Search
  • Follow NativePlanet
Share
» »ಮಹಾಬಲಿಪುರಂ ದೇವಾಲಯದಲ್ಲಿರುವುದು ಏಲಿಯನ್ಸ್‍ಗೆ ಸಂಬಂಧ ಪಟ್ಟ ಬಂಡೆಯೇ?

ಮಹಾಬಲಿಪುರಂ ದೇವಾಲಯದಲ್ಲಿರುವುದು ಏಲಿಯನ್ಸ್‍ಗೆ ಸಂಬಂಧ ಪಟ್ಟ ಬಂಡೆಯೇ?

ಮಹಾಬಲಿಪುರಂ ಅತ್ಯಂತ ಸುಂದರವಾದ ದೇವಾಲಯ. ಈ ದೇವಾಲಯವು ದೇವಾಲಯಗಳ ನಾಡು ತಮಿಳಿನಾಡಿನಲ್ಲಿದೆ. ತಮಿಳುನಾಡಿನ ಕಾಂಚಿಪುರಂ ಜಿಲ್ಲೆಯ ಮಹಾಬಲೀಪುರಂನಲ್ಲಿದೆ. ತಮಿಳುನಾಡು ರಾಜ್ಯದಿಂದ ಮಹಾಬಲೀಪುರಂಗೆ ಸುಮಾರು 58 ಕಿ,ಮೀ ದೂರದಲ್ಲಿದೆ. ಈ ದೇವಾಲಯವ ನಿರ

ಮಹಾಬಲಿಪುರಂ ಅತ್ಯಂತ ಸುಂದರವಾದ ದೇವಾಲಯ. ಈ ದೇವಾಲಯವು ದೇವಾಲಯಗಳ ನಾಡು ತಮಿಳಿನಾಡಿನಲ್ಲಿದೆ. ತಮಿಳುನಾಡಿನ ಕಾಂಚಿಪುರಂ ಜಿಲ್ಲೆಯ ಮಹಾಬಲೀಪುರಂನಲ್ಲಿದೆ. ತಮಿಳುನಾಡು ರಾಜ್ಯದಿಂದ ಮಹಾಬಲೀಪುರಂಗೆ ಸುಮಾರು 58 ಕಿ,ಮೀ ದೂರದಲ್ಲಿದೆ. ಈ ದೇವಾಲಯವ ನಿರ್ಮಾಣದಲ್ಲಿ ಅಣು ಅಣುವೂ ರಹಸ್ಯಮಯವಾಗಿದ್ದು ಅತ್ಯಾಧುನಿಕವಾಗಿ ಮಹಾಬಲೀಪುರಂ ದೇವಾಲಯವನ್ನು ನಿರ್ಮಿಸಲಾಗಿದೆ.

ಸಮುದ್ರ ತೀರದಲ್ಲಿರುವ ದೇಗುಲ ಎಂದೇ ಪ್ರಸಿದ್ಧಿಯನ್ನು ಪಡೆದಿರುವ ಈ ದೇವಾಲಯ ಸುಮಾರು 12,00 ಸಾವಿರ ವರ್ಷಗಳ ಇತಿಹಾಸ ಹೊಂದಿದೆ. ಈ ಪವಿತ್ರವಾದ ದೇವಾಲಯಕ್ಕೆ ಭೇಟಿ ನೀಡಲು ಹಲವಾರು ಪ್ರವಾಸಿಗರು ದೇಶ ವಿದೇಶಗಳಿಂದ ಬರುತ್ತಾರೆ. ಈ ದೇವಾಲಯದಲ್ಲಿ ಗಮನಿಸಬೇಕಾದ ಹಲವು ವಿಷಯಗಳಿದ್ದು ಅದರ ಬಗೆ ತಿಳಿಯಿರಿ.

ಪ್ರಸ್ತುತ ಲೇಖನದಲ್ಲಿ ನಿಮಗೆ ತಿಳಿಯದ ಮಹಾಬಲಿಪುರಂ ದೇವಾಲಯದ ಬಗ್ಗೆ ತಿಳಿಯಿರಿ.

ದೇವಾಲಯ ಎಲ್ಲಿದೆ?

ದೇವಾಲಯ ಎಲ್ಲಿದೆ?

ಮಹಾಬಲಿಪುರಂ ಪ್ರಸಿದ್ಧವಾದ ದೇವಾಲಯವು ತಮಿಳುನಾಡು ರಾಜ್ಯದ ಕಾನ್‍ಚಿಪುರಂ ಜಿಲ್ಲೆಯ ಮಹಾಬಲಿಪುರಂನಲ್ಲಿ ಈ ಪವಿತ್ರ ಪುಣ್ಯ ಕ್ಷೇತ್ರವಿದೆ.


PC:Gopinath Sivanesan

ಬಲಿ ಚಕ್ರವರ್ತಿ

ಬಲಿ ಚಕ್ರವರ್ತಿ

ಪೂರ್ವದಲ್ಲಿ ಬಲಿ ಚಕ್ರವರ್ತಿಯು ಈ ಪ್ರದೇಶವನ್ನು ಆಳುತ್ತಿದ್ದರಿಂದ ಈ ಸ್ಥಳಕ್ಕೆ ಮಹಾಬಲಿಪುರಂ ಎಂದು ಕರೆಯಲಾಯಿತು ಎಂದು ಕೆಲವರು ಹೇಳುವುದುಂಟು.

PC:Thurika

ಯುದ್ಧ

ಯುದ್ಧ

ಭಾಗವಾನ್ ವಿಷ್ಣು ಮೂರ್ತಿಯ ಯುದ್ಧದಿಂದಾಗಿ ಮರಣಿಸಿದ ಮಹಾಬಲಿಪುರಂ ಎಂಬ ರಕ್ಷಾಸನ ಹೆಸರು ಈ ನಗರಕ್ಕೆ ಬಂದಿದೆ ಎಂದು ಕೆಲವರು ತಿಳಿಸುತ್ತಾರೆ.

PC:SatishKumar

ಕೃಷ್ಣನ ಬೃಹತ್ ಬಂಡೆ

ಕೃಷ್ಣನ ಬೃಹತ್ ಬಂಡೆ

ಮಹಾಬಲೀಪುರಂನಲ್ಲಿ ಒಂದು ಬೃಹತ್ ಕ್ರಷ್ಣ ಬಂಡೆ ಇದೆ. ಈ ಬಂಡೆಯನ್ನು ಕೃಷ್ಣಸ್ ಬಟ್ಟರ್ ಬಾಲ್ ಎಂದು ಕರೆಯುತ್ತಾರೆ. ಸುಮಾರು 1200 ಸಾವಿರ ವರ್ಷಗಳ ಇತಿಹಾಸವಿದೆ. ಈ ಬಂಡೆಯು ಸುಮಾರು 20 ಅಡಿ ಎತ್ತರ, ಅಗಲ ಹೊಂದಿದೆ. 250 ಟನ್‍ಗಳ ಭಾರವಿರುವ ಈ ಬಂಡೆಯು ಎಷ್ಟೋ ವರ್ಷಗಳಿಂದ ಅಲ್ಲಾಡದೇ ಅಲ್ಲೇ ನೆಲೆಸಿರುವುದು ಒಂದು ರಹಸ್ಯ.

PC:Thurika

ಬೃಹತ್ ಬಂಡೆ

ಬೃಹತ್ ಬಂಡೆ

ಈ ಕೃಷ್ಣ ಬಂಡೆಯನ್ನು ಅಲ್ಲಿಂದ ತೆಗೆಯಲು ಎಷ್ಟೇ ಪ್ರಯತ್ನ ಪಟ್ಟರೂ ಯಾರಿಂದಲೂ ಒಂದು ಇಂಚು ಕದಲಿಸಲಾಗಲಿಲ್ಲ. ಸುಮಾರು 1908ರಲ್ಲಿ ಈ ಸುತ್ತ ಮುತ್ತಲಿನ ಪ್ರದೇಶವನ್ನು ಪರಿಶೀಲಿಸಿದ ಆಥಾರ್ ಅಲಿ ಎಂಬ ಬ್ರಿಟೀಷ್ ದೊರೆಯು ಈ ಬಂಡೆಯನ್ನು ಕಂಡು, ಅತ್ಯಂತ ಪ್ರಮಾದವನ್ನು ಈ ಬಂಡೆ ಉಂಟು ಮಾಡುತ್ತದೆ ಎಂದು ಅಲ್ಲಿಂದ ತೆಗೆಸಲು ಮುಂದಾದನು

PC:YOUTUBE

ಪ್ರಯತ್ನ

ಪ್ರಯತ್ನ

ಕೃಷ್ಣ ಬಂಡೆಯನ್ನು ಅಲ್ಲಿಂದ ತೆಗೆಸಲು 7 ಆನೆಗಳಿಂದ ಎಳೆಸಿದನು. ಸರಪಳಿಗಳಿಂದ ತೆಗೆಸಲು ನಾನಾ ಪ್ರಯತ್ನವನ್ನು ಮಾಡಿದನು. ಆದರೂ ಕೂಡ ಒಂದು ಇಂಚು ಕೂಡ ಕೃಷ್ಣ ಬಂಡೆ ಕದಲದೆ ನಿರಾಶೆಯಿಂದ ಬ್ರಿಟೀಷ್ ಅಧಿಕಾರಿಯು ಹಿಂದಿರುಗಿದರು ಎಂದು ಚರಿತ್ರೆ ಹೇಳುತ್ತದೆ.

PC:Thamizhapparithi Maari

ಆಕಾಶ ದೇವರ ಬಂಡೆ

ಆಕಾಶ ದೇವರ ಬಂಡೆ

ಅಂದಿನ ಪಲ್ಲವರಾಜ ನರಸಿಂಹವರ್ಮ ಈ ಬಂಡೆಯನ್ನು ಯಾವ ಶಿಲ್ಪಿಯು ಮುಟ್ಟಬಾರದು. ಏಕೆಂದರೆ ಈ ಬಂಡೆಯು ಆಕಾಶ ದೇವರ ಬಂಡೆಯಾಗಿದೆ ಎಂದು ಆಜ್ಞೆ ಕೊಟ್ಟನಂತೆ.

PC:michael clarke stuff



ದೇವಾಲಯದ ನಿರ್ಮಾಣದ ಸಮಯದಲ್ಲಿ

ದೇವಾಲಯದ ನಿರ್ಮಾಣದ ಸಮಯದಲ್ಲಿ

ಕೆಲವರ ಪ್ರಕಾರ ದೇವಾಲಯದ ನಿರ್ಮಾಣದ ಸಮಯದಲ್ಲಿ ತಂದು ಇಟ್ಟಿದ್ದ ಬಂಡೆ ಎಂದು ಹೇಳುತ್ತಾರೆ. ಇನ್ನೂ ಕೆಲವರು ಇಂತಹ ಬೃಹತ್ ಬಂಡೆಯನ್ನು ಯಾರು ತೆಗೆದುಕೊಂಡು ಬರಲು ಸಾಧ್ಯವಿಲ್ಲದು ಎಂದು ವಾದಿಸುತ್ತಾರೆ.

PC:Thamizhpparithi Maari

ಏಲಿಯನ್ಸ್ ಬಂಡೆ

ಏಲಿಯನ್ಸ್ ಬಂಡೆ

ಇನ್ನೂ ಕೆಲವರು ಈ ಬೃಹತ್ ಬಂಡೆಯು ಏಲಿಯನ್ಸ್‍ಗಳದ್ದಾಗಿದೆ ಎಂದು ವಾದಿಸುತ್ತಾರೆ. ಇಂತಹ ಭಾರವಾದ ಬಂಡೆಯನ್ನು ಏಲಿಯನ್ಸ್‍ಗಳು ಮಾತ್ರ ಇಟ್ಟಿರಬಹುದಾಗಿದೆ ಎಂದು ಕೆಲವರು ಅಭಿಪ್ರಾಯ ಪಟ್ಟಿದ್ದಾರೆ.

PC:YOUTUBE

ಏಲಿಯನ್ಸ್

ಏಲಿಯನ್ಸ್

ಏಲಿಯನ್ಸ್‍ಗಳನ್ನು ಹೋಲುವ ಕಲ್ಲು ಬಂಡೆಗಳು ಕೆಲವು ಪ್ರದೇಶಗಳಿರುವುದರಿಂದ ಈ ಬಂಡೆಯು ಕೂಡ ಏಲಿಯನ್ಸ್‍ಗೆ ಸೇರಿರುವುದು ಎಂದು ಕೆಲವರ ಬಲವಾದ ವಾದವಾಗಿದೆ.

PC:YOUTUBE

ರಾಕೆಟ್

ರಾಕೆಟ್

ಮಹಾಬಲೀಪುರಂನ ಗಣಪತಿ ದೇವಾಲಯ ಶಿಲ್ಪಗಳನ್ನು ತೀಕ್ಷ್ಣವಾಗಿ ಗಮನಿಸಿದರೆ ಅಲ್ಲಿ ರಾಕೆಟ್‍ನ ಆಕಾರದ ಗುರುತನ್ನು ಕಾಣಬಹುದಾಗಿದೆ. ಅಂತರಿಕ್ಷದ ಬಗ್ಗೆ ಅಂದಿನ ದಿನಗಲ್ಲೆ ಪರಿಚಯವಿತ್ತೇ ಎಂಬ ಹಲವು ಅನುಮಾನಗಳು ನಮ್ಮಲ್ಲಿ ಮೂಡುತ್ತವೆ.

PC:Ashokarsh

ಶಿಲ್ಪಿಗಳು

ಶಿಲ್ಪಿಗಳು

ಕಂಚಿಯನ್ನು ಆಳಿದ ರಾಜರು ವಿದೇಶಿ ಶಿಲ್ಪ ನಿಪುಣರನ್ನು ಕರೆತಂದು ಸ್ವದೇಶಿ ಶಿಲ್ಪಿಗಳ ಮಾರ್ಗದರ್ಶನದಲ್ಲಿ ಈ ಅದ್ಭುತವಾದ ದೇವಾಲಯವನ್ನು ನಿರ್ಮಿಸಿದರು. ಮಹಾಬಲಿಪುರಂನ ವಾಸ್ತು ಶಿಲ್ಪಗಳ ಬಗ್ಗೆ ಅಂದಿನ ರಾಜರ ಹೊಂದಿದ್ದ ಅಸಾಮಾನ್ಯ ಅಭಿರುಚಿಯನ್ನು ಇಲ್ಲಿ ಕಾಣಬಹುದಾಗಿದೆ.

PC:YOUTUBE

ಗರ್ಭಗುಡಿ

ಗರ್ಭಗುಡಿ

ಮಹಾಬಲಿಪುರಂ ದೇವಾಲಯದ ಗರ್ಭಗುಡಿಯಲ್ಲಿ ತಾವುದೇ ಗಾಳಿ ಹೋಗದೇ ಇರಲು ಸಂಪೂರ್ಣವಾಗಿ ಕತ್ತಲಾಕಾರದಲ್ಲಿ ನಿರ್ಮಿಸಲಾಗಿದೆ. ಈ ಗರ್ಭಗುಡಿಯಲ್ಲಿ ಯಾವುದೇ ರೀತಿಯ ಕಿಟಕಿಗಳನ್ನು ಕಾಣಲಾಗುವುದಿಲ್ಲ.

PC:SatishKumar

ಬಾವಿ

ಬಾವಿ

ಈ ದೇವಾಲಯದಲ್ಲಿರುವ ಬಾವಿಯು ಅತ್ಯಂತ ಆಧುನಿಕವಾಗಿ ನಿರ್ಮಿಸಲಾಗಿದೆ. ಇದು ಅಂದಿನ ರಾಜರ ಕಲಾತ್ಮಕತೆಯನ್ನು ತಿಳಿಸುತ್ತದೆ.

PC:YOUTUBE

ಸಮೀಪದಲ್ಲಿರುವ ದೇವಾಲಯಗಳು

ಸಮೀಪದಲ್ಲಿರುವ ದೇವಾಲಯಗಳು

ಸಮೀಪವಿರುವ ಪ್ರಸಿದ್ಧವಾದ ಸ್ಥಳಗಳೆಂದರೆ ಪಂಚ ರಥ, ಸಮುದ್ರ ಶೋರೆ ದೇವಾಲಯ, ಲೈಟ್ ಹೌಸ್, ಇಂಡಿಯಾ ಸಮುದ್ರ ಮೂಸಿಯಂ, ವರಹ ಗುಹಾ ದೇವಾಲಯ. ಕೃಷ್ಣ ಮಂಟಪ, ಬೀಚ್, ಮಹೀಸಾಸುರ ಮರ್ದಿನಿ ಗುಹೆ, ಪಂಚ ಪಾಂಡವ ಗುಹೆ ಇನ್ನೂ ಹಲವು.

PC:Mkamath1976

ವಿಮಾನ ಮಾರ್ಗದ ಮೂಲಕ

ವಿಮಾನ ಮಾರ್ಗದ ಮೂಲಕ

ಮಹಾಬಲೀಪುರಂನ ಸಮೀಪವಾದ ವಿಮಾನ ನಿಲ್ದಾಣವೆಂದರೆ ಚೆನೈ ಏರ್‍ಫೋರ್ಟ್. ಇಲ್ಲಿಂದ ಮಹಾಬಲೀಪುರಂಗೆ ಸುಮಾರು 54 ಕಿ,ಮೀ ಅಂತರದಲ್ಲಿದೆ.

PC:YOUTUBE

ರೈಲ್ವೆ ಮಾರ್ಗದ ಮೂಲಕ

ರೈಲ್ವೆ ಮಾರ್ಗದ ಮೂಲಕ

ಮಹಾಬಲೀಪುರಂನ ಸಮೀಪದ ರೈಲ್ವೆ ನಿಲ್ದಾಣವೆಂದರೆ ಅದು ಚೆನ್ನಾಗಲ ಪಟ್ಟು ಜಂಗ್ನಷನ್.

PC:YOUTUBE

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X