Search
  • Follow NativePlanet
Share
» »ಬೆರಗುಗೊಳಿಸುತ್ತದೆ “ಸ್ತ್ರೀ”ನಲ್ಲಿ ತೋರಿಸಿರುವ ನಿಗೂಢ ಬಾಗಿಲು, ಮತ್ತದರ ಹಿಂದಿನ ಕಥೆ.. ಅಷ್ಟಕ್ಕೂ ಅದು ಇರುವುದೆಲ್ಲಿ?

ಬೆರಗುಗೊಳಿಸುತ್ತದೆ “ಸ್ತ್ರೀ”ನಲ್ಲಿ ತೋರಿಸಿರುವ ನಿಗೂಢ ಬಾಗಿಲು, ಮತ್ತದರ ಹಿಂದಿನ ಕಥೆ.. ಅಷ್ಟಕ್ಕೂ ಅದು ಇರುವುದೆಲ್ಲಿ?

ಹೆಚ್ಚಿನ ಜನರ ನೆಚ್ಚಿನ ಹವ್ಯಾಸ ಪ್ರವಾಸ. ಹೊಸ ಹೊಸ ಸ್ಥಳಗಳಿಗೆ ಭೇಟಿ ನೀಡಲು ಮತ್ತು ಆ ಸ್ಥಳದ ಬಗ್ಗೆ ತಿಳಿದುಕೊಳ್ಳಲು ಬಹಳಷ್ಟು ಜನರು ಇಷ್ಟಪಡುತ್ತಾರೆ. ನೀವು ಸಹ ಇವರಲ್ಲಿ ಒಬ್ಬರಾಗಿದ್ದರೆ ಬಹುಶಃ ಇಂದಿನ ಲೇಖನ ನಿಮಗೆ ಇಷ್ಟವಾಗುತ್ತದೆ. ಏಕೆಂದರೆ ಇಂದು ಮಧ್ಯಪ್ರದೇಶದಲ್ಲಿ "ಸ್ರೀ 2" ಚಿತ್ರೀಕರಣಗೊಂಡ ಸ್ಥಳದ ಪರಿಚಯ ಮಾಡಿಕೊಡಲಿದ್ದೇವೆ. ಹೌದು, ಈ ಸ್ಥಳವು ತುಂಬಾ ಆಸಕ್ತಿದಾಯಕವಾಗಿದೆ. ನೀವು "ಸ್ತ್ರೀ 2" ಚಲನಚಿತ್ರವನ್ನು ನೋಡಿದ್ದರೆ, ಈ ಚಿತ್ರದಲ್ಲಿ ಗೇಟ್ ಅನ್ನು ತೋರಿಸಿರುವುದು ನಿಮಗೆ ನೆನಪಿರಬಹುದು. ಚಿತ್ರದ ಹಲವು ಭಾಗಗಳಲ್ಲಿ ಈ ಗೇಟ್ ಅನ್ನು ಪದೇ ಪದೇ ತೋರಿಸಲಾಗಿದೆ. ಆದ್ದರಿಂದ ಮೊದಲಿಗೆ ಈ ಗೇಟ್ ಎಲ್ಲಿದೆ ಎಂದು ತಿಳಿಯೋಣ. ಜೊತೆಗೆ ಇದಕ್ಕೆ ಸಂಬಂಧಿಸಿದ ಕೆಲವು ಆಸಕ್ತಿದಾಯಕ ಕಥೆಗಳು ಇದ್ದು, ಅವುಗಳನ್ನು ನೋಡೋಣ...

ಮಧ್ಯಪ್ರದೇಶದ ಚಂದೇರಿಯಲ್ಲಿರುವ "ಕಟಿ ಘಾಟಿ ಗೇಟ್" ಒಂದು ವಿಶೇಷ ಐತಿಹಾಸಿಕ ತಾಣವಾಗಿದೆ. 230 ಅಡಿ ಎತ್ತರದಲ್ಲಿರುವ ಈ ದ್ವಾರವು ಸುಮಾರು 80 ಅಡಿ ಎತ್ತರ ಮತ್ತು 39 ಅಡಿ ಅಗಲವನ್ನು ಹೊಂದಿದೆ. ಚಂದೇರಿಯ ಈ ಐತಿಹಾಸಿಕ ಗೇಟ್ ಇತ್ತೀಚೆಗೆ ಸ್ತ್ರೀ 2 ಚಿತ್ರದ ಶೂಟಿಂಗ್‌ನಿಂದ ಸುದ್ದಿಯಾಗಿದೆ. ಈ ಗೇಟ್ ಮಧ್ಯಪ್ರದೇಶದಲ್ಲಿ ಎಲ್ಲಿದೆ? ಈ ದ್ವಾರದ ವಿಶೇಷತೆ ಏನೆಂಬುದರ ವಿವರವಾದ ಮಾಹಿತಿ ಇಲ್ಲಿದೆ ನೋಡಿ...

ಹೆಚ್ಚು ಕಡಿಮೆ ಕೋಟೆಗಳು ಮತ್ತು ಸುಂದರವಾದ ಪರಿಸರಕ್ಕೆ ಹೆಸರುವಾಸಿಯಾದ ಚಂದೇರಿಗೆ ಈ ಗೇಟ್ ಈಗ ವಿಭಿನ್ನ ಗುರುತನ್ನು ನೀಡಿದೆ. ಇನ್ನು ನಾವು ಈ ಗೇಟ್ ಬಗ್ಗೆ ತಿಳಿಯುವುದಾದರೆ ಇದು ಶತಮಾನಗಳಷ್ಟು ಹಳೆಯದು. ಈ ಗೇಟ್ ಸ್ತ್ರೀ ಚಿತ್ರದ ಮೊದಲ ಭಾಗದಲ್ಲೂ ಕಾಣಿಸಿಕೊಂಡಿತ್ತು. ಇಲ್ಲಿನ ನಿಗೂಢ ಮತ್ತು ರೋಮಾಂಚಕಾರಿ ವಾತಾವರಣವು ಗೇಟ್‌ ಅನ್ನು ಜನಪ್ರಿಯ ತಾಣವನ್ನಾಗಿ ಮಾಡಿತು.

katighatigateway

ಗೇಟ್ ಸಿದ್ಧಗೊಂಡ ಕಥೆಯೇ ರೋಮಾಂಚಕ

ಕಟಿ ಘಾಟಿ ಗೇಟ್ ಅನ್ನು 1480 AD ನಲ್ಲಿ ಆಗಿನ ರಾಜ ಶೇರ್ ಖಾನ್ ಮಗ ಜಿಮಾನ್ ಖಾನ್ ನಿರ್ಮಿಸಿದನು. ಬುಂದೇಲ್‌ಖಂಡ್ ಮತ್ತು ಮಾಲ್ವಾದಿಂದ ಚಂದೇರಿ ಕಡೆಗೆ ಬರುವಾಗ ಈ ಗೇಟ್ ಗೋಚರಿಸುತ್ತದೆ. ಈ ಗೇಟ್ ಮಾಳವದ ಸುಲ್ತಾನ್ ಘಿಯಾಸುದ್ದೀನ್ ಖಿಲ್ಜಿಯನ್ನು ಸ್ವಾಗತಿಸಲು ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲ, ಸುಲ್ತಾನನಿಗೆ ಭವ್ಯವಾದ ಸ್ವಾಗತವನ್ನು ಕೋರಲು ಈ ದ್ವಾರವನ್ನು ಕೇವಲ ಒಂದು ರಾತ್ರಿಯಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ. ಮೂಲಗಳ ಪ್ರಕಾರ, ನಿರ್ಮಾಣ ಕಾರ್ಯವು ಸಂಜೆ ಪ್ರಾರಂಭವಾಯಿತು. ನಂತರ ರಾತ್ರಿಯಿಡೀ ಶ್ರಮವಹಿಸಿ ಕಟ್ಟಲಾಯಿತು. ಮರುದಿನ ಸುಲ್ತಾನನ ಆಗಮನದ ಮೊದಲು ಗೇಟ್ ಸಿದ್ಧವಾಗಿದೆ.

ಗೇಟ್‌ಗೆ ʼಕಟಿ ಘಾಟಿʼ ಹೆಸರು ಬರಲು ಕಾರಣ

ಅಂದಹಾಗೆ ಈ ದ್ವಾರಕ್ಕೆ ಕಟಿ ಘಾಟಿ ಗೇಟ್ ಎಂದು ಹೆಸರಿಸಲು ಕಾರಣವೂ ಇದೆ. ಏಕೆಂದರೆ ಮಾಳವ ಸುಲ್ತಾನನನ್ನು ಸ್ವಾಗತಿಸಲೆಂದು ಕಟ್ಟಲಾದ ಈ ಗೇಟ್ ಅನ್ನು ನಿರ್ಮಿಸುವ ಮೊದಲು ಒಂದು ಷರತ್ತು ಹಾಕಲಾಯಿತು. ಅದೇನೆಂದರೆ ಕಣಿವೆಯನ್ನು ಕತ್ತರಿಸಿ ಒಂದೇ ರಾತ್ರಿಯಲ್ಲಿ ಗೇಟ್‌ ಸಿದ್ಧಪಡಿಸುವವರಿಗೆ ಅಪೇಕ್ಷಿತ ಪ್ರತಿಫಲವನ್ನು ನೀಡಲಾಗುವುದು ಎಂದು ಸವಾಲು ಹಾಕಲಾಯಿತು. ಈ ಸವಾಲು ಕುಶಲಕರ್ಮಿಗಳನ್ನು ರೋಮಾಂಚನಗೊಳಿಸಿತು. ಅವರು ಈ ಬೃಹತ್ ಗೇಟ್ ಅನ್ನು ಸಿದ್ಧಪಡಿಸಲು ರಾತ್ರಿಯಿಡೀ ಶ್ರಮಿಸಿದರು. ಅದಕ್ಕಾಗಿಯೇ ಈ ದ್ವಾರಕ್ಕೆ ಕಟಿ ಘಾಟಿ ಎಂದು ಹೆಸರಿಸಲಾಯಿತು.

katighatigateway date timings

ಪ್ರತಿಫಲ ನೀಡದ ರಾಜ

ಒಂದೇ ರಾತ್ರಿಯಲ್ಲಿ ಈ ದ್ವಾರ ಅಂದರೆ ಗೇಟ್ ಪೂರ್ಣಗೊಳಿಸಿದ ನಂತರ, ಕಿಂಗ್ ಶೇರ್ ಖಾನ್ ಕಾರ್ಮಿಕರು ಮತ್ತು ಕುಶಲಕರ್ಮಿಗಳಿಗೆ ಪ್ರತಿಫಲ ನೀಡಲು ನಿರಾಕರಿಸಿದಾಗ ಈ ಆಸಕ್ತಿದಾಯಕ ಗೇಟ್‌ನ ಕಥೆಯು ತಿರುವು ಪಡೆಯುತ್ತದೆ. ಹೌದು, ರಾಜನು ಈ ಗೇಟ್‌ ನಿರ್ಮಿಸಿದ್ದಕ್ಕೆ ಪ್ರತಿಫಲವನ್ನು ನೀಡುವುದಿಲ್ಲ. ಏಕೆಂದರೆ ಈ ದ್ವಾರಕ್ಕೆ ಬಾಗಿಲು ಇರುವುದಿಲ್ಲ. ಇದರ ಕಾರಣ ಚಂದೇರಿಗೆ ಶತ್ರುಗಳು ನುಗ್ಗಲು ಸುಲಭವಾಗುತ್ತದೆ. ಇದನ್ನು ಕೇಳ ಕೇಳುತ್ತಿದ್ದಂತೆ ಕಟಿ ಘಾಟಿ ಕಟ್ಟುತ್ತಿದ್ದ ಕಾರ್ಮಿಕನೊಬ್ಬ ಇದೇ ಗೇಟಿನಿಂದಲೇ ಹಾರಿ ಆ*ತ್ಮಹ*ತ್ಯೆ ಮಾಡಿಕೊಂಡಿದ್ದಾನೆ. ನೀವು ಈ ಗೇಟ್ ಬಳಿ ಆ ಕಾರ್ಮಿಕನ ಸಮಾಧಿಯನ್ನು ಸಹ ನೋಡುತ್ತೀರಿ. ಅಂದಿನಿಂದ ಈ ಗೇಟ್ ಹಾಗೆಯೇ ಉಳಿದಿದೆ, ಇಂದಿಗೂ ಈ ಗೇಟ್‌ಗೆ ಬಾಗಿಲು ಅಳವಡಿಸಲಾಗಿಲ್ಲ.

ಇನ್ನೊಂದು ಕಥೆಯಿದೆ...

ಈ ಗೇಟ್‌ಗೆ ಸಂಬಂಧಿಸಿದಂತೆಯೇ ಇನ್ನೊಂದು ಆಸಕ್ತಿದಾಯಕ ದಂತಕಥೆ ಇದೆ. ಮಾಳವದ ಸುಲ್ತಾನನನ್ನು ಸ್ವಾಗತಿಸಲು ಜಿಮಾನ್ ಖಾನ್ ಗೇಟ್ ಕಟ್ಟಬಲ್ಲವರಿಗಾಗಿ ಹುಡುಕುತ್ತಿದ್ದನು. ಗೇಟ್‌ ಕಟ್ಟುವುದು ಅಸಾಧ್ಯವೆಂದು ಯಾರೂ ಮುಂದೆ ಬರಲಿಲ್ಲ. ಜಿಮಾನ್ ಖಾನ್ ಇನ್ನೇನು ಭರವಸೆ ಕಳೆದುಕೊಳ್ಳುವ ಸಮಯದಲ್ಲಿ ವ್ಯಕ್ತಿಯೊಬ್ಬರು ಅಲ್ಲಿಗೆ ಬಂದು ಗೇಟ್‌ ಕಟ್ಟುವ ಕೆಲಸ ಪೂರ್ಣಗೊಳಿಸಿದರು.

ನಂತರ ಕೆಲಸವನ್ನು ಪರಿಶೀಲಿಸಲು ಜಿಮಾನ್ ಖಾನ್ ಅವರನ್ನು ಕರೆಯಲಾಯಿತು. ಬೃಹತ್ ಗೇಟ್‌ವೇಯನ್ನು ನೋಡಿದ ಜಿಮಾನ್ ಖಾನ್‌ನ ಸಂತೋಷವು ಅಲ್ಪಕಾಲಿಕವಾಗಿತ್ತು, ಏಕೆಂದರೆ ಗೇಟ್‌ವೇಯಲ್ಲಿ ಯಾವುದೇ ಬಾಗಿಲಿಲ್ಲ ಎಂದು ಅರಿತುಕೊಂಡನು. ಇದರಿಂದ ಚಂದೇರಿಗೆ ಶತ್ರುಗಳು ಸುಲಭವಾಗಿ ನುಗ್ಗಬಹುದಾಗಿತ್ತು. ವಾಸ್ತವವಾಗಿ, ವ್ಯಕ್ತಿಯು ರಾಜ್ಯವನ್ನು ಪ್ರವೇಶಿಸಲು ಸುಲಭವಾದ ಮಾರ್ಗವನ್ನು ಸೃಷ್ಟಿಸಿದರು. ಅಸಾಧ್ಯವಾದ ಕೆಲಸವನ್ನು ಸಾಧಿಸಿದ ವ್ಯಕ್ತಿ ತನ್ನ ಮೂರ್ಖತನವನ್ನು ಅರಿತುಕೊಂಡಾಗ ದಿಗ್ಭ್ರಮೆಗೊಂಡನು. ಇದರಿಂದ ಮನನೊಂದ ಆ ವ್ಯಕ್ತಿ ಆತ್ಮಹ*ತ್ಯೆ ಮಾಡಿಕೊಂಡನು. ಅವನ ಪಾರ್ಥಿವ ಶರೀರವನ್ನು ಗೇಟ್‌ವೇ ಪಕ್ಕದಲ್ಲಿಯೇ ಸಮಾಧಿ ಮಾಡಲಾಯಿತು.

ಹೋಗುವುದು ಹೇಗೆ?

ಮಧ್ಯಪ್ರದೇಶದ ಚಂದೇರಿ ಬಸ್ ನಿಲ್ದಾಣದಿಂದ ಕೇವಲ 3 ಕಿ.ಮೀ ದೂರದಲ್ಲಿರುವ ಕಟಿ ಘಾಟಿ ಚಂದೇರಿಯಲ್ಲಿರುವ ಆಕರ್ಷಕ ಗೇಟ್‌ವೇ ಆಗಿದೆ. ಇಲ್ಲಿಗೆ ನೀವು ಕ್ಯಾಬ್‌ ಅಥವಾ ಆಟೋ ಮೂಲಕ ತಲುಪಬಹುದು.

More News

Read more about: madhya pradesh chanderi stree 2
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+