» »ಈ ರಹಸ್ಯಗಳು ಎಂದೂ ಭೇದಿಸಲಾಗದು!!!

ಈ ರಹಸ್ಯಗಳು ಎಂದೂ ಭೇದಿಸಲಾಗದು!!!

Written By:

ಭಾರತ ದೇಶವೇ ಒಂದು ರಹಸ್ಯಮಯವಾದ ತಾಣವಾಗಿದೆ. ಯಾವಾಗ? ಎಲ್ಲಿ? ಹೇಗೆ ರಹಸ್ಯಗಳು ನಡೆಯುತ್ತವೆಯೋ ಯಾರಿಗೂ ತಿಳಿಯುವುದಿಲ್ಲ. ಒಂದು ಬಾರಿ ಗತಕಾಲವನ್ನು ಪರಿಶೀಲಿಸಿದರೆ ಚರಿತ್ರೆ, ಸಂಪ್ರದಾಯಗಳು, ಸಂಸ್ಕøತಿಗಳು, ಇತಿಹಾಸಗಳು, ಪುರಾಣಗಳು ಇವೆಲ್ಲವೂ ನಮ್ಮ ಭಾರತ ದೇಶದಲ್ಲಿಯೇ ಹುಟ್ಟಿದ್ದು. ಕೆಲವನ್ನು ಕಣ್ಣಾರೆ ಕಂಡು ಆನಂದಿಸಿದರೆ, ಇನ್ನು ಕೆಲವು ಆಶ್ಚರ್ಯವನ್ನು, ಅದ್ಭುತವನ್ನು ಉಂಟುಮಾಡುತ್ತದೆ.

ಕೆಲವು ಆಶ್ಚರ್ಯಕ್ಕೆ ಒಳಪಡಿಸಿದರೆ ಮತ್ತೆ ಕೆಲವು ಅದ್ಭುತವಾಗಿ ಪರಿಣಮಿಸುತ್ತದೆ. ಭಾರತ ದೇಶದಲ್ಲಿ ಎಲ್ಲಿ ನೋಡಿದರೂ ಕೂಡ ದೇವಾಲಯಗಳು ದರ್ಶನ ನೀಡುತ್ತವೆ. ಆದರೆ ಇವುಗಳಲ್ಲಿ ಕೆಲವು ಕ್ಷೇತ್ರಗಳು ತನ್ನ ರಹಸ್ಯದ ಮೂಲಕ ಭಕ್ತರಿಗೆ ಹಾಗು ಪ್ರವಾಸಿಗರಿಗೆ ಆಶ್ಚರ್ಯಕ್ಕೆ ಹಾದಿ ಮಾಡಿಕೊಡುತ್ತದೆ.

ಪುರಾತತ್ವ ಶಾಖೆಯವರು ಕೂಡ ಈ ದೇವಾಲಯಗಳ ರಹಸ್ಯಗಳನ್ನು ಭೇದಿಸುವಲ್ಲಿ ಅಸಫಲರಾಗಿದ್ದಾರೆ. ಅಂದಿನ ಕಟ್ಟಡ ನಿರ್ಮಾಣದ ಶೈಲಿಯ ನೈಪುಣ್ಯತೆಯನ್ನು ಮೆಚ್ಚಲೇಬೇಕಾಗಿದೆ. ಪ್ರಸ್ತುತ ಲೇಖನದಲ್ಲಿ ಭಾರತ ದೇಶದಲ್ಲಿನ ರಹಸ್ಯವನ್ನು ಅಡಗಿಸಿಕೊಂಡಿರುವ ದೇವಾಲಯದ ಬಗ್ಗೆ ಮಾಹಿತಿಯನ್ನು ಪಡೆಯೋಣ.

ಗುರುದ್ವಾರಾ

ಗುರುದ್ವಾರಾ

ಗುರುದ್ವಾರಾ ಪಂಜಾಬ್‍ನಲ್ಲಿನ ಮೊಹೌಲಿಯಲ್ಲಿದೆ. ಇಲ್ಲಿ ಸಿಕ್ಕರ 7 ನೇ ಗುರುವಾದ ಹಾರ್ ರಾಯ್ ಈ ಪ್ರದೇಶವನ್ನು 16 ನೇ ಶತಮಾನದಲ್ಲಿ ಸಂದರ್ಶಿಸಿದನಂತೆ. ಗುರುದ್ವಾರದಲ್ಲಿ ಆಶ್ಚರ್ಯ ಚಕಿತರನ್ನಾಗಿಸುವ ವಿಷಯವೆನೆಂದರೆ ಈ ಸ್ಥಳದಲ್ಲಿರುವ ಅತಿ ಹೆಚ್ಚು ಮಾವಿನ ಮರಗಳು. ಯಾವುದೇ ಕಾಲದಲ್ಲಿಯೂ ಕೂಡ ಮಾವುಗಳನ್ನು ಈ ಮರವು ನೀಡುತ್ತದೆ.

PC:Rochelle Stuve

ಯಾಗಂಟಿ

ಯಾಗಂಟಿ

ಯಾಗಂಟಿ ದೇವಾಲಯವು ಆಂಧ್ರ ಪ್ರದೇಶದಲ್ಲಿನ ಪ್ರಸಿದ್ಧವಾದ ಕ್ಷೇತ್ರವಾಗಿದೆ. ಉಮಾ ಮಹೇಶ್ವರ ದೇವಾಲಯದಲ್ಲಿನ ನಂದಿ ವಿಗ್ರಹವು ಒಂದು ರಹಸ್ಯವಾಗಿಯೇ ಉಳಿದಿದೆ. ಮೊದ ಮೊದಲು ಚಿಕ್ಕದಾಗಿಯೇ ಇದ್ದ ನಂದಿಯು ಇಂದು ದೇವಾಲಯದ ಪ್ರಾಂಗಣವನ್ನೇ ಆಕ್ರಮಿಸಿಕೊಂಡು ಬೆಳೆದಿದೆ. ಇದು ಎಲ್ಲಾ ಪ್ರವಾಸಿಗರಿಗೂ ಆಶ್ಚರ್ಯವಾಗುವಂತೆ ಮಾಡುತ್ತದೆ.

PC:Rama Mahendravada

ಲೇಪಾಕ್ಷಿ, ಆಂಧ್ರ ಪ್ರದೇಶ

ಲೇಪಾಕ್ಷಿ, ಆಂಧ್ರ ಪ್ರದೇಶ

ಅನಂತಪುರಂ ಜಿಲ್ಲೆಯಲ್ಲಿದೆ ಲೇಪಾಕ್ಷಿ. ಈ ದೇವಾಲಯದ ಸ್ತಂಭಗಳು ನಿಗೂಢವಾಗಿಯೇ ಉಳಿದಿದೆ. ಈ ಅದ್ಭುತವಾದ ದೇವಾಲಯವನ್ನು 16 ನೇ ಶತಮಾನದಲ್ಲಿ ವಿಜಯನಗರ ಮಾದರಿಯಲ್ಲಿ ನಿರ್ಮಾಣ ಮಾಡಿದರು. ಒಂದು ಸ್ತಂಭ ಮಾತ್ರ ನೆಲಕ್ಕೆ ತಾಕದೇ ಹಾಗೆಯೇ ತೆಲುವ ಸ್ಥಿತಿಯಲ್ಲಿಯೇ ಇರುವುದನ್ನು ಕಾಣಬಹುದು. ಈ ವಿಸ್ಮಯವನ್ನು ಕಾಣಲು ದೇಶದ ಮೂಲೆ ಮೂಲೆಗಳಿಂದಲೇ ಅಲ್ಲದೇ ವಿದೇಶಗಳಿಂದಲೂ ಕೂಡ ಪ್ರವಾಸಿಗರು ಭೇಟಿ ನೀಡುತ್ತಾರೆ.

PC:Karthik Abhiram

ಹಜರತ್ ಕಮಾರಾಲಿ ದರ್‍ವೇಶ್ ದರ್ಗಾ, ಪುಣೆ

ಹಜರತ್ ಕಮಾರಾಲಿ ದರ್‍ವೇಶ್ ದರ್ಗಾ, ಪುಣೆ

ಈ ದರ್ಗಾದಲ್ಲಿ 90 ಕೆ.ಜಿ ಭಾರದ ಕಲ್ಲು ಪ್ರತ್ಯೇಕವಾದ ಆಕರ್ಷಣೆಯಾಗಿದೆ. ಇಲ್ಲಿ ಸರಿಯಾಗಿ 11 ಮಂದಿ ಭಕ್ತರು ತಮ್ಮ 2 ಬೆರಳುಗಳಿಂದ ಆ 90 ಕೆ.ಜಿ ಭಾರವಾದ ಕಲ್ಲನ್ನು ಎತ್ತುತ್ತಾರೆ. ಆ ಕಲ್ಲನ್ನು ಎತ್ತುವ ಸಂದರ್ಭದಲ್ಲಿ ಹಜರತ್ ಕಮಾರಾಲಿ ದರ್‍ವೇಶ್ ಎಂದು ಕೂಗುತ್ತಾ ಎತ್ತಬೇಕು. ಭಕ್ತಿಯಿಂದ ಎತ್ತಿದ್ದರೆ ಆ ವಿಶೇಷವಾದ ಕಲ್ಲು 10 ರಿಂದ 11 ಅಡಿ ಎತ್ತರದಲ್ಲಿ ಗಾಳಿಯಲ್ಲಿ ಹಾರುತ್ತದೆ ಎಂತೆ.

PC:amal Khan abkamalkhan

ತಂಜಾವೂರು

ತಂಜಾವೂರು

ತಂಜಾವೂರಿನ ಬೃಹದೀಶ್ವರ ದೇವಾಲಯವು ಎಂದಿಗೂ ಒಂದು ಅಂಶವನ್ನು ರಹಸ್ಯವಾಗಿಯೇ ಅಡಗಿಸಿಕೊಂಡಿದೆ. ಇದನ್ನು ರಾಜಾ ರಾಜಾ ಚೋಳ ಕ್ರಿ.ಶ 11 ನೇ ಶತಮಾನದಲ್ಲಿ ನಿರ್ಮಾಣ ಮಾಡಿದನು. ಈ ದೇವಾಲಯದ ಪ್ರಧಾನ ರಹಸ್ಯವೆನೆಂದರೆ ಅದು "ನೆರಳು". ಮಧ್ಯಾಹ್ನದ ವೇಳೆಯಲ್ಲಿ ದೇವಾಲಯದ ಛಾಯ (ನೆರಳು) ಭೂಮಿಗೆ ತಾಕುವುದಿಲ್ಲ.

ಯಾವುದೇ ಕಾರಣಕ್ಕೂ ದೇವಾಲಯದ ನೆರಳು ಭೂಮಿಗೆ ತಾಕದಂತೆ ಬೃಹದೀಶ್ವರ ದೇವಾಲಯವನ್ನು ನಿರ್ಮಾಣ ಮಾಡಿರುವುದು ಇಂದಿಗೂ ರಹಸ್ಯವಾಗಿಯೇ ಇದೆ. ಇಷ್ಟೇ ಅಲ್ಲದೇ ದೇವಾಲಯದ ನಿರ್ಮಾಣಕ್ಕೆ ಬಳಸಿದ ಗ್ರಾನೈಟ್ ಕಲ್ಲನ್ನು ಹೇಗೆ ತೆಗೆದುಕೊಂಡು ಬಂದರು ಎಂಬುದು ಕೂಡ ಯಾರಿಗೂ ತಿಳಿದಿಲ್ಲ.

PC:Amit Rawat

ತೆಪೆರುಮನಲ್ಲೂರು

ತೆಪೆರುಮನಲ್ಲೂರು

ತಮಿಳುನಾಡು ರಾಜ್ಯದ ತೆಪ್ಪೆರುಮನಲ್ಲೂರ್ ಶಿವಾಲಯದಲ್ಲಿ ಹಲವಾರು ಆಶ್ಚರ್ಯಕರವಾದ ಸಂಘಟನೆಗಳು ನಡೆಯಿತು. ಈ ದೇವಾಲಯದಲ್ಲಿ ಒಂದು ನಾಗರ ಹಾವು ಸ್ವಯಂ ಶಿವಾರಾಧನೆ ಮಾಡುವುದು ಎಲ್ಲಾ ಭಕ್ತಾಧಿಗಳಿಗೆಲ್ಲಾ ಆಶ್ಚರ್ಯ ಮಾಡಿತು.

2010 ರಲ್ಲಿ ಒಂದು ದಿನ ಬೆಳಗ್ಗೆ ದೇವಾಲಯದ ಪೂಜಾರಿ ದೇವಾಲಯಕ್ಕೆ ತೆರಳುವ ಸಮಯದಲ್ಲಿ ಒಂದು ಹಾವು ಶಿವಲಿಂಗದ ಮೇಲೆ ಇರುವುದನ್ನು ಗಮನಿಸಿದರು. ಆ ಹಾವು ದೇವಾಲಯದಲ್ಲಿರುವ ಬಿಲ್ವ ಪತ್ರೆಯ ಮರದ ಮೇಲೆ ಏರಿ, ಬಿಲ್ವ ಪತ್ರೆಯನ್ನು ಶೇಖರಿಸಿ ನಂತರ ಶಿವಲಿಂಗದ ಸಮೀಪದಲ್ಲಿ ಸೇರಿಕೊಳ್ಳುತ್ತಿತ್ತಂತೆ. ಹೀಗೆ ಶೇಖರಿಸಿದ ಬಿಲ್ವ ಪತ್ರೆಯನ್ನು ಹಾವು ತನ್ನ ಬಾಯಿಯಿಂದ ಒಂದೊಂದೆ ಎಲೆಗಳನ್ನು ತನ್ನ ಬಾಯಿಯ ಸಹಾಯದಿಂದ ಶಿವನಿಗೆ ಅರ್ಪಿಸುತ್ತಿತ್ತಂತೆ.

ಪೂರಿ ಜಗನ್ನಾಥ ದೇವಾಲಯ

ಪೂರಿ ಜಗನ್ನಾಥ ದೇವಾಲಯ

ಪೂರಿ ಜಗನ್ನಾಥ ದೇವಾಲಯದ ನೆರಳು ಯಾವುದೇ ಸಮಯದಲ್ಲಿಯೂ ಕಾಣುವುದಿಲ್ಲ. ಅಸಲಿಗೆ ಈ ದೇವಾಲಯದಲ್ಲಿ ಹಲವಾರು ವಿಶೇಷ ರಹಸ್ಯಗಳನ್ನು ನಾವು ಕಾಣಬಹುದು. ದೇವಾಲಯದ ಸಿಂಹ ದ್ವಾರ (ಪ್ರವೇಶ ದ್ವಾರ) ದ ಬಳಿ ಕಿವಿಯನ್ನು ಇಟ್ಟು ಕೇಳಿದರೆ ಸಮುದ್ರದ ಅಲೆಗಳ ಶಬ್ಧಗಳು ಕೇಳಿಸುತ್ತದೆ.

ಹಾಗೆಯೇ ದೇವಾಲಯದ ಒಳಗೆ ಸ್ವಲ್ಪ ದೂರ ಹೋಗಿ ಮತ್ತೇ ಬಂದು ಕಿವಿ ಇಟ್ಟು ಕೇಳಿದರೆ ಆ ಸಮುದ್ರದ ಶಬ್ಧ ಕೇಳಿಸುವುದೇ ಇಲ್ಲ. ಮತ್ತೊಂದು ರಹಸ್ಯವೆನೆಂದರೆ ಈ ದೇವಾಲಯದಲ್ಲಿನ ಪಾಕ ಶಾಲೆಯಲ್ಲಿ ತಯಾರಿಸಿದ ಪ್ರಸಾದವು ಎಂದಿಗೂ ಉಳಿಯುವುದೂ ಇಲ್ಲ, ಕಡಿಮೆ ಕೂಡ ಆಗುವುದಿಲ್ಲ. ಅಂದರೆ ಆ ದೇವಾಲಯಕ್ಕೆ ಅಂದು ಬರುವ ಭಕ್ತಾಧಿಗಳಿಗೆ ಸರಿಸಮವಾಗಿ ಪ್ರಸಾದ ಪಾಕ ಶಾಲೆಯಲ್ಲಿ ತಯಾರಾಗುತ್ತದೆ. ಅದು ಹೇಗೆ ಸಾಧ್ಯ ಎಂಬುದು ಕೂಡ ನಿಗೂಢವಾಗಿಯೇ ಉಳಿದಿದೆ.

PC:Ajay Goyal

ಶನಿ ಸಿಂಗಾಪೂರ್

ಶನಿ ಸಿಂಗಾಪೂರ್

ಶನಿ ಸಿಂಗಾಪುರವು ಮಹಾರಾಷ್ಟ್ರದಲ್ಲಿನ ಅತ್ಯಂತ ಪುಣ್ಯಕ್ಷೇತ್ರಗಳಲ್ಲಿ ಒಂದು. ಆಶ್ಚರ್ಯ ಏನಪ್ಪ ಎಂದರೆ ಈ ದೇವಾಲಯವಿರುವ ಗ್ರಾಮದಲ್ಲಿ ಹಲವಾರು ಮನೆಗಳು ಇವೆ. ಆ ಮನೆಗಳಲ್ಲಿಗೆ ಒಂದು ಬಾಗಿಲು ಕೂಡ ಇಲ್ಲ ಎಂದರೆ ನೀವು ನಂಬುತ್ತೀರಾ?. ಇಷ್ಟೇ ಅಲ್ಲ ಈ ಗ್ರಾಮದಲ್ಲಿ ಬ್ಯಾಂಕ್‍ಗಳಿಗೆ ಕೂಡ ಬಾಗಿಲು ಹಾಕುವುದಿಲ್ಲ. ಏಕೆಂದರೆ ಈ ಗ್ರಾಮದಲ್ಲಿ ಕಳ್ಳತನ ಮಾಡಿದರೆ ಶನಿದೇವನು ಶಿಕ್ಷಿಸುತ್ತಾನೆ ಎಂಬ ನಂಬಿಕೆ ಜನರದ್ದು.

PC:Vithu.123

ಅಜಂತಾ, ಎಲ್ಲೋರಾ

ಅಜಂತಾ, ಎಲ್ಲೋರಾ

ಅಜಂತಾ, ಎಲ್ಲೋರಾ ಮಹಾರಾಷ್ಟ್ರದ ಅದ್ಭುತವಾದ ಗುಹೆಗಳು. ಈ ಗುಹೆಗಳ ಸಮೀಪದಲ್ಲಿ ಒಂದು ಕೈಲಾಸ ದೇವಾಲಯವನ್ನು ನಿರ್ಮಾಣ ಮಾಡಿದ್ದಾರೆ. ಆ ದೇವಾಲಯವನ್ನು ಯಾರೇ ಕಂಡರು ಆಶ್ಚರ್ಯ ಪಡೆದೇ ಇರಲಾರರು.

ಏಕೆಂದರೆ ಬೆಟ್ಟಗಳ ಮೇಲಿನಿಂದ ಕೆತ್ತಿರುವ ಏಕ ಶೀಲ ದೇವಾಲಯ ಇದಾಗಿದೆ. ಹೇಗೆ ಈ ದೇವಾಲಯವನ್ನು ನಿರ್ಮಾಣ ಮಾಡಿದರು ಎಂಬುದು ಒಂದು ರಹಸ್ಯವಾಗಿಯೇ ಉಳಿದಿದೆ. ಅಂದಿನ ಶಿಲ್ಪಿಗಳ ಕಲಾ ನೈಪುಣ್ಯಕ್ಕೆ ಮೆಚ್ಚಲೇಬೇಕಾಗಿದೆ. ಆಶ್ಚರ್ಯ ಏನಪ್ಪ ಎಂದರೆ ಈ ಕೈಲಾಸ ದೇವಾಲಯವನ್ನು ಯಾರು ನಿರ್ಮಾಣ ಮಾಡಿದರು ಎಂಬುದು ಯಾರಿಗೂ ತಿಳಿದಿಲ್ಲ.

PC:MizieB

ಸೋಲಾಪುರ್

ಸೋಲಾಪುರ್

ಮಹಾರಾಷ್ಟ್ರದಲ್ಲಿನ ಸೋಲಾಪುರ್ ಬೆಡ್ ಷಿಟ್‍ಗಳಿಗೆ ಅತ್ಯಂತ ಪ್ರಸಿದ್ಧವಾದುದು. ಜಿಲ್ಲೆಯಲ್ಲಿನ ಒಂದು ಗ್ರಾಮದಲ್ಲಿ ಹಾವುಗಳನ್ನು ಪೂಜೆ ಮಾಡುವುದು ವಾಡಿಕೆಯಾಗಿದೆ. ಆಶ್ಚರ್ಯ ಏನಪ್ಪ ಎಂದರೆ ಈ ಗ್ರಾಮದ ಪ್ರತಿ ಮನೆಯಲ್ಲಿಯೂ ಹಾವುಗಳಿಗೆ ಎಂದು ಪ್ರತ್ಯೇಕವಾದ ಪ್ರದೇಶವನ್ನು ಕಲ್ಪಿಸುತ್ತಾರಂತೆ. ಪ್ರತಿ ಮನೆಯಲ್ಲಿ ಮಾನವರ ಹಾಗೆ ಹಾವುಗಳು ಕೂಡ ತಿರುಗುತ್ತಾ ಇರುತ್ತವೆ. ಇಂದಿನವರೆವಿಗೂ ಹಾವು ಕಡಿತಕ್ಕೆ ಒಳಗಾದವರು ಯಾರು ಇಲ್ಲ ಎಂದು ವರದಿಯಾಗಿದೆ.

Srinayan Puppala

ಖಬೀಸ್ ಬಾಬಾ ದೇವಾಲಯ

ಖಬೀಸ್ ಬಾಬಾ ದೇವಾಲಯ

ಉತ್ತರ ಪ್ರದೇಶದಲ್ಲಿನ ಸೀತಾಪುರ್ ಎಂಬ ರಾಜ್ಯದಲ್ಲಿ ಖಬೀಸ್ ಬಾಬಾ ದೇವಾಲಯದಲ್ಲಿ ಹಲವಾರು ವಿಚಿತ್ರವನ್ನು ಕಾಣಬಹುದು. ಈ ದೇವಾಲಯದಲ್ಲಿ ಯಾವುದೇ ವಿಗ್ರಹಗಳು ಇರುವುದಿಲ್ಲ. ಹಾಗೆಯೇ ಪೂಜಾರಿ ಕೂಡ ಇರುವುದಿಲ್ಲ.

ಈ ದೇವಾಲಯವನ್ನು 150 ವರ್ಷಗಳ ಹಿಂದೆ ನಿರ್ಮಾಣ ಮಾಡಿದರು ಎಂದು ಸ್ಥಳೀಯರು ಹೇಳುತ್ತಾರೆ. ಮಹಾ ಶಿವಭಕ್ತನಾದ ಖಬೀಸ್ ಬಾಬಾ ಈ ದೇವಾಲಯದಲ್ಲಿ ನೆಲೆಸಿರುತ್ತಾನೆ. ಇತನು ಸಂಜೆಯ ಸಮಯದಲ್ಲಿ ಭಕ್ತರು ನೀಡುವ ಮದ್ಯವನ್ನು ಸೇವಿಸಿ.. ಭಕ್ತರಿಗೆ ಅನಾರೋಗ್ಯ ಸಮಸ್ಯೆಗಳನ್ನು ಗುಣಪಡಿಸುತ್ತಾನೆ ಎಂದು ಇಲ್ಲಿನ ಭಕ್ತರ ನಂಬಿಕೆಯಾಗಿದೆ.

ಶ್ರವಣ ಬೆಳಗೊಳ

ಶ್ರವಣ ಬೆಳಗೊಳ

ನಮ್ಮ ಕರ್ನಾಟಕ ರಾಜ್ಯದಲ್ಲಿನ ಶ್ರವಣ ಬೆಳಗೊಳದ ಗೊಮ್ಮಟೇಶ್ವರ ವಿಗ್ರಹ (ಬಾಹುಬಲಿ) ವು ದೇಶದಲ್ಲಿಯೇ ಅತ್ಯಂತ ಎತ್ತರವಾದ ವಿಗ್ರಗಳ ಪೈಕಿ ಒಂದಾಗಿದೆ. ಇದರ ಎತ್ತರ ಸುಮಾರು 60 ಅಡಿ. ಗೊಮ್ಮಟೇಶ್ವರನು ಮೂಲತಃ ಜೈನ ಗುರುವು. ಜೈನ ಧರ್ಮದ 2 ಪಂಥಗಳಾದ ಶ್ವೇತಾಂಬರರು ಹಾಗು ದಿಗಂಬರರು ಈ ಪುಣ್ಯ ಕ್ಷೇತ್ರಕ್ಕೆ ತೆರಳಿ ತಮ್ಮ ಗುರುವಿಗೆ ಪೂಜೆಗಳನ್ನು ನೆರವೇರಿಸುತ್ತಾರೆ. ಈ ವಿಗ್ರವು 30 ಕಿ.ಮೀ ದೂರದಲ್ಲಿದ್ದರೂ ಕೂಡ ಸ್ಪಷ್ಟವಾಗಿ ಕಾಣುತ್ತದೆ.

PC: sree314

ಅಮ್ರೆಹಾ

ಅಮ್ರೆಹಾ

ಉತ್ತರ ಪ್ರದೇಶದಲ್ಲಿನ ಅಮ್ರೆಹಾ, ಫಾರುದ್ದೀನ್ ಷಾರ ಪುಣ್ಯ ಕ್ಷೇತ್ರವಿದೆ. ಈ ಕ್ಷೇತ್ರದ ಸುತ್ತಲೂ ರಕ್ಷಣೆಯಾಗಿ ಚೇಳುಗಳು ಇರುತ್ತವೆ. ಇವುಗಳು ಯಾರನ್ನು ಹಾನಿ ಮಾಡುವುದಿಲ್ಲ. ಇಂಥಹದೇ ದೇವಾಲಯವು ಆಂಧ್ರ ಪ್ರದೇಶದಲ್ಲಿನ ಕರ್ನೂಲ್ ಜಿಲ್ಲೆಯಲ್ಲಿಯೂ ಇರುವುದನ್ನು ಕಾಣಬಹುದು. ಅಲ್ಲಿಯೂ ಕೂಡ ಚೇಳುಗಳು ಯಾರಿಗೂ ಯಾವುದೇ ರೀತಿಯ ಹಾನಿ ಮಾಡುವುದಿಲ್ಲ. ಈ ಗ್ರಾಮದಲ್ಲಿ ಮಾಡುವ ಜಾತ್ರೆಯ ಸಮಯದಲ್ಲಿ ಪ್ರವಾಸಿಗರು ದೇವಾಲಯಕ್ಕೆ ಭೇಟಿ ನೀಡಬಹುದು.

PC:NADEEM NAQVI

ಮಮ್ಮಿ

ಮಮ್ಮಿ

ಮಮ್ಮಿ ಎಂದಾಕ್ಷಣ ದೆವ್ವ, ಭೂತ ಅಥವಾ ತಾಯಿ ಎಂದು ಭಾವಿಸಬಹುದು. ಅಷ್ಟೇ ಅಲ್ಲದೇ ಇದು ಈಜಿಫ್ಟ್ ಮಮ್ಮಿ ಕೂಡ ಅಲ್ಲ. ಇದು ನಮ್ಮ ಭಾರತ ದೇಶದಲ್ಲಿಯೇ ಇರುವ ಉತ್ತರ ಪ್ರದೇಶದಲ್ಲಿನ ಗ್ಯೂ ಎಂಬ ಗ್ರಾಮದಲ್ಲಿ 500 ವರ್ಷಗಳ ಒಂದು ಮಮ್ಮಿ ಇದೆ. ಇತನನ್ನು ಬೌದ್ಧ ಸನ್ಯಾಸಿಯಾಗಿರಬಹುದು ಎಂದು ಅನುಮಾನ ವ್ಯಕ್ತ ಪಡಿಸಲಾಗಿದೆ. ಆಶ್ಚರ್ಯ ಏನಪ್ಪ ಎಂದರೆ ಈ ಮಮ್ಮಿಗೆ ಹಲ್ಲು, ಚರ್ಮ, ಕೂದಲುಗಳನ್ನು ಕೂಡ ಕಾಣಬಹುದಾಗಿದೆ.

PC:Richard Weil

ವೈದ್ಯರಿಗೆ ಸವಾಲಾಗಿರುವ ಮಿರಾಕಲ್ ಖಾಯಿಲೆ ಇಲ್ಲಿ ಗುಣವಾಗುತ್ತದೆ...

ಮದುವೆಯಲ್ಲಿ ವಿಳಂಬವೇ ಹಾಗಾದರೆ ಈ ದೇವಾಲಯಕ್ಕೆ ತೆರಳಿ

Please Wait while comments are loading...