Search
  • Follow NativePlanet
Share
» »ಆವಲಬೆಟ್ಟಕ್ಕೆ ಅರ್ಧ ದಿನಕ್ಕಿಂತ ಕಡಿಮೆ ಅವಧಿಯ ಟ್ರಿಪ್

ಆವಲಬೆಟ್ಟಕ್ಕೆ ಅರ್ಧ ದಿನಕ್ಕಿಂತ ಕಡಿಮೆ ಅವಧಿಯ ಟ್ರಿಪ್

ಬೆಂಗಳೂರಿನ ಆವಲಬೆಟ್ಟ ಬೆಟ್ಟಗಳ ಸೌಂದರ್ಯದ ದೃಶ್ಯದ ಫೋಟೋ ತೆಗೆಯಬಹುದಾದಂತಹ ಪ್ರವಾಸವನ್ನು ಆನಂದಿಸಿ.

By Manjula

"ಸಣ್ಣ ಸ್ಥಳಗಳಲ್ಲಿ ದೊಡ್ಡ ಆಶ್ಚರ್ಯಗಳು ಹುದುಗಿರುತ್ತದೆ" ಎಂದು ಹೇಳುವುದು ತಪ್ಪು ಅಲ್ಲ! ಸಣ್ಣ ಟ್ರಿಪ್ ಯಾವಾಗಲೂ ಅಸಮಾನ್ಯವಾಗಿ ಹೊರಹೊಮ್ಮುವದು ಸುಳ್ಳಲ್ಲ. ಇದರ ಕ್ರೆಡಿಟ್ ಖಂಡಿತವಾಗಿಯೂ ನಮ್ಮೊಂದಿರುವವರಿಗೆ ಮತ್ತು ಹೋಗುವ ಜಾಗದ ಮೇಲೆ ಹೋಗುತ್ತದೆ.

ನಾವು ಎಲ್ಲಿಗೆ ನಿಮ್ಮನ್ನು ಕರೆದೊಯ್ಯುತ್ತಿದ್ದೇವೆ ಎಂದು ಆಶ್ಚರ್ಯಗೊಂಡಿರುವಿರಾ? ನಮ್ಮ ಸಿಲಿಕಾನ್ ನಗರದಿಂದ ತುಂಬಾ ದೂರದಲ್ಲಿರದ ಮತ್ತು ಎರಡು ತಾಸುಗಳ ಪ್ರಯಾಣವು ಸುಂದರವಾದ ಅವಲಬೆಟ್ಟವನ್ನು ಮುಟ್ಟಲು ಸಾಕಾಗುವುದು. ಇದು ಅತ್ಯಂತ ಪ್ರಸಿದ್ದ ನಂದಿ ಬೆಟ್ಟದ ಸಮೀಪದಲ್ಲಿದೆ.

Aavalbatta

Photo Courtesy: Akshatha Vinayak

ಅವಲ ಬೆಟ್ಟವನ್ನು ತಲುಪುವುದು ಹೇಗೆ?

ವಿಜಯನಗರ ಮತ್ತು ಹೆಬ್ಬಾಳದ ರಸ್ತೆಯಲ್ಲಿನ ಟ್ರಾಫಿಕ್ ನಿಂದ ಹೊರಗೆ ಬಂದು, ಯಲಹಂಕದ ಮೂಲಕ ದೇವನಹಳ್ಳಿ ರಸ್ತೆಗೆ ಬರಬೇಕು. ಬೆಳಗ್ಗಿನ ಸಂಚಾರ ಆಯ್ಕೆಮಾಡಿಕೊಂಡರೆ ಈ ಎಲ್ಲಾ ಟ್ರಾಫಿಕ್ ಜಾಮ್ ಗಳಿಂದ ಮುಕ್ತವಾಗಿ ಚಿಕ್ಕಬಳ್ಳಾಪುರಕ್ಕೆ ಸಂಪರ್ಕಿಸುವ ರಾ.ಹೆ ಏಳಕ್ಕೆ ಬರಬಹುದು.

ಆವಲಬೆಟ್ಟ, ಬೆಂಗಳೂರಿನಿಂದ 120 ಕಿ,ಮೀ ದೂರದಲ್ಲಿರುವ ಒಂದು ಸಣ್ಣ ಬೆಟ್ಟ. ಚಿಕ್ಕಬಳ್ಳಾಪುರದಿಂದ ರೆಡ್ಡಿಗೊಲ್ಲವರಹಳ್ಳಿ ಕಡೆಗೆ ಹೋಗಿ ಅಲ್ಲಿಂದ, ಪೆರೆಸಂದ್ರ ಕಡೆಗೆ ಎಡಕ್ಕೆ ಚಲಿಸಬೇಕು.. ಇದು ಬೆಂಗಳೂರಿನಿಂದ ಆವಲಬೆಟ್ಟಕ್ಕೆ ಸಂಪರ್ಕಿಸುವು ಸುಲಭ ರಸ್ತೆಯಾಗಿದೆ. ಪೆರೆಸಂದ್ರ ಗ್ರಾಮಾಂತರದಿಂದ ಚಿಕ್ಕಬಳ್ಳಾಪುರಕ್ಕೆ ಹದಿನಾರು ಕಿ.ಮೀ ಕ್ರಮಿಸಿದರೆ, ಈ ಪ್ರಯಾಣದ ವೇಳೆ ಹರಿದ್ವರ್ಣದ ಅನುಭವ ನಿಮಗಾಗುತ್ತದೆ. ಈ ವೇಳೆ ಫೋಟೋ ತೆಗೆದುಕೊಳ್ಳುವುದನ್ನು ಮರೆಯಬೇಡಿ.

Aavalbatta

Photo Courtesy: Akshatha Vinayak

ಹೆಚ್ಚಾಗಿ ಅಷ್ಟು ಬ್ಯೂಸಿಯಾಗಿರದ ಹೆದ್ದಾರಿ ಪ್ರಯಾಣ ಜೊತೆಗೆ ಮೋಡಭರಿತ ಮಾನ್ಸೂನ್ ಹೈವೇ ಪ್ರಯಾಣ ಮುದನೀಡುತ್ತದೆ. ರಾ.ಹೆ ಏಳರ ಯಲಹಂಕ ಮತ್ತು ದೇವನಹಳ್ಳಿಯ ನಡುವಿನ ಪ್ರವಾಸ ನೆನಪಿನಲ್ಲಿಡುವಂತೆ ಮಾಡುತ್ತದೆ.

Aavalbatta

Photo Courtesy: Akshatha Vinayak

ಬೆಂಗಳೂರಿನಿಂದ ಆವಲಬೆಟ್ಟದ ಪ್ರಯಾಣದ ವೇಳೆ ಇಕ್ಕೆಲಗಳಲ್ಲಿನ ಬೆಟ್ಟಗಳು ಪ್ರವಾಸಕ್ಕೆ ತೂಕ ನೀಡುತ್ತದೆ. ಈ ಪ್ರವಾಸದ ವೇಳೆ ಸಿಗುವ ಪ್ರಮುಖ ಬೆಟ್ಟ ನಂದಿ ಹಿಲ್ಸ್. ಪೆರೆಸಂದ್ರದಿಂದ ಚಿಕ್ಕಬಳ್ಳಾಪುರದ ಕಡೆಗೆ ಹಾದುಹೋಗುವಾಗ ನಂತರ ರಸ್ತೆಯ ಇಕ್ಕೆಲಗಳಲ್ಲಿ ಮರಗಿಡಗಳು ನಿಮ್ಮನ್ನು ಸ್ವಾಗತಿಸುತ್ತವೆ. ರಸೆಯ ಎರಡೂ ಬದಿಗಳಲ್ಲಿ ದ್ರಾಕ್ಷಿ ಸಹಿತ ವಿವಿಧ ತಳಿಗಳ ರಾಶಿ ನಿಮಗೆ ಭರ್ಜರಿ ಮುದ ನೀಡುತ್ತದೆ.

Aavalbatta

Photo Courtesy: Akshatha Vinayak

ಪೆರೆಸಂದ್ರ ಹೋಗುವ ತನಕ ವಿನಾಯಕ ಸೈನ್ ಬೋರ್ಡ್ ಸಿಗುತ್ತದೆ ಆದರೆ ಆವಲಬೆಟ್ಟ ಹೆಸರಿನಲ್ಲಿ ಬೋರ್ಡ್ ಇರುವುದಿಲ್ಲ. ಪೆರೆಸಂದ್ರದಿಂದ ಗ್ರಾಮಾಂತರ ಭಾಗಕ್ಕೆ ಎಡಕ್ಕೆ ಚಲಿಸಿದ ನಂತರವಷ್ಟೇ ಅಲ್ಲಲ್ಲಿ ಬೋರ್ಡ್ ಸಿಗುತ್ತದೆ, ಆದರೂ ಜಿಪಿಎಸ್ ಮೂಲಕ ನೀವು ಪ್ರಯಾಸವಿಲ್ಲದೇ ಆವಲಬೆಟ್ಟ ತಲುಪಬಹುದು. ಐದು ನಿಮಿಷದ ಘಾಟಿ ಪ್ರಯಾಣದಲ್ಲಿ ಎರಡು ಅಥವಾ ಮೂರು, ತೀವ್ರ ತಿರುವು ಸಿಗುತ್ತದೆ. ಪ್ರಯಾಸವಿಲ್ಲದೇ ಬೆಟ್ಟಕ್ಕೆ ತಲುಪಬಹುದು.

Aavalbatta

Photo Courtesy: Akshatha Vinayak

ಬೆಟ್ಟದ ಮುಖದ್ವಾರ

ಆವಲಬೆಟ್ಟವನ್ನು ದೇನಗುರಿ ಎಂದೂ ಕರೆಯಲಾಗುತ್ತದೆ ಮತ್ತು ಇದೊಂದು ಹಿಂದೂ ಪುಣ್ಯಕ್ಷೇತ್ರ.

Aavalbatta

Photo Courtesy: Akshatha Vinayak

ಬೆಟ್ಟ ಹತ್ತುವಾಗ ಗಮನಿಸಬೇಕಾಗಿರುವುದೇನಂದರೆ, ಹೆಚ್ಚು ಟ್ರೆಕ್ಕಿಂಗಿಗೆ ಇಲ್ಲಿ ಅವಕಾಶವಿಲ್ಲ. ಆದರೂ ನರಸಿಂಹಸ್ವಾಮಿ ದೇವಸ್ಥಾನದ ನಂತರ ಬೆಟ್ಟ ಸ್ವಲ್ಪ ಹತ್ತುವುದು ಸ್ವಲ್ಪ ದುಸ್ತರವಾಗುತ್ತದೆ.

Aavalbatta

Photo Courtesy: Akshatha Vinayak

ಮಂಗಗಳ ವಾಸಸ್ಥಾನ: ಬೆಟ್ಟ ಪ್ರದೇಶಗಳಲ್ಲಿ ಮಂಗಗಳು ಹೆಚ್ಚಿರುವಂತೆ, ಇಲ್ಲೂ ಹಾಗೆ. ನಿಮ್ಮ ಪ್ರವಾಸದ ಉದ್ದಗಲಕ್ಕೂ ಮಂಗಗಳು ನಿಮಗೆ ಸಾಥ್ ನೀಡುತ್ತದೆ. ಆಹಾರ ಪದಾರ್ಥಗಳನ್ನು ತೆಗೆದುಕೊಂಡು ಹೋಗುವುದು ಸ್ವಲ್ಪ ಕಷ್ಟವಾಗಬಹುದು.

Aavalbatta

Photo Courtesy: Akshatha Vinayak

ಇತರ ತಿನಿಸುಗಳು: ದೇವಾಸ್ಥಾನಕ್ಕೆ ಸ್ವಲ್ಪ ಮುನ್ನ, ಸೌತೇಕಾಯಿ ಮತ್ತು ಚರ್ಮುರಿ ತಿನ್ನಲು ಮರೆಯದಿರಿ. ತಿಂಡಿ ತಯಾರಿಸುವ ಕೊಡವವನ ಬಳಿಯೇ ಇದನ್ನು ತಿನ್ನಿ, ಇಲ್ಲಾಂದ್ರ ನಿಮಗೆ ಮಂಗಗಳು ತಿನ್ನಲು ಬಿಡುವುದಿಲ್ಲ. ನಿಮಗೆ ಆಸಕ್ತಿಯಿದ್ದಲ್ಲಿ ಜಾಗರೂಕತೆಯಿಂದ ಮಂಗಗಳಿಗೂ ಸೌತೇಕಾಯಿ ತಿನ್ನಿಸಬಹುದು.

Aavalbatta

Photo Courtesy: Akshatha Vinayak

ಲಕ್ಷ್ಮೀನರಸಿಂಹಸ್ವಾಮಿ ದೇವಾಲಯ: ಈ ಐತಿಹಾಸಿಕ ಪ್ರದೇಶದಲ್ಲಿ ನರಸಿಂಹಸ್ವಾಮಿ. ಚುಂಚಲಲಕ್ಷ್ಮಿಯನ್ನು ಮದುವೆಯಾದರು ಎನ್ನುವುದು ಪ್ರತೀತಿ. ನರಸಿಂಹಸ್ವಾಮಿಯ ಮೇಲೆ ಸಿಟ್ಟಾಗಿ ಚುಂಚಲಲಕ್ಷ್ಮಿ ಇದೇ ಬೆಟ್ಟದಲ್ಲಿ ಕೂತಿದ್ದಳು ಎನ್ನುವುದು ಪ್ರತೀತಿ. ಈ ಘಟನೆಗಳಿಗೆ ಪೂರಕವಾದ ಸಾಕ್ಷಿಗಳು ಈಗಲೂ ಈ ಪ್ರದೇಶದಲ್ಲಿದೆ.

Aavalbatta

Photo Courtesy: Akshatha Vinayak

ದೇನಗುರಿ : ಆವಲಬೆಟ್ಟವನ್ನು ದೇನಗುರಿಯೆಂದೂ ಕರೆಯಲಾಗುತ್ತದೆ. ಪುರಾಣದ ಪ್ರಕಾರ, ಧೇನು ಅಥವಾ ಕಾಮಧೇನು, ಆವಲಬೆಟ್ಟದ ಪುರಾಣವನ್ನು ಹೊಂದಿದೆ. ಆವಲ ಎನ್ನುವುದು ತೆಲುಗು ಹೆಸರು, ಇದರರ್ಥ ಹಸು, ಇದಕ್ಕಾಗಿಯೇ ಇದಕ್ಕೆ ಆವಲಬೆಟ್ಟ ಎನ್ನುವ ಹೆಸರು ಬಂದಿದೆ.

Aavalbatta

Photo Courtesy: Akshatha Vinayak

ಬೆಟ್ಟ ಹತ್ತುವಾಗ ನಿಮಗೆ ಹಲವು ಪುಷ್ಕರಣಿಗಳು ಸಿಗುತ್ತವೆ. ಮೊದಲ ಪುಷ್ಖರಣಿ ದೇವಾಲಯದ ಹತ್ತಿರವೇ ಸಿಗುತ್ತದೆ, ಪುಷ್ಕರಣಿಗಳೇ ಇಲ್ಲಿನ ಪ್ರಮುಖ ಆಕರ್ಷಣೆ. ಇಲ್ಲಿರುವ ಫೋಟೋ, ಇನ್ನೊಂದು ಪುಷ್ಕರಣಿ ಹೋಗುವ ಮುನ್ನ, ಮೊದಲ ಪುಷ್ಕರಣಿಯದ್ದಾಗಿದೆ.

Aavalbatta

Photo Courtesy: Akshatha Vinayak

ಅಕ್ಷತಾ ವಿನಾಯಕ್ ಓದುಗರಿಗಾಗಿ ಮತ್ತು ಪ್ರವಾಸಿಗರಿಗಾಗಿ, ಆವಲಬೆಟ್ಟ ಮತ್ತು ಸುತ್ತಮುತ್ತಲಿನ ಕೆಲವೊಂದು ಅದ್ಭುತ ಫೋಟೋಗಳನ್ನು ಸೆರೆಹಿಡಿದು ಕಳುಹಿಸಿದ್ದಾರೆ

Aavalbatta

Photo Courtesy: Akshatha Vinayak

ಪ್ರಮುಖ ಆಕರ್ಷಣೆ: ದೊಡ್ಡ ಸರೋವರ, ಗುಡ್ಡ ಮುಂತಾದವು ಆವಲಬೆಟ್ಟದ ಪ್ರಮುಖ ಆಕರ್ಷಣೆ. ಗುಡ್ಡದ ಕೆಲವೊಂದು ಆಯಕಟ್ಟಿನ ಸ್ಥಳಗಳು ಭಯಾನಕ ಎನಿಸುತ್ತದೆ. ಆದರೂ, ಜನನಿಬಿಡ ಸಮಯದಲ್ಲಿ ಬೆಟ್ಟ ಹತ್ತುವುದಕ್ಕೂ ಕ್ಯೂನಲ್ಲಿ ನಿಲ್ಲಬೇಕಾಗುತ್ತದೆ.

Aavalbatta

Photo Courtesy: Akshatha Vinayak

ವಿನಾಯಕ ಬಿರುಗಾಳಿ ಬೆಟ್ಟಗಳು ; ಮೇಲ್ಭಾಗದಲ್ಲಿ ಗಾಳಿಯಲ್ಲಿ ತೂಗಾಡುವುದಕ್ಕೆ ಸಿದ್ಧರಾಗಿರಿ. ವಿಶೇಷವಾಗಿ ಬಂಡೆಗಳ ತುದಿಯಲ್ಲಿರುವ ಸಮತೋಲನವನ್ನು ಉಳಿಸಿಕೊಳ್ಳಲು ಬಹಳ ಸುಲಭವಲ್ಲ

Aavalbatta

Photo Courtesy: Akshatha Vinayak

ಆವಲಬೆಟ್ಟಕ್ಕೆ ತಲುವುದು ಹೇಗೆ : ಖಾಸಗಿ ವಾಹನ ವ್ಯವಸ್ಥೆ ಮಾಡಿಕೊಂಡು ಆವಲಬೆಟ್ಟಕ್ಕೆ ಹೋಗುವುದು ಉತ್ತಮ. ಬೆಂಗಳೂರಿನಿಂದ ಚಿಕ್ಕಬಳ್ಳಾಪುರಕ್ಕೆ ಖಾಸಗಿ ವಾಹನ ಮಾಡಿಕೊಂಡು ಹೋಗವುದು ಉತ್ತಮ, ಅಥವಾ ಮಂಡಿಕಲ್ ನಿಂದ ವಾಹನವನ್ನು ಬಾಡಿಗೆಗೆ ತೆಗೆದುಕೊಂಡು ಹತ್ತಬಹುದು. ಇಲ್ಲಿಗೆ ಸಂಪರ್ಕಿಸಲು ಹೆಚ್ಚಿನ ಮಾಹಿತಿ ಲಭ್ಯವಿರುವುದಿಲ್ಲ.

Aavalbatta

Photo Courtesy: Akshatha Vinayak

ವ್ಯವಸ್ಥೆಗಳು : ರೆಡ್ಡಿಗೊಲ್ಲವರಹಳ್ಳಿ ಕ್ರಮಿಸಿದರೆ ನಿಮಗೆ ಲಾಡ್ಜುಗಳು ಸಿಗುವುದಿಲ್ಲ. ಹಾಗಾಗಿ, ಹೆದ್ದಾರಿಯಲ್ಲೇ ಸಿಗುವ ಕಾಮತ್ ಅಥವಾ ನಂದಿ ಹೋಟೆಲ್ ನಲ್ಲಿ ಊಟ/ತಿಂಡಿ ಮಾಡಿಕೊಂಡರೆ ಉತ್ತಮ. ಆವಲಬೆಟ್ಟದಲ್ಲಿ ಚರ್ಮುರಿ, ಸೌತೇಕಾಯಿ ಮುಂತಾದವು ಸಿಗುತ್ತದೆ. ಆದರೂ, ಮಂಗಗಳ ಹಾವಳಿಯಿಂದ ಇಲ್ಲಿ ತಿನ್ನುವುದು ದುಸ್ತರವೇ ಸರಿ.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X