Search
  • Follow NativePlanet
Share
» »ಮಹಾಭಾರತ ನಡೆದ ಸ್ಥಳ-ವಿರಾಟ ನಗರ!!

ಮಹಾಭಾರತ ನಡೆದ ಸ್ಥಳ-ವಿರಾಟ ನಗರ!!

ವಿರಾಟ ನಗರ, ರಾಜಸ್ಥಾನ ರಾಜ್ಯದಲ್ಲಿ ಪುರಾಣದ ಇತಿಹಾಸವನ್ನು ಒಳಗೊಂಡ ಒಂದು ಪ್ರಸಿದ್ಧವಾದ ಪ್ರವಾಸಿ ತಾಣವಾಗಿದೆ. ಈ ಪ್ರದೇಶವು ರಾಜಸ್ಥಾನದ ರಾಜಧಾನಿ ಜೈಪುರ್‍ಗೆ ಸುಮಾರು 89 ಕಿ.ಮೀ ದೂರದಲ್ಲಿದೆ. ಈ ಪ್ರದೇಶವನ್ನು ಹಲವಾರು ಮಂದಿ ಬೈರಾತ್ ಎಂದು ಸಹ ಕರೆಯುತ್ತಾರೆ. ಈ ಪ್ರದೇಶದ ಕುರಿತು ಮಹಾಭಾರತದಲ್ಲಿ ಉಲ್ಲೇಖವಿದೆ. ಇದನ್ನು ವಿರಾಟ ಎಂಬ ರಾಜನು ಕಂಡು ಹಿಡಿದನಂತೆ ಹಾಗು ಪಾಂಡವರು ತಮ್ಮ ಅರಣ್ಯವಾಸದ ಸಮಯದಲ್ಲಿ ಈ ಪ್ರದೇಶದಲ್ಲಿಯೇ ಕೆಲವು ಕಾಲ ಕಳೆದರಂತೆ.

ವಿರಾಟ ನಗರದಲ್ಲಿನ ಪ್ರಧಾನ ಆರ್ಕಷಣೆಗಳು

ವಿರಾಟ ನಗರದಲ್ಲಿ ಪ್ರಧಾನ ಆಕರ್ಷಣೆಗಳು ಎಂದರೆ ಈ ಪ್ರದೇಶದಲ್ಲಿರುವ ಗುಹೆಗಳು. ಇವುಗಳಲ್ಲಿ ಪಾಂಡವರು ಕೆಲವು ಕಾಲ ತಲೆಮರೆಸಿಕೊಂಡಿದ್ದರು ಎನ್ನುತ್ತಾರೆ ಸ್ಥಳೀಯರು. ಈ ಗುಹೆಗಳೇ ಅಲ್ಲದೇ ಇಲ್ಲಿ ಭೀಮ ಕಿ ಡುಂಗಾರಿ ಮತ್ತು ಪಾಂಡು ಬೆಟ್ಟ ನಂತಹ ಆನೇಕ ಪ್ರಸಿದ್ಧ ಆರ್ಕಷಣೆಗಳನ್ನು ಕಾಣಬಹುದಾಗಿದೆ. ಇಲ್ಲಿ ಬೌದ್ಧರ ಧ್ಯಾನಗೃಹ, ಹಿಂದೂ ದೇವಾಲಯಗಳು, ಮ್ಯೂಸಿಯಂ, ಜೈನ ದೇವಾಲಯಗಳು ಅತ್ಯಂತ ಪ್ರಸಿದ್ಧಿ ಪಡೆದಿರುವ ಪ್ರವಾಸಿ ತಾಣಗಳು.

ಭೀಂ ಕಿ ಡುಂಗಾರಿ

ಭೀಂ ಕಿ ಡುಂಗಾರಿ

ಭೀಂ ಕಿ ಡುಂಗಾರಿ ಒಂದು ಬೃಹತ್ ಗುಹೆ. ಇಲ್ಲಿ ಪಾಂಡವರು ತಮ್ಮ ಅಜ್ಞಾತ ವಾಸ ಕಳೆದರು ಎಂದು ಹಾಗು ಈ ಗುಹೆಯಲ್ಲಿಯೇ ಕೆಲವು ಕಾಲ ನಿವಾಸವಿದ್ದರು ಎಂದು ಹೇಳುತ್ತಾರೆ. ಪಾಂಡವರಲ್ಲಿ ಶಕ್ತಿಶಾಲಿಯಾದ ಭೀಮನ ಹೆಸರು ಈ ಗುಹೆಗೆ ಬಂದಿತು. ಭೀಮನು ವಿರಾಟ ರಾಜನ ಆಸ್ಥಾನದಲ್ಲಿ ಅಡುಗೆ ಮಾಡುವವನಾಗಿ ಅಜ್ಞಾತವಾಸವನ್ನು ಕಳೆದನು.

PC:Giridharmamidi

ಅಶೋಕ ಶಿಲಾಲೇಖ

ಅಶೋಕ ಶಿಲಾಲೇಖ

ಅಶೋಕ ಶಿಲಾಲೇಖ ಎಂಬುದು ಅಶೋಕನು ಬರೆಸಿದ ಶಾಸನವಾಗಿದೆ. ಇದನ್ನು ಮೌರ್ಯ ಚಕ್ರವರ್ತಿ ಆಶೋಕನು ಶಾಸನವನ್ನು ಬರೆಸಿದನು. ಈ ಪ್ರದೇಶದ ಸುತ್ತಮುತ್ತ ಹಲವಾರು ಸುಂದರವಾದ ದೃಶ್ಯಗಳನ್ನು ಕಾಣಬಹುದಾಗಿದೆ. ಮೆಯಿನ್ ರಸ್ತೆಗೆ 100 ಮೀಟರ್ ದೂರದಲ್ಲಿ ಈ ಶಿಲಾಲೇಖವಿದೆ.

PC:Rafatalam100

ಬಿಜ್ ಕಿ ಪಹಾರಿ

ಬಿಜ್ ಕಿ ಪಹಾರಿ

ಬಿಜ್ ಕಿ ಪಹಾರಿಯಲ್ಲಿ ಬೌದ್ಧ ಆರಾಮ ಕೇಂದ್ರವಾಗಿ ಪ್ರಸಿದ್ಧಿ ಪಡೆದಿದೆ. ಇಲ್ಲಿ ಇಂದಿನವರೆವಿಗೂ 8 ಆರಾಮ ಕೇಂದ್ರವಿತ್ತು ಎಂದು ಹಾಗು ಪ್ರಸ್ತುತ 2 ಆರಾಮ ಕೇಂದ್ರ ಇದೆ ಎಂದು ಹೇಳುತ್ತಾರೆ ಕೆಲವರು. ಆಶೋಕನು ಇವುಗಳನ್ನು ನಿರ್ಮಾಣ ಮಾಡಿದನು ಎಂಬುದಕ್ಕೆ ಇಲ್ಲಿ ದೊರೆತ ಆಧಾರಗಳ ಪ್ರಕಾರ ತಿಳಿಯುತ್ತದೆ. ಪ್ರವೇಶ ದ್ವಾರದಲ್ಲಿ ಬ್ರಹ್ಮಲಿಪಿಯಲ್ಲಿ ಇರುವ ಶಾಸನದ ಮುಖಾಂತರ ಪ್ರವಾಸಿಗರು ಕಾಣಬಹುದಾಗಿದೆ.

PC:Raonaresh

ಜೈನ್ ನಾಸಿಯಾ

ಜೈನ್ ನಾಸಿಯಾ

ಜೈನ್ ನಾಸಿಯಾ ಎಂಬುದು ಒಂದು ಸುಂದರವಾದ ಉದ್ಯಾನವನವಾಗಿದೆ. ಇದು ಮೊಗಲ್ ಗೇಟ್‍ಗೆ ಎದುರಿನಲ್ಲಿದೆ. ಮಕ್ಕಳು ಆಟ ಆಡುವುದಕ್ಕೆ ಎಂದೇ ಒಂದು ಪ್ರತ್ಯೇಕವಾದ ಆಟದ ಸ್ಥಳವಿದೆ. ಸಾಯಂಕಾಲದ ಸಮಯದಲ್ಲಿ ಸ್ಥಳೀಯರು ತಮ್ಮ ಕುಟುಂಬ ಸಭ್ಯದವರ ಜೊತೆ ಇಲ್ಲಿಗೆ ಭೇಟಿ ನೀಡುತ್ತಾರೆ.

PC:viratnagar

ಜೈನ ದೇವಾಲಯ

ಜೈನ ದೇವಾಲಯ

ಜೈನ ದೇವಾಲಯವು ಇಲ್ಲಿನ ಅತ್ಯಂತ ಪ್ರಮುಖವಾದ ಅರ್ಕಷಣೆಯಾಗಿದೆ. ದೇವಾಲಯದ ಪ್ರವೇಶದ್ವಾರದಲ್ಲಿ ಸ್ತಂಭದಲ್ಲಿನ ಸೂಕ್ಷ್ಮವಾದ ಕೆತ್ತನೆಗಳು ಪ್ರವಾಸಿಗರಿಗೆ ಮಂತ್ರಮುಗ್ಧರನ್ನಾಗಿಸುತ್ತದೆ. ಇದರಲ್ಲಿ ಜೈನ ಧರ್ಮದ ಶಾಸನಗಳು, ಇತರ ಧರ್ಮಗಳ ಶಾಸನಗಳನ್ನು ಕಾಣಬಹುದಾಗಿದೆ. ಇಲ್ಲಿ ಪವಿತ್ರವಾದ ಜೈನ ತೀರ್ಥಂಕರರ ವಿಗ್ರಹಗಳನ್ನು ಕಾಣಬಹುದಾಗಿದೆ.

PC:viratnagar

ಗಣೇಶ ಗಿರಿ ದೇವಾಲಯ

ಗಣೇಶ ಗಿರಿ ದೇವಾಲಯ

ಗಣೇಶ ಗಿರಿಯದಲ್ಲಿನ ದೇವತಾ ಮೂರ್ತಿಯನ್ನು ವಿರಾಟ ನಗರದ ಪ್ರವಾಸಕ್ಕೆ ತೆರಳುವ ಪ್ರತಿಯೊಬ್ಬ ಹಿಂದೂ ಭಕ್ತರು ತಪ್ಪದೇ ದರ್ಶನ ಮಾಡಬೇಕು. ವರ್ಷವಿಡೀ ಈ ಪವಿತ್ರವಾದ ದೇವಾಲಯಕ್ಕೆ ಭಕ್ತರು ಭೇಟಿ ನೀಡುತ್ತಾ ಇರುತ್ತಾರೆ. ಈ ದೇವಾಲಯದ ಸಮೀಪದಲ್ಲಿಯೇ ಒಂದು ಮ್ಯೂಸಿಯಂ ಕೂಡ ಕಾಣಬಹುದಾಗಿದೆ. ಇದರಲ್ಲಿ 170 ಶಿಲ್ಪಶೈಲಿಗಳ ಕಥೆಗಳನ್ನು ವಿವರಿಸಲಾಗಿದೆ.

PC:viratnagar

ಮೊಗಲ್ ಗೇಟ್

ಮೊಗಲ್ ಗೇಟ್

ಮೊಗಲ್ ಒಂದು ಸ್ಮಾರಕಕ್ಕೆ ಪ್ರಧಾನವಾದುದು. ಈ ಸ್ಮಾರಕವನ್ನು ತಾಜ್ ಮಹಲ್‍ನ ನಕಲು ಎಂದು ಸಹ ಹೇಳುತ್ತಿರುತ್ತಾರೆ. ವರ್ಷದಲ್ಲಿನ ಎಲ್ಲಾ ಕಾಲದಲ್ಲಿಯೂ ಈ ಪ್ರದೇಶಗಳಿಗೆ ಹಲವಾರು ಪ್ರವಾಸಿಗರು ಭೇಟಿ ನೀಡುತ್ತಲೇ ಇರುತ್ತಾರೆ ಎಂದೇ ಹೇಳಬಹುದಾಗಿದೆ.

PC:Raonaresh

ವಿಮಾನ ಮಾರ್ಗದ ಮೂಲಕ

ವಿಮಾನ ಮಾರ್ಗದ ಮೂಲಕ

ಈ ಸುಂದರವಾದ ಪ್ರದೇಶಗಳನ್ನು ಕಾಣಲು ಸಮೀಪದ ವಿಮಾನ ಮಾರ್ಗವೆಂದರೆ ಆದು ರಾಜಸ್ಥಾನದ ಜೈಪುರ ವಿಮಾನ ನಿಲ್ದಾಣವಾಗಿದೆ. ದೆಹಲಿ, ಮುಂಬೈ, ಕೊಲ್ಕತ್ತ, ಚೆನ್ನೈ, ಹೈದ್ರಾಬಾದ್ ಇನ್ನೂ ಹಲವಾರು ಪ್ರದೇಶಗಳಿಂದ ಇಲ್ಲಿಗೆ ವಿಮಾನಗಳು ಬರುತ್ತಿರುತ್ತವೆ.

ರೈಲು ಮಾರ್ಗದ ಮೂಲಕ

ರೈಲು ಮಾರ್ಗದ ಮೂಲಕ

ವಿರಾಟ ನಗರಕ್ಕೆ ಸಮೀಪದ ರೈಲು ಮಾರ್ಗವೆಂದರೆ ಅದು ಜೈಪುರ ರೈಲ್ವೆ ನಿಲ್ದಾಣವಾಗಿದೆ. ಇಲ್ಲಿಗೆ ದೇಶದ ವಿವಿಧ ಪ್ರದೇಶಗಳಿಂದ ರೈಲುಗಳು ಬರುತ್ತಿರುತ್ತವೆ.

ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more