Search
  • Follow NativePlanet
Share
» »ಸೂರ್ಯಾಸ್ತದ ಮಾಯಾಜಾಲ ಪ್ರದೇಶಗಳಿವು...

ಸೂರ್ಯಾಸ್ತದ ಮಾಯಾಜಾಲ ಪ್ರದೇಶಗಳಿವು...

ಸೂರ್ಯಾಸ್ತವನ್ನು ಕಾಣಲು ಯಾರಿಗೆ ಇಷ್ಟವಾಗಲ್ಲ ಹೇಳಿ? ಅಂತಹ ಮನೋಹರವಾದ ದೃಶ್ಯವನ್ನು ಕಣ್ಣಾರೆ ಸೊರೆಗೊಳಿಸಿಕೊಳ್ಳುವ ಸಲುವಾಗಿ ಪ್ರವಾಸಿಗರು ಅನೇಕ ಪ್ರದೇಶಗಳಿಗೆ ಭೇಟಿ ನೀಡುತ್ತಿರುತ್ತಾರೆ. ಸೂರ್ಯಾಸ್ತ ಹಾಗು ಸೂರ್ಯೋದಯದ ದೃಶ್ಯವು ಮನೋಹರವಾದ ಸೊಬ

ಸೂರ್ಯಾಸ್ತವನ್ನು ಕಾಣಲು ಯಾರಿಗೆ ಇಷ್ಟವಾಗಲ್ಲ ಹೇಳಿ? ಅಂತಹ ಮನೋಹರವಾದ ದೃಶ್ಯವನ್ನು ಕಣ್ಣಾರೆ ಸೊರೆಗೊಳಿಸಿಕೊಳ್ಳುವ ಸಲುವಾಗಿ ಪ್ರವಾಸಿಗರು ಅನೇಕ ಪ್ರದೇಶಗಳಿಗೆ ಭೇಟಿ ನೀಡುತ್ತಿರುತ್ತಾರೆ. ಸೂರ್ಯಾಸ್ತ ಹಾಗು ಸೂರ್ಯೋದಯದ ದೃಶ್ಯವು ಮನೋಹರವಾದ ಸೊಬಗಿನ ಜೊತೆ-ಜೊತೆಗೆ ಮನಸ್ಸಿಗೆ ಉಲ್ಲಾಸದಾಯಕವಾಗಿರುತ್ತದೆ. ನಗರದಲ್ಲಿ ಜೀವನ ನಡೆಸುವವರಿಗೆ ಅಂಥಹ ಅಪೂರ್ವವಾದ ದೃಶ್ಯವನ್ನು ಕಾಣಲು ಅವಕಾಶಗಳು ಕಡಿಮೆ ಎಂದೇ ಹೇಳಬಹುದು. ಅಂಥಹವರಿಗೆ ಲೇಖನದಲ್ಲಿ ತಿಳಿಸಲಾಗುವ ಅತ್ಯದ್ಭುತವಾದ ಸೂರ್ಯಾಸ್ತ ಹಾಗು ಸೂರ್ಯೋದಯದ ನೋಟವನ್ನು ಒದಗಿಸುವ ತಾಣಗಳ ಬಗ್ಗೆ ಸಂಕ್ಷೀಪ್ತವಾಗಿ ಲೇಖನದ ಮೂಲಕ ತಿಳಿಯೋಣ.

ಸೂರ್ಯಾಸ್ತದ ಮಾಯಾಜಾಲದ ಪ್ರದೇಶಗಳಿವು...

ಸೂರ್ಯಾಸ್ತದ ಮಾಯಾಜಾಲದ ಪ್ರದೇಶಗಳಿವು...

ಕನ್ಯಾಕುಮಾರಿ
ಭಾರತ ದೇಶದ ಭೂ ಭಾಗವು ದಕ್ಷಿಣ ಭಾರತ ದೇಶದಲ್ಲಿ ಕನ್ಯಾಕುಮಾರಿಯಲ್ಲಿ ಮುಗಿಯುತ್ತದೆ. ಈ ಪ್ರದೇಶದಲ್ಲಿ ಅರೇಬಿಯಾ ಸಮುದ್ರ, ಬಂಗಾಳ ಕೊಲ್ಲಿ, ಹಿಂದದೂ ಮಹಾ ಸಮುದ್ರ ಮೂರು ಒಂದೇ ಸ್ಥಳದಲ್ಲಿ ಸೇರುವ ವಿಶೇಷವಾದುದು. ಈ ಸುಂದರವಾದ ಪ್ರದೇಶದಲ್ಲಿ ಸೂರ್ಯಾಸ್ತದ ಸಮಯದಲ್ಲಿ ಹಾಗು ಸೂರ್ಯೋದಯದ ಸಮಯದಲ್ಲಿ ಅತ್ಯಂತ ಮನೋಹರವಾದ ಸೊಬಗನ್ನು ನೀಡುತ್ತದೆ. ಇಲ್ಲಿನ ಸೌಂದರ್ಯವನ್ನು ಕಾಣಲು ಅನೇಕ ಮಂದಿ ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ.

ಸೂರ್ಯಾಸ್ತದ ಮಾಯಾಜಾಲದ ಪ್ರದೇಶಗಳಿವು...

ಸೂರ್ಯಾಸ್ತದ ಮಾಯಾಜಾಲದ ಪ್ರದೇಶಗಳಿವು...

ಮಂಗಳೂರು
ಕರ್ನಾಟಕದ ಮಂಗಳೂರು ಅಥವಾ ದಕ್ಷಿಣ ಕನ್ನಡ ಜಿಲ್ಲೆಯು ಒಂದು ನೆಚ್ಚಿನ ಪ್ರವಾಸಿ ತಾಣ. ಇಲ್ಲಿನ ಕಡಲ ತೀರಗಳು ಪ್ರವಾಸಿಗರನ್ನು ವಿಶೇಷವಾಗಿ ಆಕರ್ಷಿಸುತ್ತವೆ. ಉಲ್ಲಾಳ ಸೇತುವೆಯ ಸೂರ್ಯಾಸ್ತದ ನೋಟವು ಎಂತಹವರನ್ನೂ ಮೂಕವಿಸ್ಮಿತರನ್ನಾಗಿಸುತ್ತದೆ.

PC:Nithin Bolar k

ಸೂರ್ಯಾಸ್ತದ ಮಾಯಾಜಾಲದ ಪ್ರದೇಶಗಳಿವು...

ಸೂರ್ಯಾಸ್ತದ ಮಾಯಾಜಾಲದ ಪ್ರದೇಶಗಳಿವು...

ತಾಜ್ ಮಹಲ್
ಪ್ರೇಮಿಗಳ ಚಿಹ್ನೆ ಎಂದೇ ಪ್ರಖ್ಯಾತಿಯನ್ನು ಪಡೆದಿರುವ ತಾಜ್ ಮಹಲ್ ಒಂದು ಅದ್ಭುತವಾದ ಕಟ್ಟವೇ ಅಲ್ಲದೇ, ಸೂರ್ಯಸ್ತ ಹಾಗು ಸೂರ್ಯೋದಯದ ಸೊಬಗನ್ನು ನೀಡುವ ಅದ್ಭುತವಾದ ತಾಣ. ಈ ಸುಂದರವಾದ ಐತಿಹಾಸಿಕ ಕಟ್ಟಡದ ಸೂರ್ಯಾಸ್ತವನ್ನು ಕಣ್ಣುತುಂಬಿಕೊಳ್ಳುವ ಸಲುವಾಗಿ ಅತಿ ಹೆಚ್ಚು ಮಂದಿ ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ.

ಸೂರ್ಯಾಸ್ತದ ಮಾಯಾಜಾಲದ ಪ್ರದೇಶಗಳಿವು...

ಸೂರ್ಯಾಸ್ತದ ಮಾಯಾಜಾಲದ ಪ್ರದೇಶಗಳಿವು...

ಕೋವಲಂ ಬೀಚ್
ಸಾಗರ ತೀರದಲ್ಲಿ ಸೂರ್ಯಾಸ್ತವನ್ನು ಹಾಗು ಸೂರ್ಯೋದಯವನ್ನು ಕಣ್ಣುತುಂಬಿಕೊಳ್ಳುವುದು ಒಂದು ಮಧುರವಾದ ಅನುಭೂತಿ ಎಂದೇ ಹೇಳಬಹುದು. ಅದ್ದರಿಂದಲೇ ಅನೇಕ ಮಂದಿ ಬೀಚ್‍ಗಳಿಗೆ ಭೇಟಿ ನೀಡಲು ಬಯಸುತ್ತಾರೆ. ಕೋವಲಂನ ಬೀಚ್‍ನಲ್ಲಿ ಸೂರ್ಯಾಸ್ತ ಹಾಗು ಸೂರ್ಯೋದಯ ಇವೆರಡು ಅತ್ಯಂತ ಅದ್ಭುತವಾದ ನೋಟವನ್ನು ಪ್ರವಾಸಿಗರಿಗೆ ಒದಗಿಸುತ್ತದೆ. ಇಲ್ಲಿನ ಆ ದೃಶ್ಯವನ್ನು ಜೀವನದಲ್ಲಿ ಎಂದಿಗೂ ಮರೆಯಲಾಗದ ಅನುಭೂತಿಯನ್ನು ಉಂಟು ಮಾಡುತ್ತದೆ.

ಸೂರ್ಯಾಸ್ತದ ಮಾಯಾಜಾಲದ ಪ್ರದೇಶಗಳಿವು...

ಸೂರ್ಯಾಸ್ತದ ಮಾಯಾಜಾಲದ ಪ್ರದೇಶಗಳಿವು...

ದಾಲ್ ಲೇಕ್, ಶ್ರೀನಗರ
ಶ್ರೀನಗರದಲ್ಲಿ ಅನೇಕ ಪ್ರಸಿದ್ಧವಾದ ಪ್ರವಾಸಿ ಸ್ಥಳಗಳಿವೆ. ಅವುಗಳಲ್ಲಿ ಈ ದಾಲ್ ಸರೋವರವು ಒಂದು. ಆದರೆ ಇಲ್ಲಿನ ಸೂರ್ಯಾಸ್ತ ಹಾಗು ಸೂರ್ಯೋದಯ ನೋಡಲು ಅತ್ಯಂತ ರೋಮಾಂಚನಕಾರಿಯಾಗಿರುತ್ತದೆ. ಇಲ್ಲಿನ ದೃಶ್ಯವನ್ನು ಪ್ರವಾಸಿಗರು ಎಂದಿಗೂ ಮಿಸ್ ಮಾಡಿಕೊಳ್ಳುವುದಿಲ್ಲವಂತೆ. ಮಿಸ್ ಮಾಡಿಕೊಂಡರೆ ಶ್ರೀನಗರದ ಪ್ರವಾಸಿ ಪೂರ್ಣವಾಗುದಿಲ್ಲವಂತೆ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+