Search
  • Follow NativePlanet
Share
» »ಶಿವಪಾರ್ವತಿ ಇರುವ ಈ ದೇವಾಲಯದಲ್ಲಿ ಮದುವೆ ನಡೆಯೋದಿಲ್ಲ ಯಾಕೆ?

ಶಿವಪಾರ್ವತಿ ಇರುವ ಈ ದೇವಾಲಯದಲ್ಲಿ ಮದುವೆ ನಡೆಯೋದಿಲ್ಲ ಯಾಕೆ?

ತಿರುಚಿನಾಪಳ್ಳಿಯಲ್ಲಿರುವ ಜಂಬುಕೇಶ್ವರ ದೇವಾಲಯವು ತಮಿಳುನಾಡಿನಲ್ಲಿರುವ ಅತ್ಯಂತ ಪ್ರಸಿದ್ಧ ಶಿವ ದೇವಾಲಯವಾಗಿದೆ. ಈ ಮಂದಿರವು ಸುಮಾರು 1800 ವರ್ಷಗಳ ಹಳೆಯ ದೇವಸ್ಥಾನವಾಗಿದೆ. ಚೋಳ ರಾಜವಂಶದವರು ಈ ಮಂದಿರವನ್ನು ನಿರ್ಮಾಣ ಮಾಡಿದ್ದು. ಇದು ಶ್ರೀರಂಗನಾಥ ಸ್ವಾಮಿ ಮಂದಿರವಿರುವ ಶ್ರೀರಂಗ ದ್ವೀಪದಲ್ಲಿದೆ.

ಮೋಕ್ಷಕ್ಕೆ ಸಂಬಂಧಿಸಿದ ರಹಸ್ಯ; ಏನೀ ಧೇನುಪುರೇಶ್ವರ ದೇವಾಲಯದ ಕಥೆ

ಜಂಬುಕೇಶ್ವರ ದೇವಾಲಯವಯ ತಮಿಳುನಾಡಿನ ಐದು ಶಿವ ದೇವಾಲಯಗಳಲ್ಲಿ ಒಂದಾಗಿದೆ. ಈ ಐದು ಶಿವ ದೇವಾಲಯಗಳು ಐದು ತತ್ವವನ್ನು ಪ್ರತಿನಿಧಿಸುತ್ತದೆ. ಅದರಲ್ಲಿ ಜಂಬುಕೇಶ್ವರ ನೀರನ್ನು ಪ್ರತಿನಿಧಿಸುತ್ತದೆ. ಇಲ್ಲಿ ಅಂತರ್ಗತವಾಗಿ ನೀರಿನ ಜರಿ ಇದೆ. ಹಾಗಾಗಿ ಇಲ್ಲಿ ನೀರಿನ ಕೊರತೆ ಇರೋದಿಲ್ಲ.

ಮಂದಿರಕ್ಕೆ ಸಂಬಂಧಿಸಿರುವ ಪೌರಾಣಿಕ ಕಥೆ

ಮಂದಿರಕ್ಕೆ ಸಂಬಂಧಿಸಿರುವ ಪೌರಾಣಿಕ ಕಥೆ

PC:Ssriram mt

ಈ ಮಂದಿರಕ್ಕೆ ಸಂಬಂಧಿಸಿದಂತೆ ಅನೇಕ ಕಥೆಗಳಿವೆ. ಒಂದು ದಿನ ಪಾರ್ವತಿಯು ಸಮಾಜದ ಸುಧಾರಣೆಗಾಗಿ ಶಿವ ನಡೆಸುತ್ತಿದ್ದ ತಪಸ್ಯವನ್ನು ಹಿಯಾಳಿಸಿದಳು. ಇದರಿಂದ ಶಿವ ಪಾರ್ವತಿಗೆ ಬುದ್ಧಿ ಕಲಿಸಯವ ಸಲುವಾಗಿ ಪಾರ್ವತಿಗೆ ಕೈಲಾಸದಿಂದ ಭೂಲೋಕಕ್ಕೆ ತೆರಳಿ ಅಲ್ಲಿ ತಪಸ್ಸು ಮಾಡುವಂತೆ ತಿಳಿಸುತ್ತಾನೆ.

ಅಖಿಲಾಂಡೇಶ್ವರಿಯಾದ ಪಾರ್ವತಿ

ಅಖಿಲಾಂಡೇಶ್ವರಿಯಾದ ಪಾರ್ವತಿ

PC: Ilya Mauter

ಶಿವನ ಆಜ್ಞೆಯಂತೆ ಪಾರ್ವತಿಯು ಭೂಲೋಕಕ್ಕೆ ಅಖಿಲಾಂಡೇಶ್ವರಿ ರೂಪದಲ್ಲಿ ತೆರಳಿ ಕಾವೇರಿ ನದಿ ತೀರದಲ್ಲಿ ಶಿವಲಿಂಗವನ್ನು ಮಾಡಿ ತಪಸ್ಸು ಪ್ರಾರಂಭಿಸಿದಳು. ಪಾರ್ವತಿ ತಪಸ್ಸಿಗೆ ಮೆಚ್ಚಿ ಶಿವ ಪ್ರತ್ಯಕ್ಷನಾಗಿ ಅಖಿಲಾಂಡೇಶ್ವರಿಗೆ ಶಿವ ಜ್ಞಾನ ನೀಡಿದನು.

ಜಂಬುಕೇಶ್ವರ ಹೆಸರು ಬಂದಿದ್ದು ಹೇಗೆ?

ಜಂಬುಕೇಶ್ವರ ಹೆಸರು ಬಂದಿದ್ದು ಹೇಗೆ?

PC:Hari Prasad Nadig

ಈ ದೇವಾಲಯಕ್ಕೆ ಸಂಬಂಧಿಸಿದ ಇನ್ನೊಂದು ಕಥೆ ಇದೆ. ಮಲಯಾನ ಹಾಗೂ ಪುಷ್ಪದಂತ ಎನ್ನುವ ಇಬ್ಬರು ಶಿವಭಕ್ತರಿದ್ದ ಅವರು ಒಬ್ಬರಿಗೊಬ್ಬರು ಜಗಳವಾಡಿಕೊಂಡು ಮಲಯಾನ ಪುಷ್ಪದಂತನಿಗೆ ಭೂಮಿಯ ಮೇಲೆ ಆನೆಯಾಗುವ ಶಾಪ ನೀಡಿದ,. ಹಾಗೆಯೇ ಮಲಯಾನ ಜೇಡನಾಗುವ ಶಾಪ ಸಿಕ್ಕಿತು. ಆನೆ ಹಾಗೂ ಜೇಡ ಎರಡೂ ಜಂಬುಕೇಶ್ವರಕ್ಕೆ ತಲುಪಿ ಅಲ್ಲಿ ಶಿವನ ಪೂಜೆ ಮಾಡಲಾರಂಭಿಸಿದರು. ಆನೆ ಕಾವೇರಿನ ನದಿಯಿಂದ ನೀರು ತೆಗೆದು ಶಿವಲಿಂಗಕ್ಕೆ ಜಲಾಭಿಷೇಕ ಮಾಡಿದ್ರೆ . ಜೇಡ ತನ್ನ ಶಿವ ಭಕ್ತಿ ತೋರಿಸಲು ಶಿವಲಿಂಗದ ಮೇಲೆ ಸೂರ್ಯನ ತೀವೃ ಕಿರಣ ಬೀಳದಂತೆ ಹಾಗೂ ಮರದ ಒಣಗಿದ ಎಲೆ ಬೀಳದಂತೆ ಬಲೆಯನ್ನು ಹೆಣೆಯಿತು.

ಆನೆಯನ್ನು ಕೊಂದ ಜೇಡ

ಆನೆಯನ್ನು ಕೊಂದ ಜೇಡ

PC: Hari Prasad Nadig

ಶಿವಲಿಂಗದ ಮೇಲೆ ಜೇಡರ ಬಲೆಯನನ್ನು ನೋಡಿದ ಆನೆ ಅದು ಏನೋ ಕಸವೆಂದು ತಿಳಿದುಅದರ ಮೇಲೆ ಜಲಾಭಿಷೇಕ ಮಾಡಿ ಶಿವಲಿಂಗವನ್ನು ಶುಚಿಗೊಳಿಸಿತು. ಇದರಿಂದ ಕೋಪಗೊಂಡ ಜೇಡ ಆನೆಯ ಸೊಂಡಿಲಿನ ಒಳಕ್ಕೆ ಹೊಕ್ಕು ಆನೆಯನ್ನು ಸಾಯಿಸಿತು. ಜೊತೆಗೆ ಜೇಡವೂ ಸತ್ತಿತು. ಜಂಬುಕೇಶ್ವರ ಈ ಇಬ್ಬರ ಭಕ್ತಿಗೆ ಮೆಚ್ಚಿ ಅವರಿಬ್ಬರು ಶಾಪಮುಕ್ತರಾಗುತ್ತಾರೆ. ಆನೆಯ ಮೂಲಕ ಶಿವನ ಪೂಜೆ ಮಾಡುತ್ತಿದ್ದ ಕಾರಣ ತಿರುವನೈ ಕೋವಿಲ್ ಎನ್ನುವ ಹೆಸರು ಬಂತು.

ವಾಸ್ತುಕಲೆ

ವಾಸ್ತುಕಲೆ

PC:Hari Prasad Nadig

ಜಂಬುಕೇಶ್ವರ ಮಂದಿರದ ವಾಸ್ತುಕಲೆಯು ಶ್ರೀರಂಗನಾಥ ಸ್ವಾಮಿ ಮಂದಿರದ ವಾಸ್ತುಕಲೆಗಿಂತಲೂ ಸುಂದರವಾಗಿದೆ. ಈ ಎರಡೂ ದೇವಸ್ಥಾನವನ್ನು ಒಂದೇ ಸಮಯದಲ್ಲಿ ಮಾಡಲಾಗಿತ್ತು. ಇಲ್ಲಿ ಐದು ಪರಿಸರಗಳಿವೆ. ಐದನೇ ಪರಿಸರದಲ್ಲಿ ದೊಡ್ಡ ಗೋಡೆ ಇದೆ. ಕಥೆಗಳ ಪ್ರಕಾರ ಇಲ್ಲಿನ ಗೋಡೆಯನ್ನು ಶಿವನು ಕೆಲಸಗಾರರ ಜೊತೆ ಸೇರಿ ನಿರ್ಮಿಸಿದ್ದನು. 4ನೇ ಪರಿಸರದಲ್ಲಿ 769ಸ್ಥಂಭಗಳು ಇವೆ. ಜೊತೆಗೆ ಜಲಕುಂಡವೂ ಇದೆ. ಮೂರನೇ ಪರಿಸರದಲ್ಲಿ ಗೋಪುರವಿದೆ. ಅದು 73 ಹಾಗೂ 100 ಫೀಟ್ ಉದ್ದವಿದೆ.

ಈ ಮಂದಿರದಲ್ಲಿ ವಿವಾಹ ನಡೆಯೋದಿಲ್ಲ

ಈ ಮಂದಿರದಲ್ಲಿ ವಿವಾಹ ನಡೆಯೋದಿಲ್ಲ

ಈ ಮಂದಿರದಲ್ಲಿ ಮೂರ್ತಿಗಳನ್ನು ಒಂದಕ್ಕೊಂದು ವಿರುದ್ಧವಾಗಿ ಪ್ರತಿಷ್ಠಾಪಿಸಲಾಗಿದೆ. ಈ ರೀತಿಯ ಮಂದಿರಗಳನ್ನು ಉಪದೇಶ ಸ್ಥಳ ಎನ್ನಲಾಗುತ್ತದೆ. ಈ ಮಂದಿರದಲ್ಲಿ ಪಾರ್ವತಿ ದೇವಿಯು ಶಿಷ್ಯೆಯಾಗಿ ಹಾಗೂ ಜಂಬುಕೇಶ್ವರ ಗುರುವಿನ ರೂಪದಲ್ಲಿ ಪೂಜಿಸಲಾಗುತ್ತಿದೆ. ಇಲ್ಲಿ ತಿರು ಕಲ್ಯಾಣ ಅಂದರೆ ವಿವಾಹ ಕಾರ್ಯ ನಡೆಯೋದಿಲ್ಲ.

ತಲುಪುವುದು ಹೇಗೆ?

ತಲುಪುವುದು ಹೇಗೆ?

ಶಿವನ ಈ ಅದ್ಭುತ ಮಂದಿರವು ತಮಿಳುನಾಡಿನ ತಿರುಚಿನಾಪಳ್ಳಿಯಲ್ಲಿದೆ. ಇಲ್ಲಿಗೆ ನೀವು ವಿಮಾನದ ಮೂಲಕ ಹೋಗುವುದಾದರೆ ಸಮೀಪದ ವಿಮಾನ ನಿಲ್ದಾಣ ತಿರುಚಿನಾಪಳ್ಳಿ ಏರ್‌ಪೋರ್ಟ್. ರೈಲು ಮುಖಾಂತರ ಹೋಗುವುದಾದರೂ ತಿರುಚಿನಾಪಳ್ಳಿ ರೈಲ್ವೆ ಸ್ಟೇಶನ್ ಮೂಲಕ ಹೋಗಬಹುದು. ಬಸ್ ಮೂಲಕವೂ ಇಲ್ಲಿಗೆ ತಲುಪಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more