ಕುರುಡುಮಲೆ ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿರುವ ಪವಿತ್ರ ಸ್ಥಳವಾಗಿದೆ. ಈ ದೇವಾಲಯವು ಮುಳಬಾಗಿಲಿನಿಂದ 10 ಕಿಲೋಮೀಟರ್ ದೂರದಲ್ಲಿದೆ. ಕುರುಡುಮಲೆ ಗಣೇಶ ದೇವಸ್ಥಾನಕ್ಕೆ ಹೆಸರುವಾಸಿಯಾಗಿದೆ. ಐತಿಹಾಸಿಕ ಮಹತ್ವ ಹೊಂದಿರುವ ಈ ದೇವಾಯದಲ್ಲಿನ ಏಕಶಿಲಾ ಸಾಲಿಗ್ರಾಮ ಗಣೇಶನ ದರ್ಶನ ಮಾಡಿದ್ರೆ ಪುಣ್ಯ ಪ್ರಾಪ್ತಿಯಾಗುತ್ತದೆ ಎನ್ನುತ್ತಾರೆ.

13 ಅಡಿ ಎತ್ತರದ ಗಣೇಶ
ಚೋಳರ ಕಾಲದಲ್ಲಿ ನಿರ್ಮಿಸಿದ ಈ ದೇವಾಲಯದಲ್ಲಿ 13 ಅಡಿ ಎತ್ತರದ ಸಾಲಿಗ್ರಾಮ ಕಲ್ಲಿನ ಗಣೇಶ ವಿಗ್ರಹವಿದೆ. ಯಾವುದೇ ವ್ಯಕ್ತಿ ಸ್ವಚ್ಛ ಮನಸ್ಸಿನಿಂದ ಈ ಗಣೇಶನ ಮುಂದೆ ಪ್ರಾರ್ಥೀಸಿದರೆ ಅವರ ಇಷ್ಟಾರ್ಥ ಸಿಧ್ಧಿಸುತ್ತದೆ ಎನ್ನುವುದು ಇಲ್ಲಿನ ಜನರ ನಂಬಿಕೆ.

ದರ್ಶನದ ಸಮಯ
ಬೆಳಗ್ಗೆ 6.30ಗಂಟೆಯಿಂದ ಮಧ್ಯಾಹ್ನ 1 ಗಂಟೆ ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 8.30ರವರೆಗೆ ದೇವಸ್ಥಾನ ತೆರೆದಿರುತ್ತದೆ. ಭಕ್ತರು ಈ ಸಮಯದಲ್ಲಿ ಇಲ್ಲಿನ ಗಣೇಶನ ದರ್ಶನ ಪಡೆಯಬಹುದು.

ತ್ರಿಪುರಾಸುರ ಸಂಹಾರ
ತ್ರಿಪುರಾಸುರನ್ನು ಕೊಲ್ಲಲು ಸಾಧ್ಯವಾಗದಾಗ ದೇವಾನುದೇವತೆಗಳು ಗಣೇಶನನ್ನು ಪ್ರಾರ್ಥಿಸಿದರು. ಗಣೇಶನ ಭಕ್ತನಾಗಿದ್ದ ಕಾರಣ ಗಣೇಶ ತನ್ನ ಒಂದು ದಂತವನ್ನು ಇಂದ್ರನಿಗೆ ಕೊಟ್ಟು ಆತನನ್ನು ಸಂಹರಿಸಲು ಹೇಳುತ್ತಾನೆ. ಹಾಗಾಗಿ ತ್ರಿಪುರಾಸುರನ ಸಂಹಾರವಾಗುತ್ತದೆ.

ತ್ರಿಮೂರ್ತಿಗಳು ಸ್ಥಾಪಿಸಿದ ಗಣೇಶ
ತ್ರಿಮೂರ್ತಿಗಳು ಸ್ಥಾಪಿಸಿದ ಗಣೇಶ ಇದಾಗಿದೆ. ಇಲ್ಲಿ ಕೌಂಡಿಲ್ಯ ಮಹರ್ಷಿ ತಪಸ್ಸು ಮಾಡುತ್ತಿದ್ದರಿಂದ ಕೌಂಡಿಲ್ಯ ಎಂದೂ ಕರೆಯುತ್ತಾರೆ. ಮೊದಲು ಈ ಗಣೇಶನಿಗೆ ದೇವಸ್ಥಾನವಿರಲಿಲ್ಲ. ಶ್ರೀಕೃಷ್ಣ ದೇವರಾಯರು ಇಲ್ಲಿನ ಗಣಪನಿಗೆ ದೇವಸ್ಥಾನ ಕಟ್ಟಿದರು ಎನ್ನಲಾಗುತ್ತದೆ.

ಚೋಳರ ಕಾಲಕ್ಕೆ ಸೇರಿದ್ದು
ಗಣೇಶಗಿರಿ, ಯಾದವಾಚಲ, ಕೋಟಾದ್ರಿ ಎಂದೂ ಕರೆಯುತ್ತಾರೆ. ರಾಮನು , ಶ್ರೀಕೃಷ್ಣನು ಈ ಗಣೇಶನನ್ನು ಪೂಜಿಸಿದ್ದಾರೆ ಎನ್ನಲಾಗುತ್ತದೆ. ಚೋಳರ ಆಳ್ವಿಕೆ ಒಳಪಟ್ಟ ದೇವಸ್ಥಾನ ಇದಾಗಿದೆ ಎನ್ನುವುದಕ್ಕೆ ಇಲ್ಲಿ ದೊರೆತಿರುವ ಶಿಲಾಶಾಸನಗಳು ಸಾಕ್ಷಿಯಾಗಿವೆ.

ಕುರುಡುಮಲೆ ಗಣೇಶ
ಕುರುಡುಮಲೆ ಗಣೇಶ ದೇವಸ್ಥಾನದಲ್ಲಿ ಆಚರಿಸಲಾಗುವ ಗಣಪತಿ ಚತುರ್ಥಿ ಅತ್ಯಂತ ದೊಡ್ಡ ಉತ್ಸವಗಳಲ್ಲಿ ಒಂದಾಗಿದೆ. ಉತ್ಸವದ ದಿನಗಳಂದು ಸಾಕಷ್ಟು ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.

ಸೋಮನಾಥೇಶ್ವರ ದೇವಾಲಯ
PC:Ganesha1
1300 ವರ್ಷ ಹಳೆಯ ಸೋಮನಾಥೇಶ್ವರ ದೇವಾಲಯವಿದೆ. ಇದು ಚೋಳರು ನಿರ್ಮಿಸಿದ್ದು ಇಲ್ಲಿನ ಶಿಲ್ಪಕಲೆಯೂ ಚೋಳರ ವಾಸ್ತುಶಿಲ್ಪವನ್ನು ಪ್ರತಿಬಿಂಬಿಸುತ್ತದೆ. ಕ್ಷಮದಾಂಬ ದೇವಿಯ ದೇವಸ್ಥಾನವೂ ಇದೆ.

ತಲುಪುವುದು ಹೇಗೆ?
ಬೆಂಗಳೂರಿನಿಂದ 110 ಕಿಲೋಮೀಟರ್ ದೂರದಲ್ಲಿರುವ ಕುರುಡುಮಲೆಗೆ ಸುಲಭವಾಗಿ ಮುಳಬಾಗಿಲಿನಿಂದ ರಸ್ತೆಯ ಮೂಲಕ ತಲುಪಬಹುದು. ರಾಜ್ಯ ಸಾರಿಗೆ ಬಸ್ಸುಗಳು ಕುರುಡುಮಲೆ ಗಣೇಶ ದೇವಾಲಯಕ್ಕೆ ಮತ್ತು ಸುತ್ತಲಿನ ವಿವಿಧ ನಗರಗಳಿಂದ ಕೂಡಾ ಸಾಗುತ್ತವೆ.

ರೈಲು ನಿಲ್ದಾಣ
ಕುರುಡುಮಲೆ ಗಣೇಶ ದೇವಸ್ಥಾನಕ್ಕೆ ಹತ್ತಿರವಿರುವ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನಲ್ಲಿ ಹತ್ತಿರದ ರೈಲ್ವೆ ನಿಲ್ದಾಣವಿದೆ. ಇದು ದೇವಸ್ಥಾನದಿಂದ ಸುಮಾರು 11 ಕಿಲೋಮೀಟರ್ ದೂರದಲ್ಲಿದ್ದು, ಅಲ್ಲಿಂದ ರಿಕ್ಷಾ, ಅಥವಾ ಬಸ್‌ಗಳ ಮೂಲಕ ರಸ್ತೆಯ ಇಲ್ಲಿಗೆ ಬರಬಹುದು.


Click it and Unblock the Notifications

















