Search
  • Follow NativePlanet
Share
» »ಐಪಿಎಲ್ ಸೀಸನ್ ಶುರುವಾಗಿದೆ, ಯಾವ ಸ್ಟೇಡಿಯಂ ಎಲ್ಲಿದೆ ಗೊತ್ತಾ?

ಐಪಿಎಲ್ ಸೀಸನ್ ಶುರುವಾಗಿದೆ, ಯಾವ ಸ್ಟೇಡಿಯಂ ಎಲ್ಲಿದೆ ಗೊತ್ತಾ?

ಭಾರತದಲ್ಲಿ ಸುಮಾರು 49 ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣಗಳಿವೆ. ಇತರ ದೇಶಗಳಲ್ಲಿ ಸಾಮಾನ್ಯವಾಗಿ 26 ಕ್ರಿಕೆಟ್ ಮೈದಾನಗಳಿವೆ. ಭಾರತದಲ್ಲಿನ ಕೆಲವು ಮೈದಾನಗಳನ್ನು ಕ್ರಿಕೆಟ್ ಮ್ಯಾಚ್ ಸಂದರ್ಭ ಬಳಸಲಾಗುತ್ತಿದೆ ಕೆಲವನ್ನು ಬಳಸಲಾಗುತ್ತಿಲ್ಲ. ಕೆಲವು ಮುಖ್ಯವಾಗಿರುವ ಕ್ರಿಕೆಟ್ ಸ್ಟೇಡಿಯಂಗಳು ಯಾವುವು ಎಲ್ಲಿವೆ ಅನ್ನೋದನ್ನು ನೋಡೋಣ.....

ಎಂ ಚಿನ್ನಸ್ವಾಮಿ ಕ್ರೀಡಾಂಗಣ

ಎಂ ಚಿನ್ನಸ್ವಾಮಿ ಕ್ರೀಡಾಂಗಣ

PC:Ashwin Kumar

ಎಂ ಚಿನ್ನಸ್ವಾಮಿ ಕ್ರೀಡಾಂಗಣ ಅಥವಾ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆ. ಎಸ್ ಸಿ. ಏ) ಕ್ರೀಡಾಂಗಣ ಬೆಂಗಳೂರು ಮತ್ತು ಕರ್ನಾಟಕ ರಾಜ್ಯದಲ್ಲಿರುವ ಅಂತರಾಷ್ಟ್ರೀಯ ಮಟ್ಟದ ಏಕೈಕ ಕ್ರೀಡಾಂಗಣ. ಸುಮಾರು 55 ಸಾವಿರ ಆಸನ ಕ್ಷಮತೆ ಹೊಂದಿರುವ ಈ ಕ್ರೀಡಾಂಗಣ ಬೆಂಗಳೂರು ನಗರದ ಮಧ್ಯದಲ್ಲಿ ಕಬ್ಬನ್ ಪಾರ್ಕ್ ಹಾಗು ಮಹಾತ್ಮಗಾಂಧಿ ರಸ್ತೆಗೆ ಹೊಂದಿಕೊಂಡಿದೆ.

ರಾಜೀವ್ ಗಾಂಧೀ ಅಂತರಾಷ್ಟ್ರೀಯ ಮೈದಾನ

ರಾಜೀವ್ ಗಾಂಧೀ ಅಂತರಾಷ್ಟ್ರೀಯ ಮೈದಾನ

PC:Jms1241

ರಾಜೀವ್ ಗಾಂಧೀ ಅಂತರಾಷ್ಟ್ರೀಯ ಮೈದಾನ ಇರುವುದು ತೆಲಂಗಾಣದ ಹೈದರಾಬಾದ್‌ನಲ್ಲಿ. ಹೈದರಾಬಾದ್ ಕ್ರಿಕೆಟ್ ಅಸೋಸಿಯೇಶನ್‌ನ ತವರು ಮೈದಾನವಾಗಿದೆ. 2003ರಲ್ಲಿ ನಿರ್ಮಿಸಲಾದ ಈ ಮೈದಾನದಲ್ಲಿ 60 ಸಾವಿರ ಜನರ ಆಸನದ ವ್ಯವಸ್ಥೆ ಇದೆ.

ವಾಂಖೆಡೆ ಕ್ರೀಡಾಂಗಣ

ವಾಂಖೆಡೆ ಕ್ರೀಡಾಂಗಣ

PC:G patkar

ಮುಂಬೈನಲ್ಲಿರುವ ವಾಂಖೆಡೆ ಕ್ರೀಡಾಂಗಣವು ಅತ್ಯಂತ ಹಳೆಯ ಕ್ರಿಕೇಟ್ ಮೈದಾನವಾಗಿದ್ದು, 1974ರಲ್ಲಿ ಇದನ್ನು ನಿರ್ಮಿಸಲಾಯಿತು. ಸುಮಾರು 34 ಸಾವಿರ ಜನರು ಕುಳಿತುಕೊಳ್ಳುವ ಕೆಪಾಸಿಟಿಯನ್ನು ಇದು ಹೊಂದಿದೆ. 2011ರ ವಿಶ್ವಕಪ್ ಪಂದ್ಯಾದ ಫೈನಲ್‌ ನಡೆದಿದ್ದು ಇಲ್ಲೇ. ಸಚಿನ್ ತೆಂಡೂಲ್ಕರ್ ತನ್ನ ಕೊನೆಯ ಏಕದಿನ ಪಂದ್ಯ ಆಡಿದ್ದು ಇದೆ ಸ್ಟೇಡಿಯಂನಲ್ಲಿ.

ಫಿರೋಜ್ ಶಾಹಾ ಕೋಟ್ಲಾ

ಫಿರೋಜ್ ಶಾಹಾ ಕೋಟ್ಲಾ

PC: BCCI

ಡೆಲ್ಲಿ ಡೇರ್‌ಡೇವಿಲ್ಸ್‌ಗಳ ತವರೂರಿನಲ್ಲಿರುವ ಫಿರೋಜ್ ಶಾಹಾ ಕೋಟ್ಲಾ ಕ್ರೀಡಾಂಗಣವು ಅತ್ಯಂತ ಹಳೇಯ ಕ್ರೀಡಾಂಗಣಗಳಲ್ಲಿ ಒಂದಾಗಿದೆ. ಇಲ್ಲಿ 1948ರಲ್ಲಿ ಮೊದಲ ಅಂತರಾಷ್ಟ್ರೀಯ ಕ್ರಿಕೇಟ್ ಪಂದ್ಯಾವಳಿ ಆಯೋಜಿಸಲಾಗಿತ್ತು. ಭಾರತದ ಟೆಸ್ಟ್ ಪಂದ್ಯಗಳಿಗೆ ಈ ಸ್ಟೇಡಿಯಂ ಲಕ್ಕಿ ಎನ್ನಲಾಗುತ್ತದೆ.

ವೀರ್ ನಾರಾಯಣ ಸಿಂಗ್ ಅಂತರಾಷ್ಟ್ರೀಯ ಮೈದಾನ, ರಾಯ್‌ಪುರ್

ವೀರ್ ನಾರಾಯಣ ಸಿಂಗ್ ಅಂತರಾಷ್ಟ್ರೀಯ ಮೈದಾನ, ರಾಯ್‌ಪುರ್

PC:MohitSingh

2008ರಲ್ಲಿ ನಿರ್ಮಿತವಾದ ಈ ಮೈದಾನವು ನಯಾ ರಾಯ್‌ಪುರ್ ಏರ್‌ಪೋರ್ಟ್ ಬಳಿ ಇದೆ. 50 ಸಾವಿರ ಜನರು ಕುಳಿತುಕೊಳ್ಳುವ ಸೌಲಭ್ಯವನ್ನು ಹೊಂದಿದೆ. 2010ರಲ್ಲಿ ಮೊದಲ ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯ ಇಲ್ಲಿ ನಡೆದಿದೆ.

MCAS ಸ್ಟೇಡಿಯಂ

MCAS ಸ್ಟೇಡಿಯಂ

PC:BPositive

ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಸ್ಟೇಡಿಯಂನ್ನು ಪೂಣೆಯ ಹೊರವಲಯದಲ್ಲಿದ್ದು ಇದನ್ನು 2011ರಲ್ಲಿ ನಿರ್ಮಿಸಲಾಯಿತು. 36 ಸಾವಿರ ಜನರ ಆಸನದ ವ್ಯವಸ್ಥೆ ಇಲ್ಲಿದೆ. ಕಿಂಗ್ಸ್‌X11 ಪಂಜಾಬ್‌ನ ತವರೂರಾಗಿದೆ. ಮೊದಲ ಅಂತರಾಷ್ಟ್ರೀಯ ಕ್ರಿಕೆಟ್ ಟಿ 20 ಪಂದ್ಯ 2012ರಲ್ಲಿ ನಡೆದಿತ್ತು.

ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಸ್ಟೇಡಿಯಂ ರಾಜ್‌ಕೋಟ್

ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಸ್ಟೇಡಿಯಂ ರಾಜ್‌ಕೋಟ್

ಗುಜರಾತ್‌ನ ಮೊದಲ ಸೋಲಾರ್ ಪವರ್‌ ಅಳವಡಿಸಲಾಗಿರುವ ಸ್ಟೇಡಿಯಂ ಇದಾಗಿದೆ. 28 ಸಾವಿರ ಜನರ ಆಸನದ ವ್ಯವಸ್ಥೆ ಇದೆ.

ವಿದರ್ಭ ಕ್ರಿಕೆಟ್ ಅಸೋಸಿಯೇಶನ್

ವಿದರ್ಭ ಕ್ರಿಕೆಟ್ ಅಸೋಸಿಯೇಶನ್

Jms1241

ಇದನ್ನು ವಿಸಿಎ ಎಂದು ಕರೆಯಲಾಗುತ್ತದೆ. ಮಹಾರಾಷ್ಟ್ರದ ನಾಗ್ಪುರ್‌ನಲ್ಲಿರುವ ಈ ಸ್ಟೇಡಿಯಂನ್ನು 2008ರಲ್ಲಿ ನಿರ್ಮಿಸಲಾಯಿತು. ಇದು 45 ಸಾವಿರ ಜನರ ಕೆಪಾಸಿಟಿಯನ್ನು ಹೊಂದಿದೆ. 2017ರಲ್ಲಿ 5 ಟೆಸ್ಟ್ 7 ಒನ್‌ಡೇ ಮ್ಯಾಚ್ ಹಾಗೂ 11 T20 ಪಂದ್ಯಗಳನ್ನು ನಡೆಸಿದೆ.

More News

Read more about: india cricket travel
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+