ಬೆಂಗಳೂರಿನ ಪ್ರಮುಖ ಪ್ರವಾಸಿ ಆಕರ್ಷಣೆಗಳ ಪೈಕಿ ಒಂದಾಗಿರುವ ಲಾಲ್ ಬಾಗ್ ನಲ್ಲಿ ಪ್ರತಿ ವರ್ಷವೂ ಫಲಪುಷ್ಪ ಪ್ರದರ್ಶನವನ್ನು ಅದ್ದೂರಿಯಾಗಿ ಆಯೋಜಿಸಲಾಗುತ್ತದೆ. ಸಾಮಾನ್ಯ ದಿನಗಳಲ್ಲೆ ಸಾಕಷ್ಟು ಜನ ಭೇಟಿ ನೀಡುವ ಈ ಸಸ್ಯೋದ್ಯಾನಕ್ಕೆ ಪುಷ್ಪ ಪ್ರದರ್ಶನದ ಕಳೆ ತುಂಬಿದಾಗ ಕೇಳಬೇಕೆ? ಶಾಲಾ ಮಕ್ಕಳಿಂದ ಹಿಡಿದು ಹಿರಿಯ ಜೀವಗಳವರೆಗೂ ತಂಡೋಪತಂಡವಾಗಿ ಈ ಪುಷ್ಪ ಪ್ರದರ್ಶನದ ಸವಿ ಸವಿಯಲು ಬರುತ್ತಾರೆ. ಕರ್ನಾಟಕ ತೋಟಗಾರಿಕೆ ಇಲಾಖೆಯಡಿಯಲ್ಲಿ ಬರುವ ಲಾಲ್ ಬಾಗ್ ನಲ್ಲಿ ಈ ವರ್ಷವೂ ಫಲಪುಷ್ಪ ಪ್ರದರ್ಶನವನ್ನು ಅದ್ದೂರಿಯಾಗಿ ಆಯೋಜಿಸಲಾಗಿದೆ.
ಈ ಪ್ರದರ್ಶನ ಜನವರಿ 26 ರ ವರೆಗೂ ನಡೆಯಲಿದೆ. ಮನಸ್ಸಿಗೆ ಆನಂದ ಉಂಟುಮಾಡುವ ಅನೇಕ ಬಗೆಯ, ವಿವಿಧ ಬಣ್ಣ ಚಿತ್ತಾರಗಳ ಪುಷ್ಪಗಳು ಈ ಪ್ರದರ್ಶನದಲ್ಲಿ ನಿಮ್ಮ ಹೃದಯವನ್ನು ಕದಿಯುತ್ತವೆ ಎಂದರೆ ತಪ್ಪಾಗಲಾರದು. ಸಮಯ: ಬೆಳಿಗ್ಗೆ 9 ಘಂಟೆಯಿಂದ ಸಂಜೆ 6 ಘಂಟೆಯವರೆಗೆ. ಮೈಸೂರು ತೋಟಗಾರಿಕಾ ಸೊಸೈಟಿ ಹಾಗು ತೋಟಗಾರಿಕಾ ಇಲಾಖೆಗಳ ವತಿಯಿಂದ ಈ ಪ್ರದರ್ಶನವನ್ನು ಆಯೋಜಿಸಲಾಗಿದೆ.

ಲಾಲ್ ಬಾಗ್ ಪುಷ್ಪ ಪ್ರದರ್ಶನ:
ಫಲಪುಷ್ಪ ಪ್ರದರ್ಶನದ ಕುರಿತು ಮಾಹಿತಿ ನೀಡುವ ಬ್ಯಾನರ್.

ಲಾಲ್ ಬಾಗ್ ಪುಷ್ಪ ಪ್ರದರ್ಶನ:
ಫಲದಾತರಿಗೆ ನಮನ ಎಂಬ ಸಂದೇಶ ಹೊತ್ತು ನಿಂತ ಮಹಿಳೆಯ ಸ್ಥಬ್ದ ಚಿತ್ರ.

ಲಾಲ್ ಬಾಗ್ ಪುಷ್ಪ ಪ್ರದರ್ಶನ:
ತಾಳೆ ಎಣ್ಣೆಯನ್ನು ಉತ್ಪಾದಿಸಲಾಗುವ ತಾಳೆ ಹಣ್ಣಿನ ಪ್ರದರ್ಶನ.

ಲಾಲ್ ಬಾಗ್ ಪುಷ್ಪ ಪ್ರದರ್ಶನ:
ಸಾಗರದಂತೆ ಹರಡಿರುವ ಹೂಗಳ ರಾಶಿ

ಲಾಲ್ ಬಾಗ್ ಪುಷ್ಪ ಪ್ರದರ್ಶನ:
ಕೆಂಪಿನ ಕಂಪು ಹೂಗಳ ನಂಟು

ಲಾಲ್ ಬಾಗ್ ಪುಷ್ಪ ಪ್ರದರ್ಶನ:
ಹೂಗಳ ಅಂದವನ್ನು ಏಕಚಿತ್ತದಿಂದ ವೀಕ್ಷಿಸುತ್ತಿರುವ ಜನಸ್ತೋಮ.

ಲಾಲ್ ಬಾಗ್ ಪುಷ್ಪ ಪ್ರದರ್ಶನ:
ವಿವಿಧ ಬಣ್ಣಗಳಿಂದ ಕಂಗೊಳಿಸುತ್ತಿರುವ ಪುಷ್ಪರಾಶಿ

ಲಾಲ್ ಬಾಗ್ ಪುಷ್ಪ ಪ್ರದರ್ಶನ:
ಬಗೆ ಬಗೆಯ ಪುಷ್ಪಗಳಿಂದ ಸುತ್ತುವರೆದಿರುವ ಚೆಂಡು ಹೂವು.

ಲಾಲ್ ಬಾಗ್ ಪುಷ್ಪ ಪ್ರದರ್ಶನ:
ಅಂದ ಚೆಂದಗಳ ಪುಷ್ಪ ಗಿರಿ.

ಲಾಲ್ ಬಾಗ್ ಪುಷ್ಪ ಪ್ರದರ್ಶನ:
ಕರ್ನಾಟಕ ವೈನ್ ಬೋರ್ಡ್ ನಿಂದ ತಯಾರಿಸಲಾಗುವ ವಿವಿಧ ವೈನ್ ಗಳು.

ಲಾಲ್ ಬಾಗ್ ಪುಷ್ಪ ಪ್ರದರ್ಶನ:
ರಂಗು ರಂಗಾದ ಪುಷ್ಪವನ.

ಲಾಲ್ ಬಾಗ್ ಪುಷ್ಪ ಪ್ರದರ್ಶನ:
ಹೂಗಳಿಗೆ ಧಕ್ಕೆಯಾಗದಂತೆ ಪಹರೆಯಲ್ಲಿ ನಿರತ ಕಾವಲುಗಾರ.

ಲಾಲ್ ಬಾಗ್ ಪುಷ್ಪ ಪ್ರದರ್ಶನ:
ಮಾವಿನ ಹಣ್ಣಿನ ಆಕಾರದಲ್ಲಿ ಸಿಂಗರಿಸಲ್ಪಟ್ಟ ಹೂವುಗಳು.

ಲಾಲ್ ಬಾಗ್ ಪುಷ್ಪ ಪ್ರದರ್ಶನ:
ಪ್ರದರ್ಶನಕ್ಕೆ ತಂಡೋಪತಂಡವಾಗಿ ಆಗಮಿಸುತ್ತಿರುವ ಜನ ಸಮೂಹ.

ಲಾಲ್ ಬಾಗ್ ಪುಷ್ಪ ಪ್ರದರ್ಶನ:
ರಾಕೇಟ್ ಮಾದರಿಯಲ್ಲಿ ಸಿಂಗರಿಸಲ್ಪಟ್ಟ ಹೂವುಗಳು.

ಲಾಲ್ ಬಾಗ್ ಪುಷ್ಪ ಪ್ರದರ್ಶನ:
ಗೋಡಂಬಿ ಹಣ್ಣಿನ ಆಕಾರ ಹೊತ್ತು ನಿಂತ ಕೆಂಪು ಹೂವುಗಳು.

ಲಾಲ್ ಬಾಗ್ ಪುಷ್ಪ ಪ್ರದರ್ಶನ:
ದಾಳಿಂಬೆ, ಗೋಡಂಬಿಗಳ ಒಡನಾಟ.....

ಲಾಲ್ ಬಾಗ್ ಪುಷ್ಪ ಪ್ರದರ್ಶನ:
ಅನನ್ಯವಾಗಿ ಗೋಚರಿಸುವ ಆರ್ಕಿಡ್ ಹೂವುಗಳು.

ಲಾಲ್ ಬಾಗ್ ಪುಷ್ಪ ಪ್ರದರ್ಶನ:
ಮಖ್ಮಲ್ಲಿನ ಬಟ್ಟೆಯಂತೆ ಗೋಚರಿಸುವ ಒಂದು ವಿಶೀಷ್ಟ ಬಗೆಯ ಹೂವು.

ಲಾಲ್ ಬಾಗ್ ಪುಷ್ಪ ಪ್ರದರ್ಶನ:
ಸುಂದರವಾಗಿ ಕಂಗೊಳಿಸುವ ಪುಟ್ಟ ಪುಟ್ಟ ಹೂವುಗಳು.

ಲಾಲ್ ಬಾಗ್ ಪುಷ್ಪ ಪ್ರದರ್ಶನ:
ಮನೆ ಕೈದೋಟದ ಅಂದ ಚೆಂದವನ್ನು ಹೆಚ್ಚಿಸುವ ಸುಂದರ ಪುಷ್ಪಗಳು.

ಲಾಲ್ ಬಾಗ್ ಪುಷ್ಪ ಪ್ರದರ್ಶನ:
ಮೈಮನ ಪುಳಕಿತಗೊಳಿಸುವ ಬಣ್ಣ ಬಣ್ಣದ ಚಿಕ್ಕ ಹೂವುಗಳು.

ಲಾಲ್ ಬಾಗ್ ಪುಷ್ಪ ಪ್ರದರ್ಶನ:
ನಾ ಅಂದ..ನಾ ಚೆಂದ ಎಂದು ತಮ್ಮೊಳಗೆ ಸ್ಪರ್ಧೆಗಿಳಿದಿರುವ ಪುಷ್ಪಗಳು.

ಲಾಲ್ ಬಾಗ್ ಪುಷ್ಪ ಪ್ರದರ್ಶನ:
ಅಂದದ ಮನೆಯ ಸೊಬಗನ್ನು ಮತ್ತಷ್ಟು ಸುಂದರವನ್ನಾಗಿಸುವ ಹೂಗಳು.

ಲಾಲ್ ಬಾಗ್ ಪುಷ್ಪ ಪ್ರದರ್ಶನ:
ಅಣಬೆಯ ರೂಪದಲ್ಲಿ ಕಂಗೊಳಿಸುತ್ತಿರುವ ಹೂವುಗಳು.

ಲಾಲ್ ಬಾಗ್ ಪುಷ್ಪ ಪ್ರದರ್ಶನ:
ಯಾವುದೆ ಅರಮನೆಯ ಮುಖ್ಯ ಮಾರ್ಗದ ಮಧ್ಯದಲ್ಲಿ ಕಂಗೊಳಿಸುವ ಕಾರಂಜಿಯ ಹಾಗೆ ಕಾಣುವ ಪುಷ್ಪರಾಶಿ.

ಲಾಲ್ ಬಾಗ್ ಪುಷ್ಪ ಪ್ರದರ್ಶನ:
ಪೊಕಳಿಯನ್ನು ವಿಶಾಲವಾಗಿ ಚಾಚಿ ನಗೆ ಬೀರುತ್ತಿರುವ ಹೂವುಗಳು.

ಲಾಲ್ ಬಾಗ್ ಪುಷ್ಪ ಪ್ರದರ್ಶನ:
ಎತ್ತರದ ಕಟ್ಟಡಗಳಂತೆ ಬೆಳೆದಿರುವ ಹೂವುಗಳು.

ಲಾಲ್ ಬಾಗ್ ಪುಷ್ಪ ಪ್ರದರ್ಶನ:
ಹಸಿರಿನ ಒಡಲಿನಲಿ ಬಣ್ಣದ ಚಿತ್ತಾರಗಳು.

ಲಾಲ್ ಬಾಗ್ ಪುಷ್ಪ ಪ್ರದರ್ಶನ:
ದುಂಬಿಗಳನ್ನು ಆಕರ್ಷಿಸುವ ಮಧು ಹೊತ್ತ ಪುಷ್ಪಗಳು.

ಲಾಲ್ ಬಾಗ್ ಪುಷ್ಪ ಪ್ರದರ್ಶನ:
ಕರ್ನಾಟಕ ಧ್ವಜ ಬಣ್ಣವನ್ನು ನೆನಪಿಸುವ ಹೂವುಗಳು.

ಲಾಲ್ ಬಾಗ್ ಪುಷ್ಪ ಪ್ರದರ್ಶನ:
ಮೋಹಕತೆಯ ನಗೆ ಬೀರಿರುವ ಹೂವುಗಳು.

ಲಾಲ್ ಬಾಗ್ ಪುಷ್ಪ ಪ್ರದರ್ಶನ:
ಕೆಂಪು, ಬಿಳಿ ಬಣ್ಣಗಳ ಅನನ್ಯ ಸಂಬಂಧ.

ಲಾಲ್ ಬಾಗ್ ಪುಷ್ಪ ಪ್ರದರ್ಶನ:
ಜನಗಳ ಗಮನ ಸೆಳೆವಂತಹ ಪುಷ್ಪಗಳು.

ಲಾಲ್ ಬಾಗ್ ಪುಷ್ಪ ಪ್ರದರ್ಶನ:
ಜೋಳದ ತೆನೆಗಳ ಹಾಗೆ ಕಂಗೊಳಿಸುವ ಬಣ್ಣ ಬಣ್ಣದ ಹೂವುಗಳು.

ಲಾಲ್ ಬಾಗ್ ಪುಷ್ಪ ಪ್ರದರ್ಶನ:
ಪೊಲೀಸ್ ಅಧಿಕಾರಿಯ ಗಮನವನ್ನೂ ಸೆಳೆದ ಪುಷ್ಪಗಳು.

ಲಾಲ್ ಬಾಗ್ ಪುಷ್ಪ ಪ್ರದರ್ಶನ:
ಗುಲಾಬಿಯ ಆಕರ್ಷಕ ನೋಟ.

ಲಾಲ್ ಬಾಗ್ ಪುಷ್ಪ ಪ್ರದರ್ಶನ:
ಹಳದಿ ಬಣ್ಣ ಗುಲಾಬಿಗಳ ಸುಂದರ ನೋಟ.

ಲಾಲ್ ಬಾಗ್ ಪುಷ್ಪ ಪ್ರದರ್ಶನ:
ವಿವಿಧ ಬಣ್ಣದ ಗುಲಾಬಿ ಹೂಗಳು.

ಲಾಲ್ ಬಾಗ್ ಪುಷ್ಪ ಪ್ರದರ್ಶನ:
ಕೈದೋಟದ ಅಂದವನ್ನು ಹೆಚ್ಚಿಸುವ ಸುಂದರ ಗುಲಾಬಿಗಳು.

ಲಾಲ್ ಬಾಗ್ ಪುಷ್ಪ ಪ್ರದರ್ಶನ:
ಪ್ರೇಮದ ಸಂಕೇತ ಹೊತ್ತು ನಿಂತ ಗುಲಾಬಿ ಹೂಗಳು.

ಲಾಲ್ ಬಾಗ್ ಪುಷ್ಪ ಪ್ರದರ್ಶನ:
ಗೋಡೆಗಳ ಮೇಲೆ ಬೆಳೆಯಬಹುದಾದ ಬಳ್ಳಿಯ ಸುಂದರ ಹೂಗಳು.

ಲಾಲ್ ಬಾಗ್ ಪುಷ್ಪ ಪ್ರದರ್ಶನ:
ಪುಷ್ಪದ ಆಕಾರದಲ್ಲಿ ಹರಡಲಾದ ಸುಂದರ ಬಣ್ಣ ಬಣ್ಣದ ಹೂಗಳು.

ಲಾಲ್ ಬಾಗ್ ಪುಷ್ಪ ಪ್ರದರ್ಶನ:
ಮನೆಗಳ ಆವರಣದಲ್ಲಿ ಬೆಳೆಯಬಹುದಾದ ವಿವಿಧ ಪುಷ್ಪ ಸಸ್ಯಗಳು.

ಲಾಲ್ ಬಾಗ್ ಪುಷ್ಪ ಪ್ರದರ್ಶನ:
ಹೂಗಳ ರಾಶಿಯ ಮತ್ತೊಂದು ಸುಂದರ ನೋಟ.

ಲಾಲ್ ಬಾಗ್ ಪುಷ್ಪ ಪ್ರದರ್ಶನ:
ಅನನ್ಯ ಬಣ್ಣಗಳ ವಿವಿಧ ಹೂಗಳು.

ಲಾಲ್ ಬಾಗ್ ಪುಷ್ಪ ಪ್ರದರ್ಶನ:
ಗಾಜಿನ ಮನೆಯಲ್ಲಿ ಕಂಡುಬರುವ ಪುಷ್ಪ ಪ್ರದರ್ಶನದ ಒಂದು ನೋಟ.

ಲಾಲ್ ಬಾಗ್ ಪುಷ್ಪ ಪ್ರದರ್ಶನ:
ಲಾಲ್ ಬಾಗ್ ಉದ್ಯಾನದಲ್ಲಿ ಕಂಡುಬರುವ ವಿವಿಧ ಹೂಗಿಡಗಳು.

ಲಾಲ್ ಬಾಗ್ ಪುಷ್ಪ ಪ್ರದರ್ಶನ:
ಹೂಗಳ ಬೆಟ್ಟದ ರಾಶಿ.

ಲಾಲ್ ಬಾಗ್ ಪುಷ್ಪ ಪ್ರದರ್ಶನ:
ಕ್ರಮಬದ್ಧವಾದ ಮಾರ್ಗಗಳಲ್ಲಿ ಬೆಳೆಯಲಾದ ವಿವಿಧ ಹೂಗಳು.


Click it and Unblock the Notifications


















