Search
  • Follow NativePlanet
Share
» »ಎಂದಿಗೂ ಕೈಬಿಡದ ಸಾಲಿಗ್ರಾಮ ಗುರುನರಸಿಂಹ

ಎಂದಿಗೂ ಕೈಬಿಡದ ಸಾಲಿಗ್ರಾಮ ಗುರುನರಸಿಂಹ

By Vijay

ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ನೆಲೆಸಿರುವ ಕೂಟ ಬ್ರಾಹ್ಮಣರ ಪ್ರಮುಖ ದೇವರಾಗಿ ಶ್ರೀ ಗುರು ನರಸಿಂಹರನ್ನು ಆರಾಧಿಸಲಾಗುತ್ತದೆ. ವಿಶೇಷವೆಂದರೆ ಇಲ್ಲಿ ವಿಷ್ಣುವಿನ ಅವತಾರವಾದ ನರಸಿಂಹನನ್ನು ಕೂಟ ಬ್ರಾಹ್ಮಣರು ಗುರುವಾಗಿಯೂ, ಕುಲದೇವರಾಗಿಯೂ ಭಕ್ತಿಯಿಂದ ಪೂಜಿಸುತ್ತಾರೆ. ಈ ಸಮುದಾಯದವರ ಮುಖ್ಯ ಧಾರ್ಮಿಕ ಕ್ಷೇತ್ರವಾಗಿ ಸಾಲಿಗ್ರಾಮವು ಸಾಕಷ್ಟು ಮಹತ್ವ ಪಡೆದಿದೆ.

ಅದ್ಭುತ ಪ್ರವಾಸಿ ಆಕರ್ಷಣೆಗಳ ಉಡುಪಿ ಜಿಲ್ಲೆ

ಸಾಲಿಗ್ರಾಮವು ತನ್ನಲ್ಲಿರುವ ಗುರು ನರಸಿಂಹ ದೇವಾಲಯದಿಂದಾಗಿಯೆ ಸಾಕಷ್ಟು ಧಾರ್ಮಿಕ ಮಹತ್ವ ಪಡೆದ ಕ್ಷೇತ್ರವಾಗಿದೆ. ಮುಖ್ಯವಾಗಿ ಸಾಲಿಗ್ರಾಮದ ಕಲ್ಲಿನಲ್ಲಿ ನರಸಿಂಹನು ಎಡಗೈನಲ್ಲಿ ಶಂಖವನ್ನು ಅಲಗೈನಲ್ಲಿ ಹಾಗೂ ಚಕ್ರವನ್ನು ಹಿಡಿದು ಯೋಗ ಮುದ್ರೆಯಲ್ಲಿ ನಿಂತಿರುವುದು ವಿಶೇಷವಾಗಿದೆ. ಈ ಯೋಗಾನಂದ ನರಸಿಂಹನ ವಿಗ್ರಹವು ಕರ್ನಾಟಕದಲ್ಲಿರುವ ಅತಿ ಪ್ರಾಚೀನ ವಿಗ್ರಹಗಳ ಪೈಕಿ ಒಂದಾಗಿದೆ.

ಎಂದಿಗೂ ಕೈಬಿಡದ ಸಾಲಿಗ್ರಾಮ ಗುರುನರಸಿಂಹ

ಸಾಂದರ್ಭಿಕ ಚಿತ್ರ, ಚಿತ್ರಕೃಪೆ: Harshanti

ಸುಮಾರು ಸಾವಿರ ವರ್ಷಗಳ ಇತಿಹಾಸವಿರುವ ಸಾಲಿಗ್ರಾಮ ಗುರು ನರಸಿಂಹ ದೇವಾಲಯದಿಂದಾಗಿಯೆ ಈ ಸ್ಥಳಕ್ಕೆ ಸಾಲಿಗ್ರಾಮ ಎಂಬ ಹೆಸರು ಬಂದಿದೆ. ಭೌಗೋಳಿಕವಾಗಿ ಉಡುಪಿ ಜಿಲ್ಲೆಯಲ್ಲಿರುವ ಸಾಲಿಗ್ರಾಮವು ಉಡುಪಿ ಹಾಗೂ ಕುಂದಾಪುರದ ಮಧ್ಯದಲ್ಲಿದ್ದು ಉಡುಪಿಯಿಂದ ಕೇವಲ 21 ಕಿ.ಮೀ ಗಳಷ್ಟು ದೂರದಲ್ಲಿದೆ. ತೆರಳಲು ಉಡುಪಿಯಿಂದ ಬಸ್ಸುಗಳು ದೊರೆಯುತ್ತವೆ.

ಇನ್ನುಳಿದಂತೆ ಸಾಲಿಗ್ರಾಮದ ಕ್ಷೇತ್ರ ಮಹಿಮೆಯು ಅಪಾರವಾಗಿದೆ. ಪದ್ಮ ಪುರಾಣದ ಪುಷ್ಕರ ಖಂಡ ಅಧ್ಯಾಯದಲ್ಲಿ ಈ ಕ್ಷೇತ್ರದ ಮಹಿಮೆಯ ಕುರಿತು ಉಲ್ಲೇಖಿಸಲಾಗಿದೆ. ಸೂತ ಪುರಾಣಿಕನು ಮುನಿ ಪುಂಗವರರಿಗೆ ಈ ಕ್ಷೇತ್ರ ಮಹಿಮೆಯನ್ನು ಈ ರೀತಿಯಾಗಿ ಹೇಳಿ ವಿವರಿಸಿದ್ದಾನೆನ್ನುವುದು ಕಂಡುಬರುತ್ತದೆ.

ಎಂದಿಗೂ ಕೈಬಿಡದ ಸಾಲಿಗ್ರಾಮ ಗುರುನರಸಿಂಹ

ಸಾಂದರ್ಭಿಕ ಚಿತ್ರ, ಚಿತ್ರಕೃಪೆ: Jim, the Photographer

ಒಂದೊಮ್ಮೆ ನಾರದರು ಈ ಕ್ಷೇತ್ರದಲ್ಲಿ ಪ್ರವಾಸ ಮಾಡುತ್ತಿದ್ದರು. ಎಲ್ಲೆಡೆ ಮುನಿ ಪುಂಗವರು ದೇವರ ಧ್ಯಾನದಲ್ಲಿ ತೊಡಗಿರುವುದನ್ನು ನೋಡಿ ಸಂತೋಷಭರಿತರಾಗಿದ್ದರು. ಹೀಗೆ ಸಮಯ ಕಳೆಯುತ್ತಿರಲು ತಕ್ಷಣ ಒಂದು ಘಟನೆಯುಂಟಾಯಿತು. ಸಿಡಿಲು-ಗುಡುಗಿನಂತಹ ಸದ್ದು. ಎಲ್ಲರೂ ಭಯಭೀತರಾದರು. ಪ್ರಾಣಿ-ಪಕ್ಷಿಗಳು ಕಿರುಚಾಡಲಾರಂಭಿಸಿದವು. ಎಲ್ಲ ಋಷಿ-ಮುನಿಗಳು ನಾರದರನ್ನು ರಕ್ಷಿಸುವಂತೆ ಬೇಡಿಕೊಂಡರು.

ಆ ಸಮಯದಲ್ಲೆ ಆಕಾಶವಾಣಿಯೊಂದುಂಟಾಗಿ ಇಲ್ಲಿ ನರಸಿಂಹನು ಶಂಖ ಹಾಗೂ ಚಕ್ರ ತೀರ್ಥಗಳ ಮಧ್ಯೆ ನೆಲೆಸಿರುವನೆಂದು ಅದನ್ನು ಹುಡುಕಿ ನಾರದರು ಪ್ರತಿಷ್ಠಾಪಿಸಬೇಕೆಂದು ಧ್ವನಿ ತೇಲಿ ಬಂದಿತು. ತಕ್ಷಣ ನಾರದರು ಎಲ್ಲರೊಡಗೂಡಿ ಶಂಖ-ಚಕ್ರ ಹಿಡಿದ ನರಸಿಂಹ ವಿಗ್ರಹವನ್ನು ಹುಡುಕಿ ಪ್ರತಿಷ್ಠಾಪಿಸಿ ನರಸಿಂಹನನ್ನು ಪ್ರಾರ್ಥಿಸಿದರು.

ಎಂದಿಗೂ ಕೈಬಿಡದ ಸಾಲಿಗ್ರಾಮ ಗುರುನರಸಿಂಹ

ಸಾಂದರ್ಭಿಕ ಚಿತ್ರ, ಚಿತ್ರಕೃಪೆ: Adityamadhav83

ತಕ್ಷಣ ನರಸಿಂಹ ದೇವರು ನೆರೆದಿದ್ದ ಎಲ್ಲರಿಗೆ ತನ್ನ ದರ್ಶನ ನೀಡಿ ಹರಸಿದ. ನಾರದರು ನರಸಿಂಹನನ್ನು ಕುರಿತು ಈ ಸ್ಥಳದಲ್ಲಿ ಸದಾ ನೆಲೆಸಿರಬೇಕೆಂದು ಪ್ರಾರ್ಥಿಸಿದಾಗ ಅದಕ್ಕೆ ನರಸಿಂಹನು ತನ್ನ ಸಹಮತಿ ನೀಡಿ ಅಂದಿನಿಂದ ಈ ಕ್ಷೇತ್ರದಲ್ಲಿ ನೆಲೆಸಿದ್ದು ಸಕಲ ಭಕ್ತ ಜನರ ಕಷ್ಟ-ಕಾರ್ಪಣ್ಯಗಳನ್ನು ಹೋಗಲಾಡಿಸುತ್ತಿದ್ದಾನೆ ಎನ್ನಲಾಗಿದೆ.

ಹೀಗಾಗಿ ಸಾಲಿಗ್ರಾಮದ ಈ ನರಸಿಂಹ ವಿಗ್ರಹವನ್ನು ಯಾರು ಅಪಾರ ನಂಬಿಕೆ, ಭಕ್ತಿ ಹಾಗೂ ಶೃದ್ಧೆಗಳಿಂದ ಆರಾಧಿಸುತ್ತಾರೋ ಅವರನ್ನು ಗುರು ನರಸಿಂಹ ಎಂದಿಗೂ ಕೈಬಿಡುವುದಿಲ್ಲವೆನ್ನಲಾಗಿದೆ. ಇನ್ನೊಂದು ವಿಶೆಷವೆಂದರೆ ವರ್ಷದ ಹನ್ನೆರಡು ತಿಂಗಳುಗಳಲ್ಲೂ ಇಲ್ಲಿ ವಿಶೇಷವಾದ ಉತ್ಸವ ಇತ್ಯಾದಿಗಳು ನಡೆಯುತ್ತಲೆ ಇರುತ್ತವೆ. ಹಾಗಾಗಿ ವರ್ಷದ ಯಾವ ಸಮಯದಲ್ಲಾದರೂ ಇಲ್ಲಿಗೆ ಭೇಟಿ ನೀಡಬಹುದು.

ಆಂಧ್ರದ ಪ್ರಮುಖ ಲಕ್ಷ್ಮಿ-ನರಸಿಂಹ ಕ್ಷೇತ್ರಗಳು

ಗುರು ನರಸಿಂಹನ ಈ ದೇವಾಲಯದಲ್ಲಿ ಮುಖ್ಯ ದೇವರಾಗಿ ನರಸಿಂಹನು ಪ್ರತಿಷ್ಠಾಪಿಸಲ್ಪಟ್ಟಿದ್ದಾನೆ. ಅಲ್ಲದೆ ಆಂಜನೇಯ, ಗಣೇಶ ಹಾಗೂ ದುರ್ಗಾ ದೇವಿಗೆ ಮುಡಿಪಾದ ಸನ್ನಿಧಿಗಳು ಈ ದೇವಾಲಯದಲ್ಲಿದೆ. ಇಲ್ಲಿ ಶಂಖ ಮತ್ತು ಚಕ್ರಗಳೆಂಬ ತೀರ್ಥಗಳಿದ್ದು, ಶಂಖ ತೀರ್ಥದಲ್ಲಿ ಮಿಂದರೆ ಎಲ್ಲ ಪಾಪಗಳು ನಾಶವಾಗುತ್ತವೆ ಎಂತಲೂ, ಚಕ್ರ ತೀರ್ಥದಲ್ಲಿ ಮಿಂದರೆ ಎಲ್ಲ ಬಯಕೆಗಳು ಈಡೇರುತ್ತವೆ ಹಾಗೂ ಶತ್ರು ಭಯ ಹೊರಟು ಹೋಗುತ್ತದೆಂದು ನಂಬಲಾಗಿದೆ. ಎರಡೂ ತೀರ್ಥಗಳಲ್ಲಿ ಮಿಂದು ನರಸಿಂಹನನ್ನು ಆರಾಧಿಸಿದರೆ ಸಕಲ ಅದೃಷ್ಟ ಕೈಹಿಡಿಯುತ್ತದೆ ಎನ್ನಲಾಗಿದೆ.

ಉಡುಪಿಗೆ ತೆರಳುವ ಬಗೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X