Search
  • Follow NativePlanet
Share
» »ಆ ಪ್ರವಾಸ 15 ದಿನಗಳು...ಪ್ರದಕ್ಷಿಣೆ ಮೂರು ದಿನಗಳು...ಆದರೂ ದೈವ ದರ್ಶನ ಆಗುವುದಿಲ್ಲ...

ಆ ಪ್ರವಾಸ 15 ದಿನಗಳು...ಪ್ರದಕ್ಷಿಣೆ ಮೂರು ದಿನಗಳು...ಆದರೂ ದೈವ ದರ್ಶನ ಆಗುವುದಿಲ್ಲ...

ಭಾರತ ದೇಶದಲ್ಲಿ ಕೆಲವು ಆಧ್ಯಾತ್ಮಿಕದ ಜೊತೆಗೆ ಆಹ್ಲಾದಕರವಾದ ಪ್ರದೇಶಗಳು ಕೂಡ ಇವೆ. ಆಧ್ಯಾತ್ಮಿಕ ಪ್ರವಾಸವು ನಾವು ನಂಬಿದ ದೈವ ದರ್ಶನದಿಂದ ಮುಗಿಯುತ್ತದೆ. ಗರಿಷ್ಟವಾಗಿ ಯಾವುದೇ ಆಧ್ಯಾತ್ಮಿಕ ಪ್ರವಾಸವಾದರೂ ಮೂರು ದಿನಗಳ ಕಾಲ ನಡೆಯುತ್ತವೆ. ಆದ

By Sowmyabhai

ಭಾರತ ದೇಶದಲ್ಲಿ ಕೆಲವು ಆಧ್ಯಾತ್ಮಿಕದ ಜೊತೆಗೆ ಆಹ್ಲಾದಕರವಾದ ಪ್ರದೇಶಗಳು ಕೂಡ ಇವೆ. ಆಧ್ಯಾತ್ಮಿಕ ಪ್ರವಾಸವು ನಾವು ನಂಬಿದ ದೈವ ದರ್ಶನದಿಂದ ಮುಗಿಯುತ್ತದೆ. ಗರಿಷ್ಟವಾಗಿ ಯಾವುದೇ ಆಧ್ಯಾತ್ಮಿಕ ಪ್ರವಾಸವಾದರೂ ಮೂರು ದಿನಗಳ ಕಾಲ ನಡೆಯುತ್ತವೆ. ಆದರೆ ಭಾರತ ದೇಶದಲ್ಲಿ ಒಂದು ಆಧ್ಯಾತ್ಮಿಕ ಪ್ರವಾಸ ಮಾತ್ರ 10 ರಿಂದ 15 ದಿನಗಳ ಕಾಲ ತೆಗೆದುಕೊಳ್ಳುತ್ತದೆ. ಇಷ್ಟು ದಿನಗಳು ಸಾಗಿದರೂ ಕೂಡ ಆ ಪ್ರವಾಸವು ದೈವ ದರ್ಶನದಿಂದ ಮುಗಿಯುತ್ತದೆ ಎಂದರೆ ಅದೂ ಇಲ್ಲ.

ಕೇವಲ ಆ ಪ್ರದೇಶದಲ್ಲಿ ಪ್ರದಕ್ಷಿಣೆಗಳು ಮಾತ್ರ ಮಾಡಿ ಹಿಂದೆ ಬರಬೇಕಾದುದೇ. ದೇಶದ ಪ್ರಜೆಗಳು ಕನಿಷ್ಟ ತಮ್ಮ ಜೀವನದಲ್ಲಿ ಒಮ್ಮೆಯಾದರೂ ಆ ಯಾತ್ರೆ ಮಾಡಬೇಕು ಎಂದು ಭಾವಿಸುತ್ತಾರೆ. ಅಂತಹ ಪ್ರವಾಸ ವಿವರಗಳ ಜೊತೆಗೆ ಅದರ ಸ್ಥಳ ಪುರಾಣದ ಬಗ್ಗೆ ಲೇಖನದ ಮೂಲಕ ತಿಳಿದುಕೊಳ್ಳೊಣ.

1.ಪರಮಶಿವನು ನಿವಾಸಿಸುತ್ತಿರುವುದು ಈ ಪರ್ವತದಲ್ಲಿಯೇ...

1.ಪರಮಶಿವನು ನಿವಾಸಿಸುತ್ತಿರುವುದು ಈ ಪರ್ವತದಲ್ಲಿಯೇ...

Image Source

ಸೃಷ್ಟಿಕರ್ತನಾದ ಬ್ರಹ್ಮನು ನಿವಾಸಿಸುತ್ತಿರುವುದು ಬ್ರಹ್ಮಲೋಕದಲ್ಲಿ, ಪ್ರತಿ ಪ್ರಾಣಿ ಅವಶ್ಯಕತೆಗಳನ್ನು ತೀರಿಸಿ, ಕಾಪಾಡುವ ವಿಷ್ಣು ಇರುವುದು ವೈಕುಂಠದಲ್ಲಿ. ಇನ್ನು ಲಯ ಕಾರ ಎಂದು ಹೆಸರನ್ನು ಹೊಂದಿರುವ ಪರಮೇಶ್ವರನು ನೆಲೆಸಿರುವುದು ಕೈಲಾಸದಲ್ಲಿ. ಆ ಕೈಲಾಸವಿರುವ ಪ್ರದೇಶವೇ ಹಿಮಾಲಯ ಪರ್ವತ ಪ್ರದೇಶದಲ್ಲಿನ ಕೈಲಾಸ ಪರ್ವತ.

2.ಎಲ್ಲಾ ನಿಗೂಢ ರಹಸ್ಯಗಳೇ

2.ಎಲ್ಲಾ ನಿಗೂಢ ರಹಸ್ಯಗಳೇ

Image Source

ಹಿಮಾಲಯ ಪರ್ವತ ಪ್ರದೇಶದಲ್ಲಿನ ಮಾನಸ ಸರೋವರ ತೀರದಲ್ಲಿರುವ ಪರ್ವತವೇ ಕೈಲಾಸ
ಪರ್ವತವೆಂದು ಸಾವಿರಾರು ಕೋಟಿ ವರ್ಷಗಳಿಂದ ಹಿಂದೂಗಳು ನಂಬುತ್ತಾರೆ. ಈ ಪರ್ವತ ಪ್ರಸ್ತಾವನೆಯ ಕುರಿತು ಮಹಾಭಾರತ ಕಾಲದಲ್ಲಿಯೂ ಕೂಡ ಇದೆ. ಪ್ರಪಂಚದಲ್ಲಿ ಅತ್ಯಂತ ಎತ್ತರವಾದ ಪರ್ವತ ಶಿಖರವಾಗಿ ಹೆಸರುವಾಸಿಯಾಗಿರುವ ಮೌಂಟ್ ಎವರೆಸ್ಟ್‍ನಿಂದ ಎಷ್ಟೊ ಎತ್ತರ ಕಡಿಮೆ ಇರುವ ಕೈಲಾಸ ಪರ್ವತವನ್ನು ಮಾತ್ರವೇ ಇಂದಿನವರೆವಿಗೂ ಒಬ್ಬನು ಕೂಡ ಹತ್ತಲು ಆಗಲಿಲ್ಲ ಎಂಬುದು ಗಮನಾರ್ಹ.

3.22 ಸಾವಿರ ಅಡಿ ಎತ್ತರ

3.22 ಸಾವಿರ ಅಡಿ ಎತ್ತರ

Image Source

ಸಮುದ್ರಮಟ್ಟಕ್ಕೆ ಸುಮಾರು 22 ಸಾವಿರ ಎತ್ತರದಲ್ಲಿರುವ ಟಿಬೆಟ್ ಭೂಭಾಗದಲ್ಲಿ ಈ ಕೈಲಾಸ ಪರ್ವತವಿದೆ. ಹಿಂದೂಗಳ ಜೊತೆಗೆ ಬೌದ್ಧರು. ಜೈನ ಧರ್ಮದವರು ಕೂಡ ಈ ಪರ್ವತ ಪ್ರದೇಶವನ್ನು ಪರಮ ಪವಿತ್ರ ಎಂದು ಭಾವಿಸುತ್ತಾರೆ. ಪರಮ ಶಿವನು ಇಲ್ಲಿ ತನ್ನ ಪರಿವಾರದ ಜೊತೆ ನೆಲೆಸಿದ್ದಾನೆ ಎಂದು ಹಿಂದೂಗಳು ಭಾವಿಸುತ್ತಿದ್ದಾರೆ. ಹಿಮಾಲಯದಲ್ಲಿ ಯಾವ ಪರ್ವತಕ್ಕೂ ಇಲ್ಲದ ಶಕ್ತಿ ಹಾಗು ರೂಪ ಈ ಪರ್ವತವು ಹೊಂದಿದೆ.

4.ನಾಲ್ಕು ಮುಖಗಳು

4.ನಾಲ್ಕು ಮುಖಗಳು

Image Source

ಈ ಪರ್ವತಕ್ಕೆ ನಾಲ್ಕು ಮುಖಗಳು ಇವೆ. ನಾಲ್ಕು ಮುಖಗಳು ನಾಲ್ಕು ರೂಪಗಳಾಗಿ ಕಾಣಿಸುತ್ತವೆ. ಇದರಲ್ಲಿ ಒಂದು ಭಾಗ ಮಾತ್ರ ಸಿಂಹ ರೂಪವು ಕಾಣಿಸಿದರೆ, ಉಳಿದ ಮೂರು ರೂಪಗಳು ಕುದುರೆ, ಆನೆ ಹಾಗು ನವಿಲು ರೂಪದಲ್ಲಿ ಕಾಣುತ್ತವೆ. ಈ ಜಂತುಗಳನ್ನು ಶಿವನ ಪರಿವಾರಕ್ಕೆ ಪ್ರತಿ ರೂಪವೆಂದು ಹಿಂದೂ ಪುರಾಣಗಳ ಜೊತೆಗೆ ಸ್ಥಳೀಯರ ನಂಬಿಕೆಯಾಗಿದೆ.

5.ನಾಲ್ಕು ಬಣ್ಣಗಳು

5.ನಾಲ್ಕು ಬಣ್ಣಗಳು

Image Source

ಅದೇ ವಿಧವಾಗಿ ಈ ಪರ್ವತವು ನಾಲ್ಕು ಭಾಗಗಳಲ್ಲಿ ನಾಲ್ಕು ಬಣ್ಣಗಳು ಕಾಣಿಸುತ್ತದೆ. ಅವು ಬಂಗಾರ, ಬಿಳುಪು, ಕಾಷಾಯ, ನೀಲಿ. ಇದರಲ್ಲಿ ಬಿಳಿ ಬಣ್ಣವನ್ನು ಭಕ್ತರು ಚೆನ್ನಾಗಿ ಗುರುತಿಸಬಹುದು. ನೀಲಿ, ಮರಕತ ಬಣ್ಣದಲ್ಲಿ ಅತ್ಯಂತ ವಿಶೇಷವಾಗಿ ಕಾಣಿಸುತ್ತದೆ. ಹೀಗೆ ಒಂದೇ ಪರ್ವತದಲ್ಲಿ ನಾಲ್ಕು ಬಣ್ಣಗಳು ಕಾಣಿಸುವುದು ಹೇಗೆ ಸಾಧ್ಯ ಎಂಬ ವಿಷಯ ಇಂದಿಗೂ ತಿಳಿಯದ ಪ್ರಶ್ನೆಯಾಗಿಯೇ ಉಳಿದಿದೆ.

6.ಆರು ಪರ್ವತಗಳ ಮಧ್ಯೆ

6.ಆರು ಪರ್ವತಗಳ ಮಧ್ಯೆ

Image Source

ತಾವರೆ ಹೂವು ಆಕಾರದಲ್ಲಿನ ಆರು ಪರ್ವತಗಳ ಮಧ್ಯೆ ಈ ಕೈಲಾಸ ಪರ್ವತ ಇರುತ್ತದೆ. ಈ ಪರ್ವತದ ಮೇಲೆ ಸದಾಶಿವನು ನೆಲೆಸಿರುವುದರಿಂದ ಈ ಇಹಲೋಕದಲ್ಲಿರುವ ಕೈಲಾಸದ ಮೇಲೆ ಪಾದ ಇಡುವುದು ಅತ್ಯಂತ ಪಾಪ ಎಂದು ಹಿಂದೂಗಳು ಭಾವಿಸುತ್ತಾರೆ. ಕೆಲವು ಮಂದಿ ಮುನಿಗಳು, ಸನ್ಯಾಸಿಗಳು ಈಪರ್ವತದ ಮೇಲೆ ಅಧಿರೋಹಿಸಬೇಕು ಎಂದು ಎಷ್ಟೇ ಪ್ರಯತ್ನ ಮಾಡಿದರೂ ಸಾಧ್ಯವಾಗಲಿಲ್ಲ. ಬದಲಾಗಿ ತಮ್ಮ ಪ್ರಾಣವನ್ನು ಕಳೆದುಕೊಂಡ ಸಂಘಟನೆಗಳು ನಡೆದಿವೆಯಂತೆ. ಕೇವಲ ಪ್ರಜೆಗಳೆ ಅಲ್ಲದೇ ಚೀನಾ ಸರ್ಕಾರವು ಕೂಡ ಈ ಪರ್ವತ ರಹಸ್ಯಗಳನ್ನು ತಿಳಿದುಕೊಳ್ಳಲು ಅನೇಕ ಬಾರಿ ಪ್ರಯತ್ನ ಮಾಡಿದ್ದಾರೆ. ಈ ಕ್ರಮದಲ್ಲಿ 2 ಹೆಲಿಕ್ಯಾಫ್ಟ್‍ರ್‍ಗಳನ್ನು ಕೂಡ ಕಳೆದುಕೊಂಡಿದ್ದಾರೆ.

7.ಸಮೀಪಕ್ಕೆ ಕೂಡ ತೆರಳಲು ಸಾಧ್ಯವಿಲ್ಲ

7.ಸಮೀಪಕ್ಕೆ ಕೂಡ ತೆರಳಲು ಸಾಧ್ಯವಿಲ್ಲ

Image Source

ಇನ್ನು ಕೈಲಾಸ ಪರ್ವತದ ಸುತ್ತಲಿರುವ 6 ಪರ್ವತಗಳ ಸುತ್ತ 52 ಕಿ.ಮೀ ಇದೆ. ಕೈಲಾಸನಾಥ ಪರ್ವತದ ಸುತ್ತ ಪ್ರದಕ್ಷಿಣೆ ಮಾಡಬೇಕು ಎಂದರೆ ಈ 6 ಪರ್ವತಗಳ ಸುತ್ತ ತಿರುಗುತ್ತಾರೆ. ಮಧ್ಯದಲ್ಲಿರುವ ಕೈಲಾಸ ಪರ್ವತದ ಸಮೀಪಕ್ಕೆ ಮಾತ್ರ ಯಾರು ಕೂಡ ಹೋಗುವುದಿಲ್ಲ, ಸ್ಥಳೀಯ, ಭೌಗೋಳಿಕ ವಾತಾವರಣ ಪರಿಸ್ಥಿತಿಯನ್ನು ಅನುಸಿರಿಸಿ ಈ ಪರ್ವತದ ಸುತ್ತ ಪ್ರದಕ್ಷಿಣೆ ಮಾಡಲು ಮೂರರಿಂದ ನಾಲ್ಕು ದಿನಗಳು ಬೇಕಾಗುತ್ತದೆ.

8.ಬ್ರಹ್ಮನ ಮನಸ್ಸಿನಿಂದ ಹುಟ್ಟಿದ ನದಿ

8.ಬ್ರಹ್ಮನ ಮನಸ್ಸಿನಿಂದ ಹುಟ್ಟಿದ ನದಿ

Image Source

ಇನ್ನು ಕೈಲಾಸ ಪರ್ವತಕ್ಕೆ ಸಮೀಪದಲ್ಲಿ ಮಾನಸ ಸರೋವರ ನದಿ ಇದೆ. ಯಾತ್ರೆಯ ಭಾಗವಾಗಿ ಇದನ್ನು ಕೂಡ ಕಾಣಬಹುದು. ಹಿಂದೂ ಪುರಾಣಗಳ ಪ್ರಕಾರ ಮಾನಸ ಸರೋವರವನ್ನು ಬ್ರಹ್ಮ ತನ್ನ ಮನಸ್ಸಿನಿಂದ ಸೃಷ್ಟಿಸಿದನು. ಹಾಗಾಗಿಯೇ ಈ ನದಿಯನ್ನು ಮಾನಸ ಸರೋವರ ಎಂದು ಕರೆಯುತ್ತಾರೆ. ಬ್ರಹ್ಮ ಮುಹೂರ್ತ ಕಾಲದಲ್ಲಿ ಎಂದರೆ ಮುಂಜಾನೆ 3 ರಿಂದ 4 ಗಂಟೆಗಳ ಮಧ್ಯೆ ಪರಮಶಿವನು ಈ ಮಾನಸ ಸರೋವರದಲ್ಲಿ ಸ್ನಾನ ಮಾಡುತ್ತಾನೆ ಎಂದು ಪುರಾಣಗಳು ಹೇಳುತ್ತವೆ. ಅದಕ್ಕೆ ತಕ್ಕಂತೆ ಆ ಸಮಯದಲ್ಲಿ ಕೈಲಾಸ ಪರ್ವತದಿಂದ ಮಾನಸ ಸರೋವರದಲ್ಲಿ ಒಂದು ಬೆಳಕು ಕೂಡ ಬರುವುದನ್ನು ಕಂಡಿದ್ದೇವೆ ಎಂದು ಅನೇಕ ಮಂದಿ ಭಕ್ತರು ಹೇಳುತ್ತಾರೆ.

9.ಪೌರ್ಣಮಿ ದಿನ

9.ಪೌರ್ಣಮಿ ದಿನ

Image Source

ಶಿವನ ಪರಮ ಪವಿತ್ರವಾದ ಪೌರ್ಣಮಿ ದಿನ ಈ ಕೈಲಾಸ ಪರ್ವತ ದರ್ಶನ ಮಾಡಿಕೊಳ್ಳುವುದಕ್ಕೆ ಹೆಚ್ಚಾಗಿ ಆಸಕ್ತಿ ತೋರಿಸುತ್ತಿರುತ್ತಾರೆ. ಪರಮಶಿವನಿಂದ ಒಂದು ಪ್ರತ್ಯೇಕವಾದ ಶಕ್ತಿ ಆ ಸಮಯದಲ್ಲಿ ಮಾನಸ ಸರೋವರದಲ್ಲಿ ಸೇರಿಕೊಳ್ಳುತ್ತದೆ ಎಂದು ಭಕ್ತರು ಭಾವಿಸುತ್ತಾರೆ. ಹಾಗಾಗಿಯೇ ಪೌರ್ಣಮಿ ದಿನದಂದು ಆ ನೀರನ್ನು ಕುಡಿದರೆ ಸರ್ವ ಪಾಪಗಳು ತೊಲಗಿ ಹೋಗುತ್ತದೆ ಎಂದು ಭಕ್ತರ ಪ್ರಬಲವಾದ ವಿಶ್ವಾಸವಾಗಿದೆ.

10.ಪ್ರೈವೇಟ್ ಆಪರೆಟರ್ಸ್‍ಗಳು

10.ಪ್ರೈವೇಟ್ ಆಪರೆಟರ್ಸ್‍ಗಳು

Image Source

ಅದಕ್ಕೆ ತಕ್ಕಂತೆ ಕೇಂದ್ರ ಸರ್ಕಾರದ ಅಧೀನದಲ್ಲಿ ಕೆಲಸ ಮಾಡಿದರೆ ವಿದೇಶಿ ವ್ಯವಹಾರಗಳ ಶಾಖೆ ಈ ಯಾತ್ರೆಗೆ ಸಂಬಂಧಿಸಿದ ನೋಟಿಫಿಕೇಷನ್ ಬಿಡುಗಡೆ ಮಾಡಿದೆ. ಕೇಂದ್ರ ಸರ್ಕಾರ ಅನುಮತಿ ಹೊಂದಿದ ಪ್ರೈವೆಟ್ ಆಪರೆಟರ್ಸ್‍ಗಳು ಟೂರ್ ಪ್ಲಾನ್ ರೂಪಿಸುತ್ತಾರೆ. ಈ ಕೈಲಾಸ ಯಾತ್ರೆಯು ಸೆಪ್ಟೆಂಬರ್‍ನ ಮಧ್ಯ ಕಾಲದಲ್ಲಿ ನಡೆಯುತ್ತಿರುತ್ತದೆ. ಈ ಪ್ರವಾಸದ ಭಾಗವಾಗಿ ಹೆಲಿಕ್ಯಾಫ್ಟ್‍ರ್ಸ್ ಪ್ರಯಾಣವನ್ನು ಮಾಡಬೇಕು.

11.ಹಿಂದೂ, ಬೌದ್ಧರು ಹೀಗೆ.., ಉಳಿದವರು..

11.ಹಿಂದೂ, ಬೌದ್ಧರು ಹೀಗೆ.., ಉಳಿದವರು..

Image Source

ಪಟ್ಟಾಭಿಷೇಕದ ನಂತರ ರಾಮಲಕ್ಷ್ಮಣರು, ಮಹಾಭಾರತ ಯುದ್ಧದ ನಂತರ ಪಾಂಡವರು, ಆದಿಶಂಕರರು ಈ ಕೈಲಾಸ ಯಾತ್ರೆ ಮಾಡಿದ್ದಾರೆ ಎಂದು ಭಾರತ ಪುರಾಣಗಳು ಹೇಳುತ್ತವೆ. ಇಂದಿಗೂ ಮಾನಸ ಸರೋವರದಲ್ಲಿ ಸ್ನಾನ ಮಾಡಿದ ನಂತರ ಭಕ್ತರು ಕೈಲಾಸ ಪರ್ವತದ ಸುತ್ತ ಪ್ರದಕ್ಷಿಣೆ ಮಾಡುತ್ತಾರೆ. ಹಿಂದೂ, ಬೌದ್ಧ ಧರ್ಮದವರು ಕೂಡ ಇಲ್ಲಿ ಪ್ರದಕ್ಷಿಣೆ ಮಾಡುತ್ತಾರೆ.

12.2 ಮಾರ್ಗಗಳು

12.2 ಮಾರ್ಗಗಳು

Image Source

ಸಾಧಾರಣವಾಗಿ ಕೈಲಾಸ ಮಾನಸ ಸರೋವರ ಯಾತ್ರೆಯು 2 ಮಾರ್ಗಗಳ ಮೂಲಕ ಸಾಗುತ್ತದೆ. ಅದರಲ್ಲಿ ಮೊದಲನೆಯದು ಲಿಪುಲೆಕ್ ಪಾಸ್, 2 ನೇಯದು ನಾಥೂಲಾ ಪಾಸ್. ಈ ಮಾರ್ಗಗಳೇ ಅಲ್ಲದೇ ವಾತಾವರಣ ಪರಿಸ್ಥಿತಿಗಳನ್ನು ಅನುಸರಿಸಿ ಈ ಯಾತ್ರೆ ಮಾರ್ಗದಲ್ಲಿ ಕೆಲವು ಮಾರ್ಪಾಟು ಕೂಡ ಇರುತ್ತದೆ. ಯಾವ ಮಾರ್ಗದಲ್ಲಿ ಹೋದರು ಕೂಡ ಕೈಲಾಸ ಪರ್ವತವನ್ನು ಸೇರಿಕೊಳ್ಳಬಹುದು. ಇತರ ಪುಣ್ಯ ಕ್ಷೇತ್ರದ ಮಾದರಿಯ ಹಾಗೆ ದೇವರ ದರ್ಶನ ಇಲ್ಲಿ ಸಾಧ್ಯವಾಗುವುದಿಲ್ಲ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X