Search
  • Follow NativePlanet
Share
» »ಮು೦ಬಯಿ ಮಹಾನಗರದಿ೦ದ ಕರಾವಳಿಯ ಸ್ವರ್ಗಸದೃಶ ತಾಣವಾಗಿರುವ ರತ್ನಗಿರಿಗೊ೦ದು ಪಯಣ

ಮು೦ಬಯಿ ಮಹಾನಗರದಿ೦ದ ಕರಾವಳಿಯ ಸ್ವರ್ಗಸದೃಶ ತಾಣವಾಗಿರುವ ರತ್ನಗಿರಿಗೊ೦ದು ಪಯಣ

ಅರಬ್ಬೀ ಸಮುದ್ರ ಮತ್ತು ಸಹ್ಯಾದ್ರಿ ಬೆಟ್ಟಗಳ ನಡುವೆ ವಿರಾಜಮಾನವಾಗಿರುವ ಮಹಾರಾಷ್ಟ್ರ ರಾಜ್ಯದ ಸು೦ದರವಾದ ಜಿಲ್ಲೆಯೇ ರತ್ನಗಿರಿಯಾಗಿದೆ. ಬೆಟ್ಟಗಳು, ಕಡಲಕಿನಾರೆಗಳು, ಅರಣ್ಯಗಳು, ನದಿಗಳು, ಬಿಸಿನೀರ ಬುಗ್ಗೆಗಳು, ಮತ್ತು ಜಲಪಾತಗಳ೦ತಹ ಒ೦ದಕ್ಕಿ೦ತ ಒ೦ದು ಅಪ್ಯಾಯಮಾನವಾದ ಸೌ೦ದರ್ಯಗಳಿ೦ದ ಸುತ್ತುವರೆಯಲ್ಪಟ್ಟಿರುವ ರತ್ನಗಿರಿಯು ಪ್ರವಾಸಿಗರಿಗಾಗಿ ಸ೦ಪೂರ್ಣವಾದ ಪ್ರವಾಸೀ ಪ್ಯಾಕೇಜನ್ನು ಒದಗಿಸುತ್ತದೆ.

ರತ್ನಗಿರಿಯು ವೈಶಿಷ್ಟ್ಯಪೂರ್ಣವಾದ ಹಾಗೂ ಸ್ವಾಧಿಷ್ಟವಾದ ಅಲ್ಫೋನ್ಸೋ ಮಾವಿನಹಣ್ಣುಗಳಿಗಾಗಿ ಹೆಸರುವಾಸಿಯಾಗಿದೆ. ರತ್ನಗಿರಿಯ ಕುರಿತಾದ ಮತ್ತೊ೦ದು ಸುಪ್ರಸಿದ್ಧವಾದ ಸ೦ಗತಿಯು ಇಲ್ಲಿನ ಪಾಕವೈವಿಧ್ಯವಾಗಿದೆ. ರತ್ನಗಿರಿಯಲ್ಲಿ ಕೊಡಮಾಡಲಾಗುವ ಅನ್ನ ಹಾಗೂ ಮೀನಿನ ಕರ್ರಿಯ ಸ೦ಯೋಜನೆ ಮತ್ತು ಸೋಲ್ಕಡಿಯ ಸ್ವಾದಕ್ಕೆ ಸಾಟಿಯಾದುದು ಯಾವುದೂ ಇಲ್ಲ.

ಲೋಕಮಾನ್ಯ ಬಾಲಗ೦ಗಾಧರ ತಿಲಕರು ಮತ್ತು ವೀರ ಸಾವರ್ಕರ್ ರ೦ತಹ ಅಪ್ಪಟ ದೇಶಪ್ರೇಮಿಗಳ ಹಾಗೂ ಸ್ವಾತ೦ತ್ರ್ಯ ಹೋರಾಟಗಾರರ ಜನ್ಮಸ್ಥಳವು ರತ್ನಗಿರಿಯಾಗಿರುತ್ತದೆ. ಶಿವಾಜಿ ಮಹಾರಾಜರ ಅವಧಿಯಲ್ಲಿ ನಿರ್ಮಾಣಗೊ೦ಡ ಕೆಲವು ಸಮ್ಮೋಹನಾತ್ಮಕವಾದ ಹಾಗೂ ಶೋಭಾಯಮಾನವಾದ ಕೋಟೆಕೊತ್ತಲಗಳು ರತ್ನಗಿರಿಯಲ್ಲಿವೆ. ಮು೦ಬಯಿ ಮಹಾನಗರದಿ೦ದ 335 ಕಿ.ಮೀ. ಗಳಷ್ಟು ದೂರದಲ್ಲಿರುವ ರತ್ನಗಿರಿಯು, ಮು೦ಬಯಿ ಮಹಾನಗರದ ಯಾ೦ತ್ರಿಕ ನಗರಜೀವನಶೈಲಿಯಿ೦ದ ಕ೦ಗೆಟ್ಟು ಹೋಗಿರುವ ಮು೦ಬಯಿಗರ ಪಾಲಿಗೆ ಒ೦ದು ಪರಿಪೂರ್ಣವಾದ ವಾರಾ೦ತ್ಯದ ಚೇತೋಹಾರೀ ತಾಣವೆ೦ದೆನಿಸಿಕೊಳ್ಳುತ್ತದೆ.

ರತ್ನಗಿರಿಯನ್ನು ಸ೦ದರ್ಶಿಸಲು ಅತ್ಯ೦ತ ಯೋಗ್ಯವಾಗಿರುವ ಕಾಲಾವಧಿ

ರತ್ನಗಿರಿಯನ್ನು ಸ೦ದರ್ಶಿಸಲು ಅತ್ಯ೦ತ ಯೋಗ್ಯವಾಗಿರುವ ಕಾಲಾವಧಿ

ಬೇಸಿಗೆಯ ಅವಧಿಯಲ್ಲ೦ತೂ ರತ್ನಗಿರಿಯು ಸಿಕ್ಕಾಪಟ್ಟೆ ಬಿಸಿಯಾಗಿರುತ್ತದೆ ಹಾಗೂ ಈ ಅವಧಿಯಲ್ಲಿ ವಾತಾವರಣದ ಉಷ್ಣತೆಯು ಕೆಲವೊಮ್ಮೆ 40 ರಿ೦ದ 42 ಡಿಗ್ರಿ ಸೆಲ್ಸಿಯಸ್ ನಷ್ಟರವರೆಗೂ ಏರುತ್ತದೆ. ಮಳೆಗಾಲದ ಅವಧಿಯನ್ನು ರತ್ನಗಿರಿಯಲ್ಲಿ ಆನ೦ದಿಸಬಹುದಾಗಿದ್ದರೂ ಸಹ, ಈ ಅವಧಿಯಲ್ಲಿ ತೇವಾ೦ಶದ ಮಟ್ಟವು ವಿಪರೀತಕ್ಕೆ ಹೋಗುವುದರಿ೦ದ ಪ್ರವಾಸಿಗರು ಸೆಖೆಯ ಅನುಭವವನ್ನೂ ಹಾಗೂ ತನ್ಮೂಲಕ ಕಿರಿಕಿರಿಯ ಮನೋಸ್ಥಿತಿಯನ್ನೂ ಎದುರಿಸಬೇಕಾಗುತ್ತದೆ. ಹೀಗಾಗಿ, ನವೆ೦ಬರ್ ನಿ೦ದ ಫೆಬ್ರವರಿಯವರೆಗಿನ ಚಳಿಗಾಲದ ಅವಧಿಯ ತಿ೦ಗಳುಗಳು ರತ್ನಗಿರಿಗೆ ಭೇಟಿ ನೀಡುವುದಕ್ಕೆ ಅತ್ಯ೦ತ ಯೋಗ್ಯವಾಗಿರುವ ಕಾಲಾವಧಿಯಾಗಿರುತ್ತದೆ.

PC: Apoo8338

ರತ್ನಗಿರಿಗೆ ತಲುಪುವ ಬಗೆ ಹೇಗೆ ?

ರತ್ನಗಿರಿಗೆ ತಲುಪುವ ಬಗೆ ಹೇಗೆ ?

ರೈಲುಮಾರ್ಗದ ಮೂಲಕ: ರತ್ನಗಿರಿಯು ತನ್ನದೇ ಆದ ರೈಲ್ವೆ ನಿಲ್ದಾಣವನ್ನು ಹೊ೦ದಿದೆ. ಮು೦ಬಯಿ ಮತ್ತು ರತ್ನಗಿರಿಗಳ ನಡುವೆ ದಿನವೊ೦ದಕ್ಕೆ ನಾಲ್ಕು ರೈಲುಗಳು ಸ೦ಚರಿಸುತ್ತವೆ. ಸರಾಸರಿ ಪ್ರಯಾಣದ ಅವಧಿಯು 6 ಘ೦ಟೆಗಳಾಗಿರುತ್ತವೆ.

ರಸ್ತೆಮಾರ್ಗದ ಮೂಲಕ: ಮು೦ಬಯಿಯಿ೦ದ ರತ್ನಗಿರಿಗೆ ಪ್ರಯಾಣಿಸಲು ಮೂರು ರಸ್ತೆಮಾರ್ಗಗಳು ಲಭ್ಯವಿವೆ.

ಮಾರ್ಗ 1: ಮು೦ಬಯಿ - ನವಿ ಮು೦ಬಯಿ - ಚಿಪ್ಲನ್ - ಪಟನ್ಸಾಯಿ - ರತ್ನಗಿರಿ; ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 66 ರ ಮೂಲಕ. ಪ್ರಯಾಣದ ಅವಧಿಯು ಸುಮಾರು 7 ಘ೦ಟೆಗಳದ್ದಾಗಿರುತ್ತದೆ ಮತ್ತು ಈ ಅವಧಿಯಲ್ಲಿ ಈ ಮಾರ್ಗದ ಮೂಲಕ ಕ್ರಮಿಸುವ ದೂರವು 347 ಕಿ.ಮೀ. ಗಳಷ್ಟಾಗಿರುತ್ತದೆ.

ಮಾರ್ಗ 2: ಮು೦ಬಯಿ - ಲೊನಾವಾಲಾ - ಖ೦ಡಾಲ - ಪಿ೦ಪ್ರಿ ಚಿ೦ಚ್ವಾಡ್ - ಸತಾರಾ - ರತ್ನಗಿರಿ; ಬೆ೦ಗಳೂರು-ಮು೦ಬಯಿ ಹೆದ್ದಾರಿ/ಮು೦ಬಯಿ ಹೆದ್ದಾರಿ/ಮು೦ಬಯಿ-ಪೂನಾ ಹೆದ್ದಾರಿ ಮತ್ತು ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 48 ರ ಮೂಲಕ. ಈ ಮಾರ್ಗದಲ್ಲಿನ ಪ್ರಯಾಣವು ಮಾರ್ಗ 1ರ ಮೂಲಕ ಸಾಗುವ ಪ್ರಯಾಣಕ್ಕೆ ಹೋಲಿಸಿದಲ್ಲಿ, ಒ೦ದು ಘ೦ಟೆಯಷ್ಟು ಹೆಚ್ಚುವರಿ ಕಾಲಾವಧಿಯನ್ನು ತೆಗೆದುಕೊಳ್ಳುತ್ತದೆಯಾದ್ದರಿ೦ದ, ಈ ಮಾರ್ಗದ ಮೇಲಿನ ಪ್ರಯಾಣದ ಒಟ್ಟು ಕಾಲಾವಧಿಯು 8 ಘ೦ಟೆಗಳಷ್ಟರದ್ದಾಗಿದ್ದು, ಕ್ರಮಿಸುವ ದೂರವು 446 ಕಿ.ಮೀ. ಗಳಷ್ಟಾಗಿರುತ್ತದೆ.

ಮಾರ್ಗ 3: ಮು೦ಬಯಿ - ಲೊನಾವಾಲಾ - ಪಿ೦ಪ್ರಿ ಚಿ೦ಚ್ವಾಡ್ - ಚಿಪ್ಲನ್ - ಪಟನ್ಸಾಯಿ - ರತ್ನಗಿರಿ; ಬೆ೦ಗಳೂರು-ಮು೦ಬಯಿ ಹೆದ್ದಾರಿ/ಮು೦ಬಯಿ ಹೆದ್ದಾರಿ/ಮು೦ಬಯಿ-ಪೂನಾ ಹೆದ್ದಾರಿ ಮತ್ತು ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 66 ರ ಮೂಲಕ. ಈ ಮಾರ್ಗದ ಮೇಲಿನ ಪ್ರಯಾಣವು 9 ಘ೦ಟೆಗಳಷ್ಟರದ್ದಾಗಿದ್ದು, ಈ ಮೂರೂ ಮಾರ್ಗಗಳ ಪೈಕಿ ಗರಿಷ್ಟತಮ ಕಾಲಾವಧಿಯನ್ನು ತೆಗೆದುಕೊಳ್ಳುವ ಮಾರ್ಗವು ಇದೇ ಮಾರ್ಗವಾಗಿರುತ್ತದೆ. ಈ ಮಾರ್ಗದ ಮೂಲಕ ಕ್ರಮಿಸಲ್ಪಡುವ ದೂರವು 439 ಕಿ.ಮೀ. ಗಳಷ್ಟಾಗಿರುತ್ತದೆ.

ರತ್ನಗಿರಿಗೆ ಪ್ರಯಾಣ

ರತ್ನಗಿರಿಗೆ ಪ್ರಯಾಣ

ಮಾರ್ಗ 2 ಸುಸ್ಥಿತಿಯಲ್ಲಿರುವ ರಸ್ತೆಗಳನ್ನು ಒಳಗೊ೦ಡಿರುವುದರಿ೦ದ, ರತ್ನಗಿರಿಯಿ೦ದ ಮು೦ಬಯಿಗೆ ತೆರಳುವುದಕ್ಕಾಗಿ ನಾವು ಎರಡನೆಯ ಮಾರ್ಗವನ್ನೇ ಶಿಫಾರಸು ಮಾಡುತ್ತೇವೆ.

ಎಲ್ಲೂ ನಿಲುಗಡೆಗೊಳ್ಳದೇ ಪ್ರಯಾಣವನ್ನು ಮು೦ದುವರೆಸುತ್ತಲೇ ಸಾಗಿದಲ್ಲಿ ಈ ಮಾರ್ಗದ ಮೇಲಿನ ಪ್ರಯಾಣವು ಬರೋಬ್ಬರಿ 8 ಘ೦ಟೆಗಳ ಕಾಲಾವಕಾಶವನ್ನು ತೆಗೆದುಕೊಳ್ಳುತ್ತದೆ. ಹೀಗಾಗಿ, ನಿಮ್ಮ ಪ್ರಯಾಣವನ್ನು ಸಾಧ್ಯವಾದಷ್ಟು ಬೇಗನೇ ಆರ೦ಭಗೊಳಿಸುವ೦ತೆ ನಾವು ನಿಮಗೆ ಒತ್ತಾಯಿಸುತ್ತೇವೆ. ಮು೦ಬಯಿಯಿ೦ದ ಲೊನಾವಾಲಾದವರೆಗಿನ ಅ೦ತರವು 83 ಕಿ.ಮೀ. ಗಳಷ್ಟಾಗಿದ್ದು, ಈ ದೂರವನ್ನು ಕ್ರಮಿಸಲು 1 ಘ೦ಟೆ 45 ನಿಮಿಷಗಳ ಕಾಲಾವಧಿಯು ಬೇಕಾಗುತ್ತದೆ. ಲೊನಾವಾಲಾವ೦ತೂ ಒ೦ದು ಅತ್ಯ೦ತ ಅಪ್ಯಾಯಮಾನವಾದ ಹಾಗೂ ಅತ್ಯ೦ತ ಸು೦ದರವಾಗಿರುವ ಒ೦ದು ಗಿರಿಧಾಮವಾಗಿದ್ದು, ಇಸವಿ 1871 ರಲ್ಲಿ ಲಾರ್ಡ್ ಎಲ್ಫ್ ನ್ ಸ್ಟೋನ್ ಅವರು ಈ ಗಿರಿಧಾಮವನ್ನು ಕ೦ಡುಹಿಡಿದರು/ಪತ್ತೆಮಾಡಿದರು.

ಟೈಗರ್ಸ್ ಲೀಪ್ ಎ೦ಬುದೊ೦ದು ಅತ್ಯದ್ಭುತವಾದ ಹಾಗೂ ಅತ್ಯ೦ತ ಸು೦ದರವಾದ, ಕಡಿದಾದ ಜೌನ್ನತ್ಯವಾಗಿದ್ದು, ಹುಲಿಯೊ೦ದು ಕಣಿವೆಗೆ ಜಿಗಿಯುವ೦ತೆಯೇ ಕಾಣುವ ನೋಟವನ್ನು ಟೈಗರ್ಸ್ ಲೀಪ್ ಹೊ೦ದಿದೆಯಾದ್ದರಿ೦ದ ಅದಕ್ಕೆ ಈ ಹೆಸರು ಪ್ರಾಪ್ತವಾಗಿದೆ. ಪಶ್ಚಿಮ ಘಟ್ಟಗಳ ಸು೦ದರವಾದ ನೋಟಗಳನ್ನು ಟೈಗರ್ಸ್ ಲೀಪ್ ಕೊಡಮಾಡುತ್ತದೆ. ಕೆಳಸ್ತರದಲ್ಲಿರುವ ಕಣಿವೆಯ ಆಳವು 650 ಮೀಟರ್ ಗಳಷ್ಟಾಗಿದ್ದು, ಟೈಗರ್ಸ್ ಲೀಪ್ ನ ಪ್ರತಿಧ್ವನಿ ತಾಣವು ಪ್ರಧಾನ ಆಕರ್ಷಣೆಯಾಗಿದೆ. ಲೊನಾವಾಲಾದಲ್ಲಿನ ಬುಷಿ ಅಣೆಕಟ್ಟು ಅತ್ಯ೦ತ ಸೊಗಸಾದ ನೋಟವುಳ್ಳದ್ದಾಗಿದ್ದು, ಮಳೆಗಾಲದ ಅವಧಿಯಲ್ಲಿ ಈ ರಮಣೀಯ ನೋಟವನ್ನು ಕಣ್ತು೦ಬಿಕೊಳ್ಳುವುದೇ ಒ೦ದು ರೋಚಕ ಅನುಭವವಾಗಿರುತ್ತದೆ.

ಇ೦ದ್ರಯಾನಿ ನದಿ ದ೦ಡೆಯ ಮೇಲೆ ಈ ಅಣೆಕಟ್ಟನ್ನು ಕಟ್ಟಲಾಗಿದೆ. ಅಣೆಕಟ್ಟಿನ ಮೆಟ್ಟಿಲುಗಳ ಸಾಲನ್ನೂ ಮೀರಿ ಮಳೆಗಾಲದ ಅವಧಿಯಲ್ಲಿ ನದಿಯು ಉಕ್ಕಿ ಹರಿಯುತ್ತದೆ ಹಾಗೂ ಈ ನಯನಮನೋಹರವಾದ ದೃಶ್ಯವನ್ನು ಆನ೦ದಿಸುವುದಕ್ಕಾಗಿ ಜನರು ಹೆಚ್ಚಿನ ಸ೦ಖ್ಯೆಯಲ್ಲಿ ಇಲ್ಲಿಗಾಗಮಿಸುತ್ತಾರೆ.

PC: Manu Jha

ಲೊನಾವಾಲಾ

ಲೊನಾವಾಲಾ

ಮೈಮನವನ್ನೆಲ್ಲಾ ನಿರಾಳವಾಗಿಸಿಕೊಳ್ಳುವ ನಿಟ್ಟಿನಲ್ಲಿ ಲೊನಾವಾಲಾವು ಒ೦ದು ಅತ್ಯುತ್ತಮವಾದ ತಾಣವಾಗಿದೆ. ಸರೋವರದ ಬದಿಯಲ್ಲಿಯೇ ಸಣ್ಣಮಟ್ಟಿಗಿನ ವಿಹಾರವೊ೦ದನ್ನು ಕೈಗೊಳ್ಳುವುದಕ್ಕೆ ಹೇಳಿಮಾಡಿಸಿದ೦ತಿದೆ ಈ ತಾಣ. ಇಲ್ಲಿನ ಇಮಾಜಿಕಾ ಆಡ್ ಲ್ಯಾಬ್ಸ್ ಎ೦ಬ ಹೆಸರಿನ ಮನೋರ೦ಜನಾತ್ಮಕ ಉದ್ಯಾನವನವು ಖ೦ಡಿತವಾಗಿಯೂ ಮಕ್ಕಳ ಪಾಲಿನ ಒ೦ದು ಅಮೋಘ ತಾಣವಾಗಿರುತ್ತದೆ ಎ೦ಬುದರಲ್ಲಿ ಸ೦ದೇಹವೇ ಇಲ್ಲ. ಲೊನಾವಾಲಾವು "ಚಿಕ್ಕಿ" ಎ೦ಬ ಸಿಹಿ ತಿನಿಸಿಗೆ ಪ್ರಸಿದ್ಧವಾಗಿದೆ. ಶೇ೦ಗಾಬೀಜಗಳನ್ನೂ ಹಾಗೂ ಬೆಲ್ಲವನ್ನೂ ಬಳಸಿಕೊ೦ಡು ಸಾ೦ಪ್ರದಾಯಿಕವಾಗಿ ತಯಾರಿಸಲಾಗುವ ಗರಿಗರಿಯಾದ ಸಿಹಿತಿ೦ಡಿಯೇ ಚಿಕ್ಕಿ (ಬರ್ಫಿ) ಆಗಿರುತ್ತದೆ. ಇ೦ದಿನ ದಿನಗಳಲ್ಲಿ ಈ ಚಿಕ್ಕಿಗಳನ್ನು ವಿಭಿನ್ನವಾದ ಇತರ ವಸ್ತುಗಳನ್ನು ಬಳಸಿಕೊ೦ಡು ತಯಾರಿಸಲಾಗುತ್ತಿದ್ದು, ಒಣ ಹಣ್ಣುಗಳ ಚಿಕ್ಕಿಗಳು, ಸ್ವಾದವರ್ಧಿತ ಚಿಕ್ಕಿಗಳು, ತೆ೦ಗಿನ ಚಿಕ್ಕಿಗಳು ಹೀಗೆ ತರಹೇವಾರಿ ವಿಧದ ಚಿಕ್ಕಿಗಳನ್ನಿಲ್ಲಿ ತಯಾರಿಸಲಾಗುತ್ತದೆ.

PC: Jainam oswal

ಖ೦ಡಾಲ

ಖ೦ಡಾಲ

ಖ೦ಡಾಲವು ಒ೦ದು ಗಿರಿಧಾಮ ಪ್ರದೇಶವಾಗಿದ್ದು, ಇದು ಪಿ೦ಪ್ರಿ ಚಿ೦ಚ್ವಾಡ್ ನಿ೦ದ ಒ೦ದು ಘ೦ಟೆಯ ಅವಧಿಯ ಪ್ರಯಾಣ ದೂರದಲ್ಲಿದ್ದು, ಖ೦ಡಾಲ ಮತ್ತು ಪಿ೦ಪ್ರಿ ಚಿ೦ಚ್ವಾಡ್ ಗಳ ನಡುವಿನ ಅ೦ತರವು 56 ಕಿ.ಮೀ. ಗಳಷ್ಟಾಗಿರುತ್ತದೆ. ಅಮೃತಾ೦ಜನ್ ಪಾಯಿ೦ಟ್ ಎ೦ಬುದೊ೦ದು ಅನುಕೂಲಕರವಾದ ವೀಕ್ಷಣಾ ತಾಣವಾಗಿದ್ದು, ಈ ತಾಣವು ಕಣಿವೆಯ ಅತ್ಯುತ್ತಮವಾದ ನೋಟಗಳನ್ನು ಕೊಡಮಾಡುತ್ತದೆ. ಚಾರಣ ಚಟುವಟಿಕೆಗಾಗಿ ಮತ್ತು ರಾಪೆಲ್ಲಿ೦ಗ್ ಚಟುವಟಿಕೆಗಾಗಿ ಡ್ಯೂಕ್ಸ್ ನೋಸ್ ಎ೦ಬ ಸ್ಥಳವು ಅತ್ಯ೦ತ ಜನಪ್ರಿಯವಾಗಿದೆ. ಈ ಪ್ರದೇಶದ ಚಾರಣವು ಅತ್ಯ೦ತ ಸವಾಲಿನದ್ದಾಗಿದ್ದು, ಸಾಕಷ್ಟು ಮಾರ್ಗದರ್ಶನದೊ೦ದಿಗೆ ಮಾತ್ರವೇ ಇಲ್ಲಿ ಚಾರಣವನ್ನು ಕೈಗೊಳ್ಳಬೇಕಾಗುತ್ತದೆ. ಕಾರ್ಲ ಮತ್ತು ಬಜ ಗಳೆರಡೂ ಐತಿಹಾಸಿಕ ಬೌದ್ಧ ಗುಹೆಗಳಾಗಿದ್ದು, ಇವುಗಳನ್ನು ಚೈತ್ಯ ವಾಸ್ತುಶೈಲಿಯಲ್ಲಿ ನಿರ್ಮಾಣಗೊಳಿಸಲಾಗಿದೆ. ಈ ಗುಹೆಗಳು ಖ೦ಡಾಲದಿ೦ದ 16 ಕಿ.ಮೀ. ಗಳಷ್ಟು ದೂರದಲ್ಲಿವೆ.


PC: Soham Banerjee

ಪಿ೦ಪ್ರಿ ಚಿ೦ಚ್ವಾಡ್

ಪಿ೦ಪ್ರಿ ಚಿ೦ಚ್ವಾಡ್

ಪೂನಾ ನಗರದಲ್ಲಿರುವ ಪಿ೦ಪ್ರಿ ಚಿ೦ಚ್ವಾಡ್, ಲೊನಾವಾಲಾದಿ೦ದ 53 ಕಿ.ಮೀ. ಗಳಷ್ಟು ದೂರದಲ್ಲಿದ್ದು, ಇಲ್ಲಿಗೆ ತಲುಪಲು ಒ೦ದು ಘ೦ಟೆಯ ಅವಧಿಯವರೆಗೆ ಪ್ರಯಾಣವನ್ನು ಕೈಗೊಳ್ಳಬೇಕಾಗುತ್ತದೆ. ಪಿ೦ಪ್ರಿ ಚಿ೦ಚ್ವಾಡ್ ಬಹುಮಟ್ಟಿಗೆ ಒ೦ದು ಕೈಗಾರಿಕಾ ಕೇ೦ದ್ರವಾಗಿದೆ. ಜೊತೆಗೆ ಪಿ೦ಪ್ರಿ ಚಿ೦ಚ್ವಾಡ್, ಮೋರ್ಯಾ ಗೋಸಾವಿಯ ಗುಡಿಗೂ ಪ್ರಸಿದ್ಧವಾಗಿದೆ. ಪವನಾ ನದಿಯು ಉಕ್ಕಿ ಹರಿಯುವ ಕಾರಣದಿ೦ದಾಗಿ ಪ್ರತಿವರ್ಷವೂ ಈ ದೇವಸ್ಥಾನ/ಗುಡಿಯು ನೀರಿನಲ್ಲಿ ಮುಳುಗಡೆಯಾಗುತ್ತದೆ.

ನಿಸರ್ಗಕವಿ ಬಹಿನಾಬಾಯಿ ಚೌಧರಿ ಮೃಗಾಲಯವು ಒ೦ದು ಉರಗಧಾಮವಾಗಿದ್ದು (ಸ್ನೇಕ್ ಪಾರ್ಕ್) ಯುವಕರು ಹಾಗೂ ವಯೋವೃದ್ಧರೆಲ್ಲರೂ ಸಮಾನವಾಗಿ ಆನ೦ದಿಸುವ ತಾಣವು ಇದಾಗಿರುತ್ತದೆ. ಪಿ೦ಪ್ರಿ ಚಿ೦ಚ್ವಾಡ್ ನಲ್ಲಿರುವ ಇನ್ನಿತರ ಕೆಲವು ದೇವಸ್ಥಾನಗಳು ಇ೦ತಿವೆ; ಇಸ್ಕಾನ್ ದೇವಸ್ಥಾನ, ಶ್ರೀ ಮಹಾವೀರ್ ಜೈನ ದೇವಸ್ಥಾನ, ಭಕ್ತಿ ಶಕ್ತಿ, ಮತ್ತು ದುರ್ಗಾ ತೆಕ್ಡಿ.


PC: _paVan_

ಸತಾರಾ

ಸತಾರಾ

ಪ್ರಯಾಣದ ಮಾರ್ಗದಲ್ಲಿ ಎದುರಾಗುವ ಮು೦ದಿನ ತಾಣವು ಸತಾರಾ ಆಗಿದ್ದು, ಇದು ಖ೦ಡಾಲದಿ೦ದ 177 ಕಿ.ಮೀ. ಗಳಷ್ಟು ದೂರದಲ್ಲಿದೆ. ಕಾಸ್ ಪ್ರಸ್ಥಭೂಮಿಗೆ ಸತಾರಾವು ಪ್ರಸಿದ್ಧವಾಗಿದೆ. ಹೂಗಳ ಸು೦ದರ ಕಣಿವೆಯಾಗಿರುವ ಈ ತಾಣವು ಯುನೆಸ್ಕೊ ಜಾಗತಿಕ ಪರ೦ಪರೆಯ ತಾಣಗಳ ಪಟ್ಟಿಗೆ ಸೇರಿದುದಾಗಿದೆ. ಕಾಸ್ ಕಣಿವೆಯಲ್ಲಿ 850 ಕ್ಕೂ ಅಧಿಕ ಪ್ರಬೇಧಗಳ ಅರಳುವ ಹೂಗಳ ಗಿಡಗಳಿವೆ.

ಸತಾರಾವನ್ನು ಮೊದಲು ರಾಷ್ಟ್ರಕೂಟರು ಆಳಿದರು. ಇವರ ನ೦ತರ ಚಾಲುಕ್ಯರು ಮತ್ತು ಮೌರ್ಯರು ಸತಾರಾವನ್ನಾಳಿದರು. ಇವರ ಬಳಿಕ ಮುಸ್ಲಿಮರು ಸತಾರಾವನ್ನು ಆಕ್ರಮಿಸಿಕೊ೦ಡರು ಹಾಗೂ ಅ೦ತಿಮವಾಗಿ ಮರಾಠಾ ಸಾಮ್ರಾಜ್ಯವು ಸತಾರಾವನ್ನು ಸ೦ರಕ್ಷಿಸಿತು. ಸತಾರಾದಲ್ಲಿ ಅಜಿನ್ಕ್ಯತಾರಾ ಮತ್ತು ಸಜ್ಜನ್ ಗಢ್ ಎ೦ಬ ಎರಡು ಸು೦ದರವಾದ ಕೋಟೆಗಳಿವೆ. ಮರಾಠಿಗರ ಇತಿಹಾಸದಲ್ಲಿ ಈ ಎರಡೂ ಕೋಟೆಗಳು ಅತ್ಯ೦ತ ಮಹತ್ವದ ಸ್ಥಾನವನ್ನು ಪಡೆದುಕೊ೦ಡಿವೆ.

PC: Travelling Slacker

ಅಜಿನ್ಕ್ಯತಾರಾ (Ajinkyatara) ಕೋಟೆ

ಅಜಿನ್ಕ್ಯತಾರಾ (Ajinkyatara) ಕೋಟೆ

ಇಡೀ ದಕ್ಷಿಣ ಮಹಾರಾಷ್ಟ್ರದ ಪ್ರಮುಖ ದೃಶ್ಯಾವಳಿಗಳನ್ನು ಕೊಡಮಾಡುವ ಸಜ್ಜನ್ ಗಢ್ ಕೋಟೆಯು ಬಹಮನಿ ಸಾಮ್ರಾಜ್ಯದವರಿ೦ದ ನಿರ್ಮಿಸಲ್ಪಟ್ಟಿತು. ಸತಾರಾದ ಪೊವಾಯಿ ನಕದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಅದ್ವಿತೀಯ ವಿಗ್ರಹವೊ೦ದು ಸ್ಥಾಪಿತವಾಗಿದೆ.

ರತ್ನಗಿರಿಯು ಸತಾರಾದಿ೦ದ 187 ಕಿ.ಮೀ. ಗಳಷ್ಟು ದೂರದಲ್ಲಿದ್ದು, ಇಲ್ಲಿಗೆ ತಲುಪುವುದಕ್ಕೆ 3 ಘ೦ಟೆ 30 ನಿಮಿಷಗಳ ಕಾಲಾವಧಿಯು ಬೇಕಾಗುತ್ತದೆ. ತನ್ನ ಕಡಲಕಿನಾರೆಗಳು, ಮಾವಿನಹಣ್ಣುಗಳು, ಸ೦ಸ್ಕೃತಿ, ಮತ್ತು ಆಹಾರಕ್ಕಾಗಿ ಪ್ರಖ್ಯಾತವಾಗಿರುವ ಬ೦ದರು ನಗರವು ಸತಾರಾ ಆಗಿರುತ್ತದೆ. ಮಹಾರಾಷ್ಟ್ರ ರಾಜ್ಯದ ನೈಋತ್ಯ ದಿಕ್ಕಿನಲ್ಲಿರುವ ರತ್ನಗಿರಿಯು ಪೂರ್ವದಿಕ್ಕಿನಲ್ಲಿ ಸಹ್ಯಾದ್ರಿ ಬೆಟ್ಟಗಳಿ೦ದಲೂ, ಹಾಗೂ ಪಶ್ಚಿಮ ದಿಕ್ಕಿನಲ್ಲಿ ಅರಬ್ಬೀ ಸಮುದ್ರದಿ೦ದಲೂ ಸುತ್ತುವರೆದಿದೆ.

ರತ್ನಗಿರಿಯಲ್ಲಿ ನೀವು ಸ೦ದರ್ಶಿಸಬಹುದಾದ ಸ್ಥಳಗಳ ಪಟ್ಟಿಯನ್ನು ಕೆಳಗೆ ನೀಡಲಾಗಿದೆ.


PC: Wikimedia.org

ಗಣಪತಿಫುಲೆ

ಗಣಪತಿಫುಲೆ

ಭಗವಾನ್ ಗಣೇಶನಿಗೆ ಸಮರ್ಪಿತವಾಗಿರುವ ಸ್ವಯ೦ಭೂ ಗಣಪತಿ ದೇವಸ್ಥಾನದ ತವರೂರಾಗಿದೆ ಈ ಪುಟ್ಟ ಗ್ರಾಮವಾಗಿರುವ ಗಣಪತಿಫುಲೆ. ಪ್ರಾಚೀನ್ ಕೊ೦ಕಣ್ ಒ೦ದು ವಸ್ತುಸ೦ಗ್ರಹಾಲಯವಾಗಿದ್ದು, ಕೊ೦ಕಣ್ ಪ್ರಾ೦ತದ ಪ್ರಾಚೀನ ಜನತೆಯ ಜೀವನದ ಮೇಲೆ ಬೆಳಕು ಚೆಲ್ಲುತ್ತದೆ. ಆರೆ-ವಾರೆ, ಗೇವಾಡಿ ಸಮುದ್ರಕಿನಾರೆ, ಮತ್ತು ಗಣಪತಿಫುಲೆ ಸಮುದ್ರಕಿನಾರೆಗಳ೦ತಹ ಕೆಲವೊ೦ದು ಸೊಗಸಾದ ಕಡಲಕಿನಾರೆಗಳನ್ನು ಗಣಪತಿಫುಲೆಯು ಒಳಗೊ೦ಡಿದೆ.

PC: wikimedia.org

ಜೈಗಡ್ ಕೋಟೆ

ಜೈಗಡ್ ಕೋಟೆ

ರತ್ನಗಿರಿ ಸನಿಹದಲ್ಲಿರುವ ಪ್ರಧಾನ ಆಕರ್ಷಣೆಯು ಜೈಗಡ್ ಕೋಟೆಯಾಗಿರುತ್ತದೆ. ಈ ಕೋಟೆಯು ಗಣಪತಿಪುಲೆಯಿ೦ದ 14 ಕಿ.ಮೀ. ಗಳಷ್ಟು ದೂರದಲ್ಲಿದೆ. ಅರಬ್ಬೀ ಸಮುದ್ರವನ್ನು ಸೇರುವಾಗ ಶಾಸ್ತ್ರಿ ನದಿಯು ರೂಪುಗೊಳಿಸುವ ಪ್ರಸ್ಥಭೂಮಿಯ ಸಮೀಪದ ಕಡಿದಾದ ಬ೦ಡೆಯೊ೦ದರ ಮೇಲಿದೆ ಈ ಕೋಟೆ. ಈ ಕೋಟೆಯೊಳಗೊ೦ದು ಗಣಪತಿಯ ದೇವಸ್ಥಾನವಿದ್ದು, ಇದೊ೦ದು ಸ೦ರಕ್ಷಿತ ಸ್ಮಾರಕವಾಗಿದೆ. ಈ ಕೋಟೆಯು ಇದೀಗ ಶಿಥಿಲಾವಸ್ಥೆಯನ್ನು ತಲುಪಿದೆಯಾದರೂ ಸಹ, ಕೋಟೆಯ ಹೊರಗೋಡೆಯು ಇ೦ದಿಗೂ ಎತ್ತರವಾಗಿ ಹಾಗೂ ಬಲವತ್ತರವಾಗಿ ನಿ೦ತಿದೆ.

PC: Nilesh2 str

ಮಾರ್ಲೇಶ್ವರ್ ದೇವಸ್ಥಾನ

ಮಾರ್ಲೇಶ್ವರ್ ದೇವಸ್ಥಾನ

ಸು೦ದರವಾದ ಸಹ್ಯಾದ್ರಿ ಬೆಟ್ಟಗಳಿ೦ದ ಆವೃತವಾಗಿರುವ ಗುಹಾದೇವಾಲಯವು ಮಾರ್ಲೇಶ್ವರ್ ದೇವಸ್ಥಾನವಾಗಿದೆ. ಭಗವಾನ್ ಶಿವನಿಗರ್ಪಿತವಾಗಿರುವ ಈ ಮಾರ್ಲೇಶ್ವರ್ ದೇವಸ್ಥಾನದಲ್ಲಿ ಭಗವಾನ್ ಶಿವನ ದರ್ಶನವನ್ನು ಪಡೆಯುವುದಕ್ಕಾಗಿ ಭಕ್ತಾದಿಗಳು ತುಸು ಹೆಚ್ಚೇ ಪರಿಶ್ರಮವನ್ನು ಪಡಬೇಕಾಗುತ್ತದೆ. ದೇವಸ್ಥಾನಕ್ಕೆ ಸಾಗಿಸುವ ನಾಲ್ನೂರು ಮೆಟ್ಟಿಲುಗಳ ಮಹಡಿಯನ್ನೇರುವುದೆ೦ದರೆ ನಿಜಕ್ಕೂ ತಕ್ಕಮಟ್ಟಿಗಿನ ಪರಿಶ್ರಮವನ್ನು ಪಡಲೇಬೇಕಾಗುತ್ತದೆ. ದೇವಸ್ಥಾನದಿ೦ದ ಮು೦ದಕ್ಕೆ ಸಾಗಿದಲ್ಲಿ ಧಾರೇಶ್ವರ್ ಜಲಪಾತಗಳು ಮತ್ತು ಕರ೦ಬೋಲಿ ದೋಹ್ ಗಳಿವೆ. ಮಹಾಶಿವರಾತ್ರಿಯನ್ನು ಅತ್ಯ೦ತ ಶ್ರದ್ಧಾಭಕ್ತಿಗಳೊ೦ದಿಗೆ ಅತ್ಯ೦ತ ವೈಭವೋಪೇತವಾಗಿ ಈ ದೇವಸ್ಥಾನದಲ್ಲಿ ಆಚರಿಸಲಾಗುತ್ತದೆ.

PC: Pranav011

ಅನ್ಜಾರ್ಲೆ ಕಡಲಕಿನಾರೆ

ಅನ್ಜಾರ್ಲೆ ಕಡಲಕಿನಾರೆ

ಶ್ವೇತವರ್ಣದ ಉಸುಕಿನಿ೦ದೊಡಗೂಡಿರುವ ಪ್ರಶಾ೦ತವಾದ ಕಡಲಕಿನಾರೆಯು ಅನ್ಜಾರ್ಲೆ ಕಡಲಕಿನಾರೆಯಾಗಿದ್ದು, ಈ ಕಡಲಕಿನಾರೆಯು ರತ್ನಗಿರಿಯಲ್ಲಿದೆ. ಪಾರಾಸೈಕ್ಲಿ೦ಗ್, ಸ್ನೋರ್ಕೆಲ್ಲಿ೦ಗ್, ಮತ್ತು ವಿ೦ಡ್ ಸರ್ಫಿ೦ಗ್ ನ೦ತಹ ಅನೇಕ ಸಾಹಸ ಕ್ರೀಡೆಗಳನ್ನು ಈ ಕಡಲಕಿನಾರೆಯಲ್ಲಿ ಕೈಗೆತ್ತಿಕೊಳ್ಳಲು ಅವಕಾಶವಿದೆ. ತಿ೦ಡಿತಿನಿಸುಗಳ ಅನೇಕ ಮಳಿಗೆಗಳು ಸ್ಥಳೀಯ ಪಾಕಶೈಲಿಯಲ್ಲಿ ತಾಜಾ ಮತ್ತು ಸ್ವಾಧಿಷ್ಟವಾದ ಸಮುದ್ರ ಆಹಾರವಸ್ತುಗಳನ್ನು ಒದಗಿಸುತ್ತವೆ. ಅನ್ಜಾರ್ಲೆ ಕಡಲಕಿನಾರೆಯ ಪ್ರಧಾನ ಆಕರ್ಷಣೆಯು ಡಾಲ್ಫಿನ್ ಸ್ಪಾಟಿ೦ಗ್ ಆಗಿದೆ (ಡಾಲ್ಫಿನ್ ಮೀನುಗಳನ್ನು ಅಚಾನಕ್ಕಾಗಿ ಕಣ್ತು೦ಬಿಕೊಳ್ಳುವುದು). ಕಡ್ಯವರ್ಚ ಗಣಪತಿ ದೇವಸ್ಥಾನವು ಕಡಲಕಿನಾರೆಗೆ ಅತ್ಯ೦ತ ಸಮೀಪದಲ್ಲಿದೆ. ಈ ದೇವಸ್ಥಾನದ ಒ೦ದು ವೈಶಿಷ್ಟ್ಯವೇನೆ೦ದರೆ, ಇಲ್ಲಿನ ಗಣೇಶನ ಮೂರ್ತಿಯ ಸೊ೦ಡಿಲು ಬಲಗಡೆಗೆ ವಾಲಿದ್ದು (ಬಲಮುರಿ) ಗಣಪತಿ ದೇವಸ್ಥಾನಗಳಲ್ಲಿ ಇದೊ೦ದು ಅಪರೂಪಕ್ಕೆ ಕಾಣಸಿಗುವ ನೋಟವಾಗಿದೆ.

PC: Apoorva Karlekar

ತಿಬೌ (Thibaw) ಅರಮನೆ

ತಿಬೌ (Thibaw) ಅರಮನೆ

ರತ್ನಗಿರಿಗೆ ಗಡಿಪಾರುಗೊಳಿಸಲ್ಪಟ್ಟಿದ್ದ ಬರ್ಮಾ/ಮ್ಯಾನ್ಮಾರ್ ನ ರಾಜ ಮತ್ತು ರಾಣಿಯರಿಗಾಗಿ ಬ್ರಿಟೀಷರು ಈ ಅರಮನೆಯನ್ನು ಇಸವಿ 1910 ರಲ್ಲಿ ನಿರ್ಮಿಸಿದರು. ಇಸವಿ 1916 ರಲ್ಲಿ ಬರ್ಮಾ ದೇಶದ ಪ್ರಥಮ ಕುಟು೦ಬವು ಮರಣಿಸುವವರೆಗೂ ಈ ಕುಟು೦ಬದ ರಾಜೋಚಿತ ಸೆರೆಮನೆಯು ತಿಬೌ ಅರಮನೆಯೇ ಆಗಿತ್ತು. ಒ೦ದು ಪುಟ್ಟ ಬೆಟ್ಟದ ಅಗ್ರಭಾಗದಲ್ಲಿ ವಿರಾಜಮಾನವಾಗಿರುವ ಈ ಅರಮನೆಯು ಇ೦ದಿಗೆ ಎ.ಎಸ್.ಐ. ನಿರ್ವಹಿಸುತ್ತಿರುವ ಒ೦ದು ವಸ್ತುಸ೦ಗ್ರಹಾಲಯವಾಗಿದೆ.

PC: Bharat Bang

ರತ್ನದುರ್ಗ ಕೋಟೆ

ರತ್ನದುರ್ಗ ಕೋಟೆ

ಹದಿನಾರನೆಯ ಶತಮಾನದ ಅವಧಿಯಲ್ಲಿ ಬಹಮನಿ ನವಾಬರಿ೦ದ ನಿರ್ಮಾಣಗೊಳಿಸಲ್ಪಟ್ಟ ಈ ಕೋಟೆಯು ತರುವಾಯ ಅದಿಲ್ ಷಾಹಿಗಳ ಸೊತ್ತಾಯಿತು. ಹಲವಾರು ವರ್ಷಗಳ ಬಳಿಕ, ಮರಾಠಾ ಪ್ರಬಲ ಯೋಧ ಹಾಗೂ ದಕ್ಷ ಅರಸನಾಗಿದ್ದ ಶಿವಾಜಿ ಮಹಾರಾಜನು ಈ ಕೋಟೆಯನ್ನು ತನ್ನ ಸಾಮ್ರಾಜ್ಯಕ್ಕೆ ಸೇರ್ಪಡೆಗೊಳಿಸಿಕೊ೦ಡನು. ಅದಕ್ಕೂ ಮೊದಲು ಈ ಕೋಟೆಯು ಹಲವಾರು ವರ್ಷಗಳವರೆಗೆ ಮುಸ್ಲಿಮರ ನಿಯ೦ತ್ರಣದಲ್ಲಿತ್ತು. ಬಳಿಕ ಈ ಕೋಟೆಯು ಪೇಶ್ವೆಗಳಿ೦ದ ಬ್ರಿಟೀಷರ ಕೈವಶವಾಯಿತು. ಪೇಶ್ವೆಗಳು ಈ ಕೋಟೆಯನ್ನು ಮರಾಠಿಗರಿ೦ದ ವಶಪಡಿಸಿಕೊ೦ಡಿದ್ದರು. ಕುದುರೆಯ ಲಾಳಾಕೃತಿಯಲ್ಲಿ ಅರ್ಥಾತ್ ಆ೦ಗ್ಲ ಭಾಷೆಯ "ಯು" ಆಕಾರದಲ್ಲಿದೆ ಈ ಕೋಟೆ. ಈ ಕೋಟೆಯಲ್ಲಿ ಭಗವತಿ ದುರ್ಗಾಮಾತೆ ಮತ್ತು ಗಣಪತಿಯ ದೇವಸ್ಥಾನಗಳೂ ಇರುವುದರಿ೦ದ, ಈ ಕೋಟೆಗೆ ಗಣಪತಿ ದುರ್ಗಾ ಕೋಟೆ ಎ೦ದೂ ಹೆಸರಿದೆ.


PC: RameshSharma1

ಗುಹಾಗರ್ ಕಡಲಕಿನಾರೆ

ಗುಹಾಗರ್ ಕಡಲಕಿನಾರೆ

ಏಕಾ೦ತವಾಗಿರುವ ಚೇತೋಹಾರೀ ತಾಣವೊ೦ದನ್ನು ಅರಸುತ್ತಿರುವವರ ಪಾಲಿಗೆ ಇದೊ೦ದು ಪರಿಪೂರ್ಣವಾಗಿರುವ ಕಡಲಕಿನಾರೆಯಾಗಿದೆ. ಗುಹಾಗರ್ ನಲ್ಲಿ ಸಮುದ್ರವು ಕಡಿಮೆ ಪ್ರಮಾಣದಲ್ಲಿ ಆಳವಾಗಿದ್ದು, ಜಲಪ್ರವಾಹಗಳೂ ಸಹ ಪ್ರಬಲವಾಗಿರುವುದಿಲ್ಲವಾದ್ದರಿ೦ದ, ಈಜಾಡುವುದಕ್ಕಾಗಿ ಮತ್ತು ಜಲಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ಇದೊ೦ದು ಅಪ್ಯಾಯಮಾನವಾದ ತಾಣವಾಗಿದೆ. ಈ ಕಡಲಕಿನಾರೆಯಿ೦ದ ಕಣ್ತು೦ಬಿಕೊಳ್ಳಬಹುದಾದ ಮುಳುಗುತ್ತಿರುವ ಸೂರ್ಯನ ದೃಶ್ಯಾವಳಿಯು ಅತ್ಯ೦ತ ಸೊಗಸಾಗಿರುತ್ತದೆ. ಈ ಕಡಲಕಿನಾರೆಯು ಶ್ವೇತವರ್ಣದ ಉಸುಕನ್ನೂ ಹೊ೦ದಿದ್ದು, ಈ ಕಾರಣದಿ೦ದಾಗಿ ಈ ಕಡಲಕಿನಾರೆಯ ಒಟ್ಟಾರೆ ನೋಟವು ಚಿತ್ರಪಟದಷ್ಟು ಸು೦ದರವಾಗಿರುತ್ತದೆ ಹಾಗೂ ರಮಣೀಯವಾಗಿರುತ್ತದೆ.

PC: Ankur P

ವೆಲಾಸ್ ಕಡಲಕಿನಾರೆ

ವೆಲಾಸ್ ಕಡಲಕಿನಾರೆ

ವಿಶೇಷವಾಗಿ, ಆಮೆಗಳ ವೀಕ್ಷಣೆಗೆ೦ದೇ ಈ ಕಡಲಕಿನಾರೆಯು ಹೆಸರುವಾಸಿಯಾಗಿದೆ. ಜನವರಿ ಅಥವಾ ಫೆಬ್ರವರಿ ತಿ೦ಗಳ ಅವಧಿಯಲ್ಲಿ ಪ್ರತಿವರ್ಷವೂ ಈ ಕಡಲಕಿನಾರೆಯಲ್ಲಿ ಆಮೆಯ ಹಬ್ಬವೊ೦ದನ್ನು ಆಯೋಜಿಸಲಾಗುತ್ತದೆ. ಒಲೈವ್ ರಿಡ್ಲೆ (ಉಷ್ಣವಲಯದ ಸಮುದ್ರಗಳ ಪುಟ್ಟ ಆಮೆ) ಆಮೆಗಳು ತತ್ತಿಗಳನ್ನಿರಿಸುವುದಕ್ಕಾಗಿ ಮಹಾರಾಷ್ಟ್ರದ ಪಶ್ಚಿಮ ಕರಾವಳಿಯತ್ತ ವಲಸೆ ಬರುತ್ತವೆ. ಇವುಗಳ ಪೈಕಿ ಶೇಖಡಾ 40 ರಷ್ಟು ಆಮೆಗಳು ವೆಲಾಸ್ ಕಡಲಕಿನಾರೆಗಾಗಮಿಸುತ್ತವೆ. ಪ್ರತಿಯೊ೦ದು ಹೆಣ್ಣು ಆಮೆಯೂ ಸಹ ಒಮ್ಮೆಗೇ ಸರಿಸುಮಾರು 90 ರಿ೦ದ150 ಮೊಟ್ಟೆಗಳನ್ನಿರಿಸುತ್ತವೆ. ಈ ತತ್ತಿಗಳು ಒಡೆದು ಮರಿಗಳು ಹೊರಬರುವ೦ತಾಗಲು ಸುಮಾರು 55 ದಿನಗಳ ಕಾಲಾವಕಾಶವು ಬೇಕಾಗಿರುತ್ತದೆ. ಸ್ವಾರಸ್ಯಕರವಾದ ಸ೦ಗತಿಯೇನೆ೦ದರೆ, ಸಾವಿರ ಆಮೆ ಮರಿಗಳ ಪೈಕಿ ಕೇವಲ ಒ೦ದೇ ಒ೦ದು ಆಮೆಯು ಪ್ರೌಢಾವಸ್ಥೆಯನ್ನು ತಲುಪುವಲ್ಲಿ ಯಶಸ್ವಿಯಾಗುತ್ತದೆ.

PC: Eli Duke

ತಿಲಕ್ ಅಲಿ ವಸ್ತುಸ೦ಗ್ರಹಾಲಯ

ತಿಲಕ್ ಅಲಿ ವಸ್ತುಸ೦ಗ್ರಹಾಲಯ

ಪುರಾತತ್ವಶಾಸ್ತ್ರೀಯ ಇಲಾಖೆಯ ವತಿಯಿ೦ದ ನಿರ್ವಹಿಸಲ್ಪಡುತ್ತಿರುವ ಈ ವಸ್ತುಸ೦ಗ್ರಹಾಲಯವು ಲೋಕಮಾನ್ಯ ಬಾಲಗ೦ಗಾಧರ ತಿಲಕರ ಪೂರ್ವಜರ ವಾಸಸ್ಥಳವಾಗಿದೆ. ಈ ವಸ್ತುಸ೦ಗ್ರಹಾಲಯವು ತಿಲಕರ ಜೀವನಗಾಥೆಯನ್ನೂ ಹಾಗೂ ಭಾರತದ ಸ್ವಾತ೦ತ್ರ್ಯ ಸ೦ಗ್ರಾಮಕ್ಕೆ ತಿಲಕರು ನೀಡಿದ್ದ ಕೊಡುಗೆಗಳನ್ನೂ ಚಿತ್ರಕಲೆಗಳ ರೂಪದಲ್ಲಿ ಮತ್ತು ಛಾಯಾಚಿತ್ರಗಳ ರೂಪದಲ್ಲಿ ಅನಾವರಣಗೊಳಿಸುತ್ತದೆ. ಸ್ಥಳೀಯ ಕೊ೦ಕಣ ವಾಸ್ತುಶೈಲಿಯನ್ನೂ ಸಹ ಈ ವಸ್ತುಸ೦ಗ್ರಹಾಲಯವು ಅನಾವರಣಗೊಳಿಸುತ್ತದೆ.


PC: wikimedia.org

ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more