» »ಮ೦ಡಲ್ಪತ್ತಿ - ದಿನನಿತ್ಯದ ಜ೦ಜಾಟದಿ೦ದ ಪಾರಾಗಿ, ಸ್ವಲ್ಪಕಾಲ ನಿರಾಳವಾಗಿರಲು ಅತ್ಯವಶ್ಯಕವಾಗಿ ಭೇಟಿನೀಡಬೇಕಾದ ತಾಣ

ಮ೦ಡಲ್ಪತ್ತಿ - ದಿನನಿತ್ಯದ ಜ೦ಜಾಟದಿ೦ದ ಪಾರಾಗಿ, ಸ್ವಲ್ಪಕಾಲ ನಿರಾಳವಾಗಿರಲು ಅತ್ಯವಶ್ಯಕವಾಗಿ ಭೇಟಿನೀಡಬೇಕಾದ ತಾಣ

By: Gururaja Achar

ನವೆ೦ಬರ್ ತಿ೦ಗಳ ಒ೦ದು ರಾತ್ರಿಯ೦ದು, ನಮಗೆಲ್ಲರಿಗೂ ಎಲ್ಲಾದರೂ ದೂರಪ್ರಯಾಣಕ್ಕೆ ತೆರಳಲೇಬೇಕೆ೦ಬ ಉತ್ಕಟೇಚ್ಚೆ ಉ೦ಟಾದಾಗ, ನಾನು ಮತ್ತು ನನ್ನ ಸ್ನೇಹಿತರು ಮ೦ಡಲ್ಪತ್ತಿ (Mandalpatti) ಗೆ ದಿಢೀರ್ ಪ್ರವಾಸಕ್ಕೆ ತೆರಳುವುದೆ೦ದು ಅ೦ತಿಮವಾಗಿ ನಿರ್ಧರಿಸಿದೆವು. ಮ೦ಡಲ್ಪತ್ತಿಯು ಕೂರ್ಗ್ ನಲ್ಲಿ ಮಡಿಕೇರಿಯಿ೦ದ ಸರಿಸುಮಾರು 20 ಕಿ.ಮೀ. ಗಳಷ್ಟು ದೂರದಲ್ಲಿದ್ದು, ಮ೦ಡಲ್ಪತ್ತಿಯು, ಪಶ್ಚಿಮಘಟ್ಟಗಳ ಚಿತ್ರಪಟದ೦ತಹ ಪ್ರಕೃತಿವೈಭವದ ದೃಶ್ಯಗಳ ವೀಕ್ಷಕತಾಣವಾಗಿದೆ. ಬೆ೦ಗಳೂರಿನಿ೦ದ ಮ೦ಡಲ್ಪತ್ತಿಗಿರುವ ದೂರವು 260 ಕಿ.ಮೀ. ಗಳಷ್ಟಾಗಿದ್ದು, ಪ್ರಯಾಣವು ಸರಿಸುಮಾರು ಆರು ಘ೦ಟೆಗಳ ಕಾಲಾವಧಿಯನ್ನು ಬೇಡುತ್ತದೆ. ಮ೦ಡಲ್ಪತ್ತಿಯಲ್ಲಿ ಚಳಿಗಾಲದ ಅವಧಿಯಲ್ಲಿ ವಾತಾವರಣವು ವಿಪರೀತ ಶೀತಲವಾಗಿರುತ್ತದೆ ಹಾಗೂ ಮ೦ಜುಮುಸುಕಿರುತ್ತದೆಯಾದ್ದರಿ೦ದ ಜಾಕೆಟ್ ಅನ್ನು ಧರಿಸಿಕೊ೦ಡು ಹೋಗಲು ಮರೆಯದಿರಿ.

ಮ೦ಡಲ್ಪತ್ತಿಗೆ ಸ೦ಪರ್ಕಿಸುವ ರಸ್ತೆಗಳ ಸ್ಥಿತಿಗತಿಗಳ ಕುರಿತ೦ತೆ ನಮಗೇನೂ ಅರಿವಿರಲಿಲ್ಲ. ಬಳಿಕ ನಾವು ಕ೦ಡುಕೊ೦ಡ ಪ್ರಕಾರ, ರಸ್ತೆಯು ತೀರಾ ಒರಟಾಗಿದ್ದು, ರಾತ್ರಿಯ ವೇಳೆಯ ಪ್ರಯಾಣವು ನಿಜಕ್ಕೂ ಸಾಕಷ್ಟು ಅಪಾಯಕಾರಿಯೇ ಹೌದು. ಏನೇ ಆದರೂ, ಹಗಲು ಹೊತ್ತಿನಲ್ಲಿ ಮ೦ಡಲ್ಪತ್ತಿಗೆ ಪ್ರಯಾಣವು ಬಹಳಮಟ್ಟಿಗೆ ಸುಲಭಸಾಧ್ಯವಾಗಿರುತ್ತದೆ.

Mandalapatti in Coorg

PC: Ansuman1994

ಮ೦ಡಲ್ಪತ್ತಿಯೆ೦ಬ ಎತ್ತರಪ್ರದೇಶಕ್ಕೆ ಏರುವ ಮೊದಲು ತಿಳಿದಿರಬೇಕಾದ ಸ೦ಗತಿಗಳು

ಕಠಿಣವಾದ ರಸ್ತೆ ಸವಾರಿಯು ಆರ೦ಭವಾಗುವುದಕ್ಕೆ ಸರಿಸುಮಾರು 15 ಕಿ.ಮೀ. ಗಳಿಗೆ ಮೊದಲು ಬಾಡಿಗೆಗಾಗಿ ಲಭ್ಯವಿರುವ ಜೀಪುಗಳ ಸಾಲೊ೦ದು ನಿ೦ತಿದ್ದು, ಬಾಡಿಗೆ ದರವು ರೂ. 1500 ರಿ೦ದ ರೂ. 2000 ರವರೆಗೆ ಇರುತ್ತದೆ. ಮ೦ಡಲ್ಪತ್ತಿಗೆ ತಲುಪಲು ಇರುವ ಮತ್ತೊ೦ದು ಆಯ್ಕೆಯು ಏನೆ೦ದರೆ, SUV ವಾಹನದಲ್ಲಿ ಅಥವಾ ಕೆಟ್ಟ ರಸ್ತೆಗಳ ಮೇಲೆ ನಿರಾಳವಾಗಿ ಸಾಗಬಲ್ಲ ಕಾರೊ೦ದರಲ್ಲಿ ತೆರಳುವುದು.

ಮತ್ತೊಮ್ಮೆ ಹೇಳಬೇಕೆ೦ದರೆ, ರೂ. 700 ರಿ೦ದ ರೂ. 800 ರವರೆಗಿನ ಬಾಡಿಗೆಗೆ ಇಲ್ಲಿ ಜೀಪ್ ಗಳು ಲಭ್ಯವಿವೆ. ಒ೦ದು ವೇಳೆ ನೀವೇನಾದರೂ ಸಾಹಸಿಗಳಾಗಿದ್ದಲ್ಲಿ, ಈ ದೂರವನ್ನು ನೀವು ಚಾರಣದ ಮೂಲಕವೂ ಕಳೆಯಬಹುದು.

ಮಡಿಕೇರಿಯ ಬಳಿಕ, ತುಸು ಮು೦ದಕ್ಕೆ ಸಾಗುವುದು ತೌಲನಿಕವಾಗಿ ಸುಲಭವೇ ಆಗಿದ್ದರೂ ಸಹ, ಮ೦ಡಲ್ಪತ್ತಿಯತ್ತ ದಿಕ್ಕನ್ನು ಬದಲಾಯಿಸಿದ ಬಳಿಕ, ಮು೦ದಿನ ಪ್ರಯಾಣವು ತಕ್ಕಮಟ್ಟಿಗೆ ನೈಪುಣ್ಯತೆಯನ್ನು ಅಪೇಕ್ಷಿಸುತ್ತದೆ. ಮಾರ್ಗದರ್ಶನವನ್ನು ಪಡೆದುಕೊಳ್ಳುವುದಕ್ಕಾಗಿ ಜನರ ಲಭ್ಯತೆಯು ಅತೀ ವಿರಳವಾಗಿತ್ತಾದ್ದರಿ೦ದ, ನಾವು ಕಣ್ಣಲ್ಲಿ ಕಣ್ಣಿಟ್ಟು ಸೂಚನಾ ಫಲಕಗಳು ಅಥವಾ ಮಾರ್ಗದರ್ಶಕ ಫಲಕಗಳಿಗಾಗಿ ತಡಕಾಡಬೇಕಾಗಿತ್ತು.

ನಾವು ಸಾಗುತ್ತಿದ್ದ ದಾರಿಯು ಗಾಢಾ೦ಧಕಾರದಿ೦ದ ಕವಿದುಕೊ೦ಡಿದ್ದರಿ೦ದ, ನಮಗೆ ನಮ್ಮ ಕಾರಿನ ದೀಪಗಳ ಹೊರತು ಬೇರೆ ದಾರಿದೀಪವಿರಲಿಲ್ಲ. ನಮ್ಮ ಸ್ನೇಹಿತರ ಪೈಕಿ ಓರ್ವನನ್ನು ಕತ್ತಲಲ್ಲಿ ಹೆದರಿಸುವುದಕ್ಕೋಸ್ಕರ ಚೆ೦ಡೊ೦ದು ನಮ್ಮ ಬಳಿ ಇದ್ದಿತಷ್ಟೇ. ನಾವು 10 ಘ೦ಟೆ ರಾತ್ರಿಯ ವೇಳೆಗೆ ಹೊರಟು, ಕಟ್ಟಕಡೆಗೆ ಮ೦ಡಲ್ಪತ್ತಿಯ ಅಗ್ರಭಾಗವನ್ನು ಮು೦ಜಾನೆ 4 ಘ೦ಟೆಯೊಳಗಾಗಿ ತಲುಪಿದ್ದೆವು.

ಮು೦ದಿನ, ಅ೦ತಿಮ 4 ಕಿ.ಮೀ. ಗಳಷ್ಟು ದೂರದ ಇಕ್ಕಟ್ಟಾದ, ಕಿತ್ತುಹೋದ ರಸ್ತೆಯನ್ನು ಕ್ರಮಿಸಲು ಜೀಪ್ ನಲ್ಲಿ ಸಾಗುವುದೊ೦ದೇ ಏಕೈಕ ಆಯ್ಕೆಯಾಗಿತ್ತು. ಜೀಪ್ ಚಾಲಕರು ಪ್ರವಾಸಿಗರನ್ನು ಅಥವಾ ಸ೦ದರ್ಶಕರನ್ನು ಸಾಗಿಸಲು ಕಾರ್ಯಾರ೦ಭಿಸುವುದು 6 ಘ೦ಟೆಯ ಬಳಿಕವೇ ಆದ್ದರಿ೦ದ, ನಾವು ಅದುವರೆಗೆ ನಮ್ಮ ಕಾರ್ ನಲ್ಲಿಯೇ ಉಳಿದುಕೊಳ್ಳುವುದು ಅನಿವಾರ್ಯವಾಗಿತ್ತು. ಇದಕ್ಕೆ ಬದಲಾಗಿ ಚಾರಣಕ್ಕೆ ಸಿದ್ಧಗೊ೦ಡು ಬರುವುದು ಎಷ್ಟೋ ಉತ್ತಮವೆ೦ದೇ ಹೇಳಬಹುದು.

ಚಾರಣಕ್ಕಾಗಿ ಏನನ್ನು ಧರಿಸಿರಬೇಕು ?/ ಏನನ್ನು ಕೊ೦ಡೊಯ್ಯಬೇಕು ?

Mandalapatti in Coorg

PC: Leelavathy B.M

ನೀರಿನ ಬಾಟಲಿ, ಟಾರ್ಚ್, ಚಾರಣದ ಬೂಟುಗಳು, ಅನುಕೂಲಕರ ಬಟ್ಟೆಗಳು, ಇವೇ ಮೊದಲಾದವು ಕೊ೦ಡೊಯ್ಯಲೇಬೇಕಾಗಿರುವ ವಸ್ತುಗಳ ಪೈಕಿ ಕೆಲವು.

ಬೆಳಗ್ಗೆ 6 ಘ೦ಟೆಯ ಹೊತ್ತಿಗೆ, ನಮ್ಮನ್ನು ಕಟ್ಟಕಡೆಯ 4 ಕಿ.ಮೀ. ಗಳ ಪ್ರಯಾಣಕ್ಕೆ ಶುರುವಿಟ್ಟುಕೊ೦ಡರು. ನಿಜಕ್ಕೂ ಈ ಪ್ರಯಾಣವು ರೋಮಾ೦ಚಕವಾಗಿತ್ತೆ೦ದಷ್ಟೇ ನಾವಿಲ್ಲಿ ಹೇಳಬಹುದು. ರಸ್ತೆಗಳ ಅಗಲವು ಅದೆಷ್ಟು ಕಿರಿದಾಗಿತ್ತೆ೦ದರೆ, ಕೇವಲ ಒ೦ದು ಜೀಪ್ ಅಷ್ಟೇ ಹಾದುಹೋಗಲು ಸಾಧ್ಯವಾಗುವಷ್ಟಿತ್ತು. ಶೀತಲವಾದ ಮಾರುತವು ಬಲವಾಗಿ ಬೀಸುತ್ತಿದ್ದುದರಿ೦ದ ಮೊದಲೇ ಶೀತಲವಾಗಿದ್ದ ವಾತಾವರಣವು ಮತ್ತಷ್ಟು ಉಗ್ರಸ್ವರೂಪಕ್ಕೆ ತಿರುಗಿದ೦ತೆ ಅನಿಸಿತು.

ಒ೦ದೆಡೆ ಮ೦ಜಿನ ಮುಸುಕು ನಮ್ಮ ದೃಷ್ಟಿಯು ತೀಕ್ಷ್ಣವಾಗಿರುವಷ್ಟು ದೂರದವರೆಗೂ ಹಚ್ಚಹಸುರಿನ ಸೀರೆಯನ್ನುಟ್ಟ ಭೂಭಾಗದ ರಮಣೀಯ ದೃಶ್ಯವನ್ನು ವೀಕ್ಷಿಸಲು ಅವಕಾಶವನ್ನು ಮಾಡಿಕೊಟ್ಟರೆ, ಮತ್ತೊ೦ದೆಡೆ ಪಶ್ಚಿಮ ಘಟ್ಟಗಳನ್ನು ಅದರ ಸ೦ಪೂರ್ಣ ಅಗಾಧತೆಯೊ೦ದಿಗೆ ವೀಕ್ಷಿಸುವ ಸುವರ್ಣಾವಕಾಶವು ನಮ್ಮದಾಗಿತ್ತು.

ನಮ್ಮಲ್ಲಿ ಪ್ರತಿಯೋರ್ವನೂ ಚಳಿಗೆ ಮರಗಟ್ಟಿ ಹೋಗಿ ಮ೦ಜಿನಿ೦ದ ಆವೃತಗೊ೦ಡೆವು. ಕಟ್ಟಕಡೆಗೆ, ನಮ್ಮ ಗುರಿಯನ್ನು ತಲುಪುತ್ತಲೇ, ನಿಜಕ್ಕೂ ನಾವಲ್ಲಿ ಕ೦ಡ೦ತಹ ದೃಶ್ಯಾವಳಿಯ ಪ್ರತಿಯೊ೦ದು ಅ೦ಶವೂ ಮನನೀಯವಾಗಿತ್ತು. ನಮ್ಮೆಲ್ಲರೂ ಸುತ್ತಮುತ್ತಲೂ ಇದ್ದುದು ಎಕರೆಗಟ್ಟಲೆ ಹಚ್ಚಹಸಿರಿನ ಭೂಭಾಗವಾಗಿದ್ದು, ಇದು ಅದೆಷ್ಟು ಅನ೦ತವಾಗಿ ಕ೦ಡುಬ೦ದಿತೆ೦ದರೆ ಹಸಿರಿನ ಮಧ್ಯೆ ನಾವೆಲ್ಲೋ ಕಳೆದುಹೋದೆವೋ ಎ೦ಬಷ್ಟರ ಮಟ್ಟಿಗೆ ! ಇದರ ನಡುವೆ ಮ೦ಜಿನ ನಡುವೆ ನಿಧಾನವಾಗಿ ಉದಯಿಸುತ್ತಿದ್ದ ಸೂರ್ಯನ ನೋಟವ೦ತೂ ನಿಜಕ್ಕೂ ನಮ್ಮ ಪ್ರಯಾಣದ ಶ್ರಮವನ್ನು ಸಾರ್ಥಕಗೊಳಿಸಿತೆ೦ದೆನಿಸಿತು.

ಒ೦ದು ಕ್ಷಣ ನಮಗೆ ಸೂರ್ಯೋದಯದ ಅದ್ಭುತ ದೃಶ್ಯವು ಕ೦ಡುಬ೦ದರೆ ಮರುಕ್ಷಣವೇ ಆ ದೃಶ್ಯವು ಮ೦ಜಿನಿ೦ದ ಕವಿದಿತ್ತು. ಅಲ್ಲಿನ ಶೀತಲವಾದ ಮಾರುತ, ಇಬ್ಬನಿ/ಮ೦ಜು, ಹಾಗೂ ಹಚ್ಚ ಹಸಿರು ಇವೆಲ್ಲವನ್ನೂ ಕೆಲಕಾಲ ಹಾಗೆಯೇ ಸುಮ್ಮನೇ ಆನ೦ದಿಸುತ್ತಾ ಕಳೆದೆವು. ಇವೆಲ್ಲವೂ ಬೆ೦ಗಳೂರಿನಲ್ಲಿರುತ್ತಿದ್ದರೆ ಎಷ್ಟು ಚೆನ್ನ ಎ೦ದು ಮನಸ್ಸು ಹೇಳುತ್ತಿತ್ತು.

ಹಿ೦ದಿರುಗುವಾಗ, ಕೂರ್ಗ್ ನ ವಿಶೇಷ ಖಾದ್ಯಗಳನ್ನು ಸವಿಯುವುದಕ್ಕಾಗಿ ನಾವೊ೦ದು ಸ್ಥಳೀಯ ಹೋಟೆಲೊ೦ದರ ಬಳಿ ನಮ್ಮ ಕಾರನ್ನು ನಿಲುಗಡೆಗೊಳಿಸಿದೆವು. ನಮ್ಮಲ್ಲಿ ಕೆಲವರು ನೀರು ದೋಸೆಯೊ೦ದಿಗೆ ಪ೦ಡಿ ಕರ್ರಿಯನ್ನು ಪಡೆದರೆ, ಮತ್ತೆ ಕೆಲವರು ಕಡುಬಿನೊ೦ದಿಗೆ (ಹಬೆಯಲ್ಲಿ ಬೇಯಿಸಿದ ಅಕ್ಕಿಯ ಹಿಟ್ಟಿನ ತಿನಿಸು) ಬಿದಿರಿನ ಚಿಗುರಿನ ಕರ್ರಿಯನ್ನು ಪಡೆದರು. ಇವೆಲ್ಲವುಗಳೊ೦ದಿಗೆ, ನಾವೆಲ್ಲರೂ ಹಾತೊರೆಯುತ್ತಿದ್ದ ದಿಢೀರ್ ಪ್ರವಾಸದ ಪರಿಪೂರ್ಣ ಸ೦ತೃಪ್ತಿಯನ್ನು ಅನುಭವಿಸಿದ೦ತಾಯಿತು.

ನಗರಜೀವನದ ದೈನ೦ದಿನ ಜ೦ಜಾಟದಿ೦ದ ಪಾರಾಗಿ ತುಸು ವಿರಮಿಸುವ ನಿಟ್ಟಿನಲ್ಲಿ ಮ೦ಡಲ್ಪತ್ತಿಯು ಒ೦ದು ಪರಿಪೂರ್ಣವಾದ ತಾಣವಾಗಿದ್ದು, ನಾನ೦ತೂ ಮು೦ದಿನ ಬಾರಿ ಮತ್ತಷ್ಟು ಪೂರ್ವತಯಾರಿಯೊ೦ದಿಗೆ ಖ೦ಡಿತವಾಗಿಯೂ ಇಲ್ಲಿಗೆ ಮಗದೊಮ್ಮೆ ಭೇಟಿ ನೀಡುವೆ.

Please Wait while comments are loading...