Search
  • Follow NativePlanet
Share
» »ಜೀವನದಲ್ಲಿ ಒಮ್ಮೆಯದರೂ ದರ್ಶನ ಮಾಡಲೇಬೇಕಾದ ಕ್ಷೇತ್ರವಿದು....

ಜೀವನದಲ್ಲಿ ಒಮ್ಮೆಯದರೂ ದರ್ಶನ ಮಾಡಲೇಬೇಕಾದ ಕ್ಷೇತ್ರವಿದು....

ಪ್ರಕೃತಿಯ ಮಡಿಲಲ್ಲಿ ಜಗನ್ಮಾತಳಾಗಿ, ಸ್ವಯಂ ಭೂ ಆಗಿ ಪುನೀತಳನ್ನಾಗಿ ಮಾಡಿದ್ದಾಳೆ. ದೇವಿ, ದೇವತೆಗಳಿಗೆ ಪುಣ್ಯ ಸ್ಥಳವಾದ ಛತ್ತಿಸ್‍ಘಡ್‍ನಲ್ಲಿ ಒಂದು ಪವಿತ್ರವಾದ ಸ್ಥಳವಿದೆ.

ಭಾರತ ದೇಶ ಒಂದು ಕರ್ಮ ಭೂಮಿ, ಧರ್ಮ ಭೂಮಿ, ಆಧ್ಯಾತ್ಮಿಕವಾದ ಭೂಮಿಯಾಗಿದೆ. ಪ್ರಪಂಚದಲ್ಲಿಯೇ ಅತ್ಯಂತ ಅದ್ಭುತವಾದ ಹಾಗು ಶಕ್ತಿವಂತ ದೇಶವಾಗಿ ಭಾರತ ದೇಶವೆಂದು ಕರೆಯಲಾಗುತ್ತದೆ. ಭಾರತ ದೇಶದಲ್ಲಿ ಪ್ರಕೃತಿ ವರ್ಣನೆಗೆ ಸಾಧ್ಯವಾಗದಂಥಹ ಸೌಂದರ್ಯವನ್ನು ಹೊಂದಿದೆ. ಹಿಮಾಲಯಗಳು, ಅರಣ್ಯಗಳು, ಜೀವನದಿಗಳು ಶೋಭಿಸುತ್ತಿರುತ್ತದೆ.

ಶಿವ ಪಾರ್ವತಿ ಇಬ್ಬರು ವಿಹಾರ ಮಾಡಿದ ಪವಿತ್ರವಾದ ಭೂಮಿಯಾಗಿದೆ ಭಾರತ ದೇಶ. ಪಾರ್ವತಿ, ಪರಮೇಶ್ವರರು ನಿತ್ಯವು ಆನಂದ ತಾಂಡವ ಮಾಡುತ್ತಿರುತ್ತಾರೆ. ಅಂತಹ ಪ್ರಕೃತಿ ಸ್ವರೂಪವನ್ನು ಹೊಂದಿರುವ ಪಾರ್ವತಿ ದೇವಿಯು ತಮ್ಮ ಭಕ್ತರನ್ನು ಪುನೀತರನ್ನಾಗಿಸುವ ಸಲುವಾಗಿ ಪ್ರಕೃತಿಯ ಮಡಿಲಲ್ಲಿ ಜಗನ್ಮಾತಳಾಗಿ, ಸ್ವಯಂ ಭೂ ಆಗಿ ಪುನೀತಳನ್ನಾಗಿ ಮಾಡಿದ್ದಾಳೆ. ದೇವಿ, ದೇವತೆಗಳಿಗೆ ಪುಣ್ಯ ಸ್ಥಳವಾದ ಛತ್ತಿಸ್‍ಘಡ್‍ನಲ್ಲಿ ಒಂದು ಪವಿತ್ರವಾದ ಸ್ಥಳವಿದೆ.

ಈ ಸ್ಥಳವನ್ನು ಒಮ್ಮೆ ದರ್ಶನ ಮಾಡಿದರೆ ಭಕ್ತರ ಜನ್ಮ ಪಾವನ ಎಂದು ಹೇಳಲಾಗುತ್ತದೆ. ಈಕೆಯು ಅತ್ಯಂತ ಶಕ್ತಿ ಪ್ರದಾಯಿನಿಯಾಗಿದ್ದು, ಈಕೆಯ ದರ್ಶನ ಭಾಗ್ಯ ಪಡೆಯಲು ದಿನನಿತ್ಯ ಸಾವಿರಾರು ಭಕ್ತರು ಭೇಟಿ ನೀಡುತ್ತಿರುತ್ತಾರೆ. ಹಾಗಾದರೆ ಆ ದೇವಾಲಯ ಎಲ್ಲಿದೆ? ಆ ದೇವಾಲಯದ ಹೆಸರಾದರೂ ಏನು? ಎಂಬ ಹಲವಾರು ಪ್ರೆಶ್ನೆಗೆ ಉತ್ತರ ಲೇಖನದ ಮೂಲಕ ತಿಳಿಯೋಣ.

ಜೇಟ್ ಮಾಯ್ ದೇವಾಲಯ

ಜೇಟ್ ಮಾಯ್ ದೇವಾಲಯ

ಹಚ್ಚ ಹಸಿರಿನ ವಾತಾವರಣದಲ್ಲಿ ಜನವಾಸಕ್ಕೆ ದೂರವಾಗಿ, ಪ್ರಕೃತಿಯ ರಮಣೀಯದ ಜೊತೆ ಜೊತೆಗೆ ಜಲಪಾತದಲ್ಲಿ ಜೇಟ್ ಮಾಯ್ ದೇವಾಲಯವಿದೆ. ಸ್ವಯಂ ಭೂವಾಗಿ ನೆಲೆಸಿರುವ ಈ ತಾಯಿಯ ದೇವಾಲಯವು ಯಾರು? ಯಾವಾಗ? ನಿರ್ಮಾಣ ಮಾಡಿದರು? ಎಂಬುದಕ್ಕೆ ಆಧಾರಗಳಿಲ್ಲ.

ಜೇಟ್ ಮಾಯ್ ದೇವಾಲಯ

ಜೇಟ್ ಮಾಯ್ ದೇವಾಲಯ

ಛತ್ತಿಸ್‍ಘಡ್‍ನಲ್ಲಿನ ಗರಿಯಾಬಾದ್ ಪ್ರದೇಶದಲ್ಲಿನ ಪ್ರಜೆಗಳ ಕೈಯಲ್ಲಿ ಆರಾಧ್ಯ ದೇವತೆಯಾಗಿ ಪೂಜೆಗಳನ್ನು ಪಡೆದುಕೊಳ್ಳುತ್ತಿದ್ದಾಳೆ. ಈ ದೇವಾಲಯವು ಆಧ್ಯಾತ್ಮಿಕ ಸಾಧಕರಿಗೆ ಅಲ್ಲದೇ, ಪ್ರಕೃತಿಯ ಪ್ರೇಮಿಗಳಿಗೆ ಒಂದು ದಿವ್ಯವಾದ ಸ್ಥಾನವೇ ಆಗಿದೆ.

ಜೇಟ್ ಮಾಯ್ ದೇವಾಲಯ

ಜೇಟ್ ಮಾಯ್ ದೇವಾಲಯ

ಜನಸಂಖ್ಯೆಯಿಂದ ದೂರವಿರುವ ದಿವ್ಯವಾದ ಧಾಮವಾಗಿ ಈ ಜೇಟ್ ಮಾಯ್ ಮಾತಾ ದೇವಾಲಯವು ಪ್ರಸಿದ್ಧಿಯನ್ನು ಪಡೆದಿದೆ. ಈ ಜಗತ್ ಜನನಿಯನ್ನು ದರ್ಶನ ಮಾಡಬೇಕಾದರೆ ಘಾಟರಾ ಜಲಪಾತಕ್ಕೆ ಅಂಟಿಕೊಂಡಿರುವ ಜಾಟ್ ಮಾಯ್ ಮಾತಾಳನ್ನು ದರ್ಶಿಸಲೇಬೇಕು.

ಜೇಟ್ ಮಾಯ್ ದೇವಾಲಯ

ಜೇಟ್ ಮಾಯ್ ದೇವಾಲಯ

ಜೇಟ್ ಮಾಯ್ ಮಾತಾ ದೇವಾಲಯವು ರಾಯ್‍ಪುರಕ್ಕೆ 58 ಕಿ.ಮೀ ದೂರದಲ್ಲಿದೆ. ಈ ದೇವಾಲಯವನ್ನು ಪೂರ್ತಿಯಾಗಿ ಗ್ರಾನೈಟ್ ಕಲ್ಲಿನ ಸಹಾಯದಿಂದ ನಿರ್ಮಾಣ ಮಾಡಿದ್ದಾರೆ. ದೇವಾಲಯದ ಪಕ್ಕದಲ್ಲಿಯೇ ಅದ್ಭುತವಾಗಿರುವ ಜಲಪಾತವನ್ನು ಕಣ್ಣುತುಂಬಿಕೊಳ್ಳಬಹುದು.

ಜೇಟ್ ಮಾಯ್ ದೇವಾಲಯ

ಜೇಟ್ ಮಾಯ್ ದೇವಾಲಯ

ದೇವಾಲಯಕ್ಕೆ ತೆರಳುತ್ತಿದ್ದಂತೆ ಜಲಪಾತವು ಭಕ್ತರ ಪಾಪಗಳನ್ನು ತೊಳೆಯುತ್ತದೆ. ಲಯ ಬದ್ಧವಾದ ವೇಗದಲ್ಲಿ, ಸ್ವರಬದ್ಧವಾದ ನಾದದಲ್ಲಿ ಜಲಪಾತವು ದೇವಾಲಯದಲ್ಲಿ ಪ್ರವೇಶಿಸುವ ಭಕ್ತರನ್ನು ಪುನೀತರನ್ನಾಗಿ ಮಾಡುತ್ತದೆ. ಪ್ರಕೃತಿ ಸೌಂದರ್ಯವನ್ನು ಕಂಡು ಪರವಶಗೊಳ್ಳುವ ಭಕ್ತರು ಜೇಟ್ ಮಾಯ್ ಮಾತಾಳ ದರ್ಶನವನ್ನು ಮಾಡಿಕೊಳ್ಳುತ್ತಿದ್ದಂತೆ, ಇದ್ದಕ್ಕಿದ್ದಂತೆ ಭಕ್ತಿಯು ಉದ್ಭವಿಸುತ್ತದೆ.

ಜೇಟ್ ಮಾಯ್ ದೇವಾಲಯ

ಜೇಟ್ ಮಾಯ್ ದೇವಾಲಯ

ಈ ಪುಣ್ಯ ಕ್ಷೇತ್ರವು ದಟ್ಟವಾದ ಅರಣ್ಯದ ಮಧ್ಯೆಯಲ್ಲಿ ನೆಲೆಸಿರುವ ಜೇಟ್ ಮಾಯ್ ಮಾತಾ, ಕೋರಿದ ಕೋರಿಕೆಗಳೆಲ್ಲಾವನ್ನು ಈಡೇರಿಸುತ್ತಾಳೆ ಎಂಬುದು ಭಕ್ತರ ದೃಢವಾದ ನಂಬಿಯೇ ಆಗಿದೆ. ಈ ತಾಯಿಯ ದೇವಾಲಯದ ನಿರ್ಮಾಣವು ಕೂಡ ವಿಶೇಷತೆಯನ್ನು ಹೊಂದಿದೆ.

ಜೇಟ್ ಮಾಯ್ ದೇವಾಲಯ

ಜೇಟ್ ಮಾಯ್ ದೇವಾಲಯ

8 ಚಿಕ್ಕ ಸ್ತಂಭಗಳ ಆಧಾರವಾಗಿ ಒಂದು ಕ್ರಮಕೃತಿಯಲ್ಲಿ ನೋಡಿದ ತಕ್ಷಣವೇ ಆಕರ್ಷಿತಗೊಳ್ಳುವಂತೆ ಇರುತ್ತದೆ. ದೇವಿಯ ಅದ್ವಿತೀಯ ಶಕ್ತಿ, ಪ್ರಕೃತಿ ರಮಣೀಯತೆ ಪ್ರವಾಸಿಗರನ್ನು ಸಮೋಹಿತರನ್ನಾಗಿಸುತ್ತದೆ. ಈ ತಾಯಿಯ ದರ್ಶನಕ್ಕೆ ಸೆಪ್ಟೆಂಬರ್‍ನಿಂದ ಡಿಸೆಂಬರ್‍ವರೆಗೆ ಅತ್ಯುತ್ತಮವಾದ ಕಾಲಾವಧಿಯಾಗಿದೆ.

ಜೇಟ್ ಮಾಯ್ ದೇವಾಲಯ

ಜೇಟ್ ಮಾಯ್ ದೇವಾಲಯ

ಹಾಗೇಯೇ ಛತ್ತಿಸ್‍ಘಡ್‍ನಲ್ಲಿ ಇರುವ ಮತ್ತೊಂದು ಅದ್ಭುತವೆನೆಂದರೆ ಅದು ಬಮಲೇಶ್ವರಿ ಮಾತಾ ದೇವಾಲಯ. ಈ ದೇವಾಲಯವು ಸುಮಾರು 2200 ವರ್ಷಗಳ ಹಿಂದೆ ನಿರ್ಮಾಣ ಮಾಡಿದರು ಎಂದು ಅಲ್ಲಿನ ಸ್ಥಳೀಯರು ಹೇಳುತ್ತಾರೆ. ರಾಯ್‍ಪುರಕ್ಕೆ 110 ಕಿ.ಮೀ ದೂರದಲ್ಲಿ ಡೋಂಗ್ರದ ಸಮೀಪದಲ್ಲಿದೆ.

ಜೇಟ್ ಮಾಯ್ ದೇವಾಲಯ

ಜೇಟ್ ಮಾಯ್ ದೇವಾಲಯ

ಆ ಕಾಲದಲ್ಲಿ ಆ ಪ್ರದೇಶವನ್ನು ಪಾರಿಪಾಲನೆ ಮಾಡಿದ ರಾಜ ವೀರಸೇನ ಮಹಾರಾಜನಿಗೆ ಸಂತಾನ ಇಲ್ಲದೇ ಇದ್ದ ಕಾರಣ ಚಿಂತೆಗೆ ಒಳಗಾಗಿ ಆರೋಗ್ಯದಲ್ಲಿ ಏರುಪೇರಾಯಿತು. ಆಸ್ಥಾನ ಪುರೋಹಿತರ ಸೂಚನೆಯ ಮೇರೆಗೆ ಬಮಲೇಶ್ವರಿ ಮಾತಳನ್ನು ತ್ರಿಕಾಲವು ಆರ್ಚನೆ ಮಾಡಿದನು ವೀರಸೇನ ಮಹಾರಾಜ.

ಜೇಟ್ ಮಾಯ್ ದೇವಾಲಯ

ಜೇಟ್ ಮಾಯ್ ದೇವಾಲಯ

ಆತನ ಭಕ್ತಿಗೆ ಮೆಚ್ಚಿದ ಬಮಲೇಶ್ವರಿ ಅಮ್ಮ, ಗಂಡು ಮಗಯುವನ್ನು ಪ್ರಸಾಸಿದಳು. ಆ ಮಗುವಿಗೆ ಮದನ್ ಸೇನ್ ಎಂಬ ಹೆಸರನ್ನು ಇಟ್ಟು, ಅತ್ಯಂತ ಮುದ್ದಾಗಿ ಬೆಳೆಸಿದರು. ಬಮಲೇಶ್ವರಿ ಮಾತಾಳಿಗೆ ಕೃತಜ್ಞತೆ ಪೂರ್ವವಾಗಿ ಒಂದು ದೊಡ್ಡ ದೇವಾಲಯವನ್ನು ನಿರ್ಮಾಣ ಮಾಡಿದನು.

ಜೇಟ್ ಮಾಯ್ ದೇವಾಲಯ

ಜೇಟ್ ಮಾಯ್ ದೇವಾಲಯ

ಇದೆ ಅಲ್ಲದೇ ಬಮಲೇಶ್ವರಿ ದೇವಾಲಯದ ಕುರಿತು ಮತ್ತೊಂದು ವಿಶೇಷವಾದ ಕಥೆಯು ಕೂಡ ಇದೆ. ಒಂದು ಕಾಲದಲ್ಲಿ ಆ ಪ್ರದೇಶದಲ್ಲಿ ರಾಜ ವಿಕ್ರಮಾಧಿತ್ಯ, ಮನೋವೇದನೆಯಿಂದ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನ ಮಾಡಿದನಂತೆ. ಆ ಸಮಯದಲ್ಲಿ ಬಮಲೇಶ್ವರಿ ಮಾತಾ ಪ್ರತ್ಯಕ್ಷವಾಗಿ ಆತನ ಮನೋ ವ್ಯಾಕೂಲವನ್ನು ನೆರವೇರಿಸಿ ಹಿತ ಭೋದನೆಯನ್ನು ಮಾಡಿದಳಂತೆ.

ಜೇಟ್ ಮಾಯ್ ದೇವಾಲಯ

ಜೇಟ್ ಮಾಯ್ ದೇವಾಲಯ

ಹೀಗಾಗಿ ವಿಕ್ರಮಾದಿತ್ಯ, ಬಮಲೇಶ್ವರಿ ದೇವಾಲಯವನ್ನು ಅದ್ಭುತವಾಗಿ ನಿರ್ಮಾಣ ಮಾಡಿದನಂತೆ. ಅದೆನೇ ಆದರೂ ಕೂಡ ಬಮಲೇಶ್ವರಿ ಗುಡ್ಡದ ಮೇಲೆ ನೆಲೆಸಿರುವ ಈ ತಾಯಿ ಸಲಕ ಜೀವರಾಶಿಯನ್ನು ಹರಸುತ್ತಿದ್ದಾಳೆ. ಈ ತಾಯಿಯನ್ನು ಪ್ರತಿಯೊಬ್ಬರು ದರ್ಶನ ಮಾಡಲೇಬೇಕು. ಈ ತಾಯಿಯನ್ನು ಕಾಣಬೇಕಾದರೆ 1000 ಮೆಟ್ಟಿಲುಗಳನ್ನು ಏರಲೇಬೇಕು.

ಜೇಟ್ ಮಾಯ್ ದೇವಾಲಯ

ಜೇಟ್ ಮಾಯ್ ದೇವಾಲಯ

ಭೂಮಿಗೆ 1600 ಅಡಿ ಎತ್ತರದಲ್ಲಿರುವ ಈ ಬಮಲೇಶ್ವರಿ ದೇವಿ ದೇವಾಲಯವು ಅತ್ಯಂತ ಪವಿತ್ರವಾದುದು ಎಂದು ನಂಬಲಾಗಿದೆ. ಈ ದೇವಾಲಯಕ್ಕೆ ಭೇಟಿ ನೀಡಲು ಹೆಚ್ಚಾಗಿ ಟ್ರೆಕ್ಕಿಂಗ್ ಪ್ರೇಮಿಗಳು ಉತ್ಸಹವನ್ನು ತೋರುತ್ತಾರೆ. ಒಮ್ಮೆ ಈ ತಾಯಿಯ ದರ್ಶನ ಮಾಡಿ ಬನ್ನಿ...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X