» »ಜ್ವಾಲೆಯ ಸ್ವರೂಪದಲ್ಲಿ ಆದಿ ಶಕ್ತಿಯ ದರ್ಶನ ಭಾಗ್ಯ ಪಡೆಯಿರಿ

ಜ್ವಾಲೆಯ ಸ್ವರೂಪದಲ್ಲಿ ಆದಿ ಶಕ್ತಿಯ ದರ್ಶನ ಭಾಗ್ಯ ಪಡೆಯಿರಿ

Written By:

ಶಿವ ಪಾರ್ವತಿಯವರ ದಾಂಪತ್ಯ ಅತ್ಯಂತ ಮಧುರವಾದದು. ಇವರ ಜೋಡಿಯ ಬಗ್ಗೆ ಹಿಂದೂ ಧರ್ಮದಲ್ಲಿ ಪುರಾಣಗಳಲ್ಲಿ ಹಲವಾರು ಕಥೆಗಳಿವೆ. ಹೆಣ್ಣು ಎಂದು ಕೇವಲವಾಗಿ ಕಾಣುವ ಈ ಕಲಿಯುಗದಲ್ಲಿಯೂ ಜಗತ್ ಸಂರಕ್ಷಕನಾದ ಮಹಾ ಶಿವನು ಅರ್ಥನಾರೀಶ್ವರನಾಗಿ ಮಾನವರೆಲ್ಲರೂ ಸಮಾನರು ಎಂಬ ಸಂದೇಶವನ್ನು ನೀಡಿದ್ದಾನೆ.

ಶಿವನ ಹೆಂಡತಿ ಪಾರ್ವತಿ ಎಂಬುದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವ ವಿಷಯವೇ. ಆದರೆ ಆದಿ ಶಕ್ತಿ ಸ್ವರೂಪಿಗಳಾದ ಪಾರ್ವತಿ, ಉಮಾ, ದುರ್ಗಾ ಮತ್ತು ಕಾಳಿ. ಇವರು ಕೂಡ ಶಿವನ ಪತ್ನಿಯರೇ. ಪಾರ್ವತಿ ಪ್ರೀತಿ ಮತ್ತು ಪ್ರಣಯದ ದೇವತೆ, ಊಮಾ ದೇವಿ ತಾಯ್ತನದ ದೇವತೆ, ದುರ್ಗಾ ನ್ಯಾಯದ ದೇವತೆ ಹಾಗೂ ಕೊನೆಯ ದೇವತೆಯಾದ ಕಾಳಿಯು ಸಾವಿನ ದೇವತೆಯಾಗಿದ್ದಾಳೆ.

ಸಾಧಾರಣಾವಾಗಿ ಪಾರ್ವತಿ ಸ್ವರೂಪಿಯೇ ಈ ಆದಿ ಶಕ್ತಿಗಳು ಎಂದು ತಿಳಿದುಕೊಂಡಿದ್ದೀರಾ ಅಲ್ಲವೇ? ಅದು ಒಂದು ರೀತಿಯಲ್ಲಿ ಸರಿಯೇ ಆದರೆ ಆ ಆದಿ ಶಕ್ತಿಯು ಹೇಗೆ ಇಷ್ಟೊಂದು ರೂಪ ತಾಳಿದಳು ಎಂದು ಕೆಲವರಿಗೆ ಮಾತ್ರ ಗೊತ್ತು. ಪಾರ್ವತಿ, ಉಮಾ, ದುರ್ಗಾ ಮತ್ತು ಕಾಳಿಗಳೇ ಅಲ್ಲದೇ ಜ್ವಾಲ ಮುಖಿತಾಯಿ ಕೂಡ ಅತ್ಯಂತ ಶಕ್ತಿವಂತಳು. ಇವರೆಲ್ಲಾ ಪಾರ್ವತಿಯು ಮೃತಳಾದ ನಂತರ ಜನಿಸಿದ ಶಕ್ತಿಗಳು ಅದೇ 108 ಶಕ್ತಿ ಪೀಠಗಳು. ಸಾವಿರಾರು ವರ್ಷಗಳಿಂದ ಜ್ವಾಲೆಯ ರೂಪದಲ್ಲಿ ಆ ಆದಿ ಶಕ್ತಿಯು ಭಕ್ತರಿಗೆ ದರ್ಶನ ನೀಡುತ್ತಾ ಇದ್ದಾಳೆ.

ಎಲ್ಲಿದೆ?

ಎಲ್ಲಿದೆ?

ಈ ಪವಿತ್ರವಾದ ಪುಣ್ಯ ಕ್ಷೇತ್ರವು ಹಿಮಾಚಲ ಪ್ರದೇಶ ರಾಜ್ಯದ ಕಾಂಗ್ರಾ ಜಿಲ್ಲೆಯ ಸಮೀಪದಲ್ಲಿನ ಜ್ವಾಲಾಮುಖಿ ಪಟ್ಟಣದಲ್ಲಿದೆ ಜ್ವಾಲಾ ಜೀ ದೇವಾಲಯವಿದೆ.

PC:YOUTUBE

ಜ್ವಾಲಾಜೀ

ಜ್ವಾಲಾಜೀ

ಈ ಜ್ವಾಲಾಜೀ ದೇವಾಲಯವು ಅತ್ಯಂತ ಪ್ರಾಚೀನವಾದುದು ಹಾಗೂ ಜ್ವಾಲೆಯು ವಿಷ್ಣು ದೇವಿ ಎಂದು ಈ ಬಗ್ಗೆ ಪವಿತ್ರ ಗ್ರಂಥಗಳಾದ ಮಹಾಭಾರತ ಮತ್ತು ಇತರ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. ಇಲ್ಲಿ ನೈಸರ್ಗಿಕವಾದ ಗುಹೆ ಇದೆ ಅಲ್ಲಿ ಜ್ವಾಲೆಯು ಬೆಳಗುತ್ತಾ ಇರುತ್ತದೆ.


PC:YOUTUBE

ಶಕ್ತಿ ಪೀಠ

ಶಕ್ತಿ ಪೀಠ

108 ಶಕ್ತಿ ಪೀಠಗಳಲ್ಲಿ ಈ ದೇವಾಲಯವು ಒಂದಾಗಿದೆ. ಈ ಶಕ್ತಿ ಪೀಠದಲ್ಲಿ ಜ್ವಾಲೆಯನ್ನೇ ದೈವವಾಗಿ ಪರಿಗಣಿಸಲಾಗಿ ಭಕ್ತಿಯಿಂದ ಪೂಜಿಸಲಾಗುತ್ತದೆ. ಜ್ವಾಲಾ ಮಾತೆಯ ದೇವಾಲಯದಲ್ಲಿ 9 ಬಗೆಯ ಜ್ವಾಲೆಗಳಿದ್ದು ನವಶಕ್ತಿಗೆ ಸಮಾನವಾದುದು ಎಂದು ಹೇಳುತ್ತಾರೆ.


PC:YOUTUBE

ಎಣ್ಣೆ

ಎಣ್ಣೆ

ಈ ಪವಿತ್ರವಾದ ಜ್ವಾಲೆಯು ಎಣ್ಣೆ, ಬತ್ತಿ, ತುಪ್ಪ ಯಾವುದೇ ಆಧಾರವಿಲ್ಲದೇ ಸುಮಾರು ಸಾವಿರಾರು ವರ್ಷಗಳಿಂದ ಬೆಳಗುತ್ತಿರುವುದು ಆ ಆದಿ ಶಕ್ತಿಯ ನಿದರ್ಶನವಾಗಿದೆ.


PC:YOUTUBE

ದೇವಾಲಯ

ದೇವಾಲಯ

ಈ ದೇವಾಲಯವು ನಾಲ್ಕು ಮೂಲೆಗಳ ಮೇಲ್ಭಾಗದಲ್ಲಿ ಸಣ್ಣದಾದ ಗುಮ್ಮಟಗಳು ಮತ್ತು ಎಂದಿಗೂ ಹಾರದೇ ಇರುವ ರೀತಿಯಲ್ಲಿ ಜ್ವಾಲೆಯು ಬೆಳಗುತ್ತ ಇರುವುದನ್ನು ಇಲ್ಲಿ ಕಾಣಬಹುದಾಗಿದೆ.


PC:YOUTUBE

ಹಬ್ಬಗಳು

ಹಬ್ಬಗಳು

ಈ ದೇವಾಲಯದಲ್ಲಿ ಪ್ರತಿ ಜುಲೈ ಹಾಗೂ ಆಗಸ್ಟ್ ತಿಂಗಳಿನಲ್ಲಿ ನವರಾತ್ರಿ ಸಮಯದಲ್ಲಿ ಪ್ರತಿವರ್ಷ ಉತ್ಸವ ನಡೆಸಲಾಗುತ್ತದೆ. ಆ ಸಮಯದಲ್ಲಿ ಜ್ವಾಲಾ ಮಾತಾಳನ್ನು ಕಾಣಲು ದೇಶದ ಮೂಲೆ ಮೂಲೆಗಳಿಂದಲೇ ಅಲ್ಲದೇ ವಿದೇಶಗಳಿಂದಲೂ ಕೂಡ ಇಲ್ಲಿ ನಡೆಯುವ ಉತ್ಸವದಲ್ಲಿ ಭಾಗವಹಿಸುತ್ತಾರೆ.


PC:YOUTUBE

ಪುರಾಣ

ಪುರಾಣ

ಪುರಾಣಗಳ ಪ್ರಕಾರ ಹಿಮಾಲಯ ಪರ್ವತಗಳಲ್ಲಿ ರಾಕ್ಷಸರ ಕಾಟ ಹೆಚ್ಚಾಗಿದ್ದು ದೇವರುಗಳನ್ನು ಹಿಂಸಿಸುತ್ತಿದ್ದರು. ಆ ರಾಕ್ಷಸರ ಕಿರುಕುಳ ತಾಳಲಾರದೇ ವಿಷ್ಣು ಹಾಗು ಇತರ ದೇವತೆಗಳೆಲ್ಲಾ ಕೈಜೋಡಿಸಿ ಆ ದುಷ್ಟ ರಾಕ್ಷಸರನ್ನು ಕೊಲ್ಲಲು ನಿರ್ಧರಿಸಿದರು.

PC:YOUTUBE

ಬೆಂಕಿ

ಬೆಂಕಿ

ದೇವತೆಗಳ ಬಲದಿಂದ ಒಂದು ಶಕ್ತಿಯುತವಾದ ಜ್ವಾಲೆಯನ್ನು ನೆಲದಿಂದ ಸೃಷ್ಟಿ ಮಾಡಿದರು. ಆ ಬೆಂಕಿಯಿಂದಲೇ ಚಿಕ್ಕ ಹುಡುಗಿಯು ಹುಟ್ಟಿದಳು. ಅವಳೇ ಆದಿ ಶಕ್ತಿ ಎಂದು ಕರೆಯಲ್ಪಡುವ ಶಕ್ತಿ.


PC:YOUTUBE

ಪ್ರಜಾಪತಿ

ಪ್ರಜಾಪತಿ

ನಂತರ ಪಾರ್ವತಿ ಎಂಬ ಹೆಸರಿನಿಂದ ಪ್ರಜಾಪತಿ ದಕ್ಷನ ಮಗಳಾಗಿ ಬೆಳೆದರು. ತಂದೆಯ ವಿರುದ್ಧವಾಗಿ ಮದುವೆಯನ್ನು ಕೂಡ ಆಗಿ ಶಿವನ ಸಂಗಾತಿಯಾದಳು.

PC:YOUTUBE

ಯಜ್ಞ

ಯಜ್ಞ

ಪ್ರಜಾಪತಿ ದಕ್ಷನು ಯಜ್ಞ ಮಾಡುವಾಗ ಪಾರ್ವತಿಯ ಪತಿ ಮಹಾ ಶಿವನನ್ನು ಅಮಂತ್ರಣ ಮಾಡಿರಲಿಲ್ಲ. ಇದನ್ನು ಪ್ರಶ್ನೆಸಿದ ಪಾರ್ವತಿ ತನ್ನ ಮಗಳು ಎಂದೂ ಕೂಡ ನೋಡದೆ ಪ್ರಜಾಪತಿ ದಕ್ಷನು ಅವಮಾನ ಮಾಡುತ್ತಾನೆ.

PC:YOUTUBE

ಜ್ವಾಲೆ

ಜ್ವಾಲೆ

ಆ ಅವಮಾನವನ್ನು ಸಹಿಸಲಾರದ ಪಾರ್ವತಿಯು ಜ್ವಾಲೆಯಲ್ಲಿ ಬಿದ್ದು ಪ್ರಾಣವನ್ನು ತ್ಯಾಗ ಮಾಡುತ್ತಾಳೆ. ಈ ವಿಷಯ ತಿಳಿದ ಪರಮ ಶಿವನು ಪಾರ್ವತಿಯ ದೇಹವನ್ನು ವಿಷ್ಣುವಿನ ಹತ್ತಿರ ತೆಗೆದುಕೊಂಡು ಹೋಗುತ್ತಾನೆ.


PC:YOUTUBE

ವಿಷ್ಣು

ವಿಷ್ಣು

ಆಗ ವಿಷ್ಣುವು ಶಿವನ ಹೆಗಲ ಮೇಲೆ ಇದ್ದ ಪಾರ್ವತಿಯನ್ನು ತನ್ನ ಸುದರ್ಶನ ಚಕ್ರದಿಂದ 108 ಭಾಗಗಳಾಗಿ ತುಂಡು ತುಂಡಾಗಿ ಕತ್ತರಿಸಿದ. ಪಾರ್ವತಿಯ ಆ ದೇಹದ ಚೂರುಗಳೆಲ್ಲಾ ಹಲವಾರು ಪ್ರದೇಶಗಳಲ್ಲಿ ಬಿದ್ದವು. ಆ ಪ್ರದೇಶಗಳೇ 108 ಶಕ್ತಿ ಪೀಠಗಳಾದವು.

PC:YOUTUBE

ಪಾರ್ವತಿ ವಸ್ತ್ರ

ಪಾರ್ವತಿ ವಸ್ತ್ರ

ಆ ತಾಯಿ ಪಾರ್ವತಿಯ ಇಲ್ಲೇ ಜ್ವಾಲೆಯಲ್ಲಿ ಪ್ರಾಣವನ್ನು ಅರ್ಪಿಸಿದ ಕಾರಣ ಪಾರ್ವತಿ ದೇವಿಯೇ ಜ್ವಾಲೆ ಎಂದು ಭಕ್ತರು ಪೂಜಿಸುತ್ತಾರೆ.


PC:YOUTUBE

ಗೋರಕ್ ಡಿಬ್ಬಿ

ಗೋರಕ್ ಡಿಬ್ಬಿ

ಈ ದೇವಾಲಯದಲ್ಲಿ ಗೋರಕ್ ಡಿಬ್ಬಿ ಎಂದು ಕರೆಯಲ್ಪಡುವ ಕೊಳವಿದೆ. ಅಲ್ಲಿ ಸದಾ ತಂಪಾದ ನೀರು ಇರುತ್ತದೆ. ಆಶ್ಚರ್ಯ ಏನಪ್ಪ ಎಂದರೆ ಜ್ವಾಲೆಯನ್ನು ಆ ಕೊಳದ ಹತ್ತಿರವರುವ ನೀರಿಗೆ ತಾಕಿಸಿದರೆ ನೀರೆಲ್ಲಾ ಜ್ವಾಲೆಯಾಗಿ ಮಾರ್ಪಾಟಾಗುತ್ತದೆ. ಇಂತಹ ದೃಶ್ಯವನ್ನು ಕಾಣಲು ಹಲವಾರು ಭಕ್ತರು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ.

PC:YOUTUBE

ಪ್ರವೇಶ ಸಮಯ

ಪ್ರವೇಶ ಸಮಯ

ಜ್ವಾಲಾ ಜೀ ದರ್ಶನ ಭಾಗ್ಯ ಪಡೆಯಲು ಪ್ರವೇಶ ಸಮಯವೆಂದರೆ ಮುಂಜಾನೆ 5 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಹಾಗೂ ಸಂಜೆ 4 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ.


PC:YOUTUBE

ಸಮೀಪದ ವಿಮಾನ ನಿಲ್ದಾಣ

ಸಮೀಪದ ವಿಮಾನ ನಿಲ್ದಾಣ

ಜ್ವಾಲಾ ಜೀ ದೇವಾಲಯಕ್ಕೆ ತೆರಳಲು ಸಮೀಪದ ವಿಮಾನ ನಿಲ್ದಾಣವೆಂದರೆ ಹಿಮಾಚಲ ಪ್ರದೇಶದ ಧರ್ಮಶಾಲ, ಇಲ್ಲಿಂದ ಜ್ವಾಲಾ ಜೀ ದೇವಾಲಯಕ್ಕೆ ಕೇವಲ 50 ಕಿ,ಮೀ ದೂರದಲ್ಲಿದೆ.

ಸಮೀಪದ ಪ್ರವಾಸಿ ತಾಣಗಳು

ಸಮೀಪದ ಪ್ರವಾಸಿ ತಾಣಗಳು

ಈ ದೇವಾಲಯದ ಬಳಿ ಬ್ರಜೇಶ್ವರಿ ದೇವಾಲಯ, ಕಾಂಗ್ರಾ ಕೋಟೆ, ಕರೇರಿ ಸರೋವರ, ಕಾಂಗ್ರಾ ಆರ್ಟ್ ಮ್ಯೂಸಿಯಂ, ಬಾಯಿಜ್‍ನಾಥ್ ದೇವಾಲಯ, ಚಾಮುಂಡ ದೇವಿ ದೇವಾಲಯ, ಕಾಳೇಶ್ವರ ಮಹಾ ದೇವ್ ದೇವಾಲಯ ಇನ್ನೂ ಹಲವಾರು.

PC:YOUTUBE

Please Wait while comments are loading...