
ಪಶ್ಚಿಮ ಬಂಗಾಳದಲ್ಲಿರುವ ಕಲ್ನಾ ಎಂಬ ಈ ಪಟ್ಟಣವು ಅಂಬಿಕಾ ಕಲ್ನಾ ಎಂಬ ಹೆಸರನ್ನೂ ಹೊಂದಿದೆ. ಈ ಪಟ್ಟಣವು ಮಾ ಅಂಬಿಕ ಅಥವಾ ತಾಯಿ ಅಂಬಿಕ ಎಂದೂ ಕರೆಯಲ್ಪಡುವ ಕಾಳಿ ದೇವಿಗೆ ಸಮರ್ಪಿತವಾಗಿದೆ. ಈ ಸ್ಥಳವು ಹಿಂದೂಗಳ ಪಾಲಿಗೆ ಅದರಲ್ಲೂ ವಿಶೇಷವಾಗಿ ಬೆಂಗಾಲಿಗಳ ಪಾಲಿಗೆ ಧಾರ್ಮಿಕಾಗಿ ಅತೀ ಮಹತ್ವದ ಸ್ಥಳವಾಗಿದೆ.

ಐತಿಹಾಸಿಕ ಸ್ಮಾರಕಗಳು
ಇಲ್ಲಿ ಕೆಲವು ಬಹಳ ಮಹತ್ತರವಾದ ಮತ್ತು ಮುಖ್ಯವಾದ ಐತಿಹಾಸಿಕ ಸ್ಮಾರಕಗಳಿವೆ. ರಾಜ್ಬರಿ ಎಂಬ ಹೆಸರಿನ ಅರಮನೆ ಮತ್ತು 108 ಶಿವಾಲಯಗಳೂ ಕೂಡ ಇಲ್ಲಿವೆ. ಕಲ್ನಾ ಬೇಸಾಯದ ದೃಷ್ಟಿಯಿಂದ ಪ್ರಬಲವಾಗಿಯೇ ಇದ್ದು, ದಾರಿಯಲ್ಲಿ ಸಾಗುವಾಗ ಪ್ರವಾಸಿಗರು ವಿವಿಧ ಧಾನ್ಯಗಳು, ಆಲೂಗೆಡ್ಡೆ ಮತ್ತು ಇತರ ಸಸ್ಯಗಳನ್ನು ವೀಕ್ಷಿಸಬಹುದು.

ಸಾಮರಸ್ಯದ ಜೀವನ
ಇಲ್ಲಿನ ಸ್ಥಳೀಯ ಜನಸಂಖ್ಯೆಯು ಹಿಂದೂ ಮತ್ತು ಮುಸ್ಲಿಂ ಸಮುದಾಯವನ್ನೂ ಹೊಂದಿದ್ದು, ಎರಡೂ ಧರ್ಮದವರು ಪರಿಪೂರ್ಣವಾದ ಸಾಮರಸ್ಯದಿಂದ ಬಾಳುತ್ತಿದ್ದಾರೆ. ಇಲ್ಲಿನ ಗುಡಿಕೈಗಾರಿಕೆಗಳಲ್ಲಿ ಉತ್ಪನ್ನವಾಗುವ ಅಗಣಿತ ಉಪಯುಕ್ತ ವಸ್ತೂಗಳೂ ಸಹ ಇಲ್ಲಿ ಯಥೇಚ್ಚವಾಗಿ ಲಭ್ಯವಿವೆ.

ಬಾಬಾ ಪಗ್ಲಾ ಅವರ ಹುಟ್ಟೂರು
ಕಲ್ನಾವು, ಸಂತ ಬಾಬಾ ಪಗ್ಲಾ ಅವರ ಹುಟ್ಟೂರಾಗಿದೆ. ಇಲ್ಲಿ ಬೆಂಗಾಲಿ ಹೊಸ ವರ್ಷವು ಆರಂಭವಾಗುವುದಕ್ಕೆ ಮುಂಚೆ ಕಡೆಯ ವರ್ಷದ ಕೊನೆಯ ಶನಿವಾರದಂದು ಈ ಸಂತನಿಗಾಗಿ ಇಲ್ಲಿ ವಿಶೇಷ ಪ್ರಾರ್ಥನಾ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ. ಸುಪ್ರಸಿದ್ಧವಾದ 108 ದೇವಸ್ಥಾನಗಳನ್ನು ಎರಡು ಸಮ ಕೇಂದ್ರೀಯ ವೃತ್ತಗಳಲ್ಲಿ ನಿರ್ಮಿಸಲಾಗಿದ್ದು, ಒಂದು ವೃತ್ತವು 74 ದೇವಸ್ಥಾನಗಳನ್ನೂ ಹಾಗೂ ಮತ್ತೊಂದು ವೃತ್ತವು 34 ದೇವಸ್ಥಾನಗಳನ್ನೂ ಒಳಗೊಂಡಿವೆ. ದೇವಾಲಯಗಳ ಕಲಾತ್ಮಕತೆಯು ಮೆಚ್ಚಿಕೊಳ್ಳತಕ್ಕದ್ದಾಗಿದೆ.

ಧಾರ್ಮಿಕ ಆಚರಣೆಗಳು
ಹಬ್ಬಗಳು ಮತ್ತು ಆಚರಣೆಗಳು ಸರಸ್ವತಿ ಪೂಜಾ, ಕಾಲಿ ಪೂಜಾ, ಮತ್ತು ದುರ್ಗಾ ಪೂಜಾ ಗಳು ಇಲ್ಲಿನ ಮೂರು ಅತೀ ಪ್ರಮುಖ ಧಾರ್ಮಿಕ ಸಂದರ್ಭಗಳಾಗಿದ್ದು, ಕಲ್ನಾಕ್ಕೆ ಭೇಟಿ ನೀಡುವ ಪ್ರತಿಯೊಬ್ಬರೂ ಕೂಡ ಈ ಸಂದರ್ಭವನ್ನು ಮಿಸ್ ಮಾಡಿಕೊಳ್ಳಬಾರದು. ಮಾತ್ರವಲ್ಲದೇ, 4 ದಿನಗಳ ಪರ್ಯಂತ ನಡೆಯುವ ಮಹಿಷಮರ್ದಿನಿ ಪೂಜೆಯ ವೇಳೆಯಲ್ಲಿ, ಕಲ್ನಾದಲ್ಲಿ ಅನೇಕ ಸ್ಟಾಲ್‌ಗಳು, ಸವಾರಿಗಳು ಮತ್ತು ಮನೋರಂಜನಾ ಕಾರ್ಯಕ್ರಮಗಳಿಂದ ಕೂಡಿದ ಹಬ್ಬದ ವಾತಾವರಣ ಸೃಷ್ಟಿಯಾಗುತ್ತದೆ.

108 ಶಿವ ಮಂದಿರ
1809 ರಲ್ಲಿ ಕಟ್ಟಲ್ಪಟ್ಟ 108 ಶಿವ ಮಂದಿರವನ್ನು ಎರಡು ವಲಯಗಳಲ್ಲಿ ನಿರ್ಮಿಸಲಾಗಿದೆ. ಒಂದು 74 ದೇವಾಲಯಗಳನ್ನು ಹೊಂದಿದೆ ಮತ್ತು ಇತರ ವೃತ್ತದಲ್ಲಿ 34 ಇರುತ್ತದೆ. ಹಿಂದಿನದ್ದು ಬಿಳಿ ಅಮೃತಶಿಲೆ ಮತ್ತು ಕಪ್ಪು ಕಲ್ಲು ಶಿವಲಿಂಗವನ್ನು ಹೊಂದಿದ್ದು, ನಂತರವುಗಳು ಬಿಳಿ ಅಮೃತಶಿಲೆಗಳ ಶಿವಲಿಂಗಗಳಾಗಿವೆ. ಅಲ್ಲಿನ ಅದ್ಭುತ ಯೋಜನೆಯ ಕಾರಣದಿಂದಾಗಿ ಎಲ್ಲಾ ಶಿವಲಿಂಗಗಳನ್ನು ದೇವಾಲಯದ ಸಂಕೀರ್ಣದ ಕೇಂದ್ರದಿಂದ ನೋಡಬಹುದಾಗಿದೆ.

ಗೋಪಾಲ್ಬರಿ ಮಂದಿರ
ಕಲ್ನಾದ ಸುತ್ತಮುತ್ತ ಧಾರ್ಮಿಕ ಪ್ರವಾಸಿಗರಿಗೆ ಕಲ್ನಾದಲ್ಲಿ ಇನ್ನೂ ನೋಡತಕ್ಕ ಅನೇಕ ಸ್ಥಳಗಳಿವೆ. ಈ ದೇವಾಲಯಗಳ ಪಟ್ಟಣವನ್ನು ವೀಕ್ಷಿಸಲು ಕಾಲ್ನಡಿಗೆಯೇ ಅತ್ಯುತ್ತಮವಾದದ್ದು. ಗೋಪಾಲ್ಬರಿ ಮಂದಿರವು 25 ಸ್ತಂಭಗಳನ್ನು ಒಳಗೊಂಡಿರುತ್ತದೆ. ಇದು ಒಂದು ಶಿಲ್ಪಕಲೆಯಾಗಿದೆ. ಈ ದೇವಾಲಯಗಳ ಗೋಡೆಗಳ ಮೇಲೆ ಅನೇಕ ಟೆರಾಕೋಟಾವನ್ನು ಅಲಂಕರಿಸಲಾಗಿದೆ. ನಕಲಿ ಕೆತ್ತನೆಯ ಚಿತ್ರ ಇಲ್ಲಿದೆ. ಭಕ್ತಿ ನೃತ್ಯ ಮತ್ತು ಸಂಗೀತದ ಪ್ರದರ್ಶನಕ್ಕಾಗಿ ದೇವಸ್ಥಾನದ ಪಕ್ಕದಲ್ಲಿ ಒಂದು ಹಾಲ್ ಅನ್ನು ಸ್ಥಾಪಿಸಲಾಗಿದೆ. ಇದು ಭದುರಿ ಪಾರಾದಲ್ಲಿ ನೆಲೆಗೊಂಡಿರುವ ಸಾಂಪ್ರದಾಯಿಕ ಶಿಲ್ಪದ ಪ್ರತೀಕವಾಗಿದೆ.

ತಲುಪುವುದು ಹೇಗೆ?
ನಗರದ ಮುಖ್ಯ ರೈಲ್ವೆ ನಿಲ್ದಾಣವು ಅಂಬಿಕಾ ಕಲ್ನಾ ರೈಲ್ವೆ ನಿಲ್ದಾಣವಾಗಿದ್ದು ನಗರದ ಉತ್ತರ ಭಾಗವನ್ನು ಕೂಡಾ ಬಾಗ್ನಾಪರಾ ರೈಲು ನಿಲ್ದಾಣದ ಮೂಲಕ ತಲುಪಬಹುದು. ಅಂಬಿಕಾ ಕಲ್ನಾ 42 ಕಿ.ಮೀ. ಮತ್ತು ಬಾಂದೇಲ್-ಕಟ್ವಾ ಬ್ರಾಂಚ್ ಲೈನ್ನಲ್ಲಿ ಬಾಂದೇಲ್ನಿಂದ 46 ಕಿ.ಮೀ ದೂರದಲ್ಲಿದೆ. ಹೌರಾದಿಂದ, ಸ್ಥಳೀಯ ರೈಲುಗಳ ಮೂಲಕ ಕಲ್ನಾವನ್ನು ತಲುಪಲು ಸುಮಾರು 2 ಗಂಟೆಗಳು ಬೇಕಾಗುತ್ತದೆ.
ಕಲ್ನಾ ದಕ್ಷಿಣ ಬಂಗಾಳದ ಪ್ರಮುಖ ನಗರಗಳೊಂದಿಗೆ ರಸ್ತೆ ಮೂಲಕ ಸಂಪರ್ಕ ಹೊಂದಿದೆ. ಮುಖ್ಯ ಬಸ್ ನಿಲ್ದಾಣ STKK ರಸ್ತೆ ಬಳಿಯಿದೆ. ಅನೇಕ ಸ್ಥಳೀಯ ಖಾಸಗಿ ಮತ್ತು ಎಕ್ಸ್ಪ್ರೆಸ್ ಬಸ್ಸುಗಳು ಲಭ್ಯವಿದೆ.