Search
  • Follow NativePlanet
Share
» »ಮಲೇ ಮಹದೇಶ್ವರ ಬೆಟ್ಟಕ್ಕೆ ಒಮ್ಮೆ ಭೇಟಿ ನೀಡಿ

ಮಲೇ ಮಹದೇಶ್ವರ ಬೆಟ್ಟಕ್ಕೆ ಒಮ್ಮೆ ಭೇಟಿ ನೀಡಿ

ಬೆಟ್ಟ ಎಂದರೆ ಯಾರಿಗೆ ಇಷ್ಟ ಆಗಲ್ಲ ಹೇಳಿ. ಅದರಲ್ಲೂ ಯುವ ಜನತೆಗೆ ಬೆಟ್ಟಗಳ ಮಧ್ಯೆ ಅಡ್ಡಾಡುವುದೆಂದರೆ ಏನು ಒಂದು ರೀತಿಯಲ್ಲಿ ಸಹಾಸಮಯವಾದ ಆನಂದವನ್ನು ನೀಡುತ್ತದೆ. ಬೆಟ್ಟಗಳ ಮಾತಿಗೆ ಬಂದರೆ ನಮ್ಮ ಕರ್ನಾಟಕದಲ್ಲಿ ಬೆಟ್ಟಗಳಿಗೆನೂ ಕಡಿಮೆ ಇಲ್ಲ. ಅದರಲ್ಲೂ ಮಲೇ ಮಹದೇಶ್ವರ ಬೆಟ್ಟ ಕರ್ನಾಟಕದಲ್ಲಿ ಅತ್ಯಂತ ಪ್ರಸಿದ್ಧಿಯನ್ನು ಪಡೆದಿದೆ.

ಬೆಟ್ಟಗಳ ಜೊತೆ ಜೊತೆಗೆ ದೇವಾಲಯವನ್ನು ಕೂಡ ಕಂಡು ಬರಬಹುದು. ಮಹದೇಶ್ವರ ಬೆಟ್ಟವು ಚಾಮರಾಜನಗರದ ಕೊಳ್ಳೇಗಾಲ ತಾಲ್ಲೂಕಿನಲ್ಲಿರುವ ಆಧ್ಯಾತ್ಮಿಕವಾದ ಕ್ಷೇತ್ರವಾಗಿದೆ. ದೇವಾಲಯವು ಬೆಟ್ಟಗಳಿಂದ ಅವೃತ್ತಗೊಂಡಿರುವುದರಿಂದ ಮಹದೇಶ್ವರ ಬೆಟ್ಟ ಎಂದು ಕರೆಯಲಾಗುತ್ತದೆ.

ಈ ಪವಿತ್ರವಾದ ಸ್ಥಳಕ್ಕೆ ಮೈಸೂರಿನಿಂದ ಸುಮಾರು 150 ಕಿ.ಮೀ ಹಾಗೂ ಬೆಂಗಳೂರಿನಿಂದ 210 ಕಿ,ಮೀ ದೂರದಲ್ಲಿದೆ. ಪ್ರಸ್ತುತ ಲೇಖನದ ಮೂಲಕ ಮಲೇ ಮಹದೇಶ್ವರ ಬೆಟ್ಟದ ಬಗ್ಗೆ ತಿಳಿಯೋಣ.

ಮಲೇ ಮಹದೇಶ್ವರ ಬೆಟ್ಟ

ಮಲೇ ಮಹದೇಶ್ವರ ಬೆಟ್ಟ

ಶೈವ ಸಮುದಾಯಕ್ಕೆ ಮಹದೇಶ್ವರ ದೇವಾಲಯವು ಮುಖ್ಯವಾದ ಭಕ್ತಿ ಕೇಂದ್ರವಾಗಿದೆ. ಇಲ್ಲಿ ಪರಮ ಶಿವನ್ನು ಆರಾಧಿಸುತ್ತಾರೆ. ಈ ದೇವಾಲಯದ ಬೆಟ್ಟವು ಕರ್ನಾಟಕ ಹಾಗೂ ತಮಿಳು ನಾಡು ಗಡಿಯ ತನಕ ಹಬ್ಬಿದೆ.

PC:Siddarth P Raj

ಭಕ್ತರು

ಭಕ್ತರು

ಹೀಗೆ ಕರ್ನಾಟಕ ಹಾಗು ತಮಿಳುನಾಡು ರಾಜ್ಯಕ್ಕೆ ಈ ಬೆಟ್ಟವು ಹಬ್ಬಿರುವುದರಿಂದ ಲಕ್ಷಾಂತರ ಭಕ್ತರು ಮಹದೇಶ್ವರ ದರ್ಶನಕ್ಕಾಗಿ ಭೇಟಿ ನೀಡುತ್ತಾರೆ. ದೇವಾಲಯದ ಒಳ ಹಾಗೂ ಹೊರ ಭಾಗ ಎಲ್ಲವೂ ಸೇರಿ ಸುಮಾರು 150 ಎಕರೆಯಷ್ಟು ವಿಸ್ತಾರವಾಗಿದೆ.

ಕಾಡು

ಕಾಡು

ಈ ಆಧ್ಯಾತ್ಮಿಕ ಬೆಟ್ಟಕ್ಕೆ ತೆರಳುವ ಹಲವಾರು ಪ್ರವಾಸಿಗರು ದಡ್ಡವಾದ ಅರಣ್ಯವನ್ನು ಕೂಡ ಅಸ್ವಾಧಿಸಬಹುದಾಗಿದೆ. ಈ ದೇವಾಲಯವು ದಡ್ಡವಾದ ಕಾಡುಗಳಿಂದ ಅವೃತ್ತವಾಗಿದೆ. ಸಮುದ್ರ ಮಟ್ಟದಿಂದ ಸುಮಾರು 3000 ಅಡಿ ಎತ್ತರದಲ್ಲಿ ಮಹದೇಶ್ವರನು ನೆಲೆಸಿದ್ದಾನೆ.

PC:Tumkurameen

ನಿರ್ಮಾಣ

ನಿರ್ಮಾಣ

ಇಷ್ಟು ಎತ್ತರದಲ್ಲಿ ಬೆಟ್ಟವನ್ನು ನಿರ್ಮಿಸಿದವರು ಜುಂಜೇ ಗೌಡ ಹಾಗೂ ಶ್ರೀಮಂತ ಕುರುಬ ಗೌಡರು. ಮೂಲದ ಪ್ರಕಾರ ಈ ಸ್ಥಳವು ಒಡೆಯರದು. ಆದರೆ ದೇವಾಲಯಕ್ಕಾಗಿ ಸ್ಥಳವನ್ನು ನೀಡಿದರಂತೆ.

PC:Prof tpms

ಶಿವನ ಸ್ವರೂಪಿ

ಶಿವನ ಸ್ವರೂಪಿ

ಮಹದೇಶ್ವರ ಬೆಟ್ಟದಲ್ಲಿ ನೆಲೆಸಿರುವವನು ಸುಮಾರು 15 ನೇ ಶತಮಾನದಲ್ಲಿ ಬಾಳಿದ್ದ ಸಂತ. ಇತನನ್ನು ಶಿವನ ಸ್ವರೂಪಿ ಅಥವಾ ಶಿವನ ಅವತಾರವೆಂದೇ ನಂಬಲಾಗಿತ್ತು. ಈತನ ಮೂರ್ತಿಯನ್ನು ಇಲ್ಲಿ ಕಾಣಬಹುದಾಗಿದೆ.

ಮಹದೇಶ್ವರ

ಮಹದೇಶ್ವರ

ಈ ಮಹದೇಶ್ವರನು ಸುಮಾರು 600 ವರ್ಷಗಳ ಹಿಂದೆ ಈ ಸ್ಥಳಕ್ಕೆ ತಪಸ್ಸು ಅನ್ನು ಆಚರಿಸಲು ಬಂದ್ದಿರಂತೆ. ಇಂದಿಗೂ ದೇವಾಲಯದ ಗರ್ಭಗುಡಿಯಲ್ಲಿ ಲಿಂಗ ಸ್ವರೂಪಿಯಾಗಿದ್ದುಕೊಂಡೇ ತಮ್ಮ ತಪಸ್ಸನ್ನು ಮುಂದುವರೆಸುತ್ತಿದ್ದಾರೆ ಎಂಬುದು ಭಕ್ತರ ನಂಬಿಕೆಯಾಗಿದೆ.

ಇತಿಹಾಸ ಅಥವಾ ಜಾನಪದ

ಇತಿಹಾಸ ಅಥವಾ ಜಾನಪದ

ಈ ಮಹದೇಶ್ವರನು ಹುಲಿಯನ್ನು ತನ್ನ ವಾಹನವಾಗಿ ಮಾಡಿಕೊಂಡು ಬೆಟ್ಟಗಳನ್ನು ಸುತ್ತುತ್ತಾ ಇದ್ದ ಎಂದು ಇತಿಹಾಸ ಹಾಗೂ ಜಾನಪದ ಗಾಯನಗಳ ಮೂಲಕ ತಿಳಿದುಬರುತ್ತದೆ. ಮಹದೇಶ್ವರ ಬೆಟ್ಟದಲ್ಲಿ ಈಗಲೂ ಹುಲಿವಾಹನ ಮೇಲೆ ಮಹದೇಶ್ವರನ ಮರೆವಣಿಗೆ ಮಾಡುವ ಮೂರ್ತಿ ಇದೆ.

ಬೆಟ್ಟಗಳು

ಬೆಟ್ಟಗಳು

ಮಹದೇಶ್ವರ ಕಥಾನಕದಂತೆ ಅಲ್ಲಿನ ಏಳು ಬೆಟ್ಟಗಳನ್ನು ವಿವಿಧ ಜಾನಪದ ಹೆಸರುಗಳಿಂದ ಕರೆಯಲಾಗುತ್ತದೆ. 77 ಬೆಟ್ಟಗಳಲ್ಲಿ ಆನೆಮಲೆ, ಜೇನುಮಲೆ, ಕಾನುಮಲೆ, ಪಚ್ಚೆಮಲೆ, ಪವಳಮಲೆ, ಪೊನ್ನಾಚಿಮಲೆ, ಕೊಂಗುಮಲೆ ಬೆಟ್ಟಗಳಿಂದ ಸಂಪೂರ್ಣವಾಗಿ ಸುತ್ತುವರೆದಿದ್ದು ಈ ಸಂಪೂರ್ಣ ಪ್ರದೇಶವನ್ನು ಮಹದೇಶ್ವರ ಬೆಟ್ಟ ಎಂದು ಕರೆಯಲಾಗುತ್ತದೆ.

PC:Prof tpms

ಆದಿವಾಸಿ, ಗಿರಿ ಜನರು

ಆದಿವಾಸಿ, ಗಿರಿ ಜನರು

ಮಹದೇಶ್ವರನು ಈಗಿನ ಮಹದೇಶ್ವರ ದೇವಾಲಯದ ಪ್ರದೇಶದಲ್ಲೂ ಮಠವೊಂದನ್ನು ಸ್ಥಾಪಿಸಿದ್ದರು ಎಂಬ ಇತಿಹಾಸವಿದೆ. ಅಲ್ಲಿನ ಜನರನ್ನು ಪ್ರಮುಖವಾಗಿ ಆದಿವಾಸಿ, ಗಿರಿಜನರು ಎಂದು ಕರೆಯಲಾಗುತ್ತಿತ್ತು.

ಮಠ

ಮಠ

ಈ ಗಿರಿ ಜನರು ಹಾಗು ಆದಿವಾಸಿಗಳ ಸುಶಿಕ್ಷಿತ, ಸಭ್ಯ ಜನರನ್ನಾಗಿ ಪರಿರ್ವತಿಸುವಂತಹ ಕಾರ್ಯಗಳಿಗಾಗಿ ಮಠವನ್ನು ಮಹದೇಶ್ವರರು ಸ್ಥಾಪಿಸಿದರು ಎಂದು ನಂಬಲಾಗಿದೆ. ಇದೊಂದು ಲೋಕ ಕಲ್ಯಾಣಾರ್ಥ ಸೇವೆಯಲ್ಲಿ ಬಹು ಮುಖ್ಯವಾದುದು ಎಂದು ಭಕ್ತರು ನಂಬುತ್ತಾರೆ.

ಸಮೀಪದ ಪ್ರವಾಸಿ ತಾಣಗಳು

ಸಮೀಪದ ಪ್ರವಾಸಿ ತಾಣಗಳು

ಮಲೆ ಮಾದೇಶ್ವರ ದೇವಾಲಯದ ಸಮೀಪದಲ್ಲಿ ಇರುವ ಪ್ರವಾಸಿ ತಾಣಗಳೆಂದರೆ ಕುಮದೇಶ್ವರ ದೇವಾಲಯ, ಹರಂಗಿ ಡ್ಯಾಂ, ರಾಜಗಿರಿ ಕೋಟೆ ಇನ್ನೂ ಹಲವಾರು.

ತಲುಪುವ ಬಗೆ?

ತಲುಪುವ ಬಗೆ?

ಈ ಮೊದಲೇ ತಿಳಿಸಿದಂತೆ ಮಲೆ ಮಾದೇಶ್ವರ ಬೆಟ್ಟಕ್ಕೆ ಮೈಸೂರಿನಿಂದ 150 ಕಿ,ಮೀ ಹಾಗೂ ಬೆಂಗಳೂರಿನಿಂದ 210 ಕಿ,ಮೀ ದೂರದಲ್ಲಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more