Search
  • Follow NativePlanet
Share
» »ಕೊಲ್ಲಾಪುರ ಹಾಗೂ ಪನ್ಹಾಲಾ

ಕೊಲ್ಲಾಪುರ ಹಾಗೂ ಪನ್ಹಾಲಾ

By Vijay

ಕೊಲ್ಲಾಪುರ ಒಂದು ಪ್ರವಾಸಿ ಪುಣ್ಯ ಕ್ಷೇತ್ರವೂ ಅಲ್ಲದೆ ಮಹಾರಾಷ್ಟ್ರ ರಾಜ್ಯದ ಪ್ರಮುಖ ಪಟ್ಟಣವೂ ಹೌದು. ಕರ್ನಾಟಕದ ವಾಯವ್ಯ ಭಾಗದಲ್ಲಿರುವ ಬೆಳಗಾವಿ ಮಹಾನಗರದಿಂದ 110 ಕಿ.ಮೀ ಅಂತರದಲ್ಲಿರುವ ಕೊಲ್ಲಾಪುರ, ಸದ್ಯ ಪ್ರಚಲಿತದಲ್ಲಿರುವ ಶಕ್ತಿ ಪೀಠಗಳ ಪೈಕಿ ಒಂದಾಗಿದೆ.

ಇಂದು ಕೊಲ್ಲಾಪುರ ಪಟ್ಟಣವು ಸಾಕಷ್ಟು ಕೈಗಾರಿಕೆಗಳಿಂದ ಕೂಡಿದ್ದು ಶೀಘ್ರವಾಗಿ ಬೆಳೆಯುತ್ತಿರುವ ಪಟ್ಟಣವಾಗಿದೆ. ಒಂದೆಡೆ ಆಧುನೀಕರಣ ಕೈಚಾಚುತ್ತಿದ್ದರೂ ಸಹ ಇನ್ನೊಂದೆಡೆ ಧಾರ್ಮಿಕತೆಯ ಇಂಬು ಈ ಪಟ್ಟಣದಿಂದ ಮಾಯವಾಗಿಲ್ಲ. ಇಲ್ಲಿರುವ ಮಹಾಲಕ್ಷ್ಮಿಯ ದರುಶನ ಕೋರಿ ದೇಶದ ವಿವಿದೆಡೆಯಿಂದ ಸಾಕಷ್ಟು ಭಕ್ತರು ಈ ಕ್ಷೇತ್ರಕ್ಕೆ ಆಗಮಿಸುತ್ತಿರುತ್ತಾರೆ.

ಕೊಲ್ಲಾಪುರ ಬಹುತೇಕವಾಗಿ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಹೆಸರುವಾಸಿಯಾಗಿದ್ದರೂ ಸಹ ಬೇರೆ ಇತರೆ ಪ್ರವಾಸಿ ಆಕರ್ಷಣೆಗಳಿಗೆ ಇಲ್ಲೇನೂ ಕಮ್ಮಿ ಇಲ್ಲ. ಇಲ್ಲಿಂದ ಕೇವಲ 18 ಕಿ.ಮೀ ಗಳಷ್ಟು ಅಂತರದಲ್ಲಿರುವ ಪನ್ಹಾಲಾ ತನ್ನ ರಮಣಿಯಮಯ ಕೋಟೆ ಹಾಗೂ ಅಲ್ಲಿಂದ ಕಂಡುಬರುವ ವಿಹಂಗಮ ದೃಶ್ಯಾವಳಿಗಳಿಗಾಗಿ ಪ್ರಖ್ಯಾತಿ ಪಡೆದಿದೆ.

ಹಾಗಾದರೆ ಬನ್ನಿ, ಈ ಲೇಖನದ ಮೂಲಕ ಯಾವ ರೀತಿಯಾಗಿ ಕೊಲ್ಲಾಪುರದ ಆನಂದಮಯ ಪ್ರವಾಸವನ್ನು ಮಾಡಬಹುದೆಂದು ತಿಳಿಯೋಣ.

ಕೊಲ್ಲಾಪುರ ಹಾಗೂ ಪನ್ಹಾಲಾ

ಕೊಲ್ಲಾಪುರ ಹಾಗೂ ಪನ್ಹಾಲಾ

ಕೊಲ್ಲಾಪುರಕ್ಕೆ ಬಂದ ತಕ್ಷಣ ಎಲ್ಲರೂ ಮೊದಲು ಭೇಟಿ ನೀಡಲು ಬಯಸುವುದು ಶ್ರೀ ಅಮ್ಮನವರು ದರುಶನ ಕೊಡುವ ಸ್ಥಳ. ಹೌದು ಅದೆ ಶ್ರೀ ಮಹಾಲಕ್ಷ್ಮಿ ದೇವಸ್ಥಾನ. ನಗರದ ರೈಲು ಹಾಗೂ ಕೇಂದ್ರ ಬಸ್ಸು ನಿಲ್ದಾಣದಿಂದ ಕ್ರಮವಾಗಿ 4 ಮತ್ತು 3 ಕಿ.ಮೀ ಗಳಷ್ಟು ದೂರದಲ್ಲಿದೆ ಈ ದೇವಸ್ಥಾನ. ಟ್ಯಾಕ್ಸಿ ಹಾಗೂ ರಿಕ್ಷಾಗಳು ಇಲ್ಲಿಂದ ದೇವಸ್ಥಾನಕ್ಕೆ ತೆರಳಲು ಸುಲಭವಾಗಿ ದೊರೆಯುತ್ತವೆ.

ಚಿತ್ರಕೃಪೆ: kolhapurtourism

ಕೊಲ್ಲಾಪುರ ಹಾಗೂ ಪನ್ಹಾಲಾ

ಕೊಲ್ಲಾಪುರ ಹಾಗೂ ಪನ್ಹಾಲಾ

ಪೌರಾಣಿಕ ಹಿನ್ನಿಲೆಯ ಪ್ರಕಾರ, ಹಿಂದೆ ಕೊಲಾಸುರನೆಂಬ ಅಸುರನು ದೇವತೆಗಳಿಗೆ ಬಲು ಕಷ್ಟ ನೀಡುತ್ತಿದ್ದನು. ಅವನ ಕ್ರೌರ್ಯತೆಯಿಂದ ಪಾರು ಮಾಡುವಂತೆ ದೇವತೆಗಳು ಮೊರೆಯಿಟ್ಟಾಗ ದೇವಿಯು ಭೂಮಿಗೆ ಬಂದು ಆತನನ್ನು ವಧಿಸಿದಳು ಹಾಗೂ ವಧಿಸಿದ ಸ್ಥಳವೆ ತೀರ್ಥವಾಗಿ ರೂಪಗೊಂಡಿತು. ನಂತರ ದೇವಿಯು ಸ್ಥಿರವಾಗಿ ಇಲ್ಲಿಯೆ ನೆಲೆಸಿದಳು ಹಾಗೂ ಈ ಸ್ಥಳಕ್ಕೆ ಕೊಲ್ಲಾಪುರ ಎಂಬ ಹೆಸರು ಬಂದಿತು.

ಚಿತ್ರಕೃಪೆ: kolhapurtourism

ಕೊಲ್ಲಾಪುರ ಹಾಗೂ ಪನ್ಹಾಲಾ

ಕೊಲ್ಲಾಪುರ ಹಾಗೂ ಪನ್ಹಾಲಾ

ದೇವಾಲಯದ ಮಹಾದ್ವಾರವು ಪಶ್ಚಿಮ ದಿಕ್ಕಿನಲ್ಲಿದೆ. ಮಹಾದ್ವಾರದಿಂದ ಒಳ ಪ್ರವೇಶಿಸುತ್ತಿದ್ದಂತೆಯೆ ದೀಪ ಸ್ಥಂಬಗಳನ್ನು ನಂತರದಲ್ಲಿ ಗರುಡ ಸ್ಥಂಬವನ್ನು ಕಾಣಬಹುದು.

ಚಿತ್ರಕೃಪೆ: Ankur P

ಕೊಲ್ಲಾಪುರ ಹಾಗೂ ಪನ್ಹಾಲಾ

ಕೊಲ್ಲಾಪುರ ಹಾಗೂ ಪನ್ಹಾಲಾ

ದೇವಸ್ಥಾನವು ಪ್ರತಿದಿನ ಬೆಳಿಗ್ಗೆ 5 ಘಂಟೆಗೆ ತೆರೆದು ರಾತ್ರಿ 10.30 ಘಂಟೆಗೆ ಮುಚ್ಚಲ್ಪಡುತ್ತದೆ. ದಿನದಲ್ಲಿ ಐದು ಬಾರಿ ಪೂಜೆಯ ವಿಧಿ ವಿಧಾನಗಳನ್ನು ನೆರವೇರಿಸಲಾಗುತ್ತದೆ. ಹುಣ್ಣಿಮೆ ದಿನ ಹಾಗೂ ಪ್ರತಿ ಶುಕ್ರವಾರಗಳಂದು ದೇವಿಯ ಉತ್ಸವಮೂರ್ತಿಯನ್ನು ಮೆರವಣಿಗೆ ಮಾಡಲಾಗುತ್ತದೆ. ಇನ್ನೂ ಹಲವು ಆಚರಣೆಗಳ ಕುರಿತು ತಿಳಿಯಬೇಕಿದ್ದಲ್ಲಿ ಈ ಲಿಂಕ್ ಕ್ಲಿಕ್ ಮಾಡಿ.

ಚಿತ್ರಕೃಪೆ: Tanmaykelkar

ಕೊಲ್ಲಾಪುರ ಹಾಗೂ ಪನ್ಹಾಲಾ

ಕೊಲ್ಲಾಪುರ ಹಾಗೂ ಪನ್ಹಾಲಾ

ಭವಾನಿ ಮಂಟಪ ಕೊಲ್ಲಾಪುರ ನಗರದಲ್ಲಿರುವ, ನೋಡಬಹುದಾದ ಮತ್ತೊಂದು ಪುರಾತನ ಆಕರ್ಷಣೆ. ಈ ಮಂಟಪವು ಶಿವಾಜಿ ಮಹಾರಾಜನಿಂದ ನಿರ್ಮಿಸಲ್ಪಟ್ಟಿದ್ದು ಅವನ ಕುಟುಂಬದವರು ಇಲ್ಲಿ ವಾಸಿಸುತ್ತಿದ್ದರು. ಇಲ್ಲಿ ತುಳಜಾ ಭವಾನಿ ದೇವಿಯ ಮೂರ್ತಿಯನ್ನು ಕಾಣಬಹುದು. ದಂತಕಥೆಯ ಪ್ರಕಾರ, ತುಳಜಾ ಭವಾನಿಯು ಕೊಲ್ಲಾಪುರ ಮಹಾಲಕ್ಷ್ಮಿಯ ಸಹೋದರಿಯಾಗಿದ್ದು ಈ ನಗರದಲ್ಲಿ ಅತಿಥಿಯಾಗಿದ್ದಾಳೆ. ಈ ಮಂಟಪವು ಮಹಾಲಕ್ಷ್ಮಿ ದೇವಸ್ಥಾನದ ಹಿಂಬದಿಯಲ್ಲೆ ನೆಲೆಸಿದೆ.

ಚಿತ್ರಕೃಪೆ: Ankur P

ಕೊಲ್ಲಾಪುರ ಹಾಗೂ ಪನ್ಹಾಲಾ

ಕೊಲ್ಲಾಪುರ ಹಾಗೂ ಪನ್ಹಾಲಾ

ನಗರದಲ್ಲಿರುವ ರಂಕಾಲಾ ಚೌಪಾಟಿ ಎಂಬ ಸ್ಥಳವು ಜನರ ನೆಚ್ಚಿನ ವಿರಾಮ ಕೇಂದ್ರವಾಗಿದೆ. ಸ್ವಾಭಾವಿಕವಾಗಿ ರೂಪಗೊಂಡ ದೊಡ್ಡ ಕೆರೆ ಇದಾಗಿದ್ದು ಸುತ್ತಲೂ ಕಟ್ಟೆ ಹಾಗೂ ಉದ್ಯಾನವನ್ನು ನಿರ್ಮಿಸಲಾಗಿದೆ. ವಿಶ್ರಾಂತಿ ಪಡೆಯುತ್ತ ಕೊಂಚ ಸಮಯ ಕಳೆಯಲು ಇದೊಂದು ಆದರ್ಶಮಯ ಸ್ಥಳವಾಗಿದೆ.

ಚಿತ್ರಕೃಪೆ: kolhapurtourism

ಕೊಲ್ಲಾಪುರ ಹಾಗೂ ಪನ್ಹಾಲಾ

ಕೊಲ್ಲಾಪುರ ಹಾಗೂ ಪನ್ಹಾಲಾ

ರಂಕಾಲಾ ಕೆರೆಯ ಪಕ್ಕದಲ್ಲೆ ಶಾಲಿನಿ ಪ್ಯಾಲೇಸ್ ಅಥವಾ ಅರಮನೆಯಿದ್ದು ಪ್ರವಾಸಿಗರು ಭೇಟಿ ನೀಡಬಹುದಾದಂತಹ ಆಕರ್ಷಣೆ ಇದಾಗಿದೆ. ಪ್ರಸ್ತುತ ಇದು ಮೂರು ತಾರಾ ಮೌಲ್ಯವುಳ್ಳ ಹೋಟೆಲ್ ಆಗಿದ್ದು ರಂಕಾಲಾ ಕೆರೆಗೆ ಅತ್ಯುತ್ತಮ ಎನ್ನಬಹುದಾದ ಹಿನ್ನಿಲೆಯನ್ನು ಒದಗಿಸುತ್ತದೆ.

ಚಿತ್ರಕೃಪೆ: kolhapurtourism

ಕೊಲ್ಲಾಪುರ ಹಾಗೂ ಪನ್ಹಾಲಾ

ಕೊಲ್ಲಾಪುರ ಹಾಗೂ ಪನ್ಹಾಲಾ

ಖಾಸ್ ಬಾಗ್ ಕುಸ್ತಿ ಮೈದಾನ ಕೊಲ್ಲಾಪುರದಲ್ಲಿರುವ ಒಂದು ವಿಶಿಷ್ಟ ಪ್ರವಾಸಿ ಆಕರ್ಷಣೆ. ಬಹುಶಃ ಕುಸ್ತಿಗೆಂದೆ ನಿರ್ಮಿಸಲಾದ ಮೈದಾನಗಳು ಇರುವುದು ತುಂಬ ವಿರಳ. ಅದರಲ್ಲಿ ಇದೂ ಒಂದು. ಮೊದಲೆ ಕೊಲ್ಲಾಪುರ ಸ್ಥಳವು ಕುಸ್ತಿ ಕ್ರೀಡೆಗಾಗಿ ಹೆಸರುವಾಸಿಯಾಗಿದೆ. ಸಾಕಷ್ಟು ಕುಸ್ತಿ ಸ್ಪರ್ಧೆಗಳು ಇಲ್ಲಿ ನಡೆದಿವೆ ಹಾಗೂ ನಡೆಯುತ್ತಲೂ ಇರುತ್ತವೆ. ಇದು ನಗರದ ಮಂಗಳವಾರಪೇಟ್ ನಲ್ಲಿ ನೆಲೆಸಿದೆ.

ಚಿತ್ರಕೃಪೆ: kolhapurtourism

ಕೊಲ್ಲಾಪುರ ಹಾಗೂ ಪನ್ಹಾಲಾ

ಕೊಲ್ಲಾಪುರ ಹಾಗೂ ಪನ್ಹಾಲಾ

ಕೊಲ್ಲಾಪುರಿನ ವಾಯವ್ಯಕ್ಕೆ ಕೇವಲ 20 ಕಿ.ಮೀ ದೂರದಲ್ಲಿ ಸಾಗಿದರೆ ಸಿಗುವ ಅದ್ಭುತ ತಾಣವೆ ಪನ್ಹಾಲಾ. ಪನ್ಹಾಲಾ ತನ್ನ ಕೋಟೆ ಹಾಗೂ ಕಣಿವೆಯಿಂದಾಗಿ ಹೆಸರುವಾಸಿಯಾಗಿದೆ. ಕೊಲ್ಲಾಪುರದಿಂದ ಇಲ್ಲಿಗೆ ತೆರಳಲು ಸಾಕಷ್ಟು ಬಸ್ಸುಗಳು ಹಾಗೂ ಬಾಡಿಗೆ ರಿಕ್ಷಾಗಳು ನಿರಾಯಾಸವಾಗಿ ದೊರೆಯುತ್ತವೆ. ಅಲ್ಲದೆ ವಾರಾಂತ್ಯದ ರಜಾ ದಿನಗಳಲ್ಲಿ ಭೇಟಿ ನೀಡಲು ತುಂಬ ಸೂಕ್ತವಾದ ಸ್ಥಳವೆಂದೆ ಹೇಳಬಹುದು.

ಚಿತ್ರಕೃಪೆ: kolhapurtourism

ಕೊಲ್ಲಾಪುರ ಹಾಗೂ ಪನ್ಹಾಲಾ

ಕೊಲ್ಲಾಪುರ ಹಾಗೂ ಪನ್ಹಾಲಾ

ಪನ್ಹಾಲಾ ಪರಿಸರದ ಕೆಲ ಸುಂದರ ಚಿತ್ರಗಳು.

ಚಿತ್ರಕೃಪೆ: kolhapurtourism

ಕೊಲ್ಲಾಪುರ ಹಾಗೂ ಪನ್ಹಾಲಾ

ಕೊಲ್ಲಾಪುರ ಹಾಗೂ ಪನ್ಹಾಲಾ

ಪನ್ಹಾಲಾ ಪರಿಸರದ ಕೆಲ ಸುಂದರ ಚಿತ್ರಗಳು.

ಚಿತ್ರಕೃಪೆ: kolhapurtourism

ಕೊಲ್ಲಾಪುರ ಹಾಗೂ ಪನ್ಹಾಲಾ

ಕೊಲ್ಲಾಪುರ ಹಾಗೂ ಪನ್ಹಾಲಾ

ಪನ್ಹಾಲಾ ಪರಿಸರದ ಕೆಲ ಸುಂದರ ಚಿತ್ರಗಳು.

ಚಿತ್ರಕೃಪೆ: kolhapurtourism

ಕೊಲ್ಲಾಪುರ ಹಾಗೂ ಪನ್ಹಾಲಾ

ಕೊಲ್ಲಾಪುರ ಹಾಗೂ ಪನ್ಹಾಲಾ

ಪನ್ಹಾಲಾ ಪರಿಸರದ ಕೆಲ ಸುಂದರ ಚಿತ್ರಗಳು.

ಚಿತ್ರಕೃಪೆ: Ankur P

ಕೊಲ್ಲಾಪುರ ಹಾಗೂ ಪನ್ಹಾಲಾ

ಕೊಲ್ಲಾಪುರ ಹಾಗೂ ಪನ್ಹಾಲಾ

ಪನ್ಹಾಲಾ ಪರಿಸರದ ಕೆಲ ಸುಂದರ ಚಿತ್ರಗಳು.

ಚಿತ್ರಕೃಪೆ: Ankur P

ಕೊಲ್ಲಾಪುರ ಹಾಗೂ ಪನ್ಹಾಲಾ

ಕೊಲ್ಲಾಪುರ ಹಾಗೂ ಪನ್ಹಾಲಾ

ಪನ್ಹಾಲಾ ಪರಿಸರದ ಕೆಲ ಸುಂದರ ಚಿತ್ರಗಳು.

ಚಿತ್ರಕೃಪೆ: Ankur P

ಕೊಲ್ಲಾಪುರ ಹಾಗೂ ಪನ್ಹಾಲಾ

ಕೊಲ್ಲಾಪುರ ಹಾಗೂ ಪನ್ಹಾಲಾ

ಇನ್ನು, ಕೊಲ್ಲಾಪುರದಲ್ಲಿ ಏನೇನೆಲ್ಲ ಮಾಡಬಹುದು? ಹೌದು ಕೆಲ ಅಂಶಗಳು ಈ ನಗರದಲ್ಲಿ ವಿಶೇಷವಾಗಿವೆ ಅವುಗಳೆಂದರೆ ಕೊಲ್ಲಾಪುರ ವಿಶೇಷ ತಿಂಡಿ ತಿನಿಸುಗಳು, ಕೊಲ್ಲಾಪುರಿ ಚಪ್ಪಲಿಗಳು ಹಾಗೂ ಕೊಲ್ಲಾಪುರಿ ಮಾಂಸಾಹಾರಿ ಖಾದ್ಯಗಳು. ನೀವೇನಾದರೂ ಈ ನಗರಕ್ಕೆ ಭೇಟಿ ನೀಡಿದರೆ ಇವುಗಳನ್ನು ಆಸ್ವಾದಿಸಲು ಮರೆಯದಿರಿ (ಚಪ್ಪಲಿಗಳನ್ನು ಕೊಳ್ಳಿರಿ). ಚಿತ್ರದಲ್ಲಿರುವುದು ಮಿಸಲ್ ಪಾವ್. ಬಾಯಿ ತುಂಬ ನೀರೂರಿಸುವಂತಹ ತಿಂಡಿ. ಆದರೆ ಎಚ್ಚರ ತುಂಬ ಖಾರವಾಗಿರುತ್ತದೆ ಈ ತಿಂಡಿ.

ಚಿತ್ರಕೃಪೆ: shankar s.

ಕೊಲ್ಲಾಪುರ ಹಾಗೂ ಪನ್ಹಾಲಾ

ಕೊಲ್ಲಾಪುರ ಹಾಗೂ ಪನ್ಹಾಲಾ

ಕೊಲ್ಲಾಪುರಿ ವಡಾ ಪಾವ್. ತಿನ್ನಲು ಮರೆಯದಿರಿ.

ಚಿತ್ರಕೃಪೆ: Warren Noronha

ಕೊಲ್ಲಾಪುರ ಹಾಗೂ ಪನ್ಹಾಲಾ

ಕೊಲ್ಲಾಪುರ ಹಾಗೂ ಪನ್ಹಾಲಾ

ಕೊಲ್ಲಾಪುರಿ ಭೇಳ್ (ಭೇಲ್) ಮತ್ತೊಂದು ರುಚಿ ರುಚಿಯಾದ ಕುರುಕುಲು ತಿಂಡಿ.

ಚಿತ್ರಕೃಪೆ: Rakesh

ಕೊಲ್ಲಾಪುರ ಹಾಗೂ ಪನ್ಹಾಲಾ

ಕೊಲ್ಲಾಪುರ ಹಾಗೂ ಪನ್ಹಾಲಾ

ಕೊಲ್ಲಾಪುರಿ ಚಪ್ಪಲಿಗಳು ಕೇವಲ ಮಹಾರಾಷ್ಟ್ರದಲ್ಲಿ ಮಾತ್ರವಲ್ಲದೆ ದೇಶದಲ್ಲೆ ಹೆಸರುವಾಸಿಯಾಗಿವೆ. ಸಾಂಪ್ರದಾಯಿಕೆ ಕಲೆಯಿಂದ, ಶುದ್ಧ ಚರ್ಮವನ್ನು ಬಳಸಿ ಈ ಚಪ್ಪಲಿಗಳನ್ನು ವಿಶಿಷ್ಟವಾದ ವಿನ್ಯಾಸದಲ್ಲಿ ನಿರ್ಮಿಸಲಾಗುತ್ತದೆ. ಈ ಚಪ್ಪಲಿಗಳು ಅತಿ ಸದೃಢವಾಗಿದ್ದು, ಬೇಸಿಗೆ ಹಾಗು ಚಳಿಗಾಲದ ಸಮಯದಲ್ಲಿ ಬಳಸಬಹುದಾಗಿದೆ ಅಲ್ಲದೆ ಬಹಳ ಕಾಲ ಬಾಳಿಕೆಯೂ ಬರುತ್ತವೆ.

ಚಿತ್ರಕೃಪೆ: kolhapurtourism

ಕೊಲ್ಲಾಪುರ ಹಾಗೂ ಪನ್ಹಾಲಾ

ಕೊಲ್ಲಾಪುರ ಹಾಗೂ ಪನ್ಹಾಲಾ

ಕೊಲ್ಲಾಪುರವು ಬೆಂಗಳೂರಿನಿಂದ 610 ಕಿ.ಮೀ ಗಳಷ್ಟು ದೂರದಲ್ಲಿದ್ದರೆ, ಬೆಳಗಾವಿ ನಗರದಿಂದ ಕೇವಲ 110 ಕಿ.ಮೀ ದೂರದಲ್ಲಿದೆ. ಅಲ್ಲದೆ ಬೆಂಗಳೂರು ಹಾಗು ಬೆಳಗಾವಿ ಈ ಎರಡೂ ನಗರಗಳಿಂದ ಕೊಲ್ಲಾಪುರಕ್ಕೆ ತೆರಳಲು ಸರ್ಕಾರಿ ಹಾಗೂ ಖಾಸಗಿ ಬಸ್ಸುಗಳು ಮತ್ತು ರೈಲು ಲಭ್ಯವಿದೆ.

ಚಿತ್ರಕೃಪೆ: Rkrish67

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X