Search
  • Follow NativePlanet
Share
» »ಕಮಲ ದೇವಾಲಯ ಏನಿದರ ವಿಶೇಷತೆ?

ಕಮಲ ದೇವಾಲಯ ಏನಿದರ ವಿಶೇಷತೆ?

By Vijay

ಇದೊಂದು ಕಮಲದಾಕಾರದಲ್ಲಿರುವ ದೇವಾಲಯ. ಅರೆ ಏನಪ್ಪಾ, ಇದಕ್ಕೂ ರಾಷ್ಟ್ರೀಯ ಪಕ್ಷವೊಂದಕ್ಕೂ ನಂಟಿದೆಯೆ ಎಂದು ನೀವು ಭಾವಿಸುತ್ತಿದ್ದೀರಾ? ಹಾಗಾದರೆ ಅದು ತಪ್ಪು. ಆ ರೀತಿಯ ಯಾವ ಸಂಬಂಧವೂ ಇಲ್ಲ. ಬದಲಿಗೆ ಕಮಲಾದಾಕಾರದಲ್ಲಿ ಬಲು ಅದ್ಭುತವಾಗಿ ನಿರ್ಮಿಸಲಾದ ಭಾರತದಲ್ಲೆ ಇರುವ ಅತಿ ವಿಶಿಷ್ಟ ದೇವಾಲಯ ಇದಾಗಿದೆ.

ಜನಪ್ರೀಯವಾಗಿ ಇದನ್ನು ಲೋಟಸ್ ಟೆಂಪಲ್ ಎಂಬ ಹೆಸರಿನಿಂದಲೆ ಜನರು ಇದನ್ನು ಗುರುತಿಸುತ್ತಾರೆ. ಇದನ್ನು ದೂರದಿಂದ ನೋಡಿದಾಗ ಆಸ್ಟ್ರೇಲಿಯಾ ದೇಶದ ಸಿಡ್ನಿ ನಗರದಲ್ಲಿರುವ ಸಿಡ್ನಿ ಒಪೆರಾ ಹೌಸ್ ಕಟ್ಟಡದ ರಿತಿಯಲ್ಲೂ ಸಹ ಕಂಡುಬರುವುದು ವಿಶೇಷ.

ದೆಹಲಿಯ ಮೂಲೆ ಮೂಲೆಗಳೂ ವಿಶಿಷ್ಟ ವಿಭಿನ್ನ!

ಇನ್ನೂ ಈ ದೇವಾಲಯವು ತನ್ನ ವಿಶಿಷ್ಟ ವಾಸ್ತುಶೈಲಿಯಿಂದ ಲಕ್ಷಾನುಗಟ್ಟಲೆ ಸಂಖ್ಯೆಯ ಜನರ ಮನ ಗೆದ್ದಿದೆ. ಅಷ್ಟೆ ಅಲ್ಲ ಇದರ ಈ ವಿಶಿಷ್ಟ ವಿನ್ಯಾಸಕ್ಕಾಗಿ ಹಲವು ಪ್ರಶಸ್ತಿ-ಪುರಸ್ಕಾರಗಳೂ ಸಹ ದೊರೆತಿವೆ. ಹಲವಾರು ವಿಶೇಶತೆಗಳನ್ನು ಈ ದೇವಾಲಯ ಹೊಂದಿದೆ. ಹಾಗಾದರೆ ಬನ್ನಿ, ಪ್ರಸ್ತುತ ಲೇಖನದ ಮೂಲಕ ಈ ಮಂದಿರದ ಕುರಿತು ಮಾಹಿತಿ ತಿಳಿಯೋಣ.

ಕಮಲ ದೇವಾಲಯ

ಕಮಲ ದೇವಾಲಯ

ಭಾರತದ ರಾಜಧಾನಿ ನಗರವಾದ ದೆಹಲಿಯಲ್ಲಿ ಈ ಸುಂದರ ಕಮಲದ ಹೂವಿನಾಕಾರದ ಈ ದೇವಾಲಯವಿದೆ. ಇದನ್ನು ಆರಾಧನೆಯ ಬಹಾಯಿ ಮನೆ ಅಥವಾ ಬಹಾಯಿ ಮಂದಿರ ಎಂಬ ಹೆಸರಿನಿಂದಲೂ ಸಹ ಕರೆಯುತ್ತಾರೆ.

ಚಿತ್ರಕೃಪೆ: Atishayphotography

ಆಕರ್ಷಕ

ಆಕರ್ಷಕ

ತನ್ನ ಹೂವಿನಂತಹ ಆಕಾರದ ಕಾರಣದಿಂದಾಗಿ ಈ ದೇವಾಲಯವನ್ನು ಲೋಟಸ್ ಟೆಂಪಲ್ ಅಥವಾ ಕಮಲ ದೇವಾಲಯ ಎಂದು ಕರೆಯುತ್ತಾರೆ. ಇದು ದೆಹಲಿಯಲ್ಲಿ ನೋಡಬಹುದಾದ ಪ್ರಮುಖ ಪ್ರವಾಸಿ ಆಕರ್ಷಣೆಗಳ ಪೈಕಿ ಒಂದಾಗಿದೆ.

ಚಿತ್ರಕೃಪೆ: flowcomm

ಉಪಖಂಡ

ಉಪಖಂಡ

ಈ ದೇವಾಲಯವನ್ನು 1986 ರಲ್ಲಿ ಸಂಪೂರ್ವವಾಗಿ ಕಟ್ಟಿಮುಗಿಸಲಾಯಿತು ಹಾಗೂ ಇದು ಇಂದು ಭಾರತ ಉಪಖಂಡದಲ್ಲೆ ಮಾತೃತ್ವ ಸಾರುವ ಮಂದಿರವಾಗಿ ಜನಪ್ರೀಯವಾಗಿದೆ. ವಿಶೇಷವೆಂದರೆ ಇದು ಬಹಾಯಿ ಸಿದ್ಧಾಂತದ ಮೇಲೆ ನಿರ್ಮಿಸಲಾದ ಆಕರ್ಷಕ ಮಂದಿರವಾಗಿದೆ.

ಚಿತ್ರಕೃಪೆ: IKHazarika

ಬಾಹಾಉಲ್ಲಾ

ಬಾಹಾಉಲ್ಲಾ

ಬಹಾಯ್ ಎನ್ನುವುದು ಒಂದು ನಂಬಿಕೆಯಾಗಿದ್ದು ಇದು ಇದರದ್ದೆ ಆದ ಸಿದ್ಧಾಂತವನ್ನು ಹೊಂದಿದೆ. ಬಾಹಾಉಲ್ಲಾ ಎಂಬ ಪರ್ಷಿಯನ್ ವ್ಯಕ್ತಿಯಿಂದ ಉದಯಿಸಿದ ಸಿದ್ದಾಂತ ಇದಾಗಿದೆ. ಬಹಾಉಲ್ಲಾ ಮೂರು ಅಂಶಗಳ ಸಿದ್ಧಾಂತದ ಪ್ರತಿಪಾದಕ. ಒಂದು ದೇವನೊಬ್ಬ, ಎರಡು ಎಲ್ಲ ಧರ್ಮಗಳ ಸಾರ ಒಂದೆ ಹಾಗೂ ಎಲ್ಲ ಮನುಷ್ಯರು ಸಮಾನರು.

ಚಿತ್ರಕೃಪೆ: C Jaideep

ಜೈಲುವಾಸ

ಜೈಲುವಾಸ

ಇವನ ಈ ರೀತಿಯ ಬೋಧನೆಗಳು ಅವನನ್ನು ಗಡಿ ಪಾರು ಆಗುವಂತೆ ಮಾಡಿತು. ಕೊನೆಯದಾಗಿ ಜೈಲವಾಸ ಅನುಭವಿಸಿ ಅಲ್ಲಿಯೆ ತೀರಿಕೊಂಡನು. ತದ ನಂತರ ಅವನ ಮಗ ಈ ಸಿದ್ಧಾಂತವನ್ನು ಪಸರಿಸಿದನು. ಕ್ರಮೇಣವಾಗಿ ಯುರೋಪ್ ಹಾಗೂ ಅಮೇರಕಾಗಳಲ್ಲಿ ಇದಕ್ಕೆ ಅನುಯಾಯಿಗಳು ಹುಟ್ಟಿಕೊಂಡರು.

ಚಿತ್ರಕೃಪೆ: Jorge Láscar

ಎಲ್ಲರೂ ಒಂದೆ

ಎಲ್ಲರೂ ಒಂದೆ

ಆ ಬಹಾಯಿ ಸಿದ್ಧಾಂತದ ಮೇಲೆಯೆ ಈ ಕಮಲ ದೇವಾಲಯವನ್ನು ನಿರ್ಮಿಸಲಾಗಿದೆ. ಇಲ್ಲಿ ಯಾವುದೆ ಧರ್ಮದವರಾಗಲಿ ಅಥವಾ ಜಾತಿಯವರಾಗಲಿ ಯಾವುದೆ ಅಡೆ ತಡೆಗಳಿಲ್ಲದೆ ಏಕ ಸಮಾನ ರೀತಿಯಲ್ಲಿ ಪ್ರವೇಶಿಸಬಹುದಾಗಿದೆ. ಇದು ಇದರ ಪ್ರಮುಖ ವಿಶಿಷ್ಟತೆ.

ಚಿತ್ರಕೃಪೆ: Jeff3000

ಈ ಸಿದ್ಧಾಂತದಲ್ಲಿದೆ

ಈ ಸಿದ್ಧಾಂತದಲ್ಲಿದೆ

ಬಹಾಯಿ ಸಿದ್ಧಾಂತದಲ್ಲಿ ದೈವದ ಸಂದೇಶಗಾರರನ್ನಾಗಿ ಮೊಸೆಸ್, ಜಿಸಸ್, ಮೊಹ್ಮದ್ ಹಾಗೂ ಕೃಷ್ಣ ಮತ್ತು ಬುದ್ಧರನ್ನೂ ಸಹ ಉಲ್ಲೇಖಿಸಲಾಗುತ್ತದೆ. ಜನಸೇವೆ, ಪ್ರಾರ್ಥನೆ ದವಕ್ಕೆ ಹತ್ತಿರವಾಗುವ ಮಾರ್ಗಗಳೆಂದು ಈ ಸಿದ್ಧಾಂತ ಬೋಧಿಸುತ್ತದೆ. ಹಾಗಾಗಿ ಈ ದೇವಾಲಯಕ್ಕೆ ಭೇಟಿ ನೀಡುವವರು ತಮ್ಮ ತಮ್ಮ ಮತಾನುಸಾರ ಪ್ರಾರ್ಥನೆಗಳನ್ನೂ ಸಹ ಮಾಡಬಹುದಾಗಿದೆ.

ಚಿತ್ರಕೃಪೆ: LASZLO ILYES

ಆರಾಧನಾ ಕಟ್ಟಡ

ಆರಾಧನಾ ಕಟ್ಟಡ

ಇಲ್ಲಿ ಎಲ್ಲಾ ಧರ್ಮಗಳ ಜನರು ಪರಮಾತ್ಮನನ್ನು ಯಾವುದೆ ಹೆಸರು, ಜಾತಿ, ಮತ, ಪಂಗಡಗಳಿಲ್ಲದೆ ಹಾಗೂ ಯಾವುದೆ ಕಟ್ಟುಪಾಡುಗಳಿಲ್ಲದೆ ಪೂಜಿಸಬಹುದಾಗಿದೆ. ಈ ರಿತಿಯ ಪ್ರಾರ್ಥನಾ ಮಂದಿರವೆ ಆರಾಧನಾ ಕಟ್ಟಡದ ನಿಜವಾದ ಅರ್ಥವೆಂದು ಬಹಾಯಿ ಕಾನೂನು ಸ್ಪಷ್ಟವಾಗಿ ನಿರೂಪಿಸುತ್ತದೆ.

ಚಿತ್ರಕೃಪೆ: Shenoypreetham

ಧ್ಯಾನ ಮಾಡಬಹುದು!

ಧ್ಯಾನ ಮಾಡಬಹುದು!

ಇಲ್ಲಿ ಪ್ರವೇಶಿಸುವವರು ಬಹಾಯಿ ಧರ್ಮದ ಪುಸ್ತಕಗಳು ಅಥವಾ ಬೇರೆ ಬೇರೆ ಧರ್ಮಗಳ ಪುಸ್ತಕ್ಕಗಳನ್ನು ಕುಳಿತು ಓದಬಹುದು. ತಮ್ಮ ತಮ್ಮ ಮತಕ್ಕನುಸಾರವಾಗಿ ಮಂತ ಪಠಣ, ಧ್ಯಾನ ಮುಂತಾದವುಗಳನ್ನೂ ಸಹ ಮಾಡಬಹುದು.

ಚಿತ್ರಕೃಪೆ: Ravin0

ಪ್ರವಚನ ಮಾಡುವ ಹಾಗಿಲ್ಲ

ಪ್ರವಚನ ಮಾಡುವ ಹಾಗಿಲ್ಲ

ಆದರೆ ಒಳಗಡೆ ಯಾವುದೆ ರೀತಿಯ ವಾದ್ಯಗಳನ್ನು ಬಾರಿಸುವುದಾಗಲಿ ಅಥವಾ ಗಾಯನ ನೃತ್ಯಗಳನ್ನು ಮಾಡುವುದಾಗಲಿ ಮಾಡಕೂಡದು. ಅಲ್ಲದೆ ಧಾರ್ಮಿಕ ಪ್ರವಚನಗಳನ್ನೂ ಸಹ ಯಾರೂ ಇಲ್ಲಿ ನೀಡುವಂತಿಲ್ಲ. ಈ ರೀತಿಯಾಗಿ ಬಹಾಯಿ ಕಾನೂನು ಸ್ಪಷ್ಟಪಡಿಸುತ್ತದೆ. ಯಾವುದೆ ಧರ್ಮದ ಸಮಾರಂಭಗಳನ್ನು ಆಚರಿಸುವಂತೆಯೂ ಇಲ್ಲ.

ಚಿತ್ರಕೃಪೆ: Vinayaraj

ಬಹಾಯಿ ಮಂದಿರಗಳಿವೆ

ಬಹಾಯಿ ಮಂದಿರಗಳಿವೆ

ಬಹಾಯಿ ಸಿದ್ಧಾಂತದ ಮೇಲೆ ರೂಪಿತವಾದ ಅಥವಾ ಅನುಸರಿಸುವ ಹಲವಾರು ರಚನೆಗಳನ್ನು ಜಗತ್ತಿನಾದ್ಯಂತ ಕಾಣಬಹುದು. ಆ ಸಿದ್ಧಾಂತದಲ್ಲಿ ಹೇಳಲಾಗಿರುವಂತೆ ಹಾಗೂ ಈ ಕಮಲದ ದೇವಾಲಯವೂ ಸೇರಿದಂತೆ, ಎಲ್ಲಾ ಬಹಾಯಿ ಪೂಜೆಯ ಮನೆಗಳೂ, ಕೆಲವು ವಾಸ್ತಶಿಲ್ಪದ ಮೂಲ ವಸ್ತುಗಳನ್ನು ಹಂಚಿಕೊಳ್ಳುತ್ತವೆ.

ಚಿತ್ರಕೃಪೆ: Akshatha Inamdar

ಪರಿಪಾಲಿಸುತ್ತದೆ

ಪರಿಪಾಲಿಸುತ್ತದೆ

ಅಲ್ಲದೆ, ಬಹಾಯಿಗಳಿಗೆಂದೇ ವಿಶೇಷವಾಗಿ ಬರೆದಿಟ್ಟ ಕಾನೂನುಗಳನ್ನು ಅನುಸರಿಸುತ್ತವೆ. ಅವುಗಳಲ್ಲಿ ಕೆಲವು ಬಹಾಯಿ ಧರ್ಮ ಗ್ರಂಥಗಳಲ್ಲಿ ನಿಖರವಾಗಿ ನಮೂದಿಸಲ್ಪಟ್ಟಿದ್ದು ಅದರ ಪ್ರಕಾರ ಪೂಜೆ ಮನೆಗಳು ಒಂಭತ್ತು ಭಾಗಗಳುಳ್ಳ ವೃತ್ತಾಕಾರ ಆಕಾರವನ್ನು ಹೊಂದಿರುವುದು ಅವಶ್ಯವೆಂದು, ಅದು ಆರಾಧನೆಯ ಮನೆಯ ಅಗತ್ಯವಾದ ವಾಸ್ತುಶಿಲ್ಪದ ಗುಣ ಲಕ್ಷಣವೆಂದು ಹೇಳಿದೆ.

ಚಿತ್ರಕೃಪೆ: Akshatha Inamdar

ಆದರೆ ಕಡ್ಡಾಯವೇನಿಲ್ಲ!

ಆದರೆ ಕಡ್ಡಾಯವೇನಿಲ್ಲ!

ಕಮಲದ ದೇವಾಲಯ ಸೇರಿದಂತೆ ಪ್ರಚಲಿತದಲ್ಲಿರುವ ಎಲ್ಲಾ ಬಹಾಯಿ ಆರ್ಚನೆಯ ಕಟ್ಟಡಗಳು ಒಂದು ಗುಮ್ಮಟವನ್ನು ಹೊಂದಿವೆಯಾದರೂ ಅವು ಈ ರೀತಿಯಾಗಿ ಗುಮ್ಮಟ ಹೊಂದಲೇಬೇಕೆಂಬ ಯಾವ ನಿಯಮಗಳೂ ಬಹಾಯಿ ಕಾನೂನಿನಲ್ಲಿ ಹೇಳಲಾಗಿಲ್ಲ.

ಚಿತ್ರಕೃಪೆ: Wiki-uk

ಸಾವಿರಕ್ಕೂ ಅಧಿಕ ಜನರು

ಸಾವಿರಕ್ಕೂ ಅಧಿಕ ಜನರು

ದೆಹಲಿಯ ಈ ಕಮಲದ ದೇವಾಲಯವು ಸಾಕಷ್ಟು ವಿಶಾಲವಾಗಿದ್ದು ನೋಡಲು ಅತ್ಯಾಕರ್ಷಕವಾಗಿ ಕಾಣುತ್ತದೆ. ಅದರಲ್ಲೂ ವಿಶೇಷವಾಗಿ ದೀಪಾಲಂಕಾರಗಳನ್ನು ಮಾಡಿದಾಗ ಒಂದು ಕ್ಷಣ ಇದು ನೋಡುಗರನ್ನು ಮೈಮರೆಯುವಂತೆ ಮಾಡುತ್ತದೆ. ಸಾವಿರಕ್ಕೂ ಅಧಿಕ ಜನರು ಹಿಡಿಸುವ ಸಾಮರ್ಥ್ಯವಿರುವ ದೇವಾಲಯ ಇದಾಗಿದೆ.

ಚಿತ್ರಕೃಪೆ: C Jaideep

ಒಂಭತ್ತು ರಚನೆಗಳು

ಒಂಭತ್ತು ರಚನೆಗಳು

ಕಮಲದ ದಳಗಳಂತೆ ಒಂಭತ್ತು ರಚನೆಗಳು ದೇವಾಲಯಕ್ಕೆ ಹೆಚ್ಚಿನ ಮೆರುಗನ್ನು ನೀಡುತ್ತದೆ. ದೂರದಿಂದಲೆ ಇದು ನೋಡುಗರನ್ನು ಆಕರ್ಷಿಸಿ ಬಿಡುತ್ತದೆ. ರಾಷ್ಟ್ರೀಯ ಕೇಂದ್ರಾಡಳಿತ ಪ್ರದೇಶವಾದ ದೆಹಲಿಯಲ್ಲಿ, ಬಹಾಪುರ್ ಎಂಬ ಹಳ್ಳಿಯಲ್ಲಿ ಆ ಕಮಲದ ದೇವಸ್ಥಾನದ ತಾಣವಿದೆ.

ಚಿತ್ರಕೃಪೆ: India edit1

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more