Search
  • Follow NativePlanet
Share
» »ಕಲಿಯುಗ ಪ್ರಾರಂಭವಾದ ದಿನದಂದು ನೆಲೆಸಿದ ಈ ದೈವ ದರ್ಶನದಿಂದ ಮೋಕ್ಷ...

ಕಲಿಯುಗ ಪ್ರಾರಂಭವಾದ ದಿನದಂದು ನೆಲೆಸಿದ ಈ ದೈವ ದರ್ಶನದಿಂದ ಮೋಕ್ಷ...

ಶ್ರೀರಾಮ ಚಂದರನೇ ಸ್ವಯಂವಾಗಿ ತಾನು ಕಲಿಯುಗ ಪ್ರಾರಂಭವಾಗುವ ದಿನದಂದು ವೆಂಕಟೇಶ್ವರನ ರೂಪದಲ್ಲಿ ಇಲ್ಲಿ ಉದ್ಭವಿಸುತ್ತೇನೆ ಎಂದು ಹೇಳಿದ್ದಾನೆ. ಹೇಳಿದ ಹಾಗೆಯೇ ಈ ಕ್ಷೇತ್ರದಲ್ಲಿ ಕಲಿಯುಗ ಪ್ರಾರಂಭವಾಗುವ ಸಮಯದಲ್ಲಿ ವೆಂಕಟೇಶ್ವರನಾಗು ನೆಲೆಸಿದನು.

By Sowmyabhai

ಶ್ರೀರಾಮ ಚಂದರನೇ ಸ್ವಯಂವಾಗಿ ತಾನು ಕಲಿಯುಗ ಪ್ರಾರಂಭವಾಗುವ ದಿನದಂದು ವೆಂಕಟೇಶ್ವರನ ರೂಪದಲ್ಲಿ ಇಲ್ಲಿ ಉದ್ಭವಿಸುತ್ತೇನೆ ಎಂದು ಹೇಳಿದ್ದಾನೆ. ಹೇಳಿದ ಹಾಗೆಯೇ ಈ ಕ್ಷೇತ್ರದಲ್ಲಿ ಕಲಿಯುಗ ಪ್ರಾರಂಭವಾಗುವ ಸಮಯದಲ್ಲಿ ವೆಂಕಟೇಶ್ವರನಾಗು ನೆಲೆಸಿದನು. ಅದ್ದರಿಂದ ಇಲ್ಲಿರುವ ವೆಂಕಟೇಶ್ವರ ಸ್ವಾಮಿ ವಿಗ್ರಹವು ತಿರುಮಲದಲ್ಲಿನ ವೆಂಕಟೇಶ್ವರ ಸ್ವಾಮಿ ವಿಗ್ರಹಕ್ಕಿಂತ ಪುರಾತನವಾದುದು ಎಂದು ಹೇಳುತ್ತಾರೆ.

ಈ ದೈವವು ಕಲಿಯುಗ ಅಂತ್ಯದವರೆವಿಗೂ ಇರುತ್ತದೆಯಂತೆ. ಒಬ್ಬ ಭಕ್ತನ ಕೋರಿಕೆಯ ಮೇರೆಗೆ ಬೆಟ್ಟದ ಮೇಲಿರುವ ಆ ವೆಂಕಟೇಶ್ವರಸ್ವಾಮಿಯು ಬೆಟ್ಟವನ್ನು ಇಳಿದು ಬಂದನು. ಇಲ್ಲಿಗೆ ಭೇಟಿ ನೀಡಿ ದೈವವನ್ನು ದರ್ಶಿಸಿದರೆ ಮನೆಯಲ್ಲಿ ರಾಮರಾಜ್ಯದಂತೆ ನಿತ್ಯವು ಸುಖ-ಸಂತೋಷದ ಜೊತೆ-ಜೊತೆಗೆ ಐಶ್ವರ್ಯ ಕೂಡ ವೃದ್ಧಿ ಕೂಡ ಆಗುತ್ತದೆ ಎಂದು ಭಕ್ತರ ಪ್ರಬಲವಾದ ವಿಶ್ವಾಸ. ಇಷ್ಟು ವಿಶೇಷತೆಗಳನ್ನು ಹೊಂದಿರುವ ಆ ಪುಣ್ಯಕ್ಷೇತ್ರದ ಬಗ್ಗೆ ಸಂಕ್ಷೀಪ್ತವಾದ ಮಾಹಿತಿಯನ್ನು ಲೇಖನದ ಮೂಲಕ ತಿಳಿಯೋಣ.

1.ಸ್ಥಳ ಪುರಾಣ

1.ಸ್ಥಳ ಪುರಾಣ

PC:YOUTUBE

ಸ್ಥಳ ಪುರಾಣದ ಪ್ರಕಾರ ಅನುಸರಿಸಿ ದಶರಥ ಮಹಾರಾಜನು ಜಾಬಾಲಿ ಎಂಬ ಮಹರ್ಷಿ ಗುರುವಿನ ಸ್ಥಾನದಲ್ಲಿ ಇರುತ್ತಿದ್ದನು. ಆತನಿಗೆ ಶ್ರೀರಾಮ ಚಂದ್ರನೆಂದರೆ ಅತ್ಯಂತ ಪ್ರೇಮ. ಶ್ರೀರಾಮನು ವನವಾಸಕ್ಕೆ ತೆರಳಿದ್ದಾಗ ಆತನು ಅತ್ಯಂತ ನೊಂದುಕೊಂಡನಂತೆ. ಶ್ರೀರಾಮನು ವನವಾಸಕ್ಕೆ ತೆರಳದಂತೆ ಮಾಡಿದ ಎಲ್ಲಾ ಪ್ರಯತ್ನವು ವಿಫಲವಾಯಿತಂತೆ.

2.ಶ್ರೀರಾಮನ ವನವಾಸ

2.ಶ್ರೀರಾಮನ ವನವಾಸ

PC:YOUTUBE

ಆದರೆ ಶ್ರೀರಾಮನು ಮಾತ್ರ ತನ್ನ ದೀಕ್ಷೆಯನ್ನು ಬಿಡಲಿಲ್ಲ. ಇದರಿಂದಾಗಿ ಶ್ರೀರಾಮನು ಇಲ್ಲದ ರಾಜ್ಯದಲ್ಲಿ ತಾನು ಇರುವುದಿಲ್ಲ ಎಂದು ಹೇಳಿ ಜಬಾಲಿ ಮಹರ್ಷಿಯು ದೇಶ ಸಂಚಾರಕ್ಕೆ ಹೊರಟು ಹೋದನಂತೆ. ಈ ಕ್ರಮದಲ್ಲಿ ಖಮ್ಮಂ ಜಿಲ್ಲೆಯಲ್ಲಿ ಪ್ರಸ್ತುತವಿರುವ ಜಮಲಾಪುರ ಎಂದು ಕರೆಯಲಾಗುವ ಪ್ರದೇಶಕ್ಕೆ ಸೇರಿಕೊಳ್ಳುತ್ತಾನೆ.

3.ಮಹರ್ಷಿ ತಪಸ್ಸು

3.ಮಹರ್ಷಿ ತಪಸ್ಸು

PC:YOUTUBE

ಆ ಕಾಲದಲ್ಲಿ ಈ ಪ್ರದೇಶವನ್ನು "ಸೂಚಿಗಿರಿ" ಎಂದು ಕರೆಯುತ್ತಿದ್ದರು. ಅಲ್ಲಿನ ಪ್ರಕೃತಿ ರಮಣೀಯತೆಗೆ ಮಂತ್ರ ಮುಗ್ಧನಾದ ಜಬಾಲಿ ಮಹರ್ಷಿ ಇಲ್ಲಿಯೇ ಶ್ರೀ ರಾಮ ಚಂದ್ರನ ಕುರಿತು ಇಲ್ಲಿ ಒಂದು ಗುಹೆಯಲ್ಲಿ ತಪಸ್ಸು ಮಾಡುತ್ತಾ ಇದ್ದುಬಿಟ್ಟನಂತೆ. ವನವಾಸ ಹಾಗು ರಾವಣ ಸಂಹಾರದ ನಂತರ ಶ್ರೀರಾಮನು ತನ್ನ ಅವತಾರವನ್ನು ಬಿಡಬೇಕಾಗದ ಸಮಯ ಬರುತ್ತದೆ.

4.ಪ್ರತ್ಯಕ್ಷ

4.ಪ್ರತ್ಯಕ್ಷ

PC:YOUTUBE

ಆ ತರುಣದಲ್ಲಿಯೇ ಜಬಾಲಿ ಮಹರ್ಷಿ ತಪಸ್ಸಿಗೆ ಮೆಚ್ಚಿ ಆತನ ಎದುರಲ್ಲಿ ಪ್ರತ್ಯಕ್ಷವಾಗುತ್ತಾನೆ. ಈ ಭೂ ಮಂಡಲ ಇರುವವರೆವಿಗೂ ಇಲ್ಲಿಯೇ ನೆಲೆಸಿರಬೇಕು ಎಂದು ಜಬಾಲಿ ಮಹರ್ಷಿಯು ಕೋರಿಕೊಳ್ಳುತ್ತಾನಂತೆ. ಅದಕ್ಕೆ ಶ್ರೀರಾಮ ಚಂದ್ರನು "ಈಗ ಅದಕ್ಕೆ ಸರಿಯಾದ ಸಮಯವಲ್ಲ" ಎಂದು ಹೇಳುತ್ತಾನೆ.

5.ಕಲಿಯುಗ ಮುಗಿಯುವವರೆವಿಗೂ

5.ಕಲಿಯುಗ ಮುಗಿಯುವವರೆವಿಗೂ

PC:YOUTUBE

ಕಲಿಯುಗ ಪ್ರಾರಂಭವಾದ ದಿನದಂದು ಇಲ್ಲಿ ತಾನು ಸ್ವಯಂಭೂವಾಗಿ ನೆಲೆಸಿ ಆ ಯುಗವು ಮುಗಿಯುವವರೆವಿಗೂ ಇರುತ್ತೇನೆ ಎಂದು ಹೇಳಿ, ಜಬಾಲಿ ಮಹರ್ಷಿಗೆ ಮೋಕ್ಷವನ್ನು ಪ್ರಸಾದಿಸುತ್ತಾನೆ. ಹೇಳಿದ ಮಾತಿನ ಪ್ರಕಾರ ವಿಷ್ಣುವಿನ ಅಂಶವಾದ ಶ್ರೀರಾಮ ಚಂದ್ರನು ವೆಂಕಟೇಶ್ವರ ಸ್ವಾಮಿಯಾಗಿ ಇಲ್ಲಿ ನೆಲೆಸುತ್ತಾನೆ.

6.ತಿರುಮಲಕ್ಕಿಂತ ಪುರಾತನವಾದುದು

6.ತಿರುಮಲಕ್ಕಿಂತ ಪುರಾತನವಾದುದು

PC:YOUTUBE

ತಿರುಮಲದಲ್ಲಿನ ವಿಗ್ರಹಕ್ಕಿಂತ ಇಲ್ಲಿರುವ ಸಾಲಗ್ರಾಮ ವೆಂಕಟೆಶ್ವರಸ್ವಾಮಿಯು ಅತ್ಯಂತ ಪುರಾತನವಾದುದು ಎಂದು ಪುರಾಣಗಳು ಹೇಳುತ್ತದೆ. ವೆಂಕಟೇಶ್ವರ ಸ್ವಾಮಿಯಾಗಿ ನೆಲೆಸಿರುವ ಈ ಗುಹೆಯನ್ನು "ವೈಕುಂಠ ಗುಹೆ" ಎಂದು ಕೂಡ ಕರೆಯುತ್ತಾರೆ.

7.ಸುಖ-ಸಂತೋಷಗಳು

7.ಸುಖ-ಸಂತೋಷಗಳು

PC:YOUTUBE

ಶ್ರೀರಾಮ ಚಂದ್ರನೇ ಇಲ್ಲಿ ವೆಂಕಟೇಶ್ವರ ಸ್ವಾಮಿಯಾಗಿ ನೆಲೆಸಿರುವ ಕಾರಣ, ಇಲ್ಲಿನ ದೈವವನ್ನು ದರ್ಶಿಸಿದವರ ಮನೆಯಲ್ಲಿ ರಾಮರಾಜ್ಯದಂತೆ ನಿತ್ಯವು ಸುಖ-ಸಂತೋಷದ ಜೊತೆ-ಜೊತೆಗೆ ಐಶ್ವರ್ಯ ಕೂಡ ವೃದ್ಧಿ ಕೂಡ ಆಗುತ್ತದೆ ಎಂದು ಭಕ್ತರ ಪ್ರಬಲವಾದ ವಿಶ್ವಾಸ.

8.ಕೈಲಾಸ ಗುಹೆ

8.ಕೈಲಾಸ ಗುಹೆ

PC:YOUTUBE

ಇನ್ನು ಇಲ್ಲಿಯೇ ಕೈಲಾಸ ಗುಹೆ ಕೂಡ ಇದೆ. ದ್ವಾಪರ ಯುಗದಲ್ಲಿ ಅರ್ಜುನ ಪಾಯುಪತಾಸ್ತ್ರಕ್ಕಾಗಿ ಈ ಸೂಚಿಗಿರಿಯ ಪೂರ್ವ ದಿಕ್ಕಿನಲ್ಲಿರುವ ಇಂದ್ರಕೀಲಾದ್ರಿಯ ಮೇಲೆ ತಪಸ್ಸು ಮಾಡಿದ ವಿಷಯದ ಬಗ್ಗೆ ನಮಗೆಲ್ಲಾ ತಿಳಿದಿರುವುದೇ. ಆ ಸಮಯದಲ್ಲಿ ಪರಮೇಶ್ವರನು ಅರ್ಜುನನ ಶಕ್ತಿ ಸಾಮಥ್ರ್ಯವನ್ನು ಪರೀಕ್ಷಿಸಬೇಕು ಎಂದು ಅಂದುಕೊಳ್ಳುತ್ತಾನೆ.

9.ವರಹ ರೂಪ

9.ವರಹ ರೂಪ

PC:YOUTUBE

ಆ ಸಮಯದಲ್ಲಿ ಮೂಕಾಸುರನು ಶಿವನ ಆದೇಶವನ್ನು ಅನುಸಿರಿಸಿ ವರಹರೂಪವನ್ನು ಪಡೆದ ಪ್ರದೇಶವೇ ಈ ಕೈಲಾಸ ಗುಹೆ ಎಂದು ಕರೆಯುತ್ತಾರೆ. ಇಲ್ಲಿಯೇ ಪಾರ್ವತಿ-ಪರಮೇಶ್ವರರು ನೆಲೆಸಿರುತ್ತಾರೆ ಎಂದು ಭಕ್ತರ ನಂಬಿಕೆ. ಅದ್ದರಿಂದಲೇ ಜಮಲಾಪುರಕ್ಕೆ ತೆರಳಿದವರು ಖಚಿತವಾಗಿ ಈ ಗುಹೆಗೂ ಭೇಟಿ ನೀಡುತ್ತಿರುತ್ತಾರೆ.

10.ಪರ್ವತ ಶಿಖರ

10.ಪರ್ವತ ಶಿಖರ

PC:YOUTUBE

ಇದು ಹೀಗೆ ಇದ್ದರೆ, ಇಲ್ಲಿ ನೆಲೆಸಿರುವ ವೆಂಕಟೇಶ್ವರನನ್ನು ಉಪ್ಪಾಲ ನಾರಾಯಣ ಶರ್ಮ ಪೂಜೆಗಳನ್ನು ಮಾಡುತ್ತಿದ್ದನಂತೆ. ಅತಿ ಎತ್ತರವಾದ ಪರ್ವತ ಶಿಖರದ ಮೇಲಿರುವ ವೈಕುಂಠ ಗುಹೆಯನ್ನು ದಿನವೂ ಅಲ್ಲಿನ ದೈವಕ್ಕೆ ಧೂಪ, ದೀಪ ನೈವೇದ್ಯವನ್ನು ಸರ್ಮಪಿಸುತ್ತಾರಂತೆ.

11.ಎಲ್ಲಿದೆ?

11.ಎಲ್ಲಿದೆ?

PC:YOUTUBE

ಇನ್ನು ಸಾಲಗ್ರಾಮ ವೆಂಕಟೇಶ್ವರನ ವಿಗ್ರಹದ ಹಿಂದೆ ಮಾನವ ರೂಪದಲ್ಲಿನ ವೆಂಕಟೇಶ್ವರ ಸ್ವಾಮಿ ವಿಗ್ರಹವನ್ನು 1975 ರಲ್ಲಿ ಏರ್ಪಾಟು ಮಾಡಿದರು. ಅಂದಿನಿಂದ ಈ ದೇವಾಲಯ ಅಭಿವೃದ್ಧಿಯಾಗುತ್ತಾ ಹೋಯಿತು. ಖಮ್ಮಂ ಜಿಲ್ಲೆಯ ಎರ್ರಪಾಲೆಂ ಎಂಬ ಮಂಡಲದಲ್ಲಿರುವ ಜಮಲಾಪುರ ಸೇರಿಕೊಳ್ಳುವುದಕ್ಕೆ ರಸ್ತೆ, ರೈಲು ಮಾರ್ಗದ ಮೂಲಕ ಸುಲಭವಾಗಿ ತಲುಪಬಹುದು.

12.ಹೇಗೆ ತೆರಳಬೇಕು?

12.ಹೇಗೆ ತೆರಳಬೇಕು?

PC:YOUTUBE

ವಿಜಯವಾಡದಿಂದ ಪ್ಯಾಸೆಂಜರ್ ರೈಲು, ಹೈದ್ರಾಬಾದ್‍ನಿಂದ ಬರುವ ಗೋಲ್ಕಂಡ ಎಕ್ಸ್ ಪ್ರೆಸ್ ರೈಲಾದ ಜಮಲಾಪುರದ ಸಮೀಪದಲ್ಲಿನ ಎರ್ರಪಾಲೆಂ ಸ್ಟೇಷನ್‍ನಲ್ಲಿ ನಿಲ್ಲುತ್ತದೆ. ಅಲ್ಲಿಂದ ಜಮಲಾಪುರಕ್ಕೆ ಆಟೋದ ಮೂಲಕ ಸುಲಭವಾಗಿ ಸೇರಿಕೊಳ್ಳಬಹುದು. ವಿಜಯವಾಡದಿಂದ ಇಲ್ಲಿಗೆ ಕೇವಲ 50 ಕಿ.ಮೀ ದೂರದಲ್ಲಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X