Search
  • Follow NativePlanet
Share
» »ಪ್ರತಿವರ್ಷ ಮಿಂಚು ಹೊಡೆದು ಛಿದ್ರವಾಗುತ್ತೆ ಇಲ್ಲಿನ ಶಿವಲಿಂಗ !

ಪ್ರತಿವರ್ಷ ಮಿಂಚು ಹೊಡೆದು ಛಿದ್ರವಾಗುತ್ತೆ ಇಲ್ಲಿನ ಶಿವಲಿಂಗ !

ಕುಲ್ಲು ಕಣಿವೆಯಯಲ್ಲಿ ಶಿವನ ದೀರ್ಘಕಾಲಿಕ ಉಪಸ್ಥಿತಿ ಇದೆ ಎನ್ನುವುದು ಹಲವರಿಗೆ ತಿಳಿದಿಲ್ಲ. ಸ್ವರ್ಗೀಯ ಕಣಿವೆಯಲ್ಲಿ ಸುಮಾರು 2,460 ಮೀಟರ್ ಎತ್ತರದಲ್ಲಿ, ಬಿಜ್ಲಿ ಮಹಾದೇವ್ ದೇವಸ್ಥಾನವಿದೆ. ಕುಲ್ಲುವಿನಿಂದ 22 ಕಿ.ಮೀ. ದೂರದಲ್ಲಿ ಈ ದೇವಾಲಯವಿದೆ. ಈ ದೇವಸ್ಥಾನಕ್ಕೆ ಹೋಗಬೇಕಾದರೆ 3 ಕಿಮೀ ಉದ್ದದ ಟ್ರೆಕ್ ಮೂಲಕ ತಲುಪಬಹುದು. ಇದು ಕಾವ್ಯಾತ್ಮಕ ಸೌಂದರ್ಯವನ್ನು ಹೊಂದಿರುವ ಕಣಿವೆಯ ವೀಕ್ಷಣೆಗಳನ್ನು ನೀಡುತ್ತದೆ.

ಲಿಂಗಕ್ಕೆ ಹೊಡೆಯುವ ಮಿಂಚು

ಲಿಂಗಕ್ಕೆ ಹೊಡೆಯುವ ಮಿಂಚು

PC: Ashish Sharma

ಪ್ರತಿ ವರ್ಷ, ಇಲ್ಲಿನ ಶಿವ ಲಿಂಗ ಅಥವಾ ಇಲ್ಲಿನ ದೇವತೆಯ ಪವಿತ್ರವಾದ ಮರದ ತ್ರಿಶೂಲದ ಮೇಲೆ ಮಿಂಚು ಹೊಡೆಯುತ್ತದೆ. ನೈಸರ್ಗಿಕವಾಗಿ, ಮಿಂಚು ಲಿಂಗದ ಮೇಲೆ ಬೀಳುವುದರಿಂದ ಶಿವಲಿಂಗವು ತುಂಡು ತುಂಡಾಗಿ ಹೋಗುತ್ತದೆ. ಆದರೆ ಅರ್ಚಕರು ಅದನ್ನು ಒಟ್ಟಾಗಿಸಿ ಬೆಣ್ಣೆ ಜೊತೆ ಹಿಟ್ಟು ಬಳಸಿ ಇಟ್ಟುಬಿಡುತ್ತಾರೆ. ಕೆಲವು ತಿಂಗಳುಗಳ ನಂತರ ಲಿಂಗವು ಮೊದಲಿನಂತೆಯೇ ಘನವಾದ ಆಕಾರವನ್ನು ತೆಗೆದುಕೊಳ್ಳುತ್ತದೆ.

ಶ್ರಾವಣ ಸೋಮವಾರ ಯಾವೆಲ್ಲಾ ದೇವಸ್ಥಾನಕ್ಕೆ ಹೋದ್ರೆ ಒಳ್ಳೆದು ಗೊತ್ತಾ?

ದೈವಿಕ ಅನುಗ್ರಹ

ದೈವಿಕ ಅನುಗ್ರಹ

PC: Chinchu.c

ಸ್ಥಳೀಯ ನಂಬಿಕೆಯ ಪ್ರಕಾರ, ಮಿಂಚು ಲಿಂಗವನ್ನು ಹೊಡೆದ ಕಾರಣದಿಂದಾಗಿ ಅದು ದೈವಿಕ ಅನುಗ್ರಹದಿಂದ ಕೂಡಿರುತ್ತದೆ. ಈ ಪ್ರದೇಶದ ನಿವಾಸಿಗಳು ಯಾವುದೇ ದುಷ್ಟತನದಿಂದ ರಕ್ಷಿಸಲು ಬಯಸುತ್ತಾರೆ. ಆದರೆ, ಮಿಂಚನ್ನು ವಿಶೇಷ ಶಕ್ತಿಗಳನ್ನು ಹೊಂದುವ ದೈವಿಕ ಆಶೀರ್ವಾದ ಎಂದು ಇತರರು ನಂಬುತ್ತಾರೆ.

ದಂತಕಥೆ

ದಂತಕಥೆ

PC:Ashish Sharma

ಈ ದೇವಸ್ಥಾನದ ಸುತ್ತಲಿನ ದಂತಕಥೆಯ ಪ್ರಕಾರ ಕುಲಂತ ಎಂಬ ರಾಕ್ಷಸನು ಕುಲ್ಲು ಕಣಿವೆಯಲ್ಲಿ ವಾಸವಾಗಿದ್ದನು. ಅವನು ಅಗಾಧವಾದ ಹಾವಿನ ರೂಪವನ್ನು ತೆಗೆದುಕೊಂಡು ಲಾಹೌಲ್-ಸ್ಪಿತಿಯ ಮಾಥನ್ ಹಳ್ಳಿಗೆ ತಲುಪಿದನು. ದುಷ್ಟ ಉದ್ದೇಶಗಳಿಂದ ಪ್ರೇರೇಪಿಸಲ್ಪಟ್ಟ ಕುಲಂತಾ ಇಡೀ ಹಳ್ಳಿಯನ್ನು ಪ್ರವಾಹ ಮಾಡಲು ಬಯಸಿದ್ದರು. ಆದ್ದರಿಂದ, ರಾಕ್ಷಸ ಹಾವು ಬಿಯಾಸ್ ನದಿಯ ಹರಿವನ್ನು ತಡೆಯೊಡ್ಡುವ ರೀತಿಯಲ್ಲಿ ಸ್ವತಃ ನಿಂತಿತ್ತು. ಭಗವಾನ್ ಶಿವ ಇದನ್ನು ಗಮನಿಸಿ, ತಕ್ಷಣವೇ ಅವನನ್ನು ಎದುರಿಸಲು ಹೊರಟನು.

ವಿಶೇಷ ಕಲ್ಲಿನಿಂದ ನಿರ್ಮಿತವಾದ ಈ ದೇವಸ್ಥಾನ 8 ತಿಂಗಳು ನೀರಿನಿಂದ ಮುಳುಗಿರುತ್ತಂತೆ

ಕುಲ್ಲು ಕಣಿವೆ ಹೆಸರು ಬಂದಿದ್ದು ಹೇಗೆ?

ಕುಲ್ಲು ಕಣಿವೆ ಹೆಸರು ಬಂದಿದ್ದು ಹೇಗೆ?

PC: Akshat Sharma

ಕುಲಂತನೊಂದಿಗೆ ತೀವ್ರ ಯುದ್ಧದಲ್ಲಿ ತೊಡಗಿದ ನಂತರ, ಶಿವನು ರಾಕ್ಷಸನನ್ನು ಕೊಂದನು. ಹಾವಿನ ಸಾವಿನ ನಂತರ, ಅವನ ಸಂಪೂರ್ಣ ದೇಹವು ಒಂದು ದೊಡ್ಡ ಪರ್ವತವಾಗಿ ಮಾರ್ಪಟ್ಟಿತು. ಬಹುಶಃ, ಕುಲಾಂತರ ಮರಣದ ನಂತರ ಈ ಕಣಿವೆ ಕುಲ್ಲು ಎಂದು ಕರೆಯಲ್ಪಟ್ಟಿತು. ಇನ್ನೊಂದು ಪುರಾಣವು ಈ ಸ್ಥಳವು ಪುರಾಣ ಘಟನೆಗೆ ಸಂಬಂಧಿಸಿದೆ ಎಂದು ನಂಬಲಾಗಿದೆ. ಇದರಲ್ಲಿ ಶಿವನು ಅಜೇಯ ರಾಕ್ಷಸ ಜಲಂಧರ್ ಅನ್ನು ಕೊಂದುಹಾಕುತ್ತಾನೆ.

1,000 ಮೆಟ್ಟಿಲು ಹತ್ತಬೇಕು

1,000 ಮೆಟ್ಟಿಲು ಹತ್ತಬೇಕು

PC: Accesscrawl

ಈ ಪವಿತ್ರ ಪ್ರಾಚೀನ ದೇವಾಲಯವನ್ನು ಭೇಟಿ ಮಾಡಲು 1,000 ಕ್ಕಿಂತಲೂ ಹೆಚ್ಚು ಮೆಟ್ಟಿಲುಗಳನ್ನು ಹತ್ತುವುದು ಅಗತ್ಯವಾಗಿರುತ್ತದೆ. ಆದಾಗ್ಯೂ, ಸುತ್ತಮುತ್ತಲಿನ ಎತ್ತರದ ದೇವದಾರು ಮರಗಳು ಮತ್ತು ಕುಲ್ಲಿ ಕಣಿವೆಯ ಸುಂದರ ನೋಟವು ನಿಮ್ಮನ್ನು ಈ ಮೆಟ್ಟಿಲು ಹತ್ತಲು ಒಂದು ಸ್ಫೂರ್ತಿಯಾಗಿದೆ. ಒಮ್ಮೆ ಪರ್ವತದ ಮೇಲೆ ಭೇಟಿ ನೀಡುವ ಪ್ರವಾಸಿಗರು ಕುಲ್ಲು ಮತ್ತು ಪಾರ್ವತಿ ಕಣಿವೆಯ ಸುಂದರವಾದ 360 ಡಿಗ್ರಿ ದೃಶ್ಯಗಳನ್ನು ಕಾಣುತ್ತಾರೆ.

ವಿಶೇಷ

ವಿಶೇಷ

ಶಿವರಾತ್ರಿ ಮತ್ತು ಶ್ರವಣ ತಿಂಗಳಲ್ಲಿ ಈ ದೇವಾಲಯದಲ್ಲಿ ಜಾತ್ರೆ ನಡೆಯುತ್ತದೆ. ಈ ಸಂದರ್ಭದಲ್ಲಿ ದೇಶದ ಇತರ ಭಾಗಗಳಿಂದ ಯಾತ್ರಾರ್ಥಿಗಳು ಆಗಮಿಸುತ್ತಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more