Search
  • Follow NativePlanet
Share
» » ಈ ದೇವಸ್ಥಾನದಲ್ಲಿ ಮಲಗಿದ್ರೆ ಸಂತಾನ ಪ್ರಾಪ್ತಿಯಾಗುತ್ತಂತೆ!

ಈ ದೇವಸ್ಥಾನದಲ್ಲಿ ಮಲಗಿದ್ರೆ ಸಂತಾನ ಪ್ರಾಪ್ತಿಯಾಗುತ್ತಂತೆ!

ಈ ದೇವಸ್ಥಾನದಲ್ಲಿ ನೀಡಲಾಗುವ ಪ್ರಸಾದವನ್ನು ಸೇವಿಸಿದರೆ ಸಂತಾನ ಭಾಗ್ಯ ವಿಲ್ಲದವರಿಗೆ ಸಂತಾನ ಪ್ರಾಪ್ತಿಯಾಗುತ್ತದೆ ಎನ್ನುತ್ತಾರೆ. ಹಾಗೂ ಅಲ್ಲಿ ಮಲಗಿದರೆ ಅವರಿಗೆ ಸಂತಾನ ಪ್ರಾಪ್ತಿಯಾಗುತ್ತದೆ ಎನ್ನುವುದು ಭಕ್ತರ ನಂಬಿಕೆ. ಹಾಗಾಗಿ ಹಲವು ಪ್ರದೇಶಗಳಿಂದ ದಂಪತಿಗಳು ಸಂತಾನವನ್ನು ಪಡೆಯುವ ಸಲುವಾಗಿ ಇಲ್ಲಿಗೆ ಆಗಮಿಸುತ್ತಾರೆ. ದೇವಿಯು ಕೈಲಾಸದಿಂದ ಇಲ್ಲಿ ಬಂದು ನೆಲೆಸಿದ್ದಾಳೆ ಎನ್ನುತ್ತದೆ ಸ್ಥಳಪುರಾಣ. ಹಾಗೆಯೇ ದೇವಿಯು ಉಗ್ರರೂಪದಲ್ಲಿ ಇದ್ದಾಳೆ ಎನ್ನಲಾಗುತ್ತದೆ.

ಇಲ್ಲಿ ದೇವಿಗೆ ನಡೆಯುವಂತಹ ನವಾವರಣ ಪೂಜೆಯು ಪ್ರಪಂಚದ ಬೇರಾವುದೇ ಮಂದಿರಲ್ಲಿ ನಡೆಯದು. ಈ ಪೂಜೆಗೆ ಅತ್ಯಂತ ಶಕ್ತಿ ಇದೆ ಎಂದು ಭಕ್ತರು ನಂಬುತ್ತಾರೆ. ಹಾಗೆಯೇ ಇಲ್ಲಿ ನಡೆಯುವ ಸಹಸ್ರನಾಮ ಪೂಜೆಯು ಬೇರೆಲ್ಲೂ ನಡೆಯೋದಿಲ್ಲ ಎನ್ನಲಾಗುತ್ತದೆ. ಇಷ್ಟೊಂದು ವಿಶೇಷತೆಗಳನ್ನು ಹೊಂದಿರುವ ದೇವಸ್ಥಾನದ ಪೂರ್ಣ ವಿವರ ಇಲ್ಲಿದೆ.

ಸ್ಥಳ ಪುರಾಣ

ಸ್ಥಳ ಪುರಾಣ

PC : youtube

ಸ್ಥಳ ಪುರಾಣದ ಪ್ರಕಾರ ಕಷ್ಯಪ ಮುನಿ ಲೋಕ ಕಲ್ಯಾಣಕ್ಕಾಗಿ ಯಾಗ ಕೈಗೊಳ್ಳಬೇಕೆಂದು ಭಾವಿಸುತ್ತಾರೆ. ಹಾಗಾಗಿ ಯಾಗ ನಡೆಸಲು ಸ್ಥಳಕ್ಕಾಗಿ ಹುಡುಕಾಡುತ್ತಾ ಪಿನಾಕಿನಿ ನದಿ ತೀರಕ್ಕೆ ಬಂದು ತಲುಪುತ್ತಾರೆ.

ಕಷ್ಯಪ ತೀರ್ಥ

ಕಷ್ಯಪ ತೀರ್ಥ

PC: youtube

ಯಾಗಕ್ಕಾಗಿ ಈ ಪ್ರಾಂತ್ಯವು ಅನುಕೂಲವಾಗಿದೆ ಎಂದು ಯೋಚಿಸಿ, ನೈರುತ್ಯ, ವಾಯುವ್ಯದಲ್ಲಿ ಯಾಗಕುಂಡವನ್ನು ಸ್ಥಾಪಿಸಿ ಯಾಗವನ್ನು ಪೂರ್ಣಗೊಳಿಸುತ್ತಾರೆ. ಅಲ್ಲೊಂದು ಕರೆಯಿದೆ ಅದನ್ನು ಕಷ್ಯಪ ತೀರ್ಥ ಎನ್ನಲಾಗುತ್ತದೆ. ಯಾರೆಲ್ಲಾ ಆ ತೀರ್ಥದಲ್ಲಿ ಸ್ನಾನ ಮಾಡುತ್ತಾರೋ ಅವರ ಪಾಪಗಳೆಲ್ಲಾ ಪರಿಹಾರವಾಗುತ್ತದೆ ಎನ್ನಲಾಗುತ್ತದೆ.

ವೇದಗಿರ ನರಸಿಂಹ

ವೇದಗಿರ ನರಸಿಂಹ

Pc: youtube

ನೈರುತ್ಯ ಭಾಗದಲ್ಲಿ ನಿರ್ಮಿಸಿರುವ ಯಾಗಕುಂಡದಿಂದ ಶ್ರೀ ಲಕ್ಷ್ಮೀ ಸಮೇತವಾಗಿ ನರಸಿಂಹ ಸ್ವಾಮಿ ಅವತರಿಸಿದರು. ಈ ಕ್ಷೇತ್ರವು ಆಂಧ್ರ ಪದೇಶದಲ್ಲಿರುವ ಹಲವು ಕ್ಷೇತ್ರಗಳಲ್ಲಿರುವ ಹಲವು ಪುಣ್ಯ ಕ್ಷೇತ್ರಗಳಲ್ಲಿ ಇದು ಒಂದು.

ಲಿಂಗಾಕಾರಕ

ಲಿಂಗಾಕಾರಕ


ವಾಯುವ್ಯಭಾಗದಲ್ಲಿರವ ಯಾಗಕುಂಡದಿಂದ ಪರಶಿವನು ಲಿಂಗರೂಪದಲ್ಲಿ ಪ್ರತ್ಯಕ್ಷನಾದನು. ಹಾಗಾಗಿ ಅದನ್ನು ರಜತಗಿರಿ ಎನ್ನಲಾಗುತ್ತಿತ್ತು. ಕಾಲಕ್ರಮೇಣ ಅದು ಜನ್ನವಾಡ, ಜೊನ್ನವಾಡ ಎಂದೇ ಪ್ರಸಿದ್ಧಿ ಪಡೆಯಿತು.

ಪಿನಾಕಿನಿ ನದಿ

ಪಿನಾಕಿನಿ ನದಿ

ಪಿನಾಕಿನಿ ನದಿ ಬಳಿ ಇರುವಪೆನುಬಲ್ಲಿಗ್ರಾಮಸ್ಥರಿಗೆ ದೇವಿಯ ವಿಗ್ರಹವೊಂದು ದೊರಕುತ್ತದೆ. ಇದನ್ನು ಕಂಡ ಗ್ರಾಮಸ್ಥರು ಸಂಭ್ರಮಿಸಿ ಅದನ್ನು ಪೂಜೆ ಮಾಡಿ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸುತ್ತಾರೆ.

ಸಂತಾನ ಪ್ರಾಪ್ತಿ

ಸಂತಾನ ಪ್ರಾಪ್ತಿ

ಸಂತಾನವಿಲ್ಲದವರು ಈ ದೇವಸ್ಥಾನದಲ್ಲಿ ರಾತ್ರಿ ಮಲಗಿದರೆ ಅವರಿಗೆ ಮಕ್ಕಳಾಗುತತ್ತವೆ ಎನ್ನುವುದು ಇಲ್ಲಿನ ಜನರ ನಂಬಿಕೆ. ಹಾಗೆಯೇ ಇಲ್ಲಿ ಪ್ರಸಾದ ರೂಪದಲ್ಲಿ ನೀಡಲಾಗುವ ಕೊಡಿಮದ್ದನ್ನು ಸೇವಿಸಿದೆ ಸಂತಾನ ಇಲ್ಲದೆ ಇರುವ ದಂಪತಿಗಳ ಚಿಂತೆ ದೂರವಾಗುತ್ತದೆ.

ಎಲ್ಲಿದೆ ಈ ದೇವಾಲಯ?

ಎಲ್ಲಿದೆ ಈ ದೇವಾಲಯ?

PC: youtube

ಮಲ್ಲಿಕಾರ್ಜುನ ಸ್ವಾಮಿ ಕಾಮಾಕ್ಷಿ ದೇವಾಲಯವು ನೆಲ್ಲೂರು ಜಿಲ್ಲೆಯ ಬುಚ್ಚಿರೆಡ್ಡಿ ಪಾಲ ಮಂಡಲದ ಜೊನ್ನವಾಡ ಗ್ರಾಮದ ಪಿನಾಕಿನಿ ನದಿ ತೀರದಲ್ಲಿ ಕಾಮಕ್ಷಿ ದೇವಿಯ ಮಂದಿರವಿದೆ. ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 13.30ರ ವರೆಗೆ ಹಾಗೂ ಸಂಜೆ 4 ಗಂಟೆಯಿಂದ ರಾತ್ರಿ 8.30ರವರೆಗೆ ದೇವಸ್ಥಾನ ತೆರೆದಿರುತ್ತದೆ.

ತಲುಪುವುದು ಹೇಗೆ?

ತಲುಪುವುದು ಹೇಗೆ?

ಆಂದ್ರಪ್ರದೇಶ, ತೆಲಂಗಾಣದಿಂದ ಅಲ್ಲಿಗೆ ಸಾಕಷ್ಟು ಬಸ್ ಸೌಲಭ್ಯಗಳಿವೆ. ರೈಲು ಸೌಲಭ್ಯವೂ ಇದೆ. ನೆಲ್ಲೂರಿನಿಂದ ಜೊನ್ನವಾಡ 8 ಕಿ.ಮೀ ದೂರದಲ್ಲಿದೆ. ನೆಲ್ಲೂರು ನಗರದಿಂದ ಜೊನ್ನವಾಡಕ್ಕೆ ಬೇಕಾದಷ್ಟು ಆಟೋ, ಬಸ್‍ಗಳು ದೊರೆಯುತ್ತವೆ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+