Search
  • Follow NativePlanet
Share
» »ಶಿರಾಲಿಯ ಪ್ರಭಾವಿ ಮಹಾಮಾಯಾ ಹಾಗೂ ಗಣೇಶ

ಶಿರಾಲಿಯ ಪ್ರಭಾವಿ ಮಹಾಮಾಯಾ ಹಾಗೂ ಗಣೇಶ

By Vijay

ಕಡಲ ತೀರದ ಗ್ರಾಮವೊಂದರಲ್ಲಿ ನೆಲೆಸಿರುವ ಈ ಗಣೇಶ ಹಾಗೂ ದುರ್ಗಾದೇವಿ ಹಲವು ಮನೆತನಗಳ ಕುಲದೇವರುಗಳು. ವಿಶೇಷವಾಗಿ ಹೇಳಬೇಕೆಂದರೆ ಉತ್ತರ ಕನ್ನಡ ಹಾಗೂ ಸುತ್ತಮುತ್ತಲಿನ ಭಾಗಗಳಲ್ಲಿ ಸಾಮಾನ್ಯವಾಗಿ ವಾಸಿಸುತ್ತಿರುವ ನಾಯಕ್, ಕಾಮತ್, ಮಲ್ಯ, ಪುರಾಣಿಕ್, ಭಟ್, ಪ್ರಭು, ಕುಡ್ವಾ ಮುಂತಾದ ಕುಟುಂಬಗಳ ಪ್ರಧಾನ ದೇವರುಗಳು ಇವರು ಹಾಗೂ ಅವರು ನಂಬುವಂತೆ ಅಷ್ಟೆ ಶಕ್ತಶಾಲಿ.

ದಂಗುಬಡಿಸುವ ಉತ್ತರ ಕನ್ನಡ ಜಿಲ್ಲೆಯ ಪ್ರವಾಸಿ ಕೇಂದ್ರಗಳು

ಇವರು ನೆಲೆಸಿರುವ ಈ ದೇವಾಲಯವನ್ನು ಶಿರಾಲಿ ಗಣಪತಿ ಮಹಾಮಾಯಾ ದೇವಾಲಯ ಎಂದು ಕರೆಯಲಾಗುತ್ತದೆ. ಇಲ್ಲಿ ಮಹಾಮಾಯಾ ಎಂದರೆ ಪಾರ್ವತಿಯ ಅವತಾರವಾದ ದುರ್ಗೆಯೆ ಆಗಿದ್ದಾಳೆ. ಈ ದುರ್ಗೆಯನ್ನೆ ಇಲ್ಲಿನ ಜನರು ಶಾಂತಾದುರ್ಗಾ ಎಂದು ಕರೆದು ಭಕ್ತಿಯಿಂದ ಪೂಜಿಸುತ್ತಾರೆ. ಈ ದೇವಾಲಯಕ್ಕೆ ನಡೆದುಕೊಳ್ಳುವ ಜನರು ಸುಮಾರು 400-500 ವರ್ಷಗಳ ಹಿಂದೆ ಗೋವಾದಿಂದ ವಲಸೆ ಬಂದು ಇಲ್ಲಿ ನೆಲೆಸಿದವರಾಗಿದ್ದಾರೆ.

ಶಿರಾಲಿಯ ಪ್ರಭಾವಿ ಮಹಾಮಾಯಾ ಹಾಗೂ ಗಣೇಶ

ಮಹಾಮಾಯಾ ಅಮ್ಮನವರು, ಚಿತ್ರಕೃಪೆ: Premnath Kudva

ಇತಿಹಾಸದ ಪ್ರಕಾರ, ಗೋವಾದ ಎಲ್ಲಾ ಎಂಬಲ್ಲಿ ಮಹಾಗಣಪತಿಯನ್ನೂ, ಶಾಂತಾದುರ್ಗಾ ದೇವಿಯನ್ನು ಜನರು ಆರಾಧಿಸುತ್ತಿದ್ದರು. ನಂತರ 16 ನೇಯ ಶತಮಾನದ ಸಮ್ದರ್ಭದಲ್ಲಿ ಗೋವಾದ ಕಡಲ ತೀರಗಳಿಗೆ ಕಾಲಿಟ್ಟ ಪೋರ್ಚುಗೀಸರು ಇಲ್ಲಿನ ದೇವಾಲಯಗಳನ್ನು ಹಾಳ ಮಾಡತೊಡಗಿದರು. ಇದರಿಂದ ಚಿಂತೆಗೊಳಗಾದ ಜನ ತಮ್ಮ ದೇವರುಗಳನ್ನು ಇವರು ನಾಶ ಮಾಡಬಹುದೆಂದು ಯೋಚಿಸಿ ಅವುಗಳನ್ನು ಸ್ಥಳಾಂತರಿಸಿದರು.

ಹೀಗೆ ಪೋರ್ಚುಗೀಸರ ದಬ್ಬಾಳಿಕೆಯನ್ನು ಸಹಿಸಲಾಗದೆ ಗೌಡ ಸಾರಸ್ವತ ಸಮುದಾಯಕ್ಕೆ ಸೇರಿದ ಅನೇಕ ಜನರು ಗೋವಾ ತೊರೆದು ಕರ್ನಾಟಕ ಪ್ರವೇಶಿಸಿ ನೆಲೆಸಿದರೆಂದು ತಿಳಿದುಬರುತ್ತದೆ. ಮೊದ ಮೊದಲಿಗೆ ಅವರಿಗೆ ಇನ್ನೂ ಭಯವಿದ್ದುದರಿಂದ ಸ್ಥಳೀಯ ದೇವಾಲಯದಲ್ಲಿ ತಮ್ಮ ಕುಟುಂಬ ದೇವರುಗಳ ವಿಗ್ರಹಗಳನ್ನಿರಿಸಿ ಪೂಜಿಸಲಾರಂಭಿಸಿದರಂತೆ.

ಶಿರಾಲಿಯ ಪ್ರಭಾವಿ ಮಹಾಮಾಯಾ ಹಾಗೂ ಗಣೇಶ

ಮಹಾಗಣಪತಿ, ಚಿತ್ರಕೃಪೆ: Premnath Kudva

ನಂತರ ಸಮಯ ಕಳೆದ ಹಾಗೆ ಅವರಲ್ಲಿ ಭದ್ರತೆಯ ನಂಬಿಕೆಯುಂಟಾದಾಗ ಶಿರಾಲಿ ಗ್ರಾಮದಲ್ಲಿ ದೇವಾಲಯವನ್ನು ನಿರ್ಮಿಸಿ ದೇವರುಗಳನ್ನು ಪ್ರತಿಷ್ಠಾಪಿಸಿ ಪೂಜಿಸಲಾರಂಭಿಸಿದರು ಎಂದು ಹೇಳಲಾಗುತ್ತದೆ. ಹೀಗೆ ಆ ಸಮಯದಿಂದಲೂ ಇಲ್ಲಿ ಅವ್ಯಾಹತವಾಗಿ ಪೂಜೆ-ಪುನಸ್ಕಾರಗಳು ನಡೆಯುತ್ತಲೆ ಇವೆ.

ಶಿರಾಲಿಯ ಪ್ರಭಾವಿ ಮಹಾಮಾಯಾ ಹಾಗೂ ಗಣೇಶ

ಶಿರಾಲಿ ಕಡಲತೀರ, ಚಿತ್ರಕೃಪೆ: Nishant puranik

ಪ್ರಸ್ತುತ ಶಿರಾಲಿ ಗ್ರಾಮವು ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನಲ್ಲಿದೆ. ಭಟ್ಕಳ ಪಟ್ಟಣದಿಂದ ಸುಮಾರು ಹತ್ತು ನಿಮಿಷಗಳಷ್ಟು ಪ್ರಯಾಣಾವಧಿಯ ದೂರದಲ್ಲಿ ಈ ದೇವಾಲಯವು ಸ್ಥಿತವಿದೆ. ಇಂದು ಧಾರ್ಮಿಕ ಮಹತ್ವ ಪಡೆದಿರುವ ಈ ದೇವಾಲಯವು ಸಾಕಷ್ಟು ಜನರಿಂದ ಭೇಟಿ ನೀಡಲ್ಪಡುತ್ತದೆ. ಅಲ್ಲದೆ, ವಾರ್ಷಿಕವಾಗಿ ಇಲ್ಲಿ ಉತ್ಸವ, ನವರಾತ್ರಿ ಹಾಗೂ ಗಣೇಶ ಚತುರ್ಥಿಗಳನ್ನು ಬಲು ಅದ್ದೂರಿಯಿಂದ ಆಚರಿಸಲಾಗುತ್ತದೆ.

ನಿಮಗೆ ತಿಳಿದಿರಬೇಕಾದ ಶಕ್ತಶಾಲಿ ಗಣೇಶನ ದೇವಾಲಯಗಳು

ಇನ್ನೊಂದು ವಿಶೇಷವೆಂದರೆ ಶಿರಾಲಿಯು ಕರಾವಳಿ ಗ್ರಾಮವಾಗಿರುವುದರಿಂದಲೂ ಸಾಕಷ್ಟು ಜನಪ್ರಿಯತೆ ಪಡೆದಿದೆ. ಶಿರಾಲಿ ಕಡಲ ತೀರ ಒಂದು ಅದ್ಬುತ ಪ್ರವಾಸಿ ಆಕರ್ಷಣೆಯಾಗಿದ್ದು ಸುತ್ತಮುತ್ತಲಿನ ಸಾಕಷ್ಟು ಜನರಿಂದ, ಪ್ರವಾಸಿಗರಿಂದ ಸಾಮಾನ್ಯವಾಗಿ ಭೇಟಿ ನೀಡಲ್ಪಡುತ್ತದೆ. ಬಟ್ಕಳದಲ್ಲಿ ತಂಗಲು ಹೋಟೆಲುಗಳಿದ್ದು ಅಲ್ಲಿಂದ ಸ್ಥಲೀಯವಾಗಿ ಬಾಡಿಗೆ ವಾಹನಗಳ ಮೂಲಕ ಈ ದೇವಾಲಯವನ್ನು ದರ್ಶಿಸಬಹುದು.

ಭಟ್ಕಳ ಪರಿಚಯ

ಕಾರವಾರಕ್ಕಿರುವ ರೈಲುಗಳು

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more