಸಲುವಾಗಿ ದೇವತೆಗಳು ಬರುತ್ತಾರೆ ಎಂದೂ, ಸಂಜೆಯ ಸಮಯದಲ್ಲಿ ಸಾಮಾನ್ಯ ಭಕ್ತರಿಗೆ ದರ್ಶನ ಮಾಡಲು ಬಿಡುವುದಿಲ್ಲವೆಂದೂ ಆರ್ಚಕರು ಹೇಳುತ್ತಾರೆ.

ಮಂಗಳಗಿರಿ ಪಾನಕಾಲಸ್ವಾಮಿ ಅಗ್ನಿ ಪರ್ವತದ ರಹಸ್ಯ!

ಮಂಗಳಗಿರಿ ಪಾನಕಾಲಸ್ವಾಮಿ ಅಗ್ನಿ ಪರ್ವತದ ರಹಸ್ಯ!

ಆದರೆ ಇದೆಲ್ಲಾ ದೇವರ ಮೇಲೆ ನಮಗೆ ನಂಬಿಕೆಯೇ ಆಗಿದೆ. ಕೆಲವರು ಮಾತ್ರ ಪಾನಕವು ಎಲ್ಲಿಗೆ ಹೋಗುತ್ತದೆ? ಎಂದು ಕೇಳಿದರೆ ಮಾತ್ರ ಬೆಟ್ಟಗಳ ಮಧ್ಯೆ ಗಂಧಕವಿದೆ ಹಾಗಾಗಿ ಅವೆಲ್ಲವು ಪಾನಕವನ್ನು ಹೀರಿಕೊಳ್ಳುತ್ತದೆ ಎಂದು ಕೆಲವರು ವಾದಿಸುತ್ತಾರೆ. ಅದರೆ ಎಷ್ಟೋ ಪ್ರಯೋಗಗಳು ಮಾಡಿದರೂ ಕೂಡ ಯಾರಿಂದಲೂ ಪಾನಕದ ರಹಸ್ಯ ಭೇದಿಸಲು ಸಾಧ್ಯವಾಗಲಿಲ್ಲ.

ಮಂಗಳಗಿರಿ ಪಾನಕಾಲಸ್ವಾಮಿ ಅಗ್ನಿ ಪರ್ವತದ ರಹಸ್ಯ!

ಮಂಗಳಗಿರಿ ಪಾನಕಾಲಸ್ವಾಮಿ ಅಗ್ನಿ ಪರ್ವತದ ರಹಸ್ಯ!

ಬೆಟ್ಟವನ್ನು ಅಗೆಯಲು ಅವಕಾಶ ಕೂಡ ಇಲ್ಲ. ಅಷ್ಟು ದೊಡ್ಡ ಬೆಟ್ಟವನ್ನು ಅಗೆಯಲು ಸಾಧ್ಯವೇ ಆಗದೇ ಇರುವ ವಿಷಯ ಎಂದು ಕೂಡ ಹೇಳುತ್ತಾರೆ. ಕೆಲವು ಮಂದಿ ಬೆಟ್ಟದ ಕೆಳಗೆ ಅಗ್ನಿಪರ್ವತವಿದೆ ಎಂದು ಹೇಳುತ್ತಾರೆ. ಆದರೆ ಭಾರತದಲ್ಲಿ ಎಲ್ಲಿಯೂ ಅಗ್ನಿ ಪರ್ವತಗಳು ಇಲ್ಲ ಎಂದು ವಿಜ್ಞಾನಿಗಳು ವಾದಿಸುತ್ತಾರೆ.

ಅಗ್ನಿಪರ್ವತವಿರುವ ಪ್ರದೇಶದಲ್ಲಿ ಅತ್ಯಂತ ಉಷ್ಣತೆಯಿಂದ ಕೂಡಿದ್ದು, ಎಷ್ಟು ಬಿಸಿ ಎಂದರೆ ಭೂಗರ್ಭಜಲಗಳು ಕೂಡ ಅಲ್ಲಿರುವುದಿಲ್ಲ. ಹಾಗಾಗಿ ಅಗ್ನಿ ಪರ್ವತವಿರುವ ಅವಕಾಶಗಳು ಕಡಿಮೆ ಎಂದು ಹೇಳುತ್ತಿದ್ದಾರೆ. ಅಗ್ನಿಪರ್ವತವಿರುವುದರಿಂದಲೇ ಪಾನಕವು ಹೀರಿಕೊಳ್ಳುತ್ತಿದೆ ಎಂಬುದು ಇನ್ನು ಕೆಲವರ ವಾದವಾಗಿದೆ.

ಮಂಗಳಗಿರಿ ಪಾನಕಾಲಸ್ವಾಮಿ ಅಗ್ನಿ ಪರ್ವತದ ರಹಸ್ಯ!

ಮಂಗಳಗಿರಿ ಪಾನಕಾಲಸ್ವಾಮಿ ಅಗ್ನಿ ಪರ್ವತದ ರಹಸ್ಯ!

ನಮ್ಮ ಹಿಂದೂ ದೇವರುಗಳು ಎಲ್ಲಿ ನೆಲೆಸಿರುತ್ತದೆಯೋ ಅಲ್ಲೆಲ್ಲಾ ಏನಾದರೂ ಒಂದು ಇದ್ದೇ ಇರುತ್ತದೆ ಎಂದು ವಿಜ್ಞಾನಿಗಳು ಕೋಪಗೊಳ್ಳುತ್ತಿರುತ್ತಾರೆ. ಇಷ್ಟು ವಿಜ್ಞಾನ ತಿಳಿದುಕೊಂಡವರು ಕೂಡ ಉತ್ತರ ಮಾತ್ರ ಹೇಳಲು ಸಾಧ್ಯವಾಗುತ್ತಿಲ್ಲ.

ಮಂಗಳಗಿರಿ ಪಾನಕಾಲಸ್ವಾಮಿ ಅಗ್ನಿ ಪರ್ವತದ ರಹಸ್ಯ!

ಮಂಗಳಗಿರಿ ಪಾನಕಾಲಸ್ವಾಮಿ ಅಗ್ನಿ ಪರ್ವತದ ರಹಸ್ಯ!

ಆದರೆ ಮಂಗಳಗಿರಿ ಬೆಟ್ಟದ ಮೇಲೆ ಬೆಲ್ಲದ ಪಾನಕಗಳನ್ನು ಭಕ್ತರು ತರುತ್ತಿರುತ್ತಾರೆ. ಸ್ವಾಮಿಗೆ ನಿತ್ಯವು ನೈವೇದ್ಯವಾಗಿ ಪಾನಕವನ್ನು ಸರ್ಮಪಿಸುತ್ತಿರುತ್ತಾರೆ. ಆದರೆ ಭೂತ ಕನ್ನಡಿಯನ್ನು ಹಿಡಿದು ನೋಡಿದರು ಕೂಡ ಒಂದು ಚುಕ್ಕೆ ಪಾನಕವು ಕಾಣಿಸುವುದಿಲ್ಲ. ಇದೆಲ್ಲಾ ಸ್ವಾಮಿಯ ಮಹಿಮೆಯೇ ಆಗಿದೆ.

ಮಂಗಳಗಿರಿ ಪಾನಕಾಲಸ್ವಾಮಿ ಅಗ್ನಿ ಪರ್ವತದ ರಹಸ್ಯ!

ಮಂಗಳಗಿರಿ ಪಾನಕಾಲಸ್ವಾಮಿ ಅಗ್ನಿ ಪರ್ವತದ ರಹಸ್ಯ!

ಇಲ್ಲಿ ಮುಖ್ಯವಾಗಿ ನರಸಿಂಹಸ್ವಾಮಿಯ ಮುಖವನ್ನು ಮಾತ್ರ ಕಾಣಬಹುದು. ಆದರೆ ಉಳಿದ ದೇವಾಲಯಗಳಲ್ಲಿ ಉಗ್ರಸ್ವರೂಪಿಯಾದ ನರಸಿಂಹಸ್ವಾಮಿಯ ಶರೀರವು ಕಾಣಿಸುತ್ತದೆ. ಆದರೆ ಮಂಗಳಗಿರಿಯಲ್ಲಿ ಮಾತ್ರ ವಿಶೇಷವಾದ ರೂಪವನ್ನು ಇಲ್ಲಿ ಕಾಣಬಹುದು.

ಹೇಗೆ ಸಾಗಬೇಕು?

ಹೇಗೆ ಸಾಗಬೇಕು?

ರಸ್ತೆ ಮಾರ್ಗವಾಗಿ
ರಾಜ್ಯದ ಸಾರಿಗೆಗೆ ಗುಂಟೂರು ನಗರವು ಪ್ರಧಾನವಾದ ಕೇಂದ್ರವಾಗಿದೆ. ಹಾಗಾಗಿಯೇ ಇಲ್ಲಿ ಅನೇಕ ಬಸ್ಸುಗಳು ಸುಲಭವಾಗಿ ಲಭಿಸುತ್ತವೆ. ಚೆನ್ನೈ, ಕೋಲ್ಕತ್ತ, ಬೆಂಗಳೂರು ಹಾಗೆಯೇ ಹೈದ್ರಾಬಾದ್‍ನಿಂದ ಅನೇಕ ರಹದಾರಿಗಳು ಈ ಗುಂಟೂರು ನಗರಕ್ಕೆ ಸೇರಿಕೊಳ್ಳುತ್ತವೆ. ಹೈದ್ರಾಬಾದ್ ರಹದಾರಿಯ ಮಾರ್ಗವಾಗಿ ದೆಹಲಿ ಮತ್ತು ಮುಂಬೈ ನಗರಗಳಿಗೆ ಸೇರಿಕೊಳ್ಳಬಹುದು.

ಹೇಗೆ ಸಾಗಬೇಕು?

ಹೇಗೆ ಸಾಗಬೇಕು?

ರೈಲ್ವೆ ಮಾರ್ಗದ ಮೂಲಕ
ಗುಂಟೂರಿನಲ್ಲಿರುವ ರೈಲ್ವೆ ನಿಲ್ದಾಣವು ಎಲ್ಲಾ ಪ್ರಧಾನವಾದ ನಗರಗಳಿಗೆ ಹಾಗೆಯೇ ಪಟ್ಟಣಗಳಿಗೆ ಉತ್ತಮ ಸಂಪರ್ಕ ಇರುವುದಕ್ಕೆ ಕಾರಣ ದಕ್ಷಿಣ ರೈಲ್ವೆ ಶಾಖೆಯ ನಿರ್ವಹಣೆ. ಗುಂಟೂರಿನಲ್ಲಿ ದೆಹಲಿ, ಬೆಂಗಳೂರು, ಮುಂಬೈ, ಚೆನ್ನೈ, ಬೆಂಗಳೂರಿನಂತಹ ಹಲವಾರು ಭಾಗಗಳಿಂದ ರೈಲುಗಳು ಈ ಸ್ಥಳಗಳಿಗೆ ರೈಲು ಸಂಪರ್ಕಗಳಿವೆ.

ಹೇಗೆ ಸಾಗಬೇಕು?

ಹೇಗೆ ಸಾಗಬೇಕು?

ವಾಯು ಮಾರ್ಗದ ಮೂಲಕ
ಗೂಂಟೂರಿನಲ್ಲಿ ವಿಮಾನ ನಿಲ್ದಾಣವಿಲ್ಲ. ಸಮೀಪದ ವಿಮಾನ ನಿಲ್ದಾಣವೆಂದರೆ ಅದು ವಿಯಜವಾಡ ರೈಲ್ವೆ ನಿಲ್ದಾಣವಾಗಿದೆ. ಇದು ಸುಮಾರು 96 ಕಿ.ಮೀ ದೂರದಲ್ಲಿದೆ. ಹೈದ್ರಾಬಾದ್‍ನ ರಾಜೀವ್ ಗಾಂಧಿ ವಿಮಾನ ನಿಲ್ದಾಣವು ಕೂಡ ಸಮೀಪದ ವಿಮಾನ ನಿಲ್ದಾಣವೇ ಆಗಿದೆ. ಇಲ್ಲಿಂದ ಟ್ಯಾಕ್ಸಿ ಮುಖಾಂತರ ಸುಲಭವಾಗಿ ಗುಂಟೂರಿಗೆ ತಲುಪಬಹುದು.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more