Search
  • Follow NativePlanet
Share
» »ತಮ್ಮ ಕೋರಿಕೆಗಳನ್ನು ಈಡೇರಿಸಿಕೊಳ್ಳಲು ಅಲ್ಲಿನ ದೇವಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಾರೆ...

ತಮ್ಮ ಕೋರಿಕೆಗಳನ್ನು ಈಡೇರಿಸಿಕೊಳ್ಳಲು ಅಲ್ಲಿನ ದೇವಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಾರೆ...

ಪ್ರಾಚೀನ ಚರಿತ್ರೆಕಾರರು, ಪ್ರಾಚೀನ ಕಾಲದಿಂದಲೂ ಕೊಡಂಗಲೂರ್ ಆನೇಕ ಬೆಲೆಯುಳ್ಳ ಸುವಾಸನೆಯುಕ್ತ ದ್ರವ್ಯಗಳ ತಯಾರಿಕೆಗಳಿಂದ ಪ್ರಸಿದ್ಧಿಯನ್ನು ಪಡೆದಿತ್ತು. ಇಷ್ಟೇ ಅಲ್ಲ ಪ್ರಧಾನವಾಗಿ ಇತರ ದೇಶಗಳಲ್ಲಿಯೂ ಹೆಸರುವಾಸಿಯಯಿತು. ಇಂತಹ ಸ್ಥಳದಲ್ಲಿ ಒಂದು

ತ್ರಿಸ್ಸೂರ್ ಜಿಲ್ಲೆಯಲ್ಲಿನ ಚಿಕ್ಕ ಪಟ್ಟಣವಾದ್ದರಿಂದ ಕೊಡುಂಗಲೂರ್, ಮಲಬಾರ್ ತೀರದಲ್ಲಿದೆ. ದೇವಿ ಭಗವತಿ ಮಂದಿರವು ಪ್ರಸಿದ್ಧವಾದ ಈ ಗ್ರಾಮಕ್ಕೆ ಶತಮಾನಗಳ ಇತಿಹಾಸವಿದೆ. ಕ್ರಿ.ಶ 7ನೇ ಶತಮಾನದಲ್ಲಿ ಚೇರಮಾನ್ ಪ್ರಭುಗಳು ರಾಜಧಾನಿಯಾಗಿ ಇದ್ದುದ್ದರಿಂದ ಇದಕ್ಕೆ ಅತ್ಯಂತ ಪ್ರಾಮುಖ್ಯತೆ ಪಡೆಯಿತು. ಸಮುದ್ರದ ಸಮೀಪದಲ್ಲಿ ಇರುವ ಕೊಡಂಗಲೂರ್, ಹಿಂದೂ ಮಹಾ ಸಮುದ್ರದಲ್ಲಿ ಒಂದು ಮುಖ್ಯ ವಾಣಿಜ್ಯ ಪ್ರದೇಶವಾಗಿ ಹೊರಹೊಮ್ಮಿತು. ಆಧುನಿಕ ಚರಿತ್ರೆಕಾರರ ಪ್ರಕಾರ, ಈ ಪಟ್ಟಣಕ್ಕೆ ಸಿರಿಯಾ, ಆಸಿಯಾ ಮೈನರ್, ಈಜಿಫ್ಟ್ ನಂತಹ ಮಧ್ಯ ಪಾಶ್ಚತ್ಯಾ ದೇಶಗಳ ಜೊತೆಗೆ ಸಂಬಂಧಗಳು ಇರುತ್ತಿದ್ದವು ಎಂದು ಹೇಳುತ್ತಾರೆ.

ಪ್ರಾಚೀನ ಚರಿತ್ರೆಕಾರರು, ಪ್ರಾಚೀನ ಕಾಲದಿಂದಲೂ ಕೊಡಂಗಲೂರ್ ಆನೇಕ ಬೆಲೆಯುಳ್ಳ ಸುವಾಸನೆಯುಕ್ತ ದ್ರವ್ಯಗಳ ತಯಾರಿಕೆಗಳಿಂದ ಪ್ರಸಿದ್ಧಿಯನ್ನು ಪಡೆದಿತ್ತು. ಇಷ್ಟೇ ಅಲ್ಲ ಪ್ರಧಾನವಾಗಿ ಇತರ ದೇಶಗಳಲ್ಲಿಯೂ ಹೆಸರುವಾಸಿಯಯಿತು. ಇಂತಹ ಸ್ಥಳದಲ್ಲಿ ಒಂದು ಮಹಿಮಾನ್ವಿತವಾದ ದೇವಾಲಯವಿದೆ. ಆ ದೇವಾಲಯದ ಆಚಾರದ ಪ್ರಕಾರ ತಮ್ಮ ಕೋರಿಕೆಗಳನ್ನು ಈಡೇರಿಸು ಎಂದು ಅಲ್ಲಿನ ತಾಯಿಗೆ ನಿಂದಿಸುತ್ತಾರಂತೆ. ಹಾಗಾದರೆ ಆ ದೇವಾಲಯ ಯಾವುದು? ಏಕೆ ಆ ದೇವಿಯನ್ನು ನಿಂದಿಸುತ್ತಾರೆ? ಎಂಬ ಹಲವಾರು ಪ್ರೆಶ್ನೆಗೆ ಉತ್ತರ ಲೇಖನದ ಮೂಲಕ ಸಂಕ್ಷೀಪ್ತವಾಗಿ ತಿಳಿಯಿರಿ.

ಅಲ್ಲಿನ ದೇವಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಾರೆ...

ಅಲ್ಲಿನ ದೇವಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಾರೆ...

ಕೇರಳದಲ್ಲಿ ಮೂಖ್ಯ ಪಟ್ಟಣವಾದ ಕೊಚ್ಚಿನ್‍ಗೆ ಕೇವಲ 29 ಕಿ.ಮೀ ದೂರದಲ್ಲಿ ಕೊಡುಂಗಲ್ಲೂರ್ ಎಂಬ ಗ್ರಾಮವಿದೆ. ಆ ಗ್ರಾಮದಲ್ಲಿರುವ ಅತಿ ಪ್ರಾಚೀನವಾದ ದೇವಾಲಯವೇ ಕೊಡುಂಗಲ್ಲೂರ್ ಭಗವತಿ ದೇವಿಯ ದೇವಾಲಯ. ವಿಷ್ಣುವಿನ ಅವತಾರವಾದ ಪರಶುರಾಮನಿಗೂ ಈ ಗ್ರಾಮಕ್ಕೂ ಸಂಬಂಧವಿದೆ. ಹಾಗಾಗಿಯೇ ಆ ಪ್ರದೇಶಕ್ಕೆ ಪರಶುರಾಮ ಕ್ಷೇತ್ರ ಎಂದು ಸಹಾ ಕರೆಯುತ್ತಾರೆ. ಆದರೆ ದಾರುಕಾ ಎಂಬ ರಾಕ್ಷಸನು ಈ ಪ್ರದೇಶಕ್ಕೆ ಬಂದು ಪೀಡಿಸುತ್ತಿದ್ದನು.

ಅಲ್ಲಿನ ದೇವಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಾರೆ...

ಅಲ್ಲಿನ ದೇವಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಾರೆ...

ಆತನಿಂದ ಹೇಗಾದರೂ ಮಾಡಿ ಗ್ರಾಮವನ್ನು ರಕ್ಷಿಸಬೇಕು ಎಂದು ಪರಶುರಾಮನು ಆ ಮಹಾದೇವನನ್ನು ಕುರಿತು ಪ್ರಾರ್ಥನೆ ಮಾಡಿದನು. ಆಗ ಆ ಪರಮೇಶ್ವರನು ಭದ್ರಕಾಳಿಯನ್ನು ಪ್ರತಿಷ್ಟಾಪನೆ ಮಾಡು ಎಂದು ಸೂಚಿಸುತ್ತಾನೆ. ಆ ಸೂಚನೆಯ ಮೇರೆಗೆ ಪರಶುರಾಮನು ಕೊಡುಂಗಲ್ಲೂರ್ ಗ್ರಾಮದಲ್ಲಿ ಭದ್ರಕಾಳಿ ದೇವಿಯನ್ನು ಪ್ರತಿಷ್ಟಾಪಿಸಿ ಎಂದು ಹೇಳುತ್ತಾನೆ. ಆ ದೇವಿಯ ಅನುಗ್ರಹದಿಂದ ಆ ಗ್ರಾಮವನ್ನು ಪೀಡಿಸುತ್ತಿದ್ದ ದಾರುಕಾ ರಾಕ್ಷಸನು ಮೃತನಾದನು.

ಅಲ್ಲಿನ ದೇವಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಾರೆ...

ಅಲ್ಲಿನ ದೇವಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಾರೆ...

ಕೊಡುಂಗಲ್ಲೂರ್ ಭದ್ರಕಾಳಿ ದೇವಾಲಯವು ಅತ್ಯಂತ ಪ್ರಾಚೀನವಾದುದು ಎಂದು ಇಲ್ಲಿನ ಆಚಾರಗಳೇ ಸಾಕ್ಷ್ಯಿಯಾಗಿದೆ. ದೇಶದಲ್ಲಿಯೇ ನೀವು ಎಲ್ಲೂ ಕಾಣದೇ ಇರುವ ಆಚಾರಗಳನ್ನು ಇಲ್ಲಿ ಕಾಣಬಹುದಾಗಿದೆ. ಇಲ್ಲಿ ಆ ದೇವಿಗೆ ಒಂದು ಕಾಲದಲ್ಲಿ ವಿಪರೀತವಾಗಿ ಬಲಿಯನ್ನು ನೀಡುತ್ತಿದ್ದರಂತೆ. ಆದರೆ ಪ್ರಸ್ತುತ ಬಲಿಯನ್ನು ನಿಷೇಧಿಸಿದ ಕಾರಣ ಕೆಂಪು ಬಣ್ಣದ ಸೀರೆಯನ್ನು ದೇವಿಗೆ ಸಮರ್ಪಿಸುತ್ತಾರೆ.

ಅಲ್ಲಿನ ದೇವಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಾರೆ...

ಅಲ್ಲಿನ ದೇವಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಾರೆ...

ಇನ್ನು ಕಾವುತಿಂಡಲ್ ಎಂಬ ಉತ್ಸವದ ಸಂದರ್ಭದಲ್ಲಿ ಭಕ್ತರು ಕೋಲನ್ನು ಕೈಯಲ್ಲಿ ಹಿಡಿದುಕೊಂಡು ದೇವಾಲಯದ ಸುತ್ತ ಪ್ರದಕ್ಷಿಣೆಯನ್ನು ಹಾಕುವ ಆಚಾರ ಚಾಲ್ತಿಯಲ್ಲಿದೆ. ಒಮ್ಮೆ ದೇವಿಯು ಆಯುಧಗಳ ಕೈಯಲ್ಲಿ ಹಿಡಿದು ರಾಕ್ಷಸರನ್ನು ಕೊಲ್ಲುವ ಸಲುವಾಗಿ ತೆರಳುತ್ತಿದ್ದ ಪ್ರತೀಕವಾಗಿ ಈ ಆಚಾರವು ಚಾಲ್ತಿಯಲ್ಲಿದೆ. ಇದಕ್ಕಿಂದ ವಿಚಿತ್ರವಾದ ಆಚಾರ ಭರಣಿ ಉತ್ಸವದಲ್ಲಿ ಕಾಣಬಹುದು.

ಅಲ್ಲಿನ ದೇವಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಾರೆ...

ಅಲ್ಲಿನ ದೇವಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಾರೆ...

ಮಾರ್ಚ್ ಮತ್ತು ಏಪ್ರಿಲ್ ತಿಂಗಳ ಮಧ್ಯೆಯಲ್ಲಿ ಈ ಉತ್ಸವದ ಸಂದರ್ಭದಲ್ಲಿ ಓಡುತ್ತಾ ದೇವಿಯನ್ನು ಅವಾಚ್ಯ ಶಬ್ಧಗಳಿಂದ ಬಯ್ಯುತ್ತಾರೆ. ಕೊಡುಂಗಲ್ಲೂರ್ ದೇವಿಯ ದೇವಾಲಯವು ಕೂಡ ವಿಭಿನ್ನವಾಗಿ ಇರುತ್ತದೆ. 10 ಎಕರೆಗಳ ಸುವಿಶಾಲವಾದ ವಿಸ್ತೀರ್ಣದಲ್ಲಿ ಮಹಾವೃಕ್ಷಗಳ ನೆರಳಿನಲ್ಲಿ ಈ ದೇವಾಲಯವು ಕಾಣಿಸುತ್ತದೆ.

ಅಲ್ಲಿನ ದೇವಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಾರೆ...

ಅಲ್ಲಿನ ದೇವಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಾರೆ...

ಈ ದೇವಾಲಯದಲ್ಲಿ ದೇವಿಯ 7 ಅಡಿ ಸುಂದರವಾದ ವಿಗ್ರಹವಿದೆ. ಇಲ್ಲಿನ ತಾಯಿಯ ವಿಗ್ರಹಕ್ಕೆ ಪ್ರತಿ ವರ್ಷ ಚಂದನೋತ್ಸವವನ್ನು ನಡೆಸುತ್ತಾರೆ. ದೇವಾಲಯದಲ್ಲಿ ದೇವಿಯ ಜೊತೆ ಜೊತೆಗೆ ಸಪ್ತ ಮಾತೃಕೆಗಳು, ವೀರಭಧ್ರ, ಗಣಪತಿ ವಿಗ್ರಹಗಳನ್ನು ಕೂಡ ಕಾಣಬಹುದು.

ಅಲ್ಲಿನ ದೇವಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಾರೆ...

ಅಲ್ಲಿನ ದೇವಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಾರೆ...

ಹಲವಾರು ವರ್ಷಗಳಿಂದಲೂ ಕೊಡುಂಗಲ್ಲೂರ್ ಸಂಸ್ಥಾನಕ್ಕೆ ಸೇರಿದ ರಾಜರು ಈ ದೇವಾಲಯವನ್ನು ನಿರ್ವಹಿಸುತ್ತಿದ್ದಾರೆ. ಸರ್ಕಾರಗಳು ಬದಲಾದರೂ ಕೂಡ ಈ ದೇವಾಲಯದ ಮೇಲೆ ಅವರದೇ ಹಕ್ಕುಗಳು ಮುಂದೆವರೆಯುತ್ತಿದೆ. ಕೇವಲ ಕೊಡುಂಗಲ್ಲೂರ್ ರಾಜರೇ ಅಲ್ಲ, ಕೇರಳವನ್ನು ಆಳ್ವಿಕೆ ಮಾಡಿದ ರಾಜರೆಲ್ಲರು ಈ ದೇವಿಯನ್ನು ತಮ್ಮ ಕುಲ ದೇವತೆಯಾಗಿ ಭಾವಿಸಿ ಪೂಜಿಸಿದ್ದಾರೆ.

ಅಲ್ಲಿನ ದೇವಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಾರೆ...

ಅಲ್ಲಿನ ದೇವಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಾರೆ...

ಹಾಗಾಗಿಯೇ ತಮಿಳು ಪ್ರಾಚೀನಗ್ರಂಥ ಶಿಲಪ್ಪದಿಗಾರಂಲೊದಲ್ಲಿ ಕೂಡ ಈ ದೇವತೆಯ ಕುರಿತು ಪ್ರಸ್ತಾವನೆಯನ್ನು ಕಾಣಬಹುದು. ಇಷ್ಟು ವಿಶಿಷ್ಟವಾದ ದೇವಾಲಯವಾದ್ದರಿಂದ ಕೇರಳವಾಸಿಗಳು ಸಾವಿರಾರು ಸಂಖ್ಯೆಯಲ್ಲಿ ನಿತ್ಯವು ಈ ದೇವಿಯನ್ನು ದರ್ಶನ ಮಾಡಿಕೊಳ್ಳಲು ಬರುತ್ತಾರೆ.

ಅಲ್ಲಿನ ದೇವಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಾರೆ...

ಅಲ್ಲಿನ ದೇವಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಾರೆ...

ಕೊಡಂಗಲೂರ್‍ನಲ್ಲಿನ ವಾತಾವರಣ, ಕೇವಲ ಮಳೆಗಾಲವನ್ನು ಬಿಟ್ಟು, ಉಳಿದ ಎಲ್ಲಾ ಕಾಲಾವಧಿಯಲ್ಲಿ ಅನುಕೂಲವಾಗಿ ಇರುತ್ತದೆ. ಡಿಸೆಂಬರ್‍ನಿಂದ ಫೆಬ್ರವರಿ ತಿಂಗಳಿನಲ್ಲಿ ಈ ಪಟ್ಟಣಕ್ಕೆ ಭೇಟಿ ಮಾಡಿದರೆ ಅತ್ಯುತ್ತಮವಾದ ಸಮಯವಾಗಿರುತ್ತದೆ. ಆಗಸ್ಟ್‍ನಿಂದ ನವೆಂಬರ್ ತಿಂಗಳ ಮಧ್ಯ ಕಾಲದಲ್ಲಿ ಹಲವಾರು ಹಬ್ಬಗಳು ನಡೆಯುವುದರಿಂದ, ಕೊಡಂಗಲೂರ್ ತೆರಳುವುದಕ್ಕೆ ಉತ್ತಮವಾದ ಸಮಯವಾಗಿದೆ.

ಅಲ್ಲಿನ ದೇವಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಾರೆ...

ಅಲ್ಲಿನ ದೇವಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಾರೆ...

ರೈಲು ಮಾರ್ಗದ ಮೂಲಕ
ಕೊಡಂಗಲೂರ್‍ನಿಂದ ಅತ್ಯಂತ ಸಮೀಪದಲ್ಲಿರುವ ರೈಲ್ವೆ ನಿಲ್ದಾಣವೆಂದರೆ ಅದು, ಇರಿಂಗಲಕುಡ (16 ಕಿ.ಮೀ). ಇರಿಂಗಲಕುಡದಿಂದ ಕೇರಳದಲ್ಲಿನ ವಿವಿಧ ಪ್ರಾಂತ್ಯಕ್ಕೆ ಆನೇಕ ರೈಲುಗಳು ಇವೆ. ರೈಲ್ವೆ ನಿಲ್ದಾಣದಿಂದ ಕೊಡಂಗಲೂರ್ ಪಟ್ಟಣಕ್ಕೆ ಸೇರಿಕೊಳ್ಳಬೇಕಾದರೆ ಟ್ಯಾಕ್ಸಿಯ ಮೂಲಕ ತೆರಳಬೇಕು.

ಅಲ್ಲಿನ ದೇವಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಾರೆ...

ಅಲ್ಲಿನ ದೇವಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಾರೆ...

ವಿಮಾನ ಮಾರ್ಗದ ಮೂಲಕ
35 ಕಿ.ಮೀ ದೂರದಲ್ಲಿ ಕೊಚ್ಚಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಕೊಡಂಗಲೂರಿಗೆ ಅತ್ಯಂತ ಸಮೀಪದಲ್ಲಿರುವ ವಿಮಾನ ನಿಲ್ದಾಣವಾಗಿದೆ. ಕೊಚ್ಚಿ ವಿಮಾನ ನಿಲ್ದಾಣಕ್ಕೆ ಭಾರತದೇಶದಲ್ಲಿನ ಚೆನ್ನೈ, ಬೆಂಗಳೂರು, ದೆಹಲಿ, ಹೈದ್ರಾಬಾದ್ ನಂತಹ ಮುಖ್ಯ ನಗರಗಳಿಂದ ಉತ್ತಮ ವಿಮಾನ ವ್ಯವಸ್ಥೆಗಳಿವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X