• Follow NativePlanet
Share
Menu
» »ತಮಿಳುನಾಡು ದೇವಾಲಯಗಳ ತವರೂರು.

ತಮಿಳುನಾಡು ದೇವಾಲಯಗಳ ತವರೂರು.

Written By: Sowmyabhai

ತಮಿಳುನಾಡು ದೇವಾಲಯಗಳ ತವರೂರು ಎಂದೇ ಖ್ಯಾತಿಯಾಗಿದೆ. ಇದಕ್ಕೆ ಕಾರಣ ತಮಿಳುನಾಡು ಹೊಂದಿರುವ ಅತಿ ಹೆಚ್ಚು ದೇವಾಲಯಗಳು. ಬೇರೆಲ್ಲೂ ಕಾಣದ ಪುರಾತನ, ಭವ್ಯವಾದ, ವೈಭವದಿಂದ ಕೂಡಿರುವ ದೇವಾಲಯಗಳು ಈ ತಮಿಳುನಾಡಿನಲ್ಲಿವೆ. ತಮಿಳುನಾಡಿನ ಕಾಂಚಿಪುರಂ ಪಟ್ಟಣವನ್ನು ಕಂಚಿ ಎಂದೂ ಸಹ ಕರೆಯುತ್ತಾರೆ. ಈ ಪಟ್ಟಣದಲ್ಲಿ ಹಲವಾರು ಪ್ರಸಿದ್ದ ದೇವಾಲಯಗಳಿವೆ. ಹಿಂದೂಗಳಿಗೆ ಮೋಕ್ಷಪ್ರಧಾನವಾದ 7 ನಗರಗಳಲ್ಲಿ ಕಾಂಚಿಪುರಂ ಕೂಡ ಒಂದು. ಮೋಕ್ಷ ಭೂಮಿ, ಶಕ್ತಿ ಭೂಮಿಯಿಂದಾಗಿ ಈ ಕ್ಷೇತ್ರವು ಪ್ರಸಿದ್ದಿ ಹೊಂದಿದೆ. ಗರುಡ ಪುರಾಣದ ಪ್ರಕಾರ ಮೋಕ್ಷವನ್ನು ನೀಡುವ ಪಟ್ಟಣಗಳು 7 ಅವುಗಳೆಂದರೆ ಅಯೋಧ್ಯ, ಮಧುರ, ಹರಿದ್ವಾರ, ಕಾಶಿ, ಅವಂತಿಕಾ, ದ್ವಾರಕ, ಕಂಚಿ. ಹಾಗಾಗಿ ಪ್ರಸುತ್ತ ಲೇಖನದಲ್ಲಿ ಕಾಂಚಿಪುರಂನ ಪ್ರಸಿದ್ದ ದೇವಾಲಯಗಳ ಬಗ್ಗೆ ತಿಳಿಯೋಣ.

ಕಾಮಾಕ್ಷಿ ಅಮ್ಮನ್ ದೇವಾಲಯ

ಕಾಮಾಕ್ಷಿ ಅಮ್ಮನ್ ದೇವಾಲಯ

ಈ ದೇವಾಲಯವನ್ನು 6 ನೇ ಶತಮಾನದಲ್ಲಿ ಪಲ್ಲವರು ತಾಯಿ ಕಾಮಾಕ್ಷಿಗೆ ದೇವಾಲಯವನ್ನು ನಿರ್ಮಿಸಿದರು. ಈ ದೇವಾಲಯವು 108 ಶಕ್ತಿ ಪೀಠಗಳಲ್ಲಿ ಈ ದೇವಲಯವು ಒಂದು. ಈ ದೇವಾಲಯದ ವಿಶೇಷವೆನೆಂದರೆ ಕಾಮಾಕ್ಷಿ ತಾಯಿಯು ಪೀಠದ ಮುಂದೆನಿಂತಿರುವುದು. ಈ ದೇವಾಲಯವನ್ನು ಆದಿ ಗುರು ಶ್ರೀ ಶಂಕರಾಚಾರ್ಯರು ಕಂಚಿ ಕಾಮಾಕ್ಷಿಯನ್ನು ಸ್ಥಾಪಿಸಿದರು ಎಂಬ ಪ್ರತೀತಿ ಇದೆ. ಈ ತಾಯಿಯ ಹೆಸರಿನ ಕಂಚಿ ಎಂಬ ಮಠವನ್ನು ಶಂಕರರು ನಿರ್ಮಿಸಿದರು.
PC:SINHA

ಏಕಾಂಬರೇಶ್ವರರ್ ದೇವಾಲಯ

ಏಕಾಂಬರೇಶ್ವರರ್ ದೇವಾಲಯ

ಈ ದೇವಾಲಯವನ್ನು ಪಲ್ಲವರು ನಿರ್ಮಿಸಿದರು. ಏಕಾಂಬರೇಶ್ವರರ್ ದೇವಾಲಯವು ಕಂಚಿಗೆ ಉತ್ತರ ದಿಕ್ಕುಗಳಲ್ಲಿ ಇರುವ ಈ ದೇವಾಲಯವು ಎಲ್ಲಾ ದೇವಾಲಯಗಳಿಗಿಂತಲೂ ಅತ್ಯಂತ ದೊಡ್ಡದು. ದೇಗುಲದ ಗೋಪುರವು ಸುಮಾರು 59 ಮೀ ಎತ್ತರದಲ್ಲಿದೆ. ಮಹಾ ಶಿವನು ಲಿಂಗ ಸ್ವರೂಪಿಯಾಗಿ ಏಕಾಂಬರೇಶ್ವರರ್ ಆಗಿ ಇಲ್ಲಿ ನೆಲೆಸಿದ್ದಾನೆ. ಪಂಚಭೂತಾತ್ಮಕ ಲಿಂಗಗಳಲ್ಲಿ ಈ ಲಿಂಗ ವೃಧ್ಯಿಲಿಂಗವಾಗಿದೆ.
PC:tshrinivasan

ತ್ರಿಲೋಕ್ಯನಾಥ್ ದೇವಾಲಯ

ತ್ರಿಲೋಕ್ಯನಾಥ್ ದೇವಾಲಯ

ಈ ತ್ರಿಲೋಕ್ಯನಾಥ್ ದೇವಾಲಯವು ಜೈನ ಧರ್ಮದ ಪವಿತ್ರವಾದ ದೇವಾಲಯವಾಗಿದೆ. ತ್ರಿಲೋಕ್ಯನಾಥ್ ದೇವಾಲಯವನ್ನು 8 ನೇ ಶತಮಾನದಲ್ಲಿ ಪಲ್ಲವರ ಅರಸರು ನಿರ್ಮಿಸಿದರು. ತ್ರಿಲೋಕ್ಯನಾಥ್ ಅಥವಾ ಚಂದ್ರಪ್ರಭ ದೇವಾಲಯವೆಂದು ಕರೆಯಲಾಗುತ್ತದೆ. ಈ ದೇವಾಲಯವನ್ನು ತಮಿಳುನಾಡಿನ ಪುರಾತತ್ವ ಇಲಾಖೆಯು ನಿರ್ವಹಿಸುತ್ತಿದೆ.
PC:Kailash Giri

ಚಿತ್ರಗುಪ್ತ ದೇವಾಲಯ

ಚಿತ್ರಗುಪ್ತ ದೇವಾಲಯ

ಈ ದೇವಾಲಯವನ್ನು ಚೋಳರು 9 ನೇ ಶತಮಾನದಲ್ಲಿ ನಿರ್ಮಿಸಿದರು ಎನ್ನಲಾಗಿದೆ. ಪುರಾಣಗಳ ಪ್ರಕಾರ ಯಮ ಧರ್ಮರಾಯನ ಸಹೋದರ ಈ ಚಿತ್ರಗುಪ್ತ. ಈ ಚಿತ್ರಗುಪ್ತನ ಕೆಲಸವು ಯಾರು ಪಾಪ ಪುಣ್ಯವನ್ನು ಮಾಡುತ್ತಾರೂ ಅವರ ಲೆಕ್ಕ ಪತ್ರಗಳನ್ನು ಸಂಗ್ರಹಿಸುವುದು ಹಾಗೂ ಅವರನ್ನು ಸ್ವರ್ಗ ಅಥವಾ ನರಕ್ಕೆ ಕಳುಗಿಸುವ ಕಾರ್ಯದಲ್ಲಿ ನಿರತನಾಗಿರುವುದು.
PC:solarisgirl

ಕುಮಾರಕುಟ್ಟಂ ದೇವಾಲಯ

ಕುಮಾರಕುಟ್ಟಂ ದೇವಾಲಯ

ಈ ದೇವಾಲಯವು ಮುರುಗನ ದೇವಾಲಯವಾಗಿದೆ. ಮುರುಗ ಎಂದರೆ ಸ್ಕಂದ, ಸುಬ್ರಮಣ್ಯಸ್ವಾಮಿ. ಶಿವ ಪಾರ್ವತಿಯರ ಪುತ್ರ ಈ ಮುರುಗ. ಈ ಕುಮಾರಕುಟ್ಟಂ ದೇವಾಲಯವು ಶಿವನ ದೇವಾಲಯವಾದ ಏಕಾಂಬರೇಶ್ವರರ್ ಹಾಗೂ ಕಾಮಾಕ್ಷಿ ದೇವಾಲಯಗಳ ನಡುವೆ ಈ ದೇವಾಲಯವಿದೆ.
PC:Rajendran Ganesan

ಕೈಲಾಸನಾಥಾಲಯ

ಕೈಲಾಸನಾಥಾಲಯ

ಈ ದೇವಾಲಯವನನು 567 ರಲ್ಲಿ ರಾಜಸಿಂಹ ಪಲ್ಲವ ನಿರ್ಮಿಸಿದ ದೇವಾಲಯವಿದು. ಈ ದೇವಾಲಯವು ಅತ್ಯಂತ ಸೊಬಗಿನ ವಾಸ್ತು ಶಿಲ್ಪದಿಂದಲೇ ಪ್ರಖ್ಯಾತಿ ಹೊಂದಿದೆ. ಇಲ್ಲಿನ ಶಿಲ್ಪಗಳು ಸುಂದರವಾಗಿದ್ದು ನೋಡಲು ಮನಸ್ಸಿಗೆ ಮುದ ನೀಡುತ್ತದೆ. ಪಲ್ಲವರು ನಿರ್ಮಿಸಿದ ದೇವಾಲಯಗಳಲ್ಲಿ ಇದು ಅತ್ಯಂತ ಪುರಾತನವಾದ ದೇವಾಲಯವಾಗಿದೆ.
PC:tshrinivasan

ಕರ್ಚಪೇಶ್ವರ ದೇವಾಲಯ

ಕರ್ಚಪೇಶ್ವರ ದೇವಾಲಯ

ಕರ್ಚಪೇಶ್ವರ ದೇವಾಲಯ ದೇವಾಲಯವನ್ನು ಸಹಾ ಪಲ್ಲವರು ನಿರ್ಮಿಸಿದರು. ಈ ದೇವಲಯವನ್ನು ತಂಜಾವೂರಿನ ಅರಸರು ಈ ದೇವಾಲಯವನ್ನು ಪುರ್ನಸ್ಥಾಪಿಸಿದರು. ವಿಷ್ಣುವಿನ ಕುರ್ಮಾ ಅವತಾರದಲ್ಲಿನ ಶಿವಲಿಂಗವನ್ನು ಇಲ್ಲಿನ ಗರ್ಭ ಗುಡಿಯಲ್ಲಿ ಕಾಣಬಹುದು. ಕರ್ಚಪೇಶ್ವರ ದೇವಾಲಯವನ್ನು ಕೆಲವು ಗ್ರಂಥಗಳ ಪ್ರಕಾರ ಕಾಚಿಪೇಡು ಎಂದು ಸಹ ಕರೆಯುತ್ತಿದ್ದರು.
PC:Ssriram mt

ವರದರಾಜಸ್ವಾಮಿ ದೇವಾಲಯ

ವರದರಾಜಸ್ವಾಮಿ ದೇವಾಲಯ

ಈ ದೇವಾಲಯವು ಮಾಹಾ ವಿಷ್ಣುವಿನ ದೇವಾಲಯವಾಗಿದೆ. 1053 ರಲ್ಲಿ ಚೋಳರು ನಿರ್ಮಿಸಿದರು. ಮಧ್ಯೆ ತಂಜಾವೂರಿನ ಅರಸರು ಈ ದೇವಾಲಯವನ್ನು 14-15 ನೇ ಶತಮಾನದ ಮಧ್ಯೆ ಭಾಗದಲ್ಲಿ ಪುರ್ನಸ್ಥಾಪಿಸಿದರು. ಈ ದೇವಾಲಯವನ್ನು ಚೋಳರ ಕಾಲದಲ್ಲಿ ವರದರಾಜ ಪೆರುಮಾಳ್ ದೇವಾಲಯವೆಂದು ಕರೆಯಲಾಗುತ್ತಿತ್ತು. 14 ನೇ ಶತಮಾನದಲ್ಲಿ ಚೋಳರ ಅರಸರು ಮತ್ತೋಂದು ಗೋಡೆ ಹಾಗೂ ಗೋಪರವನ್ನು ನಿರ್ಮಿಸಿದರು. ಇದೊಂದು ಪ್ರಾಚೀನವಾದ ವಿಷ್ಣ ದೇವಾಲಯವಾಗಿದ್ದು ಕಂಚಿಯಲ್ಲಿ ಅತ್ಯಂತ ಹೆಸರುವಾಸಿ ಪಡೆದಿದೆ.
PC:Sivakumar1248

ಇರಾವನೇಶ್ವರ ದೇವಾಲಯ

ಇರಾವನೇಶ್ವರ ದೇವಾಲಯ

ಈ ದೇವಾಲಯವು ಕಾಂಚಿಪುರಂ ಪ್ರಸಿದ್ದವಾದ ದೇವಾಲಯವಾಗಿದ್ದು, 8 ನೇ ಶತಮಾನದಲ್ಲಿ ಪಲ್ಲವರು ನಿರ್ಮಿಸಿದ ದೇವಾಲಯ ಇದಾಗಿದೆ. ಈ ದೇವಾಲಯವು ತನ್ನ ವಾಸ್ತು ಶಿಲ್ಪದಿಂದ ಮಹತ್ವ ಪಡೆದಿದೆ. ಪಲ್ಲವರ ಅರಸ 2ನೇ ನರಸಿಂಹ ವರ್ಮ ನಿರ್ಮಿಸಿರುವುದಾಗಿದೆ. ಈ ದೇವಾಲಯವನ್ನು ಭಾರತದ ಪುರಾತತ್ವ ಇಲಾಖೆಯು ನಿರ್ವಹಿಸುತ್ತಿದೆ.
PC:R.K.Lakshmi

ಸತ್ಯನಾಥೆಶ್ವರ ದೇವಾಲಯ

ಸತ್ಯನಾಥೆಶ್ವರ ದೇವಾಲಯ

ಈ ಪ್ರಸಿದ್ದ ದೇವಾಲಯವನನು 7 ನೇ ಶತಮಾನದಲ್ಲಿ ನಿರ್ಮಿತವಾದ ದೇವಾಲಯವಾಗಿದೆ. ಈ ದೇವಾಲಯದ ವಾಸ್ತು ಶಿಲ್ಪವು ಅತ್ಯಂತ ಸುಂದರವಾಗಿದೆ.

PC:Ernesto Perez

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ