• Follow NativePlanet
Share
» »ಭಾರತ ದೇಶದಲ್ಲಿಯೇ ಈ ಒಂದೇ ಸ್ಥಳದಲ್ಲಿ ಕಾಣಿಸುವ ವಿಚಿತ್ರ!

ಭಾರತ ದೇಶದಲ್ಲಿಯೇ ಈ ಒಂದೇ ಸ್ಥಳದಲ್ಲಿ ಕಾಣಿಸುವ ವಿಚಿತ್ರ!

Written By:

ಪ್ರವಾಸದ ರಂಗದಲ್ಲಿ ಜಲಪಾತಕ್ಕೆ ಒಂದು ಪ್ರತ್ಯೇಕವಾದ ಸ್ಥಾನವಿದೆ. ಈ ಜಲಪಾತಗಳು ಪ್ರವಾಸಿಗರಿಗೆ ಅತ್ಯಂತ ಅನಂದದ ಜೊತೆ ಜೊತೆಗೆ ಒಂದು ಪ್ರಕೃತಿಯ ರಮಣೀಯತೆಯನ್ನು ಒದಗಿಸುತ್ತದೆ. ಆಕಾಶದಿಂದ ಧರೆಗೆ ಭೀಳುತ್ತಿರುವ ಹಾಲಿನ ನೊರೆಯಂತೆ ಕಾಣುವ ಸುಂದರವಾದ ಜಲಪಾತಗಳು ಎಲ್ಲರಿಗೂ ಅಚ್ಚು ಮೆಚ್ಚು. ಸುಂದರವಾದ ವಾತಾವರಣ, ಪಕ್ಷಿಗಳ ನಿನಾದ, ತಂಪಾದ ಗಾಳಿ, ಚುಮು ಚುಮು ಚಳಿ, ನೀರಿನ ಶಬ್ಧ ಆಹಾ! ಎಷ್ಟು ಸುಂದರವಾಗಿರುತ್ತದೆ ಅಲ್ಲವೇ?.

ಇವು ಬೆಂಗಳೂರಿನ ಭಯಾನಕವಾದ ಸ್ಥಳಗಳು

ಜಲಪಾತದ ಸೌಂದರ್ಯ ಕಾಣುತ್ತಾ ಅಲ್ಲಿಯೇ ಇದ್ದು ಬಿಡಬೇಕು ಎಂಬ ಬಯಕೆ ಸಹಜವಾಗಿ ಮೂಡುವಂಹದು. ತೆಲಂಗಾಣ ರಾಜ್ಯದ ಕರೀಂನಗರ ಜಿಲ್ಲೆಯಲ್ಲಿ ಒಂದು ಮಂಡಲದಲ್ಲಿ 3 ಸುಂದರವಾದ ಜಲಪಾತಗಳು ಇವೆ. ಈ ಜಲಪತಗಳು ರಾಮಗಂಡಂ ಎಂಬ ಪ್ರದೇಶದ ಪರಿಸರ ಪ್ರಾಂತ್ಯದಲ್ಲಿದೆ. ಈ ಜಲಪಾತಕ್ಕೆ ರಾಮಾಯಣದ ಕೆಲವು ಘಟನೆಗಳಿಗೆ ನಿರ್ದಶನವಾಗಿದೆ ಎಂಬುದು ನಿಮಗೆ ಗೊತ್ತ?

ಹಾಗಾದರೆ ಆ ಜಲಪಾತಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಲೇಖನದಲ್ಲಿ ಪಡೆಯೋಣ.

ಗೌರಿ ಗುಂಡಂ

ಗೌರಿ ಗುಂಡಂ

ಹಚ್ಚ ಹಸಿರಿನಿಂದ ಕೂಡಿದ ಅರಣ್ಯ, ತಂಪಾದ ಗಾಳಿಯ ಮಧ್ಯೆ ಕಪ್ಪಗಿನ ಕೊಳದಲ್ಲಿ ಆಕಾಶದಿಂದ ಧುಮುಕುತ್ತಿರುವ ಹಾಲು ನೊರೆಯ ಜಲಪಾತವೇ ಗೌರಿ ಗುಂಡಂ ಜಲಪಾತ. ಈ ಜಲಪಾತವು ಸುಮಾರು 150 ಅಡಿ ಎತ್ತರದ ಬೆಟ್ಟದ ಶಿಖರದ ಮಧ್ಯ ಭಾಗದಿಂದ ಅಂದರೆ ಸುಮಾರು 70 ಅಡಿ ಎತ್ತರದಿಂದ ಧುಮುಕುತ್ತಿದೆ. ಈ ಜಲಪಾತದ ಕೆಳಗೆ 8 ಅಡಿಗಿಂತ ಹೆಚ್ಚು ಆಳವಿಲ್ಲದೇ ಇರುವುದರಿಂದ ಹಲವಾರು ಜನರು ಸ್ನಾನ ಮಾಡುತ್ತಾರೆ. ಈಜು ಕ್ರೀಡೆಗಳಂತಹ ಚಟುವಟಿಕೆ ಇಲ್ಲಿ ಮಾಡಬಹುದು. ಈ ಜಲಪಾತವು ತೆಲಂಗಾಣದ ಪೆದ್ದಪಲ್ಲಿಯಿಂದ ಸುಮಾರು 10 ಕಿ.ಮೀ ದೂರದಲ್ಲಿದೆ.


Photo Courtesy: telangana tourism

ಮಾರ್ಗ

ಮಾರ್ಗ

ಹಾಗೆಯೇ ಈ ಜಲಪಾತಕ್ಕೆ ದಕ್ಷಿಣ ದಿಕ್ಕಿಗೆ ಕೆಲವು ಕಿ.ಮೀ ದೂರದಲ್ಲಿರುವ "ಸೀತಮ್ಮ ಕೊಲ್ಲುಗುಂಟ" ಎಂಬ ಸ್ಥಳವನ್ನು, ಉತ್ತರದ ದಿಕ್ಕಿಗೆ ಸುಮಾರು ಒಂದು ಕಿ.ಮೀ ದೂರದಲ್ಲಿರುವ "ಪುಲಿಗುಂಡಂ" ಎಂಬ ಸ್ಥಳವು ಕೂಡ ಭೇಟಿ ನೀಡಬಹುದಾಗಿದೆ. ಜಲಪಾತದ ಜೊತೆ ಜೊತೆಗೆ ಆ ಪ್ರಾಕೃತಿಕ ಸೌಂದರ್ಯವನ್ನು ಕೂಡ ಕಂಡು ಆನಂದಿಸಿ.


Photo Courtesy: telangana tourism

ರಾಮಗುಂಡಂ

ರಾಮಗುಂಡಂ

ರಾಮಗುಂಡಂ ಪಟ್ಟಣಕ್ಕೆ ಆ ಹೆಸರು ಬರುವುದಕ್ಕೆ ಕಾರಣ ಆ ಪಟ್ಟಣದಲ್ಲಿನ ಒಂದು ಗುಡ್ಡದ ಮೇಲೆ ಇರುವ "ರಾಮಗುಂಡಂ" ಎಂಬ ಕೊಳ. ಮಳೆಗಾಲದ 4 ತಿಂಗಳ ಅವಧಿಯಲ್ಲಿ ಅಂದರೆ(ಜೂನ್ ತಿಂಗಳಿನಿಂದ ನವೆಂಬರ್ ತಿಂಗಳವರೆಗೆ) ಇರುವ ಸಹಜ ಸಿದ್ಧವಾದ ಜಲಪಾತವಾಗಿದೆ. 108 ಕೊಳದಿಂದ ತಿರುಗುತ್ತಾ ತಿರುಗುತ್ತಾ ಕೆಳಗೆ ಧುಮುಕುತ್ತದೆ. ಒಂದು ರಂಧ್ರದಿಂದ ಹೋಗಿ ಮತ್ತೊಂದು ರಂಧ್ರದಲ್ಲಿ ಬೀಳುತ್ತದೆ. ಅಂದರೆ ಒಂದು ರಂಧ್ರದಲ್ಲಿ ಮಾಯವಾಗಿ ಮತ್ತೊಂದು ರಂಧ್ರದ ಮೂಲಕ ಮತ್ತೆ ಹುಟ್ಟುತ್ತದೆ. ಇಂತಹ ವಿಭಿನ್ನವಾದುದು ದೇಶದಲ್ಲಿ ಯಾವುದೇ ಸ್ಥಳದಲ್ಲಿಯೂ ಕಾಣಲು ಸಾಧ್ಯವಿಲ್ಲ.


Photo Courtesy: telangana tourism

ಯಾಮಕೋನಂ

ಯಾಮಕೋನಂ

ಇಲ್ಲಿ ಹಲವಾರು ಪ್ರವಾಸಿಗರು ಈ ಸುಂದರವಾದ ದೃಶ್ಯವನ್ನು ಕಂಡು ಆನಂದಿಸಲು ಭೇಟಿ ನೀಡುತ್ತಾರೆ. ಹಾಗೆಯೇ ಈ ಸ್ಥಳದಲ್ಲಿ ಜಲ ಕ್ರೀಡೆಗಳಂತಹ ಚಟುವಟಿಕೆಗಳಿಂದ ಮತ್ತಷ್ಟು ಆನಂದಿಸಬಹುದಾಗಿದೆ. ಇಲ್ಲಿನ ಪ್ರಕೃತಿಯ ಸೌಂದರ್ಯವನ್ನು ಮತ್ತಷ್ಟು ಆನಂದಿಬಹುದಾಗಿದೆ. ಈ ಸ್ಥಳದಿಂದ ಟ್ರೆಕ್ಕಿಂಗ್ ಪ್ರೇಮಿಗಳು ತೆರಳಬಹುದಾಗಿದೆ.


Photo Courtesy: telangana tourism

ವಿಗ್ರಹ

ವಿಗ್ರಹ

ರಾಮ ಗುಂಡದ ಸಮೀಪದ ಒಂದು ವೀರಗಲ್ ವಿಗ್ರಹವಿದೆ. ಈ ವೀರಗಲ್ ವಿಗ್ರಹವನ್ನು ದಾಟಿ ಸ್ವಲ್ಪ ದೂರ ಕ್ರಮಿಸಿದರೆ 6 ಅಡಿ ಎತ್ತರದ ಏಕಶಿಲಾ ವಿನಾಯಕನ ವಿಗ್ರಹವಿದೆ. ಆ ವಿಗ್ರಹದ ಶೈಲಿ ಹಾಗು ವಿಶೇಷತೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಸುಮಾರು 1000 ವರ್ಷಗಳಷ್ಟು ಹಳೆಯದಾದುದು ಎಂದು ತಿಳಿದು ಬರುತ್ತದೆ.

Photo Courtesy: telangana tourism

ರಾಮ ಹಾಗು ಸೀತ

ರಾಮ ಹಾಗು ಸೀತ

ಬೆಟ್ಟದ ತುದಿಯಲ್ಲಿ ರಾಮ ಹಾಗು ಸೀತ ಆನಂದದಿಂದ ಕಾಲ ಕಳೆಯುತ್ತಿದ್ದರಂತೆ. ಇದಕ್ಕೆ ನಿರ್ದಶನವಾಗಿ ರಾಮ-ಸೀತರ ಅಲಿಂಗನದ ಶಿಲ್ಪಗಳನ್ನು ಇಲ್ಲಿ ಕಾಣಬಹುದಾಗಿದೆ. ರಾಮಾಲಯಂ ಪಕ್ಕದಲ್ಲಿಯೇ ರಾಮಾನುಜಾಸ್ವಾಮಿಯ ವಿಗ್ರಹವಿದೆ. ಅದರ ಪಕ್ಕದಲ್ಲಿಯೇ ಒಂದು ಗುಹೆಯು ಇದೆ.

Photo Courtesy: telangana tourism

ರಾಮನ ಪಾದ ಮುದ್ರೆ

ರಾಮನ ಪಾದ ಮುದ್ರೆ

ಇಲ್ಲಿ ಸೀತಾರಾಮರು ಕೆಲವು ಕಾಲ ವಾಸವಿದ್ದ ಕಾರಣ ಇಲ್ಲಿ ರಾಮನ ಪಾದದ ಮುದ್ರೆಯನ್ನು ಕಾಣಬಹುದಾಗಿದೆ. ಇಲ್ಲಿ ಇನ್ನೂ ವೆಂಕಟೇಶ್ವರಸ್ವಾಮಿ... ಸಂತೊಷಿಮಾತಾ, ಗಾಯತ್ರಿಮಾತಾ ಮಂದಿರ ಕೂಡ ಇವೆ. ಆಹ್ಲಾದಕರವಾದ ವಾತಾವರಣದಲ್ಲಿನ ಈ ಕ್ಷೇತ್ರವನ್ನು ಭಕ್ತಿಯಿಂದ ಆರಾಧಿಸಬಹುದಾಗಿದೆ. ಈ ಸುಂದರವಾದ ಸ್ಥಳಕ್ಕೆ ಕುಟುಂಬ ಸಮೇತರಾಗಿ ಅಥವಾ ಸ್ನೇಹಿತರೊಂದಿಗೆ ಭೇಟಿ ನೀಡಬಹುದಾಗಿದೆ.

Photo Courtesy: telangana tourism

ಹೇಗೆ ಸಾಗಬೇಕು?

ಹೇಗೆ ಸಾಗಬೇಕು?

ನೇರವಾಗಿ ಕರಿಂನಗರಕ್ಕೆ ಯಾವುದೇ ವಿಮಾನ ನಿಲ್ದಾಣವಿಲ್ಲ. ಬದಲಾಗಿ ಸಮೀಪದಲ್ಲಿ ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವಿದೆ. ಈ ಸ್ಥಳದಿಂದ ಸುಮಾರು 160 ಕಿ.ಮೀ ದೂರದಲ್ಲಿ ಕರಿಂನಗರವಿದೆ.

ರೈಲ್ವೆ ನಿಲ್ದಾಣ

ರೈಲ್ವೆ ನಿಲ್ದಾಣ

ರೈಲ್ವೆ ನಿಲ್ದಾಣ ಮಾರ್ಗವಾಗಿ ತೆರಳಬೇಕಾದರೆ ಕರಿಂನಗರಕ್ಕೆ ನೇರವಾದ ರೈಲ್ವೆ ಸಂಪರ್ಕವಿದೆ. ಹೀಗಾಗಿ ರೈಲು ಪ್ರಯಾಣ ಸುಲಭವಾಗಿದೆ.

ರಸ್ತೆ ಮಾರ್ಗ

ರಸ್ತೆ ಮಾರ್ಗ

ರಸ್ತೆ ಮಾರ್ಗವಾಗಿ ತೆರಳವವರು ಮೊದಲು ಹೈದ್ರಾಬಾದ್ ತಲುಪಿ ಅಲ್ಲಿಂದ ಸುಮಾರು 160 ಕಿ.ಮೀ ದೂರದಲ್ಲಿ ವಿಜಯವಾಡಗೆ ತಲುಪಿ. ಅಲ್ಲಿಂದ ಸುಮಾರು 350 ಕಿ.ಮೀ ದೂರದಲ್ಲಿ ಈ ಪ್ರದೇಶ ನಿಮಗೆ ಸುಲಭವಾಗಿ ದೊರೆಯುತ್ತದೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ