• Follow NativePlanet
Share
» »ಭಾರತದಲ್ಲಿ ಟಾಪ್ ನ್ಯಾಚುರಲ್ಸ್ ವಂಡರ್ಸ್...!

ಭಾರತದಲ್ಲಿ ಟಾಪ್ ನ್ಯಾಚುರಲ್ಸ್ ವಂಡರ್ಸ್...!

Written By:

ನ್ಯಾಚುರಲ್ಸ್ ವಂಡರ್ಸ್‍ನ ಬಗ್ಗೆ ನೀವು ಎಂದಾದರೂ ಕೇಳಿದ್ದೀರಾ? ಅಥವಾ ನೋಡಿದ್ದೀರಾ? ಅಸಲಿಗೆ ಭಾರತ ದೇಶದಲ್ಲಿ ಅವುಗಳು ಎಷ್ಟಿವೆ ಎಂಬುದರ ಬಗ್ಗೆ ನಿಮಗೆ ಗೊತ್ತ? ಹಾಗಾದರೆ ಒಮ್ಮೆ ಲೇಖನದ ಮೂಲಕ ಆ ಸ್ಥಳಗಳಿಗೆಲ್ಲಾ ಭೇಟಿ ನೀಡಿ ಬರೋಣವೇ?

ಭಾರತದೇಶವು ಒಂದು ಅದ್ಭುತವನ್ನು ತನ್ನಲ್ಲಿ ಅಡಗಿಸಿಕೊಂಡಿರುವ ಸ್ಥಳ. ಇಲ್ಲಿ ಅನೇಕ ರಹಸ್ಯಗಳು, ವಿಭಿನ್ನತೆಗಳು, ವಿಶೇಷತೆಗಳು ಅಡಗಿವೆ. ವಿಜ್ಞಾನವೂ ಕೂಡ ಕಂಡುಹಿಡಿಯಲಾಗದ ಎಷ್ಟೋ ವಿಷಯಗಳು ಇಂದಿಗೂ ರಹಸ್ಯವಾಗಿಯೇ ಉಳಿದಿವೆ. ನಾವು ದೇವಾಲಯಗಳು, ಗೋಪುರಗಳನ್ನು ಆಗಾಗ ದರ್ಶಿಸಿಕೊಳ್ಳುತ್ತಿರುತ್ತೇವೆ. ಆದರೆ ಅವು ಅಷ್ಟಾಗಿ ಆಶ್ಚರ್ಯವನ್ನು ಉಂಟು ಮಾಡುವುದಿಲ್ಲ. ಆದರೆ ಕೆಲವು ಪ್ರದೇಶಗಳು, ದೇವಾಲಯಗಳು, ಪ್ರವಾಸಿ ತಾಣಗಳು ಮಾತ್ರ ಕೆಲವೊಮ್ಮೆ ಆಶ್ಚರ್ಯಕ್ಕೆ ಗುರಿಯಾಗಿಸುತ್ತದೆ. ಆ ಪ್ರದೇಶದಲ್ಲಿನ ಅದ್ಭುತವಾದ ದೃಶ್ಯಗಳ ನಿರ್ಮಾಣವನ್ನು ಯಾರು ಕೂಡ ಮಾಡಿಲ್ಲ. ಬದಲಾಗಿ ಅವೆಲ್ಲವೂ ಸಹಜ ಸಿದ್ಧವಾಗಿ ಏರ್ಪಟ್ಟ ಪ್ರದೇಶಗಳೇ ಆಗಿವೆ. ಆ ಪ್ರಕೃತಿಯ ಸೃಷ್ಟಿಗಳನ್ನು ಕಂಡರೆ ಯಾರೇ ಆಗಲಿ ಆಶ್ಚರ್ಯಗೊಳ್ಳಬೇಕಾಗಿರುವುದೇ.....

ಭಾರತದಲ್ಲಿ ಟಾಪ್ ನ್ಯಾಚುರಲ್ಸ್ ವಂಡರ್ಸ್...!

ಭಾರತದಲ್ಲಿ ಟಾಪ್ ನ್ಯಾಚುರಲ್ಸ್ ವಂಡರ್ಸ್...!

ಮಂಜಿನ ಶಿವಲಿಂಗ
ಅಮರ ನಾಥ ಗುಹೆಯಲ್ಲಿರುವ ಮಂಜಿನ ಶಿವಲಿಂಗ ಹಿಂದೂಗಳಿಗೆ ಪವಿತ್ರವಾದ ಪ್ರದೇಶವೇ ಆಗಿದೆ. ಗುಹೆಯ ಒಳಭಾಗದಲ್ಲಿ ಮಂಜುಗಡ್ಡೆಯಿಂದ ಏರ್ಪಡುವ ಶಿವಲಿಂಗವು ಪೂರ್ತಿಯಾಗಿ ಸಹಸಸಿದ್ಧವಾದುದು. ಈ ಶಿವಲಿಂಗದ ಆಕಾರವು ಪ್ರತಿ ವರ್ಷ ಮೇ ತಿಂಗಳಿನಿಂದ ಆಗಸ್ಟ್ ತಿಂಗಳವರೆಗೆ ಮಾತ್ರವೇ ಇರುತ್ತದೆ. ಅತ್ಯಂತ ಹೆಚ್ಚು ಯಾತ್ರಿಕರು ಭೇಟಿ ನೀಡುವ ಪವಿತ್ರವಾದ ಪುಣ್ಯಕ್ಷೇತ್ರಗಳಲ್ಲಿ ಈ ದೇವಾಲಯವು ಒಂದು.

PC:Gktambe


ಭಾರತದಲ್ಲಿ ಟಾಪ್ ನ್ಯಾಚುರಲ್ಸ್ ವಂಡರ್ಸ್...!

ಭಾರತದಲ್ಲಿ ಟಾಪ್ ನ್ಯಾಚುರಲ್ಸ್ ವಂಡರ್ಸ್...!

ತೂಗುವ ಸೇತುವೆಗಳು
ಪ್ರಪಂಚದಲ್ಲಿ ಅತ್ಯಂತ ಸಹಜವಾಗಿ ಏರ್ಪಟ್ಟ ಪ್ರದೇಶದಲ್ಲಿ ಇದು ಕೂಡ ಒಂದು. ಮೇಘಾಲಯಕ್ಕೆ ಸಮೀಪದಲ್ಲಿರುವ ಈ ಚಿರಾಪುಂಜಿಯಲ್ಲಿ 2 ಮರದ ತೂಗುವ ಸೇತುವೆಗಳು ಇವೆ. ಈ ವಿಚಿತ್ರವನ್ನು ಮಾನವ ನಿರ್ಮಿತವೇ ಎಂದು ದೃಢವಾಗಿ ಹೇಳಬಹುದು. ಅಷ್ಟು ಅಚ್ಚು-ಕಟ್ಟಾಗಿ ಪ್ರಕೃತಿಯು ನಿರ್ಮಾಣ ಮಾಡಿದೆ ಎಂದು ಹೇಳಬಹುದು. ಇದೊಂದು ಅದ್ಭುತವಾದ ನ್ಯಾಚುರಲ್ಸ್ ವಂಡರ್ಸ್. ಈ ಬ್ರಿಡ್ಜ್ ಅನ್ನು ಸುತ್ತಮುತ್ತ ಇರುವ ಸ್ಥಳೀಯರು ಬಳಸುತ್ತಾರೆ.

PC: Arshiya Urveeja Bose

ಭಾರತದಲ್ಲಿ ಟಾಪ್ ನ್ಯಾಚುರಲ್ಸ್ ವಂಡರ್ಸ್...!

ಭಾರತದಲ್ಲಿ ಟಾಪ್ ನ್ಯಾಚುರಲ್ಸ್ ವಂಡರ್ಸ್...!

ಬಟರ್ ಬಾಲ್
ತಮಿಳುನಾಡು ರಾಜ್ಯದ ಮಹಾಬಲೀಪುರಂನಲ್ಲಿನ ಬ್ಯಾಲೆನ್ಸಿಂಗ್ ರಾಕ್ ಅಥವಾ ಬಟರ್ ಬಾಲ್ ಎಲ್ಲಾ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತದೆ. ಇದನ್ನು ಶ್ರೀ ಕೃಷ್ಣನ ಬೆಣ್ಣೆಯ ಮುದ್ದೆ ಎಂದೂ ಕೂಡ ಹೇಳುತ್ತಾರೆ. ಇಲ್ಲಿನ ಒಂದು ಗುಹೆಯಲ್ಲಿ ಶಿವಾಲಯವಿದೆ. ಹಾಗೆಯೇ ಬೀಚ್‍ಗೆ ಸಮೀಪದಲ್ಲಿಯೇ ಈ ಬಂಡೆ ಇದೆ. ಇದನ್ನು ಕಂಡರೆ ಎಲ್ಲಿ ಬೀಳುತ್ತದೆಯೋ ಎಂದು ಕಾಣುತ್ತದೆ. ಆದರೆ ಇದನ್ನು ಎಷ್ಟೇ ಪ್ರಯತ್ನ ಪಟ್ಟರು ಕೂಡ ಕೊಂಚವು ಅಲುಗಾಡುವುದಿಲ್ಲ.

PC: Leon Yaakov


ಭಾರತದಲ್ಲಿ ಟಾಪ್ ನ್ಯಾಚುರಲ್ಸ್ ವಂಡರ್ಸ್...!

ಭಾರತದಲ್ಲಿ ಟಾಪ್ ನ್ಯಾಚುರಲ್ಸ್ ವಂಡರ್ಸ್...!

ಬಿಸಿ ನೀರಿನ ಬುಗ್ಗೆ
ಹಿಮಾಚಲ್ ಪ್ರದೇಶದಲ್ಲಿನ ಕುಲ್ಲು ಜಿಲ್ಲೆಯಲ್ಲಿದೆ ಮಣಿಕರನ್ ಪುಣ್ಯಕ್ಷೇತ್ರ. ಆಶ್ಚರ್ಯ ಏನಪ್ಪ ಎಂದರೆ ಇಲ್ಲಿ ಬಿಸಿಯಾದ ನೀರು. ಅದೇ ಇಲ್ಲಿ ಪ್ರಸಿದ್ಧಿಯಾಗಿದೆ. ಇದು ಕೂಡ ಸಹಜ ಸಿದ್ಧವಾದುದು. ಇದೊಂದು ನ್ಯಾಚುರಲ್ ಆಗಿ ಏರ್ಪಟ್ಟ ವಂಡರ್ಸ್ ಎಂದೇ ಹೇಳಬಹುದು.

PC: Aman Gupta


ಭಾರತದಲ್ಲಿ ಟಾಪ್ ನ್ಯಾಚುರಲ್ಸ್ ವಂಡರ್ಸ್...!

ಭಾರತದಲ್ಲಿ ಟಾಪ್ ನ್ಯಾಚುರಲ್ಸ್ ವಂಡರ್ಸ್...!

ಅಯಸ್ಕಾಂತ ಬೆಟ್ಟ
ಅಯಸ್ಕಾಂತ ಪರ್ವತ, ಇದು ವಿವರಿಸಲಾಗದ ಅದ್ಭುತವಾಗಿದೆ. ಕಾಶ್ಮೀರದಲ್ಲಿನ ಲಡಾಖ್ ಪ್ರದೇಶದಲ್ಲಿರುವ ಈ ಪರ್ವತ ಮಾತ್ರ ಬೇರೆ ಪರ್ವತದ ಹಾಗೆ ಅಲ್ಲ. ಪರ್ವತ ಮೇಲೆ ಕಾರಿನಲ್ಲಿ ಹೋಗಬೇಕು ಎಂದು ಅಂದುಕೊಳ್ಳುವವರು ಹಾಯಾಗಿ ಇಂಜಿನ್ ಆಫ್ ಮಾಡಿಕೊಂಡು ಸ್ಟಿರಿಂಗ್ ಹಿಡಿದುಕೊಂಡು ಕುಳಿತುಕೊಂಡರೆ ಸಾಕು. ಅಯಸ್ಕಾಂತ ಆಕರ್ಷಿಸಿದ ಹಾಗೆ ಕಾರನ್ನು ಎಳೆಯುತ್ತದೆಯಂತೆ. ಸಹಜಸಿದ್ಧವಾಗಿ ಏರ್ಪಟ್ಟ ಈ ಅದ್ಭುತವು ಭಾರತದ ನ್ಯಾಚುರಲ್ಸ್ ವಂಡರ್ಸ್‍ನಲ್ಲಿ ಒಂದಾಗಿದೆ.

PC:: Fulvio Spada

ಭಾರತದಲ್ಲಿ ಟಾಪ್ ನ್ಯಾಚುರಲ್ಸ್ ವಂಡರ್ಸ್...!

ಭಾರತದಲ್ಲಿ ಟಾಪ್ ನ್ಯಾಚುರಲ್ಸ್ ವಂಡರ್ಸ್...!

ಬೊರ್ರಾ ಗುಹೆಗಳು
ಬೋರ್ರಾ ಕೇವ್ಸ್ ಅಥವಾ ಬೊರ್ರಾ ಗುಹೆಗಳಯ ಕೂಡ ಸಹಜಸಿದ್ಧವಾಗಿ ಏರ್ಪಟ್ಟವೇ ಆಗಿವೆ. ಇವು ವಿಶಾಖಪಟ್ಟದಲ್ಲಿನ ಅನಂತಗಿರಿ ಬೆಟ್ಟದಲ್ಲಿ, ಅರಕು ಎಂಬ ಕಣಿವೆಯಲ್ಲಿದೆ. ಭಾರತದಲ್ಲಿನ ಅತ್ಯಂತ ಆಳವಾದ ಗುಹೆಗಳಲ್ಲಿ ಇದು ಕೂಡ ಒಂದು. ಸುಮಾರು 80 ಮೀಟರ್ ಆಳದಲ್ಲಿ ಈ ಗುಹೆಗಳನ್ನು ಕಾಣಬಹುದು.

PC:Rajib Ghosh

ಭಾರತದಲ್ಲಿ ಟಾಪ್ ನ್ಯಾಚುರಲ್ಸ್ ವಂಡರ್ಸ್...!

ಭಾರತದಲ್ಲಿ ಟಾಪ್ ನ್ಯಾಚುರಲ್ಸ್ ವಂಡರ್ಸ್...!

ದೀಪಗಳು
ಬನ್ನಿ ಗ್ರಾಸ್ ಲ್ಯಾಂಡ್‍ನಲ್ಲಿನ ಕುಚ್ ಎಂಬ ಪ್ರದೇಶದಲ್ಲಿ ರಾತ್ರಿಯಾದರೆ ಸಾಕು... ವಿವರಿಸಲಾಗದ ರೀತಿಯಲ್ಲಿ ದೀಪಗಳು ಕಾಣಿಸುತ್ತವೆ. ಅದನ್ನು ದೆವ್ವಗಳ ಆತ್ಮಗಳು ಎಂದೇ ಆಲ್ಲಿನ ಜನರು ಕರೆಯುತ್ತಾರೆ. ಹಾಗಾಗಿಯೇ ಅಲ್ಲಿನ ಜನರು ಯಾರು ಕೂಡ ರಾತ್ರಿಯ ಸಮಯದಲ್ಲಿ ಅಲ್ಲಿಗೆ ತೆರಳಲು ಭಯಪಡುತ್ತಾರೆ ಎನ್ನಲಾಗಿದೆ. ಆ ದೀಪಗಳು ಕೆಂಪು, ಹಳದಿ, ನೀಲಿ ಬಣ್ಣಗಳಲ್ಲಿ ಏರ್ಪಡುತ್ತವೆ. ಭಾರತದಲ್ಲಿನ ನ್ಯಾಚುರಲ್ಸ್ ವಂಡರ್‍ನಲ್ಲಿ ಇದು ಕೂಡ ಒಂದು.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ