Search
  • Follow NativePlanet
Share
» »ಈಗ ಬರೀ 400ರೂ.ಯಲ್ಲಿ ಗೋವಾ ಸುತ್ತಾಡಿ

ಈಗ ಬರೀ 400ರೂ.ಯಲ್ಲಿ ಗೋವಾ ಸುತ್ತಾಡಿ

ಕ್ರಿಸ್ಮಸ್ ಹಾಗೂ ಹೊಸ ವರ್ಷವನ್ನು ಸಾಕಷ್ಟು ಜನರು ಗೋವಾದಲ್ಲಿ ಆಚರಿಸಿಕೊಳ್ಳಬೇಕೆಂದುಕೊಂಡಿರುತ್ತಾರೆ. ಆದರೆ ಈ ಸೀಸನ್‌ನಲ್ಲಿ ಗೋವಾ ಸುತ್ತಾಡೋದಂದ್ರೆ ತುಂಬಾನೇ ದುಬಾರಿಯಾಗಿ ಬಿಡುತ್ತದೆ. ಹೀಗಿರುವಾಗ ಗೋವಾದಲ್ಲಿ ಸೆಲೆಬ್ರೆಟ್ ಮಾಡೋದು ಕನಸಾಗಿಯೇ ಉಳಿಯುತ್ತದೆ. ಅದಕ್ಕಾಗಿ ಐಆರ್‌ಸಿಟಿಸಿ ಒಂದು ಉತ್ತಮ ಅವಕಾಶವನ್ನು ತಂದಿದೆ.

400ರೂ.ಯಲ್ಲಿ ಗೋವಾ ಸುತ್ತಿ

ಅದೇನೆಂದರೆ ಕ್ರಿಸ್ಮಸ್ ಹಾಗು ನ್ಯೂ ಇಯರ್‌ ಟೈಮ್‌ನಲ್ಲಿಬರೀ 400ರೂ.ಯಲ್ಲಿ ಗೋವಾವನ್ನು ಸುತ್ತಾಡುವ ಅವಕಾಶವನ್ನು ಒದಗಿಸುತ್ತಿದೆ. ಹಾಪ್ ಆನ್ ಹಾಪ್ ಆಫ್‌ ಪ್ಯಾಕೇಜ್ ಅಡಿಯಲ್ಲಿ 400 ರೂ.ಯಲ್ಲಿ ನೀವು ಗೋವಾ ಸುತ್ತಾಡಬಹುದು.

ಚಿಕ್ಕಮಗಳೂರಿನಲ್ಲಿರುವ ಅಯ್ಯನ ಕೆರೆಯನ್ನು ನೋಡಿದ್ದೀರಾ?

ಬೆಳಗ್ಗೆ 9 ರಿಂದ ಸಂಜೆ 6 ಗಂಟೆ ವರೆಗೆ

ಒಂದು ದಿನದ ಪ್ಯಾಕೇಜ್ 9 ರಿಂದ ಸಂಜೆ 6 ಗಂಟೆಯವರೆಗೆ ಪ್ರತಿದಿನ ಪ್ರಯಾಣಿಕರಿಗೆ ಲಭ್ಯವಿರುತ್ತದೆ. ಉತ್ತರ ಗೋವಾ, ದಕ್ಷಿಣ ಗೋವಾ ಮತ್ತು ಉತ್ತರ ಗೋವಾ ಮತ್ತು ದಕ್ಷಿಣ ಗೋವಾದಿಂದ ಪ್ರವಾಸಿಗರಿಗೆ ಮೂರು ಆಯ್ಕೆಗಳಿವೆ.

ಪ್ಯಾಕೇಜ್ ಶುಲ್ಕ

ಉತ್ತರ ಗೋವಾ ಪ್ರವಾಸಕ್ಕೆ ಪ್ರತಿ ವ್ಯಕ್ತಿಗೆ 400 ರೂ., ದಕ್ಷಿಣ ಗೋವಾ ಪ್ರವಾಸಕ್ಕೆ 400 ರೂ. ಮತ್ತು ಉತ್ತರ ಮತ್ತು ದಕ್ಷಿಣ ಗೋವಾ ಪ್ರವಾಸಕ್ಕೆ ಪ್ರತಿ ವ್ಯಕ್ತಿಗೆ 600 ರೂ. ಶುಲ್ಕ ವಿಧಿಲಾಗುತ್ತದೆ.

ಐಶ್ವರ್ಯ ಡ್ಯಾನ್ಸ್ ಮಾಡಿದ್ದ ಈ ಜಲಪಾತ ಯಾವುದು ಗೊತ್ತಾ?

ಉತ್ತರ ಗೋವಾ ಪ್ರವಾಸ

ಈ ಪ್ರವಾಸವು ದಕ್ಷಿಣ ಸೆಂಟ್ರಲ್ ಗೋವಾ, ಡೊನಾ ಪೌಲಾ, ಗೋವಾ ಸೈನ್ಸ್ ಮ್ಯೂಸಿಯಂ, ಮಿರಮಾರ್ ಬೀಚ್, ಕಲಾ ಅಕಾಡೆಮಿ, ಭಗವಾನ್ ಮಹಾವೀರ್ ಗಾರ್ಡನ್, ಪಾಂಜಿಮ್ ಮಾರ್ಕೆಟ್, ಕ್ಯಾಸಿನೊ ಪಾಯಿಂಟ್ ಮತ್ತು ಬೊಮಿ ಜೀಸಸ್‌ನ ಬೆಸಿಲಿಕಾ ಮೊದಲಾದ ಜನಪ್ರಿಯ ದೃಶ್ಯಗಳನ್ನು ಒಳಗೊಂಡಿದೆ. ಇದನ್ನು ಉತ್ತರ ಗೋವಾ ಪ್ರವಾಸದಲ್ಲಿ ಸೇರಿಸಲಾಗುವುದು.

ದಕ್ಷಿಣ ಗೋವಾ ಪ್ರವಾಸವು

ಫೋರ್ಟ್ ಅಗುಡಾ, ಸಿನ್ಕ್ವೆರಿಮ್ ಬೀಚ್ / ಫೋರ್ಟ್, ಕ್ಯಾಂಡೋಲಿಮ್ ಬೀಚ್, ಸೇಂಟ್ ಆಂಟೊನಿ ಚಾಪೆಲ್, ಸೇಂಟ್ ಅಲೆಕ್ಸ್ ಚರ್ಚ್, ಕ್ಯಾಲಂಗುಟೆ ಬೀಚ್, ಬಾಗಾ ಬೀಚ್, ಅಂಜುನಾ ಬೀಚ್, ಚಪೋರಾ ಕೋಟೆ ಮತ್ತು ವಾಗೋಟರ್ ಬೀಚ್‌ಗಳಿಗೆ ಭೇಟಿ ನೀಡಲಿದೆ.

ಚೆನ್ನೈ ಸುತ್ತಮುತ್ತ ನೋಡಲೇಬೇಕಾದ 10 ಪ್ರಮುಖ ತಾಣಗಳು

ಉತ್ತರ ಹಾಗೂ ದಕ್ಷಿಣ ಗೋವಾ ಪ್ರವಾಸ

ಎರಡೂ ಪ್ಯಾಕೇಜ್‌ನ್ನು ಆಯ್ಕೆ ಮಾಡುವವರಿಗೆ ಅಂದರೆ 600ರೂ.ಯ ಪ್ರವಾಸವನ್ನು ಆಯ್ಕೆ ಮಾಡುವವರಿಗೆ ಉತ್ತರ ಗೋವಾ ಹಾಗೂ ದಕ್ಷಿಣ ಗೋವಾದಲ್ಲಿರುವ ಸ್ಥಳಗಳನ್ನು ಸುತ್ತಾಡಿಸಲಾಗುವುದು.

ಸುರಕ್ಷಿತ ಪ್ಯಾಕೇಜ್

ಸುರಕ್ಷಿತ ಪ್ಯಾಕೇಜ್ ಇದಾಗಿದೆ. ಆರಾಮದಾಯಕವಾದ ಆಸನಗಳನ್ನು ಉನ್ನತ ಮತ್ತು ಹಿಂಭಾಗದ ಡೆಕ್‌ಗಳು, PA ವ್ಯವಸ್ಥೆ ಮತ್ತು ಎಲ್ಇಡಿ ಟಿವಿಗಳು ಮತ್ತು ಉತ್ತಮ-ತರಬೇತಿ ಪಡೆದ ಬಸ್ ಚಾಲಕರೊಂದಿಗೆ ಸುಸಜ್ಜಿತವಾದ ಬಸ್‌ಗಳನ್ನು ಒಳಗೊಂಡಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X