Search
  • Follow NativePlanet
Share
» »ಜಂತರ್ ಮಂತರ್ : ಪುರಾತನ ತಾರಾಲಯ

ಜಂತರ್ ಮಂತರ್ : ಪುರಾತನ ತಾರಾಲಯ

By Vijay

ಜಂತರ್ ಎಂದರೆ ಯಂತ್ರ ಎಂತಲೂ, ಮಂತರ್ ಎಂದರೆ ಸೂತ್ರ ಎಂತಲೂ ಅರ್ಥವಿದೆ. ಹೀಗಾಗಿ ಜಂತರ್ ಮಂತರ್ ಎಂದರೆ ಕನ್ನಡದಲ್ಲಿ "ಲೆಕ್ಕಾಚಾರದ ಯಂತ್ರ" ಎಂದು ಅರ್ಥೈಸಿಕೊಳ್ಳಬಹುದಾಗಿದೆ. ಇದೊಂದು ಖಗೋಳ ಶಾಸ್ತ್ರಕ್ಕೆ ಸಂಬಂಧಿಸಿದ ರಚನೆಗಳ ಸಂಗ್ರಹವಾಗಿದೆ.

ಪ್ರಸ್ತುತ, ರಾಜಸ್ಥಾನದ ಜೈಪುರ ಹಾಗೂ ದೇಶದ ರಾಜಧಾನಿ ದೆಹಲಿಯಲ್ಲಿ ಜಂತರ್ ಮಂತರ್ ಗಳನ್ನು ಕಾಣಬಹುದಾಗಿದ್ದು, ಜೈಪುರದಲ್ಲಿರುವ ಜಂತರ್ ಮಂತರ್ ದೊಡ್ಡ ಹಾಗೂ ಹೆಚ್ಚು ಹೆಸರುವಾಸಿಯಾಗಿದೆ. ರಜಪೂತ್ ದೊರೆ ಸವಾಯ್ ಜೈಸಿಂಗ್ ಈ ರಚನೆಗಳ ನಿರ್ಮಾಣಕಾರ. ದೇಶದ ಒಟ್ಟು ಐದು ಸ್ಥಳಗಳಲ್ಲಿ ಇಂತಹ ರಚನೆಗಳನ್ನು ಈತ ನಿರ್ಮಿಸಿದ್ದಾನೆ.

ದೆಹಲಿ ಹಾಗೂ ಜೈಪುರ ಹೊರತುಪಡಿಸಿ ಮಥುರಾ, ವಾರಣಾಸಿ ಹಾಗೂ ಉಜ್ಜಯಿನಿಗಳಲ್ಲಿ ಈ ರಚನೆಗಳನ್ನು ಜೈಸಿಂಗನು ನಿರ್ಮಿಸಿದ್ದು ಸುಮಾರು 1724 ರಿಂದ 1735 ರ ಸಮಯದಲ್ಲಿ ಈ ರಚನೆಗಳು ನಿರ್ಮಾಣಗೊಂಡಿವೆ. ಪ್ರಸ್ತುತ, ಲೇಖನವು ಜೈಪುರದಲ್ಲಿರುವ ಜಂತ ಮಂತರ್ ರಚನೆಗಳ ಕುರಿತು ತಿಳಿಸುತ್ತದೆ.

ಜಂತರ್ ಮಂತರ್:

ಜಂತರ್ ಮಂತರ್:

ಜೈಸಿಂಗನು ಖಗೋಳ ಶಾಸ್ತ್ರದಲ್ಲಿ ಅತೀವ ಆಸಕ್ತಿವುಳ್ಳವನಾಗಿದ್ದನು ಹಾಗೂ ಈ ರಚನೆಗಳ ಹಿಂದಿರುವ ಮುಖ್ಯ ಉದ್ದೇಶವೆಂದರೆ ಖಗೋಳಕ್ಕೆ ಸಂಬಂಧಿಸಿದ ವಿಷಯಗಳನ್ನು ಅವಲೋಕಿಸುವುದು ಹಾಗೂ ತಾರಾ ಮಂಡಲದಲ್ಲುಂಟಾಗುವ ಹಲವು ಬದಲಾವಣೆಗಳು, ಗ್ರಹಣಗಳ ಕುರಿತು ತಿಳಿಯುವುದು.

ಚಿತ್ರಕೃಪೆ: McKay Savage

ಜಂತರ್ ಮಂತರ್:

ಜಂತರ್ ಮಂತರ್:

ಈ ಒಂದು ಸಂಗ್ರಹಾಲಯದ ಗುಚ್ಛಕ್ಕೆ ಹಿಂದಿನ ಕಾಲದ ತಾರಾಲಯ ಎಂದೂ ಸಹ ಕರೆಯಭುದು. ಒಟ್ಟು 14 ಬಗೆಯ ಪ್ರಮುಖ ಜಾಮಿತಿಯ (ರೇಖಾಗಣಿತ) ರಚನೆಗಳನ್ನು ಈ ವೀಕ್ಷಣಾಲಯದಲ್ಲಿ ಕಾಣಬಹುದಾಗಿದೆ.

ಚಿತ್ರಕೃಪೆ: Russ Bowling

ಜಂತರ್ ಮಂತರ್:

ಜಂತರ್ ಮಂತರ್:

ವಿವಿಧ ಭಂಗಿ ಹಾಗೂ ಕೋನಗಳಲ್ಲಿ ರಚಿಸಲಾದ ಈ ರಚನೆಗಳನ್ನು ವಿಶ್ಲೇಷಿಸುವ ಮೂಲಕ ಅಂದಿನ ಕಾಲದಲ್ಲಿ ತಾರೆಗಳ ಭ್ರಮಣೆ, ಗ್ರಹಣ, ಭೂಮಿಯ ಪ್ರದಕ್ಷಿಣೆಗಳ ಕುರಿತು ತಿಳಿಯಲಾಗುತ್ತಿತ್ತು.

ಚಿತ್ರಕೃಪೆ: Colin Tsoi

ಜಂತರ್ ಮಂತರ್:

ಜಂತರ್ ಮಂತರ್:

ಇಲ್ಲಿನ ಪ್ರತಿಯೊಂದು ರಚನೆಗಳು ತಮ್ಮದೆ ಆದ ವಿಶೇಷತೆಗಳನ್ನು ಹೊಂದಿದ್ದು, ಯಾವುದೇ ರೀತಿಯ ಚಲನ ವಲನ ಸ್ಥಿತಿಯಲ್ಲಿರದೆ ಸ್ಥಿರವಾಗಿ ಭೂಮಿಯ ಮೇಲೆ ಸ್ಥಾಪಿಸಲ್ಪಟ್ಟಿವೆ.

ಚಿತ್ರಕೃಪೆ: Arian Zwegers

ಜಂತರ್ ಮಂತರ್:

ಜಂತರ್ ಮಂತರ್:

ಇವುಗಳಲ್ಲಿ ಸಾಮ್ರಾಟ್ ಯಂತ್ರ ಎಂಬ ರಚನೆಯು ಎಲ್ಲಕ್ಕಿಂತ ದೊಡ್ಡದಾಗಿದ್ದು, 90 ಅಡಿಗಳಷ್ಟು ಎತ್ತರವಿದೆ. ಇದರ ಮುಖವು ಜೈಪುರ ನಗರದ ಅಕ್ಷಾಂಶಕ್ಕೆ 27 ಡಿಗ್ರಿಯಷ್ಟು ಕೋನದಲ್ಲಿ ನಿರ್ಮಿಸಲ್ಪಟ್ಟಿದೆ.

ಚಿತ್ರಕೃಪೆ: Russ Bowling

ಜಂತರ್ ಮಂತರ್:

ಜಂತರ್ ಮಂತರ್:

ಈ ರಚನೆಯು ದಿನದ ಸಮಯವನ್ನು ತನ್ನ ನೆರಳಿನ ಮೂಲಕ ಕರಾರುವಕ್ಕಾಗಿ ತಿಳಿಸುತ್ತದೆ. ಇದರ ಮೇಲಿರುವ ಚಿಕ್ಕದಾದ ಒಂದು ನಿಲ್ಲುವ ಜಾಗವು ಅಂದಿನ ಸಮಯದಲ್ಲಿ ಗ್ರಹಣ ಹಾಗೂ ಮಳೆಯ ಸೂಚನೆಯನ್ನು ಘೋಷಿಸಲು ಬಳಸಲಾಗುತ್ತಿತ್ತು.

ಚಿತ್ರಕೃಪೆ: McKay Savage

ಜಂತರ್ ಮಂತರ್:

ಜಂತರ್ ಮಂತರ್:

ಇಲ್ಲಿನ ಪ್ರತಿಯೊಂದು ರಚನೆಗಳು ಅಳತೆ ಮಾಪಕವನ್ನು ಒಳಗೊಂಡಿವೆ. ಸ್ಥಳೀಯವಾಗಿ ದೊರೆತ ಕಲ್ಲಿನಿಂದಲೆ ನಿರ್ಮಿಸಲಾದ ಈ ರಚನೆಗಳಲ್ಲಿ ಅಳತೆಗಳನ್ನು ಕರಾರುವಕ್ಕಾಗಿ ಮುದ್ರಿಸಲಾಗಿದೆ. 1948 ರಲ್ಲಿ ಇದನ್ನು ರಾಷ್ಟ್ರೀಯ ಸ್ಮಾರಕ ಎಂದು ಘೋಷಿಸಲಾಯಿತು.

ಚಿತ್ರಕೃಪೆ: Richard Moross

ಜಂತರ್ ಮಂತರ್:

ಜಂತರ್ ಮಂತರ್:

ಸಾಮ್ರಾಟ್ ಯಂತ್ರವು (ರಚನೆ) ಸನ್ ಡಯಲ್ (ಸೂರ್ಯನ ಬೆಳಕಿನಿಂದ ಸಮಯ ಹೇಳುವ ಗಡಿಯಾರ) ಜೈಪುರದ ಸಮಯಕ್ಕೆ ಎರಡು ಕ್ಷಣಗಳ ವ್ಯತ್ಯಾಸ ಹೊಂದಿದ್ದು, ಇದರ ನೆರಳು ಪ್ರತಿ ಸೆಕೇಂಡಿಗೆ ಒಂದು ಮಿ.ಮೀ ಗಳಷ್ಟು ದೂರ ಚಲಿಸುತ್ತದೆ.

ಚಿತ್ರಕೃಪೆ: David Brossard

ಜಂತರ್ ಮಂತರ್:

ಜಂತರ್ ಮಂತರ್:

ಇಂದಿಗೂ ಹಲವು ಜ್ಯೋತಿಷಿಗಳಿಂದ ಈ ರಚನೆಗಳು ಮದುವೆ ಮುಂಜಿಯಂತಹ ಶುಭ ಕಾರ್ಯಗಳಿಗೆ ಶುಭ ದಿನಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಗಳಿಗೆ ಉಪಯೋಗಿಸಲ್ಪಡುತ್ತವೆ.

ಚಿತ್ರಕೃಪೆ: Richard Moross

ಜಂತರ್ ಮಂತರ್:

ಜಂತರ್ ಮಂತರ್:

ಅಲ್ಲದೆ ಜ್ಯೋತಿಷ್ಯ ಹಾಗೂ ವೇದ ಜ್ಯೋತಿಷ್ಯ ಕಲಿಯುತ್ತಿರುವ ವಿದ್ಯಾರ್ಥಿಗಳ ಪಾಲಿಗೆ ಇದು ಭೇಟಿ ನೀಡಲೇಬೇಕಾದ ತಾಣವಾಗಿದೆ. ವೇದಗಳಲ್ಲಿ ನಮಗಿರುವ ನಂಬಿಕೆಯನ್ನು ಪ್ರಚುರಪಡಿಸುವಂತಹ ರಚನೆ ಇದಾಗಿದ್ದು ಭವ್ಯ ಭಾರತದ ಪುರಾತನ ಜ್ಞಾನದ ಪರಿಚಯ ಇಲ್ಲಿ ಭೇಟಿ ನೀಡಿದಾಗ ನಮಗುಂಟಾಗುತ್ತದೆ.

ಚಿತ್ರಕೃಪೆ: Jean-Pierre Dalbéra

ಜಂತರ್ ಮಂತರ್:

ಜಂತರ್ ಮಂತರ್:

ಹೀಗೆ ಉತ್ತರ ಭಾರತದಲ್ಲಿ ಐದು ಜಂತರ್ ಮಂತರ್ ಗಳನ್ನು ನೋಡಬಹುದಾಗಿದ್ದು ಅವುಗಳಲ್ಲಿ ಜೈಪುರ ಹಾಗೂ ದೆಹಲಿಯ ಜಂತರ್ ಮಂತರ್ ಗಳು ಪ್ರಮುಖವಾಗಿವೆ ಮತ್ತು ಪ್ರಸಿದ್ಧಿ ಪಡೆದ ಪ್ರವಾಸಿ ಆಕರ್ಷಣೆಗಳಾಗಿವೆ.

ಚಿತ್ರಕೃಪೆ: Ryan

ಜಂತರ್ ಮಂತರ್:

ಜಂತರ್ ಮಂತರ್:

ಜೈಪುರವು ರಾಜಸ್ಥಾನದ ರಾಜಧಾನಿ ಪಟ್ಟಣವಾಗಿದ್ದು, ಭಾರತದ ಬಹುತೇಕ ಎಲ್ಲ ಮಹಾನಗರಗಳಿಂದ ಇಲ್ಲಿಗೆ ಸುಲಭವಾಗಿ ತೆರಳಬಹುದು. ಇಲ್ಲಿಗೆ ತೆರಳುವ ಕುರಿತು ಹೆಚ್ಚಾಗಿ ತಿಳಿಯಬೇಕಿದ್ದರೆ ಇಲ್ಲಿ ಕ್ಲಿಕ್ ಮಾಡಿ.

ಚಿತ್ರಕೃಪೆ: Ryan

ಜಂತರ್ ಮಂತರ್:

ಜಂತರ್ ಮಂತರ್:

ಜಂತರ್ ಮಂತರ್ ಪುರಾತನ ತಾರಾಲಯದ ಕೆಲವು ಚಿತ್ರಗಳು.

ಚಿತ್ರಕೃಪೆ: Richard Moross

ಜಂತರ್ ಮಂತರ್:

ಜಂತರ್ ಮಂತರ್:

ಜಂತರ್ ಮಂತರ್ ಪುರಾತನ ತಾರಾಲಯದ ಕೆಲವು ಚಿತ್ರಗಳು.

ಚಿತ್ರಕೃಪೆ: Ashley Coates

ಜಂತರ್ ಮಂತರ್:

ಜಂತರ್ ಮಂತರ್:

ಜಂತರ್ ಮಂತರ್ ಪುರಾತನ ತಾರಾಲಯದ ಕೆಲವು ಚಿತ್ರಗಳು.

ಚಿತ್ರಕೃಪೆ: Marc Tarlock

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X