• Follow NativePlanet
Share
» »ಸತ್ತವರನ್ನು ಬದುಕಿಸುವ ಪವಿತ್ರವಾದ ಸ್ಥಳವಿದು...

ಸತ್ತವರನ್ನು ಬದುಕಿಸುವ ಪವಿತ್ರವಾದ ಸ್ಥಳವಿದು...

Written By:

ನೀವು ನಂಬಿದರೆ ನಂಬಿ, ಬಿಟ್ಟರೆ ಬಿಡಿ ಆದರೆ ನಮ್ಮ ಭಾರತ ದೇಶದಲ್ಲಿ ಒಂದಲ್ಲ ಒಂದು ವಿಸ್ಮಯವಾಗುವುದಂತು ಸತ್ಯ. ಅದರಲ್ಲಿಯೂ ಜೀವನದಲ್ಲಿ ಎಂದೂ ನಂಬಲಾಗದಂತಹ ಸನ್ನಿವೇಶಗಳಾಗುತ್ತಾ ಇರುತ್ತವೆ. ಆ ಘಟನೆಗಳಲ್ಲಿ ಲಖ್‍ಮಂಡಲ್ ಕೂಡ ಒಂದು. ನಮಗೆ ನಿಮಗೆ ಸಾಮಾನ್ಯವಾಗಿ ತಿಳಿದಿರುವ ಸಂಗತಿ ಏನೆಂದರೆ ಆ ಭಗಂತನು ಮನುಷ್ಯರ ಪ್ರಾಣವನ್ನು ಯಾವಾಗ? ಹೇಗೆ? ತೆಗೆದುಕೊಳ್ಳುತ್ತಾನೆಯೋ ಆತನಿಗೆ ಮಾತ್ರ ಗೊತ್ತ. ಹಾಗೆಯೇ ಹೋದ ಪ್ರಾಣ ಮತ್ತೆ ಬರುವುದಿಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿಯೇ.. ಆದರೆ ಈ ಒಂದು ಸ್ಥಳದಲ್ಲಿ ಮಾತ್ರ ಹೋದ ಪ್ರಾಣ ಕೆಲವು ನಿಮಷಗಳ ಕಾಲ ಬದುಕಿಸುವ ಶಕ್ತಿಯನ್ನು ಹೊಂದಿದೆ ಎಂತೆ.

ಇದು ಸತ್ಯವೇ, ಸುಳ್ಳೇ ಎಂದು ನಿಮಗೆ ಅನ್ನಿಸದೇ ಇರುದು ಆದರೆ ಒಮ್ಮೆ ಭೇಟಿ ನೀಡಿ ನೀವೆ ಸತ್ಯಾಸತ್ಯತೆಗಳನ್ನು ತಿಳಿದುಕೊಳ್ಳಬಹುದು. ಅಸಲಿಗೆ ಈ ದೇವಾಲಯದ ಇರುವುದು ಎಲ್ಲಿ? ಆ ಪುಣ್ಯ ಸ್ಥಳವಾದರೂ ಯಾವುದು? ಆ ಸ್ಥಳದ ಮಹಿಮೆಯಾದರೂ ಏನು? ಎಂಬ ಹಲವಾರು ಪ್ರೆಶ್ನೆಗಳಿಗೆ ಉತ್ತರವನ್ನು ಲೇಖನದ ಮೂಲಕ ಸಂಕೀಪ್ತವಾಗಿ ಮಾಹಿತಿಯನ್ನು ಪಡೆಯೋಣ.

ಮಹಿಮಾನ್ವಿತವಾದ ಸ್ಥಳ

ಮಹಿಮಾನ್ವಿತವಾದ ಸ್ಥಳ

ಸತ್ತವರನ್ನು ಕೆಲವು ನಿಮಿಷಗಳ ಕಾಲ ಬದುಕಿಸುವ ಆ ಮಹಿಮಾನ್ವಿತವಾದ ಸ್ಥಳವಾದರೂ ಯಾವುದು ಎಂದು ಯೋಚಿಸುತ್ತಿದೀರಾ? ಹಾಗಾದರೆ ಕೇಳಿ ಆ ಪುಣ್ಯಸ್ಥಳವೇ ಪರಮಶಿವನು ನೆಲೆಸಿರುವ ಶಕ್ತಿಯುತವಾದ ದೇವಾಲಯವಾಗಿದೆ. ಆ ದೇವಾಲಯದ ಹೆಸರು ಲಖ್‍ಮಂಡಲ್ ಮಂದಿರ.


Bpmnnit

ಲಖ್‍ಮಂಡಲ್ ಮಂದಿರ್

ಲಖ್‍ಮಂಡಲ್ ಮಂದಿರ್

ಲಖ್‍ಮಂಡಲ್ ಒಂದು ಪುರಾತನವಾದ ಹಿಂದೂ ದೇವಾಲಯವಾಗಿದ್ದು, ಮಹಾಶಿವನಿಗೆ ಅರ್ಪಿತವಾದ ಪವಿತ್ರವಾದ ಸ್ಥಳವಾಗಿದೆ. ಈ ಮಂದಿರವು ತನ್ನ ಶಕ್ತಿಗೆ ಅತ್ಯಂತ ಪ್ರಸಿದ್ಧವಾಗಿದೆ ಎಂದೇ ಹೇಳಬಹುದು. ಈ ದೇವಾಲಯಕ್ಕೆ ಭೇಟಿ ನೀಡಿದರೆ ತಮ್ಮ ದುರದೃಷ್ಟವನ್ನು ದೂರವಾಗಿಸಿಕೊಳ್ಳುತ್ತಾರೆ ಎಂದೂ ಕೂಡ ಹೇಳಲಾಗುತ್ತಿದೆ.

Bmandola

ಪಾಂಡವರು

ಪಾಂಡವರು

ಪಾಂಡವರ ಅಜ್ಞಾತ ವಾಸದಲ್ಲಿದ್ದಾಗ ಕೆಲವು ಕಾಲಗಳು ಈ ಸ್ಥಳದಲ್ಲಿ ಕಳೆದರೆ ಎಂದು ಹೇಳಲಾಗುತ್ತದೆ. ಪಾಂಡವರು ಕಾಲಿಟ್ಟ ಪವಿತ್ರವಾದ ಸ್ಥಳ ಇದು ಎಂದೇ ಹೇಳಬಹುದು.


Bpmnnit

ಲಿಂಗ

ಲಿಂಗ

ಲಖ್‍ಮಂಡಲ್ ಎಂಬ ಪದವು 2 ಪದಗಳಿಂದ ಬಂದಿದೆ. ಲಖಾ ಅಂದರೆ "ಆನೇಕ" ಮತ್ತು ಮಂಡಲ್ ಎಂದರೆ " ದೇವಾಲಯ" ಅಥವಾ "ಲಿಂಗ" ಎಂಬರ್ಥವನ್ನು ನೀಡುತ್ತದೆ. ಇಲ್ಲಿ ಭಾರತದ ಪುರಾತತ್ತ್ವ ಶಾಸ್ತ್ರದ ಸಮೀಕ್ಷೆಯ ಉತ್ಖನನದಲ್ಲಿ ಸಾಕಷ್ಟು ಕಲಾತ್ಮಕವಾದ ಕೃತಿಗಳು ಇಲ್ಲಿ ಕಂಡು ಬಂದಿದೆ.


Bmandola

ಆಕರ್ಷಣೆ

ಆಕರ್ಷಣೆ

ಈ ದೇವಾಲಯದ ಮುಖ್ಯವಾದ ಆಕರ್ಷಣೆ ಎಂದರೆ ಅದು ಗ್ರಾನೈಟ್‍ನ ಲಿಂಗವೇ ಆಗಿದೆ. ತೇವ ಮತ್ತು ಅದರ ಸುತ್ತಮುತ್ತಲಿನ ಪ್ರತಿಬಿಂಬವನ್ನು ಅದು ಹೊಳೆಯುವಂತೆ ಮಾಡುತ್ತದೆ. ಲಿಂಗವನ್ನು ಕಂಡರೆ ಭಕ್ತರು ಭಕ್ತಿ, ಭಾವದಿಂದ ತಲ್ಲೀನರಾಗುತ್ತಾರೆ.

Bmandola

ಮಹಾಭಾರತ

ಮಹಾಭಾರತ

ಸ್ಥಳೀಯ ಜನರ ಪ್ರಕಾರ, ಮಹಾಭಾರತದಲ್ಲಿನ ದುರ್ಯೋಧನ ಒಂದು ಲಕ್ಷ್ಯಗೃಹದಲ್ಲಿ ಭಾಸ್ಕರನನ್ನುಜೀವಂತವಾಗಿ ಸುಡುವಂತೆ ಒಂದು ಮನೆಯನ್ನು ನಿರ್ಮಾಣ ಮಾಡುತ್ತಾನೆ. ಆ ಗೃಹವೇ ಪ್ರಸ್ತುತ ದೇವಾಲಯವಿರುವ ಮತ್ತು ಪಕ್ಕದ ಪ್ರದೇಶ ಎಂದು ನಂಬಲಾಗಿದೆ.

Bmandola

ದನಾವ ಮತ್ತು ಮಾನವ ಪ್ರತಿಮೆ

ದನಾವ ಮತ್ತು ಮಾನವ ಪ್ರತಿಮೆ

ದನಾವ ಮತ್ತು ಮಾನವ ಎಂಬ ಅವಳಿ ಪ್ರತಿಮೆಗಳು ಮುಖ್ಯವಾದ ದೇವಾಲಯದ ಪಕ್ಕದಲ್ಲಿಯೇ ಇದೆ. ಈ ಪ್ರತಿಮೆಯನ್ನು ಕೆಲವರು ಪಾಂಡವ ಸಹೋದರರಾದ ಭೀಮ ಮತ್ತು ಅರ್ಜುನರು ಎಂದು ನಂಬುತ್ತಾರೆ.


Bpmnnit

ಸತ್ತವರು ಮತ್ತೆ ಬದುಕುವುದು

ಸತ್ತವರು ಮತ್ತೆ ಬದುಕುವುದು

ದನಾವ ಮತ್ತು ಮಾನವ ಪ್ರತಿಮೆಗಳು ವಿಷ್ಣುವಿನ ದ್ವಾರಪಾಲಕರಾದ ಜೈ ಮತ್ತು ವಿಜಯರನ್ನು ಹೋಲುತ್ತಾರೆ. ಯಾರಾದರೂ ಸಾಯುತ್ತಿರುವ ಸಮಯದಲ್ಲಿ ಅಥವಾ ಮರಣಹೊಂದುತ್ತಿರುವಾಗ ಈ ಮೂರ್ತಿಗಳ ಮುಂದೆ ಕರೆದುತರುತ್ತಾರೆ.


Bmandola

ಜೀವಂತ

ಜೀವಂತ

ತದನಂತರ ಮಹಾಶಿವನ ಪವಿತ್ರವಾದ ಅಭಿಷೇಕದ ಜಲವನ್ನು ಸಾಯುತ್ತಿರುವ ಮಾನುಷ್ಯನಿಗೆ ಅಥವಾ ಸತ್ತಿರುವ ಮನುಷ್ಯನಿಗೆ ಕುಡಿಸಿದರೆ ಕೆಲವು ನಿಮಿಷಗಳ ಕಾಲ ಬಹುದುಕುತ್ತಾರೆ ಅಂತೆ. ಇಲ್ಲಿ ಆ ಪರಮಶಿವನ ಶಕ್ತಿಯನ್ನು ಹೊಂದಿರುವ ಪವಿತ್ರವಾದ ಸ್ಥಳ ಎಂದು ನಂಬಲಾಗಿದೆ. ಆ ಪವಿತ್ರವಾದ ಜಲವು ಮಾನವನಿಗೆ ಜೀವಂತವಾಗಿಸುತ್ತದೆ ಎಂದರೆ ಯಾರಿಗೆ ತಾನೇ ಆಶ್ಚರ್ಯವಾಗುವುದಿಲ್ಲ ಹೇಳಿ.

Bmandola

ಧುಂಧಿ ಓಡಾರಿ

ಧುಂಧಿ ಓಡಾರಿ

ಈ ಸ್ಥಳಕ್ಕೆ ಹತ್ತಿರುದಲ್ಲಿಯೇ ಒಂದು ಧುಂಧಿ ಓಡಾರಿ ಎಂದು ಕರೆಯಲಾಗುವ ಗುಹೆ ಇದೆ. ಸ್ಥಳೀಯ ಜನರ ಪ್ರಕಾರ ದುರ್ಯೋಧನನಿಂದ ಕಾಪಾಡಿಕೊಳ್ಳಲು ಪಾಂಡವರು ಈ ಸ್ಥಳದಲ್ಲಿ ವಾಸವಿದ್ದರು ಎಂದು ನಂಬಲಾಗಿದೆ.

Bmandola

ಎಲ್ಲಿದೆ ಈ ದೇವಾಲಯ?

ಎಲ್ಲಿದೆ ಈ ದೇವಾಲಯ?

ಅಷ್ಟಕ್ಕೂ ಈ ದೇವಾಲಯ ಎಲ್ಲಿದೆ ಎಂದು ಯೋಚಿಸುತ್ತಿದ್ದೀರಾ? ಹಾಗಾದರೆ ಕೇಳಿ ಈ ಮಹಿಮಾನ್ವಿತವಾದ ದೇವಾಲಯವು ಉತ್ತರಾಖಂಡ ರಾಜ್ಯದಲ್ಲಿನ ಡೆಹ್ರಾಡೂನ್ ಜಿಲ್ಲೆಯ ಜೌನ್ಸರ್-ಬಾವರ್ ಪ್ರದೇಶದಲ್ಲಿದೆ. ಈ ದೇವಾಲಯವನ್ನು ಉತ್ತರಭಾರತ ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದೆ.


Bmandola

ಹೇಗೆ ತಲುಪಬೇಕು?

ಹೇಗೆ ತಲುಪಬೇಕು?

ಲಖ್ ಮಂಡಲ್ ಮಂದಿರವು ಚಕ್ರತಾದಿಂದ ಸುಮಾರು 100 ಕಿ.ಮೀ ದೂರದಲ್ಲಿದೆ. ರಸ್ತೆಯ ಮೂಲಕವೆಂದರೆ ಮೊದಲಿಗೆ ಪ್ರವಾಸಿಗರು ಚಕ್ರತಾಗೆ ತಲುಪಿ ತದನಂತರ ಸುಲಭವಾಗಿ ಲಖ್‍ಮಂಡಲಿಗೆ ಬಸ್ಸು ಅಥವಾ ಟ್ಯಾಕ್ಸಿಯ ಮೂಲಕ ತೆರಳಬಹುದಾಗಿದೆ.

ಸಮೀಪದ ರೈಲ್ವೆ ನಿಲ್ದಾಣವೆಂದರೆ ಅದು ಡೆಹ್ರಾಡೂನ್ ರೈಲ್ವೆ ನಿಲ್ದಾಣ. ಈ ರೈಲ್ವೆ ನಿಲ್ದಾಣದಿಂದ ಲಖ್‍ಮಂಡಲಿಗೆ ಸುಮಾರು 107 ಕಿ.ಮೀ ದೂರದಲ್ಲಿದೆ. ಸಮೀಪದ ವಿಮಾನ ನಿಲ್ದಾಣವೆಂದರೆ ಸು ಜಾಲಿ ಗ್ರಾಂಟ್ ವಿಮಾನ ನಿಲ್ದಾಣ. ಇಲ್ಲಿಂದ ಲಖ್‍ಮಂಡಲಿಗೆ ಸುಮಾರು 130 ಕಿ.ಮೀ ದೂರದಲ್ಲಿದೆ.

ದೇವರು ಇದ್ದಾನೆ ಎಂಬುದಕ್ಕೆ ಇದೊಂದು ಉತ್ತಮವಾದ ನಿದರ್ಶನ.....

ಕ್ಷೀರವು ನೀಲಿ ಬಣ್ಣವಾಗಿ ಪರಿರ್ವತನೆಯಾಗುವ ಮಹಿಮಾನ್ವಿತವಾದ ರಾಹು ದೇವಾಲಯ

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ