Search
  • Follow NativePlanet
Share
» »ವಿಭಿನ್ನವಾದ ಹೆಸರುಗಳು: ವಿಭಿನ್ನವಾದ ಊರುಗಳು

ವಿಭಿನ್ನವಾದ ಹೆಸರುಗಳು: ವಿಭಿನ್ನವಾದ ಊರುಗಳು

ಹೆಸರಿನಲ್ಲಿ ಏನಿದೆ? ಎಂದು ಹೇಳಿದ್ದಾರೆ ಷೇಕ್ಸ್ ಪಿಯರ್ ಆದರೆ ಹೆಸರಿನಲ್ಲಿಯೇ ಇರುವುದು ಎಲ್ಲಾ. ಜನರಲ್ಲಿ ಮೂಢಿಸಲು ಅಥವಾ ಹಾಸ್ಯವನ್ನು ಸೃಷ್ಠಿ ಮಾಡಲು ಹೆಸರುಗಳು ಅತ್ಯಂತ ಮುಖ್ಯವಾದ ಪಾತ್ರ ವಹಿಸುತ್ತದೆ. ನಮ್ಮ ಭಾರತ ದೇಶದಲ್ಲಿನ ಕೆಲವು ಪ್ರದೇಶ

ಹೆಸರಿನಲ್ಲಿ ಏನಿದೆ? ಎಂದು ಹೇಳಿದ್ದಾರೆ ಷೇಕ್ಸ್ ಪಿಯರ್ ಆದರೆ ಹೆಸರಿನಲ್ಲಿಯೇ ಇರುವುದು ಎಲ್ಲಾ. ಜನರಲ್ಲಿ ಮೂಢಿಸಲು ಅಥವಾ ಹಾಸ್ಯವನ್ನು ಸೃಷ್ಠಿ ಮಾಡಲು ಹೆಸರುಗಳು ಅತ್ಯಂತ ಮುಖ್ಯವಾದ ಪಾತ್ರ ವಹಿಸುತ್ತದೆ. ನಮ್ಮ ಭಾರತ ದೇಶದಲ್ಲಿನ ಕೆಲವು ಪ್ರದೇಶಗಳ ಹೆಸರುಗಳನ್ನು ನೀವು ಕೇಳಿದರೆ ನಿಮಗೆ ನಗು ಬಾರದೇ ಇರುದು. ಹಾಗಾದರೆ ಆ ಊರುಗಳ ಹೆಸರುಗಳ ಬಗ್ಗೆ ಮಾಹಿತಿಯನ್ನು ಲೇಖನದ ಮೂಲಕ ಪಡೆಯೋಣ.

ಡಾಪ್ಫಿನ್ಸ್ ನೊಸ್, ಕೂನೂರ್

ಡಾಪ್ಫಿನ್ಸ್ ನೊಸ್, ಕೂನೂರ್

ಇದು ತಮಿಳುನಾಡು ರಾಜ್ಯದ ಕೂನೂರ್‍ನಲ್ಲಿ ಡಾಪ್ಫಿನ್ಸ್ ನೊಸ್ ಇದೆ. ಇದೊಂದು ಶಿಖರವಾಗಿದೆ. ಈ ಶಿಖರವು ಡಾಲ್ಫಿನ್‍ನ ಮೂಗಿನ ಆಕಾರದಲ್ಲಿರುವುದರಿಂದ ಈ ಶಿಖರಕ್ಕೆ ಈ ಹೆಸರು ಬಂದಿದೆ. ಇದೊಂದು ಅದ್ಭುತವಾದ ಟ್ರೆಕ್ಕಿಂಗ್ ಸ್ಪಾಟ್ ಆಗಿದ್ದು, ಹಲವಾರು ಪ್ರವಾಸಿಗರ ನೆಚ್ಚಿನ ತಾಣ ಇದಾಗಿದೆ. ಇಲ್ಲಿ ನೀಲಗಿರಿ ವೃಕ್ಷಗಳ ಅದ್ಭುತವಾದ ಪ್ರಕೃತಿಯ ದ್ರಶ್ಯವನ್ನು ಸವಿಯಬಹುದಾಗಿದೆ.


Photo Courtesy: Kumaravel

ಸಾಸ್ ಬಹು ಟೆಂಪಲ್, ಉದಯಪುರ್

ಸಾಸ್ ಬಹು ಟೆಂಪಲ್, ಉದಯಪುರ್

ಸಾಸ್ ಬಹು ದೇವಾಲಯ ಎಂದರೆ ಏನು ಗೊತ್ತ? ಅತ್ತೆ, ಸೊಸೆ ದೇವಾಲಯ ಎಂದು. ಆಶ್ಚರ್ಯ ಏನಪ್ಪ ಎಂದರೆ ಈ ದೇವಾಲಯವನ್ನು ನಿರ್ಮಾಣ ಮಾಡಿದವರು ಅತ್ತೆ ಹಾಗು ಸೊಸೆ. ಇಲ್ಲಿ 2 ದೇವಾಲಯಗಳು ಇವೆ. ದೊಡ್ಡದಾದ ದೇವಾಲಯವನ್ನು ಅತ್ತೆ ನಿರ್ಮಾಣ ಮಾಡಿದ್ದರೆ, ಚಿಕ್ಕದಾದ ದೇವಾಲಯವನ್ನು ಸೊಸೆ ನಿರ್ಮಾಣ ಮಾಡಿದ ದೇವಾಲಯವಾಗಿದೆ. ಈ ವಿಚಿತ್ರವಾದ ದೇವಾಲಯವನ್ನು ರಾಜಸ್ಥಾನದ ಉದಯಪುರದಲ್ಲಿ ಕಾಣಬಹುದು.


Photo Courtesy: hartjeff12

ಡ್ಯೂಕ್‍ನೊಸ್, ಲೋನವಾಲ

ಡ್ಯೂಕ್‍ನೊಸ್, ಲೋನವಾಲ

ಇಲ್ಲಿನ ವಿಶೇಷವೆನೆಂದರೆ ಲೋನಾವಾಲದಲ್ಲಿನ ಒಂದು ಪರ್ವತಕ್ಕೆ ಅದು ಮೂಗಿನ ಆಕಾರದಲ್ಲಿ ಇರುವುದರಿಂದ ಅಂದಿನ ಬ್ರಿಟಿಷ್ ಅಧಿಕಾರಿಯು ಡ್ಯೂಕ್‍ನೊಸ್ ಎಂದು ಕರೆದನು ಎಂದು ಹೇಳಲಾಗಿದೆ.

ಗಾರ್ಡನ್ ಆಫ್ ಫೈವ್ ಸೆನ್ಸಸ್, ದೆಹಲಿ

ಗಾರ್ಡನ್ ಆಫ್ ಫೈವ್ ಸೆನ್ಸಸ್, ದೆಹಲಿ

ಗಾರ್ಡನ್ ಆಫ್ ಫೈವ್ ಸೆನ್ಸಸ್ ಎಂದರೆ ಪಂಚೇದ್ರಿಯಗಳ ತೋಟ ಎಂಬ ಅರ್ಥವಾಗಿದೆ. ಅಂದರೆ ಈ ಗಾರ್ಡನ್‍ನಲ್ಲಿ 5 ಪಂಚೇಂದ್ರೀಯಗಳು ನಿಮ್ಮಲ್ಲಿ ಆನಂದ ಪಡುತ್ತವೆ ಎಂದು ಹೇಳುತ್ತಾರೆ. ಹಾಗಾಗಿಯೇ ಈ ಸ್ಥಳಕ್ಕೆ ಈ ಹೆಸರು ಬಂದಿದೆ.


Photo Courtesy: ZeePack

ಮ್ಯೂಸಿಯಂ ಆಫ್ ಟಾಯಲೆಟ್ಸ್

ಮ್ಯೂಸಿಯಂ ಆಫ್ ಟಾಯಲೆಟ್ಸ್

ಭಾರತದಲ್ಲಿ ಭಾರತೀಯ ಸಂಸ್ಕøತಿಯನ್ನು ಹಾಗು ಚರಿತ್ರೆಯನ್ನು ಪರಿಚಯಿಸಲು ಆನೇಕ ಮ್ಯೂಸಿಯಂ ಅನ್ನು ಕಾಣಬಹುದು. ಆದರೆ, ಅಂತರಾಷ್ಟ್ರೀಯ ಮಟ್ಟದಲ್ಲಿ ಟಾಯಲೆಟ್‍ನ ಚರಿತ್ರೆಯನ್ನು ಹೇಳುವುದಕ್ಕೋಸ್ಕರ ದೆಹಲಿಯಲ್ಲಿ ಈ ಮ್ಯೂಸಿಯಂ ಇದೆ. ಎಂದಾದರೂ ಟಾಯಲೆಟ್ಸ್ ಮ್ಯೂಸಿಯಂಗೆ ಭೇಟಿ ನೀಡಿ.

ಎಕೋ ಪಾಯಿಂಟ್, ಮುನ್ನಾರ್

ಎಕೋ ಪಾಯಿಂಟ್, ಮುನ್ನಾರ್

ಎಕೋ ಎಂದರೆ ಪ್ರತಿಧ್ವನಿ. ಮುನ್ನಾರ್‍ಗೆ ತೆರಳುವ ದಾರಿಯಲ್ಲಿ ಒಂದು ಎಕೋ ಪಾಯಿಂಟ್ ಇದೆ ಎಂಬುದು ಅಷ್ಟಾಗಿ ತಿಳಿದಿಲ್ಲ. ಆದರೆ ಇಲ್ಲಿ ಒಂದು ಅದ್ಭುತವಾದ ಎಕೋ ಪಾಯಿಂಟ್ ಇದೆ. ಈ ಸ್ಥಳಕ್ಕೆ ಭೇಟಿ ನೀಡುವ ಪ್ರವಾಸಿಗರು ಚಪ್ಪಳೆ ಹೊಡೆಯುವ ಮೂಲಕ, ಕಿರುಚುವ ಮೂಲಕ ತಮ್ಮ ಪ್ರತಿ ಧ್ವನಿಯ ಅನುಭವವನ್ನು ಪಡೆಯುತ್ತಾರೆ.


ech

ವೀಸಾದ ದೇವರು, ಹೈದ್ರಾಬಾದ್

ವೀಸಾದ ದೇವರು, ಹೈದ್ರಾಬಾದ್

ವೀಸಾದ ದೇವರು? ಎಂದು ಆಶ್ಚರ್ಯ ಪಡಬೇಡಿ. ಹೌದು ಈ ದೇವಾಲಯದ ವಿಶೇಷತೆ ಕೇಳಿದರೆ ಇಂದೇ ಈ ದೇವಾಲಯಕ್ಕೆ ಪ್ರಯಾಣ ಮಾಡಲು ಬಯಸುತ್ತಿರಾ. ಅದೆನಪ್ಪ ಎಂದರೆ ವಿದೇಶ ಪ್ರಯಾಣಕ್ಕೆ ತೆರಳಲು ವೀಸಾ ದೊರೆಯುತ್ತಿಲ್ಲವೇ? ಹಾಗಾದರೆ ಈ ದೇವಾಲಯಲ್ಲಿನ ವೀಸಾ ಬಾಲಾಜಿಗೆ ಒಮ್ಮೆ ದರ್ಶನ ಭಾಗ್ಯ ಪಡೆದು ಬನ್ನಿ. ಅಷ್ಟಕ್ಕೂ ಈ ದೇವಾಲಯವಿರುವುದು ಹೈದ್ರಾಬಾದ್‍ನ ಚಿಲ್ಕೂರು ಎಂಬ ಪ್ರದೇಶದಲ್ಲಿ. ಇಲ್ಲಿಗೆ ಸಾಕಷ್ಟು ಭಕ್ತರು ಭೇಟಿ ನೀಡುತ್ತಾರೆ.

photo credit: Adityamadhav83

ಚೈನ್ ಟ್ರಿ, ವಯನಾಡ್

ಚೈನ್ ಟ್ರಿ, ವಯನಾಡ್

ಕೇರಳದಲ್ಲಿನ ವಯನಾಡ್ ಎಂಬ ಪ್ರದೇಶದಲ್ಲಿ ಒಂದು ವಿಚಿತ್ರವಾದ ಮರವಿದೆ. ಆ ಮರದ ಹೆಸರು ಚೈನ್ ಟ್ರಿ ಎಂದು. ಈ ಮರಕ್ಕೆ ಈ ಹೆಸರು ಬರಲು ಮುಖ್ಯವಾದ ಕಾರಣವೆಂದರೆ ಅದು ಆ ಮರದಲ್ಲಿನ ಒಂದು ದೆವ್ವ. ಈ ದೆವ್ವ ದಾರಿಯಲ್ಲಿ ಹೋಗುವವರಿಗೆ ಹಲವಾರು ತೊಂದರೆಗಳನ್ನು ನೀಡಿದ್ದರಿಂದ, ಒಬ್ಬ ಮಾಂತ್ರಿಕನು ಆ ದೆವ್ವವನ್ನು ಚೈನ್‍ನಿಂದ ಬಂಧಿಸಿದ್ದಾನೆ ಎಂದು ಹೇಳಲಾಗುತ್ತದೆ.

ರಾಣಿ ಕಿ ವಾವ್

ರಾಣಿ ಕಿ ವಾವ್

ಹೆಸರು ಕೇಳಿದ ತಕ್ಷಣ ರಾಣಿಯ ಆಸ್ಥಾನವೇ ಅಂದುಕೊಳ್ಳಬೇಡಿ. ರಾಣಿ ಕಿ ವಾವ್ ಎಂದರೆ ಬಾವಿ. ಹೌದು ಈ ವಿಚಿತ್ರವಾದ ಬಾವಿ ಇರುವುದು ಗುಜರಾತ್‍ನಲ್ಲಿ. ಇದೊಂದು ಮೆಟ್ಟಿಲುಗಳ ಬಾವಿಯಾಗಿದ್ದು, ಮಹಾರಾಣಿ ತನ್ನ ಪತಿಗಾಗಿ ನಿರ್ಮಾಣ ಮಾಡಿರುವುದಾಗಿದೆ. ಈ ಬಾವಿಯಲ್ಲಿ ಅದ್ಭುತವಾದ ಶಿಲ್ಪಗಳನ್ನು ಕಾಣಬಹುದಾಗಿದೆ.

Photo Courtesy:Sudhamshu Hebbar

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X