Search
  • Follow NativePlanet
Share
» »ಬೆರುಗುಗೊಳಿಸುವ ಹಿಮಾಲಯದ ಅದ್ಭುತ ಸತ್ಯಗಳು

ಬೆರುಗುಗೊಳಿಸುವ ಹಿಮಾಲಯದ ಅದ್ಭುತ ಸತ್ಯಗಳು

By Vijay

ಸಂಸ್ಕೃತದ "ಹಿಮ" ಮತ್ತು "ಆಲಯ" ಎಂಬ ಎರಡು ಪದಗಳಿಂದ ಉಂಟಾದ ಶಬ್ದವೆ ಹಿಮಾಲಯ. ಸದಾ ಹಾಗೂ ನಿರಂತರವಾಗಿ ಹಿಮದಿಂದ ಕೂಡಿದ, ಅದ್ಭುತ ಹಾಗೂ ಎತ್ತರದ ಪರ್ವತ ಶ್ರೇಣಿಗಳ ಆಲಯವೆ ಹಿಮಾಲಯ ಪರ್ವತಗಳು. ಹಿಂದು ಧರ್ಮದಲ್ಲಿ ಹಿಮಾಲಯ ಕೇವಲ ಪರ್ವತಗಳಲ್ಲದೆ ಪವಿತ್ರತೆಯ ಸಂಕೇತವೂ ಆಗಿದೆ.

ಕೇವಲ ಹಿಂದೂಗಳಿಗಲ್ಲದೆ ಬೌದ್ಧ ಹಾಗೂ ಸಿಖ್ಖರಿಗೂ ಸಹ ಪವಿತ್ರತೆಯ ಸಂಕೇತವಾಗಿರುವ ಹಿಮಾಲಯ ಪರ್ವತಗಳು ಜಗತ್ತಿನ ಹತ್ತು ಅತಿ ಎತ್ತರದ ಪರ್ವತ ಶಿಖರಗಳ ಪೈಕಿ ಒಂಭತ್ತನ್ನು ತನ್ನ ಒಡಲಲ್ಲೆ ಹೊಂದಿರುವ ಖ್ಯಾತಿ ಪಡೆದಿದೆ. ಅಷ್ಟೆ ಏಕೆ, ರೋಮಾಂಚನಗೊಳಿಸುವ, ಸಾಹಸಮಯ ಚಟುವಟಿಕೆಗಳ ಪ್ರವಾಸೋದ್ಯಮಕ್ಕೂ ಹಿಮಾಲಯ ಹೆಸರುವಾಸಿ.

ನಿಮಗಿಷ್ಟವಾಗಬಹುದಾದ : ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ಸತ್ಯಗಳು

ಹಿಂದೂ ಕಥೆ, ಪುರಾಣಗಳಲ್ಲಿ ಹೇಳಿರುವಂತೆ ಶಿವನು ನೆಲೆಸಿರುವ ಕೈಲಾಸ ಪರ್ವತವು ಹಿಮಾಲಯದಲ್ಲಿದ್ದು ಶಿವನ ಮಡದಿಯಾದ ಪಾರ್ವತಿ ದೇವಿಯು ಸಾಕ್ಷಾತ್ ಹಿಮಾಲಯ ರಾಜನ ಪುತ್ರಿಯೆ ಆಗಿದ್ದಾಳೆ. ಅಲ್ಲದೆ ಗಂಗಾ ಸಹಿತ ಅನೇಕ ಪವಿತ್ರ ನದಿಗಳು ಹುಟ್ಟುವುದು ಹಿಮಾಲಯದ ವಿವಿಧ ಪರ್ವತ ಮೂಲಗಳಿಂದಲೆ ಆಗಿದೆ.

ಹೀಗಾಗಿ ಹಿಮಾಲಯ ಪರ್ವತಗಳು ಭಾರತೀಯರಿಗೆ ಕೇವಲ ಮನರಂಜನಾತ್ಮಕ ಪ್ರವಾಸಿ ದೃಷ್ಟಿಯಿಂದ ಮಾತ್ರವಲ್ಲದೆ ಧಾರ್ಮಿಕ ಪ್ರವಾಸಿ ದೃಷ್ಟಿಯಿಂದಲೂ ಸಹ ಆಕರ್ಷಣೀಯವಾಗಿದೆ. ಇನ್ನೂ ಹಿಮಾಲಯ ಪರ್ವತಗಳಿಗೆ ಸಂಬಂಧಿಸಿದಂತೆ ಹಲವು ರೋಚಕ ಸತ್ಯಗಳನ್ನು ಈ ಲೇಖನದ ಮೂಲಕ ತಿಳಿಯಿರಿ. ಅವಕಾಶ ಲಭಿಸಿದರೆ ಒಮ್ಮೆ ಹಿಮಾಲಯ ಪರ್ವತಗಳ ದರ್ಶನ ಮಾಡಿ ಬನ್ನಿ.

ರೋಮ ರೋಮಗಳನ್ನು ಸೆಟೆಸಿ ನಿಲ್ಲಿಸುವ ಹಿಮಾಲಯದ ಒಡಲಿನ ವಿಸ್ತಾರದಲ್ಲಿ ಕಂಡುಬರುವ ವಿವಿಧ ರೋಮಾಂಚಕ ಚಿತ್ರಗಳ ಪ್ರವಾಸ ನಿಮಗಾಗಿ, ಇನ್ನೇನು ಫೊಟೋ ಕ್ಲಿಕ್ ಮಾಡಿ ಪ್ರಾರಂಭಿಸಿ!

ವಿಸ್ಮಯಗೊಳಿಸುವ ಹಿಮಾಲಯ ಪರ್ವತಗಳು:

ವಿಸ್ಮಯಗೊಳಿಸುವ ಹಿಮಾಲಯ ಪರ್ವತಗಳು:

ಹಿಮಾಲಯ ಪರ್ವತ ಶ್ರೇಣಿಗಳು ವಾಯವ್ಯ ದಿಕ್ಕಿನಿಂದ ಹಿಡಿದು ಆಗ್ನೇಯ ದಿಕ್ಕಿನವರೆಗೆ ಸುಮಾರು 2400 ಕಿ.ಮೀ ಗಳಷ್ಟು ಉದ್ದದ ಮಾರ್ಗದಲ್ಲಿ ಭವ್ಯವಾಗಿ ಚಾಚಿಕೊಂಡಿದೆ.

ಚಿತ್ರಕೃಪೆ: Chris Bothwell

ವಿಸ್ಮಯಗೊಳಿಸುವ ಹಿಮಾಲಯ ಪರ್ವತಗಳು:

ವಿಸ್ಮಯಗೊಳಿಸುವ ಹಿಮಾಲಯ ಪರ್ವತಗಳು:

ಸುಮಾರು 70 ಮಿಲಿಯನ್ ವರ್ಷಗಳ ಹಿಂದೆ ಭಾರತ ಉಪಖಂಡವು ಆಸ್ಟ್ರೇಲಿಯಾದ ತರಹ ಸ್ವತಂತ್ರವಾಗಿತ್ತು ನಂತರ ಭೂಚಲನಗಳುಂಟಾಗಿ ಮೇಲೇರುತ್ತ ಬಂದು ಯುರೇಷಿಯನ್ ಖಂಡದ ಘರ್ಷಣೆಗೊಂಡು ಹಿಮಾಲಯ ಪರ್ವತಗಳ ಉತ್ಪತ್ತಿಯಾಯಿತೆಂದು ವೈಜ್ಞಾನಿಕವಾಗಿ ವಿಶ್ಲೇಷಿಸಲಾಗಿದೆ. ಈ ರೀತಿಯಾಗಿ ಹಿಮಾಲಯ 10 ಮಿಲಿಯನ್ ವರ್ಷಗಳ ಹಿಂದೆ ರೂಪಗೊಂಡಿತೆಂದು ಅಂದಾಜಿಸಲಾಗಿದೆ.

ವಿಸ್ಮಯಗೊಳಿಸುವ ಹಿಮಾಲಯ ಪರ್ವತಗಳು:

ವಿಸ್ಮಯಗೊಳಿಸುವ ಹಿಮಾಲಯ ಪರ್ವತಗಳು:

ಅಂಟಾರ್ಟಿಕಾ ಹಾಗೂ ಆರ್ಕೆಟಿಕ್ ಖಂಡಗಳ ನಂತರ ಹಿಮಾಲಯ ಅತಿ ಹೆಚ್ಚಿನ ಸಾಂದ್ರತೆಯ ಮಂಜುಗಡ್ಡೆ ಹಾಗೂ ಹಿಮವನ್ನು ಹೊಂದಿರುವ ಪ್ರದೇಶ ಎಂಬ ಖ್ಯಾತಿಗೆ ಕಾರಣವಾಗಿದೆ.

ಚಿತ್ರಕೃಪೆ: Christopher Michel

ವಿಸ್ಮಯಗೊಳಿಸುವ ಹಿಮಾಲಯ ಪರ್ವತಗಳು:

ವಿಸ್ಮಯಗೊಳಿಸುವ ಹಿಮಾಲಯ ಪರ್ವತಗಳು:

ಹಿಮಾಲಯ ಪರ್ವತಗಳಲ್ಲಿ ಸುಮಾರು 15000 ಗಳಷ್ಟು ಹಿಮನದಿಗಳಿದ್ದು ಇವು ಒಟ್ಟಾರೆಯಾಗಿ 12000 ಘ.ಕಿ.ಮೀ ವ್ಯಾಪ್ತಿಯಷ್ಟು ತಾಜಾ ನೀರಿನ ಪ್ರಮಾಣವನ್ನು ಹೊಂದಿದೆ. ಅಂದರೆ ಸುಮಾರು ಮೂರು ಸಾವಿರ ಕ್ಯೂಬಿಕ್ ಮೈಲ್ ಗಳಷ್ಟು.

ಚಿತ್ರಕೃಪೆ: McKay Savage

ವಿಸ್ಮಯಗೊಳಿಸುವ ಹಿಮಾಲಯ ಪರ್ವತಗಳು:

ವಿಸ್ಮಯಗೊಳಿಸುವ ಹಿಮಾಲಯ ಪರ್ವತಗಳು:

ಹಿಮಾಲಯಗಳ ಪ್ರಮುಖ ಹಿಮನದಿಗಳ ಪೈಕಿ ಗಂಗೋತ್ರಿ ಹಾಗೂ ಯಮುನೋತ್ರಿಗಳು ಭಾರತ ಉಪಖಂಡದಲ್ಲಿ ಬರುತ್ತವೆ ಹಾಗೂ ಹಿಂದೂಗಳ ಪಾಲಿಗೆ ಇವು ಪವಿತ್ರ ಸ್ಥಾನಗಳಾಗಿದ್ದು ಭೇಟಿ ನೀಡುವ ಧಾರ್ಮಿಕ ತಾಣಗಳಾಗಿವೆ. ಗಂಗೋತ್ರಿಯ ಗೋಮುಖ.

ಚಿತ್ರಕೃಪೆ: yogasanft

ವಿಸ್ಮಯಗೊಳಿಸುವ ಹಿಮಾಲಯ ಪರ್ವತಗಳು:

ವಿಸ್ಮಯಗೊಳಿಸುವ ಹಿಮಾಲಯ ಪರ್ವತಗಳು:

ಟಿಬೆಟ್ ಪ್ರಸ್ಥಭೂಮಿ ಹಾಗೂ ಭಾರತ ಉಪಖಂಡವನ್ನು ಪ್ರತ್ಯೇಕಿಸುವ ಮಹತ್ತರ ಗಡಿ ಹಿಮಾಲಯ ಪರ್ವತ ಶ್ರೇಣಿಯಾಗಿದ್ದು ಭಾರತಕ್ಕೆ ಸಂಬಂಧಿಸಿದಂತೆ ಸಿಕ್ಕಿಂ, ದಾರ್ಜೀಲಿಂಗ್, ಅರುಣಾಚಲಪ್ರದೇಶ, ಹಿಮಾಚಲ ಪ್ರದೇಶ, ಉತ್ತರಾಖಂಡ ಹಾಗೂ ಮಣಿಪುರಗಳಿಂದ ಸುತ್ತುವರೆದಿದೆ. ಪಶ್ಚಿಮಬಂಗಾಳ ರಾಜ್ಯದ ಗಿರಿಧಾಮ ದಾರ್ಜೀಲಿಂಗ್ ಹಿಮಾಲಯ ಕಾಣುವ ರೀತಿ.

ಚಿತ್ರಕೃಪೆ: A.Ostrovsky

ವಿಸ್ಮಯಗೊಳಿಸುವ ಹಿಮಾಲಯ ಪರ್ವತಗಳು:

ವಿಸ್ಮಯಗೊಳಿಸುವ ಹಿಮಾಲಯ ಪರ್ವತಗಳು:

ಹಿಮಾಲಯ ಪರ್ವತ ಶ್ರೇಣಿಗಳು ನೂರಾರು ಸರೋವರಗಳಿಂದ ಕೂಡಿದ್ದು ಎತ್ತರ ಸಾಗುತ್ತಿರುವ ಹಾಗೆ ಕೆರೆಗಳ ಆಕಾರವು ಸಣ್ಣದಾಗುತ್ತ ಹೋಗುತ್ತದೆ. ಆದಾಗ್ಯೂ ಭಾರತ-ಚೀನಾ ಗಡಿಯಲ್ಲಿರುವ ಪ್ಯಾಂಗಾಂಗ್ ಸರೋವರ 700 ಚ.ಕಿ.ಮೀ ವಿಸ್ತಾರ ಹೊಂದಿರುವ ಅತಿ ಸುಂದರ ಕೆರೆಯಾಗಿದೆ.

ಚಿತ್ರಕೃಪೆ: Chinchu2

ವಿಸ್ಮಯಗೊಳಿಸುವ ಹಿಮಾಲಯ ಪರ್ವತಗಳು:

ವಿಸ್ಮಯಗೊಳಿಸುವ ಹಿಮಾಲಯ ಪರ್ವತಗಳು:

ಹಿಮಾಲಯ ಪರ್ವತಗಳು ಒಟ್ಟಾರೆ ಭೂಮಿಯ 0.4% ರಷ್ಟು ಸ್ಥಳವನ್ನು ಆಕ್ರಮಿಸಿಕೊಂಡಿದ್ದು ದಟ್ಟ ಹಸಿರಿನಿಂದ ಕೂಡಿದ ಕಾಡುಗಳಿಂದ ಹಿಡಿದು ದಟ್ಟ ಹಿಮಚ್ಛಾದಿತ ಹಿಮಗಳವರೆಗೆ ವೈವಿಧ್ಯಮಯ ಭೂಪ್ರದೇಶಗಳನ್ನು ಪ್ರವಾಸಿಗರಿಗೆ ಕರುಣಿಸುತ್ತದೆ.

ಚಿತ್ರಕೃಪೆ: Roman Hobler

ವಿಸ್ಮಯಗೊಳಿಸುವ ಹಿಮಾಲಯ ಪರ್ವತಗಳು:

ವಿಸ್ಮಯಗೊಳಿಸುವ ಹಿಮಾಲಯ ಪರ್ವತಗಳು:

ಅತಿ ವಿಲಕ್ಷಣ ಹಾಗು ಶೀಘ್ರವಾಗಿ ಬದಲಾಗುವ ವಾತಾವರಣವನ್ನು ಹಿಮಾಲಯ ಒಳಗೊಂಡಿದೆ. ಹೀಗಾಗಿ ಹಿಮಾಲಯದ ಕೆಲ ಪರ್ವತ ಮಾರ್ಗಗಳಲ್ಲಿ ಟ್ರೆಕ್ ಮಾಡುವಾಗ ಸಾಕಷ್ಟು ಜಾಗರೂಕತೆವಹಿಸಿ ಮುನ್ಸೂಚನೆ ಪಡೆದು ಮುಂದೆ ಸಾಗಬೇಕಾಗುತ್ತದೆ.

ಚಿತ್ರಕೃಪೆ: Sharada Prasad CS

ವಿಸ್ಮಯಗೊಳಿಸುವ ಹಿಮಾಲಯ ಪರ್ವತಗಳು:

ವಿಸ್ಮಯಗೊಳಿಸುವ ಹಿಮಾಲಯ ಪರ್ವತಗಳು:

ಹಿಮಾಲಯದ ಮೇಲಕ್ಕೆ ಹೊದಂತೆ ಕೇವಲ ಮೈ ಕೊರೆಯುವಷ್ಟು ಚಳಿ ಜಾಸ್ತಿ ಹೋಗುತ್ತ ಹೋದರೆ, ಕೆಳಗಿಳಿಯುತ್ತಿದ್ದಂತೆ, ಹಸಿಯಾದ ಭೂಮಿ, ತಂಪಾದ ವಾತಾವರಣ, ಕಣಿವೆಗಳು, ಕಾಡುಗಳು ಕಾಣಸಿಗುತ್ತವೆ ಹಾಗೂ ಇಂತಹ ಸ್ಥಳಗಳಲ್ಲಿ ಪ್ರವಾಸೋದ್ಯಮ ಬಹಳ ಚುರುಕಾಗಿದೆ.

ಚಿತ್ರಕೃಪೆ: Zabara Alexander

ವಿಸ್ಮಯಗೊಳಿಸುವ ಹಿಮಾಲಯ ಪರ್ವತಗಳು:

ವಿಸ್ಮಯಗೊಳಿಸುವ ಹಿಮಾಲಯ ಪರ್ವತಗಳು:

ಜಗತ್ತಿನಲ್ಲಿ ಮೊದಲ ಮೂರು ಪ್ರಧಾನ ನದಿ ವ್ಯವಸ್ಥೆಗಳೆಂದರೆ ಗಂಗಾ-ಬ್ರಹ್ಮಪುತ್ರ, ಯಾಂಗ್ಸೆ ಹಾಗೂ ಇಂಡಸ್. ಈ ಮೂರು ನದಿಗಳು ಉಗಮಗೊಳ್ಳುವುದು ಹಿಮಾಲಯಗಳಲ್ಲೆ ಎಂಬುದು ವಿಶೇಷವಾಗಿ ಹೇಳಬೇಕಿಲ್ಲ.

ಚಿತ್ರಕೃಪೆ: Senia L

ವಿಸ್ಮಯಗೊಳಿಸುವ ಹಿಮಾಲಯ ಪರ್ವತಗಳು:

ವಿಸ್ಮಯಗೊಳಿಸುವ ಹಿಮಾಲಯ ಪರ್ವತಗಳು:

ಹಿಮಾಲಯದ ಮಧ್ಯದಲ್ಲಿ ಹಾಗೂ ಕೆಳಸ್ತರಗಳಲ್ಲಿ ಸಸ್ಯ ಸಂಪತ್ತಿನ, ದಟ್ಟ ಕಾಡುಗಳು, ಪೈನ್ ಮರಗಳ, ದೇವದಾರು ಮರಗಳ, ಅಪರೂಪದ ಔಷಧಿ ಗುಣವುಳ್ಳ ಸಸ್ಯಗಳ ಭಂಡಾರವೆ ಇದ್ದರೂ ಮೇಲೇರುವ ಹಾಗೆ ಒಂದು ಸಸ್ಯವೂ ಕಂಡುಬರುವುದಿಲ್ಲ, ಕಾರಣ ಅತಿಯಾದ ಚಳಿ, ಆಮ್ಲಜನಕದ ಕೊರತೆ ಹಾಗೂ ವಿಪರೀತವಾದ ಹವಾಮಾನ. ಸಾಮಾನ್ಯವಾಗಿ ಬೇರೆಲ್ಲೆಡೆಯೂ ಕಂಡುಬರದ ಸುಂದರ ಪುಷ್ಪ.

ಚಿತ್ರಕೃಪೆ: home-ion

ವಿಸ್ಮಯಗೊಳಿಸುವ ಹಿಮಾಲಯ ಪರ್ವತಗಳು:

ವಿಸ್ಮಯಗೊಳಿಸುವ ಹಿಮಾಲಯ ಪರ್ವತಗಳು:

ಕೆಲ ಸ್ಥಳಗಳು ಎಷ್ಟು ಚೆನಾಗಿದ್ದರೂ ಅಷ್ಟೆ, ಜನರು ಭೇಟಿ ನೀಡುವುದೆ ಇಲ್ಲ. ಅಂತಹ ಸ್ಥಳಗಳ ಪೈಕಿ ಹಿಮಾಲಯ ಪರ್ವತಗಳು ಸಹ ಒಂದು. ಹಿಮಾಲಯದ ಬುಡದಲ್ಲಿರುವ ಮಧ್ಯದಲ್ಲಿರುವ ಅಪಾರ ಆಕರ್ಷಣೆಯ ಪ್ರದೇಶಗಳಿಗೆ ಜನರು/ಪ್ರವಾಸಿಗರು ಭೇಟಿ ನೀಡುತ್ತಾರಾದರೂ ಹಿಮಾಲಯ ಪರ್ವತಗಳಿಗೆ ಭೇಟಿ ನಿಡುವವರ ಸಂಖ್ಯೆ ಅತಿ ವಿರಳ. ಕೇವಲ ಸಾಹಸಿಗ, ವೃತ್ತಿಪರ ಚಾರಣಿಗರು ಇಲ್ಲಿನ ಪರ್ವತ ಪ್ರದೇಶಗಳಿಗೆ ಭೇಟಿ ನೀಡುತ್ತಾರೆ. ಹಿಮಾಚಲ ಪ್ರದೇಶದ ಕಿನ್ನೌರ್ ಹಾಗೂ ಟಿಬೆಟ್ ಗಡಿಗಳ ಮಧ್ಯದಲ್ಲಿ ಹಿಮಾಲಯದ ಸುಂದರ ನೋಟ.

ಚಿತ್ರಕೃಪೆ: Partha Chowdhury

ವಿಸ್ಮಯಗೊಳಿಸುವ ಹಿಮಾಲಯ ಪರ್ವತಗಳು:

ವಿಸ್ಮಯಗೊಳಿಸುವ ಹಿಮಾಲಯ ಪರ್ವತಗಳು:

ಹಿಮಾಲಯ ಪ್ರಾಕೃತಿಕ ವೈಭವವಾಗಿ ಮಾತ್ರವಲ್ಲದೆ ಧಾರ್ಮಿಕವಾಗಿಯೂ ಸಾಕಷ್ಟು ಹೆಸರುಗಳಿಸಿದೆ. ಹಿಂದುಗಳು, ಸಿಖ್ಖರು ಹಾಗೂ ಬೌದ್ಧರು ನಡೆದುಕೊಳ್ಳುವ ಸಾಕಷ್ಟು ಯಾತ್ರಾ ಕ್ಷೇತ್ರಗಳು ಹಿಮಾಲಯದ ವಿವಿಧ ಭಾಗಳಲ್ಲೆ ಕಂಡುಬರುತ್ತವೆ. ಕೇದಾರನಾಥದಿಂದ ಕಾಣುವ ಹಿಮಾಲಯ.

ಚಿತ್ರಕೃಪೆ: Paul Hamilton

ವಿಸ್ಮಯಗೊಳಿಸುವ ಹಿಮಾಲಯ ಪರ್ವತಗಳು:

ವಿಸ್ಮಯಗೊಳಿಸುವ ಹಿಮಾಲಯ ಪರ್ವತಗಳು:

ಅಮರನಾಥ, ಬದರಿನಾಥ, ಕೇದಾರನಾಥ, ಗಂಗೋತ್ರಿ, ಯಮುನೋತ್ರಿ, ಹೇಮಕುಂಡ ಸಾಹಿಬ್ ಮುಂತಾದ ಪವಿತ್ರ ಸ್ಥಳಗಳು ಹಿಮಾಲಯ ಪರ್ವತ ಪ್ರದೇಶಗಳ ಬಳಿಯಲ್ಲೆ ಸ್ಥಿತವಿರುವುದನ್ನು ಗಮನಿಸಬಹುದು. ಉತ್ತರಾಖಂಡದ ಚಮೋಲಿಯಲ್ಲಿರುವ ಗುರುದ್ವಾರಾ ಹೇಮಕುಂಡ ಸಾಹಿಬ್.

ಚಿತ್ರಕೃಪೆ: Satbir 4

ವಿಸ್ಮಯಗೊಳಿಸುವ ಹಿಮಾಲಯ ಪರ್ವತಗಳು:

ವಿಸ್ಮಯಗೊಳಿಸುವ ಹಿಮಾಲಯ ಪರ್ವತಗಳು:

ಇನ್ನೂ ಹಿಮಾಲಯದ ಪಶ್ಚಿಮ ಭಾಗದಲ್ಲಂತೂ ತಪೋಭೂಮಿಯಾದ ಉತ್ತರಾಖಂಡವು ಸ್ಥಿತವಿದ್ದು ಇಲ್ಲಿ ಅಸಂಖ್ಯಾತ ಧಾರ್ಮಿಕ ಕ್ಷೇತ್ರಗಳನ್ನು ಕಾಣಬಹುದಾಗಿದೆ. ಉತ್ತರಾಖಮ್ಡದ ಗಡ್ವಾಲ್ ಪ್ರದೇಶದಲ್ಲಿರುವ ಚೌಖಂಬಾ ಎಂಬ ದಟ್ಟ ಪರ್ವತ ಶಿಖರ.

ಚಿತ್ರಕೃಪೆ: Paul Hamilton

ವಿಸ್ಮಯಗೊಳಿಸುವ ಹಿಮಾಲಯ ಪರ್ವತಗಳು:

ವಿಸ್ಮಯಗೊಳಿಸುವ ಹಿಮಾಲಯ ಪರ್ವತಗಳು:

ಹಿಮಾಲಯದ ತಪ್ಪಲಿನಲ್ಲಿ ದೊರೆಯುವ ಔಷಧಿಯ ಗುಣವುಳ್ಳ ಗಿಡ ಮೂಲಿಕೆಗಳು ಬೇರೆಲ್ಲೂ ಸಿಗದ ಅತಿ ಶುದ್ಧವಾದವುಗಳೆಂದು ಪರಿಗಣಿಸಲಾಗುತ್ತದೆ. ಗಾಯಗಳಿಗೆ ನಂಜಾಗದಂತೆ, ಕೊಳೆಯದಂತೆ ತಡೆಯುವ ಥೈಮೋಲ್ ಎಂಬ ವಿಶಿಷ್ಟ ಸಸ್ಯ.

ವಿಸ್ಮಯಗೊಳಿಸುವ ಹಿಮಾಲಯ ಪರ್ವತಗಳು:

ವಿಸ್ಮಯಗೊಳಿಸುವ ಹಿಮಾಲಯ ಪರ್ವತಗಳು:

ತನ್ನ ಶುದ್ಧ ವಾತಾವರಣ ಹಾಗೂ ಪಾವಿತ್ರ್ಯತೆಯಿಂದಾಗಿ ಅನಾದಿ ಕಾಲದಿಂದಲೂ ಹಿಮಾಲಯ ನೂರಾರು ಋಷಿ ಮುನಿಗಳಿಗೆ, ಗುರುಗಳಿಗೆ, ಸಂತರಿಗೆ ಸ್ವಾಗತಿಸಿ ಬಿಗಿದಪ್ಪಿಕೊಂಡಿದೆ. ಆದಿ ಶಂಕರರಿರಬಹುದು, ವಿವೇಕಾನಂದರಿರಬಹುದು, ವಿಜ್ಞಾನಿ ಜೆ ಸಿ ಬೋಸ್ ಇರಬಹುದು ಎಲ್ಲರೂ ಹಿಮಾಲಯವನ್ನು ಅನ್ವೇಷಿಸಿ ಹಾಡಿ ಹೊಗಳಿದ್ದಾರೆ.

ಚಿತ್ರಕೃಪೆ: cea +

ವಿಸ್ಮಯಗೊಳಿಸುವ ಹಿಮಾಲಯ ಪರ್ವತಗಳು:

ವಿಸ್ಮಯಗೊಳಿಸುವ ಹಿಮಾಲಯ ಪರ್ವತಗಳು:

ಇನ್ನೂ ಭಾರತದ ಹಿಮಾಲಯ ಭಾಗದಲ್ಲಿ ಸಾಹಸಿಗ ಪ್ರವಾಸಿಗರಿಗೆ ಹಾಗೂ ವೃತ್ತಿಪರರಿಗೆ ಸಂತೋಷ ನೀಡುವ ಸಾಕಷ್ಟು ಟ್ರೆಕ್ ಮಾರ್ಗಗಳನ್ನು ಕಾಣಬಹುದಾಗಿದೆ. ಗಂಗೋತ್ರಿ ಟ್ರೆಕ್, ಗೋಚಾ ಲಾ ಟ್ರೆಕ್, ಮರ್ಖಾ ಕಣಿವೆ ಟ್ರೆಕ್, ಪಿನ್ ಪಾರ್ವತಿ, ಸೌರ್ಕುಂದಿ ಪಾಸ್ ಹೀಗೆ ಹಲವಾರು ರೋಮಾಂಚಕ ಚಾರಣ ಮಾರ್ಗಗಳು ಹಿಮಾಲಯದಲ್ಲಿವೆ. ಸರ್ ಪಾಸ್ ಟ್ರೆಕ್ ಹಿಮಾಚಲದ ಕಸೋಲ್ ನಿಂದ ಪ್ರಾರಂಭವಾಗುವ ಟ್ರೆಕ್.

ಚಿತ್ರಕೃಪೆ: Chandramohan B V

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X