Search
  • Follow NativePlanet
Share
» »ಕದ್ದಿರಾಂಪುರದ ಮುರುಗನ ದೇವಾಲಯ

ಕದ್ದಿರಾಂಪುರದ ಮುರುಗನ ದೇವಾಲಯ

By Vijay

ತಮಿಳುನಾಡು, ಕೇರಳದಲ್ಲೆಲ್ಲ ಮುರುಗನ್ ಎಂದೆ ಪ್ರಸಿದ್ಧವಾಗಿರುವ ದೇವರನ್ನು ಕರ್ನಾಟಕ ಭಾಗದಲ್ಲಿ ಸಾಮಾನ್ಯವಾಗಿ ಸುಬ್ರಹ್ಮಣ್ಯ ಅಥವಾ ಶಣ್ಮುಖ ದೇವರೆಂದು ಕರೆಯುತ್ತಾರೆ. ಕರ್ನಾಟಕದಲ್ಲಿ ಮುರುಗನ್ ದೇವರು ಕುಕ್ಕೆಯಲ್ಲಿ ಶ್ರೀ ಸುಬ್ರಹ್ಮಣನಾಗಿ, ಬೆಂಗಳೂರಿನ ಬಳಿ ಘಾಟಿ ಸುಬ್ರಹ್ಮಣ್ಯನಾಗಿ ನೆಲೆಸಿದ್ದಾನೆ. ಲೇಖನದ ಚಿತ್ರಗಳಿಗೆ ಚಿತ್ರಕೃಪೆ: Dr Murali Mohan Gurram

ನಿಮಗಿಷ್ಟವಾಗಬಹುದಾದ : ಪ್ರಸಿದ್ಧಿ ಪಡೆಯುತ್ತಿರುವ ಘಾಟಿ ಸುಬ್ರಹ್ಮಣ್ಯ

ಕದ್ದಿರಾಂಪುರದ ಮುರುಗನ ದೇವಾಲಯ

ಆದರೆ ಮುರುಗನ್ ದೇವಾಲಯವೆಂದೆ ಹೆಸರುಗಳಿಸಿರುವ ಒಂದು ಚಿಕ್ಕ ಹಾಗೂ ಸುಂದರ ದೇವಾಲಯವೊಂದು ಕರ್ನಾಟಕದ ವಿಶ್ವ ಪ್ರಖ್ಯಾತ ತಾಣವಾದ ಹಂಪಿ ಬಳಿಯಲ್ಲಿದೆ. ಹೌದು, ಬಳ್ಳಾರಿ ಜಿಲ್ಲೆಯ ಹೊಸ್ಪೇಟ್ (ಹೊಸಪೇಟೆ) ಯಲ್ಲಿರುವ ಕದ್ದಿರಾಂಪುರ ಎಂಬ ಹಳ್ಳಿಯಲ್ಲಿದೆ. ಇದು ಒಂದು ಸಾಮಾನ್ಯ ದೇವಾಲಯವದರೂ ಮುರುಗನ್ ನೆಲೆಸಿರುವ ವಿಶೇಷ ದೇವಾಲಯವಾಗಿದೆ.

ನಿಮಗಿಷ್ಟವಾಗಬಹುದಾದ : ಕಾಲದ ಕಪಿಮುಷ್ಠಿಯಲಿ ಕಳೆದುಹೋದ ವಿಜಯನಗರ

ಕದ್ದಿರಾಂಪುರದ ಮುರುಗನ ದೇವಾಲಯ

ಇದು ಪುರಾತನವಲ್ಲದ ದೇವಾಲಯವಾದರೂ ತನ್ನ ಅದ್ಭುತ ಕಲಾತ್ಮಕ ಶಿಲ್ಪಕಲೆಗಳಿಂದ ಜನರನ್ನು ಆಕರ್ಷಿಸುತ್ತದೆ. ಪುರಾಣ ಕಥೆಗಳ ಹಲವಾರು ಪ್ರಸಂಗಗಳನ್ನು ಸರಳವಾಗಿ ತಿಳಿಸುವಂತೆ ಈ ದೇವಾಲಯದ ರಚನೆಯಲ್ಲಿ ಶಿಲ್ಪ ಕಲೆಗಳನ್ನು ಕಲಾತ್ಮಕವಾಗಿ ಕೆತ್ತಲಾಗಿದೆ.

ನಿಮಗಿಷ್ಟವಾಗಬಹುದಾದ : ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ

ಕದ್ದಿರಾಂಪುರದ ಮುರುಗನ ದೇವಾಲಯ

ಹಂಪಿಗೆ ಭೇಟಿ ನೀದುವ ಸಂದರ್ಭದಲ್ಲಿ ಹೊಸಪೇಟೆ ಮಾರ್ಗವಾಗಿ ಕದ್ದಿರಾಂಪುರ ಹಳ್ಳಿಗೆ ಭೇಟಿ ನೀಡಿ ಈ ದೇವಾಲಯ ನೋಡಿಕೊಂಡು ಹೋಗಬಹುದು. ಕದ್ದಿರಾಂಪುರವು ಚಿಕ್ಕದಾದ ಹಳ್ಳಿಯಾಗಿದ್ದು ಹೆಚ್ಚು ಜನಸಂಖ್ಯೆ ಹೊಂದಿಲ್ಲ. ಹಂಪಿ ಗ್ರಾಮವು ಇದರ ಗ್ರಾಮ ಪಂಚಾಯತಿಯ ಕೇಂದ್ರವಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X