Search
  • Follow NativePlanet
Share
» »ಭಾರತದಿಂದ ಕೇವಲ 5 ಗಂಟೆ ದೂರದಲ್ಲಿರುವ ಈ ವಿದೇಶಿ ಸ್ಥಳಗಳಿಗೆ ಆರಾಮಾಗಿ ಪ್ರಯಾಣಿಸಿ…

ಭಾರತದಿಂದ ಕೇವಲ 5 ಗಂಟೆ ದೂರದಲ್ಲಿರುವ ಈ ವಿದೇಶಿ ಸ್ಥಳಗಳಿಗೆ ಆರಾಮಾಗಿ ಪ್ರಯಾಣಿಸಿ…

ಕೆಲವು ವಿದೇಶಿ ನೆಲದಲ್ಲಿ ನಿಮಗೆ ಚೆಂದದ ಕಟ್ಟಡಗಳು, ಸಮೃದ್ಧವಾಗಿರುವ ಕಾಡುಗಳು, ಮನಮೋಹಕ ಬೀಚ್ ಗಳು, ವಿಭಿನ್ನ ಸಂಸ್ಕೃತಿ, ವಿಶಿಷ್ಟವಾದ ತಿನಿಸುಗಳಿಗೆ ಕೊರತೆಯೇನಿಲ್ಲ. ಸಾಮಾನ್ಯವಾಗಿ ವಿಶ್ವದಾದ್ಯಂತ ಪ್ರವಾಸಿ ಪ್ರಿಯರು ಇಂತಹ ವಿದೇಶಿ ತಾಣಗಳಿಗೆ ವರ್ಷಕ್ಕೊಮೆಯಾದರೂ ಪ್ರವಾಸವನ್ನು ಹಮ್ಮಿಕೊಳ್ಳುತ್ತಾರೆ ಅಥವಾ ಪ್ರವಾಸ ಪಟ್ಟಿಯಲ್ಲಿ ಖಡ್ಡಾಯವಾಗಿರುತ್ತವೆ. ಇದನ್ನೆಲ್ಲಾ ಈಗಿಲ್ಲಿ ಹೇಳಲೂ ಕಾರಣವೂ ಇದೆ.

ಇನ್ನೇನು ದೀಪಾವಳಿ ಸಮೀಪಿಸುತ್ತಿದೆ. ಕಡಿಮೆ ಎಂದರೂ ದೀಪಾವಳಿ ಸಮಯದಲ್ಲಿ ನಿಮಗೆ ಭಾನುವಾರವೂ ಸೇರಿ ನಾಲ್ಕು ದಿನಗಳ ಕಾಲ ರಜೆ ಸಿಗುತ್ತದೆ. ಇಂತಹ ಸಮಯದಲ್ಲಿ ನೀವು ಯಾವುದಾದರೂ ವಿದೇಶಿ ತಾಣಗಳಿಗೆ ಹೋಗಲು ಪ್ಲ್ಯಾನ್ ಮಾಡಿಕೊಳ್ಳುತ್ತಿದ್ದರೆ ಭಾರತದಿಂದ ಕೇವಲ 5 ಗಂಟೆ ದೂರದಲ್ಲಿರುವ ಈ ತಾಣಗಳಿಗೆ ಪ್ರವಾಸಕ್ಕೆ ತೆರಳಬಹುದು. ಈ ಹಬ್ಬದ ಸೀಸನ್ ನಲ್ಲಿ ಪರಿಪೂರ್ಣ ಸಮಯ ಕಳೆಯಲು ಈ ಸ್ಥಳಗಳಿಗಿಂತ ಉತ್ತಮ ಸ್ಥಳ ಮತ್ತೊಂದಿಲ್ಲ.

ಸಿಂಗಾಪುರ್

ಸಿಂಗಾಪುರ್

ನಿರಂತರವಾಗಿ ಬದಲಾಗುತ್ತಿರುವ ಸಿಂಗಾಪುರವು ಪ್ರವಾಸಿಗರಿಗೆ ಸ್ವರ್ಗವಾಗಿದೆ. ಇದು ವಿಶ್ವದ ಅತ್ಯಂತ ಶ್ರೀಮಂತ ರಾಷ್ಟ್ರಗಳಲ್ಲಿ ಒಂದಾಗಿದೆ ಮತ್ತು ಏಷ್ಯಾದಲ್ಲಿ ಅತಿ ಹೆಚ್ಚು ಜನರು ಭೇಟಿ ನೀಡುವ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಬಹುಸಂಸ್ಕೃತಿಯ ದೇಶವಾಗಿರುವುದರಿಂದ, ಸಿಂಗಾಪುರದ ಜನರು ವರ್ಷವಿಡೀ ವಿವಿಧ ಹಬ್ಬಗಳು ಮತ್ತು ಕಾರ್ಯಕ್ರಮಗಳನ್ನು ಆಚರಿಸುತ್ತಾರೆ. ಸಿಂಗಾಪುರಕ್ಕೆ ನೀವು ವರ್ಷಪೂರ್ತಿ ಭೇಟಿ ನೀಡಬಹುದಾದರೂ, ಸಿಂಗಾಪುರಕ್ಕೆ ಭೇಟಿ ನೀಡಲು ಉತ್ತಮ ಸಮಯವೆಂದರೆ ಡಿಸೆಂಬರ್‌ನಿಂದ ಜೂನ್ ವರೆಗೆ.

ಸಿಂಗಾಪುರ್ ಶಾಪಿಂಗ್ ಪ್ರಿಯರಿಗೆ ಕೂಡ ಸೂಕ್ತವಾದ ತಾಣವಾಗಿದೆ. ನೈಟ್ ಸಫಾರಿಗಳು, ಯುನೆಸ್ಕೋ ಮಾನ್ಯತೆ ಪಡೆದ ಸಿಂಗಾಪುರ್ ಬೊಟಾನಿಕಲ್ ಗಾರ್ಡನ್, ಮರೀನಾ ಬೇ, ಲಿಟಲ್ ಇಂಡಿಯಾ ಮತ್ತು ಚೈನಾಟೌನ್ ಸಿಂಗಾಪುರ್ ನಲ್ಲಿ ಭೇಟಿ ನೀಡಲೇಬೇಕಾದ ಕೆಲವು ಅತ್ಯುತ್ತಮ ಸ್ಥಳಗಳಾಗಿವೆ. ವಿಮಾನದಲ್ಲಿ ನೀವು ಪ್ರಯಾಣಿಸಿದರೆ ಬೆಂಗಳೂರಿನಿಂದ ಸಿಂಗಾಪುರಕ್ಕೆ ಕೇವಲ 4 ಗಂಟೆ 30 ನಿಮಿಷಗಳು ಮಾತ್ರ.

ಭೂತಾನ್

ಭೂತಾನ್

ನೀವು ಪರ್ವತಗಳ ಬಗ್ಗೆ ಒಲವನ್ನು ಹೊಂದಿದ್ದರೆ, ಈ ನೆರೆಯ ದೇಶದ ಭೂಗೋಳವು ನಿಮ್ಮನ್ನು ಆಕರ್ಷಿಸುತ್ತದೆ. ದಿ ಲ್ಯಾಂಡ್ ಆಫ್ ದಿ ಥಂಡರ್ ಡ್ರ್ಯಾಗನ್ ಎಂದು ಕರೆಯಲ್ಪಡುವ ಭೂತಾನ್ ನಲ್ಲಿ ಪ್ರವಾಸಿಗರು ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಸ್ಮಾರಕಗಳ ಶ್ರೇಣಿಯನ್ನು ಅನ್ವೇಷಿಸಬಹುದು. ಟ್ರೆಕ್ಕಿಂಗ್, ರಿವರ್ ರಾಫ್ಟಿಂಗ್ ಮತ್ತು ರಾಕ್ ಕ್ಲೈಂಬಿಂಗ್‌ನಂತಹ ಸಾಹಸ ಚಟುವಟಿಕೆಗಳೂ ಇವೆ. ಇಲ್ಲಿ ವಿಹಾರ ಮಾಡಲು ಪ್ರತಿಯೊಬ್ಬರು ಇಷ್ಟಪಡುತ್ತಾರೆ.

ಕಾರಣ ಹೆಚ್ಚು ಖರ್ಚಾಗುವುದಿಲ್ಲ. ಅಂದಹಾಗೆ ಇಲ್ಲಿಗೆ ಪ್ರವಾಸಕ್ಕೆ ಬಂದಾಗ ಭೂತಾನ್ ರೆಸಿಪಿ ಟ್ರೈ ಮಾಡುವುದನ್ನು ಮರೆಯದಿರಿ. ಎಮಾ ದಟ್ಶಿ ಮತ್ತು ಡಂಪ್ಲಿಂಗ್‌ಗಳಿಂದ ಜಶಾ ಮಾರು ಮತ್ತು ಜಶಾ ತ್ಶೂಮ್‌ವರೆಗೆ ಮತ್ತು ಥಿಂಪುವಿನಲ್ಲಿ ವಾರಾಂತ್ಯದ ಮಾರುಕಟ್ಟೆಯಲ್ಲಿ ಶಾಪಿಂಗ್ ಕೂಡ ಮಾಡಬಹುದು. ಇನ್ನು ನವದೆಹಲಿಯಿಂದ ಭೂತಾನ್ ನಲ್ಲಿರುವ ಪಾರೋಗೆ ಜಿಲ್ಲೆಗೆ ವಿಮಾನದಲ್ಲಿ ಪ್ರಯಾಣಿಸಿದರೆ ಕೇವಲ 2 ಗಂಟೆ 20 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ ಅಷ್ಟೇ.

ನೇಪಾಳ

ನೇಪಾಳ

ವಿಶ್ವದ 14 ಅತಿ ಎತ್ತರದ ಪರ್ವತಗಳಲ್ಲಿ ಹತ್ತು ಪವರ್ತಗಳಿಗೆ ನೇಪಾಳ ನೆಲೆಯಾಗಿದೆ. ಎತ್ತರದ ಪ್ರದೇಶಗಳನ್ನು ನೋಡಿ ಆನಂದಿಸುವ ಪ್ರವಾಸಿಗರಿಗೆ ಇದು ಅತ್ಯುತ್ತಮ ತಾಣವಾಗಿದೆ. ಇಲ್ಲಿ ನೀವು ಹೈಕಿಂಗ್, ಪರ್ವತಾರೋಹಣ, ರಾಫ್ಟಿಂಗ್ ಮತ್ತು ಪ್ಯಾರಾಗ್ಲೈಡಿಂಗ್ ಮಾಡಬಹುದು. ಇದಲ್ಲದೆ, ಪ್ರವಾಸಿಗರು ಅರಣ್ಯದಲ್ಲಿ ಹಲವಾರು ಅದ್ಭುತ ವನ್ಯಜೀವಿಗಳನ್ನು ನೋಡಬಹುದು. ಹಾಗೆಯೇ ಹಲವಾರು ಐತಿಹಾಸಿಕ ಸ್ಮಾರಕಗಳು ಮತ್ತು ಶಿಲ್ಪಗಳನ್ನು ಅನ್ವೇಷಿಸಬಹುದು.

ಸಾಮಾನ್ಯವಾಗಿ ಬೆಳಗಿನ ಉಪಾಹಾರ, ಮಧ್ಯಾಹ್ನದ ಊಟ ಮತ್ತು ರಾತ್ರಿಯ ಊಟಕ್ಕೆ ನೀಡಲಾಗುವ ರಾಷ್ಟ್ರೀಯ ಖಾದ್ಯ, ದಾಲ್ ಭಾತ್, ಹಾಗೆಯೇ ಮೊಮೊಸ್ (ಡಂಪ್ಲಿಂಗ್ಸ್) ಅನ್ನು ಸವಿಯಲು ಮರೆಯಬೇಡಿ. ಇದು ಪ್ರತಿ ಬೀದಿಯ ಮೂಲೆಯಲ್ಲಿಯೂ ಕಂಡುಬರುತ್ತದೆ ಮತ್ತು ವಿಶಿಷ್ಟವಾದ ಟೊಮೆಟೊ ಆಧಾರಿತ ಸಾಸ್‌ ಕೂಡ ಜೊತೆಗಿರುತ್ತದೆ. ಇಲ್ಲಿಗೆ ವಿಮಾನದಲ್ಲಿ ಪ್ರಯಾಣಿಸಿದರೆ ನವದೆಹಲಿಯಿಂದ ಕಠ್ಮಂಡುವಿಗೆ 1 ಗಂಟೆ 40 ನಿಮಿಷಗಳು ತೆಗೆದುಕೊಳ್ಳುತ್ತದೆ.

ಯುಎಇ (ಯುನೈಟೆಡ್ ಅರಬ್ ಎಮಿರೇಟ್ಸ್)

ಯುಎಇ (ಯುನೈಟೆಡ್ ಅರಬ್ ಎಮಿರೇಟ್ಸ್)

ದುಬೈ ಇಲ್ಲಿ ದೊಡ್ಡ ನಗರ. ಗಗನಚುಂಬಿ ಕಟ್ಟಡಗಳು ಇಲ್ಲಿ ಖಂಡಿತ ನಿಮ್ಮನ್ನು ಬೆರಗುಗೊಳಿಸದೆ ಇರಲಾರದು. ದುಬೈ, ಕಡಲತೀರಗಳು ಮತ್ತು ಮರಳು ದಿಬ್ಬಗಳ ವಿರುದ್ಧ ನಿರ್ಮಿಸಲಾದ ಕಲಾ ಕಟ್ಟಡಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿ ಪಾಮ್ ಜುಮೇರಾದಲ್ಲಿ ಸ್ಕೈಡೈವಿಂಗ್ ಮಾಡುವುದು ಬಹಳ ಮಜಾವಾಗಿರುತ್ತದೆ. ಹಾಗೆಯೇ ನಾನ್ ವೆಜ್ ಪ್ರಿಯರು ಅಲ್ ಮಚ್ಬೂಸ್ ಮತ್ತು ಖುಜಿಯನ್ನು ಸವಿಯುವುದನ್ನು ಮರೆಯದಿರಿ.

ಏತನ್ಮಧ್ಯೆ ಅಬುಧಾಬಿ ತನ್ನ ಐಷಾರಾಮಿ ರೆಸಾರ್ಟ್‌ಗಳು ಮತ್ತು ಬೆರಗುಗೊಳಿಸುವ ನೈಸರ್ಗಿಕ ದ್ವೀಪಗಳು ಮತ್ತು ಮರಳು ದಿಬ್ಬಗಳಿಗೆ ಹೆಸರುವಾಸಿಯಾಗಿದೆ. ವಿಮಾನದಲ್ಲಿ ಕೊಚ್ಚಿನ್‌ನಿಂದ ದುಬೈಗೆ 4 ಗಂಟೆಗಳು ಮತ್ತು ನವದೆಹಲಿಯಿಂದ ಅಬುಧಾಬಿಗೆ 3 ಗಂಟೆ 20 ನಿಮಿಷಗಳು ತೆಗೆದುಕೊಳ್ಳುತ್ತದೆ.

ಮಲೇಷ್ಯಾ

ಮಲೇಷ್ಯಾ

ಪ್ರಾಚೀನ ಕಡಲತೀರಗಳು, ಹಚ್ಚ ಹಸಿರಿನ ಕಾಡುಗಳು, ಅಭಿವೃದ್ಧಿ ಹೊಂದುತ್ತಿರುವ ಆಧುನಿಕ ನಗರಗಳು ಮತ್ತು ಹಳೆಯ-ಪ್ರಪಂಚದ ವಸಾಹತುಶಾಹಿ ಪ್ರದೇಶಗಳನ್ನು ಹೊಂದಿರುವ ಮಲೇಷ್ಯಾ ನಿಜವಾಗಿಯೂ ವೈವಿಧ್ಯಮಯವಾಗಿದೆ. ಬಟು ಗುಹೆಗಳು, ಮನುಕನ್ ದ್ವೀಪ, ಗುನುಂಗ್ ಗ್ಯಾಡಿಂಗ್ ರಾಷ್ಟ್ರೀಯ ಉದ್ಯಾನವನ ಮತ್ತು ಮಲಕ್ಕಾ ಕ್ರೈಸ್ಟ್ ಚರ್ಚ್‌ನಂತಹ ವಿಶ್ವ ಪರಂಪರೆಯ ತಾಣಗಳಿಗೆ ಮತ್ತು ಲಂಕಾವಿ ಮತ್ತು ರೆಡಾಂಗ್ ದ್ವೀಪಗಳಿಗೂ ಸಹ ಭೇಟಿ ನೀಡಲೇಬೇಕು.

ವಿಶ್ವದ ಅತ್ಯುತ್ತಮ ಆಹಾರ ತಾಣಗಳ ಪಟ್ಟಿಗಳಲ್ಲಿ ಈ ದೇಶವು ಅಗ್ರಸ್ಥಾನದಲ್ಲಿದೆ, ಮಿ ಗೊರೆಂಗ್, ಲ್ಯಾಂಬ್ ರೆಂಡಾಂಗ್, ನಾಸಿ ಲೆಮಾಕ್ ಮತ್ತು ಇತರ ಸ್ಥಳೀಯ ಭಕ್ಷ್ಯಗಳು ನಾನ್ ವೆಜ್ ಪ್ರಿಯರಿಗೆ ಖಂಡಿತ ಇಷ್ಟವಾಗುತ್ತದೆ. ಕಾಡುಗಳ ಮೂಲಕ ಹೈಕಿಂಗ್ ಮಾಡುವುದು, ವರ್ಣರಂಜಿತ ಮಾರುಕಟ್ಟೆಗಳಲ್ಲಿ ಶಾಪಿಂಗ್ ಮಾಡುವುದು ಮತ್ತು ಕಡಲತೀರಗಳಲ್ಲಿ ಲೇಜಿಂಗ್ ಮಾಡುವುದು ಒಟ್ಟಾರೆ ನೀವಿಲ್ಲಿ ಸಮಯವನ್ನು ಕಳೆಯಲು ಅತ್ಯುತ್ತಮ ಮಾರ್ಗಗಳಿವೆ. ನಿಮಗೆ ವಿಮಾನದಲ್ಲಿ ಚೆನ್ನೈನಿಂದ ಕೌಲಾಲಂಪುರಕ್ಕೆ 4 ಗಂಟೆಗಳು ತೆಗೆದುಕೊಳ್ಳುತ್ತದೆ.

ಥೈಲ್ಯಾಂಡ್‌

ಥೈಲ್ಯಾಂಡ್‌

ಪ್ರತಿಯೊಬ್ಬ ಪ್ರವಾಸಿಗನು ಒಮ್ಮೆಯಾದರೂ ನೋಡಲೇಬೇಕಾದ ತಾಣವಿದು. ಥೈಲ್ಯಾಂಡ್‌ನ ರಾತ್ರಿಜೀವನ, ಬೆರಗುಗೊಳಿಸುವ ಕಡಲತೀರಗಳು ಮತ್ತು ಪಾಕೆಟ್ ಸ್ನೇಹಿ ತಿನಿಸುಗಳು ಪ್ರವಾಸವನ್ನು ಎಂಜಾಯ್ ಮಾಡಲು ಸಹಾಯ ಮಾಡುತ್ತವೆ. ಫಿ ಫಿ ದ್ವೀಪಗಳು, ಆನೆಗಳ ಅಭಯಾರಣ್ಯ, ಬ್ಯಾಂಕಾಕ್‌ನ ಮೈಕೆಲಿನ್ ಸ್ಟಾರ್ ಸ್ಟ್ರೀಟ್ ಫುಡ್ ಸ್ಟಾಲ್‌ಗಳಲ್ಲಿ ಒಂದರಿಂದ ಪ್ಯಾಡ್ ಥಾಯ್, ಸಂಜೆಯ ನಂತರ ಬೀಚ್‌ನಲ್ಲಿ ಮಾವಿನ ಸ್ಟಿಕಿ ರೈಸ್ ಸವಿಯಿರಿ.

ಇಲ್ಲಿನ ಇತರ ಜನಪ್ರಿಯ ಚಟುವಟಿಕೆಗಳ ಪಟ್ಟಿಯಲ್ಲಿ ಥಾಯ್ ಮಸಾಜ್, ಥಾಯ್ ತೇಲುವ ಮಾರುಕಟ್ಟೆಗಳಿಗೆ ಭೇಟಿ ನೀಡುವುದು ಮತ್ತು ಮೌಯಿ ಥಾಯ್ ತರಗತಿಗಳು ಸೇರಿಕೊಂಡಿವೆ. ವಿಮಾನದಲ್ಲಿ ನಿಮಗೆ ನವದೆಹಲಿಯಿಂದ ಬ್ಯಾಂಕಾಕ್‌ಗೆ 3 ಗಂಟೆ 30 ನಿಮಿಷಗಳು ತೆಗೆದುಕೊಳ್ಳುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X