Search
 • Follow NativePlanet
Share
» »ಝಲ್ಲಾಂಗ್‌ನಲ್ಲಿ ಅಡ್ಡಾಡಿ ನೋಡಿ

ಝಲ್ಲಾಂಗ್‌ನಲ್ಲಿ ಅಡ್ಡಾಡಿ ನೋಡಿ

ಕಲೋಮೊಂಗ್ ಪಟ್ಟಣಕ್ಕೆ ಹೋಗುವ ದಾರಿಯಲ್ಲಿ, ಜಲಧಾಕಾ ನದಿಯ ತೀರದ ಮೇಲಿರುವ ಒಂದು ಸಣ್ಣ ಪಟ್ಟಣವೇ ಝಲ್ಲಾಂಗ. ಇದು ಹಿಮಾಲಯದ ಅಡಿಯಲ್ಲಿ ಇರುವ ಇದು ಅದ್ಭುತ ಪ್ರಾಕೃತಿಕ ಸೌಂದರ್ಯವನ್ನು ತನ್ನದಾಗಿಸಿಕೊಂಡಿದ್ದು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಝಲ್ಲಾಂಗ ಪ್ರವಾಸೋದ್ಯಮವು ತುಂಬಾ ಆಕರ್ಷಕವಾಗಿದೆ. ಇದಕ್ಕೆ ಹತ್ತಿರದಲ್ಲಿರುವ ವಿಮಾನ ನಿಲ್ದಾಣ ಎಂದರೆ ಸಿಲಗುರಿ ವಿಮಾನ ನಿಲ್ದಾಣ. ಇದು ಝಲ್ಲಾಂಗದಿಂದ ಕೇವಲ 100 ಕೀಲೊ ಮೀಟರ್ ದೂರದಲ್ಲಿದೆ. ಅಲ್ಲದೇ ಇದು ಭಾರತ ಮತ್ತು ಭೂತಾನ ಗಡಿಯ ಹತ್ತಿರದಲ್ಲಿದೆ. ಆದ್ದರಿಂದ ಇಲ್ಲಿನ ಜನರ ಮೇಲೆ ಭೂತಾನ ಸಂಸ್ಕೃತಿಯು ಪ್ರಭಾವವನ್ನು ಬೀರಿದೆ. ಆಹಾರ, ಸಂಪ್ರದಾಯ ಮತ್ತು ಹಬ್ಬಗಳಲ್ಲಿ ಈ ಪ್ರಭಾವವನ್ನು ಕಾಣಬಹುದಾಗಿದೆ.

ಹೈಡ್ರೋ ವಿದ್ಯುತ್ ಯೋಜನೆ

ಹೈಡ್ರೋ ವಿದ್ಯುತ್ ಯೋಜನೆ

PC: Mishra866868
ಝಲ್ಲಾಂಗದ ಇನ್ನೊಂದು ಪ್ರಮುಖ ಆಕರ್ಷಣೆ ಎಂದರೆ ಜಲಧಾಕಾ ನದಿಯ ರಾಜ್ಯ ಹೈಡ್ರೋ ವಿದ್ಯುತ್ ಯೋಜನೆ. ಝಲ್ಲಾಂಗ ಮತ್ತು ಸುತ್ತಮುತ್ತಲಿರುವ ಪ್ರವಾಸಿ ಸ್ಥಳಗಳು ಬಿಂದು ಆಣೆಕಟ್ಟು ನೋಡಲು ತುಂಬಾ ಸುಂದರವಾಗಿದ್ದು, ಜನಪ್ರಿಯ ಪ್ರವಾಸಿ ಆಕರ್ಷಣೆಯಾಗಿದೆ. ಇದು ಭಾರತ ಮತ್ತು ಭೂತಾನ ರಾಷ್ಟ್ರಗಳ ಸಂಪರ್ಕ ಸೇತುವೆಯಂತೆ ಕಾರ್ಯ ನಿರ್ವಹಿಸುತ್ತದೆ.

ಪಕ್ಷಿ ವನ್ಯಧಾಮ

ಪಕ್ಷಿ ವನ್ಯಧಾಮ

PC: TheSomdeep

ಪಕ್ಷಿ ಮತ್ತು ಜೇನುಹುಳುಗಳು ಸಾಮಾನ್ಯವಾಗಿ ಝಲ್ಲಾಂಗವು ಪಕ್ಷಿ ಪ್ರಿಯರಿಗೆ ಹೇಳಿ ಮಾಡಿಸಿದ ತಾಣವಾಗಿದೆ. ಇಲ್ಲಿ ಅನೇಕ ಪ್ರಭೇಧಗಳ ಬೆಟ್ಟದ ಪಕ್ಷಿಗಳನ್ನು ನೋಡಬಹುದು. ಕೆಂಬಾಲ, ಸಿಳ್ಳಾರ್ ಮತ್ತು ಇತರ ಅಪರೂಪದ ಹಾಗೂ ವಲಸೆ ಪಕ್ಷಿಗಳು. ಇಲ್ಲಿನ ಪಕ್ಷಿ ವನ್ಯಧಾಮ ಅಥವಾ ಗೋರುಮರ ವನ್ಯ ಜೀವಿಧಾಮವು ನೋಡಲು ತುಂಬಾ ಆಕರ್ಷಕವಾಗಿದೆ.

ಗೋಡಕ್ ತೋತಾಪುರ್ ರಾಕ್

ಗೋಡಕ್ ತೋತಾಪುರ್ ರಾಕ್

PC: Samyabrato dey
ಇಲ್ಲಿನ ಇತರ ಆಕರ್ಷಣೆಗಳೆಂದರೆ ಕಾರ್ಡಮಾಮ್ ಕ್ಯುರಿಂಗ್ ಸೆಂಟರ್ ಮತ್ತು ಗೋಡಕ್ ತೋತಾಪುರ್ ರಾಕ್. ಇದು ಸುಮಾರು 22 ಕೀಲೊ ಮೀಟರಗಳ ಚಿಕ್ಕ ಪರ್ವತವಾಗಿದೆ. ಇಲ್ಲಿಂದ ನೀವು ತೋರ್ಸ ನದಿಯನ್ನು ನೋಡಬಹುದು. ಇಲ್ಲಿನ ಜಲಪದರ ರಾಷ್ಟ್ರೀಯ ಉದ್ಯಾನವನವು ನೋಡಲು ಅದ್ಭುತವಾಗಿದೆ.

ತಲುಪುವುದು ಹೇಗೆ?

ತಲುಪುವುದು ಹೇಗೆ?

ಝಲ್ಲಾಂಗವು ಪಶ್ಚಿಮ ಬಂಗಾಳದ ಉತ್ತರ ಭಾಗದ ನಗರಳಲ್ಲಿ ಒಂದಾಗಿದೆ. ಇಲ್ಲಿಗೆ ಪ್ರತಿದಿನವೂ ಭೂತಾನದಿಂದ ಬಸ್ಸುಗಳು ಒಡಾಡುತ್ತವೆ. ಸಿಲಗುರಿ ಇದಕ್ಕೆ ಹತ್ತಿರದಲ್ಲಿರುವ ವಿಮಾನ ನಿಲ್ದಾಣವಾಗಿದ್ದು, ಮುಂಬಯಿ ಮತ್ತು ದೆಹಲಿಯೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ.

  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X