Search
  • Follow NativePlanet
Share
» » ನೀರಿನಿಂದ ಶಿವಲಿಂಗ ಮಾಡಿ ಪಾರ್ವತಿ ಶಿವನನ್ನು ಪೂಜಿಸಿದ್ದು ಇಲ್ಲೇ

ನೀರಿನಿಂದ ಶಿವಲಿಂಗ ಮಾಡಿ ಪಾರ್ವತಿ ಶಿವನನ್ನು ಪೂಜಿಸಿದ್ದು ಇಲ್ಲೇ

ಹಿಂದೂ ಪುರಾಣಗಳ ಪ್ರಕಾರ ಪಂಚಭೂತಗಳಾದ ಗಾಳಿ, ನೀರು, ಬೆಂಕಿ, ಭೂಮಿ, ಆಕಾಶಗಳ ಪ್ರತೀಕವಾಗಿ ಪರಶಿವನು ಭೂಮಂಡಲದಲ್ಲಿ ಐದು ಕ್ಷೇತ್ರಗಳಲ್ಲಿ ನೆಲೆಸಿದ್ದಾನೆ. ಈ ಐದು ಕ್ಷೇತ್ರಗಳನ್ನು ಒಟ್ಟಾಗಿ ಪಂಚಭೂತಗಳು ಎನ್ನುತ್ತಾರೆ. ಆ ಐದು ಕ್ಷೇತ್ರಗಳು ಯಾವುವು ಅನ್ನೋದು ನಿಮಗೆ ಗೊತ್ತಾ?

 ಐದು ಕ್ಷೇತ್ರಗಳು ಯಾವುವು?

ಐದು ಕ್ಷೇತ್ರಗಳು ಯಾವುವು?

PC: Hari Prasad Nadig

ತುಲಾ ರಾಶಿಯವರು ಈ ವರ್ಷ ಈ ಸ್ಥಳಗಳಿಗೆ ಪ್ರವಾಸ ಹೋಗೋದು ಒಳ್ಳೆಯದುತುಲಾ ರಾಶಿಯವರು ಈ ವರ್ಷ ಈ ಸ್ಥಳಗಳಿಗೆ ಪ್ರವಾಸ ಹೋಗೋದು ಒಳ್ಳೆಯದು

 ಜಂಬುಕೇಶ್ವರ ದೇವಾಲಯ

ಜಂಬುಕೇಶ್ವರ ದೇವಾಲಯ

PC: Ssriram mt

ಪಂಚಭೂತ ಕ್ಷೇತ್ರಗಳಲ್ಲಿ ಎರಡನೇಯದು ಜಂಬುಕೇಶ್ವರ ದೇವಾಲಯ. ಇದು ತಮಿಳುನಾಡಿನ ತಿರುಚ್ಚಿಯಿಂದ ಸುಮಾರು 11 ಕಿ.ಮೀ ದೂರದಲ್ಲಿದೆ. ಚೋಳರು ಈ ದೇವಾಲಯವನ್ನು ನಿರ್ಮಿಸಿದ್ದು, ಪಲ್ಲವರು, ಪಾಂಡ್ಯರು, ವಿಜಯನಗರದ ರಾಜರು ಈ ದೇವಾಲಯ ನಿರ್ಮಾಣಕ್ಕೆ ಸಹಕರಿಸಿದರರು ಎನ್ನುವುದು ಶಾಸನಗಳು ತಿಳಿಸುತ್ತವೆ.

 ದೇವಾಲಯದ ವಿಶೇಷತೆ ಏನು?

ದೇವಾಲಯದ ವಿಶೇಷತೆ ಏನು?

PC: Ssriram mt

ಈ ದೇವಾಲಯದ ವಿಸ್ಮಯವೆಂದರೆ ಗರ್ಭಗುಡಿಯ ತಲದಿಂದ ಸ್ಪಟಿಕಶುಭ್ರ ನೀರಿನ ಒರತೆಯಿದೆ. ಈ ನೀರನ್ನು ಎಷ್ಟು ಖಾಲಿ ಮಾಡಿದರೂ ಮತ್ತೆ ತುಂಬಿಕೊಳ್ಳುತ್ತಿದ್ದು ನೀರಿನ ಸೆಲೆ ಎಲ್ಲಿದೆಯೆಂದೇ ಗೊತ್ತಾಗದಿರುವುದು ಸ್ಥಳದ ಮಹಾತ್ಮೆಯನ್ನು ಬಣ್ಣಿಸುತ್ತದೆ.

ಅಖಿಲಂಡೇಶ್ವರಿಯಾಗಿ ನೆಲೆಸಿದ ಪಾರ್ವತಿ

ಅಖಿಲಂಡೇಶ್ವರಿಯಾಗಿ ನೆಲೆಸಿದ ಪಾರ್ವತಿ

PC: Hari Prasad Nadig

ಪಾರ್ವತಿಯನ್ನು ಶಪಿಸಿದ ಶಿವ ಈ ಶಾಪವಿಮೋಚನೆಗಾಗಿ ಭೂಮಿಗೆ ತೆರಳಲು ಸೂಚಿಸುತ್ತಾನೆ. ಅಂತೆಯೇ ಭೂಮಿಗೆ ಆಗಮಿಸಿದ ಪಾರ್ವತಿ ಜಂಬೂ ಅರಣ್ಯದಲ್ಲಿ ಅಖಿಲಂಡೇಶ್ವರಿಯ ರೂಪದಲ್ಲಿ ವಾಸಿಸಲು ತೊಡಗುತ್ತಾಳೆ. ಅಲ್ಲಿಯೇ ಕಾವೇರಿಯ ನೀರಿನಿಂದ ಶಿವಲಿಂಗವೊಂದನ್ನು ಸೃಷ್ಟಿಸಿ ಪೂಜಿಸಲು ತೊಡಗುತ್ತಾಳೆ.

ನೀರಿನಿಂದ ಸೃಷ್ಠಿಸಿದ ಶಿವಲಿಂಗ

ನೀರಿನಿಂದ ಸೃಷ್ಠಿಸಿದ ಶಿವಲಿಂಗ

PC: Ilya Mauter

ನೀರಿನಿಂದ ಸೃಷ್ಠಿಸಿದ ಶಿವಲಿಂಗವನ್ನು ಪೂಜಿಸಿದ ಅಖಿಲಂಡೇಶ್ವರಿಗೆ ಶಿವನು ದರ್ಶನ ನೀಡಿ ಶಿವಜ್ಞಾನವನ್ನು ಕರುಣಿಸುತ್ತಾನೆ. ಈ ಉಪದೇಶ ಕರುಣಿಸುವಾಗ ಶಿವನು ಪಶ್ಚಿಮಕ್ಕೂ ಅಖಿಲಂಡೇಶ್ವರಿ ಪೂರ್ವಕ್ಕೂ ಮುಖ ಮಾಡಿರುತ್ತಾರೆ. ಈ ಶಿವಲಿಂಗವಿದ್ದಲ್ಲಿಯೇ ಈ ದೇವಾಲಯವನ್ನು ನಿರ್ಮಿಸಲಾಗಿದೆ ಎಂದು ಪುರಾಣದಲ್ಲಿ ಹೇಳಲಾಗಿದೆ. ನೀರಿನಿಂದ ಸೃಷ್ಟಿಸಲಾದ ಈ ಶಿವಲಿಂಗಕ್ಕೆ ಅಪ್ಪು ಲಿಂಗಂ ಎಂದೂ ಕರೆಯುತ್ತಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X